ಜಾ ಹೊಡ ಸ್ರತ” ಇವನ ಸಾ: ಎಮ: ವಮನ

ಹವಾ ನಾನಾನಾ EE ನಾ ಡಾ ನಾ: ಜಾಡು ಬ.

ಶಾಮಸ್ಸನ್ಸೌನ ಬ್‌ ಸಲ al

ಶ್ರೀ ಮದ್ದಾಲ್ಲೀಕಿ ರಾಮಾಯಾಣಮ್‌

ಕಿಷ್ಕಿಂಧಾ ಕಾಂಡಃ

(ಕನ್ನಡ ಅನುವಾದ ಸಹಿತ)

ಮುನ್ನುಡಿ ಡಾ ಡಿ.ವಿ. ಗುಂಡಪ್ಪನವರಿಂದ

ಅನುವಾದಕರು ವಿದ್ವಾನ್‌ ಎನ್‌. ರಂಗನಾಥಶರ್ಮಾ

ಪ್ರಕಾಶಕರು:

ರಾಮಾಯಣ ಪ್ರಕಾಶನ ಸಮಿತಿ ನರಸಿಂಹರಾಜ ಕಾಲೋನಿ, ಬೆಂಗಳೂರು-೧೯

ಮೊದಲನೆಯ ಮುದ್ರಣ ೧೯೬೯ (೨೦೦೦ ಪ್ರತಿಗಳು)

ಎರಡನೆಯ ಮುದ್ರಣ೧೯೭೯ (೨೦೦೦ ಪ್ರತಿಗಳು)

ಮೂರನೆಯ ಮುದ್ರಣ೧೯೮೬ (೨೦೦೦ ಪ್ರತಿಗಳು)

ನಾಲ್ಕನೆಯ ಮುದ್ರಣ ೨೦೦೬ (೧೦೦೦ ಪ್ರತಿಗಳು)

ಇದರ ಹಕ್ಕುಗಳೆಲ್ಲವೂ ರಾಮಾಯಣ ಪ್ರಕಾಶನ ಸಮಿತಿಯವು (All Rights Reserved)

ಬೆಲೆ: ರೂ. ೭೦-೦೦

ಮುದ್ರಣಕಾರರು: ಶುಕ್ರಶ್ರೀ ಪ್ರಿಂಟರ್ಸ್‌ ನಂ.247, 7ನೇ "ಎ' ಅಡ್ಡರಸ್ತೆ ಶಾಸ್ತ್ರೀನಗರ, ಬೆಂಗಳೂರು - 28 ದೂರವಾಣಿ: 2677 1573 ಮೊಬೈಲ್‌: 9448331494

ಬಿನ್ನಹ ಈಗ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡವನ್ನು ಅನುವಾದ ಸಹಿತವಾಗಿ ಪ್ರಕಟಿಸಿ ಕನ್ನಡಿಗರಿಗೆ ಅರ್ಪಿಸಲು ನಮಗೆ ತುಂಬಾ ಸಂತೋಷವಾಗುತ್ತದೆ.

ಪೂಜ್ಯರಾದ ಡಾ|| ಡಿ.ವಿ. ಗುಂಡಪ್ಪನವರು ನಮ್ಮ ಪ್ರಕಟನಾ ಕಾರ್ಯಕ್ಕೆ ಬೆಂಬಲವನ್ನು ನೀಡುತ್ತಾ ಬಂದಿರುತ್ತಾರೆ. ಹಿಂದಿನಂತೆ ಅಮೂಲ್ಯವಾದ ಮುನ್ನುಡಿಯನ್ನು ಬರೆದುಕೊಟ್ಟುಉಪಕರಿಸಿದ್ದಾರೆ. ಅವರಿಗೆ ನಮ್ಮ ಸಮಿತಿಯ ವಂದನೆಗಳು.

ವಿದ್ವಾನ್‌ ಶ್ರೀ ಎನ್‌. ರಂಗನಾಥಶರ್ಮರ ಅನುವಾದವನ್ನು ವಿದ್ವಾಂಸರುಗಳೂ ಮತ್ತು ಮಹಾಜನಗಳೂ ಮೆಚ್ಚಿ ಹೊಗಳಿದ್ದಾರೆ. ಅವರೂ ಸಹ ಹಿಂದಿನಂತೆ ಈಗಲೂ ಅನುವಾದ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. ಶುಕ್ರಶ್ರೀ ಮುದ್ರಣಾಲಯದವರು ತಪ್ಪಿಲ್ಲದಂತೆ ಅಂದವಾಗಿ ಮುದ್ರಿಸಿ ಕೊಟ್ಟಿದ್ದಾರೆ. ಇವರುಗಳಿಗೆ ಸಮಿತಿಯ ವಂದನೆಗಳು.

ಎಸ್‌. ಎನ್‌. ಮೂರ್ತಿ ಬೆಂಗಳೂರು ಅಧ್ಯಕ್ಷರು ಶ್ರೀ ನರಸಿಂಹರಾಜಕಾಲೋನಿ ಅಸೋಸಿಯಷನ್‌ ನರಸಿಂಹರಾಜಕಾಲೋನಿ, ಬೆಂಗಳೂರು ದೂರವಾಣಿ: ೨೬೫೨೦೨೩೧, ೨೬೬೦೧೬೮೦

ನಾಲ್ಕನೆಯ ಮುದ್ರಣ

ವಾಚಕರ ಪ್ರೋತ್ಸಾಹದಿಂದ ಮೂರನೆಯ ಮುದ್ರಣದ ಪ್ರತಿಗಳೆಲ್ಲವೂ ಮುಗಿದು ಮತ್ತೆ ಬೇಡಿಕೆ ಬಂದುದರಿಂದ ನಾಲ್ಕನೆಯ ಮುದ್ರಣವನ್ನು ಕೈಗೊಳ್ಳಲಾಯಿತು.

ಕಾಗದ ಮತ್ತು ಮುದ್ರಣ ವೆಚ್ಚ ಹೆಚ್ಚಾಗಿರುವುದರಿಂದ ಕಿಷ್ಟಿಂಧಾಕಾಂಡದ ಬೆಲೆಯನ್ನು ಏರಿಸುವುದು ಅನಿವಾರ್ಯವಾಗಿದೆ. ಇದನ್ನುಮನಗಂಡು ವಾಚಕರು ಎಂದಿನಂತೆ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ಪ್ರಾರ್ಥನೆ.

ಎಸ್‌. ಎನ್‌. ಮೂರ್ತಿ ಬೆಂಗಳೂರು ಅಧ್ಯಕ್ಷರು ಶ್ರೀ ನರಸಿಂಹರಾಜಕಾಲೋನಿ ಅಸೋಸಿಯಷನ್‌ ನರಸಿಂಹರಾಜಕಾಲೋನಿ, ಬೆಂಗಳೂರು ದೂರವಾಣಿ: ೨೬೫೨೦೨೩೧, ೨೬೬೦೧೬೮೦

ಕಿಷ್ಕಿಂಧಾಕಾಂಡ-ನಾಲ್ಕನೇ ಮುದ್ರಣಕ್ಕೆ

ಧನ ಸಹಾಯ ಮಾಡಿದ ಮಹನೀಯರು ೧. ಶ್ರೀಮತಿ ಸಂಧ್ಯಾ.ಎನ್‌ ಮಂಜುನಾಥ್‌ ರೂ. ೫,೦೦೦.೦೦ ಚಿ॥ ಜಿ.ಎಸ್‌. ಕಾರ್ತಿಕೇಯ ರೂ. ೨,೫೦೦.೦೦

ಶ್ರೀಮತಿ ಮಹಾಲಕ್ಷ್ಮಮ್ಮ ಮತ್ತು ರೂ. ೨,೦೦೦.೦೦ ಶ್ರೀ ಎಸ್‌. ಎನ್‌. ಮೂರ್ತಿ

೪, ಶ್ರೀಮತಿ ನರಸು ಮತ್ತು ಚಿ ಡಿ.ಎಸ್‌. ನಾಗೇಂದ್ರ ರೂ. ೨,೦೦೦.೦೦

ನಿವೇದನೆ

ಶ್ರೀರಾಮಚಂದ್ರನ ಕೃಪೆಯಿಂದಲೂ ಸಹೃದಯರೂ ಉದಾರಚಿತ್ತರೂ ಆದ ವಾಚಕರ ಬೆಂಬಲದಿಂದಲೂ ಕಿಷ್ಠಿಂಧಾಕಾಂಡವನ್ನು ಕನ್ನಡ ಅನುವಾದದೊಡನೆ ಪ್ರಕಟಿಸಲು ಸಾಧ್ಯವಾಯಿತು. ಇನ್ನುನನ್ನಲೇಖನಿಗೆ ಸಮುದ್ರವನ್ನುದಾಟಿ ಯುದ್ಧ ರಂಗದಲ್ಲಿಳಿಯಬಲ್ಲೆನೆಂಬ ವಿಶ್ವಾಸವು ಮೂಡಿದೆ.

ಪೂಜ್ಯರಾದ ಡಾ| ಡಿ.ವಿ. ಗುಂಡಪ್ಪನವರು ಅನುವಾದವನ್ನು ಓದಿಸಿ ಕೇಳಿ ಬೆನ್ನುಚಪ್ಪರಿಸಿ ಪ್ರೋತ್ಸಾಹಿಸುತ್ತಿರುವುದರಿಂದ ನನಗೆ ಧೈರ್ಯ ಬಂದಿದೆ. ಗುಣಜ್ಜ್ಞರಾದ ಮಹಾಜನರು ಮುಂದಿನ ಪ್ರಕಟಣೆ ಯಾವಾಗ-ಎಂದು ಎಚಾರಿಸುತ್ತಿರುವುದರಿಂದ ಸ್ವಲ್ಪ ಆತ್ಮಪ್ರತ್ಯಯ ಉಂಟಾಗಿದೆ. ಕಿಷ್ಕಿಂಧಾಕಾಂಡದ ಅನುವಾದವೂ ಇತರ ಕಾಂಡಗಳ ಅನುವಾದದಂತೆ ಕನ್ನಡಿಗರ ಮೆಚ್ಚುಗೆಯನ್ನು ಗಳಿಸುವುದೆಂದು ನಂಬಿದ್ದೇನೆ.

ಮುನ್ನುಡಿಯನ್ನು ಕೃಪೆಯಿಂದ ಬರೆದುಕೊಟ್ಟ ಶ್ರೀ ಡಿ.ವಿ.ಜಿ. ಯವರಿಗೂ ಸಂಸ್ಕೃತ ಮೂಲವನ್ನುಎಂದಿನಂತೆ ಕನ್ನಡ ಲಿಪಿಯಲ್ಲಿಮುದ್ರಣಕ್ಕೆ ಅನುಕೂಲಿಸು ವಂತೆ ಬರೆದುಕೊಟ್ಟು ಉಪಕರಿಸಿದ ಶ್ರೀ ಡಿ.ಸಿ. ಅನಂತರಾಮಯ್ಯ ನವರಿಗೂ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ರಾಮಾಯಣ ಪ್ರಕಾಶನ ಸಮಿತಿಯ ಸದಸ್ಯರೆಲ್ಲರೂ ಪ್ರೀತ್ಯಾದರಗಳಿಂದ ಕಾರ್ಯಕ್ಕೆ ಪ್ರೋತ್ಸಾಹವನ್ನಿತ್ತು ಗ್ರಂಥ ಪ್ರಕಾಶನಕ್ಕೆ ಶ್ರದ್ಧೆಯಿಂದ .ನೆರವಾಗಿದ್ದಾರೆ... ಮಹನೀಯರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳು ಸಲ್ಲುತ್ತವೆ.

ಬೆಂಗಳೂರು ಎನ್‌. ರಂಗನಾಥಶರ್ಮಾ ಕೀಲಕ- ಮಾಘ ಶುದ್ಧ- ದ್ವಿತೀಯ ಅನುವಾದಕ

]**

ಮುನುಡಿ

ಸೀತಾನ್ವೇಷಪರಿಶ್ರಾಂತಂ ಪಂಪಾಕ್ಷೇತ್ರಪ್ರಸಾದಿತಮ್‌

ಹನೂಮತ್ಪಾಂತ್ರಿಶಂ ಧ್ಯಾಯೇತ್‌ ಪ್ರಾಪಸುಗ್ರೀವಸ್‌ಹೃದಮ್‌

ಕಿಷ್ಕಿಂಧಾಕಾಂಡವು ಶ್ರೀಮದ್ರಾಮಾಯಾಣದ ಕಂಠಭಾಗ. ಅದರ ಶಿರೋಭಾಗವು ಯುದ್ಧಕಾಂಡ. ಅದು ರಾವಣಹನನರೂಪವಾದ ಶ್ರೀರಾಮ ವಿಜಯದ ಕಥೆ. ಅದರ ಭುಜಪರ್ಯಂತದ ಭಾಗ ಅರಣ್ಯಕಾಂಡ. ರಾವಣನ ಅಪರಾಧವಾದ ಸೀತಾಪಹರಣ ರ್ರಕರಣಕ್ಕೆ ಅಲ್ಲಿಯವರೆಗೆ ಸನ್ನಿವೇಶ ಸಿದ್ಧತೆಯಾಯಿತು. ಆದರೆ NRRL 2 ಅವನೆಲ್ಲಿಯವನು ೧) ಅವನೆಂಥವನು ) - ಇದು ತಿಳಿಯದೆ ಶ್ರೀರಾಮಚಂದ್ರನ ಕಾರ್ಯ ಮುಂದಕ್ಕೆ ಸಾಗಲಾರದು. ಅವಶ್ಯಾಂಶಗಳನ್ನು ಒದಗಿಸುವುದು ಕಿಷ್ಕಿಂಧಾಕಾಂಡ.

ಕಿಷ್ಕಿಂಧಾ ಎಂದರೆ ಕನ್ನಡದಲ್ಲಿ ""ಇಕ್ಕಟ್ಟಾದದ್ದು'' ಎಂಬ ರೂಢಿಯ ಅರ್ಥವಿದೆ. ಬಹುಶಃ ಮಾತು ಸಂಸ್ಕೃತದ ""ಕಿಷ್ಕು'' ಎಂಬುದರಿಂದ ಬಂದಿರಬಹುದು. ಕಿಷ್ಟು ಎಂದರೆ ಗೇಣು ಅಥವಾ ಚೋಟು. ಸಣ್ಣ ಪ್ರದೇಶ ಎಂದು ತಾತ್ಪರ್ಯ.

ಕಾಂಡದಲ್ಲಿ ಕಾವ್ಯಧಾರೆ ಎಂದಿನಂತೆ ಮನೋಹರವಾಗಿ ಹರಿಯುತದೆ. ಇದರಲ್ಲಿಯೂ ದೃಶ್ಯಗಳು ರಮಣೀಯವಾಗಿ ಸನ್ನಿವೇಶಗಳು ಕುತೂಹಲ ಕಾರಿಗಳಾಗಿವೆ. ಜಟಾಯು ಸಂಪಾತಿಗಳಿಗೆ ಸಂಬಂಧಪಟ್ಟ ಕಥಾಭಾಗ ಅತ್ಯಂತ ಸುಂದರವಾದದ್ದು ಪಂಪಾಪ್ರದೇಶದ ವರ್ಣನೆ ಪ್ರಕೃತಿ ಸೌಭಾಗ್ಯವನ್ನು ಅನುಭವಕ್ಕೆ ತಂದುಕೊಡುತದೆ. “teu

vii

ಎಂದು ಹೇಳಿ ವಾಕ್ಕಿನ ಸಾಮರ್ಥ್ಯವನ್ನುನಿರೂಪಿಸಿದ್ದಾನೆ. ಕಣ್ಣಿನೆದುರಿಗೆ ಇಲ್ಲದ್ದನ್ನು ಕಣ್ಣುಸ್ವಯಂ ಅನುಭವಿಸುವಂತೆ ಮಾಡಬಲ್ಲದ್ದು ಕವಿಯ ವಾಕ್ಸಭಾವ. ಇದಕ್ಕೆ ದೃಷ್ಟಾಂತ ಶ್ರೀಮದ್ರಾಮಾಯಣದಲ್ಲಿ ಹೇರಳವಾಗಿ ದೊರೆಯುತದೆ. ಕಿಷ್ಕಿಂಧಾಕಾಂಡದಲ್ಲಿ ಅಂಥ ವರ್ಣನೆಗೆ ಅವಕಾಶ ಅಪಾರವಾಗಿ ದೊರೆಯಿತು. ವಾಲ್ಮೀಕಿಮಹರ್ಷಿಗಳಿಗೆ. ಕಥಾಸನ್ನಿವೇಶದ ಕಲ್ಪನೆಯಲ್ಲಿಯೂ ಪಾತ್ರಾಭಿ ವ್ಯಕಿಯಲ್ಲಿಯೂ ಮಹಾಕವಿಯ ನೈಪುಣಿ ಎದ್ದು ಕಾಣುತ್ತದೆ.

ಕಾವ್ಯವ್ಯಾಸಂಗದ ಮೂಲಸೂತ್ರಗಳು

ಶ್ರೀಮದ್ರಾಮಾಯಣದಂಥ ಕಾವ್ಯವನ್ನು ಅನುಭವಿಸಬೇಕಾದರೆ ವಾಚಕನು ಸಮಾಹಿತಚಿತನಾಗಿ, ಅವಧಾನವುಳ್ಳವನಾಗಿ ವ್ಯಾಸಂಗಮಾಡಬೇಕು. ಅವಸರ ವಸರವಾಗಿ ಸರ್ಗ ಮುಗಿಸಬೇಕೆಂಬ ಆತುರದಲ್ಲಿರುವವನಿಗೆ ಕಾವ್ಯರಸ ದೊರೆಯಲಾರದು. ವಾಚಕನು ಸರ್ವದಾ ಮನಸಿನಲ್ಲಿಧರಿಸಿರಬೇಕಾದ ಕೆಲವು ಮೂಲ ಸೂತ್ರಗಳನ್ನು ನಾನು ಪದೇ ಪದೇ ಅರಿಕೆ ಮಾಡಿದ್ದೇನೆ. ಈಗ ಅವನ್ನು ಮತ್ತೊಮ್ಮೆ ಜ್ಞಾಪಕಕ್ಕೆ ತರಬಹುದೆಂದು ತೋರುತ್ತದೆ.

೧. ಕಾವ್ಯದೃಷ್ಟಿ: ಶ್ರೀಮದ್ರಾಮಾಯಣವು ಕಾವ್ಯ, ಮಹಾಕಾವ್ಯ. ಅದು ಬರಿಯ ಕಥೆಯಲ್ಲ, ಚರಿತ್ರೆಯ ಪುಸಕವಲ್ಲ, ಶಾಸ್ತ್ರಗ್ರಂಥವೂ ಅಲ್ಲ ಕಾವ್ಯವನ್ನೋದುವ ಮನಸಿನಿಂದ ಅದನ್ನು ಓದಬೇಕು.

೨. ಜೀವಸಂಸ್ಕಾರ : ಕಾವ್ಯದಲ್ಲಿಕಥೆಯುಂಟೆಂಬುದು ನಿಜ. ಆದರೆ ಕಾವ್ಯದ ಕಥೆ ಬರಿಯ ಕಥೆಯಲ್ಲ ಮಹಾಕಾವ್ಯದ ಕಥೆ ಮನೋರಂಜಕ ಮಾತ್ರವಲ್ಲ ಮಹಾಕಾವ್ಯದಲ್ಲಿಕಥೆಯು ಜೀವಸ್ಪರ್ಶಿಯಾದ ರಸನಾಳಿಕೆಗಳಲ್ಲಿ ಬರುತದೆ. ಇಲ್ಲಿ ಮುಖ್ಯವಾದದ್ದು ಕಥೆಯ ಘಟನೆಗಿಂತ ಅದರಲ್ಲಡಗಿರುವ ರಸದ್ರವ್ಯ. ರಸಸಾಮಗ್ರಿಯಲ್ಲಿವಿನೋದಕ್ಕಿಂತ ಸಂಸ್ಕಾರ ಕಾರಕವಾದ ಗುಣ ಮುಖ್ಯ.

೩. ಆತ್ಮಾರ್ಪಣಬುದ್ದಿ : ರಸ ಮುಖ್ಯ , ಜೀವಸಂಸ್ಕಾರ ಮುಖ್ಯ - ಎಂದು ಹೇಳಿದ ಮೇಲೆ ಮಹಾಕಾವ್ಯ ವ್ಯಾಸಂಗ ಒಂದು ಮಹಾ ಅನುಷ್ಠಾನವೆಂದು ಸಿದ್ಧವಾಗುತ್ತದೆ. ಅನುಷ್ಠುನಕ್ಕೆ ಅವಶ್ಯವಾದದ್ದು ಆತ್ಮಾರ್ಪಣ ಬುದ್ದಿ: ಎಂದರೆ, ವಾಚಕನು ತನ್ನಸ್ವಂತ ಪ್ರಜ್ಞೆ, ತನ್ನಸ್ವಂತ ಎಮರ್ಶನ ಶಕ್ತಿ, ಸ್ವಂತ ಪಾಂಡಿತ್ಯ, ಸ್ವಂತ

ಚಾಲಾಕುತನ-ಇವನ್ನು ವರ್ಜಿಸಬೇಕು. ಅಹಂಕಾರವರ್ಜನೆಯಿಲ್ಲದಿದ್ದರೆ ಶರಣಾಗತಭಾವವಿಲ್ಲ ಶರಣಾಗತಭಾವವಿಲ್ಲದಿದ್ದರೆ ವಾಚಕನು ಗ್ರಂಥವನ್ನು ಅನುಭವಿಸಲಾರ. ಮಾತು ಎಲ್ಲ ಕಲಾಭ್ಯಾಸಕ್ಕೂ, ಎಲ್ಲ ಆತ್ಠ್ಮೋಪಾಸನೆಗೂ ಅನ್ವಯಿಸುವುದಾಗಿದೆ. ಒಂದಾನೊಂದು ಮಹಾವಿಷಯದ ಪೂರ್ಣಜ್ಞಾನ ನಮಗೆ ಉಂಟಾಗಬೇಕಾದರೆ ನಾವು ವಸುವಿನಲ್ಲಿ ಸೇರಿಕೊಳ್ಳಬೇಕು, ನಾವು ವಸುವಾಗಬೇಕು. ಇದೇ ತಲ್ಲೀನತೆ. ತಲ್ಲೀನತೆಯುಂಟಾಗುವುದು ಸ್ವಾಹಂಕಾರವರ್ಜನೆಯಿಂದ, ಸ್ವತಾವಿಸ್ಟೃತಿಯಿಂದ. ಸ್ವತಾವಿಸ್ಥ ಸ್ಲಿತಿಯನ್ನುಂಟು ಮಾಡುವ ಶಕ್ತಿ ಮಹಾಕಾವ್ಯದಲ್ಲಿಯೇ ಇರುತ್ತದೆ. ಆದರೆ ಅದರೊಡನೆ ಸಹಕರಿಸುವ ಯೋಗ್ಯತೆ ವಾಚಕನಲ್ಲಿರಬೇಕು.

೪. ಯಥಾರ್ಥಗ್ರಹಣ : ಮೂರನೆಯ ಸೂತ್ರದಿಂದಲೇ ಸಿದ್ದವಾಗುತ್ತದೆ ಮತೊಂದು ಸೂತ್ರ. ವಾಚಕನು ಕವಿಯ ವಾಕ್ಕನ್ನು ಯಥಾರ್ಥ ಬುದ್ದಿಯಿಂದ ಗ್ರಹಿಸಬೇಕು. ಕಾವ್ಯವ್ಯಾಸಂಗಕಾಲದಲ್ಲಿ ವ್ಯಾಸಂಗದ ಮಟ್ಟಿಗೆ, ಅವನು ತನ್ನ ಅಪನಂಬಿಕೆಗಳನ್ನೂ ಶಂಕೆಗಳನ್ನೂ ಬದಿಗಿರಿಸಿಬೇಕು. ಎಳೆಯ ಮಕ್ಕಳು ಅಜ್ಜಿ ಹೇಳುವ ಕಥೆಯನ್ನು ಅಕ್ಷರಕ್ಷವೂ ಯಥಾರ್ಥವೆಂದು ಗ್ರಹಿಸಿ ಹೂಂಗುಟ್ಟುವಂತೆ ನಾವು ವಾಲ್ದೀಕಿಯ ಸನ್ನಿಧಿಯಲ್ಲಿ ನಡೆದುಕೊಳ್ಳಬೇಕು. ಶ್ರದ್ಧೆವಿಶ್ವಾಸಗಳಿಲ್ಲದಿದ್ದರೆ ಕಾವ್ಯದ ಕಾವ್ಯಾಂಶ ಹಾರಿಹೋಗುತದೆ, ಬೆಂಕಿಯ ಮೇಲಿನ ಕಾವಲಿಯಲ್ಲಿಹಾಕಿದ ಹೂವಿನ ಸುವಾಸನೆಯಂತೆ.

೫. ಪ್ರವಾಹಾರ್ಥಧೋರಣೆ : ಕಾವ್ಯಪದಗಳ ಧೋರಣೆಯ ಆರ್ಥವನ್ನು ದೃಷ್ಟಿಯಲ್ಲಿರಿಸಿಕೊಳ್ಳ ಬೇಕು. ಪದಪದವನ್ನೂ ಅಕ್ಷರಕ್ಷರವನ್ನೂ ವಿಂಗಡಿಸಿ ನೋಡಬಾರದು. ಕಮಲದ ಹೂವಿನಲ್ಲಿ ಸಾವಿರ ರೇಕುಇರುತ್ತದೆ. ಒಂದೊಂದು ರೇಕಿಗೂ ಏನು ಅರ್ಥ 9 ಏನು ತಾತ್ಪರ್ಯ 9 - ಎಂದು ಬಿಡಿಸಿ ನೋಡಿದರೆ ಹೂವಿನ ಸಮಗ್ರಸ್ವಾರಸ್ಯ ಹೋಯಿತು ; ಪ್ರತ್ಯೇಕಾಂಶದಲ್ಲಿ ಸೌಂದರ್ಯವಿಲ್ಲ ಮಹಾಕವಿಯ ವಾಗ್ಲೋರಣೆಯೇ ಒಂದು ಸೊಗಸು. ಅದು ಮಳೆಗಾಲದಲ್ಲಿ ನದಿಯಲ್ಲಿ ಬಂದ ಮಹಾಪ್ರವಾಹದಂತಿರುತ್ತದೆ. ಅದರ ಒಟ್ಟನ್ನುನೋಡಿ ಅದರ ಸೊಗಸನ್ನು ನಾವು ಅನುಭವಿಸಲೇಬೇಕು.

ಈಗ ಒಂದೆರಡು ಪ್ರಶ್ನೆಗಳ ಎಚಾರ.

0 ಅಸಂಗತ ತರ್ಕ

ಕೆಲವು ವರ್ಷಗಳ ಕೆಳಗೆ ಒಬ್ಬ ಸ್ನೇಹಿತರಿಗೂ ನನಗೂ ನಡೆದ ಒಂದು ಚರ್ಚೆಯ ಭಾಗವನ್ನು ಇಲ್ಲಿ ಉದಾಹರಿಸುತ್ತೇನೆ.

ಪ್ರಶ್ನೆ: ರಾಮನೂ ಆಂಜನೇಯನೂ ಮಾತನಾಡಿದರಂತಲ್ಲ, ಅದು ಯಾವ ಭಾಷೆಯಲ್ಲಿ?

ಉತ್ತರ : ಕನ್ನಡದಲ್ಲಿ

ಪ್ರಶ್ನೆ: ನೀವು ಹಾಗೆ ಹೇಳಲು ಏನು ಆಧಾರ?

ಉತರ : ರಾಮಾಯಣ ಗ್ರಂಥವೇ ಆಧಾರ. ಅದರಲ್ಲಿ ಹೇಳಿದೆ, ರಾಮ ಆಂಜನೇಯರು ಸೇರಿದುದು ಕಿಷ್ಠಿಂಧೆಯಲ್ಲಿ ಎಂದು. ಕಿಷ್ಠಿಂಧೆಯಿರುವುದು ಕನ್ನಡ ದೇಶದಲ್ಲಿ ಆದದ್ದರಿಂದ ಅವರು ಕನ್ನಡದಲ್ಲಿಯೇ ಮಾತನಾಡಿರಬೇಕು.

ಪ್ರಶ್ನೆ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಅನ್ನುತ್ತೀರಾ ?

ಉತ್ತರ : ಹಾಗೆನ್ನುತ್ತೇನೆ.

ಪ್ರಶ್ನೆ: ಅಲ್ಲಸ್ವಾಮಿ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿಕನ್ನಡ ಇತ್ತೆ?

ಉತ್ತರ : ಅಯೋಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತು ಕೊಂಡಿರಬೇಕು. ನಿಮ್ಮ ಅಭಿಪ್ರಾಯವೇನು?

ಪ್ರಶ್ನೆ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕವಾಗಿದೆ. ಅವರಿಬ್ಬರೂ ಸಂಸ್ಕೃತದಲ್ಲಿಯೇ ಮಾತನಾಡಿದರೆಂದು ಹೇಳುವುದಾದರೆ, ಆಂಜನೇಯನಿಗೆ ಸಂಸ್ಕೃತ ಬರುತಿತೆಂದು ಹೇಳಬೇಕಾಗುತ್ತದಲ್ಲ?

ಉತರ : ಹಾಗೆಯೇ ಹೇಳೋಣ. ಆಂಜನೇಯನಿಗೆ ಸಂಸ್ಕೃತ ಬರುತಿತ್ರೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ !

ಪ್ರಶ್ನೆ: ಏನು ಸ್ವಾಮಿ, ಇದು ಹೇಗೆ ಹೊಂದಾಣಿಕೆಯಾಗುತ್ತದೆ ? ರಾಮನಿಗೆ ಸಂಸ್ಕೃತ ಬರುತ್ತಿರಬಹುದು. ಆಂಜನೇಯ ಶುದ್ಧ ಕಪಿ. ಅದಕ್ಕೆ ಸಂಸ್ಕೃತ ಬರೋಣವೆಂದರೇನು 9

|**+

X

ಉತರ :ಸ್ವಾಮಿ, ನೀವು ಆಂಜನೇಯನು ಸಮುದ್ರ ಹಾರಿದ ಕಪಿ ಎಂಬುದನ್ನು ಮರೆತುಬಿಟ್ಟಿದ್ದೀರಿ. ನಿಮ್ಮಂಥವರ ದೃಷ್ಟಿ ಒಂದು. ಬೇರೆ ಇನ್ನೊಂದು ದೃಷ್ಟಿಯುಂಟು. ರಾಮನೂ ಹನುಮಂತನೂ ದೈವಾಂಶದಿಂದುಟಾದವರು. ಅವರಿಗೆ ಭಾಷೆ ಕಲಿತುಕೊಳ್ಳುವುದು ಅಸಾಧ್ಯವೆ ? ಅವರಿಬ್ಬರೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದಿ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ ಶಕ್ತಿಯಿದ್ದವರು. ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತು ಕೊಳ್ಳಬಲ್ಲವರು.

ಪ್ರಶ್ನೆ: ಹಾಗಾದರೆ ಏನು ನಿಷ್ಕರ್ಜೇ ?

ಉತರ : ನಿಷ್ಕರ್ಷೆ ಇಷ್ಟು : ಅವರಿಬ್ಬರೂ ತಮಗಿಬ್ಬರಿಗೂ ಬರುತ್ತಿದ್ದ ಯಾವುದೋ ಭಾಷೆಯಲ್ಲಿಮಾತನಾಡಿದರು. ಇಲ್ಲಿ ನಮಗೆ ಮುಖ್ಯವಾದದ್ದು ಅವರು ಯಾವ ಭಾಷೆಯಲ್ಲಿ ಮಾತಾನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು. ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ ಯಾವುದು? ಅದನ್ನು ಯಾವ ಮಾರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು? - ಇದು ನಮಗೆ ಮುಖ್ಯ. ಭಾಷೆಯ ಪ್ರಶ್ನೆ ಇಲ್ಲಿಸಂಪೂರ್ಣವಾಗಿ ಅಸಂಗತ.

ರಸಭಂಗ

ಈಗ ವ್ಯಾಸಂಗಿಗಳಲ್ಲಿಒಂದು ಬಿನ್ನಹ ಮಾಡಬೇಕಾಗಿದೆ: ಕಾವ್ಯೋಪಾಸನೆಯ ನಡುನಡುವೆ ಇಂಥ ತರ್ಕಗಳನ್ನೆತಬಾರದೆಂಬುದು. ನಮ್ಮ ವ್ಯಾಖ್ಯಾನ ಕರ್ತರೇ ಶ್ಯ ನಿಯಮವನ್ನು ಉಲ್ಲಂಘಿಸಿ ರಸಭಂಗಕ್ಕೆ ಅವಕಾಶಮಾಡಿದ್ದಾರೆ. ಹೀಗೆ ತರ್ಕದಿಂದ ರಸಭಂಗಮಾಡುವುದು ಕವಿಯ ವಿಷಯದಲ್ಲಿ ಅಪರಾಧವೆಂದು ನಾನೆಣಿಸಿದ್ದೇನೆ.

ಕಾವ್ಯವು ಮನುಷ್ಯ ಜೀವನದ ರಸ ಸನ್ನಿವೇಶ ದರ್ಶನ. ಮಹಾಕಾವ್ಯವು ಒಂದು ಮಹಾಜೀವನದ ಒಂದು ಮಹಾರಸ ಸನ್ನಿವೇಶದ ದರ್ಶನ. ಶಕುಂತಲೆ ಬಷ್ಯಾಶ್ರಮದಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ಕಣ್ವರು ಆಶ್ರಮದ ಗಿಡಬಳ್ಳಿಗಳು ಆಕೆಗೆ ಅನುಜ್ಞೆಕೊಡಬೇಕೆಂದು ಬೇಡಿದರಂತೆ. ಗಿಡಬಳ್ಳಿಗಳು ದುಃಖಿಸುವುದೆಂದರೇನು ? ಅನುಜ್ಞೆ ಕೊಡುವುದೆಂದರೇನು ? ಯಕ್ಷನು ಮೇಘವನ್ನು ದೂತನಾಗೆಂದು ಹೇಳುವುದೆಂದರೇನು ? ಮೇಘಕ್ಕೆ

xl

ಹೃದಯಭಾವಗಳುಂಟೆ ? ಇಂಥ ಪ್ರಶ್ನೆಗಳನ್ನು ಚರ್ಚಿಸುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು. ಕಾವ್ಯವ್ಯಾಸಂಗಕ್ಕಲ್ಲ ಅಚೇತನದಲ್ಲಿ ಚೈತನ್ಯವನ್ನು ಆರೋಪಿಸಿ ಅದು ಸಚೇತನವಾಗಿದ್ದಿದ್ದರೆ ಹೇಗೆ ನಡೆದಿದ್ದಿರಬಹುದೋ ಹಾಗೆ ನಡೆಯಿತೆಂದು ಭಾವಿಸಿಕೊಳ್ಳುವುದು ಕವಿಪ್ರಪಂಚಕ್ಕೆ ಸಹಜವಾದ ರೀತಿ.

ಕಪಿಲೋಕಸೃಷ್ಟಿ ಏಕೆ?

ಇದಕ್ಕಿಂತ ಹೆಚ್ಚು ಕಚಕುಳಿಯಿಡುವ ಪ್ರಶ್ನೆ ಬೇರೆ ಇದೆ. ವಾಲ್ದೀಕಿಗಳು ತಮ್ಮ ಪ್ರಪಂಚದೊಳಕ್ಕೆ ಕಪಿಲೋಕವನ್ನು ಏಕೆ ತಂದುಕೊಂಡರು ? ಕಡೆ ಅಯೋಧ್ಯೆಯಲ್ಲಿಯೂ ಮಿಧಿಲೆಯಲ್ಲಿಯೂ ಮನುಷ್ಯ ಲೋಕ. ಅದು ಸಹಜವಾದದ್ದು ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಇತ್ತಕಡೆ ದಂಡಕಾರಣ್ಯದಲ್ಲಿಯೂ ಲಂಕೆಯಲ್ಲಿಯೂ ರಾಕ್ಷಸಲೋಕ. ರಾಕ್ಷಸರೆಂಬ ಪ್ರಾಣಿವರ್ಗವಿದ್ದದ್ದನ್ನು ವೇದದಲ್ಲಿ ಹೇಳಿದೆ. ಮತ್ತು ಗುಣದಲ್ಲಿ ರಾಕ್ಷಸರನ್ನು ಹೋಲುವಂಥ ಮನುಷ್ಯಜಾತಿ ಇರುವುದನ್ನು ನಾವು ಕಣ್ಣಾರೆ ಕಾಣುತ್ರಿದ್ದೇವೆ. ಆದದ್ದರಿಂದ ರಾಕ್ಷಸಲೋಕವನ್ನು ಒಪ್ಪಿಕೊಳ್ಳೋಣ. ಆದರೆ ಮನುಷ್ಯರಿಗೂ ರಾಕ್ಷಸರಿಗೂ ನಡುವಣ ವಾನರಲೋಕ ಮಿಕ್ಕೆರಡು ಲೋಕಗಳ ವ್ಯಾಪಾರವನ್ನೂ ಪ್ರವೇಶಿಸಿ ಅವಾಂತರ ಮಾಡಿದ್ದು ಎಲ್ಲಿಯಯೋಜನೆ | ವ್ಯಾಸರ ಕಲ್ಪನೆಯಲ್ಲಿ ಇಂಥಾದ್ದಿಲ್ಲ ವಿಲಕ್ಷಣ ಲೋಕವನ್ನು ವಾಲ್ಮೀಕಿಗಳು ಏಕೆ ಸೃಷ್ಟಿಮಾಡಿದರು 9 ಕಪಿಗಳೆಲ್ಲಿಯಾದರೂ ಮನುಷ್ಯರ ಸಂತೋಷದಲ್ಲಿಯಾಗಲಿ ದುಃಖದಲ್ಲಿಯಾಗಲಿ ಪಾಲುದಾರರಾಗುವುದುಂಟೆ ? ವಾನರನು ನರನೊಡನೆ ಸುಖದುಃಖಸಹಭಾಗಿ ಯಾದದ್ದುಂಟೆಂಬುದನ್ನು ನಾವು ಒಪ್ಪಿದಮೇಲೆ ನರಭಾಷೆಯನ್ನು ವಾನರನು ಕಲಿತನೆಂಬುದು ಅಸಾಧ್ಯದ ಮಾತಾಗಲಾರದು. ಆದರೆ ಮನುಷ್ಯರ ನೀತಿನಿಯಮಗಳನ್ನೂ ಉತ್ಪಾಹವಿಷುದಗಳನ್ನೂ ಅನುಭವಿಸಿ ನಡೆದುಕೊಂಡ ವಾನರರು ಆಂಜನೇಯ ಸುಗ್ರೀವಾದಿಗಳು. ಇದು ಚೋದ್ಯದ ಸಂಗತಿ.

ಇಲ್ಲಿ ಉತ್ತರ ಕೊಡಲು ನಮಗೆ ಸಹಾಯಮಾಡುವ ಶಕ್ತಿ ಊಹಾ ಪೋಹನವೊಂದೇ. ಗ್ರಂಥಪ್ರಮಾಣವೇನೂ ಕಾಣುವುದಿಲ್ಲ ವಾಲ್ದೀಕಿಗಳು ಸ್ವೋಪಜ್ಞತೆಯಿಂದ ಮಾಡಿದ ಸೃಷ್ಟಿ ಕಪಿರಾಜ್ಯ. ಭಾರತ ಕಥೆಯಲ್ಲಿ ವ್ಯಾಸರು ನಾಗಲೋಕವನ್ನೂ ಪ್ರಮೀಳಾಲೋಕವನ್ನೂ ತಮ್ಮ ಪ್ರಪಂಚದೊಳಕ್ಕೆ ತಂದಿದ್ದಾರೆ.

xii

ಲೋಕಗಳ ಲಕ್ಷಣವುಳ್ಳ ಜನಾಂಗಗಳು ವಾಸವವಾಗಿ ಉಂಟೆಂದು ಚಾರಿತ್ರಿಕರೂ ವಂಶತತ್ತ್ವ ವಿಜ್ಞಾನಿಗಳೂ ಹೇಳುತ್ತಾರೆ. ಆದರೆ ಕಪಿಜನಾಂಗವು ವಾಸವಿಕವೆಂಬುದಕ್ಕೆ ಅಂಥ ಸಮರ್ಥನೆಯೇನೂ ಕಾಣುವುದಿಲ್ಲ ವಾಲಿ ಸುಗ್ರೀವರ ಲೋಕವು ಸಂಪೂರ್ಣವಾಗಿ ವಾಲ್ಮೀಕಿಗಳ ನಿರ್ಮಾಣವೆಂದು ತೋರುತ್ತದೆ. ಕಿಷ್ಕಿಂಧೆಯು ವಾಲ್ಮೀಕಿಗಳ ಖಯಾಲಿಯಿಂದ (Fancy) ಉತ್ಪನ್ನವಾದದ್ದು ಮನುಷ್ಯಲೋಕವನ್ನು ಕೊಂಚ ಹೇಳನಮಾಡಬೇಕೆಂದು ವಾಲ್ಮೀಕಿಗಳಿಗೆ ಅನ್ನಿಸಿರಬೇಕು. ನಮ್ಮ ಕಾಲದಲ್ಲಿ ಸಮಾಜಶ್ರೇಷ್ಠರೆನಿಸಿ ಕೊಂಡವರಲ್ಲಿ ನಾಯಿಮರಿಯನ್ನುಸಾಕುವ ಫ್ಯಾಷನ್‌ ಬೆಳೆದಿದೆಯಷ್ಟೆ? ನಾಯಿಗೆ ಇದಷ್ಟು ದೊಡ್ಡತನವೆಂದು ಅವರನ್ನು ಕೇಳಿದರೆ ಅವರು ಹೇಳುತಾರೆ : "ಮನುಷ್ಯನಿಗಿಂತ ಶ್ರೇಷ್ಠವಾದ ಪ್ರಾಣಿ ನಾಯಿ. ನಾಯಿ ಸತ್ಯಸಂಧವಾದದ್ದು ; ನಾಯಿಯಲ್ಲಿರುವ ಕೃತಜ್ಞತೆಯು ಗುಣ ಮನುಷ್ಯನಲ್ಲೆಲ್ಲಿದೆ ?''- ಎಂದು. ಹೀಗೆ ಒಂದು ದೃಷ್ಟಿಯಿಂದ ನಾಯಿ ಉತ್ತಮ ಜಂತುವೆಂದು ಹೇಗೆ ಒಪ್ಪಿಕೊಳ್ಳಲಾಗುತ್ತದೋ ಹಾಗೆಯೇ ಇನ್ನೊಂದು ದೃಷ್ಟಿಯಿಂದ ಕಪಿಯು ಮನುಷ್ಯನಿಗಿಂತ ಉತ್ತಮವಾದದ್ದೆಂದು ಕಿಷ್ಕಿಂಧಾ ಕಾಂಡದ ಕಥೆಯಿಂದ ತೋರುತದೆ. ಯಾಂತಿ ನ್ಯಾಯಪ್ರವೃತಸ್ಯ ತಿರ್ಯಂಚೋsಪಿ ಸಹಾಯತಾಮ್‌ | ಅಪಂಥಾನಂ ತು ಗಚ್ಛಂತಂ ಸೋದರೋಪಅ ಪಿ ವಿಮುಂಚತಿ

ನ್ಯಾಯಕ್ಕೆ ತಿರ್ಯಗ್ಗಂತುಗಳೂ ಸಹಾಯಮಾಡುತವೆ. ಉದಾಹರಣೆ, ಕಿಷ್ಟಿಂಧೆಯ ಕಪಿಗಳು. ದುಮಾರ್ಗಿಯಾದವನನ್ನು ಒಡಹುಟ್ಟಿದವನೂ ತೊರೆದು ಬಿಡುತಾನೆ. ಉದಾಹರಣೆ, ವಿಭೀಷಣ.

ಇಂಥ ಅಭಿಪ್ರಾಯವು ವಾಲ್ಮೀಕಿಗಳ ಮನಸಿನಲ್ಲಿತ್ತೆಂದು ಅನ್ನಿಸುತ್ತದೆ. ಮನುಷ್ಯಜಾತಿಯವರು ತಾವು ಮಾತ್ರವೇ ಧರ್ಮಜ್ಞರು, ನ್ಯಾಯಾನ್ಯಾಯ ವಿವೇಕಿಗಳು-ಎಂದು ಜಂಬಪಟ್ಟುಕೊಳ್ಳಬೇಕಾಗಿಲ್ಲ ಧರ್ಮವಿವೇಕವೂ ನ್ಯಾಯ ದೃಷ್ಟಿಯೂ ಮನುಷ್ಯರಿಗಿಂತ ಕೆಳಗಿನವರೆಸಿಕೊಂಡಿರುವ ಕಪಿಗಳಲ್ಲಿಯೂ

ಇರುತ್ತದಂತೆ. ಕಪಿಗಳ ನ್ಯಾಯತತ್ನರತೆಯ ಸೂಚನೆ ರಾಮಾಂಜನೇಯರ ಪ್ರಥಮ ಸಮಾಗಮದಲ್ಲಿಯೇ ದೊರೆಯುತ್ತದೆ. (ಪುಟ ೩೪)

ಸುಗ್ರಿವೋ ನಾಮ ಧರ್ಮಾತ್ಮಾ ಕಶ್ಚಿದ್ದಾನರಯೂಥಪಃ Il

-ಸರ್ಗ ೩, ಶ್ಲೋಕ ೨೦

ಇಂಥ ವಾಕ್ಯಗಳು ಪದೇ-ಪದೇ ಬರುತ್ತವೆ. ಕಿಷ್ಠಿಂಧೆಯಲ್ಲಿ ಮನುಷ್ಯ ಸಮಾಜ ದಲ್ಲಿರುವಂತೆ ಮಾನಮರ್ಯಾದೆಗಳ ತಿಳಿವಳಿಕೆಯೂ ಸಭ್ಯನೀತಿಯ ಪರಿಜ್ಞಾನವೂ ಇತ್ತೆಂದು ಸ್ಪಷ್ಟವಾಗುತ್ತದೆ.

ಕವಿಯು ಇಂಥ ಮನುಷ್ಯರಾಜ್ಯ ಮತ್ತೊಂದನ್ನು ಕಲ್ಪನೆಮಾಡುವುದು ಕಷ್ಟವಾಗಿರಲಿಲ್ಲ ದಶರಥನ ಕಾಲದಲ್ಲಿ ನಾನಾ ರಾಜ್ಯಗಳೂ ರಾಜಾಧಿ ರಾಜರುಗಳೂ ಬೇರೆ ಎಷ್ಟೋ ಇದ್ದರು. ಸೀತಾಸ್ವಯಂವರ ಕಾಲದಲ್ಲಿಮಿಧಥಿಲಾ ಪಟ್ಟಣದಲ್ಲಿಎಷ್ಟೋ ಮಂದಿ ರಾಜರುಗಳು ಅಹಮಹಮಿಕೆಯಿಂದ ನೆರೆದಿದ್ದರು. ಅಂಥ ಇನ್ನೊಬ್ಬ ರಾಜನನ್ನೂ ಇನ್ನೊಂದು ಅಂಥ ರಾಜ್ಯವನ್ನೂ ವಾಲ್ಡೀಕಿಗಳು ಸುಲಭವಾಗಿ ಕಟ್ಟಬಹುದಾಗಿತ್ತು ಹಾಗಿಲ್ಲದೆ ಕಪಿರಾಜ್ಯವನ್ನು ಸೃಷ್ಟಿಮಾಡಿದ್ದು ವಾಲ್ದೀಕಿಗಳ ಒಂದು ವಿಶೇಷ ಮನಃ ಪ್ರವೃತ್ತಿಯೆಂದು, ಅಥವಾ ಒಂದು ವಿಶೇಷ ಮನೋಲೀಲೆ ಎಂದು ಭಾವಿಸಬೇಕಾಗುತ್ತದೆ. ಮನುಷ್ಯ- ರಾಕ್ಷಸರ ನಡುವೆ ಒಂದು ವಿನೋದವನ್ನು ಕಲ್ಪಿಸುವುದು ಅವರ ತಾತ್ತರ್ಯವಾಗಿದ್ದಿರಬಹುದು.

ಅಯೋಧ್ಯೆಯ ಕಥೆ ಹೃದಯಭೇದಕವಾದದ್ದು ಲಂಕೆಯದಂತೂ ಭಯಂಕರವಾದದ್ದು ಎರಡರ ನಡುವೆ ಕೊಂಚ ಮನಸ್ಸಿನ ಉದ್ವೇಗವನ್ನು ಇಳಿಸುವ ಒಂದು ರಚನೆ ಯುಕ್ತವೆಂದು ವಾಲ್ಡೀಕಿಗಳಿಗನ್ನಿಸಿರಬೇಕು. ಶ್ರೀರಾಮನು ಕೂಡ ಹಾಸ್ಯಪ್ರಿಯನೆಂದು ಅಲ್ಲಲ್ಲಿ ಕಾಣಬರುತ್ತದೆ. ವಾಲ್ದೀಕಿಗಳು ಒಂದು ಉಗ್ರವಾದ ಹಠವನ್ನು ತೊಟ್ಟು ಹುಬ್ಬು ಬಿಗಿದು ಔಡುಕಚ್ಚಿ ಕುಳಿತಿದ್ದರೆಂದು ನನಗನಿಸುವುದಿಲ್ಲ ಅವರು ಸೌಮ್ಯವುಳ್ಳವರು. ಸರಳರು. ವಿನೋದಪ್ರಿಯರು. ತಾವು ನಕ್ಕು ಇತರರನ್ನು ನಗಿಸುವುದರಲ್ಲಿ ಸಂತೋಷ ಪಡುವವರು. ಎನೋದಕ್ಕಾಗಿ ಒಂದು ಮನೋಲೀಲೆಯಿಂದ ಅವರು ಕಪಿ ರಾಜ್ಯವನ್ನು

XIV

ನಿರ್ಮಿಸಿರಬೇಕೆಂದು ನನಗನ್ನಿಸುತ್ತದೆ. ಇದಕ್ಕೆ ಇತರ ನಿದರ್ಶನಗಳೂ ಇವೆ. ಸುಂದರಕಾಂಡದಲ್ಲಿಆಂಜನೇಯನು ಕೃತಕೃತ್ಯನಾಗಿ ಹಿಂದಿರುಗಿದ ವಾರ್ತೆಯಿಂದ ಹರ್ಷಾವೇಶದಲ್ಲಿದ್ದ ಕಪಿಗಳು ಮಧುವನವನ್ನು ಧ್ವಂಸಮಾಡಿದ ವರ್ಣನೆಯನ್ನು ನೋಡಬಹುದು (ಸರ್ಗ ೬೨). ಹೀಗೆ ವಾಲ್ದೀಕಿಗಳ ಮನಸ್ಸು ಮನುಷ್ಯ ಗರ್ವಭಂಗ, ಕಿಂಚಿದುಪಹಾಸ- ಎರಡು ಉದ್ದೇಶಗಳನ್ನೊಳಗೊಂಡು ಕಲಿಸಿದ್ದು ಕಪಿರಾಜ್ಯ.

ಚರಿತ್ರೆಯಲ್ಲ

ಮೊದಲೇ ವಿಜ್ಞಾಪಿಸಿದ್ದೇನೆ, ಮಹಾಕಾವ್ಯವ್ಯಾಸಂಗಿಯು ಕಥಾಘಟನೆಗಳ ಸಾಧ್ಯಾಸಾಧ್ಯತೆಯ ವಿಷಯದಲ್ಲಿ ಉದಿಸುವ ಸಂದೇಹಗಳನ್ನೂ ಶಂಕೆಗಳನ್ನೂ ಬದಿಗಿರಿಸಬೇಕೆಂದು. ಕಾವ್ಯವು ಚರಿತ್ರೆ (1115077) ಅಲ್ಲ ಕಾವ್ಯವು ಮುಖ್ಯವಾಗಿ ಅಂತರಂಗಪ್ರಪಂಚವನ್ನು ಕುರಿತದ್ದು ಚರಿತ್ರೆಯು ಮುಖ್ಯವಾಗಿ ಬಹಿರಂಗ ಪ್ರಪಂಚವನ್ನು ಕುರಿತದ್ದು ಚರಿತ್ರೆಗೆ ಬೇಕಾದದ್ದು ಸಾಮಾನ್ಯವಾದ ಮನುಷ್ಯ ಲೋಕ ; ಮತ್ತುಸಾಮಾನ್ಯಲೋಕದಲ್ಲಿ ಒಪ್ಪಿಗೆಗೆ ಬರುವ ರುಜುವಾತುಗಳು : ದಾಖಲೆಗಳು, ತಾರೀಖುಗಳು, ಕೈಫಿಯತ್ತುಗಳು ಇತ್ಯಾದಿ. ಅಂತರಂಗ ಲೋಕದಲ್ಲಾದರೋ ಮುಖ್ಯವಾದವು ಅನುಭವಗಳು. ಕಪಿ ಹೇಗೆ ಸಂತೋಷ ಪಟ್ಟಿತು, ಅದರ ಸಂತೋಷವನ್ನು ಅದು ಹೇಗೆ ವ್ಯಕ್ತ ಪಡಿಸಿತು, ಅದನ್ನು ನೋಡಿದಾಗ ನೋಡಿದವರ ಮನಸಿಗೆ ಏನನ್ನಿಸಿತು- ಹೀಗೆ. ಆದ್ದರಿಂದ ಯಾರು ಮಹಾಕಾವ್ಯವು ಚಾರಿತ್ತಿಕವಾಗಿಲ್ಲವೆಂದು ಬೊಬ್ಬೆ ಯಿಡುತಾರೋ ಅವರು ಮಲ್ಲಿಗೆ ಹೂವಿನ ರಾಶಿಯಲ್ಲಿ ಗೊಬ್ಬ ರದ ಗುಣವಿಲ್ಲವೆಂದು ಕೊರಗುವವರು.

ಆಕಾಶ ವಿಕಾರಗಳಿಗಿಂತ ಅಂತರಂಗಭಾವ ಮುಖ್ಯವೆಂದು ಸೂಚಿಸುವುದೂ ವಾಲ್ದೀಕಿಗಳ ಆಶಯವಿದ್ದಿರಬಹುದು.

ಗುಣಾಃ ಪೂಜಾಸ್ಥಾನಂ ಗುಣಿಷು ನಚ ಲಿಂಗಂನಚ ವಯಃ॥

ಕಾವ್ಯವೆಂದರೆ ಜೀವನದರ್ಶನ ; ದರ್ಶನದಲ್ಲಿ ಉಂಟಾಗುವ ರಸ ಸನ್ನಿವೇಶಗಳ ಅನುಭವ. ಮಹಾಕಾವ್ಯವೆಂದರೆ ಮಹಾಜೀವನದರ್ಶನ ; ಮಹಾ ಜೀವನದಲ್ಲಿ ಕಾಣಲಾಗುವ ರಸಗಳ ಅನುಭವ. ಸೀತಾ ರಾಮ ಭರತ ಲಕ್ಷ್ಮಣಾದಿಗಳ ಮಹಾಪರೀಕ್ಷೆಗಳ ದರ್ಶನದಿಂದಲೂ ಪರೀಕ್ಷೆಗಳಿಗೆ ಅವರು

XV

ಪ್ರತ್ಯುತರರೂಪವಾಗಿ ತೋರಿಸುವ ಮಹಾಚರ್ಯೆಗಳಿಂದೆಲೂ ಹೊರ ಹೊಮ್ಮುವ ಮಹಾರಸಗಳ ಅನುಭವ.

ರಸವೆಂದರೇನು?

ರಸವೆಂಬುದು ನಮಗೆ ಇಷ್ಟವಾದ ಹೃದಯಾನುಭವವನ್ನು ಮಾಡಿಸಿ ಕೊಡಬಲ್ಲ ದ್ರವ್ಯವಿಶೇಷ ನಾವು ಒಂದಾನೊಂದು ಸಂದರ್ಭವನ್ನು ಕಂಡಾಗ ಅಥವಾ ಕೇಳಿದಾಗ ನಮ್ಮ ಅಂತರಂಗದಲ್ಲಿ ""ಅಯ್ಯೋ | '' ಎಂದಾಗಲಿ, “ಆಹಾ!'' ಎಂದಾಗಲಿ, "ಹೊಹೊ | '' ಎಂದಾಗಲಿ, ""ಬೇಷ್‌ | ಎಂದಾಗಲಿ ಎನ್ನುವಂತೆ ಮಾಡಿಸುವ ಸಂಗತಿ ಯಾವುದೋ ಅದು ರಸಮೂಲ. ವಿಶೇಷ ಗುಣ ಸಂದರ್ಭದಲ್ಲಿರುವುದರಿಂದಲೇ ನಮ್ಮ ಅಂತರಂಗದಲ್ಲಿ ಒಂದು ಚಲನೆಯುಂಟಾಗಿ, ಒಂದು ಕಂಪನವುಂಟಾಗಿ, ಒಂದು ಜೀವನ ಪರಾಮರ್ಶೆ ಪ್ರಚೋದಿತವಾಗುತ್ತದೆ. ಅದೇ ರಸಾನುಭವ. ಎಲ್ಲಿ ಹೀಗೆ ಅಂತರಂಗವನ್ನು ಚುಚ್ಚುವ ಅಥವಾ ಕಲಕುವ ಅಥವಾ ಕೆಣಕುವ ಪ್ರೇರಣೆಯಿಲ್ಲವೋ ಅಲ್ಲಿರಸವಿಲ್ಲ

ರಸವೆಂಬುದು ಬರಿಯ ಶಬ್ದ ಚಮತ್ಕಾರವಲ್ಲ ಶಬ್ದ ಬಾಹುಳ್ಯವೂ ಅಲ್ಲ ಅಥವಾ ಮಕ್ಕರಚನೆಯ ವಿಶೇಷವೂ ಅಲ್ಲ ಅದು ಹೃದಯಸರ್ಶನ ಶಕ್ತಿಯುಳ್ಳ ದ್ರವ್ಯ. ದ್ರವ್ಯದ ಮೂಲಸ್ಥಾನ ಒಂದು ಮಾನುಷ ಸನ್ನಿವೇಶದಲ್ಲಿರುತ್ತದೆ. ಕವಿ ಸನ್ನಿವೇಶದ ಕಡೆಗೆ ನಮ್ಮ ದೃಷ್ಟಿಯನ್ನು ತಿರುಗಿಸುತ್ತಾನೆ. ಇದೇ ಅವನಿಂದ ನಮಗಾಗುವ ಉಪಕಾರ.

ಪಾತ್ರಾಭಿವ್ಯಕ್ತಿ

ಮಹಾಕಾವ್ಯದ ಮುಖ್ಯಸ್ವಾರಸ್ಯವಿರುವುದು ಅದರ ಪಾತ್ರಾಭಿವ್ಯಕ್ತಿಯಲ್ಲಿ

(Character development). ಅದರ ಚಾರಿತ್ರಿಕ (ಗisorical) ಘಟನೆಯಲ್ಲಲ್ಲ,

ಅದರ ವರ್ಣನೆಗಳಲ್ಲಲ್ಲ; ಶಬ್ದಚಮತ್ಕಾರದಲ್ಲೂ ವಾಗ್ಧುಟಿಯಲ್ಲೂಅಲ್ಲ; ಅದರ ಮುಖ್ಯಪಾತ್ರಗಳ ಸ್ವಭಾವವಿಕಾಸದಲ್ಲಿ

ಒಂದಾನೊಂದು ವಿಶೇಷ ಸಂದರ್ಭದಲ್ಲಿ ಒಬ್ಬ ಮಹಾಪುರುಷನ ಮನಸ್ಸು

ಅದಕ್ಕೆ ಹೇಗೆ ಪ್ರತಿಹೇಳುತ್ತದೆ ? ಇದು ವ್ಯಾಸಂಗಕ್ಕೆ ತಕ್ಕ ವಿಷಯ. ಹವಾಮಾನ

ಶಾಲೆಯಲ್ಲಿ (Meteorological Observatory) ಒಂದು ಎತ್ತರವಾದ ಶಿಖರದ ಮೇಲೆ ಒಂದು ಹುಂಜದ ಆಕಾರದ (Weathercock) ಯಂತ್ರವನ್ನಿಸಿರುತ್ತಾರೆ.

XVI

ಯಂತ್ರವು ಸಾಮಾನ್ಯವಾಗಿ ಯಾವಾಗಲೂಸುತುತಿರುತ್ತದೆ- ಗಾಳಿ ಯಾವ ದಿಕ್ಕಿಗೆ ಬೀಸುತ್ತದೆಯೋ ಕಡೆಗೆ, ಎಷ್ಟು ವೇಗದಿಂದ ಬೀಸುತ್ತದೆಯೋ ಅಷ್ಟು ರಭಸದಿಂದ; ಗಿರಗಿರನೆಯೋ ಮೆಲ್ಲಮೆಲ್ಲಗೋ ಸುತುತದೆ. ಹವಾಹುಂಜದ ಗತಿವೇಗಗಳಿಂದ ವಾಯುಚಲನೆಯ ಗತಿವೇಗವನ್ನು ಗೊತ್ತು ಮಾಡಲಾಗುತ್ತದೆ. ಮಹಾಕಾವ್ಯವು ಇಂಥ ಹವಾಹುಂಜಗಳ ಪ್ರದರ್ಶನಶಾಲೆ. ಕಷ್ಟಬಂದಾಗ, ಸಂಕಟ ಬಂದಾಗ, ಭಯ ಬಂದಾಗ, ಸತ್ವಪರೀಕ್ಷೆ ಬಂದಾಗ, ಜಯ ಬಂದಾಗ, ಸೋಲು ಬಂದಾಗ, ಯಾವ ಯಾವ ಕಥಾಪಾತ್ರವೃಕ್ತಿ ಹೇಗೆ ಹೇಗೆ ಪ್ರತಿವರ್ತನೆ ತೋರುತ್ತದೆ ? ಇದು ನಮ್ಮ ಗಮನದಲ್ಲಿರಬೇಕಾದ ಸಂಗತಿ.

ಕಾವ್ಯ-ಸತ್ಯ ಸಂಬಂಧ

ಕಾವ್ಯಕ್ಕೂ ಸತ್ಯಕ್ಕೂ ಏನು ಸಂಬಂಧ ? ಇದನ್ನು ವಿಚಾರಮಾಡೋಣ. ಲೋಕವ್ಯ ವಹಾರದಲ್ಲಿ ಸತ್ಯ ವನ್ನು ಎರಡು ಪ್ರಕಾರಗಳಲ್ಲಿ ಕಾಣುತ್ತೇವೆ :

ಒಂದು ಬಹಿಷ್ಟಮಾಣದ್ದು: : ತಾರೀಖು, ಘಂಟೆ, ಚಹರೆಯ ಪಟ್ಟಿ, ಅಳತೆ, ರುಜುವಾತು, ಸಾಕ್ಷ್ಯಗಳ ಕೈಫಿಯತ್ತು- ಇಂಥವುಗಳಿಂದ ಗೊತ್ತಾಗತಕ್ಕ ಸತ್ಯ. ಕೋರ್ಟುಗಳಲ್ಲಿ ನ್ಯಾಯನಿರ್ಣಯಕ್ಕೆ ಆಧಾರವಾದದ್ದು ಇಂಥ ಸತ್ಯ. ಕಳ್ಳತನದ ಆಪಾದನೆ ಹೊತ್ತಿರುವ ಮನುಷ್ಯನು ಕಳ್ಳ ಹೌದೊ, ಅಲ್ಲವೋ ? ಆಪಾದಿತರು ಹೇಳಿದ ದಿನ ಹೊತಿನಲ್ಲಿ ಸ್ಥಳದಲ್ಲಿ ಅದೇ ಪದಾರ್ಥವನ್ನು ಅವನು ಕಳುವು ಮಾಡಿದ್ದುರುಜುವಾತಾಗದೆ ಹೋದಲ್ಲಿಅವನು ಕಳ್ಳನಲ್ಲ, ಪಕ್ಕದ ಮನೆಯವರೂ ಹಿತ್ತಲು ಕಡೆಯವರೂ ಅವನು ಕಳ್ಳತನ ನಡೆಸಿದ್ದನ್ನು ಸಾವಿರಸಲ ಕಂಡಿರಬಹುದು. ಆದರೂ ಅವನು ಸತ್ಯವಂತ. ಇದು ಒಂದು ಬಗೆಯ ಸತ್ಯ. ನಮ್ಮ ಚರಿತ್ರೆಯ ಪುಸಕಗಳನ್ನು ಬರೆಯುವವರಿಗೆ ಬೇಕಾದದ್ದು ಸತ್ಯ. ಇದನ್ನು ವಾಸ್ತವಿಕ ಸತ್ಯವೆಂದು ಕರೆಯೋಣ.

ಎರಡನೆಯದು ಕಾಲ್ಪನಿಕ ಸತ್ಯ ಇದು ಕವಿಕರ್ಮದ್ದು ಹರಿಶ್ಚಂದ್ರ ಕಥೆ ವಾಸವಿಕವೋ ಅಲ್ಲವೋ. ಅದು ಕಾಲನಿಕವೆಂದೇ ಇಟ್ಟುಕೊಳ್ಳೋಣ. ಆದರೆ ಅದರಲಿ ) ನಕ್ಷತ್ರಿಕನು ಹರಿಶ್ಚಂದ್ರ ನನ್ನು "`ಏಂಸೆಮಾಡಿದ್ದಾಗಲಿ, ಚಂದ್ರಮತಿಯು ಮಗ ರೋಜಹಿತಾಶ್ವನ ಶವವನ್ನು ಹೊತ್ತು ಶೃಶಾನಕ್ಕೆ ಬಂದದ್ದಾಗಲಿ ನಾಟಕಶಾಲೆಯಲ್ಲಿ ಕಣ್ಣಮುಂದೆ ಬಂದಾಗ ಕಣ್ಣೀರು ಓಡದವರು ಯಾರು

ದೃಶ್ಯ ಸಂಪೂರ್ಣ ಸತ್ಯವೆಂದು ಅನುಭವಾದದ್ದರಿಂದಲೇ ಅಲ್ಲವೆ ಕಣ್ಣೀರು ಉಕ್ಕಿ ದು _) ಹೀಗೆ ಕಾಲನಿಕ ಸತ್ಯವು ಅಂತರಂಗದಲ್ಲಿ ರುಜುವಾತಿಗೆ ಬಂದರೆ ಅದು ಕಾನ ಸತ್ರ ವಾಗುತ್ತದೆ.

ಕಾವ್ಯದಲ್ಲಿ ನಮಗೆ ಬೇಕಾದದ್ದೂ ವಾಸ್ತವಿಕ ಸತ್ಯವಲ್ಲ, ಪ್ರತ್ಯಕ್ಷ ಸತ್ಯವಲ್ಲ; ಅಂತರಂಗಿಕ ಸತ್ಯ, ಊಹನಲಭ್ಯ ಸತ್ಯ. ಇದನ್ನೇ ಇಂಗ್ಲಿಷಿನಲ್ಲಿ'“Verisimilitude of truth”’ ಎನ್ನುತಾರೆ. ಅದು ಸತ್ಯ 'ಸಾದೃಶ ಸತ್ಕೌಪಮ್ಯ, ಸತ್ಯಪ್ರತೀತಿ.

ಲಕ ಇಂಥ ಸತ್ಯಪ್ರತೀತಿ ಕಾವ್ಯದಲ್ಲಿರದೆಹೋದರೆ ಅದು ಮನುಷ್ಯರ ಮೇಲೆ ಪ್ರಭಾವ ಶಾಲಿಯಾಗಲಾರದು. ಕಾವ್ಯದ ಬಲವೇ ಅಂತರ್ದ್ವಷ್ಟವಾದ ಸತ್ಯ. ಕಾವ್ಯಾಭ್ಯಾಸಿಗೆ ಬೇಕಾದದ್ದುಇಂಥ ಅಂತರ್ದ್ವಷ್ಟಿ ಅದರ ಒಂದು ರೂಪವೇ ಪ್ರತಿಭೆ. ಫೋಟೋಗ್ರಾಫ್‌ ಯಂತ್ರವು ವಸ್ತುವಿನ ಬಾಹ್ಯಾಕಾರವನ್ನು ಹೇಗೆ ಹಿಡಿಯಬಲ್ಲದೋ ಹಾಗೆ ಪ್ರತಿಭೆಯು ಒಂದು ಸಂದರ್ಭದ ಆಂತರ್ಯವನ್ನು ಗ್ರಹಿಸಬಲ್ಲದ್ದು

ಒಂದು ವಿವಾದ

ಈಗ ಒಂದು ಪ್ರಸಿದ್ದ ತಕರಾರಿನ ವಿಚಾರಕ್ಕೆ ಹೋಗೋಣ. ಅದು ಅನಿವಾರ್ಯವಾದ ತಕರಾರೆಂದು ನನಗನ್ನಿಸುವುದಿಲ್ಲ ಪೌರಾಣಿಕರೂ ಹರಿಕಥಾಕಾರರೂ ಬೆಳೆಸಿದ ತಕರಾರು ಇದೆಂದು ನನಗನ್ನಿಸುತ್ತದೆ. ಶ್ರೀರಾಮನು ವಾಲಿಯನ್ನು ಕೊಂದದ್ದು ನೀತಿಯೆ ? ಮೊದಲನೆಯದಾಗಿ, ರಾಮನು ಯುದ್ಧಕ್ಕೆ ಸಂಬಂಧಪಟ್ಟವನಲ್ಲ ಎರಡನೆಯದಾಗಿ, ತಾನು ಅದರಲ್ಲಿ ಭಾಗ ವಹಿಸತಕದ್ದೆಂಬುದನ್ನುವಾಲಿಗೆ ತಿಳಿಯಪಡಿಸಿರಲಿಲ್ಲ ಮೂರನೆಯದಾಗಿ, ವಾಲಿ ಬೇರೆಕಡೆ ಮುಖ ತಿರುಗಿಸಿದ್ದಾಗ ಬೆನ್ನ ಮೇಲೆ ಹೊಡೆದದ್ದು ಸರಿಯೆ ? ಮೂರು ಸಂದರ್ಭಗಳೂ ಇನ್ನೋ ಎಷ್ಟೋ ಅಸಂದರ್ಭಗಳೂ ರಾಮನ ಮಹಾ ಪುರುಷತ್ವಕ್ಕೆ ಹಾನಿ ತರುತ್ತವೆ. 'ಹಾನಿಗಳಿಂದ ರಾಮನನ್ನು ರಕ್ಷಿಸಿ ಪಾರುಮಾಡ ಬೇಕೆಂದು "ನಮ್ಮ ಪೌರಾಣಿಕ ಕಥಕರುಗಳ ಮಹೋದ್ದೇಶ. ಕೆಲಮಂದಿ ವ್ಯಾಖ್ಯಾನಕಾರರುಗಳೂ ಮಹಾ ಪ್ರಯತ್ನಕ್ಕೆ ಸೇರಿದ್ದಾರೆ.

ಆದರೆ ರಾಮನ ಮೇಲೆ ಹೊರಿಸಬಹುದಾದ ಆಕ್ಷೇಪಣೆಗಳನ್ನು ವಾಲಿಯೇ ಹೊರಿಸಿದ್ದಾನೆ. ಅದಕ್ಕೆ ಹೇಳಬಹುದಾದ ಪ್ರತ್ಯುತ್ತರಗಳನ್ನು ರಾಮನೇ

7೧/1111

ಹೇಳಿದ್ದಾನೆ. ಸಮಾಧಾನವನ್ನು ವಾಲಿಯೂ ಅವನ ಸಂಬಂಧಿಗಳೂ ಅಂಗೀಕರಿಸಿದ್ದಾರೆ (ಸರ್ಗ ೧೮). ವಾಲಿಯೇ ರಾಮನಲ್ಲಿ ದೋಷವಿಲ್ಲವೆಂದು ಒಪ್ಪಿಕೊಂಡ ಮೇಲೆ ತಕರಾರು ಬೆಳೆಸುವುದಕ್ಕೆ ನಾವು ಯಾರು?

ವಿಚಾರವನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದಾಗಿದೆ. ಪ್ರಶ್ನೆ ಕೇಳುವವರು ರಾಮನ ಮಹಾಪುರುಷತ್ವದ ದೃಷ್ಟಿಯಿಂದ ತಾನೆ ಹಾಗೆ ಕೇಳುವುದು ? ಸಾಮಾನ್ಯ ಮನುಷ್ಯರು ಹಾಗೆ ನಡೆದುಕೊಂಡಿದ್ದಿದ್ದರೆ ಪ್ರಶ್ನೆ ಯೇಳುತಿರಲಿಲ್ಲ ಅದು ಮನುಷ್ಯನಿಗೆ ಸ್ವಾಭಾವಿಕವಾದದ್ದೆಂದು ಉಪೇಕ್ಷೆ ಮಾಡಬಹುದಾಗಿತ್ತು ಆದರೆ ರಾಮನು ಸಾಮಾನ್ಯ ಮನುಷ್ಯನಲ್ಲ; ಮಹಾ ಪುರುಷ, ಧೀರೋದಾತ್ತ ಅಂಥವನು ಹೀಗೆ ಮಾಡಬಹುದೆ?

ಶ್ರೀರಾಮಚಂದ್ರನನ್ನು ಎರಡು ಬೇರೆ ಬೇರೆ ಪ್ರಸ್ಥಾನಗಳಿಂದ ನೋಡುವು ದು ಪೂರ್ವದಿಂದ ಬಂದಿರುವ ವಾಡಿಕೆ:

೧) ರಾಮನು ಮನುಷ್ಯತ್ವದಿಂದ ದೇವತ್ವಕ್ಕೆ ಹತ್ತಿದವನು. ತನ್ನ ಪ್ರಯತ್ನದಿಂದ ದೇವಸಮಾನತ್ವವನ್ನು ಸಂಪಾದಿಸಿದವನು.

೨) ರಾಮನು ದೇವತ್ವದಿಂದ ಮನುಷ್ಯತ್ವಕ್ಕೆ ಇಳಿದವನು. ಮನುಷ್ಯತ್ವದ ಉಪಾಧಿಗಳನ್ನು ಮೀರಿದವನು. ಸಾಕ್ಷಾತ್‌ ಮಹಾವಿಷ್ಣು

ಎರಡು ದೃಷ್ಟಿಗಳಲ್ಲಿಎರಡನೆಯ ದೃಷ್ಟಿಗೆ, ಎಂದರೆ ಸಾಕ್ಷಾತ್‌ ವಿಷ್ಣುಎಂಬ ಅಭಿಪ್ರಾಯಕ್ಕೆ ವಾಲಿವಧೋಪಾಯ ಸಮರ್ಥನೆಯು ಕೊಂಚ ಕಷ್ಟವಾಗುತ್ತದೆ. ಕಷ್ಟದಿಂದ ರಾಮನನ್ನು ಪಾರುಮಾಡುವುದಕ್ಕಾಗಿ ಕೋರ್ಟಿನಲ್ಲಿ ಲಾಯರುಗಳೂ ವಾದಿಸುವಂತೆ ಪಾಯಿಂಟ್‌ ಒಂದು, ಪಾಯಿಂಟ್‌ ಎರಡು-ಎಂದು ಪ್ರತಿವಾದ ಹೇಳಿ ಚಮತ್ಕಾರ ವಿಜೃಂಭಣೆ ಮಾಡಬೇಕಾಗುತದೆ.

ಆದರೆ ರಾಮನು ಮೊದ ಮೊದಲು ಮನುಷ್ಯನಾಗಿದ್ದವನು ಎಂಬ ಕಕ್ಷಿಯವರಿಗೆ ವಾಲಿವಧ ಪ್ರಕರಣದಲ್ಲಿ ಅಸಂಗತವೇನೂ ಕಾಣುವುದಿಲ್ಲ ಎಲ್ಲ ಸಾಮಾನ್ಯ ಮನುಷ್ಯರೂ ಎಂಥ ವಿವೇಕದಿಂದಲೂ ಎಂಥ ಉಪಾಯದಿಂದಲೂ ನಡೆದುಕೊಳ್ಳುತ್ತಿದ್ದರೋ ಅದರಂತೆಯೇ ರಾಮನು ನಡೆದ. ಸಂದರ್ಭದ ವಿವರಾಂಶವನ್ನು ಮೊದಲು ಜ್ಞಾಪಕಕ್ಕೆ ತಂದುಕೊಳ್ಳೋಣ.

20 ವಾಲಿವಧೆಯ ಪೌರ್ವಾಪರ್ಯ

ಆಂಜನೇಯಸ್ವಾಮಿ ಶ್ರೀರಾಮನಿಗೆ ಸುಗ್ರೀವನ ಪರಿಚಯವನ್ನು ಮಾಡಿ ಕೊಡುವ ಸಂದರ್ಭದಲ್ಲಿ ಹೇಳಿದ್ದು ಹೀಗೆ (ಪುಟ ೪೩) :

ಹಿ ರಾಜ್ಯಾತ್‌ ಪರಿಭ್ರಷ್ಠ ಕೃತವೈರಶ್ಚ ವಾಲಿನಾ ಹೃತದಾರೋ ವನೇ ತ್ಯಕಃ ಭ್ರಾತ್ರಾ ವಿನಿಕತೋ ಭೃಶಮ್‌ ಸರ್ಗ ೪, ಶ್ಲೋಕ ೨೭ ಕರಿಷ್ಯತಿ ಸಾಹಾಯ್ಕಂ ಯುವಯೋರ್ಭಾಸ್ಕರಾತ್ಮಜಃ | ಸುಗ್ರೀವಃ ಸಹ ಚಾಸ್ಥಾಭಿಃ ಸೀತಾಯಾಃ ಪರಿಮಾರ್ಗಣೇ ಸರ್ಗ ೪, ಶ್ಲೋಕ ೨೮ ಶ್ರೀರಾಮನ ಸಮಸವರ್ತನೆಗೂ ತಳಹದಿಇಲ್ಲಿದೆ. ರಾಮನ ಮುಖ್ಯೋದ್ದೇಶ ಸೀತಾನ್ವೇಷಣ. ೧) ಅದು ಆತನಿಗಿದ್ದಪ್ರಪ್ರಥಮ ಕರ್ತವ್ಯ. ೨) ಅದಕ್ಕೆ ಆಗಬೇ ಕಾಗಿದ್ದಪ್ರ ಪ್ರಥಮ ಸಾಧನ ಸಮರ್ಥರಾದವರ ಸಹಾಯ. ೩) ಅಂಥ ಸಹಾಯ ವನ್ನು ಕೊಡಲು ಪ್ರಪ್ರಥಮವಾಗಿ ಸಿದ್ಧನಾಗಿ ಬಂದವನು ಸುಗ್ರೀವ. ಆದದ್ದರಿಂ ಸುಗ್ರೀವನನ್ನು ತೃಪ್ಪಿಪಡಿಸುವುದು ಶ್ರೀರಾಮನಿಗೆ ಸ್ವಕರ್ತವ್ಯದ ಪ್ರಪ್ರಥಮಾಂ ಗವಾಯಿತು.

ರಾಮನು ಹೇಳಿದ ಉತ್ತರ (ಪುಟ ೪೯):

ವಾಲಿನಾಂ ತಂ ವಧಿಷ್ಯಾಮಿ ತವ ಭಾರ್ಯಾಪಹಾರಿಣಮ್‌

ಸರ್ಗ ೫, ಶ್ಲೋಕ ೨೭

ಹೀಗೆಂದು ಭಾಷೆಕೊಟ್ಟ. ಇದು ಅಗ್ನಿ ಸಾಕ್ಷಿಕವಾಗಿ ನಡೆಯಿತು. ಅವರು ಕೈಯ ಮೇಲೆ ಕೈಹಾಕಿ ಪ್ರಮಾಣ ಮಾಡಿಕೊಟ್ಟರು. ಒಪ್ಪಂದವೇ ರಾಮನ ಚರ್ಯೆಗೆ ಅಡಿಗಲ್ಲು

XX

ರಾಮನು ವಾಲಿಯ ಸಹಾಯ್ಯವನ್ನೇ ಪಡೆದುಕೊಳ್ಳಬಹುದಾಗಿತ್ತಲ್ಲ? ವಾಲಿಯುತಾನು ರಾವಣನಿಗಿಂತ ಮಹಾಪರಾಕ್ರಮಿಯೆಂದೂ ಸೀತೆಯನ್ನುತಾನೇ ತಂದು ಒಪ್ಪಿಸಬಲ್ಲೆನೆಂದೂ ಹೇಳಿದನಲ್ಲ? ಅಂಥವನನ್ನು ಬಿಟ್ಟು ರಾಮನು ದುರ್ಬಲನಾದ ಸುಗ್ರೀವನನ್ನೇ ಏಕೆ ಹಿಡಿಯಬೇಕಾಗಿತ್ತು? ಇದಕ್ಕೆ ಪ್ರತ್ಯುತರ ವಾದ ಮೂರು ಸಂಗತಿಗಳು ರಾಮನು ಮನಸಿನಲ್ಲಿದ್ದಿರಬೇಕು:

೧) ವಾಲಿ ಸಮರ್ಥನೇನೋ ಹಾದು. ಸೀತೆಯನ್ನು ಹುಡುಕಿ ತರುವ ಶಕ್ತಿ ಅವನಲ್ಲುಂಟು. ಆದರೆ ತನ್ನ ಶಕ್ತಿಯನ್ನು ಬೇರೆ ರೀತಿ ತಿರುಗಿಸುವ ಪ್ರವೃತ್ತಿಯೂ ಅವನಲ್ಲುಂಟು. ರಾವಣನು ಶಾಪಭೀತನಾಗಿ ಸೀತೆಯನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ ವಾಲಿಗೆ ಅಂಥ ಭೀತಿಯೇನೂ ಇರಲಿಲ್ಲ

೨) ವಾಲಿಯಲ್ಲಿ ಚಾಪಲ್ಯವಿದ್ದದ್ದು ರುಜುವಾತಿಗೆ ಬಂದಿತ್ತು ೩) ಎಲ್ಲಕ್ಕಿಂತ ಮುಖ್ಯವಾಗಿ, ಸುಗ್ರೀವನಿಗೆ ಆಗಲೇ ಮಾತು ಕೊಟ್ಟದ್ದಾಗಿತ್ತು ಅವರ ಸ್ನೇಹ ಅಗ್ನಿ ಸಾಕ್ಷಿಕವಾದದ್ದು(ಪುಟ೪೭) : ಮರ್ಯಾದಾ ಬಧ್ಯತಾಂ ಧ್ರುವಾ - ಸರ್ಗ ೫, ಶ್ಲೋಕ ೧೨ ಉಪಾಯವು ಗೌಣ

ಹೀಗೆ ಶ್ರೀರಾಮನುತನ್ನ ಮಾತಿನಿಂದಲೇ ತನ್ನ ನಡವಳಿಕೆಯಿಂದಲೇ ಕಟ್ಟಿಗೊಳಪಟ್ಟಿದ್ದನು. ವಾಲಿವಧೆ ಹೀಗೆ ಅನಿವಾರ್ಯ ಕರ್ತವ್ಯವಾಯಿತು.

ಇದಾದಮೇಲೆ ಉಪಾಯದ ವಿಚಾರ. ಉದ್ದೇಶವು ಮುಖ್ಯ ಪ್ರಶ್ನೆಯಾದ ಮೇಲೆ ಉಪಾಯವು ಗೌಣಪ್ರಶ್ನೆಯಾಗುತ್ತದೆ. ಉದ್ದೇಶವು ಅನಿವಾರ್ಯ ; ಉಪಾಯವು ಐಚ್ಛಿಕ. ವಾಲಿಯ ಬಲಾಬಲಗಳನ್ನು ನಿರ್ಣಯಿಸುವುದೂ ತನ್ನ ಅನುಕೂಲ ಪ್ರತಿಕೂಲಗಳನ್ನು ನಿರ್ಣಯಿಸಿಕೊಳ್ಳುವುದೂ ರಾಮನ ಕರ್ತವ್ಯ ವಾಯಿತು. ಇಲ್ಲಿಸಂಗತವಾಗತಕ್ಕದ್ದು ಬೇರೋಬ್ಬರು ಮಾಡಿಟ್ಟನಿಯಮವಲ್ಲ; ತನ್ನ ಸ್ವಂತ ವಿವೇಚನೆ, ತನ್ನ ಸ್ವಂತ ನಯಚಿಂತನೆ. ಜಯಸಿದ್ದಿಗೆ ಯಾವುದು ದಾರಿಯೋ, ಎಂಥ ಪ್ರಯತ್ನದಿಂದ ಬಲವ್ಯಯ ಕಡಿಮೆಯಾಗಿ ಲಾಭಸಂಪಾದನೆ

2006

ಹೆಚ್ಚೋ, ಎಂಥ ಉಪಾಯದಲ್ಲಿ ನಷ್ಟವಯ ಕಡಿಮೆಯೋ, ಆದಾಯಸಂಭವ ಹೆಚ್ಚೋ ಅದನ್ನು ಆಲೋಚಿಸಬೇಕಾದದ್ದುಕಾರ್ಯಮಾರ್ಗ. ವಿಚಾರ ನೀತಿ ತತ್ತ್ವದ್ದಲ್ಪ ಕಾರ್ಯನಯದ್ದು ಇದನ್ನು ಶ್ರೀರಾಮನು ಅನುಸರಿಸಿದ. ತನಗೆ ಶ್ರಮ ಕಡಿಮೆಯಾಗಬೇಕು, ಫಲ ಪೂರ್ಣವಾಗಬೇಕು. ಆಶಾಭಂಗದ ಸಂಭವ ಕಡಿಮೆಯಾಗಬೇಕು, ಉದ್ದೇಶಸಾಧನೆಯ ಸಂಭವ ಹೆಚ್ಚಾಗಬೇಕು. ಇದು ಲೋಕದಲ್ಲಿಎಲ್ಲ ಸಜ್ಜನರೂ ಸಂಭಾವಿತರೂ ಅಂಗೀಕರಿಸಿರುವ ಮಾರ್ಗ. ಇದನ್ನು ರಾಮನು ಅನುಸರಿಸಿದ.

ಆದದ್ದರಿಂದ ವಾಲಿವಧಪ್ರಕರಣದಲ್ಲಿ ಹೆಚ್ಚಿನ ತತ್ತ್ವಪ್ರಸತ್ಕಿಯೇನೂ ಇಲ್ಲ ದೈವಾಂಶ ಪುರುಷನು ಸಾಮಾನ್ಯಪುರುಷನಂತೆ ನಡೆಯಬಹುದೆ 9) - ಎಂಬುದು ಒಂದು ಅತಿವಾದಿ ಪಕ್ಷದ ಪ್ರಶ್ನೆ ನಮ್ಮ ಉತ್ತರ ಅವನು ಹಾಗೆ ನಡೆಯಬಹುದು ಮಾತ್ರವಲ್ಲ ನಡೆಯಬೇಕು - ಎಂದು. ಶ್ರೀರಾಮನು ಸಾಮಾನ್ಯಪುರುಷ ನಂತೆಯೇ ಹಸಿದ; ಅವರಂತೆಯೇ ಊಟಮಾಡಿದ; ಅವರಂತೆಯೇ ನಕ್ಕ; ಅವ ರಂತೆಯೇ ಅತ್ವ ಸಾಮಾನ್ಯ ಮನುಷ್ಯನು ತನ್ನ ಪ್ರಿಯೆಗಾಗಿ ಹಾತೊರೆಯುವಂತೆ ಅವನೂ ಹಾತೊರೆದ. ಅವನು ನೂರರಲ್ಲಿ ತೊಂಬತೊಂಬತ್ತು ಕಡೆ ಸಾಮಾನ್ಯದಂತೆ ನಡೆದದ್ದರಿಂದಲ್ಲೇ ಅವನನ್ನು ಮಿಕ್ಕ ಒಂದು ವಿಷಯದಲ್ಲಿ ಅವನು ತಮಗಿಂತ ಉತ್ಕೃಷ್ಟನೆಂದು ಕಂಡುಕೊಂಡು ಅವನನ್ನು ಅನುಕರಣೀಯ ನೆಂದು ಅಂಗೀಕರಿಸಿದರು. ಅವನು ಮನುಷ್ಯತ್ವದಿಂದ ದೈವತ್ವಕ್ಕೆ ಹತ್ತಿದವನು. ಅನ್ಫತಾತ್ರತ್ರಮುಪೈಮಿ ಮಾನುಷಾದ್ದ್ವೈವ್ಯಮುಪೈಮಿ - ತೈತ್ತಿರೀಯ ಬ್ರಾಹ್ಮಣ

ಸೀತಾರಾಮ ವೃತ್ತಾಂತದ ಕ್ಷೀರಪಾನದ ನಡುವೆ ವಾನರ ಪ್ರಕರಣವು ದ್ರಾಕ್ಷಿಯ ಕಾಳಿನಂತೆ - ಹುಳ್ಳಹುಳ್ಳಗೆ ಆದರೂ ಮಧುರದೊಡನೆ ಬೆರೆತು ಕೊಳ್ಳುವ ಹುಳಿಯಾಗಿಯೂ ಮುಖ್ಯರಸದ ಮಧುರವನ್ನು ಪ್ರಗುಣಿತಪಡಿಸಿ ತೋರಿಸುವುದಾಗಿಯೂ ಯಶಸ್ವಿಯಾಗಿದೆ.

oi ಎರಡು ಅನುಕರಣೀಯ ಗುಣಗಳು

ಕಿಪ್ಟಿಂಧಾಕಾಂಡದಲ್ಲಿ ಮನೋಹರಗಳಾದ ಪ್ರಕರಣಗಳು ಹತಾರಿವೆ. ಒಂದು ಪ್ರಕರಣವನ್ನುಕುರಿತು ಒಂದು ಮಾತನ್ನುವಿಶೇಷವಾಗಿ ಹೇಳಬಯಸುತೇನೆ. ಅದು ರಾಮ- ಹನುಮಂತರ ಪ್ರಥಮ ಪರಿಚಯ ಕಥೆ. ಆಂಜನೇಯ ಸ್ವಾಮಿಯು ಮಾತನಾಡಿದ ರೀತಿಯನ್ನು ಶ್ರೀರಾಮನು ಪ್ರಶಂಸೆ ಮಾಡಿರುವುದಲ್ಲಿ ಎರಡು ಅಂಶಗಳು ನಮ್ಮ ದೃಷ್ಟಿಯಲ್ಲಿರಬೇಕಾದದ್ದು

ಮೊದಲನೆಯದು ಆಂಜನೇಯನ ವಾಕ್ಕರೀತಿಯ ಔಚಿತ್ಯ (ಪುಟ೩೬):

ಅವಿಸರಮಸಂದಿಗ್ನಂ ಅವಿಲಂಬಿತಮುದ್ರುತಮ್‌ - ಸರ್ಗ ೩, ಶ್ಲೋಕ ೩೧

ವಿಷಯವನ್ನು ಬೆಳಸಿಲ್ವ ಆದರೆ ಸಂಶಯಕ್ಕೆ ಅವಕಾಶ ಬಿಟ್ಟಿಲ್ಲ ಮಾತುಗಳ ಉಚ್ಚಾರಣೆ ಬಹು ಸಾವಕಾಶವಲ್ಲ ಬಹು ವೇಗವೂ ಅಲ್ಲ

ಇದನ್ನುನಮ್ಮ ಜನ ಗಮನವಿಟ್ಟುನೋಡಬೇಕಾದದ್ದು ನಮ್ಮಲ್ಲಿಕನ್ನಡದಲ್ಲಿ ಮಾತನಾಡುವವರು ಸಾಮಾನ್ಯವಾಗಿ ಮಾತಿನ ಕಡೆಯ ಅಕ್ಷರವನ್ನು, ಅದರಲ್ಲಿಯೂ ಕ್ರಿಯಾಪದದ ಕಡೆಯ ಅಕ್ಷರವನ್ನು, ನುಂಗಿಬಿಡುತ್ತಾರೆ.

ಪ್ರಶ್ನೆ: ಶಾಲೆಗೆ ಹೋಗಿದ್ದೆಯೊ 9

"ದ್ದೆ'' ಎಂಬುದು ಹೊರಡುವುದೇ ಇಲ್ಲ

ಒಂದೊಂದು ಅಕ್ಷರಕ್ಕೂ ಸಲ್ಲಬೇಕಾದ ಬೆಲೆಯುಂಟು ಆಂಜನೇಯ ಸ್ವಾಮಿ ಹಾಗೆ ಒಂದೊಂದು ಅಕ್ಷರಕ್ಕೂ ಅದಕ್ಕೆ ತಕ್ಕ ಬೆಲೆ ಸಲ್ಲಿಸಿದನಂತೆ ಅಕ್ಷರಲೋಪ ಸ್ವರಲೋಪಗಳಿರಲಿಲ್ಲ

ಇದು ರಾಮನಿಗೆ ಮೆಚ್ಚಿಕೆಯಾದ ಮೊದಲನೆಯ ಗುಣ.

ಎರಡನೆಯ ಗುಣ ಆಂಜನೇಯನ ವಿನಯಪೂರ್ವಕವಾದ ನಯ (ಪುಟ ೩೬) : ಏವಂ ಗುಣಗಣೈರ್ಯುಕ್ತಾ ಯಸ್ಕ ಸ್ಯುಃ ಕಾರ್ಯಸಾಧಾಕಾಃ ತಸ್ಯ ಸಿಧ್ಯಂತಿ ಸರ್ವಾರ್ಥಾಃ ದೂತವಾಕ್ಕಪ್ರಚೋದಿತಾಃ - ಸರ್ಗ ೩, ಶ್ಲೋಕ ೩೫

ಇಂಡಿಯ ದೇಶದ ಪರವಾಗಿ ಹೊರದೇಶಗಳಿಗೆ ರಾಯಭಾರಿಗಳನ್ನು ನಿಯಮಿಸಿ ಕಳುಹಿಸುವ ಅಧಿಕಾರಸ್ಥರು ಪ್ರಕರಣವನ್ನು ನಾಲ್ಕಾರು ಬಾರಿ ಮನನ ಮಾಡಿದರೆ ಒಳ್ಳೆಯದೆನ್ನಿಸುತದೆ.

ಆಂಜನೇಯನು ಉಪಾಯಜ್ಞ. ಭಿಕ್ಷುವೇಷವನ್ನು ಧರಿಸಿ ಕಾಣಿಸಿಕೊಂಡ. ಕಾರ್ಯಸಿದ್ದಿಯಾದ ಬಲಿಕ ಭಿಕ್ಷುರೂಪವನ್ನು ಬಿಟ್ಟು ಮತ್ತೆ ವಾನರನಾದ. ವೀರ ಸತ್ಯವಾದಿಗಳು ಸಂಗತಿಯನ್ನು ಮನನ ಮಾಡಬೇಕು. ಸತ್ಯವನ್ನು ಬಿಡಬಾರದು. ಆದರೆ ಸತ್ಯವೆಂಬ ಹೆಸರಿನಿಂದ ಕಾರ್ಯೋಪಾಯವನ್ನು ಮರೆಯಬಾರದು. ಸತ್ಯಕ್ಕೆ ವಿರೋಧವಲ್ಲದ ಉಪಾಯಕ್ಕೆ ಧಾರ್ಮಿಕ ಜೀವನದಲ್ಲಿ ಒಂದು ಸ್ಥಾನ ಅವಶ್ಯವಾಗುಂಟು. ಸತ್ಯ ಸಹಕಾರಿಯಾದ ಉಪಾಯವನ್ನುಇಂಗ್ಲಿಷಿನಲ್ಲಿ' ಟ್ಯಾಕ್ಸ್‌ (Tact) ಎಂದು ಕರೆಯುತಾರೆ. ನಯೋಪಾಯ ವಿವೇಕವಿಲ್ಲದಿದ್ದರೆ ವ್ಯವಹಾರದಲ್ಲಿಸತ್ಯಭಾವನೆ ದುರ್ಲಭವಾದೀತು.

ಇದು ಕಿಪ್ಟಿಂಧಾಕಾಂಡದಲ್ಲಿ ಬಹು ಸುಂದರವಾದ ಪ್ರಕರಣ. * ಜೇ x

ಎದ್ದಾನ್‌ ಶ್ರೀ ಎನ್‌. ರಂಗನಾಥಶರ್ಮಾರವರು ಮಾಡಿರುವ ಕನ್ನಡ ಅನುವಾದವನ್ನು ನಾನು ಅಲ್ಲಲ್ಲಿ ಓದಿಸಿ ಕೇಳಿ ಆನಂದಿತನಾಗಿದ್ದೇನೆ. ಅವರು ನಾಲ್ಕಾರು ವ್ಯಾಖ್ಯಾನಗಳನ್ನು ಪರಿಶೀಲನೆಮಾಡಿ ಅರ್ಥನಿಷ್ಟರ್ಷೆ ಮಾಡಿದ್ದಾರೆ. ಅಂಥ ಸಂದರ್ಭಗಳಲ್ಲಿ ಒಂದೆರಡನ್ನು ಕುರಿತು ನಾವಿಬ್ಬರೂ ಅಭಿಪ್ರಾಯವಿನಿಮಯ

XXIV

ಮಾಡಿಕೊಂಡಿದ್ದೇವೆ. ನಾನು ವ್ಯಾಖ್ಯಾನಕಾರರಿಗೆ ಶರಣುಹೋಗುವವನಲ್ಲ ಹೀಗೆ ನಾನು ವಿಜ್ಞಾಪನೆ ಮಾಡಿದ್ದನ್ನು ಶರ್ಮಾರವರು ಔದ್ದತ್ಯವೆಂದು ಭಾವಿಸಲಿಲ್ಲ ಅದು ನನ್ನ ಸುಯೋಗ. ಶರ್ಮಾರವರು ಸ್ವತಂತ್ರ ವಿಮರ್ಶಕರು ; ಅನುವಾದದ ಕಾರ್ಯದಲ್ಲಿ ಶಬ್ದಕಿಂತ ಅರ್ಥಪುಷ್ಟಿ ರಸಪುಷ್ಟಿ ಹೆಚ್ಚಿನದೆಂದು ನಂಬಿದವರು. ಆದದ್ದರಿಂದ ಅವರ ಅನುವಾದವು ಸರ್ವರಿಗೂ ಉಪಾದೇಯವಾಗಿದೆ. ಇಂಥ ಒಳ್ಳೆಯ ಕನ್ನಡ ವಚನ ಸಾಹಿತ್ಯವನ್ನು ಅವರು ನಮ್ಮ ವಾಚಕರಿಗೆ ಒದಗಿಸಿ ಕೊಟ್ಟಿರುವುದಕ್ಕಾಗಿ ಅವರನ್ನುನಾನು ಅಭಿನಂದಿಸುತ್ತೇನೆ.

ಶ್ರೀಮಾನ್‌ ಡಿ.ಸಿ. ಅನಂತರಾಮಯ್ಯನವರೂ ಅವರ ಸ್ನೇಹಿತರೂ ಪವಿತ್ರವೂ ಮಂಗಳಕರವೂ ಆದ ಕಾರ್ಯದಲ್ಲಿ ಉತ್ಸಾಹಗುಂದದೆ. ಪೂರ್ಣ ಶ್ರದ್ಧೆಯಿಂದ ದುಡಿದಿದ್ದಾರೆ. ಅವರು ಪಟ್ಟಿರುವ ಶ್ರಮವು "ಮಹಾಜನರ ಕೃಪೆಯಿಂದ ಸಾರ್ಥಕ ವಾದೀತೆಂದು ನಾನು ನಂಬಿಕೊಂಡಿದ್ದೇನೆ.

ಯುದ್ಧಕಾಂಡದ ಅನುವಾದವೂ ಅನಂತರ ಉತ್ತರಕಾಂಡದ ಅನುವಾದವೂ ಶ್ರೀರಾಮಚಂದ್ರಪ್ರಭುವಿನ ಕೃಪೆಯಿಂದ ಬೇಗನೆ ವಾಚಕರಿಗೆ ದೊರೆಯುವಂತಾಗಲಿ ಎಂದು ಹಾರೈಸುತ್ತೇನೆ.

ಹನುಮತ್ತಮವೇತಾಯ ಹರೀಶಾಭೀಷ್ಠದಾಯಿನೇ

ವಾಲಿಪ್ರಮಥನಾಯಾಸ್ತು ಮಹಾಧೀರಾಯ ಮಂಗಲಮ್‌

(ಪಾರಾಯಣ ಶ್ಲೋಕ)

ಡಿ.ವಿ.ಜಿ.

ಸರ್ಗ

೧೨

೧೩

XXV

ಅನುಕ್ರಮಣಿಕೆ

ವಿಷಯ ಪುಟ ರಾಮವಿಪ್ರಲಂಭಾವೇಶಃ (ಪಂಪಾಸರೋವರದ ವರ್ಣನೆ ; ಶ್ರೀರಾಮನ ಎರಹ ದುಃಖ) ಸುಗ್ರೀವಮಂತ್ರಃ (ಸುಗ್ರೀವನು ಸಚಿವರೊಡನೆ ಆಲೋಚಿಸಿ ಚನಮತತನ್ನು. ಶ್ರೀರಾಮಲಕ್ಷ್ಮಣರಿದ್ದೆಡೆಗೆ ಕಳಿಸುವುದು) ವಿ೫ ಹನೂಮತ್ಟೇಷಣಮ್‌ (ಹನುಮಂತನು ಶ್ರೀರಾಮಲಕ್ಷ್ಮಣರ ಬಳಿಗೆ ಬಂದು ಸಂಭಾಷಿಸುವುದು) ೩೦ ಸುಗ್ರೀವ ಸಮೀಪಗಮನಮ್‌ (ಹನುಮಂತನು ಶ್ರೀರಾಮಲಕ್ಷ್ಮಣರೊಡನೆ ಸುಗ್ರೀವನ ಸಮೀಪಕ್ಕೆ ಹೋಗುವುದು) ೩೮ ಸುಗ್ರೀವಸಖ್ಯಮ್‌ (ಶ್ರೀರಾಮನು ಸುಗ್ರೀವನೊಡನೆ ಅಗ್ನಿ ಸಾಕ್ಷಿಕವಾಗಿ ಸ್ನೇಹವನ್ನು ಬೆಳೆಸುವುದು) .. ೪೫ ಭೂಷಣಪ್ರತ್ಯಭಿಜ್ಞಾನಮ್‌ (ಸೀತೆಯ ಆಭರಣಗಳನ್ನು ನೋಡಿ ಶ್ರೀರಾಮನ ದುಃಖ) .. ೫೧ ರಾಮಸಮಾಶ್ವಾಸನಮ್‌ (ಸುಗ್ರೀವನು ಶ್ರೀರಾಮನನ್ನು ಸಂತೈಸುವುದು) .. ೫೬ ವಾಲಿವಧಪ್ರತಿಜ್ಞಾ (ವಾಲಿಯನ್ನು ವಧಿಸುವೆನೆಂದು ಶ್ರೀರಾಮನ ಪ್ರತಿಜ್ಞೆ ... ೬೦ ವೈರವೃತ್ತಾಂತಾನುಕ್ರಮಃ (ಸುಗ್ರೀವನು ವಾಲಿಯ ವೈರಕ್ಕೆ ಕಾರಣವನ್ನು ಹೇಳುವುದು ; ಮಾಯಾವಿಯ ವೃತ್ತಾಂತ) ೬೯ ರಾಜ್ಯನಿರ್ವಾಸಕಥನಮ್‌ (ವಾಲಿಯು ತನ್ನನ್ನು ರಾಜ್ಯದ ಹೊರಗೆ ಪಾ ಸುಗ್ರೀವನ ಹೇಳಿಕೆ) i

ವಾಲಿಬಲಾವಿಷ್ಯರಣಮ್‌ (ಸುಗ್ರೀವನು ವಾಲಿಯ ಪರಾಕ್ರಮವನ್ನು

ವರ್ಣಿಸುವುದು ; ಶ್ರೀರಾಮನು ದುಂದುಭಿಯ ಅಸ್ಥಿಪಂಜರವನ್ನು

ಚಿಮ್ಮುವುದು) « ೮೦ ಸುಗ್ರೀವಪ್ರತ್ಯಯದಾನಮ್‌ (ಶ್ರೀರಾಮನು ಸಪುಸಾಲಗಳನ್ನು ಭೇದಿಸಿ

ಸುಗ್ರೀವನಿಗೆ ನಂಬಿಕೆಯನ್ನುಂಟುಮಾಡುವುದು ; ವಾಲಿಸುಗ್ರೀವರ ಯುದ್ಭು ... ೯೭ ಸಪ್ತಜನಾಶ್ರಮಪ್ರಣಾಮಃ (ಶ್ರೀರಾಮನು ಕಿಷ್ಠಿಂಧೆಗೆ ಹೋಗುವಾಗ ಸಪ್ತಜನಾಶ್ರಮವನ್ನು ಕಂಡು ವಂದಿಸುವುದು) .. ೧೦೪

ಸರ್ಗ

೨೨

೨೩

೨೫ ೨೬

೨೯

XXVI

ವಿಷಯ

ಸುಗ್ರೀವಗರ್ಜನಮ್‌ (ವಾಲಿಯನ್ನು ಕರೆಯುವುದಕ್ಕಾಗಿ ಸುಗ್ರೀವನ ಗರ್ಜನೆ )...

ತಾರಾಹಿತೋಕ್ತಿ! (ವಾಲಿಯು ಯುದ ಹೊರಟಾಗ ತಾರೆಯ ಹಿತೋಪದೇಶ)

ವಾಲಿಸಂಹಾರಃ (ವಾಲಿಸುಗ್ರೀವರ ಯುದ್ಧ; ಶ್ರೀರಾಮನಿಂದ ಬಾಣ ಪ್ರಯೋಗೆ)

ರಾಮಾಧಿಕ್ಷೇಪಃ (ವಾಲಿಯು ಶ್ರೀರಾಮನನ್ನು ನಿಂದಿಸುವುದು) ವಾಲಿವಧಸಮರ್ಥನಮ್‌ (ಶ್ರೀರಾಮನು ವಾಲಿವಧೆಯನ್ನು ಸಮರ್ಥಿಸುವುದು ; ವಾಲಿಯ ಕ್ಷಮಾಯಾಚನೆ) ತಾರಾಗಮನಮ್‌ (ತಾರೆಯು ಬಂದು ರಣಶಯ್ಯೆಯಲ್ಲಿ ಮಲಗಿದ್ದ ವಾಲಿಯನ್ನು ನೋಡುವುದು)

ತಾರಾವಿಲಾಪಃ (ತಾರೆಯ ವಿಲಾಪ)

ಹನುಮದಾಶ್ವಾಸನಮ್‌ (ಹನುಮಂತನು ತಾರೆಗೆ ಸಮಾಧಾನ ಹೇಳುವುದು)

ವಾಲ್ಯನುಶಾಸನಮ್‌ (ವಾಲಿಯು ಮುಂದಿನ ಕರ್ತವ್ಯವನ್ನು ಸುಗ್ರೀವನಿಗೆ ತಿಳಿಸುವುದು; ವಾಲಿಯ ಮರಣ)

ಪುಟ

೧೧೦

.. ೧೧೪

« ೧೨೦ . ೧೨೮

೧೩೮

೬. ೧೫೧0 . OH

೧೬೨

1 0೬೬

ಅಂಗದಾಭಿವಾದನಮ್‌ (ನೀಲನು ವಾಲಿಯ ಎದೆಯಿಂದ ಬಾಣವನ್ನು ಕೀಳುವುದು ;

ಅಂಗದನು ತಂದೆಗೆ ಅಭಿವಾದಿಸುವುದು)

ಸುಗ್ರೀವತಾರಾಶ್ವಾಸನಮ್‌ (ಸುಗ್ರೀವ ಮತ್ತುತಾರೆಯರಿಗೆ ಶ್ರೀರಾಮನ ಹಿತೋಕಿ)

ವಾಲಿಸಂಸ್ಕಾರಃ (ಶ್ರೀರಾಮನ ಹಿತೋಪದಶ ; ವಾಲಿಯ ಸಂಸ್ಕಾರ ) ಸುಗ್ರೀವಾಭಿಷೇಕಃ (ಸುಗ್ರೀವನ ಪಟ್ಟಾಭಿಷೇಕ)

ಮಾಲ್ಯವನ್ನಿವಾಸಃ (ಪ್ರಸ್ರವಣಗಿರಿಯಲ್ಲಿ ಶ್ರೀರಾಮನ ನಿವಾಸ ; ಸೀತಾ ಸ್ಮರಣೆಯಿಂದ ದುಃಖ; ಲಕ್ಷ್ಮಣನ ಸಮಾಧಾನ )

ಪ್ರಾವೃಡುಜ್ಜ ತ್ಟಾಂಭಣಮ್‌ (ಮಳೆಗಾಲದ ಎಜೃಂಭಣೆ) ಹನುಮತೃತಿಬೋಧನಮ್‌ (ಹನುಮಂತನು ಶ್ರೀರಾಮನ ಕಾರ್ಯವನ್ನು ಸುಗ್ರೀವನಿಗೆ ಜ್ಞಾಪಿಸುವುದು)

« ೨3೫

ಸರ್ಗ

೩೯ ೪೦

೪೨

೪೫

4 ವಿಷಯ

ಶರದ್ವರ್ಣನಮ್‌ (ಶರತ್ಕಾಲದ ವರ್ಣನೆ)

ಲಕ್ಷ್ಮಣಕ್ರೋಧಃ (ಲಕ್ಷ್ಮಣನು ಕ್ರೋಧಾವಿಷ್ಠನಾಗಿ ಕಿಷ್ಠಿಂಧೆಯನ್ನು ಪ್ರವೇಶಿಸುವುದು) ಹನುಮನ್ನಂತ್ರಃ (ಸುಗ್ರೀವನಿಗೆ ಹನುಮಂತನ ಹಿತೋಪದೇಶ)

ತಾರಾಸಾಂತ್ವವಚನಮ್‌ (ತಾರೆಯು ಲಕ್ಷ್ಮಣನಿಗೆ ಸಮಾಧಾನ ಹೇಳುವುದು)...

ಸುಗ್ರೀವತರ್ಜನಮ್‌ (ಲಕ್ಷ್ಮಣನು ಸುಗ್ರೀವನನ್ನು ಗದರಿಸಿ ಎಚ್ಚರಿಕೆ ಹೇಳುವುದು)

ತಾರಾಸಮಾಧಾನಮ್‌ (ತಾರೆಯು ಲಕ್ಷ್ಮಣನಿಗೆ ಸಮಾಧಾನ ಹೇಳುವುದು) ...

ಸುಗ್ರೀವಲಕ್ಷ್ಮಣಾನುರೋಧಃ (ಸುಗ್ರೀವಲಕ್ಷ್ಮಣರು ಸ್ನೇಹ ಪೂರ್ವಕವಾಗಿ ಸಂಭಾಷಿಸುವುದು)

ಕಪಿಸೇನಾಸಮಾನಯನಮ್‌ (ಸುಗ್ರೀವನು ಸಮಸವಾನರಸೇನೆಯನ್ನು ಕರೆಸುವುದು)

ರಾಮಸಮೀಪಗಮನಮ್‌ (ಶ್ರೀರಾಮನ ಸಮೀಪಕ್ಕೆ ಸುಗ್ರೀವಲಕ್ಷ್ಮಣರ ಆಗಮನ)

ಸೇನಾನಿವೇಶಃ (ಕಪಿನಾಯಕರು ತಮ್ಮ ಸೇನೆಗಳೊಡನೆ ಬಂದು ಸರುವುದು... ಪ್ರಾಚೀಪ್ರೇಷಣಮ್‌ (ಸುಗ್ರೀವನು ಸೀತಾನ್ವೇಷಣಕ್ಕಾಗಿ ವಿನತನನ್ನು ಕಪಿಸೇನೆ ಯೊಂದಿಗೆ ಪೂರ್ವದಿಕ್ಕಿಗೆ ಕಳಿಸುವುದು)

ದಕ್ಷಿಣಾಪ್ರೇಷಣಮ್‌ (ನೀಲ, ಹನುಮಂತ ಮೊದಲಾದವರನ್ನು ದಕ್ಷಿಣ ಕ್ಷೆ ಕಳಿಸುವುದು)

ಪ್ರತೀಚೀಪ್ರೇಷಣಮ್‌ (ಸುಷೇಣಾದಿ ವಾನರರನ್ನು ಸುಗ್ರೀವನು ಪಶ್ಚಿಮ ಕೆ ಕಳಿಸುವುದು)

ಉದೀಚೀಪ್ರೇಷಣಮ್‌ (ಶತಬಲಿ ಮೊದಲಾದವರನ್ನು ಉತ್ತರ ದಿಕ್ಕಿಗೆ ಕಳಿಸುವುದು)

ಹನುಮತ್ತಂದೇಶಃ (ಸುಗ್ರೀವನಿಂದ ಹನುಮಂತನಿಗೆ ವಿಶೇಷವಾದ ಸಂದೇಶ ; ಶ್ರೀರಾಮನಿಂದ ಅಂಗುಲೀಯಕಪ್ರದಾನ)

ವಾನರಬಲಪ್ರತಿಷ್ಠು (ಕಪಿಸೇನೆಯ ಪ್ರಯಾಣಸಂಭ್ರಮ)

೩೨೨

೬. ೩೩೫

ಎ. ೩೪೪

« ೩೫೪

೩೬೬ *. ೩೭೦

ಸರ್ಗ

೫೮

೫೯

೬೦

ವಷಯ

ಭೂಮಂಡಲಭ್ರಮಣಕಥನಮ್‌ (ಭೂಮಂಡಲವನ್ನು ಸುತ್ತಿದ ಪ್ರಕಾರವನ್ನು ಸುಗ್ರೀವನು ಶ್ರೀರಾಮನಿಗೆ ಹೇಳುವುದು)

ಕಪಿಸೇನಾಪ್ರತ್ಯಾಗಮನಮ್‌ (ಕಪಿಸೈನಿಕರು ಹಿಂದಿರುಗಿ ಬರುವುದು) ಕಂಡೂವನಾದಿವಿಚಯಃ (ಹನುಮದಾದಿಗಳಿಂದ ಕಂಡೂವನಪ್ರವೇಶ ; ಅಂಗದನಿಂದ ಒಬ್ಬ ರಾಕ್ಷಸನ ಸಂಹಾರ)

ರಜತಪರ್ವತವಿಚಯಃ (ರಜತಪರ್ವತದಲ್ಲಿ ಸೀತೆಯನ್ನು RE ಖಯಕ್ಷಬಿಲವಿಚಯು (ವಾನರರು ಯಕ್ಷಬಿಲವನ್ನು ಪ್ರವೇಶಿಸಿ ಸ್ವಯಂ ಪ್ರಭೆಯನ್ನು

ಕಾಣುವುದು)

ಸ್ವಯಂಪ್ರಭಾತಿಥ್ಯಮ್‌ (ಸ್ವಯಂಪ್ರಭೆಯು ವಾನರರನ್ನು ಸತ್ಕರಿಸುವುದು) ಬಿಲಪ್ರವೇಶಕಾರಣಕಥನಮ್‌ (ಬಿಲದೊಳಗೆ ಬಂದ ಕಾರಣವನ್ನು ಹನುಮಂತನು ಸ್ವಯಂ ಪ್ರಭೆಗೆ ತಿಳಿಸುವುದು)

ಅಂಗದಾದಿನಿರ್ವೇದಃ (ಸೀತೆಯು ದೊರಕಲಿಲ್ಲವೆಂದು ಅಂಗದಾದಿಗಳ ಎಷುದ)

ಹನೂಮದ್ಬೇದನಮ್‌ (ಸುಗ್ರೀವನ ಬಳಿಗೆ ಹೋಗುವುದೇ ಯುಕವೆಂದು ಹನುಮಂತನು ಪ್ರತಿಪಾದಿಸುವುದು)

ಪ್ರಾಯೋಪವೇಶಃ (ಅಂಗದಾದಿ ವಾನರರ ಪ್ರಾಯೋಪವೇಶ) ಸಂಪಾತಿಪ್ರಶ್ನಃ (ಸಂಪಾತಿಯ ಆಗಮನ ; ವಾನರರ ದುಃಖೋದ್ದಾರ ; ಸಂಪಾತಿಯ ಪ್ರಶ್ನೆ)

ಜಟಾಯುರ್ದಿಷ್ಟ ಕಥನಮ್‌ (ವಾನರರು ಜಟಾಯುವಿನ ವೃತ್ತಾಂತವನ್ನು ತಿಳಿಸುವುದು)

ಸೀತಾಪ್ರವೃತ್ತುಪಲಂಭಃ (ಸಂಪಾತಿಯು ಸೀತಾದೇವಿಯಿರುವ ಸ್ಥಳವನ್ನು ವಾನರರಿಗೆ ತಿಳಿಸುವುದು)

ಸುಪಾರ್ಶ್ವವಚನಾನುವಾದಃ (ಸುಪಾರ್ಶ್ವನಿಂದ ಸೀತಾಹರಣದ ಸುದ್ದಿಯನ್ನು ತಿಳಿದುದಾಗಿ ಸಂಪಾತಿಯು ಹೇಳುವುದು) ಸಂಪಾತಿಪುರಾವೃತ್ತವರ್ಣನಮ್‌ (ಸಂಪಾತಿಯು ತನ್ನ ಪೂರ್ವ ಕಥೆಯನ್ನು ವಾನರರಿಗೆ ತಿಳಿಸುವುದು)

೪೨೧

೪೩೩

೪೪೦

೪೪೬

XXX ಸರ್ಗ ವಿಷಯ ಪುಟ

೬೧ ಸೂರ್ಯಾನುಗಮನಾಖ್ಯಾನಮ್‌ (ಜಟಾಯುವೂ ತಾನೂ ಸೂರ್ಯನ ಬಳಿಗೆ

ಹಾರಿದೆವೆಂದು ಸಂಪಾತಿಯು ನಿಶಾಕರಮುನಿಗೆ ಹೇಳುವುದು) .. ೪೫೦ ೬೨ ನಿಶಾಕರಭಎಷ್ಯುಖ್ಯಾನಮ್‌ (ಸಂಪಾತಿಗೆ ಪುನಃ ರೆಕ್ಕೆಗಳು ಬರುತವೆಂದು ನಿಶಾಕರಮುನಿಯು ಭವಿಷ್ಯ ಕಥನ) ೬. ೪೫೩ ೬೩ ಸಂಪಾತಿಪಕ್ಷಪ್ರರೋಹಃ (ಸಂಪಾತಿಗೆ ರೆಕ್ಕೆಗಳು ಹುಟ್ಟುವುದು) ೪೫೭ ೬೪ ಸಮುದ್ರಲಂಘನಮಂತ್ರಣಮ್‌ (ಸಾಗರವನ್ನು ಲಂಘಿಸುವ ಸಾಮರ್ಥ್ಯ ಯಾರಲ್ಲಿದೆಯೆಂದು ಅಂಗದನ ಪ್ರಶ್ನೆ) ... ೪೬೦ ೬೫ ಬಲೇಯತಾವಿಷ್ಟ್ಠರಣಮ್‌ (ವಾನರರು ತಮ್ಮ ಸಾಮರ್ಥ್ಯವನ್ನು ಹೇಳಿ ಕೊಳ್ಳುವುದು) .. ೪೬೫ ೬೬ ಹನುಮದ್ಬಲಸಂಧುಕ್ಷಣಮ್‌ (ಜಾಂಬವಂತನು ಸಮುದ್ರಲಂಘನಕ್ಕುಗಿ ಹನುಮಂತನನ್ನು ಪ್ರೇರಿಸುವುದು) ೬. ೪೭೧ ೬೭ ಲಂಘನಾವಷ್ಟಂಭಃ (ಸಮುದ್ರಲಂಘನಕ್ಕಾಗಿ ಹನುಮಂತನ ಸಿದ್ಧತೆ ) ೪೭೯ (೧) ಅನುಬಂಧ ... ೪೮೯ (೨) ಚಿತ್ರಗಳು : ಆಭರಣದರ್ಶನ ೫೪ ಸಂಪಾತಿಯ ಸಮಾಗಮ ೬. ೪೨೪

ಫ್ರೀಲಿ

ಜ.೫೬ ೫೫೯೫೫ ೬೬೬೪೬೬೬ ೬೬೬ 5 ತಿ 5 sf ke ಎಷ 38 pe F : ಕೆ B ಜಾ ? K; “ಣಿ 2 ಗ್ಗ ಎಲಿ AOR TD ಇಬ ಇಸ್‌ ಧ್ಯ K& $1 BS B& B38 (ce af le ೩2 ಗಿ pe: <a: ಇ) ೫) B ೨೦ ಡೆ ೦. 3 6; “le + ಐ“ 3 BEBE Gg + ui WB: 4 | €: HB p< 4 © FB Bu HED SB Ki ಸ್ನ ne SER: ® J ps, 8 p38 F ಣಿ pS pS: HB Ww Oo “6 1) 1 ಶೆ eu lk fg 3 173 6 Hu ಗ್ರ ಔಸಿ ಅ. HY 4 + HEL ಕೆ. 2B 4 ಗ್ರ XR % LN 4 $+ ಸಳ 4418 ೫% 8B f A HL EL ೬.

|| ಶ್ರೀಃ 11

ಶ್ರೀ ಮದ್ದಾಲ್ಬೀಕಿ ರಾಮಾಯಾಣಮ್‌ ಕಿಷ್ಠಿಂಧಾಕಾಂಡಃ ಪ್ರಥಮಃ ಸರ್ಗಃ ರಾಮವಿಪ್ರಲಂಭಾವೇಶಃ

ಸತಾಂ ಪುಷ್ಕರಿಣೀಂ ಗತ್ವಾ ಪದ್ಗೋತ್ಸಲರುಷಾಕುಲಾಮ್‌ | ರಾಮಃ ಸ್‌ಮಿತ್ರಿಸಹಿತೋ ವಿಲಲಾಪಾಕುಲೇಂದ್ರಿಯಃ

ತಸ್ಯ ದೃಷ್ಟೈವ ತಾಂ ಹರ್ಷಾದಿಂದ್ರಿಯಾಣಿ ಚಕಂಪಿರೇ ಕಾಮವಶಸಂಪನ್ನಃ ಸೌಮಿತ್ರಿಮಿದಮಬ್ರವೀತ್‌ ವಿ

ಸೌಮಿತ್ರೇ ಶೋಭತೇ ಪಂಪಾ ವೈದೂರ್ಯವಿಮಲೋದಕಾ। ಫುಲ್ಲಪದ್ಧೋತ್ಸಲವತೀ ಶೋಭಿತಾ ಎವಿಧೈದು್ರಮೈಃ &

ಕಿಷ್ಠಿಂಧಾಕಾಂಡ ಸರ್ಗ ಪಂಪಾಸರೋವರದ ವರ್ಣನೆ. ಶ್ರೀರಾಮನ ವಿರಹದುಟು. ಶ್ರೀರಾಮನು ಲಕ್ಷ್ಮಣಸಮೇತನಾಗಿ ಪಂಪಾಸರೋವರದ ಬಳಿಗೆ ಹೋದನು. ಪುಷ್ಕರಿಣಿಯಲ್ಲಿತಾವರೆ ನೈದಿಲೆಗಳು ತುಂಬಿದ್ದವು. ಮೀನುಗಳು ಸಳಸಳನೆ ಈಜಾಡುತ್ತಿದ್ದವು. ಅದನ್ನು ನೋಡಿದೊಡನೆ ಶ್ರೀರಾಮನಿಗೆ ಸೀತೆಯ ನೆನಪಾಗಿ* ರೋಮಾಂಚನವಾಯಿತು. ಮನಸ್ಸು ಕದಲಿತು. ಇಂದ್ರಿಯಗಳು ಚಂಚಲವಾದವು. ದುಃಖವು ಒತ್ತರಿಸಿತು. ಅವನು ಕಾಮಾರ್ತನಾಗಿ ಸೌಮಿತ್ರಿಯನ್ನು ಕುರಿತು ಹೀಗೆಂದನು (೧-೨) : "“ಲಕ್ಷ್ಮಣ, ವೈಡೂರ್ಯದಂತಿರುವ ತಿಳಿನೀರಿನಿಂದ ತುಂಬಿದ ಪಂಪೆ ಎಷ್ಟು ಚೆನ್ನಾಗಿದೆ |

ಶೇ ತಾವರೆ-ನೈದಿಲೆ-ಮೀನುಗಳನ್ನು ನೋಡಿ ಅವುಗಳಂತಿದ್ದ ಸೀತೆಯ ಮುಖ-ಕಣ್ಣು- ಕಟಾಕ್ಷಗಳ ಸ್ಫರಣೆಯಾಯಿತು ಎಂದು ಅಭಿಪ್ರಾಯ.

ಶ್ರ ಕಿಷ್ಕಿಂಧಾಕಾಂಡಃ [ಸರ್ಗಃ

ಸೌಮಿತ್ರೇ ಪಶ್ಯ ಪಂಪಾಯಾಃ ಕಾನನಂ ಶುಭದರ್ಶನಮ್‌

ಯತ್ರ ರಾಜಂತಿ ಶೈಲಾಭಾ ದ್ರುಮಾಃ ಸಶಿಖರಾ ಇವ ಮಾಂ ತು ಶೋಕಾಭಿಸಂತಪಮಾಧಯಃ ಪೀಡಯಂತಿ ವ್ಸ

ಭರತಸ್ಯ ದುಃಖೇನ ವೈದೇಹ್ಯಾ ಹರಣೇನ ಚ॥ ಶೋಕಾರ್ತಸ್ಕಾಪಿ ಮೇ ಪಂಪಾ ಶೋಭತೇ ಚಿತ್ರಕಾನನಾ। ವ್ಯವಕೀರ್ಣಾ ಬಹುವಿದ್ಧೆ: ಪುಷೆ ಕಃ ಶೀತೋದಕಾ ಶಿವಾ ನಲಿನೈಪರಿ ಸಂಛನ್ನಾ ಹೃತ್ಯರ್ಥಂ ಶುಭದರ್ಶನಾ। ಸರ್ಪವ್ಯಾಲಾನುಚರಿತಾ ಮೃಗದ್ದಿಜಸಮಾಕುಲಾ ||

ಅಧಿಕಂ ಪ್ರತಿಭಾತ್ಯೇತನ್ನೀಲಿಪೀತಂ ತು ಶಾದ್ವಲಮ್‌ ದ್ರುಮಾಣಾಂ ವಿವಿದ್ಧೆಃ ಪುಷ್ಪೈಃ ಪರಿಸ್ಪೋಮೈರಿವಾರ್ಪಿತಮ್‌

ತಾವರೆ ನೈದಿಲೆಗಳು ಅರಳಿ ನಿಂತಿವೆ. ತೀರದಲ್ಲಿರುವ ವಿವಿಧ ವೃಕ್ಷಗಳಿಂದ ಕೊಳವು ಮನೋಹರವಾಗಿದೆ. ಸುತ್ತಲೂ ಬೆಳೆದಿರುವ ಮನೋಜ್ಞವಾದ ಪ್ರಾ ಕಾನನವನ್ನು ನೋಡು | ಪರ್ವತಾಕಾರವಾದ ಉನ್ನತ ವೃಕ್ಷಗಳನ್ನು ನೋಡು | ಎತ್ತರದಲ್ಲಿರುವ ಕೊಂಬೆಗಳು ಶಿಖರಗಳಂತೆ ಕಾಣಿಸುತ್ತವೆ (೩-೪). ತಮೃ ಭರತನ ಕಷ್ಟವನ್ನು ನೆನೆದು ಶೋಕಸಂತಪನಾಗಿದ್ದ ನನಗೆ, ವೈದೇಹಿಯ ಅಪಹಾರದಿಂದ ಮನೋವ್ಯಥೆಗಳು ಕಾಡಿಸತೊಡಗಿದವು. ಶೋಕಾರ್ತನಾದ ನನಗೂ ಪಂಪೆಯು ಮನೋಹರವಾಗಿ ಕಾಣುವುದು! ವಿವಿಧ ಪುಷ್ಪಗಳಿಂದ ಚಿತ್ರವರ್ಣವಾದ ವನವು ತೀರದಲ್ಲಿ ಹೇಗೆ ಶೋಭಿಸುತ್ತಿದೆ ! ಕೊಳದಲ್ಲಿ ತಿಳಿಯಾದ ತಣ್ಣೀರು ತುಂಬಿದೆ (೫-೬). ಕಮಲಗಳಿಂದ ಮುಚ್ಚಿಹೋದ ಸರೋವರವು ನೋಡಲು ಎಷ್ಟು ಸುಂದರವಾಗಿದೆ ! ಇಲ್ಲಿಸರ್ಪಗಳೂ ಇತರ ಹಾವುಗಳೂ ಸಂಚರಿಸುತ್ತವೆ. (ನೀರಿಗಾಗಿ) ಮೃಗಗಳೂ ಹಕ್ಕಿಗಳೂ ಮುತ್ತಿ ಕೊಂಡಿವೆ. ಹಸಿರುಬಣ್ಣದ ಹುಲ್ಲುಗಾವಲು ಮರಗಳ ಬಗೆಬಗೆಯ ಉದುರಿದ ಹೂಗಳಿಂದ ಅಲ್ಲಲ್ಲಿ ಕಪ್ಪಾಗಿಯೂ ಹಳದಿಯಾಗಿಯೂ ಗೋಚರಿಸುತ್ತದೆ. ನೆಲದಮೇಲೆ ಚಿತ್ರವರ್ಣದ ರತ್ನಗಂಬಳಿಗಳನ್ನು ಹಾಸಿದಂತಿದೆ (೭-೮).

ಸರ್ಗಃ ೧] ರಾಮವಿಪ್ರಲಂಭಾವೇಶಃ

ಪುಷ್ಪಭಾರಸಮೃದ್ಧಾನಿ ಶಿಖರಾಣಿ ಸಮಂತತಃ

ಲತಾಭಿಃ ಪುಷಿತಾಗ್ರಾಭಿರುಪಗೂಢಾನಿ ಸರ್ವತಃ ಸುಖಾನಿಲೋ5 ಯಂ ಸ್‌ಮಿತ್ರೇ ಕಾಲಃ ಪ್ರಚುರಮನೃಥಃ ! ಗಂಧವಾನ್‌ ಸುರಭಿರ್ಮಾಸೋ ಜಾತಪುಷಫಲದ್ರುಮಃ॥ ೧೦

ಪಶ್ಯ ರೂಪಾಣಿ ಸ್‌ಮಿತ್ರೇ ವನಾನಾಂ ಪುಷಶಾಲಿನಾಮ್‌ ಸಜತಾಂ ಪುಷ್ಠವರ್ಷಾಣಿ ತೋಯಂ ತೋಯಮುಚಾಮಿವ ೧೧

ಪ್ರಸರೇಷು ರಮ್ಯೇಷು ವಿವಿಧಾಃ ಕಾನನದ್ರುಮಾಃ |

ವಾಯುವೇಗಪ್ರಚಲಿತಾಃ ಪುಷ್ಪೈರವಕಿರಂತಿ ಗಾಮ್‌ ೧೨ ಪತಿತೈೆಃ ಪತಮಾನೈಶ್ನ ಪಾದಪಸೆ ಶ್ವ ಮಾರುತಃ

ಕುಸುಮೈಃ ಪಶ್ಯ ಸೌಮಿತ್ಸೆ ಕ್ರೀಡನ್ನಿವ ಸಮಂತತಃ ೧೩ ವಿಕ್ಷಿಪನ್‌ ವಿವಿಧಾಃ ಶಾಖಾ ನಗಾನಾಂ ಕುಸುಮೋತೃಚಾ ‘1 ಮಾರುತಶ್ಚಲಿತಸ್ಥಾನೈಃ ಷಟ್ಟದೈರುನುಗೀಯತೇ | ೧೪

ವೃಕ್ಞಾಗ್ರಗಳು ಸುತ್ತಲೂ ಹೂವಿನ ಭಾರದಿಂದ ಬೀಗುತಿವೆ. ವೃಕ್ಷಗಳನ್ನು ಪುಷ್ಟಿತಲತೆಗಳು ಗಾಢವಾಗಿ ಅಪ್ಪಿಕೊಂಡಿವೆ | ಲಕ್ಷ್ಮಣ, ಇದು ಕಾಮ ಪ್ರಚೋದಕವಾದ ವಸಂತಕಾಲ. ಹಿತಕರವಾಗಿ ತಂಗಾಳಿಯು ಬೀಸುವ ಕಾಲ. ಮರಗಳಲ್ಲಿ ಹೂಗಳರಳಿ ಹಣ್ಣುಗಳು ಸೂಸುವ ಸುಗಂಧಮಯವಾದ ಕಾಲ (೯-೧೦). ಸೌಮಿತ್ರಿ, ಹೂಗಳಿಂದ ಬೀಗಿದ ವನಗಳು, ಮೋಡಗಳು ಮಳೆ ಗರೆಯುವಂತೆ, ಹೂವುಳೆಗೈಯುವುದನ್ನು ನೋಡು | ನಾನಾ ಜಾತಿಯ ಕಾನನ ವೃಕ್ಷಗಳು ಗಾಳಿಯ ವೇಗಕ್ಕೆ ತೂಗುತ್ತರಮ್ಯವಾದ ಬಂಡೆಗಳ ಮೇಲೆ ಹೂಗಳನ್ನು ಸುರಿಸುತ್ತಭೂಮಿಯನ್ನು ಮುಚ್ಚುತ್ತಿವೆ (೧೧-೧೨). ಅತ್ತನೋಡು, ಲಕ್ಷ್ಮಣ! ಬಿದ್ದಿರುವ ಹೂಗಳನ್ನೂ ಬೀಳುತ್ತಿರುವ ಹೂಗಳನ್ನೂ ಹಾರಿಸುತ್ತ ಮರದಲ್ಲಿರುವ ಹೂಗಳನ್ನೂ ಅಲ್ಲಾಡಿಸುತ್ತ ಮಾರುತನು ಆಟವಾಡುವಂತೆ ಕಾಣುವನು | ಹೂಗಳನ್ನು ಹೇರಿಕೊಂಡಿರುವ ಮರದ ಕೊಂಬೆಗಳನ್ನು ಅಲುಗಿಸುತ್ತ ಮಾರುತನು ಮುಂದೆ ಸಾಗುವನು. ದುಂಬಿಗಳು ಕುಳಿತ ಸ್ಥಳವನ್ನು ಬಿಟ್ಟು ಹಾರಿ

)*

ಕಿಷ್ಟಿಂಧಾಕಾಂಡಃ [ಸರ್ಗಃ

ಮತ್ತ ಕೋಕಿಲಸಂನಾದೈರ್ನರ್ತಯನ್ನಿವ ಪಾದಪಾನ್‌

ಶೈಲಕಂದರನಿಷ್ಟ್ರಾಂತಃ ಪ್ರಗೀತ ಇವ ಚಾನಿಲಃ॥ ೧೫ ತೇನ ವಿಕ್ಷಿಪತಾತ್ಕರ್ಥಂ ಪವನೇನ ಸಮಂತತಃ।

ಅಮೀ ಸಂಸಕಶಾಖಾಗ್ರಾ ಗ್ರಥಿತಾ ಇವ ಪಾದಪಾಃ ೧೬ ಏಷ ಸುಖಸಂಸರ್ಥೋ ವಾತಿ ಚಂದನಶೀತಲಃ। ಗಂಧಮಭ್ಯಾವಹನ್‌ ಪುಣ್ಯಂ ಶ್ರಮಾಪನಯನೋತನಿಲಃ॥ ೧೭ ಅಮೀ ಪವನವಿಕ್ಷಿಪ್ತಾವಿನದಂತೀವ ಪಾದಪಾಃ। ಷಟ್ಟದೈರನುಕೂಜದ್ದಿರ್ವನೇಷು ಮಧುಗಂಧಿಷು॥ ೧೮ ಗಿರಿಪ್ರಸ್ನೇಷು ರಮ್ಯೇಷು ಪುಷ್ಪವದ್ದಿರ್ಮನೋರಮೈಃ।

ಸಂಸಕಶಿಖರಾಃ ಶೈಲಾ ವಿರಾಜಂತೇ ಮಹಾದ್ರುಮೈೆಃ ೧೯ ಪುಷ್ಪಸಂಛನ್ನಶಿಖರಾ ಮಾರುತೋತ್ವೇಪಚಂಚಲಾಃ

ಅಮೀ ಮಧುಕರೋತಂಸಾಃ ಪ್ರಗೀತಾ ಇವ ಪಾದಪಾಃ॥ ೨೦

ಹಾಡುತ್ತ ಹಿಂದೆ ಸಾಗುವುವು | (೧೩-೧೪). ಮಾರುತನು ಮತ್ತಕೋಗಿಲೆ ಗಳಿಂದ ಕುಹೂ ಎಂದು ಕೂಗಿಸುತ್ತಮರಗಳಿಂದ ನೃತ್ಯ ಮಾಡಿಸುವಂತಿದೆ! ಗಿರಿ ಗುಹೆಗಳಿಂದ ಹೊರಟು "ತನನನ' ಎಂದು ಹಾಡಲಾರಂಭಿಸಿದಂತಿದೆ! ಗಾಳಿಯು ಬಲವಾಗಿ ಬೀಸಿದ್ದರಿಂದ ಮರದ ತುದಿಗಳನ್ನು ಒಂದಕ್ಕೊಂದು ಸೇರಿಸಿ ಹೆಣೆದಂತೆ ಕಾಣುತ್ತದೆ (೧೫-೧೬). ಸುಗಂಧವನ್ನು ಹೊತ್ತಿರುವ ಚಂದನಶೀತಲವಾದ ಮಂದಾನಿಲವು ಸುಖಕರವಾಗಿ ಬೀಸುತ್ತ ಬಳ ಲಿಕೆಯನ್ನು ನೀಗಿಸುತ್ತದೆ. ಮಕರಂದ ಗಂಧಿಯಾದ ವನಗಳಲ್ಲಿ ದುಂಬಿಗಳು ರೋಂಕರಿಸುವುದನ್ನು ಕೇಳಿದರೆ, ವಾಯುವು ತಮ್ಮನ್ನು ತಳ್ಳುತ್ತಿರುವನೆಂದು ಮರಗಳು ಕೂಗಿ ಕೊಳ್ಳುತ್ತಿವೆಯೋ ಎನ್ನಿಸುತ್ತದೆ (೧೭-೧೮). ರಮ್ಯವಾದ ಬೆಟ್ಟದ ತಪ್ಪಲುಗಳಲ್ಲಿ ಹೂಗಳಿಂದ ಮನೋರಮವಾದ ಮಹಾವೃಕ್ತಗಳು ಬೆಟ್ಟದ ಶಿಖರದವರೆಗೂ ಬೆಳೆದು ವಿರಾಜಿಸುತಿವೆ. ಪುಷ್ಪಮಾಲೆಗಳನ್ನು ಮುಡಿದು ಗಾಳಿಯಿಂದ ತೂಗುತ್ತ ಗುಂಯ್‌ ಎನ್ನುವ ದುಂಬಿಗಳಿಂದ ತುಂಬಿದ ಮರಗಳು ಹಾಡಲಾರಂಭಿಸಿದ ಸಂಗೀತಗಾರರಂತೆ ಶೋಭಿಸುತವೆ! (೧೯-೨೦).

ಸರ್ಗಃ ೧] ರಾಮವಿಪ್ರಲಂಭಾವೇಶಃ

ಸುಪುಷಿತಾಂಸ್ತು ಪಶ್ಯೇಮಾನ್‌ ಕರ್ಣಿಕಾರಾನ್‌ ಸಮಂತತಃ

ಹಾಟಕಪ್ರತಿಸಂಛನ್ನಾನ್ನರಾನ್‌ ಪೀತಾಂಬರಾನಿವ॥ ವಿ೧ ಅಯಂ ವಸಂತಃ ಸೌಮಿತ್ರೇ ನಾನಾವಿಹಗನಾದಿತಃ।

ಸೀತಯಾ ವಿಪ್ರಹೀಣಸ್ವ್ಥ ಶೋಕಸಂದೀಪನೋ ಮಮ॥ ಪಿಪಿ ಮಾಂ ಹಿ ಶೋಕಸಮಾಕ್ರಾಂತಂ ಸಂತಾಪಯತಿ ಮನ್ನಥಃ।

ಹೃಷ ಪ್ರವದಮಾನಶ್ಚಮಾಮಾಹ್ಹಯತಿ ಕೋಕಿಲ: ೨೩ ಏಷ ದಾತ್ಕೂಹಕೋ ಹೃಷ್ಟೋ ರಮ್ಮೇ ಮಾಂ ವನನಿರುರೇ। ಪ್ರಣದನ್‌ ಮನ್ಶಥಾವಿಷ್ಟಂ ಶೋಚಯಿಷ್ಯತಿ ಲಕ್ಷ್ಮಣ॥ ೨೪ ಶ್ರುತ್ತೈತಸ್ಯ ಪುರಾ ಶಬ್ದ ಮಾಶ್ರಮಸ್ಥಾ ಮಮ ಪ್ರಿಯಾ। ಮಾಮಾಹೂಯ ಪ್ರಮುದಿತಾ ಪರಮಂ ಪ್ರತ್ಯನಂದತ ಪ೫ ಏವಂ ವಿಚಿತ್ರಾಃ ಪತಗಾ ನಾನಾರಾವವಿರಾವಿಣಃ

ವ್ಯಕ್ಷಗುಲ್ಜಲತಾಃ ಪಶ್ಯ ಸಂಪತಂತಿ ಸಮಂತತಃ ವಿ೬

ಲಕ್ಷ್ಮಣ, ಇತ್ತ ನೋಡು | ಪುಷಿತಗಳಾದ ಬೆಟ್ಟದಾವರೆಯ ಗಿಡಗಳು, ಪೀತಾಂಬರವನ್ನುಟ್ಟು ಚಿನ್ನದ ಒಡವೆಗಳನ್ನು ತೊಟ್ಟಿರುವ ಜನರಂತೆ ಒಪ್ಪುತಿವೆ. ಹಕ್ಕಿಗಳ ಬಗೆಬಗೆಯ ನಾದಗಳಿಂದ ರಂಜಿಸುವ ವಸಂತವು, ಸೌಮಿತ್ರಿ, ಸೀತಾ ಹೀನನಾದ ನನ್ನ ಶೋಕವನ್ನು ದೀಪ್ರಗೊಳಿಸುತ್ತದೆ (೨೧-೨೨). ಶೋಕದಿಂದ ನೊಂದಿರುವ ನನ್ನನ್ನು ಮನ್ನಥನು ಮತ್ತೆ ಪೀಡಿಸುವನು. ಕೋಗಿಲೆಯು ಸಂತೋಷದಿಂದ ಉಬ್ಬಿ ಗರ್ವದಿಂದ ಕೂಗುತ್ತನನ್ನನ್ನು ಕರೆದು ಹಂಗಿಸುತಿದೆ | ರಮ್ಯವಾದ ಹೊಳೆಯಲ್ಲಿ ಆನಂದದಿಂದ ಕೂಗುವ ನೀರುಕೋಳಿಯು ಮದನಾವಿಷ್ಠನಾದ ನನಗೆ ಮತ್ತಷ್ಟುಶೋಕವನ್ನುತಂದೊಡ್ಡುವುದು (೨೩-೨೪). ಹಿಂದೆ ಆಶ್ರಮದಲ್ಲಿದ್ದಾಗ ಬಗೆಯ ಹಕ್ಕಿಯ ಕೂಗನ್ನು ಕೇಳಿದೊಡನೆ, ನನ್ನ ಕಾಂತೆ ನನ್ನನ್ನುಸಂತೋಷದಿಂದ ಕರೆದು ಎಷ್ಟುನಲಿಯುತ್ತಿದ್ದಳು! ಲಕ್ಷ್ಮಣ, ಬಣ್ಣ ಬಣ್ಣದ ಹಕ್ಕಿಗಳು ಬಗೆಬಗೆಯಾಗಿ ಚಿಲಿಪಿಲಿಗುಟ್ಟುತ್ತ ಮರ ಬಳ್ಳಿ ಪೊದೆಗಳಿಗೆ ಬಂದು ಎರಗುವುದನ್ನು ನೋಡಿದೆಯಾ? (೨೫-೨೬).

ಕಿಷ್ಟಿಂಧಾಕಾಂಡಃ [ಸರ್ಗಃ

ವಿಮಿಶ್ರಾ ವಿಹಗಾಃ ಪುಂಭಿರಾತ್ಮವ್ಯೂಹಾಭಿನಂದಿತಾಃ |

ಭೃಂಗರಾಜಪ್ರಮುದಿತಾಃ ಸೌಮಿತ್ರೇ ಮಧುರಸ್ಪಧಾಃ ೨೭ ಅಸ್ಕಾಃ ಕೂಲೇ ಪ್ರಮುದಿತಾಃ ಶಕುನಾಃ ಸಂಘಶಸ್ತಿಹ ದಾತ್ಕೂಹರತಿವಿಕ್ರಂದ್ಳೈೆಃ ಪುಂಸ್ಕೋಕಿಲರುತೈರಪಿ॥ ೨೮ ಸನಂತಿ ಪಾದಪಾಶ್ಚೇಮೇ ಮಮಾನಂಗಪ್ರದೀಪನಾಃ। ಅಶೋಕಸಬಕಾಂಗಾರಃ ಷಟ್ಟದಸ್ಪನನಿಃಸ್ಪನಃ॥

ಮಾಂ ಹಿ ಪಲ್ಲವತಾಮ್ರಾರ್ಚಿರ್ವಸಂತಾಗ್ದಿ! ಪ್ರಧಕ್ಷ್ಯತಿ ಹಿ ತಾಂಸೂಕ್ಷ್ಮಪಕ್ಷ್ಯಾಕ್ಷೀಂ ಸುಕೇಶೀಂ ಮೃದುಭಾಷಿಣೀಮ್‌ Il ೩೦

ಅಪಶ್ಯತೋ ಮೇ ಸ್‌ಮಿತ್ರೇ ಜೀವಿತೇತಸ್ತಿ ಪ್ರಯೋಜನಮ್‌ ಅಯಂ ಹಿ ದಯಿತಸಸ್ಯಾಃ ಕಾಲೋ ರುಚಿರಕಾನನಃ ॥। ೩೧

ಹೆಣ್ಣುಹಕ್ಕಿಗಳು ಗಂಡುಹಕ್ಕಿಗಳೊಡನೆ ನಲಿಯುವಾಗ, ಅವುಗಳ ಅನು ರೂಪದಾಂಪತ್ಯವನ್ನು ಕಂಡು ಗುಂಪಿನ ಉಳಿದ ಹಕ್ಕಿಗಳು ಅಭಿನಂದಿಸುತಿವೆ! ಸಮಯದಲ್ಲಿ ದುಂಬಿಗಳ ರೋಂಕಾರವನ್ನು ಕೇಳಿ ಮತಷ್ಟು ಉಬ್ಬಿ ಹಕ್ಕಿಗಳು ಮಧುರವಾಗಿ ಕೂಗುತಿವೆ, ನೋಡು ಲಕ್ಷ್ಮಣ! (೨೭). ಪಂಪಾತೀರದಲ್ಲಿ ಹಕ್ಕಿಗಳು ಹಿಂಡುಹಿಂಡಾಗಿ ಆನಂದದಿಂದ ನಲಿಯುತಿವೆ. ಇತ್ತನೀರ್ಗೋಳಿಗಳ ನಲ್ಲೆಯ ಚೀತ್ಕಾರ | ಅತ್ತ ಪುಂಸ್ಕೋಕಿಲಗಳ ಮಧುರಗಾನ! ಇವುಗಳೊಡನೆ ಪುಷ್ಟಿತವೃಕ್ಷಗಳು ದನಿಗೂಡಿಸಿ ನನ್ನ ವಿರಹದುಃಖವನ್ನು ಕೆರಳಿಸುತಿವೆ | (೨೮). ವತ್ಸ ವಸಂತನು ಅಗ್ನಿಯಾಗಿ ನನ್ನನ್ನು ಸುಡುವನು. ಅಶೋಕಪುಷ್ಪದ ಗೊಂಚಲುಗಳೇಕೆಂಡಗಳು. ದುಂಬಿಗಳ ರೇಂಕಾರವೇ ಇದರ ಛಟಛಟತ್ವಾರ. ಚಿಗುರೆಲೆಗಳು ಕೆಂಪನೆಯ ಜ್ವಾಲೆಗಳು. ನನ್ನ ಸೀತೆಯ ಕಣ್ಣೆವೆಗಳು ಎಷ್ಟು ನವಿರಾದವು! ತಲೆಗೂದಲು ಎಷ್ಟು ಸುಂದರವಾದವು! ಲಕ್ಷ್ಮಣ, ಮೃದುಭಾ ಹಿಣಿಯನ್ನು ಕಾಣದ ಮೇಲೆ ನಾನು ಬದುಕಿ ಪ್ರಯೋಜನವಿಲ್ಲ ಎಲ್ಲೆಲ್ಲಿಯೂ ಕೋಗಿಲೆಗಳಿಂದ ಆಕುಲವಾಗಿ, ಅರಣ್ಯಕ್ಕೆ ಸೌಂದರ್ಯವನ್ನು ತಂದುಕೊಡುವ ವಸಂತ ಕಾಲವು ನನ್ನ ದಯಿತೆಗೆ ಬಹಳ ಪ್ರಿಯವಾದುದು (೨೯-೩೧).

ಸರ್ಗಃ ೧] ರಾಮವಿಪ್ರಲಂಭಾವೇಶಃ

ಕೋಕಿಲಾಕುಲಸೀಮಾಂತೋ ದಯಿತಾಯಾ ಮಮಾನಫ।

ಮನ್ಮಥಾಯಾಸಸಂಭೂತೋ ವಸಂತಗುಣವರ್ಧಿತಃ॥ ೩೨ ಅಯಂ ಮಾಂ ಧಕ್ಷ್ಯತಿ ಕ್ಷಪ್ರಂ ಶೋಕಾಗ್ನಿರ್ನಚಿರಾದಿವ।

ಅಪಶ್ಯತಸಾಂ ದಯಿತಾಂ ಪಶ್ಯತೋ ರುಚಿರದ್ರಮಾನ್‌ ೩೩ ಮಮಾಯಮಾತ್ಮಪ್ರಭವೋ ಭೂಯಸ್ತಮುಪಯಾಸತಿ ! ಅದೃಶ್ಯಮಾನಾ ವೈದೇಹೀ ಶೋಕಂ ವರ್ಧಯತೀಹ ಮೇ ೩೪

ದಶ್ಯಮಾನೋ ವಸಂತಶ್ಚ ಸ್ನೇದಸಂಸರ್ಗದೂಷಕಃ। ಮಾಂಹಿಸಾ ಮೃಗಶಾಬಾಸ್ಟೀ ಚಿಂತಾಶೋಕಬಲಾತೃತಮ್‌ lI ೩೫

ಸಂತಾಪಯತಿ ಸೌಮಿತ್ರೇ ಕ್ರೂರಶ್ಸೆತ್ರೋವನಾನಿಲಃ |

ಅಮೀ ಮಯೂರಾಃ ಶೋಭಂತೇ ಪ್ರನತೃಂತಸ್ತತಸತಃ॥ ೩೬ ಸ್ವೈಃ ಪಕ್ಷಿ ಪವನೋದ್ಧೂತೈರ್ಗವಾಕ್ಷೆ J ಸ್ಥಾಟಿಕೈರಿವ ಶಿಖನೀಭಿಃ ಪರಿವೃತಾಸ್ತ ಏತೇ ಮದಮೂರ್ಛಿತಾಃ ೩೭

ಮದನಪೀಡೆಯಿಂದ ಜನಿಸಿ ವಸಂತನ ರಮಣೀಯತೆಯಿಂದ ಭುಗಿಲ್‌ ಎನ್ನುವ ಶೋಕಾಗ್ನಿಯು ನನ್ನನ್ನು ಬೇಗನೆ ದಹಿಸಿಬಿಡುವುದು; ವಿಳಂಬವಾಗದು. ದಯಿತೆಯನ್ನು ಕಾಣದೆ ಸುಂದರವೃಕ್ಷಗಳನ್ನು ಮಾತ್ರ ನೋಡುತ್ತಿರುವ ನನಗೆ ಕಾಮಸಂತಾಪವು ಹೆಚ್ಚುವುದು (೩೨-೩೩). ಕಣ್ಣಿಗೆ ಕಾಣಿಸದ ವೈದೇಹಿ, ಬೆವರಿನ ಸೋಂಕನ್ನೇ (ಮಲಯಾನಿಲದಿಂದ) ತೊಡೆಯುತ್ತ ಕಣ್ಣಿಗೆ ಕಾಣಿಸುವ ವಸಂತ-ಇವ ರಿಬ್ಬರು ನನ್ನ ಶೋಕವನ್ನು ಬೆಳೆಸುತ್ತಿದ್ದಾರೆ. ಚಿಂತಾ ಶೋಕಗಳಿಂದ ಬಸವಳಿದ ನನಗೆ, ಲಕ್ಷ್ಮಣ, ಚಿಗರಿಯ ಕಣ್ಣಿನ ನನ್ನ ಕಾಂತೆಯು ಸಂತಾಪವನ್ನು ತಂದಿದ್ದಾಳೆ. ವನದಲ್ಲಿ ಬೀಸುವ ವಸಂತಾನಿಲನು ಬಹಳ ಕ್ರೂರ! (೩೪-೩೫). ಅಲ್ಲಲ್ಲಿಕುಣಿಯುತ್ತಿರುವ ನವಿಲುಗಳು ಎಷ್ಟುಸುಂದರವಾಗಿ ಕಾಣುತ್ತವೆ! ಗಾಳಿಯಿಂದ ಕೆದರಿದ ಗರಿಗಳು ಸಟಿಕಮಯವಾದ ಗವಾಕ್ಷಗಳಂತೆ ರಾಜಿಸುತ್ತವೆ. ಸುತ್ತಲೂ ಹೆಣ್ಣುನವಿಲುಗಳಿಂದ ಪರಿವೃತವಾಗಿರುವ ನವಿಲುಗಳು ಮದದಿಂದ ಮೈ ಮರೆತಿವೆ (೩೬-೩೭).

2%

ಕಿಷ್ಟಿಂಧಾಕಾಂಡಃ [ಸರ್ಗಃ ಮನ್ನಥಾಭಿಪರೀತಸ್ಯ ಮಮ ಮನ್ನಥವರ್ಧನಾಃ ಪಶ್ಯ ಲಕ್ಷ್ಮಣ ನತ್ಯಂತಂ ಮಯೂರಮುಪನೈತೃತಿ॥ ೩೮

ಶಿಖಿನೀ ಮನ್ಮಥಾರ್ತೈಷಾ ಭರ್ತಾರಂ ಗಿರಿಸಾನುಷು ತಾಮೇವ ಮನಸಾ ರಾಮಾಂ ಮಯೂರೋತಪ್ಯುಪಧಾವತಿ 1 ೩೯

ವಿತತ್ಯ ರುಚಿರೌ ಪಕ್ಷೌ ರುತೈರುಪಹಸನ್ನಿವ |

ಮಯೂರಸ್ಕ ವನೇ ನೂನಂ ರಕ್ಷಸಾನ ಹೃತಾಪ್ರಿಯಾ॥ ೪೦ ತಸ್ಥಾನ್ನ ಶೃತಿ ರಮ್ಯೇಷು ವನೇಷು ಸಹ ಕಾಂತಯಾ॥।

ಮಮ ತ್ವಯಂ ವಿನಾ ವಾಸಃ ಪುಷಮಾಸೇ ಸುದುಃಸಹಃ ೪೧

ಪಶ್ಯ ಲಕ್ಷ್ಮಣ ಸಂರಾಗಂ ತಿರ್ಯಗ್ಯೋನಿಗತೇಷ್ಟಸಿ

ಯದೇಷಾ ಶಿಖನೀ ಕಾಮಾದೃರ್ತಾರಮಭಿವರ್ತತೇ || ೪೨

ಮಮಾಪ್ಯೇವಂ ವಿಶಾಲಾಕ್ಷೀ ಜಾನಕೀ ಜಾತಸಂಭ್ರಮಾ।

ಮದನೇನಾಭಿವರ್ತೆೇತ ಯದಿ ನಾಪಹೃತಾ ಭವೇತ್‌ ೪೩

ಕಾಮಸಂತಪನಾದ ನನ್ನವಿರಹದುಃಖವನ್ನು ವರ್ಧಿಸುತ್ತಿವೆ. ಲಕ್ಷ್ಮಣ, ಇಲ್ಲಿ ನೋಡು |! 'ಬೆಟ್ಟದ ತಪ್ಪಲಿನಲ್ಲಿ ನರ್ತಿಸುವ ಮಯೂರವನ್ನು ಕಂಡು ಕಾಮಾರ್ತಳಾದ ಮಯೂರಿಯು ತನ್ನ ಪತಿಯಂತೆ ತಾನೂ ನೃತ್ಯವಾಡುತಿದೆ ಮಯೂರವು ತನ್ನ ಕಾಂತೆಯ ಭಾವವನ್ನರಿತು kad ರೆಕ್ಕೆ ಗಳನ್ನು ಕೆದರಿಕೊಂಡು ಕೇಕೆಹಾಕುತ್ತ ಮಯೂರಿಯ ಬಳಿಗೆ ಓಡುತಿದೆ. ಜೀ ಕೇಕಾ. ಧ್ವನಿಯಿಂದ ನನ್ನನ್ನು ಅಣಕಿಸುವಂತೆ ಕಾಣುತದೆ | ಆಹಾ! ಮಯೂರದ ಕಾಂತೆಯನ್ನು ರಾಕ್ಷಸನು ಅಪಹರಿಸಿಲ್ಲ! (೩೮-೪೦). ಆದ್ದರಿಂದ ವನಪ್ರದೇಶದಲ್ಲಿ ಕಾಂತೆಯೊಡನೆ ಕುಣಿಯುತ್ತಿದೆ. ನನಗಾದರೋ ಪು ಮಾಸದಲ್ಲಿ ) ಸೀತೆಯಿಲ್ಲದಿರುವುದು ದುಸ ಹವಾಗಿದೆ. ಲಕ್ಷ್ಮಣ, ತಿರ್ಯಗ್ಗಂತು ಗಳಲ್ಲಿಯೂ ಎಷ್ಟು ಅನುರಾಗವಿರುವುದು, ನೋಡು. ಹೆಣ್ಣುನವಿಲು ಕಾಮವಶವಾಗಿ ತನ್ನ ಪತಿಯ ಬಳಿಗೆ ಹೋಗುತ್ತಿದೆ (೪೧-೪೨). ಜಾನಕಿಯನ್ನು ರಾಕ್ಷಸನು ಅಪಹರಿಸದಿದ್ದರೆ, ಸಮಯದಲ್ಲಿ ಸಂಭ್ರಮದಿಂದ ಅವಳು

ಸರ್ಗಃ ೧] ರಾಮವಿಪ್ರಲಂಭಾವೇಶಃ

ಪಶ್ಯ ಲಕ್ಷ್ಮಣ ಪುಷ್ಪಾಣಿ ನಿಷ್ಠಲಾನಿ ಭವಂತಿ ಮೇ।

ಪುಷ್ಪಭಾರಸಮೃದ್ಧಾನಾಂ ವನಾನಾಂ ಶಿಶಿರಾತ್ಮಯೇ ೪೪ ರುಚಿರಾಣ್ಯಪಿ ಪುಷ್ಪಾಣಿ ಪಾದಪಾನಾಮತಿಶ್ರಿಯಾ

ನಿಷ್ಠಲಾನಿ ಮಹೀಂ ಯಾಂತಿ ಸಮಂ ಮಧುಕರೋತ್ತಕರೈಃ | ೪೫ ನದಂತಿ ಕಾಮಂ ಮುದಿತಾಃ ಶಕುನಾಃ ಸಂಘಶಃ ಕಲಮ್‌

ಆಹ್ಹಯಂತ ಅವಾನ್ಕೋನ್ಯಂ ಕಾಮೋನ್ಮಾದಕರಾ ಮಮ ೪೬ ವಸಂತೋ ಯದಿ ತತ್ರಾಪಿ ಯತ್ರ ಮೇ ವಸತಿ ಪ್ರಿಯಾ

ನೂನಂ ಪರವಶಾ ಸೀತಾ ಸಾಪಿ ಶೋಚತೃಹಂ ಯಥಾ ೪೭ ನೂನಂ ತು ವಸಂತೋತsಯಂ ದೇಶಂ ಸ್ಪೃಶತಿ ಯತ್ರಸಾ।

ಕಥಂ ಹ್ಯಸಿತಪದ್ದಾಕ್ಷೀ ವರ್ತಯೇತ್‌ ಸಾ ಮಯಾ ವಿನಾ ೪೮ ಅಥವಾ ವರ್ತತೇ ತತ್ರ ವಸಂತೋ ಯತ್ರ ಮೇ ಪ್ರಿಯಾ।

ಕಿಂ ಕರಿಷ್ಯತಿ ಸುಶ್ರೋಣೀ ಸಾ ತು ನಿರ್ಭರ್ತಿತಾ ಪರೈಃ॥ ೪೯ ಶ್ಯಾಮಾ ಪದ್ಧಪಲಾಶಾಕ್ಷೀ ಮೃದುಪೂರ್ವಾಭಿಭಾಷಿಣೀ |

ನೂನಂ ವಸಂತಮಾಸಾದ್ಯ ಪರಿತ್ಯಕ್ಷ್ಯತಿ ಜೀವಿತಮ್‌ ೫೦

ಕಣ್ಣರಳಿಸಿಕೊಂಡು ನನ್ನ ಬಳಿಗೂ ಬರುತ್ತಿದ್ದಳು ಲಕ್ಷ್ಮಣ, ಪುಷ್ಪಭಾರದಿಂದ ಬಳುಕುವ ವನದ ಹೂಗಳೆಲ್ಲವೂ ವಸಂತಕಾಲದಲ್ಲಿನನ್ನಪಾಲಿಗೆ ನಿಷ್ಠಲವಾಗಿವೆ (೪೩-೪೪). ಮರಗಳ ಸೊಬಗಿನಿಂದ ಮನೋಹರವಾದ ಹೂಗಳು ವ್ಯರ್ಥವಾಗಿ ದುಂಬಿಗಳ ಹಿಂಡಿನೊಡನೆ ನೆಲದಮೇಲುದುರುವುವು. ಹಕ್ಕಿಗಳು Fa ಗುಂಪಾಗಿ ನಲಿಯುತ್ತ ಒಂದನ್ನೊಂದು ಕರೆಯುವಂತೆ ಇಂಪಾಗಿ ಕೂಗುತ್ತವೆ. ಇವೆಲ್ಲವೂ ನನಗೆ ಕಮೋನ್ಸಾದವನ್ನುಂಟುಮಾಡುತ್ತಿವೆ (೪೫-೪೬). ನನ್ನ ಇನಿಯಳು ಇರುವಲ್ಲಿಯೂ, ಲಕ್ಷ್ಮಣ, ವಸಂತನ ದಾಳಿಯು ನಡೆದಿದ್ದರೆ.

ಸೀತೆಯೂ ಪರವಶಳಾಗಿ ನನ್ನಂತೆಯೇ ದುಃಖಪಡುವಳು. ಅಥವಾ ನನ್ನ ಇನಿಯಳು ಇರುವ ಸ್ಥಳದಲ್ಲಿ ವಸಂತನ ಸೋಂಕು ಇರಲಾರದು. ಇದ್ದರೆ,

ನೀಲೋತ್ಪರಲಾಕ್ಷಿಯು ನಾನಿಲ್ಲದೆ ಹೇಗೆ ತಾನೆ ಬದುಕಿಯಾಳು 9 (೪೭-೪೮). ಒಂದುವೇಳೆ ನನ್ನ ಪ್ರಿಯಳಿದ್ದಲ್ಲಿ ವಸಂತಕಾಲವು ಬಂದಿರಬಹುದು. ಆದರೂ

೧೦ ಕಿಷ್ಕಿಂಧಾಕಾಂಡಃ [ಸರ್ಗಃ

ದೃಢಂ ಹಿ ಹೃದಯೇ ಬುದ್ಧಿರ್ಮಮ ಸಂಪ್ರತಿ ವರ್ತತೇ

ನಾಲಂ ವರ್ತಯಿತುಂ ಸೀತಾ ಸಾಧ್ದೀ ಮದ್ದಿರಹಂ ಗತಾ ೫೧ ಮಯಿ ಭಾವೋ ಹಿ ವೈದೇಹ್ಯಾಸತ್ತತೋ ವನಿವೇಶಿತಃ |

ಮಮಾಪಿ ಭಾವಃ ಸೀತಾಯಾಂ ಸರ್ವಥಾ ವಿನಿವೇಶಿತಃ ೫೨ ಏಷ ಪುಷ್ಪವಹೋ ವಾಯುಃ ಸುಖಸ್ಪರ್ಶೋ ಹಿಮಾವಹಃ।

ತಾಂ ವಿಚಿಂತಯತಃ ಕಾಂತಾಂ ಪಾವಕಪ್ರತಿಮೋ ಮಮ ೫೩

ಸದಾ ಸುಖಮಹಂ ಮನ್ಯೇ ಯಂ ಪುರಾ ಸಹ ಸೀತಯಾ। ಮಾರುತಃ ವಿನಾ ಸೀತಾಂ ಶೋಕಂ ವರ್ಧಯತೇ ಮಮ ೫೪

ತಾಂ ವಿನಾ ವಿಹಂಗೋಪಸ್‌ ಪಕ್ಷೀ ಪ್ರಣದಿತಸದಾ

ವಾಯಸಃ ಪಾದಪಗತಃ ಪ್ರಹೃಷಮಭಿನರ್ದತಿ 1 ೫೫ ಏಷ ವ್ಯ ತತ್ರ ವೈದೇಹ್ಯಾ ವಿಹಗಃ ಪ್ರತಿಹಾರಕಃ ಪಕ್ಷೀ ರಾಂ ವಿಶಾಲಾಕ್ಷಾ , ಸಮೀಪಮುಪನೇಷ್ಠತಿ Il ೫೬

ಶತ್ರುಗಳ ಹಂಗಿನಲ್ಲಿರುವ ಸುಂದರಿಯು ಏನು ಮಾಡಿಯಾಳು? ಪದ್ಧದಳಾಯ ತಾಕ್ಷಿಯೂ ಮೃದುಭಾಷಿಣಿಯೂ ಆದ ತರುಣಿಯು ಪ್ರಾಣವನ್ನು ಬಿಡುವುದೇ ನಿಶ್ಚಯ (೪೯-೫೦). ನನ್ನ ಮನಸ್ಸಿಗೆ ದೃಢವಾದ ನಂಬುಗೆಯಾಗುತ್ತಿದೆ - ಸಾಧ್ವಿಯಾದ ಸೀತೆಗೆ ನನ್ನ ವಿರಹದಲ್ಲಿ ಜೀವದಿಂದ ಉಳಿಯಲು ಶಕ್ಯವಿಲ್ಲ ವೈದೇಹಿಯ ಹೃದಯವುಸ ಸಂಪೂರ್ಣವಾಗಿ ನನ್ನಲ್ಲಿಎರಕವಾಗಿದೆ. ನನ್ನ ಹೃದಯವೂ ಸಂಪೂರ್ಣವಾಗಿ ನನ್ನಲ್ಲಿ ಎರಕವಾಗಿದೆ. ನನ್ನ ಹೃದಯವೂ ವೈದೇಹಿಯಲ್ಲಿ ಪೂರ್ತಿಯಾಗಿ ಎರಕವಾಗಿದೆ (೫೧-೫೨). 'ಹೂಗಳನ್ನು ಹಾರಿ ಸುತ್ತ ಸುಗಂಧಿಯೂ ಸುಖಸ್ಪರ್ಶನೂ ಆದ ಶೀತಲಮಾರುತನು 'ಕಾಂತೆಯನ್ನೇ ಚಿಂತಿಸುವ ನನಗೆ ಬೆಂಕಿಯಾಗಿದ್ದಾನೆ. ಹಿಂದೆ ಸೀತೆಯೊಡನಿದ್ದಾಗ ಯಾವ ಮಾರುತನು ಸದಾ ಸುಖಕರನೆಂದು ತಿಳಿದ್ದಿದ್ದೆನೋ, ಆತನೇ ಸೀತೆಯಿಲ್ಲದಾಗ ನನ್ನ

ದುಃಖವನ್ನು ಹೆಚ್ಚಿಸುತಿದ್ದಾನೆ (೫೩-೫೪). ಲಕ್ಷ್ಮಣ, ನನಗೆ ಮುಂದೊದಗುವ ಸೀತಾವಿಯೋಗವನ್ನು ಸೂಚಿಸುತ್ತ ಕಾಗೆಯು “ಆಕಾಶದಲಿ ಲ್ಲಿ ಕೆಟ್ಟಸ್ವರ ದಿಂದ ಕೂಗುತಿತ್ತು ಈಗ ಮರದಮೇಲೆ ಕುಳಿತು ಕಾಗೆಯು ಹರ್ಷದಿಂದ ಕೂಗುತಿದೆ. ಆಗ ಸಿ4ತಾವಿರಹವನ್ನು ಸೂಚಿಸಿದ ಪಕ್ಷಿ, ಈಗ ವಿಶಾಲಾಕ್ಷಿಯ ಪನಃ ಸಮಾಗಮವನ್ನು ಸೂಚಿಸುತಿದೆ (೫೫-೫೬).

ಸರ್ಗಃ ೧] ರುಮವಿಪ್ರಲಂಭಾವೇಶಃ ೧೧

ಶೃಣು ಲಕ್ಷ ಣಿ ಸಂನಾದಂ ವನೇ ಮದವಿವರ್ಧನಮ್‌!। ಪುಷ್ಟಿತಾಗ್ರೇಷು ವೃಕ್ಷೇಷು ದ್ವಿಜಾನಾಮುಪಕೂಜತಾಮ್‌ ೫೭

ವಿಕ್ಷಿಪಾಂ ಪವನೇನೈತಾಮಸ್‌ ತಿಲಕಮಂಜರೀಮ್‌ ಷಟ್ರದಃ ಸಹಸಾಭ್ಯೇತಿ ಮದೋದ್ಧೂತಾಮಿವ ಪ್ರಿಯಾಮ್‌ ೫೮

ಕಾಮಿನಾಮಯಮತ್ಕಂತಮಶೋಕಃ ಶೋಕವರ್ಧನಃ।

ಸಬಕೈಃ ಪವನೋತ್ಚಿಪೆ ಕ್ರೈಸರ್ಜ ಯನ್ನಿವ ಮಾಂ ಸ್ಥಿತಃ Il ರ್ಜ ಅಮೀ ಲಕ್ಷ Ni ದೃಶ್ಯಂತೇ ಚೂತಾಃ ಕುಸುಮಶಾಲಿನಃ। ವಿಭ್ರಮೋತ್ಲಿಕ್ಷಮನಸಃ ಸಾಂಗರಾಗಾ ನರಾ ಇವ ೬೦ ಸೌಮಿತ್ರೇ ಪಶ್ಯ ಪಂಪಾಯಾಶ್ಲಿತ್ರಾಸು ವನರಾಜಿಷು |

ಕಿಂನರಾ ನರಶಾರ್ದೂಲ ವಿಚರಂತಿ ತತಸತಃ | ೬೧ ಅಮಾನಿ ಶುಭಗಂಧೀನಿ ಪಶ್ಯ ಲಕ್ಷ A ಸರ್ವಶಃ!

ನಲಿನಾನಿ ಪ್ರಕಾಶಂತೇ ಜಲೇ ತರುಣಸೂರ್ಯವತ್‌ ೬೨

ಕೇಳಿದೆಯಾ, ಲಕ್ಷ್ಮಣ, ಹೂವರಳಿದ ಮರಗಳಲ್ಲಿ ಕುಳಿತು ಚಿಲಿಪಿಲಿ ಗುಟ್ಟುವ ಹಕ್ಕಿಗಳ ಮದವಿವರ್ಧಕವಾದ ಕೋಲಾಹಲ ಧ್ವನಿಯನ್ನು? ಗಾಳಿಯಿಂದ ಚಾಲಿತವಾದ ತಿಲಕಮಂಜರಿಯನ್ನು ದುಂಬಿಯು ಹಿಂಬಾಲಿಸಿ ಹಾರಿ ಹೋಗುವುದನ್ನು ನೋಡು | ಯೌವನಮದದಿಂದ ಓಡುವ ಪ್ರಿಯಳನ್ನು ಕಾಮಿಯು ಹಿಂಬಾಲಿಸಿ ಹೋಗಿ ಹಿಡಿಯುವಂತಿದೆ ! (೫೭-೫೮). ವೃಕ್ಷವು ಅಶೋಕವೆನಿಸಿದರೂ ವಿರಹಿಗಳಿಗೆ ಶೋಕವನ್ನೇ ವರ್ಧಿಸುವುದು. ತನ್ನ ಹೂಗೊಂಚಲುಗಳನ್ನು ಗಾಳಿಯಿಂದ ಅಲುಗಿಸುತ್ತ ನನ್ನನ್ನು ಹೆದರಿಸುತ್ತಿದೆ | ಲಕ್ಷ್ಮಣ, ಹೂವಿನ ತೆನೆಗಳಿಂದ ಮೆರೆಯುವ ಮಾವಿನ ಮರಗಳನ್ನುನೋಡು. ಅಂಗರಾಗಗಳನ್ನು ಬಳಿದುಕೊಂಡು ಗರ್ವದಿಂದ ಉಬ್ಬಿದ ಕಾಮುಕರಂತೆ ಕಾಣುತ್ತವೆ (೫೯-೬೦). ಪಂಪಾಸರೋವರದ ವಿಚಿತ್ರವಾದ ವನರಾಜಿಗಳಲ್ಲಿ ಕಿನ್ನರರು ಅಲ್ಲಲ್ಲಿ ವಿಹರಿಸುವುದನ್ನು ನೋಡು. ಇತ್ತ ನೋಡು, ಲಕ್ಷ್ಮಣ. ಸುಗಂಧವನ್ನು ಬೀರುತ್ತ ನೀರಿನಲ್ಲಿ ರಾಜಿಸುವ ತಾವರೆಗಳು ಜಲದಲ್ಲಿ ಪ್ರತಿಬಿಂಬಿಸಿದ ಬಾಲಸೂರ್ಯರಂತೆ ಕಾಣುತ್ತವೆ (೬೧-೬೨).

ಲತ ತತ

೧೨ ಕಿಪ್ಪಿಂಧಾಕಾಂಡಃ [ಸರ್ಗಃ

ಏಷಾ ಪ್ರಸನ್ನಸಲಿಲಾ ಪದ್ಗನೀಲೋತ್ಸಲಾಯುತಾ |

ಹಂಸಕಾರಂಡವಾಕೀರ್ಣಾ ಪಂಪಾ ಸ್‌ೌಗಂಧಿಕಾನ್ಸಿತಾ ೬೩ ಜಲೇ ತರುಣಸೂರ್ಯಾಭ್ಯೆಃ ಷಟ್ಟದಾಹತಕೇಸರೈಃ

ಪಂಕಜೈಃ ಶೋಭತೇ ಪಂಪಾ ಸಮಂತಾದಭಿಸಂವೃತಾ Il ೬೪ ಚಕ್ರವಾಕಯುತಾ ನಿತ್ಯಂ ಚಿತ್ರಪ್ರಸ್ಥ್ನವನಾಂತರಾ। ಮಾತಂಗಮೃಗಯೂಪೈಶ್ಚ ಶೋಭತೇ ಸಲಿಲಾರ್ಥಿಭಿಃ ೬೫ ಪವನಾಹಿತವೇಗಾಭಿರೂರ್ಮಿಭಿರ್ವಿಮಲೇಂಭಸಿ।

ಪಂಕಜಾನಿ ವಿರಾಜಂತೇ ತಾಡ್ಕಮಾನಾನಿ ಲಕ್ಷ ol ೬೬ ಪದ್ಧಪತ್ರವಿಶಾಲಾಕ್ಷೀಂ ಸತತಂ ಪ್ರಿಯಪಂಕಜಾಮ್‌

ಅಪಶ್ಯತೋ ಮೇ ವೈದೇಹೀಂ ಜೀವಿತಂ ನಾಭಿರೋಚತೇ ॥॥ ೬೭ ಅಹೋ ಕಾಮಸ್ಯ ವಾಮತ್ತಂ ಯೋ ಗತಾಮಪಿ ದುರ್ಲಭಾಮ್‌ ಸ್ಥಾರಯಿಷ್ಯತಿ ಕಲ್ಯಾಣೀಂ ಕಲ್ಯಾಣತರವಾದಿನೀಮ್‌ ೬೮

ಪಂಪೆಯು ಬಹು ಮನೋಹರವಾಗಿದೆ. ತಿಳಿಯಾದ ನೀರು, ಪದ್ಧ ನೀಲೋತ್ಪಲ ಸೌಗಂಧಿಕಾದಿ ಜಲಪುಷಗಳು, ಹಂಸಕಾರಂಡವಾದಿ ಜಲಪಕ್ಷಿಗಳು. ಬಾಲಸೂರ್ಯರಂತಿರುವ ಕಮಲಗಳ ಕೇಸರಗಳಿಗೆ ದಂಬಿಗಳು ಬಂದೆರಗುತಿವೆ (೬೩-೬೪). (ಸನಗಳೆಂಬ) ಚಕ್ರವಾಕಗಳಿಂದೊಪ್ಪುವ ಪಂಪೆಯು ತೀರಕಾನನವೆಂಬ ಚಿತ್ರವರ್ಣದ ಸೀರೆಯನ್ನುಟ್ಟು ನಿಂತಿದೆ ! ನೀರು ಕುಡಿಯುವುದಕ್ಕಾಗಿ ಆನೆ, ಜಿಂಕೆ ಮೊದಲಾದ ಮೃಗಯೂಥಗಳು ಬಂದಿವೆ (೬೫). ಲಕ್ಷ್ಮಣ, ಗಾಳಿಯ ವೇಗಕ್ಕೆ ನುಗ್ಗಿಬಂದ ಅಲೆಗಳು ಕಮಲಗಳನ್ನು ತಾಡಿಸಿ ಅಲ್ಲಾಡಿಸುವುದು ಎಂತಹ ಮನೋಹರವಾದ ದೃಶ್ಯ 1 ಕಮಲ ಗಳಿಗಾಗಿ ಹತೊರೆಯುತ್ತಿದ್ದ ನನ್ನ ಕಮಲದಳಾಯತಾಕ್ಷಿಯು ನನಗೆ ಕಾಣದಾದಳಲ್ಲ! ನನಗೆ ಜೀವಿತವು ಬೇಡವಾಗಿದೆ (೬೬-೬೭). ಆಹಾ। ಕಾಮನ ವಾಮಾಚಾರವೇ ! ಕಣ್ಣರೆಯಾಗಿ ದುರ್ಲಭಳಾದ, ನಲ್ಲುಡಿಯಾಡುವ ನಲ್ಲೆಯ ಮಂಗಳಾಂಗಿಯನ್ನು ಕಾಮನು (ಸದೃ್ಭಶವಸ್ತುಗಳನ್ನು ತೋರಿಸಿ) ಮತ್ತೆಮತ್ತೆ ನನ್ನ ನೆನಪಿಗೆ ತರುತ್ತಿದ್ದಾನೆ (೬೮).

ಸರ್ಗಃ ೧] ರಾಮವಿಪ್ರಲಂಭಾವೇಶಃ ೧೩

ಶಕ್ಕೋ ಧಾರಯಿತುಂ ಕಾಮೋ ಭವೇದಭ್ಯಾಗತೋ ಮಯಾ ಯದಿ ಭೂಯೋ ವಸಂತೋ ಮಾಂ ಹನ್ಯಾತ್‌ ಪುಷ್ಟಿತದ್ರುಮಃ ॥೬೯

ಯಾನಿ ಸ್ಮರಮಣೀಯಾನಿ ತಯಾ ಸಹ ಭವಂತಿ ಮೇ। ತಾನ್ಕೇವಾರಮಣೀಯಾನಿ ಜಾಯಂತೀ ಮೇ ತಯಾ ವಿನಾ ೭೦

ಪದ್ಮಕೋಶಪಲಾಶಾನಿ ದ್ರಷ್ಟುಂ ದೃಷಿರಿ ಮನ್ಯತೇ

ಸೀತಾಯ ನೇತ್ರಕೋಶಾಭ್ಯಾಂ ಸದ್ಯಶಾನೀತಿ ಲಕ್ಷ್ಮಣ ೭೧ ಪದ್ಮಕೇಸರಸಂಸೃಷ್ಟೋ ವೃಕ್ಷಾಂತರವಿನಿಃಸ್ಛತಃ।

ನಿಃಪ್ಲಾಸ ಇವ ಸೀತಾಯಾ ವಾತಿ ವಾಯುರ್ಮನೋಹರಃ ೭೨ ಸೌಮಿತ್ರೇ ಪಶ್ಯ ಪಂಪಾಯಾ ದಕ್ಷಿಣೇ ಗಿರಿಸಾನುನಿ

ಪುಷಿತಾಂ ಕರ್ಣಿಕಾರಸ್ಕ ಯಷಿಂ ಪರಮಶೋಭನಾಮ್‌ ೭೩ ಅಧಿಕಂ ಶೈಲರಾಜೋ5 ಯಂ ಧಾತುಭಿಃ ಸುವಿಭೂಷಿತಃ।

ಎಚಿತ್ರಂ ಸೃಜತೇ ರೇಣುಂ ವಾಯುವೇಗವಿಫಟ್ಟಿತಮ್‌ ೭೪ ಗಿರಿಪ್ರಸ್ಥಾಸ್ತುಸೌಮಿತ್ರೇ ಸರ್ವತಃ ಸಂಪ್ರಪಷಿತ್ಸೆಃ |

ನಿಷ್ಠತೈಃ ಸರ್ವತೋ ರಮೈೈಃ ಪ್ರದೀಪ್ತಾಇವ ಕಿಂಶುಕೈಃ ೭೫

ಮರಗಳನ್ನರಳಿಸುತ್ತಬಂದ ವಸಂತನು ನನ್ನನ್ನು ಹೊಡೆದು ಹಿಂಡದಿದ್ದರೆ, ಕಾಮನ ಪೀಡೆಯೊಂದನ್ನು ಹೇಗಾದರೂ ಸಹಿಸಿಕೊಳ್ಳುತ್ತಿದ್ದೆನು. ನನ್ನ ದಯಿತೆಯಿದ್ದಾಗ ಯಾವ ಯಾವ ವಸ್ತುಗಳು ನನಗೆ ರಮಣೀಯವಾಗಿದ್ದವೋ ಅವೆಲ್ಲವೂ ಈಗ ದುಃಖಕರವಾಗಿ ಪರಿಣಮಿಸಿವೆ (೬೯-೭೦). ತಾವರೆ ಮೊಗ್ಗುಗಳ ದಳಗಳನ್ನುನೋಡಿದರೆ, "ಇವು ಸೀತೆಯ ಕಣ್ಣುರೆಪ್ಪೆಗಳಂತಿವೆ' ಎಂದು ನನ್ನಕಣ್ಣುತಿಳಿದುಕೊಳ್ಳುತ್ತದೆ. ಪದ್ಮಕೇಸರಗಳನ್ನು ಹೊತ್ತುಮರಗಳ ಸಂದಿಯಲ್ಲಿ ತೂರಿಬರುವ ಗಾಳಿಯು ಜಾನಕಿಯ ನಿಶ್ಚಾಸದಂತೆ ಸುಗಂಧಮನೋಹರ ವಾಗಿದೆ (೭೧-೭೨). ಸೌಮಿತ್ರಿ, ಅಲ್ಲಿ ನೋಡು. ಪಂಪೆಯ ದಕ್ಷಿಣ ದಿಕ್ಕಿನ ಬೆಟ್ಟದ ತಪ್ಪಲಿನಲ್ಲಿ ಒಂದು ಕರ್ಣಿಕಾರ ಗಿಡವು ಹೂವರಳಿ ಎಷ್ಟು ಮನೋಹರ ವಾಗಿವೆ | ನಾನಾಬಗೆಯ ಧಾತುಗಳಿಂದ ಮಂಡಿತನಾದ ಶೈಲರಾಜನು ವಾಯುವಿನ ಹೊಡೆತದಿಂದ ಬಣ್ಣ ಬಣ್ಣದ ಧೂಳಿಯನ್ನು ಹಾರಿಸುತ್ತಿದ್ದಾನೆ

೧೪ ಕಿಷ್ಟಿಂಧಾಕಾಂಡಃ [ಸರ್ಗಃ

ಪಂಪಾತೀರರುಹಾಶ್ಲೇಮೇ ಸಂಸಕ್ತಾಮಧುಗಂಧಿನಃ।

ಮಾಲತೀಮಲ್ಲಿಕಾಷಂಡಾಃ ಕರವೀರಾಶ್ಚಪುಷ್ಟಿತಾಃ॥ ೭೬ ಕೇತಕ್ಕಃ ಸಿಂಧುವಾರಾಶ್ಚ ವಾಸಂತೃಶ್ಚ ಸುಪುಷಿತಾಃ

ಮಾಧವ್ಯೋ ಗಂಧಪೂರ್ಣಾಶ್ಚ ಕುಂದಗುಲ್ಫಾಶ್ರ ಸರ್ವಶಃ ೭೭ ಚಿರಿಬಿಲ್ವಾಮಧೂಕಾಶ್ಚ ವಂಜುಲಾ ವಕುಲಾಸಥಾ ಚಂಪಕಾಸಿಲಕಾಶ್ಚೈವ ನಾಗವೃಕ್ಷಾಃ ಸುಪುಷ್ಟಿತಾಃ ೭೮ ನೀಪಾಶ್ಚ ವರಣಾಶ್ಛೈವ ಖರ್ಜೂರಾಶ್ನ ಸುಪುಷಿತಾಃ ಪದ್ಗಕಾಶ್ಲೋಪಶೋಭಂತೇ ನೀಲಾಶೋಕಾಶ್ಚ ಪುಷಿತಾಃ ॥। ೭೯ ಲೋಧ್ರಾಶ್ಚಗಿರಿಪೃಷ್ಠೇಷು ಸಿಂಹಕೇಸರಪಿಂಜರಾಃ। ಅಂಕೋಲಾಶ್ಚಕುರಂಟಾಶ್ಚಪೂರ್ಣಕಾಃ ಪಾರಿಭದ್ರಕಾಃ॥ ೮೦ ಚೂತಾಃ ಪಾಟಲಯಶ್ಚೈವ ಕೋವಿದಾರಾಶ್ಚ ಪುಷಿತಾಃ ಮುಚುಲಿಂದಾರ್ಜುನಾಶೈವ ದೃಶ್ಯಂತೇ ಗಿರಿಸಾನುಷು ೮೧

(೭೩-೭೪). ಬೆಟ್ಟದ ತಪ್ಪಲುಗಳಲ್ಲಿರುವ ಮುತ್ತುಗದ ಮರಗಳೆಲ್ಲವೂ ಅರಳಿ ನಿಂತಿವೆ. ಬರಿಯ ಹೂಗಳು; ಎಲೆಗಳೇ ಇಲ್ಲ (ಕೆಂಪಾದ) ಹೂಗಳಿಂದ ಬೆಟ್ಟಕ್ಕೆ ಬೆಂಕಿಬಿದ್ದಂತೆ ಕಾಣುತ್ತದೆ (೭೫). ಪಂಪಾತೀರದಲ್ಲಿರುವ ಮರ ಗಳೆಲ್ಲವೂ ಮಕರಂದದ ಸುವಾಸನೆಯನ್ನು ಬೀರುತ್ತ ಒಂದಕ್ಕೊಂದು ಹೆಣೆದಂತೆ ಸಾಂದ್ರವಾಗಿವೆ. ಜಾಜಿ, ಮಲ್ಲಿಗೆಯ ಪೊದೆಗಳೂ ಕರವೀರಗಳೂ ಪುಷಿತವಾಗಿವೆ (೭೬). ಕೇದಗೆ, ಲಕ್ಕಿ, ಇರುವಂತಿಗೆ, ಮಾಧವಿ, ಮಾಗೀಮಲ್ಲಿಗೆ-ಇವು ಹೂಬಿಟ್ಟಿವೆ. ಹೊಂಗೆ, ಹಿಪ್ಪೆ ವೇತಸ, ಬಕುಳ, ಸಂಪಗೆ, ತಿಲಕ, ನಾಗಕೇಸರಗಳು ಚೆನ್ನಾಗಿ ಅರಳಿವೆ(೭೭-೭೮). ಈಚಲು, ಬಳಸೆ, ಖರ್ಜೂರ, ಪದ್ಧಪರ್ಣಿ ಮತ್ತು ನೀಲಾಶೋಕಗಳು ಸುಪುಷಿತಗಳಾಗಿ ಶೋಭಿಸುತಿವೆ. ಪರ್ವತದ ಸಾನು ಪ್ರದೇಶಗಳಲ್ಲಿಲೋಧ್ರಗಳು ಸಿಂಹದ ಕೇಸರಗಳಂತೆ ಪಿಂಗಳವರ್ಣದ ಹೂಗಳನ್ನು ಬಿಟ್ಟಿವೆ. ಅಂಕೋಲ, ಗೋರಂಟಿ, ಶಾಲ್ಗಲಿ, ದೇವದಾರು, ಮಾವು, ಪಾದರಿ, ಕಾಂಚಾಳ, ಕಿತ್ರಿಳೆ, ಮತ್ತಿಗಳು ಗಿರಿಪ್ರದೇಶಗಳಲ್ಲಿ ಅರಳಿರುವುದು ಕಾಣುತಿದೆ (೭೯-೮೧).

ಸರ್ಗಃ ೧] ರಾಮವಿಪ್ರಲಂಭಾವೇಶಃ ೧೫

ಕೇತಕೋದ್ದಾಲಕಾಶ್ಲೆವ ಶಿರೀಷಾಃ ಶಿಂಶಪಾ ಧವಾಃ

ಶಾಲ್ಗಲ್ಪಃ ಕಿಂಶುಕಾಶೈವ ರಕಾಃ ಕುರಬಕಾಸಥಾ ೮೨

ತಿನಿಶಾ ನಕ್ತಮಾಲಾಶ್ಚ ಚಂದನಾಃ ಸಂದನಾಸಥಾ।

ಹಿಂತಾಲಾಸ್ತಿಲಕಾಶ್ಚೈವ ನಾಗವಕ್ಷಾಶ ಪುಷಿತಾಃ ೮೩ ಜಾಡಿ

ಪುಷ್ಟಿತಾನ್‌ ಪುಷಿತಾಗ್ರಾಭಿರ್ಲತಾಭಿಃ ಪರಿವೇಷ್ಠಿತಾನ್‌ ದ್ರುಮಾನ್‌ ಪಶ್ಯೇಹ ಸೌಮಿತ್ರೇ ಪಂಪಾಯಾ ರುಚಿರಾನ್‌ ಬಹೂನ್‌

ವಾತವಿಕ್ಷಿಪವಿಟಪಾನ್‌ ಯಥಾಸನ್ನಾನ್‌ ದ್ರುಮಾನಿಮಾನ್‌

ಲತಾಃ ಸಮನುವೇಷ್ಟಂತೇ ಮತ್ತಾಇವ ವರಸ್ಪಿಯಃ || ೮೫ ಪಾದಪಾತ್‌ ಪಾದಪಂ ಗಚ್ಛನ್‌ ಶೈಲಾಚ್ಸೈಲಂ ವನಾದ್ದನಮ್‌

ವಾತಿ ನ್ಫೆ ಕರಸಾಸ್ನಾದಸಂಮೋದಿತ ಇವಾನಿಲಃ ೮೬ ಕೇಚಿತ್‌ ಪರ್ಯಾಪಕುಸುಮಾಃ ಪಾದಪಾ ಮಧುಗಂಧಿನಃ ಕೇಚಿನ್ನುಕುಲಸಂವೀತಾಃ ಶ್ಯಾಮವರ್ಣಾ ಆವಾಬಭುಃ ೮೩

ಹೊಂಬಣ್ಣದ ಕೇದಗೆ, ಚಳ್ಳೆ, ಬಾಗೆ, ಶಿಂಶಪಾ, ಧವ, ಬೂರುಗ, ಮುತ್ತಗ, ಕೆಂಪುಗೋರಂಟಿಗಳು ಪುಷಪೂರ್ಣವಾಗಿವೆ (೮೨). ಹುಲಿಗೆ, ಕೆಂಪುಬೂರಗ, ಚಂದನ, ಸ್ಪಂದನ, ಹಿಂತಾಲ, ತಿಲಕ, ನಾಗವೃಕ್ಷಗಳು ಪುಷ್ಟಿತವಾಗಿವೆ. ಸೌಮಿತ್ರಿ, ಪಂಪಾತೀರದಲ್ಲಿ'ಪುಷ್ಠಭರಿತಗಳಾದ ವೃಕ್ಷಗಳು ಪುಷಿತಲತೆಗಳಿಂದ ಆವೃತವಾಗಿರುವುದನ್ನು ನೋಡು | (೮೩-೮೪). ಕೊಂಬೆಗಳು ಗಾಳಿಗೆ ತೂಗುತ್ತಿರುವಾಗ ಸಮೀಪದಲ್ಲಿರುವ ವೃಕ್ಷಗಳನ್ನು ಲತೆಗಳು ಕಾಮೋನ್ನತರಾದ ತರುಣಿಯರಂತೆ ಆಲಿಂಗಿಸಿಕೊಳ್ಳುವುದನ್ನು ನೋಡು | ಮಂದಾನಿಲನು ಮರದಿಂದ ಮರಕ್ಕೆ, ಬೆಟ್ಟದಿಂದ ಬೆಟ್ಟಕ್ಕೆ, ವನದಿಂದ ವನಕ್ಕೆ ಹೋಗಿ ವಿವಿಧ ರಸಗಳನ್ನಾಸ್ವಾದಿಸಿ ಆನಂದತುಂದಿಲನಾದವನಂತೆ ಸುಳಿಯುತ್ತಿರುವನು (೮೫-೮೬). ಕೆಲವು ಮರಗಳು ಹೂಗಳಿಂದ ತುಂಬಿ ಮಧುಗಂಧವನ್ನು ಸೂಸುತ್ತಿರುವುವು. ಕೆಲವು ಮರಗಳು ಮೊಗ್ಗುಗಳಿಂದ ಮುಸುಕಿ ಕಪ್ಪಗೆ ಕಾಣುತ್ತಿರುವುವು ( ಅಭಿನವಮಧುಲೋಲುಪವಾಗಿ) ಕುತೂಹಲಾಕುಲವಾದ

೧೬ ಕಿಷ್ಟಿಂಧಾಕಾಂಡಃ [ಸರ್ಗಃ

ಇದಂ ಮೃಷ್ಟಮಿದಂ ಸ್ವಾದು ಪ್ರಫುಲ್ಲಮಿದಮಿತ್ಯಪಿ

ರಾಗಮತ್ತೋ ಮಧುಕರ: ಕುಸುಮೇಷ್ಠವಲೀಯತೇ || ೮ಲ೮ೆ ನಿಲೀಯ ಪುನರುತತ್ಛ ಸಹಸಾನ್ಯತ್ರ ಗಚ್ಛತಿ।

ಮಧುಲುಬ್ಬೋ ಮಧುಕರಃ ಪಂಪಾತೀರದ್ರುಮೇಷ್ನಸ್‌ || ರ್ಲ ಇಯಂ ಕುಸುಮಸಂಘಾತೈರುಪಸೀರ್ಣಾ ಸುಖಾ ಕೃತಾ

ಸ್ವಯಂ ನಿಪತಿತೈರ್ಭೂಮಿಃ ಶಯನಪ್ರಸರೈರಿವ || ೯೦ ವಿವಿಧಾ ಎಎದ್ಳೆಃ ಪುಷ್ಪೈಸೈರೇವ ನಗಸಾನುಷು।

ವಿಶೀರ್ಣೈಃ ಪೀತರಕ್ತಾ ಹಿ ಸೌಮಿತ್ರೇ ಪ್ರಸರಾಃ ಕೃತಾಃ ೯೧ ಹಿಮಾಂತೇ ಪಶ್ಯ ಸ್‌ಮಿತ್ರೇ ವಕ್ಷಾಣಾಂ ಪುಷ್ಠಸಂಭವಮ್‌ ಪುಷ್ಪಮಾಸೇ ಹಿ ತರವಃ ಸಂಘರ್ಷಾದಿವ ಪುಷಿತಾಃ ೯೨ ಆಹ್ಹಂಯಂತ ಇವಾನ್ಯೋನ್ಯಂ ನಗಾಃ ಷಟ್ಟದನಾದಿತಾಃ। ಕುಸುಮೋತಂಸವಿಟಪಾಃ ಶೋಭಂತೇ ಬಹು ಲಕ್ಷ್ಮಣ Il ೯೩

ಮಧುಕರಪಂಕಿಯು "ಇದು ರಮ್ಯವಾಗಿದೆ, ಇದು ರಸವತರವಾಗಿದೆ, ಇದು ಚೆನ್ನಾಗಿ ಅರಳಿದೆ! ' ಎಂದು ಹೂಗಳ ರಸಾಸ್ವಾದನೆಯಲ್ಲಿ ಮುಳುಗಿಹೋಗಿದೆ (೮೭-೮೮). ಪಂಪಾತೀರದ ವೃಕ್ಷಗಳಲ್ಲಿ ಮಧುಲುಬ್ಬವುದ ಮಧುಕರವು ಒಂದು ಹೂವಿನಲ್ಲಿಳಿದು ಅಡಗಿ ಮರುಕ್ಷಣವೇ ಛಂಗನೆ ನೆಗೆದು ಇನ್ನೊಂದು ಹೂವಿಗೆ ಹೋಗುತಿದೆ. ತಾವಾಗಿ ಉದುರಿದ ಪುಷರಾಶಿಗಳಿಂದ, ನೆಲದಮೇಲೆ ಸುಖಕರವಾದ ಹಾಸಿಗೆಯನ್ನು ಹಾಸಿದಂತೆ ಕಾಣುತಿದೆ! (೮೯-೯೦). ಸೌಮಿತ್ರಿ,

ಗಿರಿಸಾನುಗಳಲ್ಲಿರುವ ಶಿಲೆಗಳ ಮೇಲೆ ಬಣ್ಣಬಣ್ಣದ ಬಗೆಬಗೆಯ ಹೂಗಳುದುರಿ ಹಳದಿಯಾದ ಕೆಂಪಾದ ವಿವಿಧ ಶಯನಗಳು ರಚಿತವಾಗಿವೆ, ನೋಡು (೯೧).

ಲಕ್ಷ್ಮಣ, ಶಿಶಿರ ಯತು ಕಳೆದೊಡನೆ ವೃಕ್ಷಗಳಿಗೆ ಪ್ರುಪವಾದ ಪುಷಸಮೃದ್ದಿಯನ್ನು ವೀಕ್ಷಿಸು. ಅನ್ಯೋನ್ಯ ಸ್ಪರ್ಧೆಯಿಂದಲೋ ಎಂಬಂತೆ ತರುಗಳು ಅರಳಿ ನಿಂತಿವೆ. ಇವು"ನನ್ನನ್ನುನೋಡು! ನನ್ನನ್ನುನೋಡು!' ಎಂದು ಭೃಂಗನಾದದಿಂದ ಇತರ ವೃಕ್ಷಗಳನ್ನುಸ್ಪರ್ಧೆಗೆ ಕರೆಯುವಂತೆ ಕಾಣುತಿದೆ! ಕೊಂಬೆಗಳ ತುಂಬಹೂ ಮುಡಿದ ಮರಗಳು ಬಹು ಸುಂದರವಾಗಿ ಕಾಣುತಿವೆ, ಲಕ್ಷ್ಮಣ (೯೨-೯೩).

ಸರ್ಗಃ ೧] ರಾಮವಿಪ್ರಲಂಭಾವೇಶಃ ೧೭

ಏಷ ಕಾರಂಡವಃ ಪಕ್ಷೀ ವಿಗಾಹ್ಯ ಸಲಿಲಂ ಶುಭಮ್‌ ರಮತೇ ಕಾಂತಯಾ ಸಾರ್ಧಂ ಕಾಮಮುದ್ದೀಪಯನ್‌ ಮಮ ೯೪

ಮಂದಾಕಿನ್ಯಾಸ್ತು ಯದಿದಂ ೂಹಮೇವಂ ಮನೋಹರಮ್‌ ।ಟ ಸ್ಥಾನೇ ಜಗತಿ ವಿಖ್ಯಾತಾ ಗುಣಾಸಸ್ಕಾ ಮನೋರಮಾ: ೯೫

ಯದಿ ದಶ್ಯೇತ ಸಾ ಸಾಧ್ದೀ ಯದಿ ಚೇಹ ವಸೇಮಹಿ ಸ್ಪಹಯೇಯಂ ಶಕ್ರಾಯ ನಾಯೋಧ್ಯಾಯ್ಕೆ ರಥೂತಮ॥ ೯೬

ಹ್ಯೇವಂ ರಮಣೇಯೇಷು ಶಾದ್ದಲೇಷು ತಯಾ ಸಹ

ರಮತೋ ಮೇ ಭವೇಚಿಿಂತಾ ಸ್ಪಹಾನ್ಯೇಷು ವಾ ಭವೇತ್‌ ೯೭ ಆಮೀ ಹಿ ವಿವಿಧೈಃ ಪುಷ್ಪೈಸರವೋ ರುಚಿರಚ್ಛದಾಃ!

ಕಾನನೇ$ಸ್ಥಿನ್‌ ವಿನಾ ಕಾಂತಾಂ ಚಿತಮುನ್ನಾದಯಂತಿ ಮೇ ೯೮

ಪಶ್ಯ ಶೀತಜಲಾಂ ಚೇಮಾಂ ಸಾಮಿತ್ರೇ ಪುಷ್ಕರಾಯುತಮ್‌ ಚಕ್ರವಾಕಾನುಚರಿತಾಂ ಕಾರಂಡವನಿಷೇವಿತಾಮ್‌ ೯೯

ಕಾರಂಡಪಕ್ಷಿಯು ತನ್ನ ಕಾಂತೆಯೊಡನೆ ನೀರಿಗಿಳಿದು ವಿಹರಿಸುತ್ತ ನನ್ನ ವಿರಹತಾಪವನ್ನು ಉದ್ದೀಪಿಸುತ್ತಿದೆ. (ನಾವು ಹಿಂದೆ ನೋಡಿದ) ಮಂದಾಕಿನಿ ಯಂತೆ ಪುಷ್ಕರಿಣಿಯೂ ನೋಡಲು ಬಹು ಮನೋರಮವಾಗಿದೆ. ಮಂದಾಕಿನಿಯ ಸೌಂದರ್ಯವೂ ಲೋಕವಿಖ್ಯಾತವಾಗಿದೆ (೯೪-೯೫). ಸುದ್ದಿಯಾದ ಸೀತೆಯು ಈಗಲಾದರೂ ನಮಗೆ ಗೋಚರಿಸಿ, ಅವಳೊಡನೆ ಇಲ್ಲಿ ವಾಸಮಾಡುವುದಾದರೆ, ಲಕ್ಷ್ಮಣ, ನನಗೆ ಇಂದ್ರಪದವಿಯು ಬಂದರೂ ಬೇಡ! ಅಯೋಧ್ಯೆಯೂ ಬೇಡ! (೯೬). ರಮಣೀಯವಾದ ಹಚ್ಚನೆಯ ಹುಲ್ಲುಗಾವಲಿನಲ್ಲಿಅವಳೊಡನೆ ವಿನೋದಿಸುತ್ತಿದ್ದರೆ, ನನಗೆ ಯಾವ ಚಿಂತೆಯೂ ಇರದು ; ಇನ್ನೊಂದು ಆಸೆಯೂ ಬರದು. ಕಾನನದಲ್ಲಿ ಅಂದವಾದ ಎಲೆಗಳಿರುವ ಮರಗಳು ತಮ್ಮ ವಿವಿಧ ಪುಷ್ಪಗಳಿಂದ, ಕಾಂತಾ ವಿರಹಿತನಾದ ನನಗೆ ಹುಚ್ಚು ಹಿಡಿಸುತಿವೆ (೯೭-೯೮). ವತ್ಸ, ತಣ್ಣೀರಿನಿಂದ ತುಂಬಿ ಕಮಲ ಗಳಿಂದ ನಿಬಿಡವಾದ ಪಂಪಾಸರೋವರವನ್ನು ನೋಡು. ಚಕ್ರವಾಕಗಳ ಓಡಾಟ, ಕಾರಂಡವಗಳ ಅಲೆದಾಟ, ನೀರ್ಗೋಳಿಗಳ ನಲಿದಾಟ, ಕೊಂಚೆಗಳ

೧೮ ಕಿಷ್ಟಿಂಧಾಕಾಂಡಃ [ಸರ್ಗಃ

ಪ್ಲವೈಃ ಕ್ರೌಂಚೈಶ್ಚಸಂಪೂರ್ಣಾಂ ವರಾಹಮೃಗಸೇವಿತಾಮ್‌

ಅಧಿಕಂ ಶೋಭತೇ ಪಂಪಾ ವಿಕೂಜದ್ದಿರ್ವಿಹಂಗಮೈಃ 1 ೧೦೦ ದೀಪಯಂತೀವ ಮೇ ಕಾಮಂ ವಿವಿಧಾ ಮುದಿತಾ ದ್ವಿಜಾಃ

ಶ್ಯಾಮಾಂ ಚಂದ್ರಮುಖೀಂ ಸ್ಮೃತ್ವಾಪ್ರಿಯಾಂ ಪದ್ಮನಿಭೇಕ್ಷಣಾಮ್‌ ಪಶ್ಯ ಸಾನುಷು ಚಿತ್ರೇಷು ಮೃಗೀಭಿಃ ಸಹಿತಾನ್‌ ಮೃಗಾನ್‌ |

ಮಾಂ ಪುನಮಗ್ಸಗಶಾವಾಕ್ಷಾ 'ವೈದೇಹ್ಯಾ ವಿರಹೀಕೃತಮ್‌ 1 ೧೦೨

ವ್ಯಥಯಂತೀವ ಮೇ ಚಿತಂ ಸಂಚರಂತಸತಸತಃ। ಅಸ್ಸಿನ್‌ ಸಾನುನಿ ರಮೇ ಹಿ ಮತದ್ದಿಜಗಣಾಯುತೇ | ೧೦೩

ಪಶ್ಶೇಯಂ ಯದಿ ತಾಂ ಕಾಂತಾಂ ತತಃ ಸಸ್ಪಿ ಭವೇನ್ನಮ ಜೇವೇಯಂ ಖಲು ಸೌಮಿತ್ರೇ ಮಯಾ ಸಹ ಸುಮಧ್ಯಮಾ ೧೦೪

ಸೇವತೇ ಯದಿ ವೈದೇಹೀ ಪಂಪಾಯಾಃ ಪವನಂ ಸುಖಮ್‌ ಪದ್ಗಸೌಗಂಧಿಕವಹಂ ಶಿವಂ ಶೋಕವಿನಾಶನಮ್‌ ೧೦೫

ಸಂಚಾರ, ವರಾಹದಿ ಮೃಗಗಳ ಯಾತಾಯಾತ, ಹಕ್ಕಿಗಳ ಇಂಚರ-ಇವುಗಳಿಂದ ಸರಸ್ಸುಎಷ್ಟುಶೋಭಿಸುತಿದೆ! (೯೯-೧೦೦). ವಿವಿಧ ಪಕ್ಷಿಗಳು ಆನಂದದಿಂದ ನಲೆಯುವುದನ್ನು ಕಂಡು ನನ್ನ ವಿರಹತಾಪವು ವರ್ಧಿಸುತ್ತಿದೆ. ಇಂದು ವದನೆಯೂ ಕಂಜನೇತ್ರೆಯೂ ತರುಣಿಯೂ ಆದ ನನ್ನಪ್ರಿಯಳ ಸ್ಥರಣೆ ಯಾಗುತ್ತಿದೆ (೧೦೧). ಲಕ್ಷ್ಮಣ, ಬಣ್ಣಬಣ್ಣದ ಗಿರಿಸಾನುಗಳಲ್ಲಿಹರಿಣಿಗಳೊಡನೆ ವಿಹರಿಸುವ ಹರಿಣಗಳನ್ನೂ ಈಕ್ಷಿಸು ; ಹರಿಣಾಕ್ಷಿಯಾದ ವೈದೇಹಿಯಿಲ್ಲದೆ ಕೊರಗುವ ನನ್ನನ್ನೂ ಈಕ್ಷಿಸು | ಸೊಕ್ಕಿದ ಹಕ್ಕಿಗಳಿಂದ ಆಕುಲವಾದ ರಮ್ಯಸಾನುವಿನಲ್ಲಿ ಕ್ರೀಡಿಸುವ ಮೃಗಗಳು ನನ್ನ ವ್ಯಥೆಯನ್ನು ಹೆಚ್ಚುಸುತ್ತಿವೆ (೧೦೨-೧೦೩). ನನ್ನ ಕಾಂತೆಯನ್ನು ಕಂಡರೆ ಮಾತ್ರ ನನಗೆ ಕ್ಷೇಮವಾದೀತು. ವೈದೇಹಿಯು ನನ್ನೊಡನೆ ಬಂದು ಸುಖಶೀತಲವಾದ ಪಂಪಾತೀರದ ಗಾಳಿಯನ್ನು ಸೇವಿಸುವುದಾದರೆ, ನಾನು ಪ್ರಾಣವನ್ನು ಹಿಡಿದೇನು | ಗಾಳಿಯು ಸೌಗಂಧಿಕಗಳ ಕಂಪನ್ನು ಹೊತ್ತು ಶೋಕನಾಶಕವಾಗಿ ಶಿವಕರವಾಗಿದೆ (೧೦೪-೧೦೫).

ಸರ್ಗಃ ೧] ರಾಮವಿಪ್ರಲಂಭಾವೇಶಃ ೧೯

ಧನ್ಯಾ ಲಕ್ಷ್ಮಣ ಸೇವಂತೇ ಪಂಪೋಪವನಮಾರುತಮ್‌ ಶ್ಯಾಮಾ ಪದ್ಮಪಲಾಶಾಕ್ಷೀ ಪ್ರಿಯಾ ವಿರಹಿತಾ ಮಯಾ ೧೦೬

ಕಥಂ ಧಾರಯತಿ ಪ್ರಾಣಾನ್‌ ವಿವಶಾ ಜನಕಾತ್ಮಜಾ ಕಿಂನು ವಕ್ಷಾ ಮಿ ರಾಜಾನಂ ಧರ್ಮಜ್ಞಂ ಸತ್ಯವಾದಿನಾಮ್‌ 1 ೧೦೭

ಸೀತಾಯಾ ಜನಕಂ ಪೃಷ್ಠ ಕುಶಲಂ ಜನಸಂಸದಿ ಯಾ ಮಾಮನುಗತಾ ಮಂದಂ ಪಿತ್ರಾ ಪ್ರಸ್ಥಾಪಿತಂ ವನಮ್‌ ೧೦೮

ಸೀತಾ ಸತ್ತಥಮಾಸ್ನಾಯ ಕ್ವನು ಸಾ ವರ್ತತೇ ಪ್ರಿಯಾ

ತಯಾ ವಿಹೀನ: ಕೃಪಣಃ ಕಥಂ ಲಕ್ಷ್ಮಃ ಧಾರಯೇ॥ ೧೦೯ ಯಾ ಕ್‌ ರಾಜ್ಯಾದ್ಧ ಷ್ಠಂ ವಿಗತಚೇತಸಮ್‌ ತಚ್ಚಾರ್ವಂಚಿತಪ ಕ್ಷ್ಮಾ ಕಂ ಸುಗಂಧಿ 'ಶುಭಮವ್ರ ಣಮ್‌ ೧೧೦ ಅಪಶ್ಯತೋ ಮುಖಂ ತಸ್ಯಾಃ ಸೀದತೀವ ಮನೋ ಮಮ | ಸ್ಥಿತಹಾಸ್ಯಾಂತರಯುತಂ ಗುಣವನ್ನಧುರಂ ಹಿತಮ್‌ ೧೧೧

ಲಕ್ಷ್ಮಣ, ಪಂಪಾತೀರದಲ್ಲಿ (ಕಾಂತಾಸಮೇತರಾಗಿ) ತಂಗಾಳಿಯನ್ನು ಸೇವಿಸುವವರೇ ಧನ್ಯರು |! ನಾನಾದರೋ ಯೌವನದಿಂದ ಬೀಗುವ ಪದ್ಧಾಕ್ಷಿಯಾದ ಕಾಂತೆಯನ್ನು ಕಳೆದುಕೊಂಡಿರುವೆನು. ಪರಾಧೀನಳಾಗಿರುವ ಜಾನಕಿಯು ಈಗ ಹೇಗೆ ಪ್ರಾಣವನ್ನು ಹಿಡಿದಿರಬಹುದು ? ಧರ್ಮಜ್ಞನೂ ಸತ್ಯವಾದಿಯೂ ಆದ ಜನಕಮಹಾರಾಜನು ಜನರೆದುರಿಗೆ ಸೀತೆಯ ಕುಶಲವನ್ನು ಎಚಾರಿಸಿದರೆ,ಏನು ಹೇಳಲಿ, ಲಕ್ಷ್ಮಣ ? ತಂದೆಯು ನನ್ನನ್ನು ವನಕ್ಕೆ ಕಳಿಸಿದಾಗ ನಿರ್ಭಾಗ್ಯನಾದ ನನ್ನನ್ನು ಅವಳು ಹಿಂಬಾಲಿಸಿ ಬಂದಳಲ್ಲವೆ ? (೧೦೬-೧೦೮). ಸನ್ಮಾರ್ಗವನ್ನವಲಂಬಿಸಿ ನನ್ನೊಡನೆ ಬರಿದ ಸೀತೆ ಎಲ್ಲಿರಬಹುದು ? ಅಂಥ ಸಾಧ್ವಿಯನ್ನು ಕಳೆದುಕೊಂಡು ದೀನನಾಗಿರುವ ನಾನು, ತಮ್ಮ ಹೇಗೆ ಬದುಕಿರಲಿ ? ರಾಜ್ಯಭ್ರಷ್ಟನಾಗಿ ದಿಕ್ಕುಗಾಣದಿದ್ದ ನನ್ನನ್ನು ಕೈಬಿಡದೆ ಬಬರ ಬಂದಳು. ಆಹಾ | ಅವಳ ನುಣುಪಾದ ಮುದ್ದು ಮುಖವು ಎಷ್ಟು ಚೆಲುವಾಗಿತ್ತು! ನಯವಾದ ಎವೆಯುಳ್ಳ ಕಣ್ಣು ಸುಗಂಧಿಯಾದ ನಿಶ್ಯ್ವಾಸ| (೧೦೯-೧೧೦). ಮುಖವನ್ನು ನೋಡದೆ ನನ್ನ ಹೃದಯವು ಸೀದುಹೋಗುತ್ತಿದೆ. ಮುಖದಲ್ಲಿ

೨೦ ಕಿಷ್ಟಿಂಧಾಕಾಂಡಃ [ಸರ್ಗಃ ವೈದೇಹ್ಯಾ ವಾಕ್ಕಮತುಲಂ ಕದಾ ಶ್ರೋಷ್ಯಾಮಿ ಲಕ್ಷ್ಮಣ | ಪ್ರಾಪ್ಯ ದುಃಖಂ ವನೇ ಶ್ಯಾಮಾ ಸಾ ಮಾಂ ಮನ್ಮಥಕರ್ಶಿತಮ್‌

ನಷ್ಟದು:ಖೇವ ಹೃಷ್ಟೇವ ಸಾಧ್ದೀ ಸಾಧ್ಯಭ್ಯಭಾಷತ ಕಿಂ ನು ವಕ್ಷಾ ಮಿ ಕೌಸಲ್ಯಾಮಯೋಧ್ಯಾಯಾಂ ನೃಪಾತ್ಮಜ I ೧೧೩

ಕೃಸಾ ಸ್ನುಷೇತಿ ಪ್ರಚ್ಛಂತೀಂ ಕಥಂ ಚಾತಿಮನಸ್ಪಿನೀಮ್‌ |

ಗಚ್ಛ ಲಕ್ಷ್ಮಣ ಪಶ್ಯತ್ವಂ ಭರತಂ ಭ್ರಾತ್ಮವತ್ಸಲಮ್‌ | ೧೧೪ ಹೃಹಂ ಜೀವಿತುಂ ಶಕಸಾಮೃತೇ ಜನಕಾತ್ಮಜಾಮ್‌ ಇತಿ ರಾಮಂ ಮಹಾತ್ಮಾನಂ ವಿಲಪಂತಮನಾಥವತ್‌ ೧೧೫

ಉವಾಚ ಲಕ್ಷ್ಮಣೋ ಭ್ರಾತಾ ವಚನಂ ಯುಕಮವ್ಯಯಮ್‌ ಸಂಸಂಭ ರಾಮಭದ್ರಂ ತೇ ಮಾ ಶುಚಃ ಪುರುಷೋತ್ತಮ ೧೧೬

ಸಹಜವಾದ ಮುಗುಳ್ನಗೆ, ನಡುನಡುವೆ ಹಾಸ್ಯ. ಪ್ರಸನ್ನಮಧುರನಾಗಿ ಇನ್ನೆಲ್ಲಿಯೂ ಕಂಡುಬರದಿದ್ದವೈದೇಹಿಯ ಇಂಪಾದ ಮಾತನ್ನು ಪುನಃ ಯಾವಾಗ ಕೇಳುವೆನು, ಲಕ್ಷ್ಮಣ ? ಹುಡುಗಿಯು ಅರಣ್ಯದಲ್ಲಿ ಎಷ್ಟು ಕಷ್ಟವನ್ನನುಭವಿಸಿದಳು ! (೧೧೧-೧೧೨). ಆದರೂ ಅನುರಾಗವಶನಾದ ನನ್ನನ್ನು ಕಂಡು ತನಗೆ ಕಷ್ಟವೇ ಇಲ್ಲವೆಂಬಂತೆ ಸಂತುಷ್ಠಳಾಗಿ ಪತಿವ್ರತೆ ಎಷ್ಟು ನಯವಾಗಿ ಮಾತ ನಾಡುತ್ತಿದ್ದಳು ? ರಾಜಪುತ್ರ- ಲಕ್ಷ್ಮಣ, ಅಯೋಧ್ಯೆಗೆ ಹೋಗಿ ನನ್ನ ತಾಯಿಗೆ ಏನೆಂದು ಹೇಳಲಿ? ನನ್ನತಾಯಿ ಬಹಳವಾಗಿ ಮನಸ್ಸಿಗೆ ಹಚ್ಚಿಕೊಳ್ಳುವ ವಾತ್ಸಲ್ಯ ಮಯಿ. "ನನ್ನ ಸೊಸೆ ಎಲ್ಲಿ?' ಎಂದು ಕೇಳಿದರೆ ನಾನು ಏನು ಹೇಳಲಿ, ಲಕ್ಷ್ಮಣ ? ತಮ್ಮ ನೀನು ಅಯೋಧ್ಯೆಗೆ ಹೊರಟುಹೋಗು. ಹೋಗಿ ಭ್ರಾತೃ ವತ್ತಲನಾದ ಭರತನನ್ನು ನೋಡಿಕೊಂಡಿರು (೧೧೩-೧೧೪). ಜಾನಕಿಯಿಲ್ಲದೆ ನಿಶ್ಚಯವಾಗಿಯೂ ನಾನು ಬದುಕಲಾರೆ'' ಎಂದು ಶ್ರೀರಾಮನು ವಿಲಪಿಸಿದನು. ಮಹಾತ್ಮನಾದ ಶ್ರೀರಾಮನು ಅನಾಥನಂತೆ ವಿಲಪಿಸುವುದನ್ನು ಕಂಡು, ಸಹೋದರನಾದ ಲಕ್ಷ್ಮಣನು ಯುಕ್ತಿಯುಕವೂ ಅಚಲನಿರ್ಧಾರವುಳ್ಳದ್ದೂ ಆದ ಮಾತನ್ನು ಹೇಳಿದನು. ""ಅಣ್ಣ್ಯಾ ಮನಸಿಗೆ ಧೈರ್ಯವನ್ನು ತಂದುಕೊ. ನಿನಗೆ ಶುಭವಾಗುವುದು, ದುಃಖಿಸಬೇಡ. ನೀನು ಪುರುಷ ಶ್ರೇಷ್ಠನಾಗಿದ್ದೀಯೆ (೧೧೫-೧೧೬).

ಸರ್ಗಃ ೧] ರಾಮವಿಪ್ರಲಂಭಾವೇಶಃ ೨೧

ನೇದೃಶಾನಾಂ ಮತಿರ್ಮಂದಾ ಭವತ್ಯಕಲುಷಾತ್ಮನಾಮ್‌ ಸ್ಮತ್ವಾವಿಯೋಗಜಂ ದುಃಖಂ ತ್ಯಜ ಸ್ನೇಹಂ ಪ್ರಿಯೇ ಜನೇ॥ ೧೧೭

ಅತಿಸ್ನೇಹಪರಿಪ್ಪಂಗಾದ್ದರ್ತಿರಾರ್ದ್ರಾಷಿ ದಹ್ಯತೇ!

ಯದಿ ಗಚ್ಛತಿ ಪಾತಾಲಂ ತತೋ ಹೃಧಿಕಮೇವ ವಾ॥ ೧೧೮ ಸರ್ವಥಾ ರಾವಣಸಾವನ ಭವಿಷ್ಯತಿ ರಾಘವ। ಪ್ರವೃತಿರ್ಲಭ್ಯತಾಂ ತಾವತಸ್ಸ ಪಾಪಸ್ಯ ರಕ್ಷಸಃ ೧೧೯ ತತೋ ಹಾಸ್ಯತಿ ವಾ ಸೀತಾಂ ನರಳೂ ವಾ ಗಮಿಷ್ಠತಿ ಯದಿ ಯಾತಿ ದಿತೇರ್ಗರ್ಭಂ ರಾವಣಃ ಸಹ ಸೀತಯಾ ೧೨೦ ತತ್ರಾ ಪ್ರ (ನಂ ಹನಿಷ್ಯಾ ಮಿನ ಚೇದ್ದಾಸ್ಯ ತಿ ಮೈಥಿಲೀಮ್‌

ಸ್ವಾಸ್ಥ ಸ್ಲಂ ಭದ್ರಂ ಭಜಸ್ವಾರ್ಯತ್ಯ ತ್ರ ಜೃತಾಂ ಕೃಪಣಾ ಮತಿಃ ೧೨೧

ಅರ್ಥೊೋಹಿ ನಪ್ಪಕಾರ್ಯಾರ್ಥ್ಯರ್ನಾಯತ್ನೇನಾಧಿಗಮ್ಮತೇ ಉತಾಹೋ ಬಲವಾನಾರ್ಯ ನಾಸು ್ಯತಾಹಾತ್‌ ಪರಂ ಬಲಮ್‌

ಧೀರರಾದ ನಿನ್ನಂಥವರು ಎಂದಿಗೂ ಎದೆಗುಂದಲಾರರು. ದುಃಖವು (ತಾತ್ಕಾಲಿಕವಾಗಿ) ಪ್ರಿಯಜನವಿಯೋಗದಿಂದ ಬಂದಿದೆ ಎಂಬುದನ್ನು ಲಕ್ಷಿಸು. ಅತಿವ್ಯಾಮೋಹವೆಂಬುದನ್ನು ಪರಿತ್ಯಜಿಸು. ಬತ್ತಿಯು ಒದ್ದೆಯಾಗಿದ್ದರೂ ಸ್ನೇಹವು * ಅತಿಯಾದರೆ ಸುಟ್ಟು ಹೋಗುತ್ತದೆ. ರಾವಣನು ಪಾತಾಳವನ್ನು ಸೇರಲಿ - ಇನ್ನೂ ಕೆಳಗಿಳಿದು ಅಡಗಲಿ, ಅವನು ಸರ್ವಥಾ ಜೀವಸಹಿತವಾಗಿ ಉಳಿಯನೆಂಬುದು ನಿಶ್ಚಯ. ಆಪಾಪಿ ರಾಕ್ಷಸನು ಎಲ್ಲಿರುವನೆಂಬಸುದ್ದಿಯೊಂದು ನಮಗೆ ದೊರಕಲಿ (೧೧೭-೧೧೯). ಆಗ ಪಾಪಿಯು ಸೀತಾದೇವಿಯನ್ನು ತಂದೊಪ್ಪಿಸಬೇಕಾಗುವುದು; ಇಲ್ಲವೆ, ತನ್ನಪ್ರಾಣವನ್ನು ಅರ್ಪಿಸಬೇಕಾಗುವುದು. ದೇವಿಯನ್ನಪಹರಿಸಿದ ರಾವಣನು ದಿತಿಯ ಗರ್ಭವನ್ನೇ ಹೊಗಲಿ, ಮೈಥಿಲಿಯನ್ನು ಒಪ್ಪಿಸದಿದ್ದರೆ ಅಲ್ಲಿಗೂ ನುಗ್ಗಿ ರಾವಣನನ್ನು ಸಂಹರಿಸುವೆನು | ಅಣ್ಣಾ ನಿನಗೆ ಸಹಜವಾದ ಧೈರ್ಯವನ್ನವಲಂಬಿಸು. ಧೈರ್ಯವೇ ತ್ರೆ ಶ್ರೇಯಸ್ಕರ. ದೀನ ಭಾವವನ್ನು ಪರಿತ್ಯಜಿಸು (೧೨೦-೧೨೧). ಮಿಂಚಿಹೋದ "ಕಾರ್ಯವನ್ನು

ಸ್ನೇಹ = ಎಣ್ಣೆ; ಪ್ರೀತಿ.

ಶಿ ಕಿಷ್ಕಿಂಧಾಕಾಂಡಃ [ಸರ್ಗಃ

ಸೋತಾಹಸ್ಕಾಸ್ತಿ ಲೋಕೇಷು ಕಿಂಚಿದಪಿ ದುರ್ಲಭಮ್‌ ।ಟ

ಉತ್ಪಾಹವಂತಃ ಪುರುಷಾ ನಾವಸೀದಂತಿ ಕರ್ಮಸು ೧೨೩

ಉತಾಹಮಾತ್ರಮಾಶ್ರಿತ್ಯ ಪ್ರತಿಲಪ್ಲ್ಯಾಮ ಜಾನಕೀಮ್‌

ತ್ಯಜ್ಯತಾಂ ಕಾಮವೃತತಂ ಶೋಕಂ ಸಂನ್ಯಸ್ಯ ಪೃಷ್ಠತಃ || ೧೨೪ ಇಡ

ನಸ್ಯ ಶೋಕಂಚಮೋಹಂಚ ತತೋ ಧೈರ್ಯಮುಪಾಗಮತ್‌

ಸೋ5 ಭ್ಯತಿಕ್ರಾಮದವ್ಯಗ್ರಸಾಮಚಿಂತ್ಯಪರಾಕ್ರಮಃ || ೧೨೬

ರಾಮಃ ಪಂಪಾಂ ಸುರಚಿರಾಂ ರಮ್ಯಾಂ ಪಾರಿಪ್ಸವದ್ರುಮಾಮ್‌

ನಿರೀಕ್ಷಮಾಣಃ ಸಹಸಾ ಮಹಾತ್ಮಾ ಸರ್ವಂ ವನಂ ನಿರ್ಭುರಕಂದಾರಂಶ್ಚ

ಪ್ರಯತ್ನದಿಂದ ಸಾಧಿಸಬೇಕಾಲ್ಲದೆ ಬೇರೆಯ ಮಾರ್ಗವಿಲ್ಲ ಅಣ್ಣಾ ಉತ್ಸಾಹವೇ ಕಾರ್ಯಸಿದ್ದಿಗೆ ಪ್ರಬಲವಾದ ಸಾಧನ. ಉತ್ಪಾಹಕ್ಕಿಂತ ಪ್ರಬಲವಾದದ್ದು ಇನ್ನೊಂದಿಲ್ಲ (೧೨೨). ಉತ್ಪಾಹಶಾಲಿಗೆ ಜಗತ್ತಿನಲ್ಲಿ ದುರ್ಲಭವಾದುದೇ ಇಲ್ಲ ಉತ್ಸಾಹಿಗಳಾದ ಜನರು ಯಾವ ಕಾರ್ಯದಲ್ಲಿಯೂವಿಫಲರಾಗುವುದಿಲ್ಲ ಆದ್ದರಿಂದ ನಾವು ಉತ್ಸಾಹವನ್ನವಲಂಬಿಸಿ ಜಾನಕಿಯು ಲಭಿಸುವಂತೆ ಯತ್ನಿಸೋಣ. ಕಾಮವ್ಯಾಪಾರವನ್ನು ಬಿಟ್ಟುಬಿಡು. ಶೋಕವನ್ನು ಬದಿಗೊತ್ತು (೧೨೩-೧೨೪). ನೀನು ಧೀರಚಿತ್ತನೂ ಪರಿಷ್ಕತಬುದ್ಧಿಯುಳ್ಳವನೂ ಎಂಬುದನ್ನರಿಯೆಯಾ 2 ನಿನ್ನನು ನೀನು ಮರೆತೆಯಾ ?'' ಎಂದು ಸಮಾಧಾನ ಹೇಳಿದನು. ಹೀಗೆ ಲಕ್ಷ್ಮಣನು ಸಮಾಧಾನ ಹೇಳಿ ವಿವೇಕವನ್ನರುಹುಲು, ಶೋಕಾವಿಷ್ಠನಾಗಿದ್ದ ಶ್ರೀರಾಮನು ಶೋಕಮೋಹಗಳನ್ನು ಬಿಟ್ಟು ಧೈರ್ಯವನ್ನು ತಂದುಕೊಂಡನು. ಅನಂತರ ಅಸಾಧಾರಣ ಪರಾಕ್ರಮಿಯಾದ ಶ್ರೀರಾಮನು ನಿಶ್ಲಲಚಿತನಾಗಿ, ಗಾಳಿಗೆ ಹೊಯ್ದಾಡುವ ತೀರವೃಕ್ಷಗಳಿಂದ ಮನೋಹರವಾದ ಪಂಪಾಸರೋವರವನ್ನು ದಾಟಿಹೋದನು (೧೨೫-೧೨೬). ಮಹಾತ್ಮನು ಲಕ್ಷ್ಮಣನೊಡನೆ ಅರಣ್ಯದ ಸಮಸ್ತ ಪ್ರದೇಶವನ್ನೂ ಗಿರಿನದಿಗಳನ್ನೂ

ಸರ್ಗಃ ೧] ರಾಮವಿಪ್ರಲಂಭಾವೇಶಃ ೨೩

ಉದ್ದಿಗ್ಗಚೇತಾಃ ಸಹ ಲಕ್ಷ್ಮಣೇನ ವಿಚಾರ್ಯ ದುಃಜರೋಪಹತಃ ಪ್ರತಸ್ನೇ ೧೨೭

ತಂ ಮತಮಾತಂಗವಿಲಾಸಗಾಮೀ ಗಚ್ಛಂತಮವ್ಯಗ್ರಮನಾ ಮಹಾತ್ಸಾ। ಲಕ್ಷ ಶೋ ರಾಘವಮಿಷ್ಠಚೇಷ್ಟೋ ರರಕ್ಷ ಧರ್ಮೇಣ ಬಲೇನ ಚೈವ || ೧೨೮

ತಾವೃಶ್ಯಮೂಕಸ್ಯ ಸಮೀಪಚಾರೀ

ಚರನ್‌ ದದರ್ಶಾದ್ಬುತದರ್ಶನೀಯಾ | ಶಾಖಾಮೃಗಾಣಾಮಧಿಪಸರಸ್ವೀ

ಎತತ್ರ ಸೇ ನೈವ ಚಿಚೇಷ್ಟಕಿಂಚಿತ್‌ ೧೨೯ ಸತ್‌ಾ ಮಹಾತ್ಮಾ ಗಜಮಂದಗಾಮೀ

ಶಾಖಾಮೃಗಸತ್ರ ಚಿರಂ ಚರಂತ್‌ | ದೃಷ್ಟ್ವಾವಿಷಾದಂ ಪರಮಂ ಜಗಾಮ

ಚಿಂತಾಪರೀತೋ ಭಯಭಾರಭಗ್ನಃ || ೧೩೦

ಗುಹೆಗಳನ್ನೂ ಶೋಧಿಸುತ್ತ, ಎಲ್ಲಿಯೂ ಜಾನಕಿಯನ್ನು ಕಾಣದೆ ಕೊರಗುತ್ತ, ಅವಳು ಎಲ್ಲಿರ ಬಹುದೆಂದು ವಿಮರ್ಶಿಸುತ್ತ, ಶೋಕಾವಿಷ್ಟನಾಗಿ ಮುಂದೆ ಹೋದನು (೧೨೭). ಮಹಾಪುರುಷನಾದ ಲಕ್ಷ್ಮಣನಾದರೋ ಮತ್ತ ಮಾತಂಗದಂತೆ ಗಂಭೀರವಾಗಿ ನಡೆಯುತ್ತ ಏಕಾಗ್ರಚಿತ್ತನಾಗಿ ಶ್ರೀರಾಮನನ್ನು ಹಿಂಬಾಲಿಸಿ ಹೋದನು. ಆತನು ರಾಘವನಿಗೆ ಹಿತಕರವಾಗಿ ವರ್ತಿಸುತ್ತ ಆಗಾಗ ನೀತಿಯನ್ನು ಹೇಳಿ ಸಮಾಧಾನಪಡಿಸುತ್ಯ ತನ್ನ ಪರಾಕ್ರಮದಿಂದ ಅವನಿಗೆ ಧೈರ್ಯವನ್ನು ಹುಟ್ಟಿಸಿ ಎಚ್ಚರಿಕೆಯಿಂದ ನೋಡಿಕೊಳ್ಳುತಿದ್ದನು (೧೨೮). ಆಗ ಬಷ್ಯಮೂಕಪರ್ವತಪ್ರಾಂತದಲ್ಲಿಸಂಚರಿಸುತ್ತಿದ್ದವಾನರೇಶ್ವರನಾದ ಸುಗ್ರೀವನು ಅದ್ಭುತ ಸೌಂದರ್ಯಶಾಲಿಗಳಾದ ಶ್ರೀರಾಮಲಕ್ಷ್ಮಣರನ್ನು ಕಂಡನು. ಅವರನ್ನು ಕಂಡು ಬಲಾಢ್ಯನಿಗೆ ಭಯವಾಯಿತು! ಕ್ಷಣಕಾಲ ಅಲ್ಲಾಡದೆ ನಿಂತು ಬಿಟ್ಟನು! (೧೨೯). ಮಹಾತ್ಸನೂ ಗಜಗಂಭೀರಗಾಮಿಯೂ ಆದ ಕಪೀಶ್ವರನು ಅಲ್ಲಿ

೨೪ ಕಿಷ್ಟಿಂಧಾಕಾಂಡಃ [ಸರ್ಗಃ

ತಮಾಶ್ರಮಂ ಪುಣ್ಣಸುಖಂ ಶರಣ್ಯಂ ಸದ್ಫೆವ ಶಾಖಾಮೃಗಸೇವಿತಾಂತಮ್‌ ತ್ರಸಾಶ್ಚ ದೃಷ್ಟ್ಯಾಹರಯೋತ ಭಿಜಗ್ಗು- ರ್ಮಹಾ್‌ಜಸ್‌ ರಾಘವಲಕ್ಷ್ಮಣೌ ತ್‌ ೧೩೧

ಇತ್ಯಾರ್ಷೇ ಶ್ರೀಮದ್ರಾಮಾಯಣೇವಾಲ್ದೀಕೀಯೇ ಆದಿಕಾವ್ಯೇ ಚತುರ್ವಿಂಶತಿಸಹಸ್ರಿಕಾಯಂ ಸಂಹಿತಾಯಾಂ ಕಿಪ್ಟಿಂಧಾಕಾಂಡೆ €ಪ್ರಥಮಃಸರ್ಗಃ

6) ಇಸಾ

ಇರಾನ್‌

ತಿರುಗುತ್ತಿದ್ದ ಇವರೀರ್ವರನ್ನು ಕಂಡು ಅತ್ಯಂತ ವಿಷಣ್ಣನಾದನು. ಅವನಿಗೆ ಚಿಂತೆಯಾವರಿಸಿತು. ಅಂಜಿಕೆಯ ಹೊರೆ ಹೇರಿತು (೧೩೦). ಅವನೊಡನಿದ್ದ ಇತರ ಕಪಿಗಳೂ ಮಹಾತೇಜಸ್ವಿಗಳಾದ ಶ್ರೀರಾಮ ಲಕ್ಷ್ಮಣರನ್ನು ನೋಡಿ (ಅವರನ್ನು ವಾಲಿಯು ಕಳಿಸಿರಬಹುದೆಂದು) ಅಂಜಿದರು. ಅಲ್ಲಿದ್ದ ಮತಂಗಾ ಶ್ರಮವು (ವಾಲಿಗೆ ದುಷ್ಟವೇಶವಾದ್ದರಿಂದ) ವಾನರರಿಗೆ ಶರಣ್ಯವಾಗಿತ್ತು ಅವರು ಭೀತರಾಗಿ ಪುಣ್ಯವೂ ಸುಖಕರವೂ ಆದ ಮತಂಗಾಶ್ರಮವನ್ನು ಸೇರಿ ಕೊಂಡರು (೧೩೧).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಒಂದನೆಯ ಸರ್ಗ

a

ದ್ವಿತೀಯಃ ಸರ್ಗಃ ಸುಗ್ರೀವಮಂತ್ರಃ

ತೌ ತು ದೃಷ್ಟ್ವಾ ಮಹಾತ್ಸಾನ್‌ ಭ್ರಾತರೌ ರಾಮಲಕ್ಷ್ಮಣಾ | ವರಾಯುಧಧರ್‌ ವೀರ್‌ ಸುಗ್ರೀವಃ ಶಂಕಿತೋ5 ಭವತ್‌ ಉದ್ದಿಗಹೃದಯಃ ಸರ್ವಾ ದಿಶಃ ಸಮವಲೋಕಯನ್‌ | ವೃತಿಷ್ಠತ ಕಸ್ಮಿಂಶ್ಚಿದ್ದೇಶೇ ವಾನರಪುಂಗವಃ॥ ನೈವ ಚಕ್ರೇ ಮನಃ ಸ್ಥಾನೇ ವೀಕ್ಷಮಾಣೌ ಮಹಾಬಲ್‌ೌ। ಕಪೇಃ ಪರಮಭೀತಸ್ಯ ಚಿತಂ ವ್ಯವಸಸಾದ ಹ॥ ಚಿಂತಯಿತ್ವಾಸ ಧರ್ಮಾತ್ಥಾ ವಿಮೃಶ್ವ ಗುರುಲಾಘವಮ್‌ ।ಟ ಸುಗ್ರೀವಃ ಪರಮೋದ್ದಿಗ್ನಃ ಸರ್ವೈರನುಚರೈಃ ಸಹ ತತಃ ಸಚಿವೇಭ್ಯಸ್ತುಸುಗ್ರೀವಃ ಪ್ಲವಗಾಧಿಪಃ ಶಶಂಸ ಪರಮೋದ್ವಿಗ್ನಃ ಪಶ್ಯಂಸ್ಕೌ ರಾಮಲಕ್ಷ ಟ್‌ |

ಸರ್ಗ೨

ಸುಗ್ರೀವನು ಸಚಿವರೊಡನೆ ಆಲೋಚಿಸಿ ಹನುಮಂತನನ್ನು ಶ್ರೀರಾಮಲಕ್ಷ್ಮಣರಿದ್ದೆಡೆಗೆ ಕಳಿಸುವುದು

೨೫

ಸುಗ್ರೀವನು ಮಹತ್ತರವಾದ ಆಯುಧಗಳನ್ನು ಧರಿಸಿದ್ದ ಅಣ್ಣ ತಮ್ಮಂದಿರಾದ ಶ್ರೀರಾಮಲಕ್ಷ್ಮಣರನ್ನು ಕಂಡು ಶಂಕಾಕುಲನಾದನು. ಅವನ ಮನಸ್ಸು ಉದ್ವಿಗ್ನ ವಾಯಿತು. ಕಪಿಶ್ರೇಷ್ಠನು ಸಕಲ ದಿಕ್ಕುಗಳನ್ನುಗಾಬರಿಯಿಂದ ನೋಡುತ್ತ ಒಂದು ಕಡೆಯೂ ನಿಲ್ಲದೆ ತಾಕಲಾಡಿದನು (೧-೨). ಬಲಾಢ್ಯರನ್ನು ನೋಡುವಾಗ ಎಲ್ಲಿಯೂ ನಿಲ್ಲಲು ಅವಿಗೆ ಧೈರ್ಯ ಬರಲಿಲ್ಲ ವಾನರನು ಅತ್ಯಂತ ಭೀತನಾದನು. ಹೃದಯವು ತಲ್ಲಣಿಸಿತು. ರಾಜಧರ್ಮವನ್ನರಿತ ಸುಗ್ರೀವನು ತನ್ನ ಅನುಚರರೊಂದಿಗೆ ಆಲೋಚಿಸಿದನು. ""ಅವರಿಬ್ಬರು ಯಾರಿರಬಹುದು ? ಈಗ ಓಡಿಹೋಗೋಣವೆ ? ಅಥವಾ ಇಲ್ಲಿಯೇ ಇದ್ದು ಪರಿಣಾಮಗಳನ್ನೆದುರಿ ಸೋಣವೇ?'' ಎಂದು ಕಾರ್ಯಕಾರ್ಯಗಳನ್ನು ಎಚಾರಮಾಡಿದನು (೩-೪).

೨೬ ಕಿಷ್ಟಿಂಧಾಕಾಂಡಃ [ಸರ್ಗಃ

ಏತೌ ವನಮಿದಂ ದುರ್ಗಂ ವಾಲಿಪ್ರಣಿಹಿತೌ ಧ್ರುವಮ್‌ |

ಛದ್ಗನಾ ಚೀರವಸನ್‌್‌ ಪ್ರಚರಂತಾವಿಹಾಗತ್‌ ತತಃ ಸುಗ್ರೀವಸಚಿವಾ ದೃಷ್ಟ್ಯಾಪರಮಧನಿನ್‌ ಜಗ್ಗುರ್ಗಿರಿತಟಾತಸ್ಮಾದನ್ಯಚ್ಛಿಖರಮುತ್ತಮಮ್‌ ತೇ ಕ್ಷಿಪ್ರಮಧಿಗಮ್ಮಾತ ಯೂಥಪಾ ಯೂಥಪರ್ಷಭಮ್‌ ಹರಯೋ ವಾನರಶ್ರೇಷ್ಠಂ ಪರಿವಾರ್ಯೋಪತಸ್ಥಿರೇ॥ ಏಕಮೇಕಾಯನಗತಾಃ ಪುವಮಾನಾ ಗಿರೇರ್ಗಿರಿಮ್‌ | ಪ್ರಕಂಪಯಂತೋ ವೇಗೇನ ಗಿರೀಣಾಂ ಶಿಖರಾಣ್ಯಪಿ॥ ತತಃ ಶಾಖಾಮೃಗಾಃ ಸರ್ವೇ ಪ್ಲುವಮಾನಾ ಮಹಾಬಲಾಃ ಬಭಂಜುಶ್ಚನಗಾಂಸತ್ರ ಪುಷ್ಟಿತಾನ್‌ ದುರ್ಗಸಂಶ್ರಿತಾನ್‌ ೧೦

ಆಪ್ಸವಂತೋ ಹರಿವರಾಃ ಸರ್ವತಸಂ ಮಹಾಗಿರಿಮ್‌ | ಮೃಗಮಾರ್ಜಾರಶಾರ್ದೂಲಾಂಸ್ಥಾಸಯಂತೋ ಯಯುಸದಾ 11 ೧೧

ವಾನರೆಂದ್ರನು ರಾಮಲಕ್ಷ್ಮಣರನ್ನು ನೋಡುತ್ತಾ ಬಹಳ ಉದ್ವಿಗ್ನನಾಗಿ ತನ್ನ ಸಚಿವರನ್ನು ಕುರಿತು ""ಇವರೀರ್ವರು ದುರ್ಗಮವಾದ ಅರಣ್ಯಕ್ಕೆ ಬಂದಿರುವುದನ್ನು ಗಮನಿಸಿದರೆ, ಇವರು ವಾಲಿಯಿಂದ ಪ್ರೇಷಿತರಾಗಿರುವುದೇ ನಿಶ್ಚಯ. ವಂಚನೆಗಾಗಿ ನಾರುಬಟ್ಟೆಯನ್ನುಟ್ಟು ಅತ್ರಿತ್ತ ಅಲೆಯುತ್ತ ಇಲ್ಲಿಗೆ ಬಂದಿದ್ದಾರೆ '' ಎಂದನು (೫-೬). ಸಚಿವರು ಮಹಾಧನುರ್ಧಾರಿಗಳಾದ ರಾಮಲಕ್ಷ್ಮಣರನ್ನು ನೋಡಿ, ಸುಗ್ರೀವನ ಮಾತನ್ನು ನಂಬಿ (ಇತರ ಕಪಿಗಳನ್ನು ಕರೆತರುವುದಕ್ಕಾಗಿ) ಗಿರಿಪ್ರಾಂತವನ್ನು ಬಿಟ್ಟು ಉನ್ನತವಾದ ಇನ್ನೊಂದು ಗಿರಿಶಿಖರವನ್ನೇರಿದರು. ಸಚಿವರ ಮಾತನ್ನು ಕೇಳಿ ಇತರ ಕಪಿಗಳು ತಮಗೊಡೆಯನಾದ ಸುಗ್ರೀವನ ಸುತ್ತಲೂಕಾವಲಾಗಿ ನಿಲ್ಲಲು ಬಂದರು (೭-೮). ಬಲಶಾಲಿಗಳಾದ ಕಪಿಗಳು ಗಿರಿಶಿಖರಗಳನ್ನು ನಡುಗಿಸುವಂತೆ ಬೆಟ್ಟದಿಂದ ಬೆಟ್ಟಕ್ಕೆ ನೆಗೆಯುತ್ತ ಪುಷ್ಟಿತ ವೃಕ್ಷಗಳನ್ನು ಮುರಿದು ಈಡಾಡುತ್ತ, ಜಿಂಕೆ ಕಾಡು ಬೆಕ್ಕು ಹುಲಿ ಮೊದಲಾದ ಮೃಗಗಳನ್ನು ಬೆದರಿಸುತ್ತಸುಗ್ರೀವನಿದ್ದಲ್ಲಿಗೆ ಬಂದರು (೯-೧೧).

ಸರ್ಗಃ ೨] ಸುಗ್ರೀವಮಂತ್ರಃ

ತತಃ ಸುಗ್ರೀವಸಚಿವಾಃ ಪರ್ವತೇಂದ್ರಂ ಸಮಾಶ್ರಿತಾಃ। ಸಂಗಮ್ಯ ಕಪಿಮುಖ್ಯೇನ ಸರ್ವೇ ಪ್ರಾಂಜಲಯಃ ಸ್ಥಿತಾಃ ೧೨

ತತಸಂ ಭಯಸಂವಿಗ್ನಂ ವಾಲಿಕಿಲ್ಫಿಷತಂಕಿತಮ್‌ ಉವಾಚ ಹನುಮಾನ್‌ ವಾಕ್ಯಂ ಸುಗ್ರೀವಂ ವಾಕ್ಕಕೋವಿದಃ॥ ೧೩

ಸಂಭಮಸ್ಕ್ಯಜ್ಯತಾಮೇಷ ಸರ್ವೈರ್ವಾಲಿಕ್ಸತೇ ಮಹಾನ್‌ ಮಲಯೋತಯಂ ಗಿರಿವರೋ ಭಯಂ ನೇಹಾಸ್ತಿವಾಲಿನಃ॥ ೧೪

ಯಸ್ಸಾದುದ್ದಿಗ್ಗಚೇತಾಸ್ತಂ ಪ್ರದ್ರುತೋ ಹರಿಪುಂಗವ | ತಂ ಕ್ರೂರದರ್ಶನಂ ಕ್ರೂರಂ ನೇಹ ಪಶ್ಯಾಮಿ ವಾಲಿನಾಮ್‌ ೧೫

ಯಸ್ಥಾತವ ಭಯಂ ಸೌಮ್ಯ ಪೂರ್ವಜಾತ್‌ ಪಾಪಕರ್ಮಣಃ। ಸನೇಹ ವಾಲೀ ದುಷ್ಠಾತ್ಸಾನ ತೇ ಪಶ್ಯಾಮ್ಮಹಂ ಭಯಮ್‌ ೧೬

ಅಹೋ ಶಾಖಾಮೃಗತ್ತಂ ತೇ ವ್ಯಕಮೇವ ಪ್ಲುವಂಗಮ। ಲಘುಚಿತತಯಾತ್ಮಾನಂ ಸ್ನಾಪಯಸಿ ಯೋ ಮತ್‌ ೧೭

ಸುಗ್ರೀವನ ಸಚಿವರೂ ಮತ್ತಿತರ ಕಪಿಗಳೂ ಖಷ್ಯಮೂಕಪರ್ವತವನ್ನೇರಿ ತಮ್ಮ ಒಡೆಯನ ಸುತ್ತಲೂ ಕೈಮುಗಿದು ನಿಂತರು. ಆಗ ವಾಲಿಯ ಕಪಟವಿದೆಂದು ಶಂಕಿತನಾಗಿ ಭಯದಿಂದ ದಿಕ್ಕುಗೆಟ್ಟಿದ್ದ ಸುಗ್ರೀವನನ್ನು ನೋಡಿ ವಾಕ್ಯ ಕೋವಿದನಾದ ಹನುಮಂತನು ಹೀಗೆಂದನು (೧೨-೧೩) : "ಸುಗ್ರೀವ, ಸಂಭ್ರಮವು ಏತಕ್ಕಾಗಿ ? ವಾಲಿಯ ಭಯವಿದೆಯೆಂಬ ಶಂಕೆಯನ್ನು ಸರ್ವರೂ ತ್ಯಜಿಸಿರಿ. ಇದು ಯಷ್ಯಮೂಕಪರ್ವತವಲ್ಲವೆ 9* ಇಲ್ಲಿ ವಾಲಿಯ ಭಯ ವೆಲ್ಲಿದೆ? ವಾನರೋತ್ರಮ-ಸುಗ್ರೀವ, ಯಾರಿಗೆ ಹೆದರಿ ನೀನು ಓಡಿ ಬಂದೆಯೋ ಅಂಥ ಕ್ರೂರಾತ್ಮನಾದ ವಾಲಿಯನ್ನು ನಾನು ಕಾಣೆನಲ್ಲ! (೧೪-೧೫). ಸೌಮ್ಯ, ನಿನ್ನ ಅಣ್ಣನಾದ ಪಾಪಿಯಿಂದ ತಾನೆ ನಿನಗೆ ಹೆದರಿಕೆ ? ದುಷ್ಠನಾದ ವಾಲಿ ಇಲ್ಲಿಲ್ಲ ನಿನ್ನ ಅಂಜಿಕೆಗೆ ಕಾರಣವನ್ನೇನೂ ನಾನು ಕಾಣೆ. ಆಹಾ | ನೀನು ಶಾಖಾಮೃಗವೆಂಬುದು ಸ್ಪಷ್ಟವಾಯಿತು | ನೀನು ಚಪಲಚಿತನಾದ್ದರಿಂದ ಸರಿಯಾದ ವಿಮರ್ಶೆಗೆ ಬುದ್ದಿಯನ್ನು ಉಪಯೋಗಿಸಲಿಲ್ಲ(೧೬-೧೭).

ರ: ಮಲಯ = ಮಲಯಪರ್ವತಶ್ರೇಣಿಯಲ್ಲಿರುವ ಬಷ್ಕಮೂಕ.

೨೮ ಕಿಷ್ಕಿಂಧಾಕಾಂಡಃ [ಸರ್ಗಃ

ಬುದ್ದಿ ವಿಜ್ಞಾನಸಂಪನ್ನ ಇಂಗಿತ್ಛೆ ಸರ್ವಮಾಚರ।

ಹ್ಯ ಬುದ್ಧಿಂ ಗತೋ ರಾಜಾ ಸರ್ವಭೂತಾನಿ ಶಾಸ್ತಿ ಹಿ॥ ೧೮ ಸುಗ್ರೀವಸು ಶುಭಂ ವಾಕ್ಕಂ ಶ್ರುತ್ವಾಸರ್ವಂ ಹನೂಮತಃ | ತತಃ ಶುಭತರಂ ವಾಕ್ಯಂ ಹನೂಮಂತಮುವಾಚ ಹ॥ ೧೯

ದೀರ್ಫ್ಥಬಾಹೂ ವಿಶಾಲಾಕ್ಷೌ ಶರಚಾಪಾಸಿಧಾರಿಣ್‌ಾ | ಕಸ್ವ ಸ್ಯಾದ್ಬಯಂ ದೃಷ್ಟ್ವಾಹ್ಯೆತೌ ಸುರಸುತೋಪಮ್‌ ೨೦

ವಾಲಿಪ್ರಣಿಹಿತಾವೇತ್‌ ಶಂಕೇsಹಂ ಪುರುಷೋತಮ್‌

ರಾಜಾನೋ ಬಹುಮಿತ್ರಾಶ್ನ ವಿಶ್ವಾಸೋ ನಾತ್ರ ಹಿ ಕ್ಷಮಃ ೨೧ ಅರಯಶ್ಚಮನುಷ್ಯೇಣ ವಿಜ್ಞೇಯಾಶ್ಚನ್ನಚಾರಿಣಃ।

ವಿಶಸಾನಾಮವಿಶಸ್ತಾರಂಥ್ರೇಷು ಪ್ರಹರಂತಿ ಹಿ ಕತ್ಯೇಷು ವಾಲೀ ಮೇಧಾವೀ ರಾಜಾನೋ ಬಹುದರ್ಶನಾಃ। ಭವಂತಿ ಪರಹಂತಾರಸ್ತೇ ಜ್ಞೇಯಾಃ ಪ್ರಾಕೃತೈರ್ನರೈಃ॥ ೨೩

ಎಚಾರ ವಿವೇಕಗಳನ್ನುಪಯೋಗಿಸಿ ಪರೇಂಗಿತವನ್ನಿರಿತು ಕಾರ್ಯದಲ್ಲಿ ಉದ್ಯುಕನಾಗು. ವಿಚಾರ ವಿವೇಕಗಳಿಲ್ಲದ ರಾಜನು ಪ್ರಜೆಗಳನ್ನು ಪಾಲಿಸಲಾರ'' ಎಂದನು. ಹೀಗೆ ಹನುಮಂತನಾಡಿದ ಯುಕ್ತಿಯುಕವಾದ ಮಾತೆಲ್ಲವನ್ನೂ ಗಮನಿಸಿ, ಸುಗ್ರೀವನು ಯುಕ್ತತರವಾದ ಮಾತನ್ನಾಡಿದನು (೧೮-೧೯). ""ಹನುಮಂತ, ಅವರೀರ್ವರು ಆಜಾನುಬಾಹುಗಳೂವಿಶಾಲಾಕ್ಷರೂ ಆಗಿದ್ದಾರೆ. ಧನುರ್ಬಾಣಗಳನ್ನೂ ಖಡ್ಗಗಳನ್ನೂ ಧರಿಸಿದ್ದಾರೆ. ದೇವಕುಮಾರರಂತಿರುವ ಅವರನ್ನು ನೋಡಿದರೆ ಯಾರಿಗೆ ತಾನೆ ಭಯವಾಗದು ? ನರಶ್ರೇಷ್ಠರನ್ನು ವಾಲಿಯು ಕಳಿಸಿರಬಹುದೆಂದು ನನಗೆ ಸಂದೇಹವಾಗಿದೆ. ರಾಜರಿಗೆ ಬಹುಮಂದಿ ಸ್ನೇಹಿತರಿರುತ್ತಾರೆ. ಆದ್ದರಿಂದ ಇವರನ್ನು ನಂಬುವುದು ಯೋಗ್ಯವಲ್ಲ (೨೦-೨೧). ವೈರಿಗಳು ಗೂಢವೃತ್ತಿಯಿಂದ ಸಂಚರಿಸುವರೆಂಬುದನ್ನು ಮನುಷ್ಯನು ಅರಿತಿರಬೇಕು. ಅವರು ಇತರರಿಗೆ ನಂಬಿಕೆಯನ್ನು ಹುಟ್ಟಿಸಿ ತಾವು ಮಾತ್ರ ಯಾರನ್ನೂ ನಂಬದೆ, ಸಮಯದಲ್ಲಿ ಕೈಕೊಡುತಾರೆ (೨೨). ಇಂತಹ ಕಾರ್ಯದಲ್ಲಿ ವಾಲಿಯು ಬಹಳ ಚತುರ. ರಾಜರು ವಿವಿಧೋಪಾಯಗಳನ್ನು

ಸರ್ಗಃ ೨] ಸುಗ್ರೀವಮಂತ್ರಃ ೨೯

ತೌ ತ್ವಯಾ ಪ್ರಾಕೃತೇನೇವ ಗತ್ವಾಜ್ಞೇಯ್‌ ಪ್ಲವಂಗಮ |

ಇಂಗಿತಾನಾಂ ಪ್ರಕಾರೈಶ್ಚರೂಪವ್ಯಾಭಾಷಣೇನ ಚ॥ ೨೪ ಲಕ್ಷಯಸ್ವತಯೋರ್ಭಾವಂ ಪ್ರಹೃಷ್ಠಮನಸ್‌ೌ ಯದಿ।

ವಿಶ್ವಾಸಯನ್‌ ಪ್ರಶಂಸಾಭಿರಿಂಗಿತೈಶ್ಚಪುನಃ ಪುನಃ ೨೫ ಮಮ್ಮವಾಬಿಮುಖಂ ಸ್ಥಿತ್ವಾ ಪೃಚ್ಛ ತಂ ಹರಿಪುಂಗವ

ಪ್ರಯೋಜನಂ ಪ್ರವೇಶಸ್ಯ ವನಸ್ಕಾಸ್ಕ ಧನುರ್ಧರ್‌॥ ೨೬

ಶುದ್ದಾತ್ಸಾನ್‌ ಯದಿ ತ್ಪೇತ್‌ೌ ಜಾನೀಹಿಂ ತಂ ಪ್ಲುವಂಗಮ। ವ್ಯಾಭಾಷಿತೈರ್ವಾ ವಿಜ್ಞೇಯಾ ಸ್ಯಾದ್ದುಷ್ಟಾದುಷ್ಛತಾ ತಯೋಃ ೨೭ ಆತ್ಯೇವಂ ಕಪಿರಾಜೇನ ಸಂದಿಷ್ಟೋ ಮಾರುತಾತ್ಮಜಃ

ಚಕಾರ ಗಮನೇ ಬುದ್ದಿಂ ಯತ್ರ ತೌ ರಾಮಲಕ್ಷ್ಮಣ್‌ೌ ೨೮

ಬಲ್ಲವರು. ಉಪಾಯಗಳಿಂದ ಆಗದವನ್ನು ಸಂಹರಿಸುತ್ತಾರೆ. ಅವರನ್ನು ಜನರು ಉದಾಸೀನ ವೃತ್ತಿಯಿಂದ ಅಜ್ಞರಂತೆ ಹೋಗಿ ಭೇದಿಸಿ ತಿಳಿಯಬೇಕು (೨೩). ಹನುಮಂತ, ನೀನು ಉದಾಸೀನನಂತೆ ವೇಷಧಾರಿಯಾಗಿ ಹೋಗಿ ಅವರಿಬ್ಬರು ಯಾರೆಂದು ತಿಳಿದುಬಾ. ಅವರ ಮನೋಗತವನ್ನು ಸೂಚಿಸುವ ಚೇಷ್ಟೆಗಳನ್ನೂ ರೂಪವನ್ನೂಮಾತಿನ ಜಾಡನ್ನೂಸೂಕ್ಷ್ಮವಾಗಿ ಪರಿಶೀಲಿಸು (೨೪). ಪರಿಶೀಲಿಸಿ, ಅವರು ಸಂತುಷ್ಟರಾಗಿರುವರೋ ಹೇಗೆಂದು ಅವರ ಹೃದ್ಧತವನ್ನು ತಿಳಿದುಕೊ. ಅವರನ್ನುಹೊಗಳಿ ನಿನ್ನಲ್ಲಿ ನಂಬಿಕೆಯಾಗುವಂತೆ ಮಾಡು. ಅವರ ಇಂಗಿತಗಳನ್ನು ಮತ್ತೆ ಮತ್ತೆ ಗಮನಿಸುತ್ತಿರು. ನೀನು ನನಗೆ ಕಾಣುವಂತೆ ನನಗೆ ಅಭಿಮುಖವಾಗಿ ನಿಂತು ಅವರೊಂದಿಗೆ ಪ್ರಶ್ನೆ ಮಾಡು | ಧನುರ್ಧಾರಿಗಳಾಗಿ ವನಕ್ಕೆ ಬಂದ ಕಾರಣವೇನೆಂದು ಕೇಳು (೨೫-೨೬). ಹೇ ವಾನರೋತ್ತಮ, ಅವರು ಪರಿಶುದ್ಧಹೃದಯರೋ ಹೇಗೆಂಬುದನ್ನುಗೊತ್ತು ಮಾಡು. ಅನ್ಯೋನ್ಯ ಸಂಭಾಷಣೆಯಿಂದ ಅವರು ದುಷ್ಪರೋ ಶಿಷ್ಠರೋ ಎಂದು ತಿಳಿಯಬಹುದು'' ಎಂದು ಹೇಳಿದನು. ಹೀಗೆ ಸುಗ್ರೀವನು ಸಂದೇಶ ವನ್ನೀಯಲು ವಾಯುಪುತ್ರನಾದ ಹನುಮಂತನು ಶ್ರೀರಾಮಲಕ್ಷ್ಮಣರಿದ್ದಲ್ಲಿಗೆ ಹೋಗಬೇಕೆಂದು ನಿರ್ಧರಿಸಿದನು (೨೭-೨೮).

೩೦ ಕಿಷ್ಕಿಂಧಾಕಾಂಡಃ [ಸರ್ಗಃ

ತಥೇತಿ ಸಂಪೂಜ್ಯ ವಚಸ್ತುತಸ್ಯ ತತ್‌ ಕಪೇಃ ಸುಭೀತಸ್ಯ ದುರಾಸದಸ್ಯ ಚ। ಮಹಾನುಭಾವೋ ಹನುಮಾನ್‌ ಯಯ್‌ ತದಾ ಯತ್ರ ರಾಮೋತತಿಬಲಶ್ಚಲಕ್ಷ್ಮಣಃ ರ್ಪಿ

ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ದ್ವಿತೀಯಃಸರ್ಗಃ

ತೃತೀಯ ಸರ್ಗಃ

ಹನೂಮತ್ತೇಷಣಮ್‌ ವಚೋ ವಿಜ್ಞಾಯ ಹನುಮಾನ್‌ ಸುಗ್ರೀವಸ್ಯ ಮಹಾತ್ಮನಃ ಪರ್ವತಾದೃಷ್ಯಮೂಕಾತ್ತುಪುಪ್ಸುವೇ ಯತ್ರ ರಾಘವ್‌

ಕಪಿರೂಪಂ ಪರಿತ್ಯಜ್ಯ ಹನುಮಾನ್‌ ಮಾರುತಾತ್ಮಜಃ | ಭಿಕ್ಷುರೂಪಂ ತತೋ ಭೇಜೇ ಶಠಬುದ್ದಿತಯಾ ಕಪಿಃ ಪಿ

ಪರಾಕ್ರಮಿಯಾದರೂ ಸುಗ್ರೀವನು ಭೀತನಾಗಿದ್ದನು. ಸಮರ್ಥನಾದ ಹನು ಮಂತನು ಆತನ ಮಾತನ್ನುಮನ್ನಿಸಿ ಬಲಾಢ್ಯರಾದ ರಾಮಲಕ್ಷ್ಮಣರಿದ್ದಲ್ಲಿಗೆ ಹೊರ ಡಲು ಸನ್ನದ್ದನಾದನು (೨೯). ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಎರಡನೆಯ ಸರ್ಗ

ಸರ್ಗ ಹನುಮಂತನು ಶ್ರೀರಾಮಲಕ್ಷ್ಮಣರ ಬಳಿಗೆ ಬಂದು ಅವರನ್ನುಪ್ರಶಂಸಿಸುವುದು. ಶ್ರೀರಾಮನ ಸಂತೋಷ. ಲಕ್ಷ್ಮಣನ ಉತ್ತರ. ಹನುಮಂತನು ಮಹಾತ್ಮನಾದ ಸುಗ್ರೀವನ ಅಭಿಪ್ರಾಯವನ್ನು ತಿಳಿದುಕೊಂಡು ಯಷ್ಯಮೂಕಪರ್ವತದಿಂದ ಶ್ರೀರಾಮಲಕ್ಷ್ಮಣರಿದ್ದಲ್ಲಿಗೆ ಧುಮುಕಿದನು. ಮಾರುತಾತ್ಮಜನಾದ ಹನುಮಂತನು ಕಪಿರೂಪವನ್ನು ಪರಿತ್ಯಜಿಸಿ ಭಿಕ್ಷು ವೇಷವನ್ನು ಧರಿಸಿದನು. ವಾಲಿಯು ವಂಚಕನೆಂದು ಭಾವಿಸಿ "ಶಠಂ ಪ್ರತಿ

ಸರ್ಗಃ ೩] ಹನೂಮತ್ತೇಷಣಮ್‌ ೩೧

ತತಃ ಹನುಮಾನ್‌ ವಾಚಾ ಶಕ್ಷ ಯಾ ಸುಮನೋಜಯಾ ಹಿ

ವಿನೀತವದುಪಾಗಮ್ಯ ರಾಘವ್‌ ಪ್ರಣಿಪತ್ಯ ಚ॥ ಆಬಭಾಷೇ5 ತೌ ವೀರ್‌ ಯಥಾವತ್‌ ಪ್ರಶಶಂಸ ಚ।

ಸಂಪೂಜ್ಯ ವಿಧಿವದ್ವೀರ್‌ ಹನುಮಾನ್‌ ಮಾರುತಾತ್ಮಜಃ ಉವಾಚ ಕಾಮತೋ ವಾಕ್ಯಂ ಮೃದು ಸತ್ಯಪರಾಕ್ರಮ್‌। ರಾಜರ್ಷಿದೇವಪ್ರತಿಮ್‌ ತಾಪಸ್‌ ಸಂಶಿತವ್ರತ್‌ ದೇಶಂ ಕಥಮಿಮಂ ಪ್ರಾಪೌೌಭವಂತೌ ವರವರ್ಣಿನ್‌!। ತ್ರಾಸಯಂತ್‌ ಮೃಗಗಣಾನನ್ಯಾಂಶ್ಚವನಚಾರಿಣಃ॥ ಪಂಪಾತೀರರುಹಾನ್‌ ವಕ್ಷಾನ್‌ ವೀಕ್ಷಮಾಣ್‌್‌ ಸಮಂತತಃ

ಇಮಾಂ ನದೀಂ ಶುಭಜಲಾಂ ಶೋಭಯಂತಾ ತಪಸ್ಸಿನ || ಧೈರ್ಯವಂತ್‌ೌ ಸುವರ್ಣಾಬ್‌ ಕೌ ಯುವಾಂ ಚೀರವಾಸಸ್‌್‌। ನಿಃಶ್ರಸಂತೌ ವರಭುಜ್‌ ಪೀಡಯಂತಾವಿಮಾಃ ಪ್ರಜಾಃ

ಶಾಠ್ಯಮ್‌' ಎಂಬ ನ್ಯಾಯದಂತೆ ತನ್ನ ರೂಪವನ್ನು ಮರೆಸಿಕೊಂಡನು (೧-೨). ಅವನು ವಿನೀತನಂತೆ ರಾಮಲಕ್ಷ್ಮಣರ ಬಳಿಗೆ ಬಂದು ನಮಸ್ಕರಿಸಿ, ಮೃದು ಮನೋಜ್ಞವಾದ ವಚನದಿಂದ ಅವರನ್ನು ಮಾತನಾಡಿಸತೊಡಗಿದನು. ಹನುಮಂತನು ವೀರರನ್ನು ಆದರದಿಂದ ಕಂಡು ಯಥಾವತ್ತಾಗಿ ಪ್ರಶಂಸೆ ಮಾಡುತ್ತಸಂಭಾಷಿಸಿದನು (೩-೪). ಸತ್ಯಸಂಧರಾದ ಅವರನ್ನುದ್ದೇಶಿಸಿ ತನಗೆ ಸರಿಯೆನಿಸಿದಂತೆ ಮೃದುವಾಗಿ ಹೇಳಿದನು. ""ಎಲೈ ಮಹಾತ್ಮರೆ, ರಾಜರ್ಷಿ ಗಳಂತೆಯೂ ದೇವಕುಮಾರರಂತೆಯೂ ಇರುವ ನೀವು ಕಠಿಣವ್ರತವನ್ನು ಕೈಕೊಂಡು ತಾಪಸವೇಷವನ್ನು ಧರಿಸಿದ್ದೀರಿ (೫). ನೀವಿಬ್ಬರೂ ಸ್ನಿಗ್ಗವಾದ ಮೈಬಣ್ಣವುಳ್ಳವರಾಗಿದ್ದೀರಿ. ನೀವು ಪ್ರಾಂತಕ್ಕೆ ಯಾವ ನಿಮಿತದಿಂದ ಬಂದಿರ ಬಹುದು ? ಕಾಡಿನಲ್ಲಿರುವ ಮೃಗಗಳನ್ನೂ ಇತರ ವನಚಾರಿಗಳನ್ನೂ ನಿ

ಆಕೃತಿಯಿಂದಲೇ ಅಂಜಿಸುತ್ತಿರುವಿರಿ (೬). ಪಂಪಾ ತೀರದಲ್ಲಿರುವ ವೃಕ್ಷಗಳನ್ನು ಸುತ್ತಲೂ ವೀಕ್ಷಿಸುತ್ತಿದ್ದೀರಿ. ಇಲ್ಲಿಹರಿಯುವ ತಿಳಿನೀರಿನ ನದಿಗೆ ತಪಸ್ವಿಗಳಾದ ನಿಮ್ಮಆಗಮನದಿಂದ ಅಪೂರ್ವವಾದ ಒಂದು ಶೋಭೆಯುಂಟಾಗಿದೆ. ಧೀರರಾದ

3

೩೨ ಕಿಪ್ಕಿಂಧಾಕಾಂಡಃ [ಸರ್ಗಃ

ಸಿಂಹವಿಪ್ರೇಕ್ಷಿತ್‌ ವೀರ್‌ ಸಿಂಹಾತಿಬಲವಿಕ್ರಮ್‌ |

ಶಕ್ರಚಾಪನಿಭೇ ಚಾಪೇ ಗೃಹೀತಾ ಶತ್ರುಸೂದನ್‌ೌ॥ ಶ್ರೀಮಂತೌ ರೂಪಸಂಪನ್ನ್‌ ವೃಷಭಶ್ರೇಷ್ಠವಿಕ್ರಮ್‌ೌ | ಹಸಿಹಸ್ಫೋಪಮಭುಜ್‌ೌ ದೃುತಿಮಂತೌ ನರರ್ಷಭ” ೧೦ ಪ್ರಭಯಾ ಪರ್ವತೇಂದ್ರೋ5 ಯಂ ಯುವಯೋರವಭಾಸಿತಃ ರಾಜ್ಯಾರ್ಹಾವಮರಪ್ರಖ್‌ ಕಥಂ ದೇಶಮಿಹಾಗತ್‌್‌ ॥। ೧೧ ಪದ್ಧಪತ್ರೇಕ್ಷಣೌ ವೀರ್‌ ಜಟಾಮಂಡಲಧಾರಿಣ್‌ ಅನ್ಯೋನ್ಯಸದ್ಭಶೌ ವೀರೌ ದೇವಲೋಕಾದಿವಾಗತ್‌ ೧೨ ಯದೃಚ್ಛಯೇವ ಸಂಪ್ರಾಪೌ ಚಂದ್ರಸೂರ್ಯೌಾ ವಸುಂಧರಾಮ್‌ ವಿಶಾಲವಕ್ಷಸೌ ವೀರೌ ಮಾನುಷ್‌ೌ ದೇವರೂಪಿಣ್‌ ೧೩

ನೀವು ಸುವರ್ಣದಂತೆ ಥಳಥಳಿಸುವ ನಿಮ್ಮ ದೇಹದ ಮೇಲೆ ನಾರುಬಟ್ಟೆಗಳನ್ನು ಸುತಿಕೊಂಡಿದ್ದೀರಲ್ಲ! ( ಮಾರ್ಗಾಯಾಸದಿಂದ) ನಿಟ್ಟುಸಿರುಬಿಡುತ್ತಿದ್ದೀರಿ. ಆಜಾನುಬಾಹುಗಳಾದ ನಿಮ್ಮನ್ನು ಕಂಡು ಇಲ್ಲಿರುವ ಪ್ರಾಣಿಗಳು ಹೆದರುತಿವೆ (೭-೮). ನಿಮ್ಮ ನೋಟವು ಸಿಂಹಗಳ ನೋಟದಂತೆ ಗಂಭೀರವಾಗಿದೆ. ಪರಾಕ್ರಮದಲ್ಲಿ ಸಿಂಹಗಳನ್ನು ಮೀರಿರುವ ವೀರಾಗ್ರಣಿಗಳು ನೀವು. ಇಂದ್ರ ಚಾಪಗಳಂತಿರುವ ದಿವ್ಯಚಾಪಗಳನ್ನು ಹಿಡಿದಿರುವ ಶತ್ರುಸೂದನರು ನೀವು (೯). ಕಾಂತಿಶಾಲಿಗಳೂ ರೂಪಸಂಪನ್ನರೂ ಆಗಿದ್ದೀರಿ. ಮಹಾವೃಷಭದಂತೆ ಹೆಜ್ಜೆ ಯಿಡುತ್ತಿದ್ದೀರಿ. ನಿಮ್ಮ ದೀರ್ಫಬಾಹುಗಳು ಆನೆಯ ಶುಂಡಾದಂಡದಂತೆ ಮನೋಹರವಾಗಿವೆ. ತೇಜೋವಂತರಾದ ನರಶ್ರೇಷ್ಠರು ನೀವು (೧೦). ನಿಮ್ಮ ಪ್ರಭೆಯಿಂದ ಪರ್ವತರಾಜನು ಬೆಳಗುತ್ತಿದ್ದಾನೆ. ದೇವತಾಸದೃಶರಾದ ನೀವು ರಾಜ್ಯವನ್ನಾಳಲು ಅರ್ಹರಾಗಿದ್ದೀರಿ. ನೀವು ವನಪ್ರದೇಶಕ್ಕೆ ಬಂದ ನಿಮಿತ್ತ ವಾದರೂ ಯಾವುದು ? ವೀರಾಗ್ರೇಸರರಾದ ನಿಮ್ಮ ನೇತ್ರಗಳು ಪದ್ಧದಳಂತಿವೆ. ಜಟಿಗಳನ್ನು ಧರಿಸಿದ್ದೀರಿ. ರೂಪಲಾವಣ್ಯಗಳಲ್ಲಿ ಒಬ್ಬರಿಗೊಬ್ಬರು ಹೋಲುತ್ತಿದ್ದೀರಿ. ಶೂರರಾದ ನೀವು ದೇವಲೋಕದಿಂದ ಇಳಿದು ಬಂದಂತೆ ಕಾಣುತ್ರೀರಿ. (೧೧-೧೨). ನಿಮ್ಮನ್ನು ನೋಡಿದರೆ ಚಂದ್ರ ಸೂರ್ಯರೇ ಸ್ವೇಚ್ಛೆಯಾಗಿ ಧರೆಗೆ

ಸರ್ಗಃ ೩] ಹನೂಮತ್ತೇಷಣಮ್‌ ೩೩

ಸಿಂಹಸ್ಕಂಧೌ ಮಹೋತ್ಸಾಹ್‌ೌ ಸಮದಾವಿವ ಗೋವ್ಳಹ್‌ ಆಯತಾಶ್ಚ ಸುವೃತಾಶ್ಚ ಬಾಹವಃ ಪರಿಘೋಪಮಾಃ ೧೪ ಸರ್ವಭೂಷಣಭೂಷಾರ್ಹಾಃ ಕಿಮರ್ಥಂ ವಿಭೂಷಿತಾಃ।

ಉಭಾ ಯೋಗ್ಯಾವಹಂ ಮನ್ಯೇ ರಕ್ಷಿತುಂ ಪೃಥಿವೀಮಿಮಾಮ್‌ 1 ೧೫ ಸಸಾಗರವನಾಂ ಕತ್ಸ್ನಾಂ ವಿಂಧ್ಯಮೇರುವಿಭೂಷಿತಾಮ್‌

ಇಮೇ ಧನುಷೀ ಚಿತ್ರೇ ಶಕ್ಷ್ನೇಚಿತ್ರಾನುಲೇಪನೇ ೧೬ ಪ್ರಕಾಶೇತೇ ಯಥೇಂದ್ರಸ್ಕ ವಜ್ರೇ ಹೇಮವಿಭೂಷಿತೇ।

ಸಂಪೂರ್ಣಾ ನಿಶಿತೈರ್ಬಾಣೈೆಸೂಣಾಶ್ವ ಶುಭದರ್ಶನಾಃ॥ ೧೭ ಜೀವಿತಾಂತಕರೈರ್ಫೊೋರೆೈಃ ಶಸದ್ಧಿರಿವ ಪನ್ನಗ್ಗೆ:

ಮಹಾಪ್ರಮಾಣ್‌ಾ ವಿಸೀರ್ಣೌ ತಪಹಾಟಕಭೂಷಿತ್‌ೌ ೧೮

ಬಂದಂತೆ ಕಾಣುತ್ತದೆ. ವಿಶಾಲವಕ್ಷರಾದ ನೀವು ದೇವರೂಪಿಗಳಾದ ಮಾನುಷ ರಾಗಿರಬಹುದೆ ? (೧೩). ಸಿಂಹ ಸ್ವಂಧರೂ ಉತ್ಪಾಹಶಾಲಿಗಳೂ ಆದ ನೀವು ಮದಿಸಿದ ವೃಷಭಗಳಂತೆ ಗೋಚರಿಸುತ್ತೀರಿ. ಪರಿಘದಂತೆ ನಿಮ್ಮ ಬಾಹುಗಳು ದೀರ್ಫ್ಥವಾಗಿ ದುಂಡಾಗಿವೆ. ಬಾಹುಗಳು ಸಕಲಭೂಷಣಗಳಿಂದ

ಭೂಷಿತವಾಗ ಬೇಕಾಗಿದ್ದರೂ ಭೂಷಣಗಳನ್ನುತೊಡದಿರಲು ಕಾರಣವೇನು? ನೀವಿಬ್ಬರೂ ಜಗತ್ತನ್ನೇ ಸಂರಕ್ಷಿಸಲು ಸಮರ್ಥರೆಂದು ನನ್ನ ಮನಸ್ಸಿಗೆ ತೋರುತ್ತದೆ (೧೪-೧೫). ಸಮುದ್ರಾಂತವಾಗಿ ಅರಣ್ಯಗಳಿಂದಲೂ ವಿಂಧ್ಯ ಮೇರುಪರ್ವತಗಳಿಂದಲೂ ಯುಕ್ತವಾದ ಸಮಸ್ತಭೂಮಂಡಲವನ್ನೇ ನೀವು ರಕ್ಷಿಸಬಲ್ಲಿರಿ. ನುಣುಪಾಗಿಯೂ ಚಿತ್ರಾಕಾರವಾದ ಸುವರ್ಣಾನುಲೇಪನವುಳ್ಳ ದ್ದಾಗಿಯೂ ಇರುವ ಅದ್ಬುತಧನಸ್ಸುಗಳು ದೇವೇಂದ್ರನ ಹೇಮಭೂಷಿತವಾದ ವಜ್ರಾಯುಧದಂತೆ ಕಂಗೊಳಿಸುತಿವೆ. ಸುಂದರಾಕೃತಿಯ ಬತಳಿಕೆಗಳು ನಿತಿಶಾಸ್ತ್ರ ಗಳಿಂದ ತುಂಬಿವೆ (೧೬-೧೭). ಘೋರವಾದ ಅಸ್ವಗಳು ಶತ್ರುವಿನ ಜೀವಿತವನ್ನು ಕೊನೆಗಾಣಿಸಬಲ್ಲವು. ಇವು ರೋಷದಿಂದ ಬಸುಗುಟ್ಳುವ ಸರ್ಪ ಗಳಂತೆ ಕಾಣುತ್ತಿವೆ. ಅತಿದೀರ್ಫವಾಗಿಯೂ ಅಗಲವಾಗಿಯೂ ಇರುವ ನಿಮ್ಮ ಖಡ್ಗಗಳು ಚಿನ್ನದ ಹಿಡಿಗಳಿಂದ ಅಲಂಕೃತವಾಗಿವೆ. ಪರೆಯುರ್ಚಿದ ಪನ್ನಗಗಳಂತೆ

೩೪ ಕಿಷ್ಕಿಂಧಾಕಾಂಡಃ [ಸರ್ಗಃ

ಖಡ್ಡಾವೇತ್‌ೌ ವಿರಾಜೇತೇ ನಿರ್ಮುಕಾವಿವ ಪನ್ನಗ”

ಏವಂ ಮಾಂಪರಿಭಾಷಂತಂ ಕಸ್ಸಾದ್ದೆ ಶೈ ನಾಭಿಭಾಷಧಥಃ || ೧೯ ಸುಗ್ರೀವೋ ನಾಮ ಧರ್ಮಾತ್ಮಾ ಕಶ್ಚಿದ್ಧಾನರಯೂಥಪಃ। ವೀರೋ ವಿನಿಕೃತೋ ಭ್ರಾತ್ರಾ ಜಗದ್ಭ ಮತಿ ದುಃಖತಃ ೨೦ ಪ್ರಾಪೋs ಹಂ ಪ್ರೇಷಿತಸೇನ ಸುಗ್ರೀವೇಣ ಮಹಾತ್ಮನಾ ರಾಜ್ಞಾವಾನರಮುಖ್ಯಾನಾಂ ಹನೂಮಾನ್ನಾಮ ವಾನರಃ॥ ೨೧ ಯುವಾಭ್ಯಾಂ ಸಹ ಧರ್ಮಾತ್ಮಾಸುಗ್ರೀವಃ ಸಖ್ಯಮಿಚ್ಛತಿ | ತಸ್ಯ ಮಾಂ ಸಚಿವಂ ವಿತ್ರಂ ವಾನರಂ ಪವನಾತ್ಮಜಮ್‌ ೨೨

ಭಿಕ್ಷುರೂಪಪ್ರತಿಚ್ಛನ್ನಂ ಸುಗ್ರೀವಪ್ರಿಯಕಾಮ್ಯಯಾ। ಖಯಶ್ಯಮೂಕಾದಿಹ ಪ್ರಾಪಂ ಕಾಮಗಂ ಕಾಮರೂಪಿಣಮ್‌ ೨೩

ಏವಮುಕ್ಹ್ವಾತು ಹನುಮಾಂಸೌ ವೀರ್‌ ರಾಮಲಕ್ಷ್ಮಣ್‌ೌ ವಾಕ್ಯಜ್ಞ್‌ ವಾಕ್ಕಕುಶಲಃ ಪುನರ್ನೋವಾಚ ಕಿಂಚನ ॥1 ೨೪

ಹೊಳೆಯುತ್ತಿವೆ. ಎಲೈ ಮಹಾತ್ಮರೆ, ಪ್ರಕಾರವಾಗಿ ನಾನು ಮಾತಾಡಿಸುತ್ತಿದ್ದರೂ ನೀವು ಉತ್ತರವನ್ನೇಕೆ ಕೊಡುವುದಿಲ್ಲ? (೧೮-೧೯). (ಒಳ್ಳೆಯದು) ಸುಗ್ರೀವ ನೆಂಬ ಧರ್ಮಾತ್ಮನಾದ ವಾನರೇಂದ್ರನೊಬ್ಬನಿದ್ದಾನೆ. ವೀರನು ಅಣ್ಣನ ಉಪಟಳಕ್ಕೆ ಒಳಗಾಗಿ ದುಃಖದಿಂದ ಲೋಕದಲ್ಲಿಅಲೆಯುತ್ತಿದ್ದಾನೆ (೨೦). ಕಪಿರಾಜನೂ ಮಹಾತ್ಸನೂ ಆದ ಸುಗ್ರೀವನು ನನ್ನನ್ನು ಕಳಿಸಿದ್ದರಿಂದ ಇಲ್ಲಿಗೆ ಬಂದಿದ್ದೇನೆ. ನಾನು ಹನುಮಂತನೆಂಬ ಒಬ್ಬ ವಾನರ. ಧರ್ಮಾತ್ಮನಾದ ಸುಗ್ರೀವನು ನಿಮ್ಮೊಡನೆ ಸ್ನೇಹವನ್ನು ಬೆಳೆಸಬೇಕೆಂದಿದ್ದಾನೆ. ನಾನು ಆತನ ಸಚಿವನೆಂದೂ ವಾಯುಪುತ್ರನೆಂದೂ ತಿಳಿಯಿರಿ (೨೧-೨೨). ಸುಗ್ರೀವನಿಗೆ ಹಿತವನ್ನು ಬಯಸಿ ನಾನು ಭಿಕ್ಷುವೇಷದಿಂದ ರೂಪವನ್ನು ಮರೆಸಿಕೊಂಡಿದ್ದೇನೆ. ಯಷ್ಯಮೂಕಗಿರಿಯಿಂದಿಳಿದು ಬಂದಿದ್ದೇನೆ. ನಾನು ಇಷ್ಟಬಂದ ಕಡೆಗೆ ಕ್ಷಣ ಮಾತ್ರದಲ್ಲಿ ಹೋಗಬಲ್ಲೆ ಇಷ್ಟಬಂದ ರೂಪವನ್ನು ಧರಿಸಬಲ್ಲೆ'' ಎಂದನು. ಮಾತಾಡುವುದರಲ್ಲಿ ನಿಪುಣನಾದ ಹನುಮಂತನು, ಮಾತಿನ ಭಾವವನ್ನು ತಿಳಿಯಬಲ್ಲರಾಮಲಕ್ಷ್ಮಣರಿಗೆ ಪ್ರಕಾರ ಹೇಳಿ ಸುಮ್ಮನಾದನು (೨೩-೨೪).

ಸರ್ಗಃ ೩] ಹನೂಮತ್ಸೇಷಣಮ್‌ ೩೫

ಏತಚ್ಛು; ತ್ವಾ ವಚಸಸ್ಕ ರಾಮೋ ಲಕ್ಷ್ಮ ಣಮಬ್ರವೀತ್‌ |

ಪ್ರಹಸ್ಪದದನ: ಶ್ರೀಮಾನ್‌ ಭ್ರಾತರಂ ಪಾರ್ಶ್ರತಃ ಸ್ಥಿತಮ್‌ ೨೫ ಸಚಿವೋ5ಯಂ ಕಪೀಂದ್ರಸ್ಥ ಸುಗ್ರೀವಸ್ಯ ಮಹಾತ್ಮನಃ

ತಮೇವ ಕಾಂಕ್ಷಮಾಣಸ್ಯ ಮಮಾಂತಿಕಮುಪಾಗತಃ॥ ೨೬ ಅಭಿಭಾಷಸ್ವಸ್‌ಮಿತ್ರೇ ಸುಗ್ರೀವಸಚಿವಂ ಕಪಿಮ್‌

ವಾಕ್ಯಜ್ಞಂ ಮಧುರೈರ್ವಾಕ್ಕೆ ಸ್ನೇಹಯುಕ್ತಮರಿಂದವು॥ ನಾನ್ಸಗ್ಲೇದವಿನೀತಸ್ಯ ನಾಯಜುರ್ವೇದಧಾರಿಣಃ। ನಾಸಾಮವೇದವಿದುಷಃ ಶಕ್ಕ ಮೇವಂ ಪ್ರಭಾಷಿತುಮ್‌ ೨೮ ನೂನಂ ವ್ಯಾಕರಣಂ ಕೃತ್ತ ಮನೇನ ಬಹುಧಾ ಶ್ರುತಮ್‌

ಬಹುವ್ಯಾ ಹರತಾನೇನ ಕಿಂಚಿದಪಶಬ್ದಿತಮ್‌ ರಿ ಮುಖೇ ನೇತ್ರಯೋರ್ವಾಪಿ ಲಲಾಟೇ ಭ್ರುವೋಸಥಾ। ಅನ್ಯೇಷ್ಟಸಿ ಗಾತ್ರೇಷು ದೋಷಃ ಸಂವಿದಿತಃ ಕ್ವಚಿತ್‌ ೩೦

ಹನುಮಂತನ ಮಾತನ್ನು ಕೇಳಿ ಶ್ರೀರಾಮನ ಮುಖವು ಅರಳಿತು. ಅವನು ಪಾರ್ಶ್ವದಲ್ಲಿ ನಿಂತಿದ್ದ ತಮ್ಮನಾದ ಲಕ್ಷ್ಮಣನ ಕಡೆಗೆ ತಿರುಗಿ ಉಲ್ಲಾಸದಿಂದ ""ಸೌವಮಿತ್ರಿ, ಇವನು ಮಹಾತ್ಮನೂ ಕಪೀಂದ್ರನೂ ಆದ ಸುಗ್ರೀವನ ಸಚಿವನಂತೆ. ಅವನನ್ನೇ ಹುಡುಕುತ್ತಿರುವ ನನ್ನ ಬಳಿಗೆ (ದೈವಿಕವಾಗಿ) ಬಂದಿದ್ದಾನೆ (೨೫-೨೬). ಲಕ್ಷ್ಮಣ, ಸುಗ್ರೀವ ಸಚಿವನಾದ ಈತನೊಡನೆ ಮಾತನಾಡು. ಇವನು ಮಾತಿನ ಭಾವವನ್ನು ಅರಿಯಬಲ್ಲ, ಮೃದುವಾಕ್ಯಗಳಿಂದ ಸ್ನೇಹಯುಕ್ತವಾಗಿ ಸಂಭಾಷಿಸು (೨೭). ಯಗ್ವೇದ, ಯಜುರ್ವೇದ, ಸಾಮವೇದಗಳನ್ನು ಅರ್ಥಸಹಿತವಾಗಿ

ಅಧ್ಯಯನಮಾಡದಿರುವವನಿಗೆ ರೀತಿಯಲ್ಲಿ ಮಾತನಾಡಲು ಶಕ್ಯವಿಲ್ಲ! ಹನುಮಂತನು ಸಮಸ್ತ ವ್ಯಾಕರಣಶಾಸ್ತ್ರವನ್ನು ಅನೇಕಸಲ ಚೆನ್ನಾಗಿ ವ್ಯಾಸಂಗ ಮಾಡಿರುವುದೇ ನಿಶ್ಚಯ. ಇಷ್ಟುಮಾತಾಡಿದರೂ ಒಂದು ಅಪಶಬ್ದವೂ ಹೊರಡಲಿಲ್ಲ! (೨೮-೨೯). ಇವನು ಮಾತನಾಡುವಾಗ ಮುಖ, ಕಣ್ಣು, ಹಣೆ,

೫x

೩೬ ಕಿಷ್ಕಿಂಧಾಕಾಂಡಃ [ಸರ್ಗಃ

ಆವಿಸರಮಸಂದಿಗ್ಗಮವಿಲಂಬಿತಮದ್ರುತಮ್‌

ಉರಃಸ್ಥಂ ಕಂಠಗಂ ವಾಕ್ಕಂ ವರ್ತತೇ ಮಧ್ಯ ಮೇ ಸಧೇ Il ೩೧ ಸಂಸ್ಥಾ ರಕ್ತ ಮಸಂಪನ್ಮಾಮದ್ರು ತಾಮವಿಲಂಬಿತಾಮ್‌ |

ಉಚ್ಚಾರಯತಿ ಕಲ್ಯಾ ಣೀಂ ವಾಚಂ ಹೃದಯಹಾರಿಣೀಮ್‌ Il ೩೨ ಚಿತ್ರ ಹ್‌ ವಾಚಾ ್ರಿಸ್ಥಾನವ್ಯ ೦ಜನಸ್ಮಯಾ

ಕಸ್ಯ ನಾರಾಧ್ಯ ತೇ ಚಿತಮುದ್ಯ ತಾಸೇರರೇರಪಿ il ೩೩ ಲಾ ಯಸ್ಕ ಜಾ ಭವೇತ್‌ ಪಾರ್ಥಿವಸ್ಯ ತು! ಸಿಧ್ಯಂತಿ ಹಿ ಕಥಂ ತಸ್ಯ ಕಾರ್ಯಾಣಾಂ ಗತಯೋತನಘ॥ ೩೪ ಏವಂ ಗುಣಗಣೈರ್ಯುಕ್ತಾ ಯಸ್ಯ ಸ್ಯುಃ ಕಾರ್ಯಸಾಧಕಾಃ।

ತಸ್ಯ ಸಿದ್ದಂತಿ ಸರ್ವಾರ್ಥಾ ದೂತವಾಕ್ಕಪ್ರಚೋದಿತಾಃ॥ ೩೫

ಹುಬ್ಬುಗಳಲ್ಲಾಗಲಿ ಇತರ ಅಂಗಗಳಲ್ಲಾಗಲಿ ಯಾವ ವಿಕಾರವೂ ಕಾಣಿಸಲಿಲ್ಲ ಮಾತನ್ನು ಅನಾವಶ್ಯಕವಾಗಿ ವಿಸ್ತರಿಸಲಿಲ. ಸಂದೇಹಕ್ಕೆ ಎಡೆಯಾಗುವ ಅಸ್ಫುಟವಾದ ಉಚ್ಚಾರಣೆ ಇಲ್ಲ ಸ್ವಲ್ಪವೂ ತಡವರಿಸಲಿಲ್ಲ (ಅರ್ಥವಾಗದಂತೆ) ಬಹುವೇಗವಾಗಿಯೂ ಮಾತಾಡಲಿಲ್ಲ ಇವನ ವಾಕ್ಯವು ಉರಸ್ಥ ಸ್ಹವೂ ಕಂಠಗವೂ ಆಗಿ ಮಧ್ಯಮಸ್ವರದಲ್ಲಿದೆ* (೩೦- ೩೧). ಲಕ್ಷ್ಮ ಣ, ಈತನು ವ್ಯಾಕರಣ ಶುದ್ಧನಾಗಿಯೂ 'ಕ್ರಮಬದ್ಧವಾಗಿಯೂ ಮಾತಾಡುತಾನೆ. ಈತನ ವಾಕ್ಕರಚನೆ ತ್ವರಿತವೂ ಅಲ್ಲ, ವಿಲಂಬಿತವೂ ಅಲ್ವ ಮಾತಿನ ಶೈಲಿ ಮಧುರವೂ ಚೇತೋಹಾರಿಯೂ ಆಗಿದೆ (೩೨). ಉರಸ್ತು, ಕಂಠ, ಶಿರಸುಗಳಲ್ಲಿಅಭಿವ್ಯಕವಾಗಿ ಆಶ್ಚರ್ಯಕರವಾದ ವಾಣಿಯು ಯಾರನ್ನು ಆನಂದಗೊಳಿಸದು 9 ಕತ್ತರಿಸಲು ಕತ್ತಿಯನ್ನೆತ್ತಿದ ಶತ್ರುವಿನ ಚಿತ್ರವನ್ನೂ ಪ್ರಸೆನ್ನಗೊಳಿಸುವುದು (೩೩). ಲಕ್ಷ್ಮಣ, ಯಾವ ರಾಜನ ಬಳಿ ಇಂಥ ದೂತರಿಲ್ಲವೊ, ಅವನ ವಿವಿಧರಾಜಕಾರ್ಯಗಳು ಹೇಗೆ ತಾನೆ ಫಲಪ್ರದವಾದಾವು? ಬಗೆಯ ಗುಣಗಳಿಂದೊಡಗೂಡಿದ ದೂತರು ಯಾವ ರಾಜನಿಗೆ ಕಾರ್ಯಸಾಧಕರಾಗಿರುವರೋ, ಆತನ ಸಕಲ ಕಾರ್ಯಗಳೂ ಸಿದ್ಧಿಸುತ್ತವೆ ; ದೂತನ ವಾಗ್ವೈಭವದಿಂದಲೇ ನೆರವೇರುತ್ತದೆ'' ಎಂದು ನುಡಿದನು (೩೪-೩೫).

ಫೇ ಅನುಬಂಧವನ್ನು ನೋಡಿ.

ಸರ್ಗಃ ೩] ಹನೂಮತ್ಛೇಷಣಮ್‌ ೩೭

ಏವಮುಕಸ್ತು ಸ್‌ಮಿತ್ರಿಃ ಸುಗ್ರೀವಸಚಿವಂ ಕಪಿಮ್‌ ಅಭ್ಯಭಾಷತ ವಾಕ್ಕಜ್ಲೋ ವಾಕೃಜ್ಞಂ ಪವನಾತ್ಮಜಮ್‌ || ೩೬ ವಿದಿತಾ ನೌ ಗುಣಾ ವಿದ್ದನ್‌ ಸುಗ್ರೀವಸ್ಯ ಮಹಾತ್ಮನಃ ತಮೇವ ಚಾವಾಂ ಮಾರ್ಗಾವಃ ಸುಗ್ರೀವಂ ಪ್ಲವಗೇಶರಮ್‌ ೩೭ ಯಥಾ ಬ್ರವೀಷಿ ಹನುಮನ್‌ ಸುಗ್ರೀವವಚನಾದಿಹ। ತತಥಾ ಹಿ ಕರಿಷ್ಯಾವೋ ವಚನಾತವ ಸತ್ತಮ ತತಸ್ಯ ವಾಕ್ಯಂ ನಿಪುಣಂ ನಿಶಮ್ಯ ಪ್ರಹೃಷ್ಟರೂಪಃ ಪವನಾತ್ಮಜಃ ಕಪಿಃ | ಮನಃ ಸಮಾಧಾಯ ಜಯೋಪಪತ್ತ್‌ ಸಖ್ಯಂ ತದೌ ಕರ್ತುಮಿಯೇಷ ತಾಭ್ಯಾಮ್‌ ೩೯ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇತೃತೀಯ ಸರ್ಗಃ

ಕ್ರೀ

ಆಗ ವಾಕ್ಯಜ್ಞನಾದ ಸೌಮಿತ್ರಿಯು ಸುಗ್ರೀವನ ಮಂತ್ರಿಯಾದ ಹನುಮಂತನನ್ನು ಕುರಿತು ""ಎಲೈ ವಿದ್ವಾಂಸನೆ, ಮಹಾತ್ಮನಾದ ಸುಗ್ರೀವನ ಸದ್ಗುಣಗಳನ್ನು ನಾವು ಕೇಳಿಬಲ್ಲೆವು. ವಾನರೇಂದ್ರನಾದ ಆತನನ್ನೇ ನಾವು ಹುಡುಕಿಕೊಂಡು ಬಂದಿದ್ದೇವೆ. ಹನುಮಂತ, ಸುಗ್ರೀವನ ಮಾತಿನಂತೆ ನೀನು ಏನು ಹೇಳುವೆಯೋ, ಅದನ್ನು ಹಾಗೆಯೇ ನಡೆಸುತ್ತೇವೆ'' ಎಂದನು (೩೬-೩೮). ಲಕ್ಷ್ಮಣನ ಮಾತನ್ನಾಲಿಸಿ ವಾಯುಪುತ್ರನು ಸಂತುಷ್ಟನಾದನು. ಮನಸ್ಸಿಗೆ ಸಮಾಧಾನವಾಯಿತು. ವಾಲಿಯನ್ನು ಜಯಿಸಲು ದಾರಿಯು ಸಿಕ್ಕಿತೆಂದುಕೊಂಡು, ಅವರೊಡನೆ ಸ್ನೇಹವನ್ನು ಬೆಳಸಬೇಕೆಂದು ಹನುಮಂತನು ಉದ್ದೇಶಿಸಿದನು (೩೯).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಮೂರನೆಯ ಸರ್ಗ

Ya

೩೮

ಚತುರ್ಥಃ ಸರ್ಗಃ ಸುಗ್ರೀವಸಮೀಪಗಮನಮ್‌

ತತಃ ಪ್ರಹೃಷ್ಟೋ ಹನುಮಾನ್‌ ಕೃತ್ಯವಾನಿತಿ ತದ್ವಚಃ ಶ್ರುತ್ವಾಮಧುರಭಾವಂ ಸುಗ್ರೀವಂ ಮನಸಾ ಗತಃ॥ ಭವ್ಯೋ ರಾಜ್ಯಾಗಮಸಸ್ಯ ಸುಗ್ರೀವಸ್ಯ ಮಹಾತ್ಮನಃ |

ಯದಯಂ ಕೃತ್ಛವಾನ್‌ ಪ್ರಾಪ್ಯ ಕೃತ್ಯಂ ಚೈತದುಪಾಗತಮ್‌ ಪ್ರಿ ತತಃ ಪರಮಸಂಹೃಹಷ್ಟೋ ಹನುಮಾನ್‌ ಪವಗರ್ಷಭಃ।

ಪ್ರತ್ಯುವಾಚ ತತೋ ವಾಕ್ಯಂ ರಾಮಂ ವಾಕ್ಯವಿಶಾರದಃ

ಕಿಮರ್ಥಂತ್ರಂ ವನಂ ಘೋರಂ ಪಂಪಾಕಾನನಮಂಡಿತಮ್‌ | ಆಗತಃ ಸಾನುಜೋ ದುರ್ಗಂ ನಾನಾವ್ಯಾಲಮೃಗಾಯುತಮ್‌ ||

ಸರ್ಗ ಲಕ್ಷ್ಮಣನು ಹನುಮಂತನಿಗೆ ತಮ್ಮ ವೃತ್ತಾಂತವನ್ನು ತಿಳಿಸುವುದು. ಅವರೆಲ್ಲರೂ ಸುಗ್ರೀವನ ಸಮೀಪಕ್ಕೆ ಹೋಗುವುದು.

ಶ್ರೀರಾಮನು ಸುಗ್ರೀವನಲ್ಲಿ ಕಾರ್ಯಾರ್ಥಿಯಾಗಿರುವನೆಂಬ ಲಕ್ಷ್ಮಣನ ಮಾತನ್ನು ಕೇಳಿ ಹನುಮಂತನಿಗೆ ಆನಂದವಾಯಿತು.. ಸುಗ್ರೀವನ ವಿಷಯದಲ್ಲಿ ರಾಮಲಕ್ಷ್ಮಣರು ಸೌಮ್ಯಭಾವದಲ್ಲಿರುವರೆಂದು ಗೊತ್ತಾಯಿತು. ಅವನು ಮನಸ್ಸಿನಲ್ಲಿಸುಗ್ರೀವನನ್ನುಸ್ಥರಿಸಿಕೊಂಡು, ""ಆಹಾ! ಮಹಾತ್ಮನಾದ ಸುಗ್ರೀವನಿಗೆ ರಾಜ್ಯಪ್ರಾಪ್ತಿಯು ಮಂಗಳಕರವಾಗಿ ಸನ್ನಿಹಿತವಾಯಿತು. ಈತನು ಅವನಿಂದ ಪ್ರಯೋಜನವನ್ನುಪೇಕ್ಷಿಸಿ ಬಂದಿದ್ದಾನೆ. ಈತನ ಕಾರ್ಯವು ಸುಗ್ರೀವನಿಂದ ಸಾಧ್ಯ ಬೇಕಾಗಿದೆ'' ಎಂದು ಕೊಂಡನು (೧-೨). ವಾಗ್ನಿಯಾದ ವಾನರೋತಮ ಆನಂದದಿಂದ ಹಿಗ್ಗುತ್ತ ಶ್ರೀರಾಮನನ್ನು ನೋಡಿ ""ಹೇ ಮನುಜೋತ್ತಮ, ಘೋರವಾದ ದಂಡಕಾರಣ್ಯಕ್ಕೆ - ಅದರಲ್ಲಿಯೂ ಪಂಪಾತೀರವನಕ್ಕೆ ಬಂದುದೇಕೆ ? ದುರ್ಗಮವೂ ಕ್ರೂರ ಜಂತುಗಳಿಗೆ ನೆಲೆಯೂ ಆದ ಅರಣ್ಯಕ್ಕೆ ತಮ್ಮನೊಡನೆ* ಬಂದುದೇಕೆ9''ಎಂದು ಕೇಳಿದನು (೩-೪). ಆಗ ಶ್ರೀರಾಮನ ಇಂಗಿತವನ್ನರಿತು ಲಕ್ಷ್ಮಣನು, ಶ್ರೀರಾಮನು ಮಹಾನುಭಾವನೆಂದೂ ದಶರಥ

ಲಕ್ಷ್ಮಣನು ತಮ್ಮನೆಂಬುದನ್ನು ರೂಪಸಾದ್ಧಶ್ವದಿಂದಲೂ ಮಾತಾಡುವಂತೆ ಶ್ರೀರಾಮನು ಲಕ್ಷ್ಮಣನನ್ನು ಪ್ರೇರಿಸಿದ್ದರಿಂದಲೂ ಹನುಮಂತನೂ ಊಹಿಸಿಕೊಂಡಿದ್ದಾನೆ.

ಸರ್ಗಃ ೪] ಸುಗ್ರೀವಸಮೀಪಗಮನಮ್‌ ೩೯

ತಸ್ಯ ತದ್ವಚನಂ ಶ್ರುತ್ವಾಲಕ್ಷ್ಮಣೋ ರಾಮಚೋದಿತಃ

ಆಚಚಕ್ಷೇ ಮಹಾತ್ಮಾನಂ ರಾಮಂ ದಶರಥಾತ್ಮಜಮ್‌ Il ರಾಜಾ ದಶರಥೋ ನಾಮ ದ್ಯುತಿಮಾನ್‌ ಧರ್ಮವತಲಃ। ಚಾತುರ್ವರ್ಣ್ಯಂ ಸಧರ್ಮೇಣ ನಿತ್ಯಮೇವಾಭ್ಯಪಾಲಯತ್‌ || ದ್ವೇಷ್ಟಾವಿದ್ಯತೇ ತಸ್ಯ ದ್ವೇಷ್ಟಿಕಂಚನ

ಸಚ ಸರ್ವೇಷು ಭೂತೇಷು ಪಿತಾಮಹ ಇವಾಪರಃ ಕಿ

ಅಗ್ನಿಷ್ಟೋಮಾದಿಭಿರ್ಯಜ್ಞೆ ಎರಿಷ್ಕವಾನಾಪದಕ್ಷಿಣ್ಟೆ: ತಸ್ಕಾಯಂ ಪೂರ್ವಜಃ ಪುತ್ರೋ ರಾಮೋ ನಾಮ ಜನ್ಫಃ ಶ್ರುತಃ॥ ಶರಣ್ಯಃ ಸರ್ವಭೂತಾನಾಂ ಪಿತುರ್ನಿರ್ದೇಶಪಾರಗಃ।

ವೀರೋ ದಶರಥಸ್ಕಾಯಂ ಪುತ್ರಾಣಾಂ ಗುಣವತಮಃ ರಾಜಲಕ್ಷಣಸಂಪನ್ನಃ ಸಂಯುಕೋ ರಾಜಸಂಪದಾ॥ ರಾಜ್ಯದ್ಧಷ್ಟೋವನೇ ವಸುಂ ಮಯಾ ಸಾರ್ಧಮಿಹಾಗತಃ ೧೦

ರಾಜನ ಪುತ್ರನೆಂದೂ ತಿಳಿಸಲಾರಂಭಿಸಿದನು. ""ವಾನರೋತ್ತಮ, ದಶರಥನೆಂಬ ಮಹಾರಾಜನೊಬ್ಬನಿದ್ದನು. ಅವನು ತೇಜಸ್ವಿಯೂ ಧರ್ಮವತ್ಸಲನೂ ಆಗಿ ಚಾತುರ್ವರ್ಣ್ಯವನ್ನು ರಾಜಧರ್ಮಾನುಸಾರವಾಗಿ ಸದಾ ಪಾಲಿಸಿಕೊಂಡು ಬರುತ್ತಿದ್ದನು (೫-೬). ಲೋಕದಲ್ಲಿ ಒಬ್ಬರೂ ಅವನನ್ನು ದ್ವೇಷಿಸಲಿಲ್ಲ; ಅವನೂ ಒಬ್ಬರನ್ನೂ ದ್ವೇಷಿಸಲಿಲ್ಲ ಅವನು ಸಕಲ ಜೀವಜಾತಗಳಿಗೆ ಬ್ರಹ್ಮ ದೇವನಂತೆ ಪೂಜ್ಯನಾಗಿದ್ದನು. ದಶರಥಮಹಾರಾಜನು ಬಹುದಕ್ಷಿಣೆಗಳನ್ನಿತ್ತು ಅಗ್ನಿಷ್ಟೋಮಾದಿ ವಿವಿಧ ಯಜ್ಞಗಳನ್ನು ನೆರವೇರಿಸಿದನು. ಈತನು ಮಹಾ ಪುರುಷನ ಜ್ಯೇಷ್ಠಪುತ್ರ. "ಶ್ರೀರಾಮ ' ಎಂದು ಜನರು ಕರೆಯುತ್ತಾರೆ (೭-೮). ಸಕಲಭೂತಗಳೂ ಇವನಿಗೆ ಶರಣಾಗಿ ಸಂರಕ್ಷಣೆಯನ್ನು ಪಡೆಯಬಹುದು. ತಂದೆಯ ಆಜ್ಞೆಯನ್ನು ನಡೆಸುವುದು ಇವನ ವ್ರತ. ವೀರನು ದಶರಥ ರಾಜನ ಪುತ್ರರಲ್ಲಿಬಹಳ ಗುಣಶಾಲಿ (೯). ಸಮಸ್ತರಾಜಲಕ್ಷಣಗಳೂ ಇವನಲ್ಲಿ ನೆಲೆಸಿವೆ. ರಾಜಸಂಪತಿಗೆ ಇವನು ಅರ್ಹನಾಗಿದ್ದಾನೆ. ಆದರೂ ಒಂದಾನೊಂದು ಕಾರಣದಿಂದ ರಾಜ್ಯಭ್ರಂಶವನ್ನು ಹೊಂದಿ ವನವಾಸಕ್ಕಾಗಿ ಬಂದಿದ್ದಾನೆ.

ದತ್‌

೪೦ ಕಿಪ್ಕಿಂಧಾಕಾಂಡಃ [ಸರ್ಗಃ

ಭಾರ್ಯಯಾ ಮಹಾತೇಜಾಃ ಸೀತಯಾನುಗತೋ ವಶೀ।

ದಿನಕ್ಷಯೇ ಮಹಾತೇಜಾಃ ಪ್ರಭಯೇವ ದಿವಾಕರಃ ೧೧ ಅಹಮಸ್ಕಾವರೋ ಭ್ರಾತಾ ಗುಣ್ಳರ್ದಾಸ್ಯಮಪಾಗತಃ

ಕತಜ್ಞಸ್ಯ ಬಹುಜ್ಜಸ್ಕ ಲಕ್ಷ್ಮಣೋ ನಾಮ ನಾಮತಃ ೧೨ ಲ್‌ ರೆ ಇಳ

ಸುಖಾರ್ಹಸ್ಕ ಮಹಾರ್ಹಸ್ಥ ಸರ್ವಭೂತಹಿತಾತ್ಮನಃ

ಐಶ್ವರ್ಯೇಣ ಹೀನಸ್ಕ ವನವಾಸಾತ್ರಿತಸ್ಯ ೧೩ ರಕ್ಷಸಾಪಹೃತಾ ಭಾರ್ಯಾ ರಹಿತೇ ಕಾಮರೂಪಿಣಾ।

ತಚ್ಚನ ಜ್ಞಾಯತೇ ರಕ್ಷಃ ಪತ್ನೀ ಯೇನಾಸ್ಕ ಸಾ ಹೃತಾ॥ ೧೪ ದನುರ್ನಾಮ ದಿತೇಃ ಪುತ್ರಃ ಶಾಪಾದ್ರಾಕ್ಷಸತಾಂ ಗತಃ

ಆಖ್ಯಾತಸೇನ ಸುಗ್ರೀವಃ ಸಮರ್ಥೊೋ ವಾನರರ್ಷಭಃ॥ ೧೫

ಇವನೊಡನೆ ನಾನೂ ಬಂದೆನು. ಮಹಾತೇಜಸ್ವಿಯೂ ಜಿತೇಂದ್ರಿಯನೂ ಆದ ಶ್ರೀರಾಮನೊಡನೆ ಈತನ ಪತ್ನಿಯಾದ ಸೀತಾ ದೇವಿಯೂ ಬಂದಳು. ಹನುಮಂತ, ತೇಜೋರಾಶಿಯಾದ ಸೂರ್ಯನನ್ನು ಸಾಯಂಕಾಲದಲ್ಲಿಯೂ ಪ್ರಭೆಯು ಹಿಂಬಾಲಿಸುವಂತೆ ಅವಳು ಶ್ರೀರಾಮನೊಡನೆ ಬಂದಳು (೧೦-೧೧). ನಾನು ಇವನ ತಮ್ಮ ಇವನ ಸದ್ಗುಣಗಳಿಗೆ ಮಾರುಹೋಗಿ ಇವನ ದಾಸನಾಗಿದ್ದೇನೆ. ಶ್ರೀರಾಮನು ತನಗೆ ಮಾಡಿದ ಉಪಕಾರವನ್ನು ಮರೆಯುವವನಲ್ಲ ಇವನು ಸರ್ವಶಾಸ್ತವಿಶಾರದ. ನನ್ನ ಹೆಸರು ಲಕ್ಷ್ಮಣ (೧೨). ಹನುಮಂತ, ಸುಖಾರ್ಹನಾದ ನನ್ನಅಣ್ಣನು ಮಹತ್ತರವಾದ ಪದವಿಯಲ್ಲಿರುವ ಅರ್ಹತೆಯನ್ನು ಪಡೆದಿದ್ದಾನೆ. ಸಕಲಪ್ರಾಣಿಗಳಿಗೂ ಇವನು ಹಿತವನ್ನೇ ಬಯಸುತ್ತಾನೆ. ಈಗ ಐಶ್ವರ್ಯ ಹೀನನಾಗಿ ವನವಾಸವನ್ನು ಆಶ್ರಯಿಸಿದ್ದಾನೆ. ವಾನರೋತ್ತಮ, ಹೀಗಿರುವಾಗ ನಾವಿಬ್ಬರೂ ಇಲ್ಲದ ಸಮಯದಲ್ಲಿ ಕಾಮರೂಪಿಯಾದ ಒಬ್ಬ ರಾಕ್ಷಸನು ಈತನ ಪತ್ನಿಯನ್ನು ಅಪಹರಿಸಿಬಿಟ್ಟನು. ರಾಕ್ಷಸನು ಎಲ್ಲಿದ್ದಾನೆಂದು ಇದುವರೆಗೂ ತಿಳಿಯಲಿಲ್ಲ (೧೩-೧೪). ನಾವು ದಿತಿಪುತ್ರನಾದ ದನು ಎಂಬವನನ್ನು ಕಂಡೆವು. ಅವನು ಶಾಪವಶದಿಂದ ರಾಕ್ಷಸನಾಗಿದ್ದನು. ಆತನು ನಮ್ಮನ್ನು ಕುರಿತು "ಸುಗ್ರೀವನೆಂಬ ಸಮರ್ಥನಾದ ವಾನರೇಂದ್ರನೊಬ್ಬನಿದ್ದಾನೆ.

ಸರ್ಗಃ ೪] ಸುಗ್ರೀವಸಮೀಪಗಮನಮ್‌ ೪೧

ಜ್ಞಾಸ್ಯತಿ ಮಹಾವೀರ್ಯಸವ ಭಾರ್ಯಾಪಹಾರಿಣಮ್‌ ಏವಮುಕಾ ಶ್ವ ದನುಃ ಸ್ಪರ್ಗಂ ಭ್ರಾಜಮಾನೋ ಗತಃ ಸುಖಮ್‌ ೧೬

ಏತತೇ ಸರ್ವಮಾಖ್ಯಾತಂ ಯಾಥಾತಥ್ಯೇನ ಪುಚ್ಛತಃ

ಅಹಂ ಚೈವ ಹಿ ರಾಮಶ್ಚಸುಗ್ರೀವಂ ಶರಣಂ ಗತ್‌ ೧೭ ಏಷ ದತ್ವ್ಯಾಚ ವಿತಾನಿ ಪ್ರಾಪ್ಯ ಚಾನುತ್ತಮಂ ಯಶಃ ಲೋಕನಾಥಃ ಪುರಾ ಭೂತ್ತಾಸುಗ್ರೀವಂ ನಾಥಮಿಚ್ಛತಿ If ೧೮ ಪಿತಾ ಯಸ್ಕ ಪುರಾ ಹ್ಯಾಸೀಚ್ಛರಣ್ಯೋ ಧರ್ಮವತಲಃ | ತಸ್ಯ ಪುತ್ರಃ ಶರಣ್ಯಶ್ನಸುಗ್ರೀವಂ ಶರಣಂ ಗತಃ ೧೯

ಸರ್ವಲೋಕಸ್ಯ ಧರ್ಮಾತ್ಥಾಶರಣ್ಯಃ ಶರಣಂ ಪುರಾ ಗುರುರ್ಮೇ ರಾಘವಃ ಸೋರ5 ಯಂ ಸುಗ್ರೀವಂ ಶರಣಂ ಗತಃ॥ ೨೦

ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ ರಾಮೋ ವಾನರೇಂದ್ರಸ್ಯ ಪ್ರಸಾದಮಭಿಕಾಂಕ್ಷತೇ ೨೧

ಅವನು ಮಹಾಶೂರನು. ಸೀತಾದೇವಿಯನ್ನಪಹರಿಸಿದ ರಾಕ್ಷಸನನ್ನುಸುಗ್ರೀವನು ಗೊತುಮಾಡಿಕೊಡುವನು' ಎಂದು ಹೇಳಿ ದಿವ್ಯರೂಪದಿಂದ ಎರಾಜಿಸುತ್ತಸ್ವರ್ಗ ಲೋಕಕ್ಕೆ ಹೊರಟುಹೋದನು (೧೫-೧೬). ವಾನರೋತ್ತಮ, ನೀನು ಕೇಳಿದುದರಿಂದ ನಮ್ಮ ವೃತ್ತಾಂತವನ್ನು ಯಥಾ ಸ್ಥಿತವಾಗಿ ಹೇಳಿದ್ದೇನೆ. ನಾನು ನಮ್ಮಣ್ಣನಾದ ಶ್ರೀರಾಮನೂ ಸುಗ್ರೀವನನ್ನು ನಂಬಿ ಮರೆಹೊಕ್ಕಿದ್ದೇವೆ. ಶ್ರೀರಾಮನು ಅರ್ಥಿಗಳಿಗೆ ಬೇಕಾದಷ್ಟು ಧನವನ್ನು ಕೊಟ್ಟು ಪೋಷಿಸಿದನು. ಲೋಕೋತ್ತರವಾದ ಕೀರ್ತಿಯನ್ನು ಪಡೆದವನು. ಹಿಂದೆ ಲೋಕನಾಥನೆನಿಸಿ ಕೊಂಡಿದ್ದವನು ಈಗ ಸುಗ್ರೀವನನ್ನುನಾಥನನ್ನಾಗಿ ಬಯಸುತ್ತಿದ್ದಾನೆ (೧೭-೧೮). ಯಾರ ತಂದೆಯು ಶರಣಾಗತ ರಕ್ಷಕನಾಗಿ ಧರ್ಮವತ್ತಲನೆನಿಸಿಕೊಂಡಿದ್ದನೋ ಆತನ ಪುತ್ರನು-ಸರ್ವಲೋಕ ಶರಣ್ಯನು-ಈಗ ಸುಗ್ರೀವನಿಗೆ ಶರಣಾಗತ ನಾಗಿದ್ದಾನೆ (೧೯). ಧರ್ಮಾತ್ಮನಾಗಿ ಸಕಲ ಜನರಿಗೆ ಆಶ್ರಯದಾತನೂ ಭಯತ್ರಾತನೂ ಆಗಿ, ನನ್ನ ಗುರುವಾದ ರಘುಕುಲತಿಲಕನು ಸುಗ್ರೀವನಿಗೆ ಶರಣಾಗಿದ್ದಾನೆ. ಯಾರ ಅನುಗ್ರಹದಿಂದ ಪ್ರಜೆಗಳು ಸತತವೂ ಸಂತೃಪ್ತ

೪೨ ಕಿಷ್ಟಿಂಧಾಕಾಂಡಃ [ಸರ್ಗಃ

ಯೇನ ಸರ್ವಗುಣೋಪೇತಾಃ ಪೃಥಿವ್ಯಾಂ ಸರ್ವಪಾರ್ಥಿವಾಃ

ಮಾನಿತಾಃ ಸತತಂ ರಾಜ್ಞಾ ಸದಾ ದಶರಥೇನ ವೈ ೨೨ ತಸ್ಕ್ಯಾಯಂ ಪೂರ್ವಜಃ ಪುತ್ರಸ್ತಿಷು ಲೋಕೇಷು ವಿಶ್ರುತಃ

ಸುಗ್ರೀವಂ ವಾನರೇಂದ್ರಂ ತು ರಾಮಃ ಶರಣಮಾಗತಃ॥ ೨೩ ಶೋಕಾಭಿಭೂತೇ ರಾಮೇ ತು ಶೋಕಾರ್ತೇ ಶರಣಂ ಗತೇ। ಕರ್ತುಮರ್ಹತಿ ಸುಗ್ರೀವಃ ಪ್ರಸಾದಂ ಹರಿಯೂಥಪಃ॥ ೨೪ ಏವಂ ಬ್ರುವಾಣಂ ಸ್‌ಮಿತ್ರಿಂ ಕರುಣಂ ಸಾಶ್ರುಲೋಚನಮ್‌ ಹನುಮಾನ್‌ ಪ್ರತ್ಯುವಾಚೇದಂ ವಾಕ್ಯಂ ವಾಕೃವಿಶಾರದಃ ೨೫ ಈದ್ಭಶಾ ಬುದ್ದಿಸಂಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ

ದ್ರಷ್ಟವ್ಯಾ ವಾನರೇಂದ್ರೇಣ ದಿಷ್ಟ್ಯಾದರ್ಶನಮಾಗತಾಃ॥ ೨೬

ರಾಗಿದ್ದಾರೋ ಅಂಥ ಶ್ರೀರಾಮನು ವಾನರೇಂದ್ರನ ಅನುಗ್ರಹವನ್ನು ಬಯಸುತ್ತಿದ್ದಾನೆ (೨೦-೨೧). ಅಯ್ಯಾ ಹನುಮಂತ, ನಮ್ಮ ತಂದೆಯಾದ ದಶರಥಮಹಾರಾಜನು ಗುಣಶಾಲಿಗಳಾದ ಸಮಸ್ತಭೂಪಾಲರನ್ನೂ ಕರೆಸಿ ಸರ್ವದಾ ಆದರಿಸುತ್ತಿದ್ದನು. ಮಹಾರಾಜನ ಜೇಷ್ಠಪುತ್ರನಾದ ಈತನು ಮೂರು ಲೋಕಗಳಲ್ಲಿಯೂ ವಿಖ್ಯಾತನಾದವನು. ಶ್ರೀರಾಮನು ಸುಗ್ರೀವನನ್ನು ನಂಬಿ ಸಹಾಯಾರ್ಥಿಯಾಗಿ ಬಂದಿದ್ದಾನೆ (೨೨-೨೩). ಹೀಗೆ ಶೋಕಾವಿಷ್ಠನಾದ ಶ್ರೀರಾಮನು ಸುಗ್ರೀವನ ಆಶ್ರಯವನ್ನು ಬಯಸಿ ಬಂದಿದ್ದಾನೆ. ಶೋಕಾರ್ತನಾದ ಈತನ ವಿಷಯದಲ್ಲಿ ವಾನರೇಂದ್ರನು ಪ್ರಸನ್ನನಾಗಲಿ'' ಎಂದು ಲಕ್ಷ್ಮಣನು ಹೇಳಿದನು. ಹೀಗೆ ದೈನ್ಯದಿಂದ ಹೇಳುವಾಗ ಲಕ್ಷ್ಮಣನ ಕಣ್ಣಿನಲ್ಲಿ ನೀರು ತುಂಬಿತ್ತು (೨೪-೨೫). ಆಗ ಮಾತಿನಲ್ಲಿನಿಪುಣನಾದ ಹನುಮಂತನು ""ಆರ್ಯ-ಲಕ್ಷ್ಮಣ,ಇಂಥ ಬುದ್ಧಿಸಂಪನ್ನರೂ ಜಿತಕ್ರೋಧರೂ ಜಿತೇಂದ್ರ ರೂ ಆದ ಮಹಾಪುರುಷರನ್ನು ನಮ್ಮ ಸುಗ್ರೀವನು ಹುಡುಕಿಕೊಂಡುಹೋಗಿ ದರ್ಶನಮಾಡಬೇಕಾದದ್ದು ಯುಕ್ತ ಹೀಗಿರಲು ಅವನ ಭಾಗ್ಯದಿಂದ ನೀವಾಗಿ ದರ್ಶನವನ್ನುಕೊಟ್ಟಿದ್ದೀರಿ (೨೬).

ಸರ್ಗಃ ೪] ಸುಗ್ರೀವಸಮೀಪಗಮ:ಮ್‌ ೪೩

ಹಿ ರಾಜ್ಯಾತ್‌ ಪರಿಭ್ರಷ್ಠ ಕೃತವೈರಶ್ಚವಾಲಿನಾ

ಹೃತದಾರೋ ವನೇ ತ್ಯಕ್ರೋಬ್ರಾತ್ರಾ ವಿನಿ!ತೋ ಭ್ಹಶಮ್‌ ೨೭ ಕರಿಷ್ಯತಿ ಸಾಹಾಯ್ಕಂ ಯುವಯೋರ್ಭ್ಭಾಸ್ಕರಾತ್ನಜಃ

ಸುಗ್ರೀವಃ ಸಹ ಚಾಸ್ಥಾಭಿಃ ಸೀತಾಯಾಃ ಪನಿಮಾರ್ಗಣೇ ವಿಲ ಅತ್ಯೇವಮುಕಾ ಶಿ ಹನುಮಾನ್‌ ಶಕ್ಷ್ಣಂ ಮಧುರಯಾಗಿರಾ।

ಬಭಾಷೇ ಸಾಧು ಗಚ್ಛೇಮ ಸುಗ್ರೀವಮಿತಿ ರಾಘವಮ್‌ ರ್ಪೀಿ

ಏವಂ ಬ್ರುವಾಣಂ ಧರ್ಮಾತ್ಮಾ ಹನುಮಂತಂ ಲಕ್ಷ್ಮಣಃ। ಪ್ರತಿಪೂಜ್ಯ ಯಥಾನ್ಯಾಯಮಿದಂ ಪ್ರೋವಾಚ ರಾಘವಮ್‌ ೩೦ ಕಪಿಃ ಕಥಯತೇ ಹೃಷ್ಣೋ ಯಥಾಯಂ ಮಾರುತಾತ್ಮಜಃ ಕೃತ್ಯವಾನ್‌ ಸೋಪಿ ಸಂಪ್ರಾಪ್ಯ ಕೃತಕೃತ್ಯೋತಸಿ ರಾಘವ॥ ೩೧ ಪ್ರಸನ್ನಮುಖರ್ವಣಶ್ಚವ್ಯಕಂ ಹೃಷಶ್ಸ ಭಾಷತೇ ನಾನೃತಂ ವಕ್ಷ್ಯತೇ ಧೀರೋ ಹನುಮಾನ್‌ ಮಾರುತಾತ್ಮಜಃ [| ೩೨ ಅವನೂ ಕೂಡ ಅಣ್ಣನಾದ ವಾಲಿಯೊಡನೆ ವೈರವನ್ನುಬೆಳೆಸಿಕೊಂಡು ರಾಜ್ಯ ಭ್ರಷ್ಟನಾಗಿದ್ದಾನೆ. ವಾಲಿಯು ಸುಗ್ರೀವನ ಹೆಂ:ಡತಿಯನ್ನಪಹರಿಸಿ ಅವನನ್ನು ಪೀಡಿಸಿ ಕಾಡಿಗೆ ಅಟ್ಟಿದ್ದಾನೆ. ಸೂರ್ಯಪುತ್ರನಾಬ ಸುಗ್ರೀವನು ನಿಮಗೆ ನಿಶ್ಚಯ ವಾಗಿಯೂ ಸಹಾಯವನ್ನು ಮಾಡುವನು. ಅವನು ನಮ್ಮ ಸಹಾಯದಿಂದ ಸೀತಾ ದೇವಿಯನ್ನು ಹುಡುಕಲು ನೆರವಾಗುನು'' ಎಂದು ವಿನಯದಿಂದ ಮಧುರವಾಗಿ ನುಡಿದನು. ಅನಂತರ ವಾಯುಪುತ್ರನು "ಒಳ್ಳೆಯದು. ನಾವು ಸುಗ್ರೀವನ ಸಮೀಪಕ್ಕೆ ಹೋಗೋಣ'' ಎಂದನು (೨೭-೨೯). ಆಗ ಧರ್ಮಾತ್ಮನಾದ ಲಕ್ಷ್ಮಣನು ಹನುಮಂತನನ್ನು ಶ್ಲಾಘಿಸಿ, ಶ್ರೀರಾಮನನ್ನುದ್ದೇಶಿಸಿ"" ಅಣ್ಣ, ವಾಯು ಪುತ್ರನಾದ ವಾನರನು ಸಂತುಷ್ಟನಾಗಿ ಮಾತನಾಡುತ್ತಿದ್ದಾನೆ. ಇವನೂ ಕಾರ್ಯಾರ್ಥಿಯಾಗಿ ನಮ್ಮಲ್ಲಿಗೆ ಬಂದಿದ್ದಾನೆ. ನಿನ್ನಣಾರ್ಯವು ಸಿದ್ಧಿಸಿದಂತೆಯೇ ಸರಿ (೩೦-೩೧). ಸ್ಪಷ್ಟವಾಗಿ ಇವನ ಮುಖವು ಖ್ರಸನ್ನವಾಗಿದೆ. ಸಂತೋಷ ದಿಂದ ಸಂಭಾಷಿಸುತ್ತಿದ್ದಾನೆ. ಧೀರನಾದ ವಾಯುಪುತ್ರನು ಅಸತ್ಯವನ್ನು ಹೇಳಲಾರ'' ಎಂದು ಹೇಳಿದನು (೩೨).

3x

೪೪ ಕಿಷ್ಕಿಂಧಾಕಾಂಡಃ [ಸರ್ಗಃ

ತತಃ ತು ಮಹಾಪ್ರಾಜ್ಞೋ ಹನುಮಾನ್‌ ಮಾರುತಾತ್ಮಜಃ |

ಜಗಾಮಾದಾಯ ತೌ ವೀರ್‌ ಪರಿರಾಜಾಯ ರಾಘವ್‌ ೩೩

ಭಿಕ್ಷುರೂಪಂ ಪರಿತ್ಯಜ್ಯ ವಾನರಂ ರೂಪಮಾಸ್ಥಿತಃ

ಪೃಷ್ಠಮಾರೋಪ್ಯ ತೌ ವೀರ್‌ ಜಗಾಮ ಕಪಿಕುಂಜರಃ॥ ೩೪ ತು ವಿಪುಲಯಶಾಃ ಕಪಿಪ್ರವೀರಃ

ಪವನಸುತಃ ಕತಕೃಶ್ಯವತ್‌ ಪ್ರಹೃಪ|! ಗಿರಿವರಮುರುವಿಕ್ರಮಃ ಪ್ರಯಾತಃ ಸುಶುಭಮತಿಃ ಸಹ ರಾಮಲಕ್ಷ ಾಭ್ಯಾಮ್‌ ೩೫ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಚತುರ್ಥಃಸರ್ಗಃ

Q “ಸ Nu ರ್‌

ಅನಂತರ ಮಹಾಮೇಧಾವಿಯಾದ ಕಪಿಕುಂಜರನು ಭಿಕ್ಷುವೇಷವನ್ನು ಪರಿತ್ಯಜಿಸಿ ತನ್ನ ವಾನರರೂಪವನ್ನು ಧರಿಸಿ, ವೀರಾಗ್ರಗಣ್ಯರಾದ ಶ್ರೀರಾಮ ಲಕ್ಷ್ಮಣರನ್ನು ತನ್ನ ಹೆಗಲಮೇಲೆ ಕುಳ್ಳಿರಿಸಿಕೊಂಡು ಸುಗ್ರೀವನ ಸಮೀಪಕ್ಕೆ ಹೊರಟನು (೩೩-೩೪). ಹೀಗೆ ಕೀರ್ತಿಸಂಪನ್ನನಾದ ಕಪಿಶ್ರೇಷ್ಠನು ಕೃತ ಕೃತ್ಯನಾದೆನೆಂದು ಸಂತೃಪ್ಪನಾದನು. ಮಹಾಪರಾಕ್ರಮಿಯೂ ಬುದ್ಧಿಸಂಪನ್ನನೂ ಆದ ಧೀರನು ಶ್ರೀರಾಮಲಕ್ಷ್ಮಣರೊಡನೆ ಯಷ್ಯಮೂಕಪರ್ವತವೆನ್ನೇರಿದನು (೩೫).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿ ನಾಲ್ಕನೆಯ ಸರ್ಗ

NNN

೪೫

ಪಂಚಮಃ ಸರ್ಗಃ ಸುಗ್ರೀವಸಖ್ಯಮ್‌

ಯಷ್ಯ್ಠಮೂಕಾತ್ತು ಹನುಮಾನ್‌ ಗತ್ವಾತಂ ಮಲಯಂ ಗಿರಿಮ್‌ ಆಚಚಕ್ಷೇ ತದಾ ವೀರೌ ಕಪಿರಾಜಾಯ ರಾಘವ್‌ ಅಯಂ ರಾಮೋ ಮಹಾಪ್ರಾಜ್ಞಃ ಸಂಪ್ರಾಪ್ಲೋ ದೃಢವಿಕ್ರಮಃ ಲಕ್ಷ್ಮಣೇನ ಸಹ ಭ್ರಾತ್ರಾ ರಾಮೋನಯಂ ಸತ್ಯವಿಕ್ರಮಃ ಇಕ್ಷಾ ಘೊಣಾಂ ಕುಲೇ ಜಾತೋ ರಾಮೋ ದಶರಾಥಾತ್ಮಜಃ ಧರ್ಮೇಚ ನಿರತಶ್ಛೈವ ಪಿತುರ್ನಿರ್ದೇಶಪಾಲಕಃ

ರಾಜಸೂಯಾಶ್ನಮೇಧ್ಯೈಶ್ನ ವಹ್ನಿರ್ಯೇನಾಭಿತರ್ಪಿತಃ ದಕ್ಷಿಣಾಶ್ಚತಥೋತ್ಸೃಷ್ಟಾಗಾವಃ ಶತಸಹಸ್ರಶಃ

ಸರ್ಗ ಶ್ರೀರಾಮನು ಸುಗ್ರೀವನೊಡನೆ ಅಗ್ಲಿಸಾಕ್ಷಿಕವಾಗಿ ಅನ್ಯೋನ್ಯ ಸ್ನೇಹವನ್ನು ಬೆಳೆಸುವುದು. ಹನುಮಂತನು (ಬುಷ್ಯಮೂಕಪರ್ವತದಮೇಲೆ ಶ್ರೀರಾಮಲಕ್ಷ್ಮಣರನ್ನು ಇಳಿಸಿ) ಅಲ್ಲಿಂದ (ಸುಗ್ರೀವನಿದ್ದ) ಮಲಯಗಿರಿಗೆ ಹೋದನು.* ಅಲ್ಲಿ ಕಪಿರಾಜನನ್ನು ಕಂಡು ವೀರರಾದ ರಾಮಲಕ್ಷ್ಮಣರ ಎಷಯವನ್ನು ಹೇಳಿದನು (೧) : "ಸುಗ್ರೀವ, ಅಲ್ಲಿ ಬಂದಿರತಕ್ಕವನು ಶ್ರೀರಾಮನೆಂಬವನು. ತಮ್ಮನಾದ ಲಕ್ಷ್ಮಣನೊಡನೆ ಬಂದಿದ್ದಾನೆ. ಶ್ರೀರಾಮನು ಮಹಾಪ್ರಾಜ್ಞನೂ ಪರಾಕ್ರಮಿಯೂ ಸತ್ಯಸಂಧನೂ ಎಂದು ತಿಳಿ. ಅವನು ಇಕ್ಷ್ವಾಕುವಂಶದಲ್ಲಿ ಜನಿಸಿದವನು. ದಶರಥಮಹಾರಾಜನ ಪುತ್ರ. ಧರ್ಮನಿರತನೂ ಪಿತೃವಾಕ್ಯ ಪರಿಪಾಲನ % ಸುಗ್ರೀವನ ವಾಸಸ್ಥಾನ ಯಷ್ಯಮೂಕ. ಅದರ ಒಂದು ಭಾಗ ಮಲಯಗಿರಿ. ಹನುಮಂತನು ರಾಮಲಕ್ಷ್ಮಣರನ್ನು ಯಷ್ಯಮೂಕದಲ್ಲಿಳಿಸಿ ಸುಗ್ರೀವನಿಗೆ ವಾರ್ತೆ ಯನ್ನರುಹಲು ಪುನಃ ಭಿಕ್ಷು ರೂಪವನ್ನು ಧರಿಸಿ ಹೋದನೆಂದು ತಿಳಿಯಬೇಕು. ಆದ್ದರಿಂದ

ಇದೇ ಸರ್ಗದ ೧೪ನೆಯ ಶ್ಲೋಕದಲ್ಲಿ ""ತತೋ ಹನೂಮಾನ್‌ ಸಂತ್ಯಜ್ಯ ಭಿಕ್ಷುರೂಪ- ಮರಿಂದಮಃ'' ಎಂಬ ಮಾತು ಸರಿಹೋಗುತ್ತದೆ.

೪೬ ಕಿಷ್ಟಿಂಧಾಕಾಂಡಃ [ಸರ್ಗಃ

ತಪಸಾ ಸತ್ಯವಾಕ್ಕೇನ ವಸುದಾ ಯೇನ ಪಾಲಿತಾ ಸ್ತಿ ಹೇತೋಸಸ್ಯ ಪುತ್ರೋತsಯಂ ರಾಮೋ5ರಣ್ಯಂ ಸಮಾಗತಃ॥

ತಸ್ಯಾಸ್ಯ ವಸತೋ5 ರಣ್ಯೇ ನಿಯತಸ್ಯ ಮಹಾತ್ಮನಃ

ರಾವಣೇನ ಹೃತಾ ಭಾರ್ಯಾ ತ್ವಾಂ ಶರಣಮಾಗತಃ ಭವತಾ ಸಖ್ಯಕಾಮ್‌ ತೌ ಭ್ರಾತರೌ ರಾಮಲಕ್ಷ್ಮಣ”್‌ | ಪ್ರತಿಗೃಹ್ಯಾರ್ಚಯಸ್ಸೈತೌ ಪೂಜನೀಯತಮಾವುಭ್‌ ಶ್ರುತ್ವಾಹನುಮತೋ ವಾಕ್ಯಂ ಸುಗ್ರೀವೋ ಹೃಷ್ಠಮಾನಸಃ |

ಭಯಂ ರಾಘವಾದ್ಭೋರಂ ಪ್ರಜಹ್‌ೌ ವಿಗತಜ್ಜರಃ॥

ಕೃತ್ವಾಮಾನುಷಂ ರೂಪಂ ಸುಗ್ರೀವಃ ಪ್ಲವಗರ್ಷಭಃ। ದರ್ಶನೀಯತಮೋ ಭೂತ್ವಾಪ್ರೀತ್ಯಾ ಪ್ರೋವಾಚ ರಾಘುವಮ್‌ ಭವಾನ್‌ ಧರ್ಮವಿನೀತಶ್ಚ ವಿಕ್ರಾಂತಃ ಸರ್ವವತಲಃ

ಅಖ್ಯಾತಾ ವಾಯುಪುತ್ರೇಣ ತತ್ತ್ವತೋ ಮೇ ಭವದುಣಾಃ॥1 ೧೦

ಧುರೀಣನೂ ಆಗಿದ್ದಾನೆ (೨-೩). ದಶರಥನು ರಾಜಸೂಯ, ಅಶ್ವಮೇಧ ಮುಂತಾದ ಯಾಗಗಳಿಂದ ಅಗ್ನಿದೇವನನ್ನು ಸಂತೃಪ್ಪಿಗೊಳಿಸಿ ದಕ್ಷಿಣೆಗಳನ್ನಿತ್ತು ಲಕ್ಷಗಟ್ಟಲೆ ಗೋದಾನಗಳನ್ನುಮಾಡಿದವನು. ಸತ್ಯಧರ್ಮಗಳಿಂದ ಭೂಮಂಡಲ ವನ್ನು ಪಾಲಿಸಿದವನು. ಶ್ರೀರಾಮನು ಆತನ ಪುತ್ರ. ಯಾವುದೋ ಸ್ರೀನಿಮಿತ್ರವಾಗಿ ಇವನು ಅರಣ್ಯಕ್ಕೆ ಬರಬೇಕಾಯಿತು (೪-೫). ಮಹಾಪುರುಷನು ವನ ವಾಸದಲ್ಲಿರುವಾಗ ರಾವಣನು ಇವನ ಪತ್ನಿಯನ್ನು ಅಪಹರಿಸಿಬಿಟ್ಟನಂತೆ. ಈಗ ಈತನು ನಿನ್ನ ನೆರವನ್ನಪೇಕ್ಷಿಸಿ ಬಂದಿದ್ದಾನೆ. ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಸ್ನೇಹವನ್ನು ಬೆಳೆಸಬೇಕೆಂದಿದ್ದಾರೆ. ವಾನರೇಂದ್ರ, ಇವರಿಬ್ಬರೂ ಪೂಜನೀಯರು. ಇವರನ್ನು ಸ್ವಾಗತಿಸಿ ಸತ್ವರಿಸು'' ಎಂದನು (೬-೭). ಹನುಮಂತನ ನುಡಿಯನ್ನು ಕೇಳಿ ಸುಗ್ರೀವನ ಮನಸ್ಸು ಸಂತೋಷದಿಂದ ಅರಳಿತು. ರಾಘವನನ್ನು (ಮೊದಲು) ನೋಡಿದಾಗ ಸಂಭವಿಸಿದ ಘೋರವಾದ ಭಯವು ತೊಲಗಿತು. ಚಿಂತೆ ಸರಿಯಿತು. ಅವನು ಮನುಷ್ಯ ರೂಪವನ್ನು ಧರಿಸಿ ಸುಂದರವಾದ ಭವ್ಯಾಕೃತಿಯನ್ನು ತಳೆದು ರಾಘವನಿದ್ದಲ್ಲಿಗೆ ಬಂದನು (೮-೯). ಸುಗ್ರೀವನು ಪ್ರೀತಿಯಿಂದ ಶ್ರೀರಾಮನನ್ನು ಕುರಿತು "" ಆರ್ಯ, ನೀನು ಧರ್ಮದಲ್ಲಿ

ಸರ್ಗಃ ೫] ಸುಗ್ರೀವಸಖ್ಯಮ್‌ ೪೭ ತನ್ನಮೈವೈಷ ಸತ್ಕಾರೋ ಲಾಭಶೈವೋತಮಃ ಪ್ರಭೋ ಯತ ಶೈ ಮಿಚ್ಛೆಸಿ ಸೌಹಾರ್ದಂ ವಾನರೇಣ ಮಯಾ ಸಹ ೧೧

ರೋಚತೇ ಯದಿ ವಾ ಸಖ್ಯಂ ಬಾಹುರೇಷ ಪ್ರಸಾರಿತಃ | ಗೃಹ್ಯತಾಂ ಪಾಣಿನಾ ಪಾಣಿರ್ಮರ್ಯಾದಾ ಬಧ್ಯತಾಂ ಧ್ರುವಾ॥ ೧೨

ಏತತ್ತುವಚನಂ ಶ್ರುತ್ವಾಸುಗ್ರೀವೇಣ ಸುಭಾಷಿತಮ್‌

ಪ್ರಹೃಷ್ಠಮನಾ ಹಸ್ತಂ ಪೀಡಯಾಮಾಸ ಪಾಣಿನಾ ೧೩ ಹೃದ್ಯಂ ಸೌಹೃದಮಾಲಂಬ್ಯ ಪರ್ಯಪಷ್ಟ್ಠಜತ ಹೀಡಿತಮ್‌ ತತೋ ಹನೂಮಾನ್‌ ಸಂತ್ಯಜ್ಯ ಭಿಕ್ಷುರೂಪಮರಿಂದವುಃ ೧೪

ಕಾಷ್ಠಯೋಃ ಸ್ವೇನ ರೂಪೇಣ ಜನಯಾಮಾಸ ಪಾವಕಮ್‌ ದೀಪ್ಯಮಾನಂ ತತೋ ವಹ್ನಿಂ ಪುಷೆ ಶ್ಸ್ರಿರಭ್ಯರ್ಚ ಸತೃತಮ್‌ Il ೧೫

ತರ್ಯೋರ್ಮಧ್ಯೇತsಥ ಸುಪ್ರೀತೋ ನಿದಧೇ ಸುಸಮಾಹಿತಃ | ತತೋಗ್ಲಿಂ ದೀಪ್ಯಮಾನಂ ತೌ ಚಕ್ರತುಶ್ಚ ಪ್ರದಕ್ಷಿಣಮ್‌ ೧೬

ಸುಶಿಕ್ಷಿತನೆಂದೂ ವೀರನೆಂದೂ ಸರ್ವಭೂತಗಳಲ್ಲಿ ದಯಾಳುವೆಂದೂ ನನಗೆ ತಿಳಿಯಿತು. ವಾಯುಪುತ್ರನು ನಿನ್ನ ಸದ್ಗುಣಗಳನ್ನು ಯಥಾಸ್ಥಿತವಾಗಿ ವಿವರಿಸಿದ್ದಾನೆ (೧೦). ಮಹಾತ್ಯ ವಾನರನಾದ ನನ್ನೊಡನೆ ನೀನು ಸಖ್ಯವನ್ನು ಬಯಸುವುದಾದರೆ, ಅದು ನನಗೆ ತೋರಿಸಿದ ಗೌರವ ; ನನಗಾದ ಉತ್ತಮ ಲಾಭ. ನನ್ನ ಸಖ್ಯವು ನಿನಗೆ ಇಷ್ಟವಾದರೆ, ಇಗೋ-ಕೈನೀಡಿದ್ದೇನೆ. ಕೈಯನ್ನು ಹಿಡಿ. ನಮ್ಮ ಸ್ನೇಹಕ್ಕೆ ಚ್ಯುತಿಯಿಲ್ಲವೆಂದು ದೃಢಪ್ರತಿಜ್ಞೆಯಾಗಲಿ | '' ಎಂದನು (೧೧-೧೨). ಸುಗ್ರೀವನ ಮಧುರವಾದ ನುಡಿಯನ್ನು ಕೇಳಿ ಶ್ರೀರಾಮನು ಸಂತೋಷದಿಂದ ಅವನ ಕೈಯನ್ನು ದೃಢವಾಗಿ ಹಿಡಿದನು. ಹೃತ್ಪೂರ್ವಕವಾದ ಸ್ನೇಹದಿಂದ ಸುಗ್ರೀವನನ್ನು ಬಿಗಿಯಾಗಿ ಆಲಿಂಗಿಸಿಕೊಂಡನು (೧೩). ಆಮೇಲೆ ಶೂರನಾದ ಹನುಮಂತನು ಭಿಕ್ಷುವೇಷವನ್ನು ತ್ಯಜಿಸಿ ತನ್ನ ವಾನರ ರೂಪವನ್ನು ಧರಿಸಿ, ಎರಡು ಕಾಷ್ಠಗಳನ್ನು ಉಜ್ಜಿ ಅಗ್ನಿಯನ್ನು ಉತ್ಪುದಿಸಿದನು. ಜ್ವಲಿಸುವ ಅಗ್ನಿಯನ್ನು ಪುಷ್ಪಗಳಿಂದ ಅರ್ಚಿಸಿದನು (೧೪-೧೫). ಅನಂತರ ಸಾವಧಾನವಾಗಿ ಅದನ್ನು ಶ್ರೀರಾಮಸುಗ್ರೀವರ ಮಧ್ಯದಲ್ಲಿ ತಂದಿರಿಸಿದನು. ಆಗ ಶ್ರೀರಾಮನೂ

೪೮ ಕಿಷ್ಟಿಂಧಾಕಾಂಡಃ [ಸರ್ಗಃ

ಸುಗ್ರೀವೋ ರಾಘವಶೈವ ವಯಸ್ಕತ್ವಮುಪಾಗತ್‌ೌ ತತಃ ಸುಪ್ರೀತಮನಸ್‌ ತಾವುಭೌ ಹರಿರಾಘವ್‌ಾೌ ೧೭

ಅನ್ಫೋನ್ಯಮಭವೀಕ್ಷಂತೌ ತೃಪ್ತಿಮುಪ ಪಜಗ್ಗತುಃ। ತ್ರಂ ವಯಸ್ಕೊ €5sಸಿಮೇ ಹೃದ್ಕೋ ೇಹ್ಯೇಕಂ ದುಚುಂಸುಖಂಚನ್‌॥ ಸುಗ್ರೀವಂ ರಾಘವ ವಾಕ್ಕಮಿತ್ಯುವಾಚ ಪ್ರಹೃಷ್ಠವತ್‌ ತತಃ ಪರ್ಣಬಹುಲಾಂ ಛಿತ್ತ್ವಾಶಾಖಾಂ ಸುಪುಷ್ಠಿತಾಮ್‌ 1 ೧೯ ಸಾಲಸ್ಕಾಸ್ಟೀರ್ಯ ಸುಗ್ರೀವೋ ನಿಷಸಾದ ಸರಾಘವಃ

ಲಕ್ಷ್ಮಣಾಯಾಥ ಸಂಹೃಷ್ಟೋ ಹನುಮಾನ್‌ ಪವಗರ್ಷಭಃ॥ ೨೧ ಶಾಖಾಂ ಚಂದನವೃಕ್ಷಸ್ಯ ದದೌ ಪರಮುಪುಷಿತಾಮ್‌

ತತಃ ಪ್ರಹೃಷ್ಟಃ ಸುಗ್ರೀವಃ ಶ್ಲಕ್ಷಂ ಮಧುರಯಾ ಗಿರಾ ೨೧ ಪ್ರತ್ಯುವಾಚ ತದಾ ರಾಮಂ ಹರ್ಷವ್ಯಾಕುಲಲೋಚನಃ।

ಅಹಂ ವಿನಿಕ್ಕತೋ ರಾಮ ಚರಾಮೀಹ ಭಯಾರ್ದಿತಃ ಎ೨೨

ಸುಗ್ರೀವನೂ ಪ್ರಜ್ವಲಿಸುತ್ತಿದ್ದ ಯಜ್ಞೇಶ್ವರನಿಗೆ ಪ್ರದಕ್ಷಿಣೆ ಮಾಡಿ ಅಗ್ನಿ ಸಾಕ್ಷಿಕವಾಗಿ ಮಿತ್ರರಾದರು. ಅವರೀರ್ವರೂ "ಅನಂದದಿಂದ ಒಬ್ಬ ರನ್ನೊಬ್ಬರು ನೋಡುತ್ತ ನಿಂತರು. ಎಷ್ಟು ನೋಡಿದರೂ ಅವರಿಗೆ ತೃಪಿಯಾಗಲಿಲ್ಲ.! (೧೬-೧೭). ಶ್ರೀರಾಮನು" ಮಿತ್ರ- ಸುಗ್ರೀವ, ನೀನು ನನ್ನ ಪ್ರೀತಿಯ ಗೆಳೆಯನಾದೆ. ನಮ್ಮಿಬ್ಬರ ಸುಖದುಃಖಗಳು ಒಂದಾದವು'' ಎಂಬುದಾಗಿ ಹರ್ಷದಿಂದ ಹೇಳಿದನು. ಆಮೇಲೆ ಸುಗ್ರೀವನು ಎಲೆಗಳಿಂದ ತುಂಬಿದ ಸಾಲವೃಕ್ಷದ ಪುಷಿತವಾದ ಒಂದು ಕೊಂಬೆಯನ್ನು ಮುರಿದು ಹಾಸಿ ಅದರ ಮೇಲೆ ರಾಘವನೊಡನೆ ಕುಳಿತು ಕೊಂಡನು (೧೮-೧೯). ಆಗ ಹನುಮಂತನು ಪುಷ್ಪಗಳಿಂದ ಜಗ್ಗುತ್ರಿದ್ದ ಚಂದನ ವೃಕ್ಷದ ಒಂದು ಕೊಂಬೆಯನ್ನು ಹರ್ಷದಿಂದ ಮುರಿದು ಹಾಸಿ, ಲಕ್ಷ್ಮಣನಿಗೆ ಕುಳಿತುಕೊಳ್ಳಲು ಕೊಟ್ಟನು. * ಆಗ ಸುಗ್ರೀವನು ನಯವಾಗಿ ಮೃದುವಾದ ವಾಕ್ಯದಿಂದ ಶ್ರೀರಾಮನೊಡನೆ ಮಾತಾಡಿದನು. ಅವನ ನಯನಗಳಲ್ಲಿಆನಂದ ಬಾಷ್ಟವು ಸುರಿಯುತಿತ್ತು ""ಶ್ರೀರಾಮ, ನಾನು ಕಷ್ಟಕ್ಕೆ ಸಿಕ್ಕಿ ಅಂಜಿಕೆಯಿಂದ ಅಲೆಯುತ್ತಿದ್ದೇನೆ (೨೦-೨೧). ನನ್ನಹೆಂಡತಿಯನ್ನುವಾಲಿಯು ಅಪಹರಿಸಿದ್ದಾನೆ.

ಶೇ ಯಾರು ಯಾರನ್ನುಸತ್ಕರಿಸಬೇಕು 7701000 ಎಿಧಿಯನ್ಸಿಲ್ಲಿಕಾಣ ಬಹುದು.

ಸರ್ಗಃ ೫] ಸುಗ್ರೀವಸಖ್ಯಮ್‌ ೪೯

ಹೃತಿಭಾರ್ಯೋ ವನೇ ತ್ರಸೋ ದುರ್ಗಮೇತದುಪಾಶ್ರಿತಃ। ಸೋತಹಂತ್ರಸೋವನೇ ಭೀತೋ ವಸಾಮುದ್ಭಾಂತಚೇತನಃ॥ ೨೩ ವಾಲಿನಾ ನಿಕ್ಕತೋ ಭ್ರಾತ್ರಾ ಕ್ಷತವೈರಶ್ಚರಾಘವ।

ವಾಲಿನೋ ಮೇ ಮಹಾಭಾಗ ಭಯಾರ್ತಸ್ಕಾಭಯಂಕುರು॥॥ ೨೪ ಕರ್ತುಮರ್ಹಸಿ ಕಾಕುತ್ವ್ವ ಭಯಂ ಮೇ ಭವೇದ್ಯಥಾ।

ಏವಮುಕಸ್ತುತೇಜಸ್ತೀ ಧರ್ಮಜ್ಞೋ ಧರ್ಮವತಲಃ॥ ೨೫ ಪ್ರತ್ಯಭಾಷತ ಕಾಕುತ್ತಃ ಸುಗ್ರೀವಂ ಪ್ರಹಸನ್ನಿವ | ಉಪಕಾರಫಲಂ ಮಿತ್ರ ವಿದಿತಂ ಮೇ ಮಹಾಕಪೇ ೨೬

ವಾಲಿನಂ ತಂ ವಧಿಷ್ಯಾಮಿ ತವ ಭಾರ್ಯಾಪಹಾರಿಣಮ್‌ ಅಮೋಘ ಘಾಃ ಸೂರ್ಯಸಂಕಾಶಾ ಮಮೈತೇ ನಿಶಿತಾಃ ಶರಾಾ॥ ೨೭

ತಸ್ಮಿನ್‌ ವಾಲಿನಿ ದುರ್ವೃತ್ರೇ ನಿಪತಿಷ್ಯಂತಿ ವೇಗಿತಾಃ | ಕಂಕಪತ್ರಪ್ರತಿಚ್ಛನ್ನಾಮಹೇಂದ್ರಾಶನಿಸಂನಿಭಾಃ॥ ೨೮

ಅರಣ್ಯದಲ್ಲಿಸುತ್ತಿಸುತ್ತಿ ಹೆದರಿ ದುರ್ಗಮವಾದ ಸ್ಥಳವನ್ನು ಆಶ್ರಯಿಸಿದ್ದೇನೆ. ನಾನು ಹೆದರಿ ಕಳವಳಿಸುತ್ತಿದ್ದೇನೆ. ನನ್ನ ಚೈತನ್ಯ ಉಡುಗಿ ವನದಲ್ಲಿ ವಾಸಿಸುತ್ತಿದ್ದೇನೆ. ರಾಘವ, ನನ್ನ ಅಣ್ಣನಾದ ವಾಲಿಯೇ ನನಗೆ ಅಪಕಾರ ಮಾಡಿದ್ದಾನೆ. ನನ್ನೊಡನೆ ವೈರವನ್ನು ಬೆಳೆಸಿದ್ದಾನೆ. ಮಹಾನುಭಾವ, ವಾಲಿಯ ಭಯದಿಂದ ಖನ್ನನಾದ ನನಗೆ ಅಭಯವನ್ನುನೀಡು (೨೨-೨೪). ಭಯವು ತಪ್ಪುವಂತೆ ಮಾಡು '' ಎಂದು ಪ್ರಾರ್ಥಿಸಿದನು. ಆಗ ತೇಜಸ್ವಿಯೂ ಧರ್ಮಜ್ಞನೂ ಧರ್ಮಸಂರಕ್ಷಕನೂ ಅದ ಕಾಕುತ್ತನು ಮುಗುಳ್ನಗೆಯಿಂದ ""ವಾನರೋತ್ರಮ, ಉಪಕಾರವೇ ಮಿತ್ರನಿಂದಾಗಬೇಕಾದ ಪ್ರಯೋಜನ. ಇದನ್ನುನಾನು ಬಲ್ಲೆ(೨೫-೨೬). ನಿನ್ನಭಾರ್ಯೆಯನ್ನಪಹರಿಸಿದ ವಾಲಿಯನ್ನು ನಾನು ಸಂಹರಿಸುವೆನು. ಸೂರ್ಯನಂತೆ ದೇದೀಪ್ಯಮಾನವಾದ ನನ್ನ ನಿಶಿತಾಸ್ತಗಳು ಅಮೋಘಫಘವಾದವು. ದುರಾಚಾರನಾದ ವಾಲಿಯ ಮೇಲೆ ಶರಗಳು ಮಹಾವೇಗದಿಂದ ಎರುಗವುವು. ಗರಿಗಟ್ಟಿದ ಶರಗಳು ದೇವೇಂದ್ರನ ಸಿಡಿಲಿಗೆ ಸಮಾನವಾದವು (೨೭-೨೮).

೫೦ ಕಿಷ್ಕಿಂಧಾಕಾಂಡಃ [ಸರ್ಗಃ

ತೀಕ್ಷಾಾಗ್ರಾ ಯಜುಪರ್ವಾಣಃ ಸರೋಷಾ ಭುಜಗಾ ಇವ ತಮದ್ಯ ವಾಲಿನಾಂ ಪಶ್ಯ ಕ್ರೂರೈರಾಶೀವಿಷೋಪಮೈಃ॥ ರಿ

ಶರೈರ್ವಿನಿಹತಂ ಭೂಮ್‌ ವಿಕೀರ್ಣಮಿವ ಪರ್ವತಮ್‌ ತು ತದ್ವಚನಂ ಶ್ರುತ್ವಾರಾಘವಸ್ಯಾತ್ಮನೋ ಹಿತಮ್‌ ೩೦

ಸುಗ್ರೀವಃ ಪರಮಪ್ರೀತಃ ಸುಮಹದಾಕ್ಯಮಬ್ರವೀತ್‌ ತವ ಪ್ರಸಾದೇನ ನೃಸಿಂಹ ರಾಘವ ಪ್ರಿಯಾಂ ರಾಜ್ಯಂ ಸಮಾಪ್ನುಯಾಮಹಮ್‌ ತಥಾ ಕುರು ತ್ರಂ ನರದೇವ ವೈರಿಣಂ ಯಥಾ ಹಿಂಸ್ಕಾತ್‌ ಪುನರ್ಮಮಾಗ್ರಜಮ್‌ ೩೧

ಸೀತಾಕಪೀಂದ್ರಕ್ಷಣದಾಚರಾಣಾಂ ರಾಜೀವಹೇಮಜ್ಜಲನೋಪಮಾನಿ। ಸುಗ್ರೀವರಾಮಪ್ರಣಯಪ್ರಸಂಗೇ ವಾಮಾನಿ ನೇತ್ರಾಣಿ ಸಮಂ ಸ್ಥುರಂತಿ ಇತಿ ಶ್ರೀಮದ್ರಾಮಾಯಾಣೇ ಕಿಷ್ಠಿಂಧಾಕಾಂಡೇ ಪಂಚಮಃಸರ್ಗಃ

ನೇರವಾದ ಗಿಣ್ಣುಗಳಿರುವ ತೀಕ್ಷಾಗ್ರವಾದ ಅಸ್ತಗಳು ಕೆರಳಿದ ಸರ್ಪ ಗಳಂತಿವೆ. ವಿಷದಂಪ್ಪಗಳಂತಿರುವ ಕ್ರೂರಾಸ್ಪಗಳಿಂದ ವಾಲಿಯು ಇಂದೇ ಹತನಾಗಿ ನೆಲದಮೇಲೆ ಒರಗುವುದನ್ನು ನೋಡು! ಛಿನ್ನಭಿನ್ನವಾದ ಪರ್ವತದಂತೆ ಉರುಳುವುದನ್ನು ನೋಡು !'' ಎಂದು ಹೇಳಿದನು. ಸುಗ್ರೀವನು ರಾಘವ ನಾಡಿದ ಹಿತಕರವಾದ ನುಡಿಯನ್ನು ಕೇಳಿ ಆನಂದಭರಿತನಾದನು (೨೯-೩೦). ಅವನು"“ನರಶ್ರೇಷ್ಠ- ರಾಘವ, ನಿನ್ನಅನುಗ್ರಹದಿಂದ ನನ್ನಪ್ರಿಯಳನ್ನೂರಾಜ್ಯವನ್ನೂ ಪುನಃ ಪಡೆದೇನು. ಅಣ್ಣನೆನಿಸಿಕೊಂಡ ನನ್ನ ವೈರಿಯು ಪುನಃ ನನಗೆ ಹಿಂಸೆ ಕೊಡದಂತೆ ಉಪಕಾರಮಾಡು'' ಎಂದು ಕೇಳಿಕೊಂಡನು (೩೧). ಹೀಗೆ ಶ್ರೀರಾಮನೂ ಸುಗ್ರೀವನೂ ಸುಗ್ರೀವನೂ ಸ್ನೇಹವನ್ನು ಬೆಳೆಸಿ ಸಂಭಾಷಿಸುತ್ತಿದ್ದ ಸಮಯದಲ್ಲಿ ಸೀತಾದೇವಿಯ ಕಮಲಸದೃಶವಾದ ಎಡಗಣ್ಣು ವಾಲಿಯ ಹೊಂಬಣ್ಣದ ಎಡಗಣ್ಣು ರಾವಣನ ಅಗ್ನಿ ಸಮಾನವಾದ ಎಡಗಣ್ಣು* - ಇವೆಲ್ಲವೂ ಏಕಕಾಲದಲ್ಲಿಅದಿರಲಾರಂಭಿಸಿದವು! (೩೨).

ರ: ಎಡಗಣ್ಣು ಅದುರುವುದು ಹೆಂಗಸರಿಗೆ ಶುಭಕರ, ಗಂಡಸರಿಗೆ ಅಶುಭಕರ.

ಷಷ್ಠಃ ಸರ್ಗಃ

ಭೂಷಣಪ್ರತ್ಯಭಿಜ್ಞಾನಮ್‌ ಪುನರೇವಾಪ್ರವೀತ್‌ ಪ್ರೀತಃ ಸುಗೀವೋ ರಘುನಂದನಮ್‌ ಅಯಮಾಖ್ಯಾತಿ ಮೇ ರಾಮ ಸಚಿವೋ ಮಂತ್ರಿ ಸತಮಃ ಹನುಮಾನ್‌ ಯನ್ನಿಮಿತಂ ತ್ವಂ ನಿರ್ಜನಂ ವನಮಾಗತಃ। ಲಕ್ಷ್ಮಣೇನ ಸಹ ಭ್ರಾತ್ರಾ ವಸತಶ್ಚವನೇ ತವ ರಕ್ಷಸಾಪಹೃತಾ ಭಾರ್ಯಾ ಮೈಥಿಲೀ ಜನಕಾತ್ಮಜಾ ತ್ವಯಾ ವಿಯುಕ್ಲಾರುದತೀ ಲಕ್ಷ ೇನ ಧೀಮತಾ ಅಂತರಪ್ರೇಪ್ಪನಾ ತೇನ ಹತ್ವಾಗೃಧ್ರಂ ಜಟಾಯುಷಮ್‌

ಭಾರ್ಯಾವಿಯೋಗಜಂ ದುಃಖಮಚಿರಾತ್ಮಂ ವಿಮೋಕ್ಷ್ಯಸೇ॥ ಅಹಂ ತಾಮಾನಯಿಷ್ಯಾಮಿ ನಷ್ಟಾಂ ವೇದಶ್ರುತಿಂ ಯಥಾ ರಸಾತಲೇ ವಾ ವರ್ತಂತೀಂ ವರ್ತಂತೀಂವಾ ನಭಃಸ್ಥ ಲೇ॥

ಸರ್ಗ

ಸೀತಾದೇವಿಯನ್ನು ಅನ್ವೇಷಿಸಿಕೊಡುವುದಾಗಿ ಸುಗ್ರೀವನು ಶ್ರೀರಾಮನಿಗೆ ಮಾತು ಕೊಡುವುದು. ಸೀತೆಯ ಆಭರಣಗಳನ್ನು ನೋಡಿ ಶ್ರೀರಾಮನ ದುಃಖ.

ಸುಗ್ರೀವನು ಪುನಃ ಶ್ರೀರಾಮನನ್ನು ನೋಡಿ ಹೀಗೆಂದನು: ""ಶ್ರೀರಾಮ, ನನ್ನ ಮಂತ್ರಿಸತ್ತಮನಾದ ಹನುಮಂತನು ನಿರ್ಜನವಾದ ವನಕ್ಕೆ ನೀನು ಬಂದ ಕಾರಣವನ್ನು ಹೇಳಿದ್ದಾನೆ. ತಮ್ಮನಾದ ಲಕ್ಷ್ಮಣನೊಡನೆ ವನವಾಸದಲ್ಲಿರುವಾಗ ನಿನ್ನ ಪತ್ನಿಯಾದ ಜನಕಪುತ್ರಿಯನ್ನು ರಾಕ್ಷಸನೊಬ್ಬನು ಅಪಹರಿಸಿದ್ದಾನಂತೆ. ನೀನೂ ಧೀಮಂತನಾದ ಲಕ್ಷ್ಮಣನೂ ಇಲ್ಲದ ವೇಳೆಯಲ್ಲಿ ಕದ್ದುಕೊಂಡು ಹೋಗಿರುವನಂತೆ (೧-೩). ರಾಕ್ಷಸನು ಸಮಯ ಸಾಧಿಸಿ ಬಂದು, ರೋದಿಸುತ್ತಿದ್ದ ದೇವಿಯನ್ನು ಅಪಹರಿಸಿ, ಅಡ್ಡಲಾಗಿ ಬಂದ ಜಟಾಯುವೆಂಬ ಗೃಧ್ರರಾಜನನ್ನು ಕೊಂದು ಒಯ್ದಿರುವನೆಂದು ಕೇಳಿದೆನು. ಸ್ವಲ್ಪಕಾಲದಲ್ಲಿಯೇ ಪತ್ನೀವಿಯೋಗದಿಂದಾದ ದುಃಖವು ನೀಗುವುದೆಂದು ತಿಳಿ (೪). ಶ್ರೀರಾಮ, ದೇವಿಯು ರಸಾತಳದಲ್ಲಿರಲಿ - ನಭಃಸ್ಥಳದಲ್ಲಿರಲಿ, ನಾನು ಹುಡುಕಿ

೫೨ ಕಿಷ್ಕಿಂಧಾಕಾಂಡಃ [ಸರ್ಗಃ

ಅಹಮಾನೀಯ ದಾಸ್ಯಾಮಿ ತವ ಭಾರ್ಯಾಮರಿಂದವು |

ಇದಂ ತಥ್ಯಂ ಮಮ ವಚಸ್ಪಮವೇಹಿ ರಾಘವ॥ ನಶಕ್ಕಾಸಾ ಜರಯಿತುಮಪಿ ಸೇಂದ್ರೈಃ ಸುರಾಸುರೈ

ತವ ಭಾರ್ಯಾ ಮಹಾಬಾಹೋ ಭಕ್ಷ 40 ಎಷಕ್ಕತಂ ಯಥಾ ತ್ಯಜ ಶೋಕಂ ಮಹಾಬಾಹೋ ತಾಂ ಕಾಂತಾಮಾನಯಾಮಿ ತೇ। ಅನುಮಾನಾತ್ತು ಜಾನಾಮಿ ಮೈಥಿಲೀ ಸಾನ ಸಂಶಯಃ ಹ್ರಿಯಮಾಣಾ ಮಯಾ ದೃಷ್ಟಾರಕ್ಷಸಾ ಕ್ರೂರಕರ್ಮಣಾ

ಕ್ರೋಶಂತೀ ರಾಮ ರಾಮೇತಿ ಲಕ್ಷ್ಮಣೇತಿ ವಿಸ್ವರಮ್‌ ಸ್ಫುರಂತೀ ರಾವಣಸ್ಯಾಂಕೇ ಪನ್ನಗೇಂದ್ರವಧೂರ್ಯಥಾ।

ಆತ್ಮನಾ ಪಂಚಮಂ ಮಾಂ ಹಿ ದಷ್ಟ್ವಾಶೈಲತಟೇ ಸ್ಥಿತಮ್‌ ೧೦ ಉತರೀಯಂ ತಯಾ ತ್ಯಕಂ ಶುಭಾನ್ಯಾಭಾರಣಾನಿ ಚ। ತಾನ್ಯಸ್ಥಾಭರ್ಗ್ಗಹೀತಾನಿ ನಿಹಿತಾನಿ ರಾಘವ ೧೧

ತರುವೆನು. ಮಧುಕೈಟಭರು ಅಪಹರಿಸಿದ ವೇದವಾಣಿಯನ್ನು ಶ್ರೀಮನ್ನಾರಾಯಣನು ತಂದಂತೆ, ಮೈಥಿಲಿಯನ್ನು ತಂದು ನಿನಗೊಪ್ಪಿಸುವೆನು. ರಾಘವ, ಇದು ನನ್ನ ಸತ್ಯಪ್ರತಿಜ್ಞೆಯೆಂದು ಅವಧರಿಸು (೫-೬). ಇಂದ್ರನೂ ದೇವಾಸುರರೂ ಒಟ್ಟುಗೂಡಿದರೂ ನಿನ್ನಪತ್ನಿಯನ್ನುದಕ್ಕಿಸಿಕೊಳ್ಳಲಾರರು. ವಿಷ ಮಿಶ್ರವಾದ ಭಕ್ಷ್ಯವನ್ನು ಯಾವನು ತಿಂದು ಬದುಕಿಯಾನು? ಮಹಾಬಾಹು, ಶೋಕಿಸಬೇಡ. ನಿನ್ನ ಕಾಂತೆಯನ್ನು ತಂದೊಪಿಸುವೆನು............ ಆಕೆಯೇ ಮೈಥಿಲಿಯಾಗಿರಬೇಕೆಂದು ನಾನು ಅನುಮಾನಿಸುತ್ತೇನೆ, ಸಂದೇಹವಿಲ್ಲ ಶ್ರೀರಾಮ, ಕ್ರೂರಕರ್ಮಿಯಾದ ರಾಕ್ಷಸನು ಒಬ್ಬ ಯುವತಿಯನ್ನು ಅಪಹರಿಸಿ ಒಯ್ಯುವುದನ್ನುನಾನು ನೋಡಿದೆನು. ಅವಳು "ರಾಮ, ರಾಮ, ಲಕ್ಷ್ಮಣ!' ಎಂದು ಕರುಣಸ್ವರದಿಂದ ಕೂಗಿಕೊಳ್ಳುತಿದ್ದಳು (೭-೯), ಸರ್ಪಿಣಿಯಂತೆ ರಾವಣನ ಅಂಕದಲ್ಲಿ ಹೊರಳಾಡುತ್ತಿದ್ದಳು. ಆಗ ನಾವೈವರೂ ಬೆಟ್ಟದ ತಪ್ಪಲಲ್ಲಿ ಕುಳಿತಿದ್ದೆವು. ಆಕೆ ನಮ್ಮನ್ನು ನೋಡಿ ತನ್ನ ಆಭರಣಗಳನ್ನು ಉತ್ತರೀಯದಲ್ಲಿಸುತ್ತಿ ನಮ್ಮ ಕಡೆಗೆ ಬಿಸುಟಳು. ಅವನ್ನು ನಾವು ತೆಗೆದುಕೊಂಡು ಸುರಕ್ಷಿತವಾಗಿ

ಸರ್ಗಃ ೬] ಭೂಷಣಪ್ರತ್ಯಭಿಜ್ಞಾನಮ್‌ ೫೩

ಆನಯಿಷ್ಯಾಮಹಂ ತಾನಿ ಪ್ರತ್ಯಭಿಜ್ಞಾ ತುಮರ್ಹಸಿ

ತಮಬ್ರವೀತತೋ ರಾಮಃ ಸುಗ್ರೀವಂ ಪ್ರಿಯವಾದಿನಮ್‌ ೧೨ ಆನಯಸ್ವಸಖೇ ಶೀಘ್ರಂ ಕಿಮರ್ಥಂ.ಪ್ರವಿಲಂಬಸೇ | ಏವಮುಕಸ್ತುಸುಗ್ರೀವಃ ಶೈಲಸ್ಕ ಗಹನಾಂ ಗುಹಾಮ್‌ ೧೩ ಪ್ರವಿವೇಶ ತತಃ ಶೀಘ್ರಂ ರಾಘವಪ್ರಿಯಕಾಮ್ಯಯಾ |

ಉತರೀಯಂ ಗೃಹೀತ್ವಾತು ಶುಭಾನ್ಯಭರಣಾನಿ ಚ॥ ೧೪ ಇದಂ ಪಶ್ಯೇತಿ ರಾಮಾಯ ದರ್ಶಯಾಮಾಸ ವಾನರಃ।

ತತೋ ಗೃಹೀತ್ವಾತದ್ವಾಸಃ ಶುಭಾನ್ಯಾಭರಣಾನಿ ಚ॥ ೧೫ ಅಭವದ್ಭಾಪ್ಪಸಂರುದ್ದೋ ನೀಹಾರೇಣೇವ ಚಂದ್ರಮಾಃ। ಸೀತಾಸ್ನೇಹಪ್ರವೃತೇನ ತು ಬಾಷ್ಟೇಣ ದುಷಿತಃ ೧೬ ಹಾ ಪ್ರಿಯೇತಿ ರುದನ್‌ ಧೈರ್ಯಮುತ್ತೃಜ್ಯ ನ್ಯಪತತ್‌ ಕ್ಷಿತ್‌

ಹೃದಿ ಕೃತ್ವಾತು ಬಹುಶಸಮಲಂಕಾರಮುತಮಮ್‌ ೧೭

ಇಟ್ಟಿದ್ದೇವೆ (೧೦-೧೧). ಅವನ್ನು ನಿನಗೆ ತಂದು ತೋರಿಸುವೆನು. ಆಭರಣ ಗಳನ್ನು ನೀನು ಗುರುತಿಸಬಹುದು'' ಎಂದನು. ಹೀಗೆ ಒಳ್ಳೆಯ ಸುದ್ದಿಯನ್ನು ಹೇಳಿದ ಸುಗ್ರೀವನನ್ನು ಕುರಿತು ಶ್ರೀರಾಮನು '"ಮಿತ್ರ, ಬೇಗತೆ ತರಿಸು. ತಡ ಮಾಡುವೆ ಏಕೆ ?'' ಎಂದು ಕೇಳಿದನು. ಸುಗ್ರೀವನು ಶ್ರೀರಾಮನಿಗೆ ಸಂತೋಷ ವಾಗಲೆಂದು ಕೂಡಲೆ ತನ್ನ ದುರ್ಗಮವಾದ ಗುಹೆಯನ್ನು ಪ್ರವೇಶಿಸಿ, ಉತ್ತರೀಯವನ್ನೂ ಆಭರಣಗಳನ್ನೂ ತಂದನು (೧೨-೧೪). ಕಪೀಂದ್ರನು ಇದನ್ನು ನೋಡೆಂದು ಶ್ರೀರಾಮನಿಗೆ ತೋರಿಸಿದನು. ಶ್ರೀರಾಮನು ವಸ್ತ್ರವನ್ನೂ ಸುಂದರವಾದ ಆಭರಣಗಳನ್ನೂ ಕೈಯಲ್ಲಿಹಿಡಿದುಕೊಂಡನು. ಕಣ್ಣೀರು ಉಕ್ಕಿ ಬಂದಿತು. ಮುಖವು ಮಂಜುಮುಸುಕಿದ ಚಂದ್ರಮಂಡಲದಂತಾಯಿತು. ಸೀತಾ ಪ್ರೇಮದಿಂದ ಹರಿದ ಕಂಬನಿ ಮೈಯನ್ನು ನೆನೆಸಿತು (೧೫-೧೬). ಶ್ರೀರಾಮನು ಧೈರ್ಯಗುಂದಿ ಕಣ್ಣೀರುಬಿಡುತ್ತ "ಹಾ | ಪ್ರಿಯೇ |' ಎಂದು ಕೂಗುತ್ತ ನೆಲದ ಮೇಲೆ ಬಿದ್ದುಹೋದನು. ಉತ್ತಮಾಭರಣಗಳನ್ನು ಮತ್ತೆ ಮತ್ತೆ ಎದೆಗೊತ್ತಿ ಕೊಂಡು ಬಿಲದಲ್ಲಿ ಕೆರಳಿಸಿದ ಸರ್ಪದಂತೆ ನಿಟ್ಟುಸಿರುಬಿಡುತ್ತಿದ್ದವು. ಅವನು

೫೪ ಕಿಷ್ಠಿಂಧಾಕಾಂಡಃ [ಸರ್ಗಃ

ನಿಶಶ್ವಾಸ ಭ್ಛಶಂ ಸರ್ಪೋ ಬಿಲಸ್ತ ಆವ ರೋಷಿತಃ।

ಅವಿಚ್ಛಿನ್ನಾಶ್ರುವೇಗಸ್ತುಸ್‌ಮಿತ್ರಿಂ ವೀಕ್ಷ್ಯ ಪಾರ್ಶ್ವತಃ ೧೮ ಪರಿದೇವಯಿತುಂ ದೀನಂ ರಾಮಃ ಸಮುಪಚಕ್ರಮೇ। ಪಶ್ಯ ಲಕ್ಷ್ಮಣ ವೈದೇಹ್ಯಾ ಸಂತ್ಯಕಂ ಹ್ರಿಯಮಾಣಯಾ ೧೯

ಉತರೀಯಮಿದಂ ಭೂಮ್‌ ಶರೀರಾದ್ಭೂಷಣಾನಿ ಚ। ಶಾದ್ದಲಿನ್ಯಾಂ ಧ್ರುವಂ ಭೂಮ್ಯಾಂ ಸೀತಾಯ ಹ್ರಿಯಮಾಣಯಾ ೨೦ ಉತ್ಸ ಸಂ ಭೂಷಣಮಿದಂ ತಥಾರೂಪಂ ಹಿ ದೃಶ್ಯತೇ |

ಏವಮುಕಸ್ತುರಾಮೇಣ ಲಕ್ಷ್ಮಣೋ ವಾಕ್ಯಮಬ್ರವೀತ್‌ ೨೧ ನಾಹಂ ಜಾನಾಮಿ ಕೇಯೂರೇ ನಾಹಂ ಜಾನಾಮಿ ಕುಂಡಲೇ। ನೂಪುರೇ ತ್ಪಭಿಜಾನಾಮಿ ನಿತ್ಯಂ ಪಾದಾಭಿವಂದನಾತ್‌ ತತಃ ರಾಘವೋ ದೀನಃ ಸುಗೀವಮಿದಮಬ್ರವೀತ್‌

ಬ್ರೂಹಿ ಸುಗ್ರೀವ ಕಂ ದೇಶಂ ದ್ರಿಯಂತೀ ಲಕ್ಷಿತಾ ತ್ವಯಾ ೨೩

ಧಾರಾಕಾರವಾಗಿ ಕಂಬನಿಗರೆಯುತ್ತ ಲಕ್ಷ್ಮಣನನ್ನು ನೋಡಿ ಗೋಳಾಡ ಲಾರಂಭಿಸಿದನು (೧೭-೧೮) : ""ಲಕ್ಷ್ಮಣ, ಇಲ್ಲಿನೋಡು. ರಾಕ್ಷಸನು ಅಪಹರಿಸಿ ಒಯ್ಯುವಾಗ ವೈದೇಹಿಯು ಇವುಗಳನ್ನು ಎಸಿದಿದ್ದಾಳೆ. ತನ್ನ ಉತ್ತರೀಯವನ್ನೂ ಒಡವೆಗಳನ್ನೂ ನೆಲದಮೇಲೆ ಚೆಲ್ಲಿದ್ದಾಳೆ. ಹುಲ್ಲು ಬೆಳೆದು ಮೃದುವಾದ ನೆಲದ ಮೇಲೆಯೇ ಒಡವೆಗಳನ್ನು ಬಿಸುಟಿರಬೇಕು. ಯಾವ ಪೆಟ್ಟೂತಾಗದೆ ಇವು ಮೊದಲಿನಂತೆಯೇ ಕಾಣುತ್ತವೆ'' ಎಂದನು (೧೯-೨೦). ಆಗ ಲಕ್ಷ್ಮಣನು ಆಭರಣಗಳನ್ನುನೋಡಿ""ಅಣ್ಣ, ಕೇಯೂರಗಳನ್ನೂಕುಂಡಲಗಳನ್ನೂ ನಾನು ಕಂಡವನಲ್ಲ ನನಗೆ ಇವುಗಳ ಗುರುತಿಲ್ಲ ಕಾಲಂದಿಗೆಗಳು ಮಾತ್ರ ಅತಿಗೆಯವೇ ಹೌದು. ನಿತ್ಯವೂ ದೇವಿಯ ಪಾದಗಳಿಗೆ ವಂದಿಸುವಾಗ ಇವುಗಳನ್ನು ನೋಡಿದ್ದೇನೆ'' ಎಂದನು (೨೧-೨೨). ರಾಘವನು ದೈನ್ಯದಿಂದ "ಸುಗ್ರೀವ, ನನ್ನ ಪ್ರಾಣಕಾಂತೆಯನ್ನು ಕ್ರೂರನಾದ ರಾಕ್ಷಸನು ಯಾವ ಕಡೆಗೆ ಒಯ್ಯುವುದನ್ನು ನೋಡಿದೆ ? ಹೇಳು. ನನಗೆ ಮಹಾದುಃಖವನ್ನು ತಂದೊಡ್ಡಿದ ರಾಕ್ಷಸನು ವಾಸಿಸುವುದೆಲ್ಲಿ? (೨೩-೨೪). ಅವನೊಬ್ಬನಿಗೋಸ್ಕರ ನಾನು ಸಕಲ

NN

| pH] wal

ie

1

PSOE 4 111113 ಈಸ್‌ 1 ನಗ [5 ಇಡಾ

ಆಭರಣದರ್ಶನ ಪು. ೫೪

ಸರ್ಗಃ ೬] ಭೂಷಣಪ್ರತ್ಯಭಿಜ್ಞಾನಮ್‌ ೫೫

ರಕ್ಷಸಾ ರೌದ್ರರೂಪೇಣ ಮಮ ಪ್ರಾಣ: ಪ್ರಿಯಾ ಪ್ರಿಯಾ ಕ್ಹವಾ ವಸತಿ ತದ್ರಕ್ಷೋ ಮಹದ್ವ್ಯಸನದಂ ಮಮ॥ ೨೪

ಯನ್ನಿಮಿತಮಹಂ ಸರ್ವಾನ್ನಾಶಯಿಷ್ಯಾಮಿ ರಾಕ್ಷಸಾನ್‌ ಹರತಾ ಮೈಥಿಲೀಂ ಯೇನ ಮಾಂ ರೋಷಯತಾ ಭೃಶಮ್‌ ೨೫

ಆತ್ಮನೋ ಜೀವಿತಾಂತಾಯ ಮೃತ್ಕುದ್ಹಾರಮಪಾವೃತಮ್‌ ಮಮ ದಯಿತತರಾ ಹೃತಾ ವನಾಂತಾ- ದ್ರಜನಿಚರೇಣ ವಿಮಥ್ಯ ಯೇನ ಸಾ। ಕಥಯ ಮಮ ರಿಪುಂ ತಮದ್ಯವೈ ಪ್ಲವಗಪತೇ ಯಮಸಂನಿಧಿಂ ನಯಾಮಿ॥ ೨೬ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಷಟ್ಯಃ ಸರ್ಗಃ

6 ಮಾ

ರಾಕ್ಷಸರನ್ನೂ ನಾಶಮಾಡಬೇಕಾಗಿದೆ. ಅವನು ಮೈಥಿಲಿಯನ್ನಪಹರಿಸಿ ನನಗೆ ಅತ್ಯಂತ ರೋಷವನ್ನುಂಟುಮಾಡಿದ್ದಾನೆ. ತನ್ನ ಜೀವಿತವು ಕೊನೆಗಾಣಲೆಂದು ಮೃತ್ಯುವಿನ ಬಾಗಿಲನ್ನು ತೆರೆದಿದ್ದಾನೆ (೨೫). ವಾನರೇಶ್ವರ, ನಿಶಾಚರನು ಹಠಾತ್ತಾಗಿ ಬಂದು ನನ್ನ ಪ್ರಿಯಪತ್ನಿಯನ್ನು ಕಾಡಿನಿಂದ ಅಪಹರಿಸಿ ಒಯ್ದಿದ್ದಾನೆ. ನನ್ನ ವೈರಿಯು ಎಲ್ಲಿರುವನೆಂದು ಹೇಳು. ಕ್ಷಣವೇ ಅವನನ್ನು ಯಮನ ಬಳಿಗೆ ದೂಡುವೆನು'' ಎಂದು ನುಡಿದನು (೨೬).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಆರನೆಯ ಸರ್ಗ

ಸಪಮಃ ಸರ್ಗಃ

ರಾಮಸಮಾಶ್ವಾಸನಮ್‌ ಏವಮುಕಸುಸುಗ್ರೀವೋ ರಾಮೇಣಾರ್ತೇನ ವಾನರಃ। ಅಬ್ರವೀತ್‌ ಪ್ರಾಂಜಲಿರ್ವಾಕೃಂ ಸಬಾಷ್ಟಂ ಬಾಷ್ಟಗದ್ದದಃ॥। ಜಾನೇ ನಿಲಯಂ ತಸ್ಕ ಸರ್ವಥಾ ಪಾಪರಕ್ಷಸಃ। ಸಾಮರ್ಥ್ಯಂ ವಿಕ್ರಮಂ ವಾಪಿ ದೌಷ್ಟುಲೇಯಸ್ಯ ವಾ ಕುಲಮ್‌ ಸತ್ಯಂ ತೇ ಪ್ರತಿಜಾನಾಮಿ ತ್ಯಜ ಶೋಕಮರಿಂದಮ। ಕರಿಷ್ಯಾಮಿ ತಥಾ ಯತ್ನಂ ಯಥಾ ಪ್ರಾಪ್ಟ್ಯಸಿ ಮೈಥಿಲೀಮ್‌ || ರಾವಣಂ ಸಗಣಂ ಹತ್ವಾಪರಿತೋಷ್ಯಾತ್ಮ ಪೌರುಷಮ್‌ ತಥಾಸ್ಥಿ ಕರ್ತಾ ಚಿರಾದ್ಯಥಾ ಪ್ರೀತೋ ಭವಿಷ್ಯಸಿ || ಅಲಂ ವೈಕ್ಷವ್ಯಮಾಲಂಬ್ಯ ದೈರ್ಯಮಾತ್ಮಗತಂ ಸ್ಥರ। ತ್ವದ್ವಿಧಾನಾಮಸದ್ಭಶಮೀದೃಶಂ ವಿದ್ದಿ ಲಾಘವಮ್‌

ಸರ್ಗ

ಸುಗ್ರೀವನು ಶ್ರೀರಾಮನನ್ನುಸಂತೈಸುವುದು. ಸುಗ್ರೀವನ ಕಾರ್ಯವನ್ನು ಸಾಧಿಸುವೆನೆಂದು ಶ್ರೀರಾಮನ ಪ್ರತಿಜ್ಞೆ.

ಶೋಕಾವಿಷ್ಠನಾದ ಶ್ರೀರಾಮನು ಪ್ರಕಾರ ನುಡಿಯಲಾಗಿ, ಸುಗ್ರೀವನಿಗೆ ಕಂಬನಿ ತುಂಬಿತು. ಅವನು ಗದ್ಗದಧ್ವನಿಯಿಂದ ""ವೀರಗ್ರಾಣಿ, ಪಾಪಿಯಾದ ರಾಕ್ಷಸನ ವಾಸಸ್ಮಾನವು ಸರಿಯಾಗಿ ನನಗೆ ಗೊತ್ತಿಲ್ಲ ದುರಾತ್ಮನ ಸಾಮರ್ಥ್ಯವಾಗಲಿ ಸಂಚಾರಕ್ರಮವಾಗಲಿ ಕುಲವಾಗಲಿ ನನಗೆ ತಿಳಿಯದು* (೧-೨). ನೀನು ಶೋಕವನ್ನು ತ್ಯಜಿಸು. ಆಣೆಯಿಟ್ಟು ಹೇಳುತ್ತೇನೆ. ನಿನಗೆ ಮೈಥಿಲಿಯು ಸಿಗುವಂತೆ ನಾನು ಪ್ರಯತ್ನಮಾಡುವೆನು. ರಾವಣನನ್ನು ಅವನ ಪರಿವಾರಸಮೇತವಾಗಿ ಕೊಂದು ನನ್ನ ಪೌರುಷವನ್ನು ಸಾರ್ಥಕಪಡಿಸುವೆನು. ನೀನು ಸುಪ್ರೀತನಾಗುವಂತೆ ಕ್ಷಿಪ್ರದಲ್ಲಿಯೇ ಕಾರ್ಯವನ್ನೆಸಗುವೆನು (೩-೪).

4 ಅನುಬಂಧವನ್ನು ನೋಡಿ.

ಸರ್ಗಃ ೭] ರಾಮಸಮಾಶ್ವಾಸನಮ್‌ ೫೭

ಮಯಾಪಿ ವ್ಯಸನಂ ಪ್ರಾಪಂ ಭಾರ್ಯಾಹರಣಜಂ ಮಹತ್‌ |

ಚಾಹಮೇವಂ ಶೋಚಾಮಿನ ದೈರ್ಯಂ ಪರಿತ್ಯಜೇ॥ ನಾಹಂ ತಾಮನುಶೋಚಾಮಿ ಪ್ರಾಕೃ್ಛತೋ ವಾನರೋಷಪಿ ಸನ್‌ | ಮಹಾತ್ಸಾಚ ಎನೀತಶ್ಚ ಕಿಂ ಪುನರ್ಧೃತಿಮಾನ್‌ ಭವಾನ್‌

ಬಾಷಮಾಪತಿತಂ ಧೈರ್ಯಾನ್ನಿಗ್ರಹೀತುಂ ತ್ವಮರ್ಹಸಿ ಮರ್ಯಾದಾಂ ಸತ್ತ್ವಯುಕ್ತಾನಾಂ ಧೃತಿಂ ನೋತೃಷ್ಟುಮರ್ಹಸಿ 1

ವ್ಯಸನೇ ವಾರ್ಥಕೃಚ್ಛೇ; ವಾಭಯೇವಾ ಜೀವಿತಾಂತಕೇ।

ವಿಮ್ಮಶನ್‌ ವೈ ಸ್ವಯಾ ಬುದ್ಧ್ಯಾ ಧೃತಿಮಾನ್ನಾವಸೀದತಿ ಬಾಲಿಶಸ್ತುನರೋ ನಿತ್ಯಂ ವೈಕ್ಚವ್ಯಂ ಯೋತನುವರ್ತತೇ

ಮಜ್ಜತ್ಯವಶಃ ಶೋಕೇ ಭಾರಾಕ್ರಾಂತೇವ ನೌರ್ಜಲೇ॥ ೧೦ ಏಷೋತಂಜಲಿರ್ಮಯಾ ಬದ್ದಃ ಪ್ರಣಯಾತ್ತ್ಮಾಂ ಪ್ರಸಾದಯೇ | ಪೌರುಷಂ ಶ್ರಯ ಶೋಕಸ್ಯ ನಾಂತರಂ ದಾತುಮರ್ಹಸಿ॥ ೧೧

ದೈನ್ಯವನ್ನು ಬಿಡು. ನಿನಗೆ ಸಹಜವಾದ ದೈರ್ಯವನ್ನವಲಂಬಿಸು. ಬಗೆಯ ಲಘುಸ್ವಭಾವವು ನಿನ್ನಂತಹವರಿಗೆ ಯೋಗ್ಯವಲ್ಲವೆಂದು ತಿಳಿ. ನನಗೂ ಸಹಭಾರ್ಯಾ ಪಹರಣದ ಮಹಾ ವ್ಯಸನವು ಪ್ರಾಪವಾಗಿದೆ. ಆದರೂ ನಾನು ಹೀಗೆ ಶೋಕಿಸುತ್ತಿಲ್ಲ, ಧೈರ್ಯವನ್ನು ಬಿಟ್ಟಿಲ್ಲ! (೫-೬). ಅಲ್ಪಜ್ಞನಾದ ವಾನರನಾದರೂ ನಾನು ನಿನ್ನಂತೆ ಹೆಂಡತಿಗಾಗಿ ದುಃಖಿಸುತ್ತಿಲ್ಲ ಮಹಾತ್ಮನೂ ಸುಶಿಕ್ಷಿತನೂ ಧೀರನೂ ಆದ ನಿನ್ನವಿಷಯದಲ್ಲಿನಾನೇನು ಹೇಳಲಿ? ಉಕ್ಕುವ ಕಣ್ಣೀರನ್ನು ಗಟ್ಟಿ ಮನಸ್ಸು ಮಾಡಿ ಬಿಗಿಹಿಡಿ. ಸತ್ತ್ವಶಾಲಿಗಳ ಶ್ರೇಷ್ಠ ಗುಣವಾದ ಧೀರತೆಯನ್ನು ಬಿಡಬೇಡ (೭-೮). ದುಃಖಕಾಲದಲ್ಲಾಗಲಿ ಆರ್ಥಿಕವಾದ ಮುಗ್ಗಟ್ಟಿನಲ್ಲಾಗಲಿ ಪ್ರಾಣಾಂತಕವಾದ ವಿಪತ್ತಿನಲ್ಲಾಗಲಿ ಸ್ವಬುದ್ದಿಯಿಂದ ವಿಮರ್ಶಿಸಿ ಧೈರ್ಯವನ್ನು ತಂದುಕೊಳ್ಳುವವನಿಗೆ ಯಾವ ಹಾನಿಯೂ ಒದಗದು (೯). ಆದರೆ ಯಾವನು ವಿಮರ್ಶೆಯಿಲ್ಲದೆ ಥಟ್ಟನೆ ಎದೆಗುಂದುವನೋ ಅವನು ದಿಕ್ಕಿಲ್ಲದೆ ಶೋಕದಲ್ಲಿ ಮುಳುಗಿಹೋಗುತಾನೆ. ಹೊರಲಾರದ ಹೊರೆಯನ್ನು ಹೊತ್ತ ದೋಣಿಯು ನೀರಿನಲ್ಲಿ ಮುಳುಗುವಂತೆ ದುಃಖದಿಂದ ಕುಸಿದುಹೋಗುತ್ತಾನೆ (೧೦).

೫೮ ಕಿಷ್ಕಿಂಧಾಕಾಂಡಃ [ಸರ್ಗಃ

ಯೇ ಶೋಕಮನುವರ್ತಂತೇ ತೇಷಾಂ ವಿದ್ಯತೇ ಸುಖಮ್‌ ತೇಜಶ್ಚ ಕ್ಷೀಯತೇ ತೇಷಾಂ ತ್ರಂ ಶೋಚಿತುಮರ್ಹಸಿ ॥॥ ೧೨

ಶೋಕೇನಾಭಿಪ್ರಪನ್ನಸ್ಕ ಜೀವಿತೇ ಚಾಪಿ ಸಂಶಯಃ! ಶೋಕಂತ್ಯಜ ರಾಜೇಂದ್ರ ಧೈರ್ಯಮಾಶ್ರಯ ಕೇವಲಮ್‌ ೧೩

ಹಿತಂ ವಯಸ್ಕಭಾವೇನ ಬ್ರೂಮಿ ನೋಪದಿಶಾಮಿ ತೇ ವಯಸ್ಕತಾಂ ಪೂಜಯನ್‌ ಮೇನತ್ಪಂ ಶೋಚಿತುಮರ್ಹಸಿ ॥.. ೧೪

ಮಧುರಂ ಸಾಂತ್ತಿತಸೇನ ಸುಗ್ರೀವೇಣ ರಾಘವಃ।

ಮುಖಮಶ್ರುಪರಿಕ್ಷಿನ್ನಂ ವಸ್ವಾಂತೇನ ಪ್ರಮಾರ್ಜಯನ್‌ ೧೫ ಪ್ರಕತಿಸ್ಥಸುಕಾಕುತಃ ಸುಗೀವವಚನಾತ್‌ ಪ್ರಭುಃ।

ಅಮ ಅಧ ಸಂಪರಿಷ್ಟಜ್ಯ ಸುಗ್ರೀವಮಿದಂ ವಚನಮಬ್ರವೀತ್‌ ೧೬ ಕರ್ತವ್ಯಂ ಯದ್ದಯಸ್ಯೇನ ಸಿಗ್ದೇನ ಹಿತೇನ ಚ। ಅನುರೂಪಂ ಯುಕಂ ಕೃತಂ ಸುಗ್ರೀವ ತತ್ತ್ವಯಾ॥ ೧೭

ಶ್ರೀರಾಮ, ಇದೋ ಕೈಮುಗಿದು ಬೇಡುತ್ತೇನೆ, ಸ್ನೇಹದಿಂದ ಕೇಳಿಕೊಳ್ಳುತ್ತೇನೆ. ಪೌರುಷವನ್ನಾಶ್ರಯಿಸು. ದುಃಖಕ್ಕೆ ಅವಕಾಶವನ್ನು ಕೊಡಬೇಡ. ವ್ಯಥೆಪಡುತ್ತ ಕುಳಿತುಕೊಳ್ಳುವವರಿಗೆ ಸುಖವು ದೊರೆಯದು. ಅಂಥವರ ತೇಜಸ್ಪೂ ಕ್ಷೀಣಿಸುವುದು. ನೀನು ಚಿಂತಿಸಬೇಡ (೧೧-೧೨). ದುಃಖವಶರಾದವರಿಗೆ ಒಂದು ವೇಳೆ ಪ್ರಾಣಕ್ಕೆ ಸಂದೇಹ ಒದಗಬಹುದು. ಆದ್ದರಿಂದ, ರಾಜೇಂದ್ರ, ಕೇವಲ ಧೈರ್ಯವನ್ನವಲಂಬಿಸು. ಮಿತ್ರನೆಂಬ ಸಲಿಗೆಯಿಂದ ಹಿತವನ್ನು ಹೇಳುತ್ತಿದ್ದೇನೆ. ನಿನಗೆ ಬುದ್ಧಿವಾದವನ್ನು ಹೇಳುವ ಶಕ್ತಿನನಗಿಲ್ಲ ನನ್ನ ಸ್ನೇಹ ಭಾವವನ್ನು ಆದರಿಸಿಯಾದರೂ ದುಃಖಿಸಬೇಡ'' ಎಂದು ಮೃದುವಾಗಿ ಹೇಳಿ ಸಂತೈಸಿದನು (೧೩-೧೪). ಸುಗ್ರೀವನ ಮಾತನ್ನು ಕೇಳಿ ರಾಘವನು ಚೇತರಿಸಿ ಕೊಳ್ಳುತ್ತಮುಖದಮೇಲೆ ಒಸರುತ್ತಿದ್ದ ಕಂಬನಿಯನ್ನು ವಸ್ತ್ರದ ಸೆರಗಿನಿಂದ ಒರಸಿ ಕೊಳ್ಳುತ್ತ ಸುಗ್ರೀವನನ್ನು ಆಲಿಂಗಿಸಿಕೊಂಡು ಹೀಗೆಂದನು (೧೫-೧೬) : ""ಮಿತ್ರ-ಸುಗ್ರೀವ, ಗಾಢವಾದ ಸ್ನೇಹವುಳ್ಳ ಹಿತಕಾರಿಯಾದ ವಯಸ್ಕನ ಕರ್ತವ್ಯ ವನ್ನು ಮಾಡಿದ್ದೀಯೆ. ಇಂಥ ಸಮಯದಲ್ಲಿ ಸ್ನೇಹಕ್ಕೆ ಉಚಿತವೂ ಯುಕವೂ

ಸರ್ಗಃ ೭] ರಾಮಸಮಾಶ್ವಾಸನಮ್‌ ೫೯

ಏಷ ಪ್ರಕೃತಿಸ್ಟೋ5ಹಮನುನೀತಸ್ತ್ವಯಾ ಸಖೇ |

ದುರ್ಲಭೋ ಹೀದೃಶೋ ಬಂಧುರಸ್ಥಿನ್‌ ಕಾಲೇ ವಿಶೇಷತಃ ೧೮ ಕಿಂತು ಯತ್ನಸ್ತ್ಹಯಾ ಕಾರ್ಯೋ ಮೆಥಿಲ್ಯಾಃ ಪರಿಮಾರ್ಗಣೇ। ರಾಕ್ಷಸಸ್ಯ ರೌದ್ರಸ , ರಾವಣಸ್ಯ ದುರಾತ್ಮನಃ ೧೯ ಮಚಾ ಯದನುಷ್ಠೇಯಂ ವಿಸ್ರಬ್ಬೇನ ತದುಚ್ಛತಾಮ್‌ ವರ್ಷಾಸ್ತಿವ ಸುಕ್ಷೇತ್ರೆ ೀಸರ್ವಂ ಸಂಪದ್ಯ ತೇ ಮಯಿ Il ೨೦

ಮಯಾ ಯದಿದಂ ವಾಕ್ಕಮಭಿಮಾನಾತ್‌ ಸಮೀರಿತಮ್‌ ತತ್ತ್ವಯಾ ಹರಿಶಾರ್ದೂಲ ತತ್ತ್ವಮಿತ್ಯುಪಧಾರ್ಯತಾಮ್‌ Il ೨೧

ಅನ್ನತಂ ನೋಕಪೂರ್ವಂ ಮೇ ವಕ್ಷ್ಮೇ ಕದಾಚನ।

ಏತತ್ತೇ ಪ್ರತಿಜಾನಾಮಿ ಸತ್ಯೇನೈವ ಶಪಾಮಿ ತೇ ವಿ೨ ತತಃ ಪ್ರಹೃಪ್ಛ ಸುಗ್ರೀವೋ ವಾನರೈ; ಸಚಿವೈಃ ಸಹ। ರಾಘವಸ್ಯ ವಚಃ ಶ್ರುತ್ವಾಪ್ರತಿಜ್ಞಾತಂ ವಿಶೇಷತಃ ೨೩

ಏವಮೇಕಾಂತಸಂಪ್ಪಕ್ಕೌ ತತಸ್ಟೌನರಬಾನರ್‌ | ಉಭಾವನ್ಕೋನ್ಯಸದ್ದಶಂ ಸುಖಂ ದುಃಖಂ ಪ್ರಭಾಷತಾಮ್‌॥ ೨೪

ಆದುದನ್ನು ಹೇಳಿದ್ದೀಯೆ. ನಿನ್ನಹಿತವಾದದಿಂದ ನನ್ನಮನಸಿಗೆ ನೆಮ್ಮದಿಯೆನಿಸಿದೆ. ಕಷ್ಟಕಾಲದಲ್ಲಿನಿನ್ನಂಥ ಆಪದ್ಭಂಧುವು ದುರ್ಲಭ (೧೭-೧೮). ಮೈಥಿಲಿಯನ್ನು ಹುಡುಕುಲುನೀನು ಪ್ರಯತ್ನಿಸಬೇಕು. ದುರಾತ್ಮನೂ ಕ್ರೂರನೂ ಆದ ರಾವಣನನ್ನು ಗೊತ್ತುಹಚ್ಚೆಬೇಕು. ಈಗ ನಾನು ಮಾಡಬೇಕಾದ್ದನ್ನು ಸಂಕೋಚವಿಲ್ಲದೆ ಹೇಳು. ಒಳ್ಳೆಯ ಹೊಲದಲ್ಲಿ ಮಳೆಗಾಲವನ್ನು ನೋಡಿ ಬಿತ್ತಿದ ಬೀಜದಂತೆ, ನನಗೆ ವಹಿಸಿದ ಕಾರ್ಯವು ಫಲಿಸಿಯೇ ತೀರುವುದೆಂದು ತಿಳಿ (೧೯-೨೦). ಆತ್ಮ ವಿಶ್ವಾಸದಿಂದ ನಾನೇನು ಹೇಳಿದೆನೋ, ವಾನರೇಂದ್ರ, ಅದು ಸತ್ಯವೆಂದೇ ನಿಶ್ಚಯಿಸು. ನಾನು ಸುಳ್ಳನ್ನು ಆಡಿದವನಲ್ಲ ಮುಂದೆಯೂ ಆಡತಕ್ಕವನಲ್ಲ ವಿಷಯದಲ್ಲಿ ಪ್ರತಿಜ್ಞೆ ಮಾಡಿಕೊಡುವೆನು. ಸತ್ಯದಮೇಲೆ ಆಣೆಯಿಟ್ಟು ಹೇಳುವೆನು'' ಎಂದನು (೨೧-೨೨). ಶ್ರೀರಾಮನು ರೀತಿಯಾಗಿ ಪ್ರತಿಜ್ಞೆ ಮಾಡಿ ಹೇಳಲು, ಸುಗ್ರೀವನೂ ಅವನ ಸಚಿವರಾದ ವಾನರರೂ ಸಂತೋಷದಿಂದ ಉಬ್ಬಿದರು. ಹೀಗೆ ವಿಶೇಷವಾಗಿ ಸ್ನೇಹವನ್ನು ಬೆಳೆಸಿಕೊಂಡು ಶ್ರೀರಾಮ -

೬೦ ಕಿಷ್ಕಿಂಧಾಕಾಂಡಃ [ಸರ್ಗಃ

ಮಹಾನುಭಾವಸ್ಯ ವಚೋ ನಿಶಮ್ಯ ಹರಿರ್ನರಾಣಾಮೃಷಭಸ್ಕ ತಸ್ಯ I ಕೃತಂ ಸಮೇನೇ ಹರಿವೀರಮುಖ್ಯ- ಸದಾ ಸಫಾರ್ಯಂ ಹೃದಯೇನ ವಿದ್ದಾನ್‌ || ೨೫

ಇತಿ ಶ್ರಿಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಸಪಮಃ ಸರ್ಗಃ

ಅಷ್ಟಮಃ ಸರ್ಗಃ ವಾಲಿವಧಪ್ರತಿಜ್ಞಾ ಪರಿತುಷಸ್ತುಸುಗ್ರೀವಸೇನ ವಾಕ್ಕೇನ ವಾನರಃ। ಲಕ್ಷ್ಮಣಸ್ಯಾಗ್ರತೋ ರಾಮಮಿದಂ ವಚನಮಬ್ರವೀತ್‌

ಸರ್ವಥಾಹಮನುಗ್ರಾಹ್ಯೋ ದೇವತಾನಾಮಸಂಶಯಃ ಉಪಪನ್ನ ಗುಣೋಪೇತಃ ಸಖಾ ಯಸ್ಯ ಭವಾನ್‌ ಮಮ

ಸುಗ್ರೀವರು ತಮ್ಮ ತಮ್ಮ ಸುಖದುಃಖಗಳನ್ನು ಹೇಳಿಕೊಂಡರು (೨೩-೨೪). ಮಹಾನುಭಾವನೂ ಪುರುಷಶ್ರೇಷ್ಠನೂ ಆದ ಶ್ರೀರಾಮನ ಮಾತನ್ನು ಕೇಳಿ, ಬುದ್ಧಿವಂತನಾದ ವಾನರೇಂದ್ರನು ತನ್ನಕಾರ್ಯವು ಕೈಗೂಡಿತೆಂದು ಮನಸ್ಸಿನಲ್ಲಿ ಸಂತೋಷಿಸಿದನು (೨೫).

ಇಲ್ಲಿಗೆ ಶ್ರೀಮದ್ರಾಮಾಯಾಣ ಕಿಷ್ಠಿಂಧಾಕಾಂಡದಲ್ಲಿಐಏಳನೆಯ ಸರ್ಗ

ಸರ್ಗ

ಸುಗ್ರೀವನು ತನ್ನದುಃಖದ ಕಾರಣವನ್ನುವಿವರಿಸುವುದು ವಾಲಿಯನ್ನುವಧಿಸುವನೆಂದು ಶ್ರೀರಾಮನ ಪ್ರತಿಜ್ಞೆ. ಸುಗ್ರೀವನು ಶ್ರೀರಾಮನ ಹೇಳಿಕೆಯಿಂದ ಸಂತುಷ್ಠನಾಗಿ ಲಕ್ಷ್ಮಣನೆದುರಿಗೆ ಶ್ರೀರಾಮನನ್ನುದ್ದೇಶಿಸಿ ಹೇಳಿದನು : ""ರಾಘವ, ರಾಜಯೋಗ್ಯವಾದ ಶೌರ್ಯಾದಿ ನಿಖಿಲ ಮಹಾಗುಣಗಳೂ ನಿನ್ನಲ್ಲಿವೆ. ನೀನು ನನ್ನ ಗೆಳೆಯ ನಾದ್ದರಿಂದ ನಾನು ದೇವತಾನುಗ್ರಹಕ್ಕೆ ಪಾತ್ರನಾದೆನು (೧-೨).

ಸರ್ಗಃ ೮] ವಾಲಿವಧಪ್ರತಿಜ್ಞಾ ೬೧

ಶಕ್ಯಂ ಖಲು ಭವೇದ್ರಾಮ ಸಹಾಯೇನ ತ್ವಯಾನಫ |

ಸುರರಾಜ್ಯಮಪಿ ಪ್ರಾಪುಂ ಸಧಾಜ್ಯಂ ಕಿಂ ಪುನಃ ಪ್ರಭೋ॥ ಸೋಹಂ ಸಭಾಜ್ಯೋ ಬಂಧೂನಾಂ ಸುಹೃದಾಂ ಚೈವ ರಾಘವ! ಯಸ್ಯಾಗ್ನಿ ಸಾಕ್ಷಿಕಂ ಮಿತ್ರಂ ಲಬ್ಬಂ ರಾಘವವಂಶಜಮ್‌

ಅಹಮಪ್ಯನುರೂಪಸೇ ವಯಸ್ಕೋ ಜ್ಞಾಸ್ಯಸೇ ಶನೈಃ | ನತು ವಕುಂ ಸಮರ್ಥೋಃಹಂ ಸ್ವಯಮಾತ್ಮಗತಾನ್‌ ಗುಣಾನ್‌ ಮಹಾತ್ಮನಾಂ ತು ಭೂಯಿಷ್ಠಂ ತ್ರದ್ದಿಧಾನಾಂ ಕೃತಾತ್ಮನಾಮ್‌

ನಿಶ್ಚಲಾ ಭವತಿ ಪ್ರೀತಿರ್ಧೆೈರ್ಯಮಾತ್ಮವತಾಂ ವರ ಜತಂವಾಸುವರ್ಣಂವಾ ವಸ್ಪಾಣ್ಯಾಭರಣಾನಿ ಚ। ಅವಿಭಕಾನಿ ಸಾಧೂನಾಮವಗಚ್ಛಂತಿ ಸಾಧವಃ॥

ಆಢ್ಕೋ ವಾಪಿ ದರಿದ್ರೋ ವಾ ದುಃಖಿತಃ ಸುಖತೋಇಪಿವಾ। ನಿರ್ದೋಷೋ ವಾ ಸದೋಪಷೋ ವಾ ವಯಸ್ಕಃ ಪರಮಾ ಗತಿಃ ॥ಭ

ಹೇ ಪ್ರಭು, ನಿನ್ನ ಸಹಾಯದಿಂದ ದೇವರಾಜ್ಯವನ್ನಾದರೂ ಕಸಿದು ಕೊಂಡೇನು. ಇನ್ನು ನನ್ನ ರಾಜ್ಯವನ್ನು ಪಡೆಯುವುದು ದುಷ್ಕರವಾದೀತೆ 9 ರಘುವಂಶ ತಿಲಕನು ಅಗ್ನಿ ಸಾಕ್ಷಿಕವಾಗಿ ನನ್ನ ಮಿತ್ರನಾದಮೇಲೆ, ನನ್ನ ಬಂಧು ಮಿತ್ರರೆಲ್ಲರ ಗೌರವಕ್ಕೆ ಪಾತ್ರನಾದೆನು (೩-೪). ಶ್ರೀರಾಮ, ನಾನು ನಿನಗೆ ಅನುರೂಪನಾದ ಮಿತ್ರನೆಂಬುದು ಕಾಲಕ್ರಮದಲ್ಲಿನಿನಗೆ ತಿಳಿದೀತು. ನನ್ನಗುಣ ಗಳನ್ನು ನಾನೇ ಹೇಳಿಕೊಳ್ಳಲಾರೆ. ನೀನು ಮನೋನಿಗ್ರಹವುಳ್ಳವರಲ್ಲಿ ಅಗ್ರಗಣ್ಯ. ಮಹಾತ್ಮರೂ ಸಂಸ್ಕೃತಿಸಂಪನ್ನರೂ ಆದ ನಿನ್ನಂತಹವರ ಪ್ರೀತಿಯು ಸರ್ವಥಾ ಅಚ ಲವಾದುದು (೫-೬). ಸಜ್ಜನರಾದ ಮಿತ್ರರು ತಮ್ಮ ರಜತ, ಸುವರ್ಣ, ವಸ್ತ್ರ ಆಭರಣ ಮುಂತಾದ ವಸ್ತುಗಳನ್ನು ಅನ್ಯೋನ್ಯವಾಗಿ ಅವಿಭಕವೆಂದೆಣಿಸುತಾರೆ. ಅವುಗಳಲ್ಲಿ ಭೇದಬುದ್ದಿಯನ್ನು ಇಡುವುದಿಲ್ಲ (೭). ಸ್ನೇಹಿತನು ಸ್ನೇಹಿತನೆಂಬುದನ್ನೇ ಮುಖ್ಯವಾಗಿ ಗಣಿಸುತಾನೆ. ಅವನು ಶ್ರೀಮಂತನಾಗಿರಲಿ-ಬಡವನಾಗಿರಲಿ, ದುಃಖಿಯಾಗಿರಲಿ-ಸುಖಿಯಾಗಿರಲಿ, ದೋಷಿಯಾಗಿರಲಿ- ದೋಷ ರಹಿತನಾಗಿರಲಿ ಸ್ನೇಹಿತನು ಅದೊಂದನ್ನೂ ಲೆಕ್ಕಿಸುವುದಿಲ್ಲ(೮).

೬೨ ಕಿಷ್ಕಿಂಧಾಕಾಂಡಃ [ಸರ್ಗಃ ಧನತ್ಯಾಗಃ ಸುಖತ್ಯಾಗೋ ದೇಹತ್ಕಾಗೋತಪಿ ವಾ ಪುನಃ। ವಯಸ್ಕಾರ್ಥೇ ಪ್ರವರ್ತಂತೇ ಸ್ನೇಹಂ ದೃಷ್ಟಾ ಿತೆಥಾವಿಧಮ್‌ | ತತಥೇತ್ಯಬ್ರವೀದ್ರಾಮಃ ಸುಗ್ರೀವಂ ಪ್ರಿಯವಾದಿನಮ್‌

ಲಕ್ಷ್ಮಣಸ್ಯಾಗ್ರತೋ ಲಕ್ಷ್ಮಾ ವಾಸವಸ್ಯೇವ ಧೀಮತಃ॥ ೧೦ ತತೋ ರಾಮಂ ಸ್ಥಿತಂ ದೃಷ್ಟ್ವಾಲಕ್ಷ್ಮಣಂ ಮಹಾಬಲಮ್‌ ಸುಗ್ರೀವಃ ಸರ್ವತಶಕ್ಷುರ್ವನೇ ಲೋಲಮಪಾತಯತ್‌ ೧೧ ದದರ್ಶ ತತಃ ಸಾಲಮವಿದೂರೇ ಹರೀಶ್ಚರಃ ಸುಪುಪಷ್ಪಮೀಷತ್ತತ್ರಾಢ್ಯಂ ಭ್ರಮರೈರುಪಶೋಭಿತಮ್‌ ೧೨ ತಸ್ಕೈಕಾಂ ಪರ್ಣಬಹುಲಾಂ ಭಂಕ್ರ್ವಾಶಾಖಾಂ ಸುಪುಷ್ಟಿತಾಮ್‌ ಸಾಲಸ್ಕಾಸೀರ್ಯ ಸುಗ್ರೀವೋ ನಿಷಸಾದ ಸರಾಘವಃ॥ ೧೩ ತಾವಾಸೀನ್‌ೌ ತತೋ ದೃಷ್ಟ್ವಾ ಹನೂಮಾನಪಿ ಲಕ್ಷ್ಮಣಮ್‌ ಸಾಲಶಾಖಾಂ ಸಮುತ್ಛಾಟ್ಯ ವಿನೀತಮುಪವೇಶಯತ್‌ ೧೪

ದೃಢವಾದ ಸ್ನೇಹವೊಂದನ್ನು ನೋಡಿ ಏನುಬೇಕಾದರೂ ನಡೆಯಬಹುದು. ಸ್ನೇಹಿತನಿಗೋಸ್ಕರ ಐಶ್ವರ್ಯವನ್ನುತ್ಯಜಿಸಬಹುದು, ಸುಖವನ್ನುತ್ಯಜಿಸಬಹುದು. ಕಡೆಗೆ ದೇಹವನ್ನಾದರೂ ಒಪ್ಪಿಸಬಹುದು'' ಎಂದನು (೯). ಆಗ ಶ್ರೀರಾಮನು ದೇವೇಂದ್ರನಂತೆ ಕಾಂತಿಯುಕನಾಗಿ ನಿಂತಿದ್ದ ಧೀಮಂತನಾದ ಲಕ್ಷ್ಮಣನೆದುರಿಗೆ ( ಅವನ ಮುಖವನ್ನುನೋಡುತ್ರು ""ಸುಗ್ರೀವ, ನೀನು ಹೇಳುವುದು ಸತ್ಯ'' ಎಂದು ಹೇಳಿದನು (೧೦). ಆಮೇಲೆ ಶ್ರೀರಾಮನೂ ಲಕ್ಷ್ಮಣನೂ ನಿಂತಿರುವುದನ್ನು ನೋಡಿಸುಗ್ರೀವನು ಸುತ್ತಲೂ ಇದ್ದಅರಣ್ಯದಲ್ಲಿಅತಿತ್ರದೃಷ್ಟಿಯನ್ನು ಹರಿಸಿದನು. ಚೆನ್ನಾಗಿ ಅರಳಿದ ಒಂದು ಸಾಲವೃಕ್ಷವು ಸಮೀಪದಲ್ಲಿಕಾಣಿಸಿತು. ಎಲೆಗಳಿಗಿಂತ ಹೂಗಳೇ ಹೆಚ್ಚಾಗಿದ್ದವು. ದುಂಬಿಗಳು ಮುತ್ತಿದ್ದವು (೧೧-೧೨). ಸುಗ್ರೀವನು ಅದರಲ್ಲಿಯೇ ಹೆಚ್ಚು ಎಲೆಗಳಿದ್ದ ಕೊಂಬೆಯೊಂದನ್ನು ಮುರಿದು ಹಾಸಿ, ಅದರ ಮೇಲೆ ರಾಘವನೊಡನೆ ಕುಳಿತನು. ಅವರಿಬ್ಬರೂ ಕುಳಿತುದನ್ನು ಕಂಡು ಹನುಮಂತ ಸಾಲವೃಕ್ಷದ ಮತ್ತೊಂದು ಶಾಖೆಯನ್ನು ಮುರಿದು ಹಾಸಿ, ಲಕ್ಷ್ಮಣನಿಗೆ ವಿನಯಪೂರ್ವಕವಾಗಿ ಅರಿಕೆಮಾಡಿ ಆದರಲ್ಲಿ ಕುಳ್ಳಿರಿಸಿದನು

ಸರ್ಗಃ ೮] ವಾಲಿವಧಪ್ರತಿಜ್ಞಾ ೬೩

ಸುಖೋಪವಿಷ್ಠಂ ರಾಮಂ ತು ಪ್ರಸನ್ನಮುದಧಿಂ ಯಥಾ।

ಫಲಪುಷ್ಪಸಮಾಕೀರ್ಣೇ ತಸ್ಮಿನ್‌ ಗಿರಿವರೋತಮೇ॥ ೧೫ ತತಃ ಪ್ರಹೃಷ್ಠಸ ಸುಗ್ರೀವಃ ಶಕ್ಯಂ ಮಧುರಯಾ ಗಿರಾ

ಉವಾಚ ಪ್ರಣಯಾದ್ರಾಮಂ ಹರ್ಷವ್ಯಾಕುಲಿತಾಕ್ಷರಮ್‌ ೧೬ ಅಹಂ ವಿನಿಕ್ಚತೋ ಭ್ರಾತ್ರಾ ಚರಾಮ್ಯೇಷ ಭಯಾರ್ದಿತಃ। ಖುಷ್ಯಮೂಕಂ ಗಿರಿವರಂ ಹೃತಭಾರ್ಯಃ ಸುದುಃಖಿತಃ ೧೭ ಸೋನಹಂ ತ್ರಸೋ ಭಯೇ ಮಗ್ನೋ ವಸಾಮ್ಯುದ್ಬಾಂತಚೇತನಃ। ವಾಲಿನಾ ನಿಕೃತೋ ಭ್ರಾತ್ರಾ ಕೃತವೈರಶ್ಚರಾಘವ ೧೮ ವಾಲಿನೋ ಮೇ ಭಯಾರ್ತಸ್ಯ ಸರ್ವಲೋಕಾಭಯಂಕರ।

ಮಮಾಪಿ ತ್ವಮನಾಥಸ್ಯ ಪ್ರಸಾದಂ ಕರ್ತುಮರ್ಹಸಿ ೧೯ ಏವಮುಕಸ್ತು ತೇಜಸ್ವೀ ಧರ್ಮಜ್ಞೋ ಧರ್ಮವತಲಃ

ಪ್ರತ್ಯುವಾಚ ಕಾಕುತ್ಸಃ ಸುಗ್ರೀವಂ ಪ್ರಹಸನ್ನಿವ ೨೦

(೧೩-೧೪). ಫಲಪುಷ್ಪಗಳಿಂದ ತುಂಬಿದ ಪರ್ವತದ ಮೇಲೆ ಶ್ರೀರಾಮನು ಶಾಂತಸಾಗರದಂತೆ ಪ್ರಸನ್ನನಾಗಿ ಕುಳಿತಿದ್ದನು. ಆಗ ಸಂತುಷ್ಠನಾದ ಸುಗ್ರೀವನು ಹರ್ಷಾತಿರೇಕದಿಂದ ತೊದಲುತ್ತ ಮೃದುವಾಕ್ಕದಿಂದ ಮೆಲ್ಲಗೆ ಮಾತನಾಡ ಲಾರಂಭಿಸಿದನು (೧೫-೧೬) : ""ಶ್ರೀರಾಮ, ನಾನು ಅಣ್ಣನ ಉಪದ್ರವಕ್ಕೊಳಗಾಗಿ ತಲ್ಲಣಿಸಿ ಯಷ್ಯಮೂಕದಲ್ಲಿ ತೊಳಲುತ್ತಿದ್ದೇನೆ. ನನ್ನ ಹೆಂಡತಿಯನ್ನು ಅವನು ಅಪಹರಿಸಿದ್ದಾನೆ. ಅವನಿಗೆ ಹೆದರಿ ಭಯದಲ್ಲಿಮುಳುಗಿ ದಿಕ್ಕುಗಾಣದೆ ಕಂಗೆಟ್ಟುಅಲೆಯುತ್ತಿದ್ದೇನೆ. ವಾಲಿಯ ಅಪಕಾರಕ್ಕೆ ತುತ್ತಾಗಿದ್ದೇನೆ. ನಮ್ಮಿಬ್ಬರಿಗೆ ವೈರವು ಬೆಳೆದಿದೆ (೧೭-೧೮). ನೀನು ಸರ್ವಲೋಕಗಳಿಗೂ ಅಭಯ ವನ್ನೀಯಲು ಸಮರ್ಥ. ವಾಲಿಯ ಭಯದಿಂದ ದಿಕ್ಕುಗೆಟ್ಟು ಅನಾಥನಾಗಿರುವ ನನಗೂ ಅಭಯವನ್ನಿತ್ತು ಅನುಗ್ರಹಿಸು'' ಎಂದು ಪ್ರಾರ್ಥಿಸಿದನು (೧೯). ಅದನ್ನು ಕೇಳಿ ತೇಜಸ್ವಿಯೂ ಧರ್ಮಜ್ಞನೂ ಧರ್ಮರಕ್ಷಕನೂ ಆದ ಕಾಕುತ್ತನು ಮುಗುಳ್ನಗೆಯನ್ನು ಬೀರುತ್ತ"“ಸುಗ್ರೀವ, ಉಪಕಾರವೇ ಮಿತ್ರನಿಂದಾಗಬೇಕಾದ

೬೪ ಕಿಷ್ಕಿಂಧಾಕಾಂಡಃ [ಸರ್ಗಃ

ಉಪಕಾರಫಲಂ ಮಿತ್ರಮಪಕಾರೋರಿಲಕ್ಷಣಮ್‌

ಅದೈ ತಂ ಹನಿಷ್ಯಾಮಿ ತವ ಭಾರ್ಯಾಪಹಾರಿಣಮ್‌ ೨೧ ಅಮೇ ಹಿಮೇ ಮಹಾವೇಗಾಃ ಪತ್ರಿಣಸಿಗ್ಗತೇಜಸಃ ಕಾರ್ತಿಕೇಯವನೋದ್ಭ್ಬೂತಾಃ ಶರಾ ಹೇಮವಿಭೂಷಿತಾಃ ಎ೨ ಕಂಕಪತ್ರಪ್ರತಿಚ್ಛನ್ನಾಮಹೇಂದ್ರಾಶನಿಸಂನಿಭಾಃ।

ಸುಪರ್ವಾಣಃ ಸುತೀಕ್ಷಾಗ್ರಾಃ ಸರೋಷಾ ಇವ ಪನ್ನಗಾಃ ೨೩ ಭ್ರಾತೃಸಂಜ್ಞಮಮಿತ್ರಂ ತೇ ವಾಲಿನಂ ಕೃತಕಿಲ್ಫಿಷಮ್‌ |

ಶರೈರ್ವಿನಿಹತಂ ಪಶ್ಯ ಎರ್ಕಿರ್ಣಮಿವ ಪರ್ವತಮ್‌ ೨೪ ರಾಘವಸ್ಯ ವಚಃ ಶ್ರುತ್ವಾಸುಗ್ರೀವೋ ವಾಹಿನೀಪತಿಃ | ಪ್ರಹರ್ಷಮತುಲಂ ಲೇಭೇ ಸಾಧು ಸಾದ್ದಿತಿ ಚಾಬ್ರವೀತ್‌ ೨೫ ರಾಮ ಶೋಕಾಭಿಭೂತೋs ಹಂ ಶೋಕಾರ್ತಾನಾಂ ಭವಾನ್‌ ಗತಿಃ ವಯಸ್ಕ ಇತಿ ಕೃತ್ವಾಹಿ ತ್ವಯ್ಯಹಂ ಪರಿದೇವಯೇ ೨೬

ಪ್ರಯೋಜನ. ಅಪಕಾರ ಮಾಡುವವನೇ ಶತ್ರು. ನಿನ್ನಭಾರ್ಯೆಯನ್ನಪಹರಿಸಿದ ಶತ್ರುವನ್ನು ದಿನವೇ ವಧಿಸುವೆನು (೨೦-೨೧). ಮಹಾವೇಗಶಾಲಿಗಳಾದ ನನ್ನಬಾಣಗಳ ತೇಜಸ್ಸುಅತ್ಯುಗ್ರವಾದುದು. ಚಿನ್ನದ ಕಟ್ಟುಗಳಿರುವ ಶರಗಳು ಕಾರ್ತಿಕೇಯನ ಶರವಣದಲ್ಲಿ ಹುಟ್ಟಿ ಬೆಳೆದವು. ಗರಿಗಟ್ಟಿದ ಶರಗಳು ಇಂದ್ರನ ಸಿಡಿಲಿಗೆ ಸಮಾನವಾದವು. ಇವುಗಳ ಗಿಣ್ಣುಗಳನ್ನೂ ತೀಕ್ಷ್ಣವಾದ ಅಲಗುಗಳನ್ನೂ ಗಮನಿಸು. ಕೆರಳಿದ ಸರ್ಪಗಳೇ ಇವು (೨೨-೨೩). ನಿನ್ನ ಅಣ್ಣನೆಂಬ ಶತ್ರುವೂ ಪಾಪಿಯೂ ಆದ ವಾಲಿಯು ಅಸ್ತಗಳಿಂದ ಹತನಾಗಿ ಬೀಳುವನು. ಭಿನ್ನಭಿನ್ನವಾದ ಬೆಟ್ಟದಂತೆ ಅವನು ಉರುಳುವುದನ್ನು ನೋಡುತಿರು'' ಎಂದು ಹೇಳಿದನು (೨೪). ಶ್ರೀರಾಮನ ನುಡಿಯನ್ನು ಕೇಳಿ ವಾನರಸೇನಾ ಪತಿಯಾದ ಸುಗ್ರೀವನು ಆನಂದತುಂದಿಲನಾಗಿ "ಭಲೆ! ಭಲೆ! ಎಂದನು. ಅವನು ಮತ್ತೆ ""ಶ್ರೀರಾಮ, ನಾನು ಶೋಕಾಕ್ರಾಂತನಾಗಿದ್ದೇನೆ. ಶೋಕಾರ್ತರಿಗೆ ನೀನೇ ಗತಿ. ನೀನು ನನ್ನಮಿತ್ರನೆಂದು ತಿಳಿದು ನನ್ನದುಃಖವನ್ನು ತೋಡಿಕೊಳ್ಳುತಿದ್ದೇನೆ (೨೫-೨೬).

ಸರ್ಗಃ ೮] ವಾಲಿವಧಪ್ರತಿಜ್ಞಾ ೬೫

ತಂ ಹಿ ಪಾಣಿಪ್ರದಾನೇನ ವಯಸ್ಕೋ ಮೇಶಕಗ್ನಿಸಾಕ್ಷಿಕಮ್‌ |

ಕೃತಃ ಪ್ರಾಣೈರ್ಬಹುಮತಃ ಸತ್ಯೇನಾಪಿ ಶಪಾಮಿ ತೇ ೨೭ ವಯಸ್ಕ ಇತಿ ಕತ್ವಾಚ ವಿಸ್ರಬ್ಬಂ ಪ್ರವದಾಮ್ಯಹಮ್‌ | ದುಃಖಮಂತರ್ಗತಂ ಯನ್ನೇ ಮನೋ ಹರತಿ ನಿತ್ಯಶಃ ೨೮

ಏತಾವದುಕಾ ಶ್ಲಿವಚನಂ ಬಾಷ್ಪ ದೂಷಿತಲೋಚನಃ। ಬಾಷ್ಟೋಪಹತಯಾ ವಾಚಾ ನೋಚ್ಚೆ ಶಕ್ನೋತಿ ಭಾಷಿತುಮ್‌ | ೨೯

ಬಾಷ್ಠವೇಗಂ ತು ಸಹಸಾ ನದಿವೇಗಮಿವಾಗತಮ್‌ ಧಾರಯಾಮಾಸ ಧೈರ್ಯೇಣ ಸುಗ್ರೀವೋ ರಾಮಸಂನಿಧೌಾ॥ ೩೦

ನಿಗೃಹ್ಯ ತು ತಂ ಬಾಷ್ಟಂ ಪ್ರಮೃಜ್ಯ ನಯನೇ ಶುಭೇ |

ವಿನಿಃ ಶಸ್ಕ ತೇಜಸ್ವೀ ರಾಘವಂ ಪುನರಬ್ರವೀತ್‌ ೩೧ ಪುರಾಹಂ ವಾಲಿನಾ ರಾಮ ರಾಜ್ಯಾತ್‌ ಸ್ವಾದವರೋಪಿತಃ ಪರುಷಾಣಿ ಸಂಶ್ರಾವ್ಯ ನಿರ್ಧೂತೋಸಸ್ಥಿ ಬಲೀಯಸಾ ೩೨

ನೀನು ಅಗ್ಲಿ ಸಾಕ್ಷಿಕವಾಗಿ ಕೈನೀಡಿ ನನ್ನಸ್ನೇಹಿತನಾಗಿದ್ದೀಯೆ. ಸತ್ಯದ ಮೇಲೆ ಆಣೆಯಿಟ್ಟುಹೇಳುತ್ತೇನೆ - ನನ್ನಪ್ರಾಣಕ್ಕಿಂತಲೂ ನೀನು ಹೆಚ್ಚುಪ್ರಿಯನಾಗಿದ್ದೀಯೆ. ಸ್ನೇಹಿತನೆಂಬ ಸಲಿಗೆಯಿಂದ ಧಾರಾಳವಾಗಿ ಮಾತಾಡುತ್ತಿದ್ದೇನೆ. ಅಂತರ್ಗತವಾದ ನನ್ನ ದುಃಖವು ಸದಾ ನನ್ನ ಮನಸ್ಸನ್ನು ಕೊರೆಯುತ್ತಿದೆ'' ಎಂದನು (೨೭-೨೮). ಅಷ್ಟರಲ್ಲಿಸುಗ್ರೀವನಿಗೆ ಕಣ್ಣೀರು ಉಕ್ಕಿತು. ಕಂಠವು ಬಿಗಿದು ಮಾತು ತೊದಲಿತು. ಅವನಿಗೆ ಗಟ್ಟಿಯಾಗಿ ಮಾತಾಡಲಾಗಲಿಲ್ಲ ನದೀಪ್ರವಾಹದಂತೆ ಥಟ್ಟನೆ ನುಗ್ಗಿ ಬಂದ ಬಾಷ್ಟವೇಗವನ್ನು ಸುಗ್ರೀವನು ಬಿಗಿಮನಸ್ಸಿನಿಂದ ತಡೆಹಿಡಿದನು. ಶ್ರೀರಾಮನ ಸನ್ನಿಧಿಯಲ್ಲಿ (ಅಳುವುದು ಯುಕವಲ್ಲವೆಂದು) ಕಣ್ಣೀರನ್ನು ಬಿಗಿಹಿಡಿದನು (೨೯-೩೦). ತೇಜಸ್ವಿಯು ಕಣ್ಣುಗಳನ್ನೊರಸಿಕೊಂಡು ನಿಟ್ಟುಸಿರುಬಿಟ್ಟು ರಾಘವನನ್ನು ನೋಡಿ ಮಾತನ್ನು ಮುಂದುವರಿಸಿದನು. : ""ಶ್ರೀರಾಮ, ಬಲಿಷ್ಠನಾದ ವಾಲಿಯು ನನ್ನನ್ನು ಯುವರಾಜಪದವಿಯಿಂದ ಕೆಳಗಿಳಿಸಿ ಕೆಟ್ಟ ಮಾತುಗಳಿಂದ ಬಯ್ದುರಾಜ್ಯದಿಂದ ಅಟ್ಟಿಬಿಟ್ಟನು (೩೧-೩೨).

4%

೬೬ ಕಿಷ್ಟಿಂಧಾಕಾಂಡಃ [ಸರ್ಗಃ

ಹೃತಾ ಭಾರ್ಯಾ ಮೇ ತೇನ ಪ್ರಾಣೇಭ್ಯೋತಪಿ ಗರೀಯಸೀ |

ಸುಹೃದಶ್ಚ ಮದೀಯಾ ಯೇ ಸಂಯತಾ ಬಂಧನೇಷು ತೇ ೩೩ ಯತ್ನವಾಂಶ್ಚ ಸುದುಪ್ಠಾತ್ಮಾ ಮದ್ದಿನಾಶಾಯ ರಾಘವ ಬಹುಶಸತ್ಸ್ರಯುಕಾಶ್ಚ ವಾನರಾ ನಿಹತಾ ಮಯಾ ೩೪

ಶಂಕಯಾ ತ್ವೇತಯಾ ಚೇಹ ದೃಷ್ಟಾ ತ್ಪಾಮಪಿ ರಾಘವ ನೋಪಸರ್ಪಾಮ್ಯಹಂ ಭೀತೋ ಭಯೇ ಸರ್ವೇ ಹಿ ಬಿಭ್ಯತಿ॥ ೩೫

ಕೇವಲಂ ಹಿ ಸಹಾಯಾ ಮೇ ಹನೂಮತ್ಛಮುಖಾಸ್ತಿಮೇ। ಅತೋ ಹಂ ಧಾರಯಾಮೃದ್ಯ ಪ್ರಾಣಾನ್‌ ಕೃಪ್ಪಗತೋತಪಿ ಸನ್‌

ಏತೇ ಹಿ ಕಪಯಃ ಸಿಗ್ಬಾ ಮಾಂ ರಕ್ಷಂತಿ ಸಮಂತತಃ ಸಹ ಗಚ್ಛಂತಿ ಗಂತವ್ಯೇ ನಿತ್ಯಂ ತಿಪ್ಕಂತಿ ಸಿ ತೇ॥ ೩೭

ಸಂಕ್ಷೇಪಸ್ತ್ವೇಷ ತೇ ರಾಮ ಕಿಮುಕ್ತ್ವಾವಿಸರಂಹಿತೇ। ಸಮೇ ಜ್ಯೇಷ್ಟೋ ರಿಪುರ್ಭ್ರಾತಾ ವಾಲೀ ವಿಶ್ರುತಪೌರುಷಃ॥

ಅಲ್ಲದೆ ನನ್ನಪ್ರಾಣಪ್ರಿಯಳಾದ ಹೆಂಡತಿಯನ್ನುತನ್ನವಶಕ್ಕೆ ತೆಗೆದುಕೊಂಡನು. ನನ್ನ ಹಿತಕಾಂಕ್ಷಿಗಳಾದ ಮಿತ್ರರನ್ನು ಸೆರೆಯಿಟ್ಟನು. ಅಷ್ಟೇ ಅಲ್ಲ; ದುಷ್ಟನು ನನ್ನ ಪ್ರಾಣವನ್ನೇ ತೆಗೆದುಬಿಡಬೇಕೆಂದು ಪ್ರಯತ್ನ ಮಾಡುತ್ತಲೇ ಇದ್ದಾನೆ. ಅದಕ್ಕಾಗಿ ಎಷ್ಟೋ ಮಂದಿ ವಾನರನ್ನು ಕಳಿಸಿದ್ದಾನೆ. ನಾನು ಅವರನ್ನು ಕೊಂದುಹಾಕಿದ್ದೇನೆ (೩೩-೩೪). ಶಂಕೆಯಿಂದಲೇ, ರಾಘವ, ನಿನ್ನನ್ನು ಮೊದಲು ಕಂಡಾಗಲೂ ' ಹೆದರಿ ನಾನು ನಿನ್ನ ಬಳಿಗೆ ಬರಲಿಲ್ಲ. ಭಯನಿಮಿತ್ತವಿದ್ದಾಗ ಎಲ್ಲರೂ ಭಯ ಪಡುವುದು ಸಹಜವಲ್ಲವೆ? ಹನುಮಂತನೇ ಮೊದಲಾದ ಈನಾಲ್ವರು ಮಾತ್ರವೇ ನನಗೆ ಸಹಾಯಕರಾಗಿದ್ದಾರೆ. ಇವರ ಬೆಂಬಲವಿರುವುದರಿಂದಲೇ ನಾನು ಕಷ್ಟದಲ್ಲಿಯೂ ಪ್ರಾಣವನ್ನಿಟ್ಟುಕೊಂಡಿದ್ದೀನೆ (೩೫-೩೬). ಇವರು ನನ್ನಲ್ಲಿ ಸ್ನೇಹವಿಟ್ಟು ಎಚ್ಚರಿಕೆಯಿಂದ ನನ್ನನ್ನು ರಕ್ಷಿಸುತ್ತಿದ್ದಾರೆ. ನಾನು ಹೋದ ಕಡೆಗೆ ನನ್ನನ್ನು ಹಿಂಬಾಲಿಸಿ ಬರುವರು. ನಿಂತಲ್ಲಿ ನಿಲ್ಲುವರು. ವಿಸರದಿಂದ ಆಗ ಬೇಕಾದ್ದೇನು ? ಒಟ್ಟಿನಲ್ಲಿ ಸಾರಾಂಶವಿಷ್ಟು: ನನ್ನ ಅಣ್ಣನಾದ ವಾಲಿ ಮಹಾ ಪರಾಕ್ರಮಿ. ಅವನೇ ನನ್ನವೈರಿ (೩೭-೩೮).

ಸರ್ಗಃ ೮] ವಾಲಿವಧಪ್ರತಿಜ್ಞಾ ೬೭

ತದ್ದಿನಾಶಾದ್ದಿಮೇ ದುಃಖಂ ಪ್ರನಷ್ಟಂ ಸ್ಕಾದನಂತರಮ್‌

ಸುಖಂ ಮೇ ಜೀವಿತಂ ಚೈವ ತದ್ದಿನಾಶನಿಬಂಧನಮ್‌ ೩೯ ಏಷ ಮೇ ರಾಮ ಶೋಕಾಂತಃ ಶೋಕಾರ್ತೇನ ನಿವೇದಿತಃ।

ದುಃಖಿತಃ ಸುಖಿತೋ ವಾಪಿ ಸುಖ್ಯುರ್ನಿತ್ಯಂ ಸಖಾ ಗತಿಃ ೪೦ ಶುತ್ವೈತದ್ವಚನಂ ರಾಮಃ ಸುಗ್ರೀವಮಿದಮಬ್ರವೀತ್‌ ಕಿಂನಿಮಿತಮಭೂದ್ವೈರಂ ಶ್ರೋತುಮಿಚ್ಛಾಮಿ ತತ್ತ್ವತಃ ೪೧

ಸುಖಂ ಹಿ ಕಾರಣಂ ಶ್ರುತ್ವಾವೈರಸ್ಯ ತವ ವಾನರ | ಆನಂತರ್ಯಂ ವಿಧಾಸ್ಕಾಮಿ ಸಂಪ್ರಧಾರ್ಯ ಬಲಾಬಲಮ್‌ ೪೨ ಬಲವಾನ್‌ ಹಿ ಮಮಾಮರ್ಷಃ ಶ್ರುತ್ವಾ ತ್ಹಾಮವಮಾನಿತಮ್‌

ವರ್ಧತೇ ಹೃದಯೋತ್ಕಂಪೀ ಪ್ರಾವಡ್ಡೇಗ ಇವಾಂಭಸಃ॥ ೪೩ ಹೃಷ್ಟಃ ಕಥಯ ವಿಸ್ರಬ್ದೋ ಯಾವದಾರೋಪ್ಯತೇ ಧನುಃ ಸಷ್ಟಶ್ಷ ಹಿಮಯಾ ಬಾಣೋ ನಿರಸಪ್ಲ ರಿಪುಸವ॥ ೪೪

ಅವನ ಅಂತ್ಯವಾದೊಡನೆ ನನ್ನದುಃಖವೂ ಅಂತ್ಯವಾಗುವುದು. ನನ್ನಸುಖ, ನನ್ನ ಬದುಕು-ಎಲ್ಲವೂ ಅವನ ಸಾವನ್ನು ಅವಲಂಬಿಸಿದೆ. ರಾಘವ, ನನ್ನಶೋಕವು ಕೊನೆಗೊಳ್ಳುವ ಬಗೆ ಇದೊಂದೇ. ಶೋಕಾರ್ತನಾಗಿ ಇದನ್ನು ನಿವೇದಿಸಿ ಕೊಂಡಿದ್ದೇನೆ. ದುಃಖದಲ್ಲಿರಲಿ, - ಸುಖದಲ್ಲಿರಲಿ ಮಿತ್ರನಿಗೆ ಮಿತ್ರನೇ ಗತಿ'' ಎಂದು ಹೇಳಿದನು (೩೯-೪೦). ಆಗ ಶ್ರೀರಾಮನು ಸುಗ್ರೀವನನ್ನು ಕುರಿತು ""ವಾನರೋತ್ರಮ, ನಿಮ್ನಿಬ್ಬರಿಗೆ ವೈರ ಉಂಟಾಗಲು ನಿಮಿತ್ತವಾದರೂ ಏನು? ಅದನ್ನು ಸರಿಯಾಗಿ ಕೇಳಲಿಚ್ಛಿಸುತ್ತೇನೆ. ಯಥಾಸ್ಥಿತವಾಗಿ ಹೇಳು. ಮೊದಲುವೈರ ಕಾರಣವನ್ನುಕೇಳಿ, ಆದರ ಬಲಾಬಲಗಳನ್ನುತೂಕಮಾಡಿ, ಅನಂತರ ನಿನಗೆ ಸುಖ ವಾಗುವಂತೆ ಪ್ರತಿಕ್ರಿಯೆಯನ್ನು ಕೈಗೊಳ್ಳಬೇಕಾಗಿದೆ. (೪೧-೪೨). ನಿನಗೆ ಅವಮಾನವಾಗಿರುವುದನ್ನು ಕೇಳಿ ನನ್ನ ಕ್ರೋಧವು ಅತಿಯಾಗಿ ವರ್ಧಿಸುತಿದೆ. ಹೃದಯದ ತಾಳ್ಮೆಯನ್ನು ಕದಲಿಸುತ್ತಿದೆ. ಮಳೆಗಾಲದ ಪ್ರವಾಹವೇಗದಂತೆ ಏರುತ್ತಿದೆ ನನ್ನಲ್ಲಿವಿಶ್ವಾಸವಿಟ್ಟುಸಂತೋಷದಿಂದ ನಿಸ್ಸಂಕೋಚವಾಗಿ ವಿವರಿಸು. ಕೂಡಲೆ ಧನುಸಿಗೆ ಹೆದೆಯೇರಿಸುವೆನು. ನಾನು ಬಾಣವನ್ನು ಬಿಡುವುದೇ ತಡ,

೬೮ ಕಿಷ್ಟಿಂಧಾಕಾಂಡಃ [ಸರ್ಗಃ

ಏವಮುಕಸ್ತುಸುಗ್ರೀವಃ ಕಾಕುತ್ನೇನ ಮಹಾತ್ಮನಾ |

ಪ್ರಹರ್ಷಮತುಲಂ ಲೇಭೇ ಚತುರ್ಭಿಃ ಸಹ ವಾನರೈಃ॥ ೪೫ ತತಃ ಪ್ರಹೃಷ್ಠವದನಃ ಸುಗ್ರೀವೋ ಲಕ್ಷ್ಮಣಾಗ್ರಜೇ। ವೈರಸ್ಯ ಕಾರಣಂ ತತ್ತಮಾಖ್ಯಾತುಮುಪಚಕ್ರಮೇ ೪೬

ಇತಿ ಶ್ರೀಮದ್ರಾಮಾಯಣೇ ಕಿಪ್ಟಿಂಧಾಕಾಂಡೇ ಅಷ್ಟಮಃಸಗಃ

6) ಸಿ he

ಇದ್‌

ನಿನ್ನ ಶತ್ರುವು ಸತನೆಂದೇ ತಿಳಿ'' ಎಂದು ಹೇಳಿದನು (೪೩-೪೪). ಮಹಾತ್ಮನಾದ ಕಾಕುತ್ತ್ಮನು ಹೀಗೆನ್ನಲು ಸುಗ್ರೀವನಿಗೂ ಅವನ ಸಚಿವರಾದ ನಾಲ್ವರು ವಾನರರಿಗೂ ಪರಮಾನಂದವಾಯಿತು. ಸುಗ್ರೀವನ ಮುಖವು ಅರಳಿತು. ಅವನು ವಾಲಿಯೊಡನೆ ಬೆಳೆದ ವೈರಕ್ಕೆ ಯಥಾರ್ಥವಾದ ಕಾರಣವನ್ನು ಹೇಳ ತೊಡಗಿದನು (೪೫-೪೬).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಟಿಂಧಾಕಾಂಡದಲ್ಲಿ ಎಂಟನೆಯ ಸರ್ಗ

೬೯

ನವಮಃ ಸರ್ಗಃ ವೈರವೃತಾಂತಾನುಕ್ರಮಃ ವಾಲೀ ನಾಮ ಮಮ ಭ್ರಾತಾ ಜ್ಯೇಷ್ಠಃ ಶತ್ರುನಿಷೂದನಃ | ಹಿತುರ್ಬಹುಮತೋ ನಿತ್ಯಂ ಮಮಾಪಿ ತಥಾ ಪುರಾ

ಪಿತರ್ಯುಪರತೇ$ತಸ್ಥಾಕಂ ಜ್ಯೋಷ್ಠೋತ5 ಯಮಿತಿ ಮಂತ್ರಿಭಿಃ ಕಪೀನಾಮಿಶ್ಚರೋ ರಾಜ್ಯೇ ಕೃತಃ ಪರಮಸಂಮತಃ॥

ರಾಜ್ಯಂ ಪ್ರಶಾಸತಸಸ್ಕ ಪಿತೃಪೈತಾಮಹಂ ಮಹತ್‌ | ಅಹಂ ಸರ್ವೇಷು ಕಾಲೇಷು ಪ್ರಣತಃ ಪ್ರೇಷ್ಯವತ್‌ ಸ್ಥಿತಃ॥

ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುಂದುಭೇಃ ಸುತಃ। ತೇನ ತಸ್ಯ ಮಹದ್ದೈರಂ ಸ್ವೀಕ್ಛತಂ ವಿಶ್ರುತಂ ಪುರಾ॥

ಸರ್ಗ

ಸುಗ್ರೀವನುವಾಲಿಯು ವೈರಕ್ಕೆ ಕಾರ ಣವನ್ನು ಹೇಳುವುದು. ಮಾಯಾವಿಯೆಂಬರಾಕ್ಷಸನ ವೃತಾಂತ

ಸುಗ್ರೀವನು ಹೀಗೆಂದನು : ""ಶ್ರೀರಾಮ, ನನ್ನ ಅಣ್ಣನಾದ ವಾಲಿಯು ಶತ್ರುಗಳನ್ನು ಹುಟ್ಟಡಗಿಸುವ ಮಹಾಶೂರ. ನನ್ನತಂದೆಗೆ ಆತನಲ್ಲಿಅಭಿಮಾನವಿತ್ತು ನನಗೂ ಅವನಲ್ಲಿಪೂಜ್ಯಭಾವವಿತ್ತು ನಮ್ಮತಂದೆಯು ದಿವಂಗತನಾಗಲುವಾಲಿ ಯು ಕಪಿರಾಜ್ಯಕ್ಕೆ ಒಡೆಯನಾದನು. ಅವನು ಹಿರಿಯನೆಂದು ಮಂತ್ರಿಗಳು ರಾಜ ಪಟ್ಟಕ್ಕೇರಿಸಿದರು. ಕಾರ್ಯವು ಸರ್ವ ಸಮೃತವಾಗಿತ್ತು(೧-೨). ಪಿತೃಪರಂ ಪರೆಯಿಂದ ಬಂದ ದೊಡ್ಡ ರಾಜ್ಯವನ್ನು ಅವನು ಆಳುತ್ತಿರುವಾಗ, ನಾನು ಸರ್ವ ಕಾಲದಲ್ಲಿಯೂ ಅವನಿಗೆ ವಿಧೇಯನಾಗಿ ಭೃತ್ಯನಂತೆ ನಡೆದುಕೊಂಡಿದ್ದೆನು. ಹೀಗಿರಲು ಮಾಯಾವಿಯೆಂಬ ಶೂರನೊಬ್ಬನಿದ್ದನು. ಅವನು ದುಂದುಭಿಯೆಂಬ ದೈತ್ಯನ ಹಿರಿಯ ಮಗ. ಮಾಯಾವಿಗೂ ವಾಲಿಗೂ ಒಂದಾನೊಂದು ಸ್ತ್ರೀ ನಿಮಿತವಾಗಿ ಮಹತ್ತರವಾದ ವೈರವು ಬೆಳೆದಿತ್ತು ಇದು ಲೋಕಾವಿದಿತವಾದ ವೃತ್ತಾಂತ (೩-೪).

4**

೭೦ ಕಿಷ್ಕಿಂಧಾಕಾಂಡಃ [ಸರ್ಗಃ

ಸತು ಸುಪಜನೇ ರಾತ್ರಿ ಕಿಷ್ಟಿಂಧಾದ್ದಾರಮಾಗತಃ

ನರ್ದತಿ ಸ್ಥಸುಸಂರಬ್ಲೋ ವಾಲಿನಾಂ ಚಾಹ್ಹಯದ್ರಣೇ॥ ಪ್ರಸುಪಸ್ತುಮಮ ಭ್ರಾತಾ ನರ್ದಿತಂ ಭೈರವಸ್ಪನಮ್‌

ಶ್ರುತ್ಹಾನ ಮಮೃಹೇ ವಾಲೀ ನಿಷ್ಠಪಾತ ಜವಾತ್ರದಾ ಸತುವೈ ನಿಃಸ್ಪತಃ ಕ್ರೋಧಾತಂ ಹಂತುಮಸುರೋತಮಮ್‌ ವಾರ್ಯಮಾಣಸತಃ ಸ್ವೀಭಿರ್ಮಯಾ ಪ್ರಣತಾತ್ಮನಾ ಸತುನಿರ್ಧೂಯ ಸರ್ವಾನ್ನೋ ನಿರ್ಜಗಾಮ ಮಹಾಬಲಃ।

ತತೋ ಹಮಷಿ ಸೌಹಾರ್ದಾನ್ಸಿಸ್ಪತೋ ವಾಲಿನಾ ಸಹ ಸತುಮೇ ಭ್ರಾತರಂ ದೃಷ್ಚ್ವಾಮಾಂ ದೂರಾದವಸ್ಥಿತಮ್‌ ಅಸುರೋ ಜಾತಸಂತ್ರಾಸಃ ಪ್ರದುದ್ರಾವ ತತೋ ಭೃಶಮ್‌ ತಸ್ಮಿನ್‌ ದ್ರವತಿ ಸಂತ್ರಸೇ ಹ್ಯಾವಾಂ ದ್ರುತತರಂ ಗತೌ ಪ್ರಕಾಶಶ್ಹಕ್ಸತೋ ಮಾರ್ಗಶ್ಚಂದ್ರೋಣೋದ್ಧಚ್ಛತಾ ತದಾ॥ ೧೦

ಮಯಾವಿಯು ಒಂದುಸಲ ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದಾಗ ಕಿಷ್ಕಿಂಧಾ ನಗರದ ಹೆಬ್ಬಾಗಿಲಿಗೆ ಬಂದು ಗರ್ಜಿಸತೊಡಗಿದನು. ಅತ್ಯಂತ ಆವೇಶದಿಂದ ವಾಲಿಯನ್ನು ಹೊಡೆದಾಟಕ್ಕೆ ಕರೆದನು (೫). ಮಲಗಿದ್ದ ನನ್ನ ಅಣ್ಣನು ಭೀಕರ ಧ್ವನಿಯ ಗರ್ಜನೆಯನ್ನು ಕೇಳಿದನು. ಅವನ ಸಹನೆ ತಪ್ಪಿತು. ಕೂಡಲೆ ಮೇಲಕ್ಕೆ ಜಿಗಿದು ಯುದ್ಧಕ್ಕೆ ಹೊರಟನು. ದೈತ್ಯನನ್ನು ಕೊಲ್ಲಲು ವಾಲಿಯು ಸಿಟ್ಟಿನ ಭರದಿಂದ ನುಗ್ಗತಿರಲು ಸ್ತ್ರೀಯರೆಲ್ಲರೂ ಬೇಡಬೇಡವೆಂದರು. ನಾನು ಅವನಿಗೆ ವಂದಿಸಿ ಸಂತೈಸಲು ಯತ್ನಿಸಿದೆನು (೬-೭). ಆದರೆ ವಾಲಿಯು ನಮ್ಮೆಲ್ಲರನ್ನೂ ತಳ್ಳಿ ಯುದ್ಧಕ್ಕೆ ಹೊರಟೇಬಿಟ್ಟನು. ಅವನು ಮಹಾಬಲ ಶಾಲಿಯೇನೂ ಹೌದು. ಆದರೂ ನಾನು ಸೌಹಾರ್ದದಿಂದ ವಾಲಿಯ ಬೆಂಬಲಕ್ಕಾಗಿ ಅವನೊಡನೆ ಹೋದೆನು (೮). ಆದೈತ್ಯನುನನ್ನಅಣ್ಣನನ್ನೂಸ್ವಲ್ಪ ದೂರದಲ್ಲಿ ನಿಂತಿದ್ದ ನನ್ನನ್ನೂ ಕಂಡೊಡನೆ ಹೆದರಿ ಓಡಿ ಹೋದನು! ನಾವಿಬ್ಬರೂ ಅವನನ್ನು ವೇಗದಿಂದ ಅಟ್ಟಿಸಿಕೊಂಡುಹೋದೆವು. ಆಗತಾನೇ ಚಂದ್ರನು ಉದಯಸಿ ಮೇಲಕ್ಕೆ ಏರುತ್ತಿದ್ದ; ದಾರಿಯು ಸ್ಪಷ್ಟವಾಗಿ ಕಾಣುತ್ತಿತ್ತು(೯-೧೦).

ಸರ್ಗಃ ೯] ವೈರವೃತ್ತಾಂತಾನುಕ್ರಮಃ ೭೧

ತೃಣೈರಾವೃತಂ ದುರ್ಗಂ ಧರಣ್ಯಾ ವಿವರಂ ಮಹತ್‌

ಪ್ರವಿವೇಶಾಸುರೋ ವೇಗಾದಾವಾಮಾಸಾದ್ಯ ವಿಷ್ಠಿತ್‌ ೧೧ ತಂ ಪ್ರಎಷ್ಟಂ ರಿಪುಂ ದೃಷ್ಟ್ವಾಬಿಲಂ ರೋಷವಶಂ ಗತಃ!

ಮಾಮುವಾಚ ತದಾ ವಾಲೀ ವಚನಂ ಕ್ಷುಭಿತೇಂದ್ರಿಯಃ ೧೨ ಇಹ ತ್ರಂ ತಿಷ್ಠ ಸುಗ್ರೀವ ಬಿಲದ್ದಾಧಿ ಸಮಾಹಿತಃ

ಯಾವದತ್ರ ಪ್ರವಿಶ್ಯಾಹಂ ನಿಹನ್ನಿ ಸಹಸಾ ರಿಪುಮ್‌ ೧೩

ಮಯಾ ತ್ವೇತದ್ದಚಃ ಶ್ರುತ್ವಾಯಾಚಿತಃ ಪರಂತಪಃ ಶಾಪಯಿತ್ವಾಚ ಮಾಂ ಪದ್ಭ್ಯಾಂ ಪ್ರವಿವೇಶ ಬಿಲಂ ಮಹತ್‌ ೧೪ ತಸ್ಯ ಪ್ರವಿಷ್ಠಸ್ಯ ಬಿಲಂ ಸಾಗ್ರಃ ಸಂವತ್ರರೋ ಗತಃ।

ಸ್ಥಿತಸ್ಕ ಮಮ ದ್ವಾರಿ ಕಾಲೋ ವೃತ್ಯವರ್ತತ॥ ೧೫ ಅಹಂ ತು ನಷಂ ತಂ ಜಾತಾಸೇಹಾದಾಗತಸಂಭ್ರಮಃ

ಭ್ರಾತರಂ ಪಶ್ಯಾಮಿ ಪಾಪಾಶಂಕಿ ಮೇ ಮನಃ॥ ೧೬

ಆಗ ರಾಕ್ಷಸನು ನೆಲದೊಳಗೆ ಹುಲ್ಲು ಮುಚ್ಚಿದ್ದ ಒಂದು ದುರ್ಗಮವಾದ ದೊಡ್ಡ ಬಿಲವನ್ನು ಪ್ರವೇಶಿಸಿಬಿಟ್ಟನು. ನಾವಿಬ್ಬರೂ ಬಿಲದ ಬಳಿಗೆ ಹೋಗಿ ನಿಂತೆವು. ಶತ್ರುವು ಬಿಲದೊಳಗೆ ಹೋದುದನ್ನು ಕಂಡು ವಾಲಿಯು ರೋಷಾ ವಿಷ್ಠನಾದನು. ಅವನ ಮನಸ್ಸು ಕ್ಷುಬ್ಬವಾಯಿತು (೧೧-೧೨). ಅವನು ನನ್ನನ್ನು ಕುರಿತು ""ಸುಗ್ರೀವ, ನೀನು ಬಿಲದ್ವಾರದಲ್ಲಿ ಎಚ್ಚರಿಕೆಯಿಂದ ಕಾವಲಾಗಿ ನಿಂತರು. ನಾನು ಒಳಗೆ ನುಗ್ಗಿಹೋಗಿ ವೈರಿಯನ್ನು ಕೊಂದುಹಾಕುತ್ತೇನೆ'' ಎಂದನು (೧೩). ಅದನ್ನು ಕೇಳಿ ನಾನೂ ಜೊತೆಯಲ್ಲಿಯೇ ಬರುವೆನೆಂದನು. ಅದಕ್ಕೆ ವಾಲಿಯು ನಾನು ಬರಕೂಡದೆಂದು ತನ್ನ ಪಾದಗಳನ್ನು ಮುಟ್ಟಿಸಿ ಆಣೆಯನ್ನುತೆಗೆದುಕೊಂಡು, ತಾನೊಬ್ಬನೇ ಬಿಲವನ್ನುಪ್ರವೇಶಿಸಿದನು (೧೪). ಅವನು ಬಿಲವನ್ನು ಹೊಕ್ಕಮೇಲೆ ಒಂದು ವರ್ಷಕ್ಕೂ ಹೆಚ್ಚುಕಾಲ ಕಳೆದು ಹೋಯಿತು. ನಾನು ಬಿಲದ್ವಾರದಲ್ಲಿಯೇ ನಿಂತಿರಲು ಅಷ್ಟುಕಾಲ ಕಳೆಯಿತು. ನಾನು ಆಗ ಅಣ್ಣನು ಮೃತನಾದನೆಂದಣಿಸಿ ಭ್ರಾತೃವಾತ್ಸಲ್ಯದಿಂದ ತಳಮಳ

೬೨ ಕಿಷ್ಕಿಂಧಾಕಾಂಡಃ [ಸರ್ಗಃ

ಅಥ ದೀರ್ಫ್ಥಸ್ಯ ಕಾಲಸ್ಯ ಬಿಲಾತಸ್ಥಾದ್ದಿನಿಸ್ಪತಮ್‌ | ಸಫೇನಂ ರುಧಿರಂ ರಕಮಹಂ ದೃಷ್ಟ್ವಾಸುದು:ಖತಃ || ೧೭

ನರ್ದತಾಮಸುರಾಣಾಂ ಧ್ವನಿರ್ಮೇ ಶ್ರೋತ್ರಮಾಗತಃ।| ರತಸ್ಯ ಸಂಗ್ರಾಮೇ ಕ್ರೋಶತೋ ನಿಃಸ್ಟನೋ ಗುರೋಃ॥.. ೧೮

ಅಹಂ ತ್ವವಗತೋ ಬುದ್ಧ್ಯಾ ಚಿಹೆ ಸೆ ರ್ಬಾತರಂ ಹತಮ್‌ |

ಆಲಿ ಎಲ್ಲೆ * ಪಿಧಾಯ ಬಿಲದ್ದಾರಂ ಶಿಲಯಾ ಗಿರಿಮಾತ್ರಯಾ ೧೯

ಶೋಕಾರ್ತಶ್ಟೋದಕಂ ಕಶ್ಚಾಕಿಷ್ಠಿಂಧಾಮಾಗತಃ ಸಖೇ ಗೂಹಮಾನಸ್ಕ ಮೇ ತತ್ತ್ವಂ ಯತ್ನತೋ ಮಂತ್ರಿಭಿಃ ಶ್ರುತಮ್‌ ೨೦

ತತೋ ಹಂ ತೈಃ ಸಮಾಗಮ್ಯ ಸಂಮತೈರಭಿಷೇಚಿತಃ | ರಾಜ್ಯಂ ಪ್ರಶಾಸತಸಸ್ಯ ನ್ಯಾಯತೋ ಮಮ ರಾಘವ ೨೧

ಗೊಂಡೆನು. ಅಣ್ಣನು ಕಾಣಲಿಲ್ಲ ಅವನಿಗೆ ಕೇಡು ಸಂಭವಿಸಿರಬಹುದೆಂದು ನನ್ನ ಮನಸಿಗೆ ಅನ್ನಿಸಿತು (೧೫-೧೬). ಅಲ್ಲದೆ ಬಹಳ ಕಾಲವಾದಮೇಲೆ ಬಿಲ ದ್ವಾರದಿಂದ ನೊರೆನೊರೆಯಾದ ರಕವು ಹೊರಟಿತು. ಅದನ್ನು ಕಂಡು ಬಹು ದುಃಖವಾಯಿತು. ಮತ್ತು ಬಿಲದೊಳಗೆ ಗರ್ಜಿಸುತ್ತಿದ್ದ ರಾಕ್ಷಸರ ಕೋಲಾಹಲ ಧ್ವನಿಯು ನನ್ನ ಕಿವಿಗೆ ಕೇಳಿಸಿತು. ಆದರೆ ಯುದ್ಧನಿರತನಾಗಿ ಗರ್ಜಿಸುವ ನನ್ನ ಅಣ್ಣನ ಧ್ವನಿಯು ಕೇಳಿಸಲಿಲ್ಲ (೧೭-೧೮) ಶ್ರೀರಾಮ, ಚಿಹ್ನೆಗಳಿಂದ ನನ್ನ ಅಣ್ಣನು ಹತನಾಗಿರಬೇಕೆಂದು ಮನಸಿನಲ್ಲಿ ನಿಶ್ಚಯಿಸಿದೆನು. (ಒಳಗಿದ್ದ ರಾಕ್ಷಸರು ಅಲ್ಲಿಯೇ ಸಾಯಲೆಂದು) ಬೆಟ್ಟದಂತಿದ್ದ ಒಂದು ಮಹಾಶಿಲೆಯಿಂದ ಬಿಲದ್ವಾರವನ್ನು ನಾನು ಮುಚ್ಚಿಬಿಟ್ಟೆನು (೧೯). ಮಿತ್ರ, ಶೋಕಾರ್ತನಾಗಿ

ಅಣ್ಣನಿಗೆ ತರ್ಪಣವನ್ನಿತ್ತು ಕಿಷ್ಠಿಂಧೆಗೆ ಬಂದೆನು. ವಾಲಿಯು ಹತನಾದನೆಂಬ ಅಂಶವನ್ನು ನಾನು ಯಾರಿಗೂ ತಿಳಿಸದ ರಹಸ್ಯವಾಗಿಟ್ಟೆನು. ಆದರೆ ಮಂತ್ರಿಗಳು ಬಹುಪ್ರಯತ್ನದಿಂದ ಅದನ್ನು ತಿಳಿದುಕೊಂಡರು (೨೦). ಆಮೇಲೆ ಮಂತ್ರಿ ಗಳೆಲ್ಲರೂ ಸೇರಿ ಸರ್ವಸಮೃತಿಯಿಂದ ನನಗೆ ಪಟ್ಟಾಭಿಷೇಕವನ್ನು ನಡೆಸಿಬಿಟ್ಟರು. ರಾಘವ, ಅದು ನ್ಯಾಯವಾಗಿ ಅಣ್ಣನ ರಾಜ್ಯವೆಂದೇ ತಿಳಿದು ನಾನು ರಾಜ್ಯ ವನ್ನಾಳುತ್ತಿದ್ದೆನು. ಅಣ್ಣನಲ್ಲಿದ್ದ ಗೌರವಕ್ಕೆ ಬಾಗಿದ ನನ್ನ ಬುದ್ದಿಗೆ ರಾಜ್ಯವಾಳುವ

ಸರ್ಗಃ ೯] ವೈರವೃತ್ತಾಂತಾನುಕ್ರಮಃ ೭೩

ಪ್ರಾವರ್ತತ ಮೇ ಬುದ್ಧಿರ್ಭಾತುರ್ಗೌರವಯಂತ್ರಿತಾ।

ಹತ್ವಾಶತ್ರುಂ ಮೇ ಭ್ರಾತಾ ಪ್ರವಿವೇಶ ಪುರಂ ತದಾ ಮಾನಯಂಸಂ ಮಹಾತ್ಮಾನಂ ಯಥಾವಚ್ಚಾಭ್ಯವಾದಯಮ್‌ ಉಕಾಶ್ಚನಾಶಿಷಸ್ಟೇನ ಸಂತುಷ್ಟೇನಾಂತರಾತ್ಮನಾ॥ ೨೩ ನತ್ವಾಪಾದಾವಹಂ ತಸ್ಯ ಮುಕುಟೇನಾಸ್ಪೃಶಂ ಪ್ರಭೋ

ಅಪಿ ವಾಲೀ ಮಮ ಕ್ರೋಧಾನ್ನ ಪ್ರಸಾದಂ ಚಕಾರ ಸಃ॥ ೨೪

ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ನಮಃ ಸರ್ಗಃ

ಉಣ

ಪ್ರವೃತ್ತಿಯೇ ಉಂಟಾಗಲಿಲ್ಲ ಹೀಗಿರಲು ವಾಲಿಯು ಶತ್ರುವಾದ ಮಾಯಾವಿ ಯನ್ನುಕೊಂದು ನಗರಕ್ಕೆ ಬಂದನು (೨೧-೨೨). ಅವನು ಮಹಾತ್ಮನೆಂದು ನಾನು ಯೋಗ್ಯರೀತಿಯಲ್ಲಿ ಗೌರವಿಸಿ ಅಭಿವಾದನೆಮಾಡಿದೆನು. ಅವನು ನನಗೆ ಆಶೀರ್ವಾದವನ್ನು ಮಾಡಲಿಲ್ಲ ಅವನ ಹೃದಯಕ್ಕೆ ಸಂತೋಷವಾಗಲಿಲ್ಲ ಪ್ರಭು- ಶ್ರೀರಾಮ, ಅವನ ಎರಡು ಪಾದಗಳಿಗೂ ನನ್ನ ಕಿರೀಟವನ್ನು ಮುಟ್ಟಿಸಿ ವಂದಿಸಿದೆನು. ಆದರೂ ವಾಲಿಯು ನನ್ನಮೇಲಿನ ಕೋಪದಿಂದ ಪ್ರಸನ್ನನಾಗಲಿಲ್ಲ (೨೩-೨೪). ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಒಂಬತ್ತನೆಯ ಸರ್ಗ

Ya

4x

೭೪

ದಶಮಃ ಸರ್ಗಃ ರಾಜ್ಯನಿರ್ವಾಸಕಥನಮ್‌ ತತಃ ಕ್ರೋಧಸಮಾವಿಷ್ಠಂ ಸಂರಬ್ಬಂ ತಮುಪಾಗತಮ್‌ ಅಹಂ ಪ್ರಸಾದಯಾಂಚಕ್ರೇಭ್ರಾತರಂ ಹಿತಕಾಮ್ಯಯಾ Il

ದಿಷ್ಟ್ಯಾಸಿ ಕುಶಲೀ ಪ್ರಾಪೋ ದಿಷ್ಟ್ಯಾಪಿ ನಿಹತೋ ರಿಪು:। ಅನಾಥಸ್ಯ ಹಿ ಮೇ ನಾಥಸ್ತಮೇಕೋತನಾಥನಂದನಃ॥ ತ್ರ

ಇದಂ ಬಹುಶಲಾಕಂ ತೇ ಪೂರ್ಣಚಂದ್ರಮಿವೋದಿತಮ್‌

ಛತ್ರಂ ಸವಾಲವ್ಯಜನಂ ಪ್ರತೀಚ್ಛಸ್ವಮಯೋದ್ಯತಮ್‌ ಆರ್ತಶ್ಚಾಥ ಬಿಲದ್ದಾಧಿ ಸ್ಥಿತಃ ಸಂವತ್ತರಂ ನೃಪ |

ದೃಪ್ಟ್ಯಾಹಂ ಶೋಣಿತಂ ದ್ವಾರಿ ಬಿಲಾಚ್ಛಾಪಿ ಸಮುತ್ಥಿತಮ್‌

ಸರ್ಗ ೧೦

ಅನೇಕ ವಿಧದಲ್ಲಿಪ್ರಾರ್ಥಿಸಿದರೂ ವಾಲಿಯು ಪ್ರಸನ್ನನಾಗದೆ ತನ್ನನ್ನು ರಾಜ್ಯದಿಂದ ಹೊರಗೆ ಅಟ್ಟಿದನೆಂದು ಸುಗ್ರೀವನು ಹೇಳುವುದು. ವಾಲಿಯನ್ನುವಧಿಸುವೆನೆಂದು ಶ್ರೀರಾಮನು ಹೇಳಿ ಸುಗ್ರೀವನನ್ನುಸಂತೈಸುವುದು.

ಸುಗ್ರೀವನು ಮತ್ತೆಹೇಳಿದನು: ""ಶ್ರೀರಾಮ, ಹೀಗೆ ಕ್ರೋಧೋದ್ದೀಪಿತನಾಗಿ ಆವೇಗದಿಂದ ಬಂದ ನನ್ನ ಅಣ್ಣನು ಪ್ರಸನ್ನನಾಗುವಂತೆ ಬೇಡಿಕೊಂಡೆನು. ಉಭಯರಿಗೂ ಹಿತವಾಗಲೆಂದು ರೀತಿಯಲ್ಲಿಪ್ರಾರ್ಥಿಸಿದೆನು (೧) : "ಅಣ್ಣ ನೀನು ಕುಶಲದಿಂದ ಬಂದುದು ನನ್ನ ಭಾಗ್ಯ. ನಮ್ಮ ಭಾಗ್ಯದಿಂದ ಶತ್ರುವು ಹತನಾದನು. ಅನಾಥನಾದ ನನಗೆ. ನಾಥನಾಗಿದ್ದೀಯ. ದಿಕ್ಕಿಲ್ಲದವರಿಗೆ ಗತಿಯಾಗಿದ್ದೀಯೆ. ಅನೇಕ ಶಲಾಕೆಗಳಿಂದ ಕೂಡಿ ಪೂರ್ಣ ಚಂದ್ರನಂತಿರುವ ಶ್ವೇತಚ್ಛತ್ರವನ್ನು ನಿನಗೆ ಹಿಡಿಯುತ್ತೇನೆ. ಚಾಮರಗಳನ್ನು ಬೀಸುತ್ತೇನೆ, ಸ್ವೀಕರಿಸು (೨-೩). ಮಹಾರಾಜ, ನಿನ್ನಾಜ್ಞೆಯಂತೆ ಒಂದು ವರ್ಷದವರೆಗೆ ಬಿಲದ್ವಾರದಲ್ಲಿ ಶೋಕಾರ್ತನಾಗಿ ನಿನಗೋಸ್ಕರ ಕಾದುಕೊಂಡಿದ್ದೆನು.

ಸರ್ಗಃ ೧೦] ರಾಜ್ಯನಿರ್ವಾಸಕಥನಮ್‌ ೭೫

ಶೋಕಸಂವಿಗ್ಗಹ್ನದಯೋ ಭೃಶಂ ವ್ಯಾಕುಲಿತೇಂದ್ರಿಯಃ।

ಅಪಿಧಾಯ ಬಿಲದ್ದಾರಂ ಗಿರಿಶೃಂಗೇಣ ತತದಾ॥ ತಸ್ಮಾದ್ದೇಶಾದಪಾಕ್ರಮ್ಯ ಕಿಷ್ಠಿಂಧಾಂ ಪ್ರಾವಿಶಂ ಪುನಃ ಎಷಾದಾತ್ತ್ಮಿಹ ಮಾಂ ದೃಷ್ಟ್ವಾಪೌರೈರ್ಮಂತ್ರಿಭಿರೇವ

ಅಭಿಷಿಕೋ ಕಾಮೇನ ತನ್ನೇ ತಂ ಕ್ಷಂತುಮರ್ಹಸಿ। ತಮೇವ ರಾಜಾ ಮಾನಾರ್ಹಃ ಸದಾ ಚಾಹಂ ಯಥಾಪುರಮ್‌ ರಾಜಭಾವನಿಯೋಗೋ5 ಯಂ ಮಯಾ ತದ್ದಿರಹಾತ್‌ ಕೃತಃ I

ಸಾಮಾತ್ಮಪೌರನಗರಂ ಸಿತಂ ನಿಹತಕಂಟಕಮ್‌ ನ್ಯಾಸಭೂತಮಿದಂ ರಾಜ್ಯಂ ತವ ನಿರ್ಯಾತಯಾಮೃಹಮ್‌ )

ಮಾ ರೋಷಂ ಕೃಥಾಃ ಸೌಮ್ಯ ಮಯಿ ಶತ್ರುನಿಬರ್ಹಣ ಯಾಚೇ ತ್ಚಾಂ ಶಿರಸಾ ರಾಜನ್‌ ಮಯಾ ಬುದ್ದೋ5 ಯಮಂಜಲಿಃ। ಬಲಾದಸ್ಥಿ ಸಮಾಗಮ್ಯ ಮಂತ್ರಿಭಿಃ ಪುರವಾಸಿಭಿಃ ೧೦

ಬಿಲದಿಂದ ದ್ವಾರದವರೆಗೆ ರಕ್ತವು ಹರಿದುಬಂದಿತು. ಅದನ್ನು ಕಂಡು ನನ್ನ ಹೃದಯವು ಶೋಕಸಂತಪವಾಯಿತು. ಇಂದ್ರಿಯಗಳು ಅತಿಯಾಗಿ ಕಳವಳಿಸಿದವು. (ನಿನ್ನ ವೈರಿಯಾದ ರಾಕ್ಷಸನು ಅಲ್ಲಿಯೇ ಸಾಯಲೆಂದು) ಗಿರಿ ಶಿಖರದಿಂದ ಬಿಲದ್ವಾರವನು ಮುಚ್ಚಿದೆನು (೪-೫). ಅನಂತರ ಕಿಷ್ಠಿಂಧೆಗೆ ಬಂದು ನಿನ್ನಶೋಕದಲ್ಲಿಮುಳುಗಿದ್ದೆನು. ನನ್ನಶೋಕವನ್ನುಕಂಡು ಪೌರರೂ ಮಂತ್ರಿಗಳೂ (ನಿನಗೂ ಏನೋ ಕೇಡಾಗಿದೆಯೆಂದು ಊಹಿಸಿ) ನನಗೆ ಪಟ್ಟಾಭಿಷೇಕ ಮಾಡಿದರು. ಅದಕ್ಕಾಗಿ ನಾನು ಆಸೆಪಡಲಿಲ್ಲ ನನ್ನನ್ನು ಮನ್ನಿಸು. ನೀನೇ ಕಿಷ್ಕಿಂಧೆಗೆ ರಾಜನಲ್ಲದೆ ನಾನಲ್ಲ ನೀನು ನನಗೆ ಪೂಜ್ಯನು. ನಾನು ಮೊದಲಿ ನಂತೆಯೇ ಬೃತ್ಯನಾಗಿದ್ದೇನೆ (೬-೭). ನೀನಿಲ್ಲದುದರಿಂದ ರಾಜಕಾರ್ಯವನ್ನು ನಡೆಸುತ್ತಿದ್ದವು. ಮೊದಲಿನಂತೆಯೇ ಅಮಾತ್ಯರು, ಪೌರರು, ರಾಜಧಾನಿ - ಎಲ್ಲವೂ ನಿಷ್ಠಂಟಕವಾಗಿ ನಿನ್ನ ಸ್ವಾಧೀನದಲ್ಲಿದೆ (೮). ಇಷ್ಟುದಿನ ರಾಜ್ಯವು ನನ್ನಲ್ಲಿನ್ಯಾಸವಾಗಿತೆಂದು ತಿಳಿ. ಇದನ್ನು ಪುನಃ ನಿನಗೇ ಒಪ್ಪಿಸುತ್ತಿದ್ದೇನೆ. ಸೌಮ್ಯ, ನನ್ನಮೇಲೆ ಕೋಪಿಸಬೇಡ. ಶತ್ರುವನ್ನುನಿರ್ಮೂಲಮಾಡಿ ಬಂದ ವೀರ ನೀನು (೯). ಮಹಾರಾಜ, ತಲೆಬಾಗಿ ಬೇಡಿಕೊಳ್ಳುತ್ತೇನೆ. ಕೈಮುಗಿದು ಕೇಳಿ

೬೬ ಕಿಷ್ಕಿಂಧಾಕಾಂಡಃ [ಸರ್ಗಃ ೧೦

ರಾಜಭಾವೇ ನಿಯುಕ್ಕೋ5 ಹಂ ಶೂನ್ಯದೇಶಜಿಗೀಷಯಾ | ಸಿಗ್ಗಮೇವಂ ಬ್ರುವಾಣಂ ಮಾಂಸ ತು ನಿರ್ಭರ್ತ್ಯ್ಯ ವಾನರಃ॥ ೧೧

ಧಿಕ್‌ ತ್ಯಾಮಿತಿ ಮಾಮುಕ್ತ್ವಾಬಹು ತತದುವಾಚ | ಪ್ರಕೃತೀಶ್ಚಸಮಾನೀಯ ಮಂತ್ರಿಣಶ್ರೈವ ಸಂಮತಾನ್‌ ೧೨

ಮಾಮಾಹ ಸುಹೃದಾಂ ಮದ್ಯೇ ವಾಕ್ಯಂ ಪರಮಗರ್ಹಿತಮ್‌ ವಿದಿತಂ ವೋ ಯಥಾ ರಾತಾ ಮಾಯಾವೀ ಮಹಾಸುರಃ ॥। ೧೩

ಮಾಂ ಸಮಾಹ್ಹಯತ ಕ್ರೂರೋ ಯುದ್ಧಕಾಂಕ್ಷೀ ಸುದುರ್ಮತಿಃ

ತಸ್ಯ ತದ್ದರ್ಜಿತಂ ಶ್ರುತ್ವಾ ನಿಃಸ್ಪತೋ$ಹಂ ನ್ನಪಾಲಯಾತ್‌ ೧೪ ಅನುಯಾತಶ್ಚಮಾಂ ತೂರ್ಣಮಯಂ ಭ್ರಾತಾ ಸುದಾರುಣಃ |

ಸತು ದೃಷ್ಟೈವ ಮಾಂ ರಾತ್ರೌ ಸದ್ದಿತೀಯಂ ಮಹಾಬಲಃ ೧೫ ಪ್ರಾದ್ರವದ್ಭಯಸಂತ್ರಸ್ತೋ ವೀಕ್ಕಾವಾಂ ತಮನುದ್ರುತ್‌ ಅನುದ್ರುತಶ್ಚವೇಗೇನ ಪ್ರವಿವೇಶ ಮಹಾಬಿಲಮ್‌ ೧೬

ಕೊಳ್ಳುತ್ತೇನೆ. ಮಂತ್ರಿಗಳೂ ಪೌರರೂ ಒತ್ತಾಯದಿಂದ ರಾಜ್ಯಭಾರವನ್ನು ನನ್ನ ಮೇಲೆ ಹೇರಿದರು. ರಾಜ್ಯವು ಅನಾಯಕವಾದರೆ ಶತ್ರುಗಳ ಕಣ್ಣುಬೀಳುವುದೆಂದು ಹೀಗೆ ಮಾಡಿದರು. ಹೀಗೆ ಮನಃಪೂರ್ವಕವಾಗಿ ಪ್ರೀತಿಯಿಂದ ಹೇಳಿದರೂ ವಾನರನು ನನ್ನನ್ನು ಜರಿದನು (೧೦-೧೧). ಅವನು "ಥೂ। ನಿನಗೆ ಧಿಕ್ಕಾರ।' ಎಂದು ಬಯ್ದುನಾನಾಬಗೆಯ ಕೆಟ್ಟಮಾತುಗಳನ್ನಾಡಿದನು. ಆಮೇಲೆ ವಾಲಿಯು ಪ್ರಜೆಗಳನ್ನೂತನಗೆ ಇಷ್ಟರಾದ ಮಂತ್ರಿಗಳನ್ನೂಕರೆಸಿ, ಅವರೆದುರಿಗೆ ನನ್ನನ್ನು ತುಚ್ಛೀ ಕರಿಸುವ ದುರ್ವಚನಗಳನ್ನಾಡಿದನು: "ಎಲೈ ಪ್ರಜೆಗಳೆ, ಮಾಯಾವಿಯೆಂಬ ಮಹಾ ಸುರನೊಬ್ಬನು ಒಂದು ರಾತ್ರಿ ಇಲ್ಲಿಗೆ ಬಂದುದು ನಿಮಗೆ ಗೊತ್ತಿದೆ (೧೨-೧೩).

ದುರ್ಬುದ್ಧಿಯಾದ ಕ್ರೂರನು ನನ್ನೊಡನೆ ಯುದ್ಧ ವನ್ನು ಬಯಸಿ ನನ್ನನ್ನು ಆಹ್ವಾ Ah, ಅವನ ಗರ್ಜನೆಯನ್ನು ಕೇಳಿ “ನಾನು ಅರಮನೆಯಿಂದ 'ಹೊರಟಿನು. ಕ್ರೂರಾತ್ಮನಾದ ಅನುಜನೆಂಬವನೂ ಕೂಡಲೆ ನನ್ನನ್ನು ಹಿಂಬಾಲಿಸಿ ಬಂದನು. ನಾನು ಜೊತೆಗೂಡಿ ಬಂದಿರುವುದನ್ನು

ಸರ್ಗಃ ೧೦] ರಾಜ್ಯನಿರ್ವಾಸಕಥನಮ್‌ ೭೭

ತಂ ಪ್ರವಿಷ್ಠಂ ವಿದಿತ್ವಾತು ಸುಘೋರಂ ಸುಮಹದ್ದಿಲಮ್‌ | ಅಯಮುಕೋತಥ ಮೇ ಭ್ರಾತಾ ಮಯಾತುಕ್ರೂರದರ್ಶನಃ॥ ೧೭ ಅಹತ್ವ್ಹಾನಾಸ್ತಿಮೇ ಶಕ್ತಿಃ ಪ್ರತಿಗಂತುಮಿತಃ ಪುರೀಮ್‌

ಬಿಲದ್ದಾರಿ ಪ್ರತೀಕ್ಷ ತಂ ಯಾವದೇನಂ ನಿಹನ್ಮ್ಯಹಮ್‌ ೧೮ ಸ್ಥಿತೋ5ಯಮಿತಿ ಮತ್ವಾತು ಪ್ರವಿಷ್ಲೋs ಹಂ ದುರಾಸದಮ್‌

ತಂ ಮೇ ಮಾರ್ಗಮಾಣಸ್ಯ ಗತಃ ಸಂವತ್ತರಸದಾ ೧೯ ಸತು ದೃಷ್ಟೋ ಮಯಾ ಶತ್ರುರನಿರ್ವೇದಾದ್ಬಯಾವಹಃ। ನಿಹತಶ್ಚಮಯಾ ತತ್ರ ಸೋತ ಸುರೋ ಬಂಧುಭಿಃ ಸಹ ೨೦ ತಸ್ಯಾಸ್ಯಾತ್ತು ಪ್ರವೃತ್ತೇನ ರುಧಿರ್‌ಫೇಣ ತದ್ದಿಲಮ್‌ ಪೂರ್ಣಮಾಸೀದ್ದುರಾಕ್ರಾಮಂ ಸ್ಪನಸಸ್ಯ ಭೂತಲೇ ೨೧ ಸೂದಯಿತ್ಹಾತು ತಂ ಶತ್ರುಂ ವಿಕ್ರಾಂತಂ ದುಂದುಭೇಃ ಸುತಮ್‌ ನಿಷ್ಯಾಮನ್ನೇವ ಪಶ್ಯಾಮಿ ಬಿಲಸ್ಕಾಪಿಹಿತಂ ಮುಖಮ್‌ ೨೨

ರಾಕ್ಷಸನು ಕಂಡು ಹೆದರಿ ಓಡಿಹೋದನು (೧೪-೧೫). ನಾವಿಬ್ಬರೂ ಅವನನ್ನು ಅಟ್ಟಿಸಿಕೊಂಡುಹೋದೆವು. ಅವನು ಓಡಿಹೋಗಿ ಒಂದು ಮಹಾಬಿಲವನ್ನು ಪ್ರವೇಶಿಸಿದನು. ದೊಡ್ಡದೂ ಘೋರವೂ ಆದ ಬಿಲವನ್ನು ಅವನು ಹೊಕ್ಕ ನೆಂದರಿತು, ನಾನು ಸೋದರನಿಗೆ ಒಂದು ಮಾತನ್ನು ತಿಳಿಸಿದೆನು. ಈತನ ಉದ್ದೇಶ ಬಹಳ ಕ್ರೂರವಾಗಿತ್ತು(೧೬-೧೭). "ಎಲಾ ಸುಗ್ರೀವ, ರಾಕ್ಷಸನನ್ನು ಕೊಲ್ಲದೆ ರಾಜಧಾನಿಗೆ ಹಿಂದಿರುಗುವುದು ನನ್ನಿಂದ ಸಾಧ್ಯವಿಲ್ಲ ಈತನನ್ನು ಕೊಂದು ಬರುವವರೆಗೆ ನೀನು ಬಿಲದ್ವಾರದಲ್ಲಿ ನನ್ನನ್ನು ನಿರೀಕ್ಷಿಸುತ್ತಿರು' ಎಂದು ತಿಳಿಸಿದೆನು. ಇವನು ಬಿಲದ ಬಾಗಿಲಿನಲ್ಲಿರಿವನೆಂದು ನಂಬಿ ನಾನು ದುರ್ಗಮವಾದ ಬಿಲವನ್ನು ಪ್ರವೇಶಿಸಿದೆನು. ಅಲ್ಲಿರಾಕ್ಷಸನನ್ನು ಹುಡುಕಿ ಗೊತ್ತುಹಚ್ಚುವುದಕ್ಕೆ ಒಂದು ವರ್ಷವೇ ಬೇಕಾಯಿತು (೧೮-೧೯).' ಆದರೂ ಬೇಸರವಿಲ್ಲದೆ ಹುಡುಕಿ ಭಯಂಕರನಾದ ಮಾಯಾವಿಯನ್ನು ಕಂಡುಹಿಡಿದೆನು. ಅಲ್ಲಿಯೇ ರಾಕ್ಷಸನನ್ನೂ ಅವನ ಬಂಧುಗಳನ್ನು ಕೊಂದುಹಾಕಿದೆನು. ಕಿರಿಚಿಕೊಳ್ಳುತ್ತಿದ್ದ ದೈತ್ಯನ ಬಾಯಿಂದ ರಕವು ಕೋಡಿಯಾಗಿ ಹರಿದು, ನೆಲದಮೇಲೆ ಹೆಜ್ಜೆಯಿಡಲಾರದಂತೆ ಬಿಲವು ರಕ್ತದಿಂದ ತುಂಬಿಹೋಯಿತು (೨೦-೨೧).

೬೮ ಕಿಷ್ಕಿಂಧಾಕಾಂಡಃ [ಸರ್ಗಃ ೧೦

ವಿಕ್ರೋಶಮಾನಸ್ಯ ತು ಮೇ ಸುಗ್ರೀವೇತಿಃ ಪುನಪುನಃ।

ಯದಾ ಪ್ರತಿವಾಚೋ ನಾಸ್ತಿತತೋತಹಂ ಭ್ಲಶದುಃಖತಃ ॥1 ೨೩

ಪಾದಪ್ರಹಾರೈಸ್ತುಮಯಾ ಬಹುಭಿಸದ್ದಿದಾರಿತಮ್‌ |

ತತೋ ಹಾಂ ತೇನ ನಿಷ್ಕಮ್ಮ ಪಥಾ ಪುರಮುಪಾಗತಃ ೨೪

ಅತಾ ್ರಾನೇನಾಸ್ಥಿ ಸಂರುದ್ಧೋ ರಾಜ್ಯಂಪ್ಪಾ ್ರಾರ್ಥಯತಾತ್ಮನಃ ]

ಸುಗ್ರೀವೇಣ ನೃಶಂಸೇನ ವಿಸ್ಮೃತ್ಯ ಭ್ರಾತೃ್ಮಸೌಹೃದಮ್‌ ೨೫

ಏವಮುಕಾ ತು ಮಾಂ ತತ್ರ ವಸ್ತ್ರೇಣೈಕೇನ ವಾನರಃ।

ತದಾ ನಿರ್ವಾಸಯಾಮಾಸ ವಾಲೀ ವಿಗತಸಾಧ್ದಸಃ || ೨೬

ತೇನಾಹಮಪವಿದ್ದಶ್ಶ ಹೃತದಾರಶ್ಚ ರಾಘವ

ತದ್ಭಯಾಚ್ಛ ಮಹೀ ಕೃಶ್ಸ್ನಾಕ್ರಾಂತೇಯಂ ಸವನಾರ್ಣವಾ ೨೭ ಖಣ

ಖಷ್ಕಮೂಕಂ ಗಿರಿವರಂ ಭಾರ್ಯಾಪಹರಣದುಃಖಿತಃ।

ಪ್ರವಿಷ್ಟೋ ಸ್ಥಿ ದುರಾಧರ್ಷಂ ವಾಲಿನಃ ಕಾರಣಾಂತರೇ ೨೮

ಪರಾಕ್ರಮಿಯೂ ದುಂದುಭಿಯ ಪುತ್ರನೂ ಆದ ಆಶತ್ರುವನ್ನುನಿರ್ನಾಮಗೊಳಿಸಿ ಹೊರಗೆ ಬರುತ್ತೇನೆ, ಬಿಲದ ಬಾಯಿ ಮುಚ್ಚಿಹೋಗಿದೆ | "ಸುಗ್ರೀವ | ಸುಗ್ರೀವ!” ಎಂದು ಮತ್ತೆ ಮತ್ತೆ ಕೂಗಿಕೊಂಡರೂ ಪ್ರತ್ಯುತ್ತರವಿಲ್ಲ! ಆಗ ನನ್ನ ಮನಸ್ಸಿಗೆ ಬಹಳ ನೋವಾಯಿತು (೨೨-೨೩). ಕಾಲುಗಳಿಂದ ಒದೆದು ಒದೆದು ದ್ವಾರವನ್ನುಸೀಳಿ, ಬಿಲದಿಂದ ಹೊರಟುನೆಟ್ಟಗೆ ದಾರಿ ಹಿಡಿದು ನಗರಕ್ಕೆ ಬಂದೆನು. ಪ್ರಜೆಗಳೇ, ಘಾತುಕನಾದ ಸುಗ್ರೀವನು ಬಿಲದಿಂದ ನಾನು ಹೊರಗೆ ಬರ ಬಾರದೆಂದು ಬಂಡೆಗಳಿಂದ ಮುಚ್ಚಿದನು. ಒಡಹುಟ್ಟಿದವನೆಂಬ ಪ್ರೀತಿಯನ್ನೂ ಮರೆತು ರಾಜ್ಯದ ಆಸೆಗಾಗಿ ಹೀಗೆ ಮಾಡಿದ್ದಾನೆ' ಎಂದು ದೂರಿದನು (೨೪-೨೫). ವಾನರನು ಉಟ್ಟಬಟ್ಟೆಯಲ್ಲಿ ನನ್ನನ್ನು ಹೊರಗಟ್ಟಿದನು. ವಾಲಿಗೆ ಯಾರ ಭಯವೂ ಇಲ್ಲ ಶ್ರೀರಾಮ, ಅವನು ನನ್ನನ್ನು ಹೊಡೆದು ನನ್ನ ಹೆಂಡತಿಯನ್ನು ಅಪಹರಿಸಿದ್ದಾನೆ. ಅವನ ಭಯದಿಂದ ಭೂಮಂಡಲವನ್ನೇ ಸುತ್ತಿದೆನು. ಅರಣ್ಯದಲ್ಲಿ ಅಲೆದೆನು. ಸಮುದ್ರವನ್ನು ಲಂಫಿಸಿದೆನು (೨೬-೨೭). ಭಾರ್ಯಾ ಪಹಾರದಿಂದ ದುಃಖಿತನಾಗಿ ಕೊನೆಗೆ ಬುಷ್ಕಮೂಕಪರ್ವತದಲ್ಲಿ ಬಂದು ಸೇರಿಕೊಂಡಿದ್ದೇನೆ. ಒಂದಾನೊಂದು ವಿಶೇಷ ಕಾರಣದಿಂದ ವಾಲಿಯು ಇಲ್ಲಿಗೆ

ಸರ್ಗಃ ೧೦] ರಾಜ್ಯನಿರ್ವಾಸಕಥನಮ್‌ ೭೯

ಏತತ್ತೇ ಸರ್ವಮಾಖ್ಯಾ ತಂ ವೈರಾನುಕಥನಂ ಮಹತ್‌

ಅನಾಗಸಾ ಮಯಾ ಹಾಹಂ 'ವೃಸನಂ ಪಶ್ಯ ರಾಘವ ರೀ ವಾಲಿನಸ್ತು ಭಯಾರ್ತಸ್ಯ NE ENS |

ಕರ್ತುಮರ್ಹಸಿ ಮೇ ವೀರ ಪ್ರಸಾದಂ ತಸ್ಯ ನಿಗ್ರಹಾತ್‌ ೩೦ ಏವಮುಕಸ್ತು ತೇಜಸ್ವೀ ಧರ್ಮಜೋ ಧರ್ಮಸಂಹಿತಮ್‌

ವಚನಂ ವಕ್ತುಮಾರೇಭೇ ಸುಗ್ರೀವಂ ಪ್ರಹಸನ್ನಿವ ೩೧ ಅಮೋಘ ಘಾಃ ಸೂರ್ಯಸಂಕಾಶಾ ಮಮೈತೇ ನಿಶಿತಾಃ ಶರಾಃ

ತಸ್ಮಿನ್‌ ವಾಲಿನಿ ದುರ್ವತ್ರೇ ನಿಪತಿಷ್ಯಂತಿ ವೇಗಿತಾಃ॥ ೩೨

ಯಾವತಂ ನಾಭಿಪಶ್ಯಾಮಿ ತವ ಭಾರ್ಯಾಪಹಾರಿಣಮ್‌ ತಾವತ್‌ ಜೀವೇತ್‌ ಪಾಪಾತ್ಮಾ ವಾಲೀ ಚಾರಿತ್ರದೂಷಕಃ ೩೩

ಆತ್ಮಾನುಮಾನಾತ್‌ ಪಶ್ಯಾಮಿ ಮಗ್ನಂ ತ್ಚಾಂ ಶೋಕಸಾಗರೇ | ತ್ವಾಮಹಂ ತಾರಯಿಷ್ಯಾಮಿ ಕಾಮಂ ಪ್ರಾಪ್ಸ್ಯಸಿ ಪುಷ್ಕಲಮ್‌ | ೩೪

ನುಗ್ಗಿಬರಲಾರ. ರಾಘವ, ನಮ್ಮ ವೈರಕ್ಕೆ ಸಂಬಂಧಿಸಿದ ಮಹಾಕಥೆಯೆಲ್ಲವನ್ನೂ . ಹೇಳಿದ್ದೇನೆ. ನಾನು ಯಾವ ಅಪರಾಧವನ್ನುಮಾಡದಿದ್ದರೂ ನನಗೆ ಎಂತಹ ಕಪ್ಪ ಬಂದಿದೆ, ನೋಡು! (೨೮-೨೯). ವಾಲಿಯ ಭಯದಿಂದ ಕಂಗೆಟ್ಟಿರುವ ನನ್ನಲ್ಲಿ ಪ್ರಸನ್ನನಾಗು. ಸರ್ವರಿಗೂ ಅಭಯವನ್ನು ನೀಡಬಲ್ಲ ವೀರಾಗ್ರಣಿ ನೀನು. ಅವನನ್ನು ನಿಗ್ರಹಿಸಿ ನನ್ನನ್ನು ಅನುಗ್ರಹಿಸು'' ಎಂದು ನಿವೇದಿಸಿದನು (೩೦). ಆಗ ತೇಜಸ್ವಿಯೂ ಧರ್ಮಜ್ಞನೂ ಆದ ಶ್ರೀರಾಮನು ಧರ್ಮಯುಕವಾದ

ಮಾತನ್ನಾಡಿದನು. ಅವನು ಕಿರುನಗೆಯಿಂದ "ಸುಗ್ರೀವ, ನನ್ನ ತೀಕ್ಷಾ ಸ್ತ್ರಗಳು ಅಮೋಘವಾದವು.. ಸೂರ್ಯನಂತೆ ಪ್ರಖರವಾದವು. ದುರಾಚಾರನಾದ ವಾಲಿಯ ಮೇಲೆ ಮಹಾವೇಗದಿಂದ ನುಗ್ಗುವುವು (೩೧-೩೨). ವಾಲಿಯು ಸದಾಚಾರವನ್ನು ಕೆಡಿಸಿದ ಚಾರಿತ್ರದೂಷಕ. ನಿನ್ನ ಭಾರ್ಯೆಯನ್ನಪಹರಿಸಿದ ಪಾಪಾತ್ಮನು ನನ್ನ ಕಣ್ಣಿಗೆ ಬೀಳುವ ಪರ್ಯಂತ ಬದುಕಿ ಉಳಿದಾನು. ಮಿತ್ರ, ನನ್ನ ಸ್ಥಿತಿಯನ್ನು ಊಹಿಸಿಕೊಂಡರೆ, ನೀನು ಎಂತಹ ಶೋಕಸಮುದ್ರದಲ್ಲಿ ಮುಳುಗಿರುವೆ ಯೆಂಬುದು ನನಗೆ ತಿಳಿಯುತ್ತದೆ. ನಿನ್ನನ್ನು ದಡಗಾಣಿಸುವೆನು.

ನಿನ್ನ ಇಷ್ಟುರ್ಥವು ಕೈಗೂಡುವುದು'' ಎಂದನು (೩೩-೩೪).

೮೦ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ತಸ್ಯ ತದ್ವಚನಂ ಶ್ರುತ್ವಾರಾಘವಸ್ಯಾತ್ಮನೋ ಹಿತಮ್‌ ಸುಗ್ರೀವಃ ಪರಮಪ್ರೀತಃ ಸುಮಹದ್ದಾಕ್ಕಮಬ್ರವೀತ್‌ ೩೫ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ದಶಮಃ ಸರ್ಗಃ

ಏಕಾದಶಃ ಸರ್ಗಃ

ವಾಲಿಬಲಾವಿಷ್ಠರಣಮ್‌

ರಾಮಸ್ಯ ವಚನಂ ಶ್ರುತ್ವಾಹರ್ಷಪೌರುಷವರ್ಧನಮ್‌ ಸುಗ್ರೀವ; ಪೂಜಯಾಂಚಕ್ರೇ ರಾಘವಂ ಪ್ರಶಶಂಸ ಚ॥ ಅಸಂಶಯಂ ಪ್ರಜ್ವಲಿತೈಸ್ಪೀಕ್ಷೆರ್ಮರ್ಮಾತಿಗ್ಗೆಃ ಶರೈಃ॥ ತಂ ದಹೇಃ ಕುಪಿತೋ ಲೋಕಾನ್‌ ಯುಗಾಂತ ಇವ ಭಾಸ್ಕರಃ 1. 2೨ _ ರಾಘವನಾಡಿದ ಹಿತವಾಕ್ಯವನ್ನುಸುಗ್ರೀವನು ಆಲಿಸಿ ಬಹಳ ಸಂತುಷ್ಠನಾದನು. ಶ್ರೀರಾಮನನ್ನು ಹೊಗಳಿ, ಒಂದು ಮುಖ್ಯವಾದ ವಿಷಯವನ್ನು ಪ್ರಸ್ತಾವಿಸಿದನು (೩೫).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಹತ್ತನೆಯ ಸರ್ಗ

ಸರ್ಗ ೧೧ ಸುಗ್ರೀವನು ವಾಲಿಯ ಪರಾಕ್ರಮವನ್ನುವರ್ಣಿಸುವುದು. ವಾಲಿದುಂದುಭಿಗಳ ಯುದ್ಧ ಮತಂಗಮುನಿಗಳ ಶಾಪ. ಶ್ರೀರಾಮನು ದುಂದುಭಿಯ ಅಸ್ಥಿಪಂಜರವನ್ನುಪಾದಾಂಗುಪ್ಕದಿಂದ ಚಿಮ್ಮುವುದು.

ಶ್ರೀರಾಮನ ವಚನವನ್ನಾಲಿಸಿ ಸುಗ್ರೀವನಿಗೆ ಹರ್ಷವಾಯಿತು. ಉತ್ಸಾಹವು ಹೆಚ್ಚಿತು. ಅವನು ಕೈಮುಗಿದು ಶ್ರೀರಾಮನನ್ನು ಪ್ರಶಂಸೆ ಮಾಡಿದನು : “ರಾಘವ, ಧಗಧಗಿಸುವ ನಿನ್ನತೀಕ್ಷಾ ಗಳು ಮರ್ಮಚ್ಛೇದಕರವಾದವು. ನೀನು ಕುಪಿತನಾದರೆ ಸಮಸ್ತಲೋಕಗಳನ್ನೂ ದಹಿಸಬಲ್ಲೆ ಪ್ರಳಯಕಾಲದ ಭಾಸ್ಕರ ನಂತೆ ಸುಟ್ಟುಬೂದಿಮಾಡಬಲ್ಲೆ (೧-೨).

ಸರ್ಗಃ ೧೧] ವಾಲಿಬಲಾವಿಷ್ಕರಣಮ್‌ ೮೧

ವಾಲಿನಃ ಪೌರುಷಂ ಯತ್ತದ್ಯಚ್ಚ ವೀರ್ಯಂ ಧೃಶಿಶ್ನ ಯಾ।

ತನ್ಮಮೈಕಮನಾಃ ಶುತ್ವಾವಿಧತ್ವ್ವಯದನಂತರಮ್‌ | ಸಮುದ್ರಾತ್‌ ಪಶ್ಚಿಮಾತ್‌ ಪೂರ್ವಂ ದಕ್ಷಿಣಾದಷಿ ಚೋತರಮ್‌ ಕ್ರಾಮತ್ಯನುದಿತೇ ಸೂರ್ಯೇ ವಾಲೀ ವ್ಯಪಗತಕ್ಷಮಃ ಅಗ್ರಾಣ್ಯಾರುಹ್ಯ ಶೈಲಾನಾಂ ಶಿಖರಾಣಿ ಮಹಾಂತ್ಯಪಿ | ಊರ್ಧ್ವಮತ್ತಾತ್ರ ತರಸಾ ಪ್ರತಿಗೃಹ್ಲಾತಿ ವೀರ್ಯವಾನ್‌ ಬಹವಃ ಸಾರವಂತಶ್ಚವನೇಷು ವಿವಿಧಾ ದ್ರುಮಾಃ।

ವಾಲಿನಾ ತರಸಾ ಭಗ್ನಾ ಬಲಂ ಪ್ರಥಯತಾತ್ಮನಃ | ಮಹಿಷೋ ದುಂದುಭಿರ್ನಾಮ ಕೈಲಾಸಶಿಖರಪ್ರಭಃ

ಬಲಂ ನಾಗಸಹಸ್ರಸ್ಯ ಧಾರಯಾಮಾಸ ವೀರ್ಯವಾನ್‌ ವೀರ್ಯೋತ್ತೇಕೇನ ದುಷ್ಠಾತ್ಮಾವರದಾನಾಚ್ಚಮೋಹಿತಃ।

ಜಗಾಮ ಸುಮಹಾಕಾಯಃ ಸಮುದ್ರಂ ಸರಿತಾಂ ಪತಿಮ್‌

ಆದರೆ ವಾಲಿಯ ಪೌರುಷವು ಯಾವ ಬಗೆಯದು, ಅವನ ವೀರ್ಯ ಧೈರ್ಯಗಳು ಎಂತಹವು ಎಂಬುದನ್ನುಏಕಾಗ್ರತೆಯಿಂದ ಅವಧರಿಸು. ಅನಂತರ ಏನು ಮಾಡಬೇಕೆಂಬುದನ್ನು ನಿಶ್ಚಯಿಸು (೩) : ವಾಲಿಯು (ಬ್ರಾಹ್ಮ ಮುಹೂರ್ತದಲ್ಲಿ) ಸೂರ್ಯನು ಉದಯಿಸುವಷ್ಟರೊಳಗೆ ಪಶ್ಚಿಮ ಸಮುದ್ರದಿಂದ ಪೂರ್ವಸಮುದ್ರದವರೆಗೂ ದಕ್ಷಿಣಸಮುದ್ರದಿಂದ ಉತ್ತರ ಸಮುದ್ರದವರೆಗೂ (ಸಂಧ್ಯಾನುಷ್ಟಾನಗಳಿಗಾಗಿ) ಆಯಾಸವಿಲ್ಲದೆ ಹೋಗಿ ಬರುತ್ತಾನೆ (೪). ವೀರನು ಪರ್ವತಾಗಳನ್ನೇರಿ ದೊಡ್ಡದೊಡ್ಡಶಿಖರಗಳನ್ನು ವೇಗದಿಂದ ಮೋಲಕ್ಕೆಸೆದು, ಹಾಗೆಯೇ ಅವುಗಳನ್ನು ಆತುಕೊಳ್ಳಬಲ್ಲನು | ವಾಲಿಯು ತನ್ನ ಬಲವನ್ನು ಪ್ರಕಟಿಸುವುದಕ್ಕಾಗಿ, ಕಾಡಿನಲ್ಲಿ ದೃಢವಾಗಿ ಬೆಳೆದು ನಿಂತ ವಿವಿಧ ವೃಕ್ಷಗಳನ್ನು ಭುಜಬಲದಿಂದ ಮುರಿದು ಈಡಾಡುವನು (೫-೬). ದುಂದುಭಿಯೆಂಬ ಮಹಿಷಾಕಾರದ ರಾಕ್ಷಸನೊಬ್ಬನಿದ್ದನು. ಅವನು ಕೈಲಾಸ ಶಿಖರದಂತೆ ಅತ್ಯುನ್ನತನಾಗಿದ್ದನು. ವೀರನಿಗೆ ಸಾವಿರ ಆನೆಗಳ ಬಲವಿತ್ತು ಶೌರ್ಯದ ಕೊಬ್ಬಿನಿಂದ ಮೆರೆಯುತ್ತಿದ್ದ ದುಷ್ಟನು ವರಬಲದಿಂದ

೮೨ ಕಿಷ್ಟಿಂಧಾಕಾಂಡಃ [ಸರ್ಗಃ ೧೧

ಊರ್ಮಿಮಂತಮಭಿಕ್ರಮ್ಯ ಸಾಗರಂ ರತ್ನಸಂಚಯಮ್‌ ಮಹ್ಯಂ ಯುದ್ಧಂ ಪ್ರಯಚ್ಛೇತಿ ತಮುವಾಚ ಮಹಾರ್ಣವಮ್‌

ತತಃ ಸಮುದ್ರೋ ಧರ್ಮಾತ್ಮಾ ಸಮುತ್ಮಾಯ ಮಹಾಬಲಃ!

ಅಬ್ರವೀದ್ವಚನಂ ರಾಜನ್ನಸುರಂ ಕಾಲಚೋದಿತಮ್‌ ೧೦ ಸಮರ್ಥೋ ನಾಸ್ಫಿತೇ ದಾತುಂ ಯುದ್ಧಂ ಯುದ್ಧ ವಿಶಾರದ ಶ್ರೂಯತಾಮಭಿಧಾಸ್ಯಾಮಿ ಯಸ್ತೇ ಯುದ್ಧಂ ಪ್ರದಾಸ್ಯತಿ ೧೧ ಶೈಲರಾಜೋ ಮಹಾರಣ್ಯೇ ತಪಸ್ವಿಶರಣಂ ಪರಮ್‌ ಶಂಕರಶ್ಪಶುರೋ ನಾಮ್ನಾ ಹಿಮವಾನಿತಿ ವಿಶ್ರುತಃ ೧೨ ಮಹಾಪ್ರಸ್ರವಣೋಪೇತೋ ಬಹುಕಂದರನಿರ್ದರಃ।

ಸಮರ್ಥಸವ ಪ್ರೀತಿಮತುಲಾಂ ಕರ್ತುಮಾಹವೇ ೧೩ ತಂ ಭೀತ ಇತಿ ವಿಜ್ಞಾಯ ಸಮುದ್ರಮಸುರೋತಮಃ॥ ಹಿಮವದ್ದನಮಾಗಚ್ಛಚ್ಛೆರಶ್ಲಾಪಾದಿವ ಚ್ಯುತಃ॥ ೧೪

ಬುದ್ದಿಗೆಟ್ಟು ನದೀಪತಿಯಾದ ಸಮುದ್ರರಾಜನ ಬಳಿಗೆ ಹೋದನು (೭-೮). ತರಂಗಮಾಲಾಕುಲನೂ ರತ್ನಾಕರನೂ ಆದ ಸಮುದ್ರ ರಾಜನನ್ನು ನೋಡಿ ದುಂದುಭಿಯು "ಎಲ್ಫೆ, ನನ್ನೊಡನೆ ಯುದ್ಧಮಾಡು !' ಎಂದು ಆಹ್ವಾನಿಸಿದನು (೯). ಆಗ, ಶ್ರೀರಾಮ, ಬಹಾಬಲನೂ ಧರ್ಮಾತ್ಮನೂ ಆದ ಸಮುದ್ರರಾಜನು ಮೃತ್ಯುವಶನಾಗಿ ಬಂದಿದ್ದ ರಾಕ್ಷಸನನ್ನು ನೋಡಿ "ಅಯ್ಯಾ, ನೀನು ಯುದ್ಧ ವಿಶಾರದ. ನಿನ್ನೊಡನೆ ಯುದ್ಧ ಮಾಡಲು ನನಗೆ ಸಾಮಥಣ್ಯವಿಲ್ಲ! ನಿನಗೆ ಸರಿಯಾಗಿ ಯುದ್ಧವನ್ನು ನೀಡಬಲ್ಲವೀರನು ಯಾರೆಂದು ಹೇಳುವೆನು, ಕೇಳು (೧೦-೧೧) : (ಉತ್ತರ ದಿಕ್ಕಿನ) ಮಹಾರಣ್ಯದಲ್ಲಿಪರ್ವತರಾಜನೊಬ್ಬನಿದ್ದಾನೆ. ತಪಸ್ವಿಗಳಿಗೆ ಆಶ್ರಯವನ್ನು ಕೊಟ್ಟಿದ್ದಾನೆ. ಪರಮೇಶ್ವರನಿಗೆ ಅವನು ಶ್ರಶುರ ನಾಗಬೇಕು. ಹಿಮವಂತನೆಂದು ಅವನ ಹೆಸರು (೧೨). ದೊಡ್ಡದೊಡ್ಡ ಗಿರಿನದಿಗಳಿಂದಲೂ ಗುಹೆ ಕೊರಕಲುಗಳಿಂದಲೂ ವಿರಾಜಿಸುತ್ತಿದ್ದಾನೆ. ಅವನು ಯುದ್ಧರಂಗದಲ್ಲಿನಿನಗೆ ಸಂಪೂರ್ಣತೃಪ್ತಿಯನ್ನು ಕೊಡಲು ಸಮರ್ಥ' ಎಂದು ಹೇಳಿದನು (೧೩). " ಸಮುದ್ರನು ಹೆದರಿಹೋದನು' ಎಂದು ತಿಳಿದು, ರಾಕ್ಷಸೇಂದ್ರನು ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ನೆಟ್ಟನೆ ಹಿಮಾಲಯಪ್ರಾಂತಕ್ಕೆ

ಸರ್ಗಃ ೧೧] ವಾಲಿಬಲಾವಿಷ್ಠರಣಮ್‌ ೮೩

ತತಸಸ್ಕ ಗಿರೇಃ ಶ್ಲೇತಾ ಗಜೇಂದ್ರವಿಪುಲಾಃ ಶಿಲಾಃ

ಚಿಕ್ಷೇಪ ಬಹುಧಾ ಭೂಮ್‌ ದುಂದುಭಿರ್ವಿನನಾದ ಚ॥ ೧೫ ತತಃ ಶ್ವೇತಾಂಬುದಾಕಾರಃ ಸೌಮ್ಯ: ಪ್ರೀತಿಕರಾಕೃತಿಃ ಹಿಮವಾನಬ್ರವೀದ್ದಾಕ್ಯಂ ಸ್ವಏವ ಶಿಖರೇ ಸ್ಥಿತಃ ೧೬ ಕ್ಲೇಷ್ಟುಮರ್ಹಸಿ ಮಾಂನತ್ತಂ ದುಂದುಭೇ ಧರ್ಮವತಲ। ರಣಕರ್ಮಸ್ಟಕುಶಲಸಪಸ್ತಿಕರಣಂ ಹೃಹಮ್‌ ೧೭

ತಸ್ಯ ತದ್ವಚನಂ ಶ್ರುತ್ವಾಗಿರಿರಾಜಸ್ಯ ಧೀಮತಃ

ಉವಾಚ ದುಂದುಭಿರ್ವಾಕ್ಯಂ ರೋಷಾತ್‌ ಸಂರಕಲೋಚನಃ॥ ೧೮ ಯದಿ ಯುದ್ದೇsಸಮರ್ಥಸ್ಸಂ ಮದ್ಭಯಾದ್ದಾನಿರುದ್ಯಮಃ ತಮಾಚಕ್ಷಪ್ರದದ್ಯಾನ್ನೇ ಯೋತದ್ಯ ಯುದ್ದಂ ಯುಯುತತಃ॥ ೧೯

ಹಿಮವಾನಬ್ರವೀದ್ವಾಕ್ರಂ ಶ್ರುತ್ವಾವಾಕೃವಿಶಾರದಃ ಅನುಕಪೂರ್ವಂ ಧರ್ಮಾತ್ಮಾ ಕ್ರೋಧಾತಮಸುರೋತಮಮ್‌ ೨೦

ಹೋದನು. ದುಂದುಭಿಯು ಹಿಮಾಲಯದಲ್ಲಿ ಐರಾವತದಂತಿದ್ದ ದೊಡ್ಡ ದೊಡ್ಡ ಬಿಳಿಯ ಬಂಡೆಗಳನ್ನು ಮನಬಂದಂತೆ ಉರುಳಿಸಿ ಈಡಾಡಿ ಗರ್ಜಿಸಿದನು (೧೪-೧೫). ಆಗ ಹಿಮವಂತನು ಸೌಮ್ಯವೂ ಪ್ರೀತಿಜನಕವೂ ಆದ ಆಕೃತಿಯನ್ನು ಧರಿಸಿ, ತನ್ನ ಶಿಖರದಮೇಲೆ ಒಂದು ಬಿಳಿಯ ಮೋಡದಂತೆ ಕಾಣಿಸಿಕೊಂಡು "ದುಂದಭಿ, ಧರ್ಮವತ್ತಲ | ನನ್ನನ್ನೇಕೆ ಪೀಡಿಸುವೆ ? ರಣರಂಗದಲ್ಲಿ ಹೊಡೆದಾಡುವ ಕೌಶಲ ನನಗಿಲ್ಲ ಕೈಲಾಗದ ತಪಸ್ವಿಗಳಿಗೆ ಸ್ವಲ್ಪ ಆಶ್ರಯವನ್ನು ಕೊಟ್ಟಿದ್ದೇನೆ, ಅಷ್ಟೆ!' ಎಂದನು (೧೬-೧೭). ಬುದ್ಧಿಶಾಲಿಯಾದ ಗಿರಿರಾಜನ ಮಾತನ್ನು ಕೇಳಿ ದುಂದುಭಿಯ ಕಣ್ಣುಗಳು ಸಿಟ್ಟಿನಿಂದ ಕೆಂಪಡರಿದವು. ಅವನು "ಎಲ್ಫೆ ಹಿಮವಂತ, ನೀನು ಯುದ್ಧದಲ್ಲಿ ಕೈಲಾಗದವನೇ ಇರಬಹುದು; ಕೈಲಾದರೂ ನನಗೆ ಹೆದರಿ ಹಿಂಜರಿಯುತ್ತಿರಬಹುದು. ಇರಲಿ; ಹೊಡೆದಾಡಲು ಬಂದಿರುವ ನನಗೆ ಸಮನಾಗಿ ನಿಂತು ಯಾವನು ಯುದ್ಧವನ್ನು ಕೊಡಬಲ್ಲ? ಅದನ್ನಾದರೂ ಹೇಳು!' ಎಂದು ಕೇಳಿದನು (೧೮-೧೯). ಇಂಥ ಮಾತನ್ನುಹಿಮವಂತನು ಹಿಂದೆ ಕೇಳಿರಲಿಲ್ಲ! ಅವನಾದರೋ ವಾಕ್ಯವಿಶಾರದ. ಧರ್ಮಾತ್ಮನು ಕ್ರುದ್ಧನಾದ

೮೪ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ವಾಲೀ ನಾಮ ಮಹಾಪ್ರಾಜ್ಞಃ ಶಕ್ರತುಲ್ಕಪರಾಕ್ರಮಃ | ಅಧ್ಯಾಸೇ ವಾನರಃ ಶ್ರೀಮಾನ್‌ ಕಿಷಿಂಧಾಮತುಲಪ್ರಭಾಮ್‌ 1 ೨೧

ಸಮರ್ಥೋ ಮಹಾಪ್ರಾಜ್ಞಸವ ಯುದ್ಧವಿಶಾರದಃ |

ದ್ವಂದ್ವಯುದ್ಧಂ ಮಹಾದ್ದಾತುಂ ನಮುಚೇರಿವ ವಾಸವಃ ತಂ ಶೀಘ್ರಮಭಿಗಚ್ಛ ತ್ವಂ ಯದಿ ಯುದ್ಧ ಮಿಹೇಚ್ಛೆಸಿ

ಸಹಿ ದುರ್ಧರ್ಷಣೋ ನಿತ್ಯಂ ಶೂರಃ ಸಮರಕರ್ಮಣಿ ೨೩ ಶ್ರುತ್ವಾಹಿಮವತೋ ವಾಕ್ಯಂ ಕ್ರೋಧಾವಿಷ್ಠ ದುಂದುಭಿಃ |

ಜಗಾಮ ತಾಂ ಪುರೀಂ ತಸ್ಯ ಕಿಷ್ಠಿಂಧಾಂ ವಾಲಿನಸದಾ ೨೪

ಧಾರಯನ್‌ ಮಾಹಿಷಂ ರೂಪಂ ತೀಕ್ಷೊಶಂಗೋ ಭಯಾವಹಃ। ಪ್ರಾವೃಷೀವ ಮಹಾಮೇಘಸೋಯಪೂರ್ಣೂ ನಭಸ್ತಲೇ॥ ೨೫ ತತಸದ್ದಾ ಧಮಾಗಮೃ್ಯ ಕಿಷ್ಠಿಂಧಾಯಾ ಮಹಾಬಲಃ

ನನರ್ದ ಕಂಪಯನ್‌ ಭೂಮಿಂ ದುಂದುಭಿರ್ದುಂದುಭಿರ್ಯಥಾ ೨೬

ರಾಕ್ಷಸನಿಗೆ" ಸುರೋತ್ತಮ, ವಾಲಿಯೆಂಬ ಮೇಧಾವಿಯಾದ ವಾನರೇಂದ್ರನಿದ್ದಾನೆ. ಅವನ ಪರಾಕ್ರಮವು ದೇವೇಂದ್ರನಿಗೆ ಸಾಟಿಯಾದದ್ದು ಆತನು ಕಾಂತಿಯಿಂದ ಬೆಳಗುವ ಕಿಷ್ಠಿಂಧೆಯಲ್ಲಿದ್ದಾನೆ (೨೦-೨೧). ಆವಾಲಿಯು ಸಮರ್ಥ; ಯುದ್ಧದಲ್ಲಿ ನಿಸ್ಸೀಮ. ನಮುಚಿಗೆ ದೇವೇಂದ್ರನು ಯುದ್ಧವನ್ನಿತ್ರಂತೆ, ನಿನಗೆ ಭೀಕರವಾದ ದ್ವಂದ್ವ ಯುದ್ಧವನ್ನೀಯುವನು. ನಿನಗೆ ಯುದ್ಧವು ಬೇಕೆಂದಿದ್ದರೆ ಬೇಗನೆ ಅವನ ಬಳಿಗೆ ಹೋಗು. ಅವನು ಬಹಳ ಗಟ್ಟಿಗ; ಹೊಡೆದಾಡುವುದರಲ್ಲಿಮಹಾಶೂರ' ಎಂದು ತಿಳಿಸಿದನು (೨೨-೨೩). ಹಿಮವಂತನ ವಾಕ್ಯವನ್ನು ಕೇಳಿ ಕೋಪಾ ವಿಷ್ಠನಾದ ದುಂದುಭಿಯು ವಾಲಿಯು ಕಿಷ್ಠಿಂಧಾನಗರಕ್ಕೆ ಹೊರಟನು. ತೀಕ್ಷ್ಣ ಶೃಂಗಗಳುಳ್ಳ ಮಹಿಷಾಕೃತಿಯನ್ನು ಧರಿಸಿದ್ದ ಭೀಷಣಾಕಾರನಾದ ರಾಕ್ಷಸನು, ಮಳೆಗಾಲದಲ್ಲಿ ನೀರ್ದುಂಬಿ ಭೋರ್ಗರೆಯುವ ಮಹಾಮೇಘದಂತೆ ಆಕಾಶ ಮಾರ್ಗವಾಗಿ ಬಂದನು (೨೪-೨೫). ಕಿಷ್ಠಿಂಧೆಯ ಮಹಾದ್ವಾರಕ್ಕೆ ಬಂದು ಅತಿ ಬಲನಾದ ದುಂದುಭಿಯು ದುಂದುಭಿಧ್ವನಿಯಿಂದ ಭೂಮಿಯು ನಡುಗುವಂತೆ

ಸರ್ಗಃ ೧೧] ವಾಲಿಬಲಾವಿಷ್ಠರಣಮ್‌ ೮೫

ಸಮೀಪಸ್ಥಾನ್‌ ದ್ರುಮಾನ್‌ ಭಂಜನ್‌ ವಸುಧಾಂ ದಾರಯನ್‌ ಮರೈಃ ವಿಷಾಣೇನೋಲ್ಲಿಖನ್‌ ದರ್ಪಾತದ್ದಾ ದಂ ದ್ವಿರದೋ ಯಥಾ॥ ೨೭

ಅಂತಃಪುರಗತೋ ವಾಲೀ ಶ್ರುತ್ಹಾಶಬ್ದಮಮರ್ಷಣಃ | ನಿಷ್ಠಪಾತ ಸಹ ಸ್ವೀಭಿಸ್ತಾರಾಭಿರಿವ ಚಂದ್ರಮಾಃ ೨೮ ಮಿತಂ ವ್ಯಕಾಕ್ಷರಪದಂ ತಮುವಾಚಾಥ ದುಂದುಭಿಮ್‌ ಹರೀಣಾಮೀಶಧೋ ವಾಲೀ ಸವೇಷಾಂ ವನಚಾರಿಣಾಮ್‌ ೨೯

ಕಿಮರ್ಥಂ ನಗರದ್ದಾರಮಿದಂರುದ್ದಾ ಸಿ ವಿನರ್ದಸಿ |

ದುಂದುಭೇ ವಿದಿತೋ ಮೇಷಸಿ ರಕ್ಷ ಪ್ರಾಣಾನ್‌ ಮಹಾಬಲ॥ ೩೦ ತಸ್ಯ ತದ್ವಚನಂ ಶ್ರುತ್ಹಾವಾನರೇಂದ್ರಸ್ಕ್ಯ ಧೀಮತಃ

ಉವಾಚ ದುಂದುಭರ್ವಾಕ್ಕಂ ರೋಷಾತ್‌ ಸಂರಕಲೋಚನಃ॥ ೩೧ ತಂ ಸ್ಪೀಸಂನಿಧೌ ವೀರ ವಚನಂ ವಕ್ತುಮರ್ಹಸಿ।

ಮಮ ಯುದ್ದಂ ಪ್ರಯಚ್ಛಾದ್ಯ ತತೋ ಜ್ಞಾಸ್ಯ ಸಿತೇ ಬಲಮ್‌ ೩೨

ಗರ್ಜಿಸಿದನು. ಅಲ್ಲದೆ ಮದ್ದಾನೆಯಂತೆ ದರ್ಪದಿಂದ ಅಲ್ಲಿದ್ದ ಮರಗಳನ್ನು ಉರುಳಿಸಿ, ಗೊರಸುಗಳಿಂದ ನೆಲವನ್ನು ಸೀಳಿ, ಕೊಂಬುಗಳಿಂದ ದಿಡ್ಡಿಯ ಬಾಗಿಲನ್ನು ತಿವಿದು ಹಾವಳಿಯೆಬ್ಬಿಸಿದನು (೨೬-೨೭). ಅಂತಃಪುರದಲ್ಲಿದ್ದ ವಾಲಿಗೆ ದುಂದುಭಿಯ ಗರ್ಜನೆ ಕೇಳಿಸಿತು. ಸಹನೆ ತಪ್ಪಿತು. ಕೂಡಲೆ ಅಲ್ಲಿಂದ ಹೊರಬಂದನು. ಅವನೊಡನೆ ಅಂತಃಪುರದ ಸ್ತ್ರೀಯರೂ ಬಂದರು. ತಾರೆ ಗಳೊಡಗೂಡಿದ ಚಂದ್ರಮನಂತೆ ಸ್ತ್ರೀಯರೊಡನೆ ವಾಲಿಯು ದುಂದುಭಿ ಯಿದ್ದಲ್ಲಿಗೆ ಹೋದನು (೨೮). ಸಕಲಕಪಿಗಳಿಗೂ ಅಧೀಶ್ವರನಾದ ವಾಲಿಯು ರಾಕ್ಷಸನನ್ನುದ್ದೇಶಿಸಿ ತೂಕಮಾಡಿದ ಮಾತಿನಿಂದ ಸ್ಫುಟವಾಗಿ "ಎಲೈ ದುಂದುಭಿ, ನಗರದ್ವಾರವನ್ನು ತಿವಿಯುತ್ತ ಗರ್ಜಿಸುವೆಯೇಕೆ ? ನೀನು ಯಾರು, ಏನೆಂಬುದು ನನಗೆ ಗೊತ್ತಿದೆ. ನೀನು ಬಲಾಢ್ಯನೇ ಹೌದು. ಪ್ರಾಣವನ್ನುಳಿಸಿ ಕೊಂಡು ಹೊರಟುಹೋಗು | ' ಎಂದನು (೨೯-೩೦). ಧೀಮಂತನಾದ ವಾನರೇಂದ್ರನ ವಚನವನ್ನು ಕೇಳಿ, ರೋಷದಿಂದ ದುಂದುಭಿಯ ಕಣ್ಣುಗಳು ಕೆಂಪಾದವು. ಆತನು "ಎಲೈ ಶೂರನೆ, ಹೆಂಗಸರೆದುರಿಗೆ ಇಂಥ ಮಾತನ್ನಾಡುವುದು ತರವಲ್ಲ! ನನ್ನೊಡನೆ ಯುದ್ಧ ಮಾಡಿ ನೋಡು, ಆಗ ನಿನ್ನ ಬಲವೆಷ್ಟೆಂಬುದು ನಿನಗೆ ತಿಳಿದೀತು! (೩೧-೩೨).

೮೬ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ಅಥವಾ ಧಾರಯಿಷ್ಯಾಮಿ ಕ್ರೋಧಮದ್ಕ ನಿಶಾಮಿಮಾಮ್‌ |

ಗೃಹ್ಯತಾಮುದಯಃ ಸೆ ರಂ ಕಾಮಭೋಗೇಷು ವಾನರ ೩೩ ದೀಯತಾಂ ಸಂಪ್ರದಾನಂ ಪರಿಷ್ಠಜ್ಯ ವಾನರಾನ್‌ ಸರ್ವಶಾಖಾಮೃಗೇಂದ್ರಸ್ತಂ ಸಂಸಾದಯ ಸುಹೃಜ್ಜನಮ್‌ ೩೪ ಸುದ್ಧಹ್ಟಾಂ ಕುರು ಕಿಷ್ಠಿಂಧಾಂ ಕುರುಷ್ಠಾತ್ಸ ಸಮಂ ಪುರೇ ಕ್ರೀಡಸ್ವಚ ಸಹ ಸ್ವ್ರೀಭಿರಹಂ ತೇ ದರ್ಪನಾಶನಃ॥ ೩೫

ಯೋ ಹಿ ಮತಂ ಪ್ರಮತಂ ವಾ ಸುಪಂ ವಾ ರಹಿತಂ ಭ್ಛತಮ್‌ ಹನ್ಯಾತ್‌ ಭ್ರೂಣಹಾ ಲೋಕೇ ತೃದ್ದಿಧಂ ಮದಮೋಹಿತಮ್‌ ೩೬ ಪ್ರಹಸ್ಯಾಬ್ರವೀನ್ನಂದಂ ಕ್ರೋಧಾತಮಸುರೋತಮಮ್‌

ವಿಸೃಜ್ಯ ತಾಃ ಸ್ತ್ರಿಯಃ ಸರ್ವಾಸಾರಾಪ್ರಭೃತಿಕಾಸದಾ ೩೭

ಅಥವಾ ಇದೊಂದು ರಾತ್ರಿಯವರೆಗೆ ನನ್ನಕ್ರೋಧೋದ್ರೇಕವನ್ನುತಡೆದು ಕೊಂಡಿರುವೆನು. ಸೂರ್ಯೋದಯಪರ್ಯಂತ ಅವಧಿಯನ್ನುತೆಗೆದುಕೊ. ಎಲ್ಲೆ ವಾನರ, ಅಲ್ಲಿಯವರೆಗೆ ಕಾಮಭೋಗಗಳಲ್ಲಿಸ್ವೇಚ್ಛೆಯಾಗಿ ವಿಹರಿಸು! (೩೩). ನೀನು ಕಪಿಗಳೆಲ್ಲರಿಗೂ ಒಡೆಯನಾಗಿದ್ದೀಯೆ. ಪ್ರೀತಿಯಿಂದ ಕಪಿ ಗಳನ್ನಾಲಿಂಗಿಸಿಕೊಂಡು (ಕೊನೆಗಾಲದಲ್ಲಿ) ಅವರಿಗೆ ಕೊಡಬೇಕಾದ ವಸುಗಳನ್ನು ಕೊಟ್ಟುಬಾ! ನಿನ್ನಮಿತ್ರರನ್ನುಬೀಳ್ಳೊಡು! (೩೪). ಕಿಷ್ಠಿಂಧೆಯನ್ನುಯಾರಾದರೂ ಚೆನ್ನಾಗಿ ನೋಡಿಕೊಳ್ಳುವಂತೆ ಏರ್ಪಡಿಸು | ನಿನಗೆ ಸದೃಶನಾದ ಇನ್ನೊಬ್ಬನನ್ನು ರಾಜನನ್ನಾಗಿ ನೇಮಿಸು! ನಿನ್ನಸ್ತ್ರೀಯರೊಡನೆ ಇದೊಂದು ರಾತ್ರಿ ಕಡೆಯದಾಗಿ ಕ್ರೀಡಿಸು ! ನಿನ್ನ ದರ್ಪವನ್ನು ಮುರಿಯುವುದಕ್ಕಾಗಿಯೇ ನಾನು ಬಂದಿದ್ದೇನೆ (೩೫). ಏಕೆಂದರೆ, ಮತ್ತೇರಿದವನು, ತನ್ನ ಕಡೆ ಗಮನವಿಲ್ಲದವನು, ನಿದ್ರಿಸುವವನು, ಆಯುಧರಹಿತನು-ಇವರನ್ನೂ ನಿನ್ನಂತಹ ಕಾಮಮದ ಮೋಹಿತನನ್ನೂ ಕೊಲ್ಲುವುದು ಭ್ರೂಣಹತ್ಯೆಮಾಡಿದಂತೆ' ಎಂದು ಪ್ರತ್ಯುತ್ತರ ಕೊಟ್ಟನು (೩೬). ಅದನ್ನುಕೇಳಿ ವಾಲಿಯು ನಕ್ಕನು. ಕೂಡಲೆ ತಾರೆ ಮೊದಲಾದ ಸ್ತ್ರೀಯರನ್ನು ಅಂತಃಪುರಕ್ಕೆ ಕಳಿಸಿ, ಮಂದಬುದ್ದಿಯೂ ಕೋಪಾವಿಷ್ಠನೂ ಆದ ರಾಕ್ಷಸನನ್ನು ಕುರಿತು "ಎಲೈ ರಾಕ್ಷಸ, ಸಂಗ್ರಾಮಕ್ಕೆ ನೀನು ಅಂಜುವುದಿಲ್ಲವಾದರೆ,

ಸರ್ಗಃ ೧೧] ವಾಲಿಬಲಾವಿಷ್ಠರಣಮ್‌ ೮೭

ಮತೋತಯವಮಿತಿ ಮಾ ಮಂಸ್ತಾ ಯದ್ಯಭೀತೋತಸಿ ಸಂಯುಗೇ ಮದೋತಯಂ ಸಂಪ್ರಹಾರೇಶಸ್ಮಿನ್‌ ವೀರಪಾಣಂ ಸಮರ್ಥ್ಯತಾಮ್‌॥

ತಮೇವಮುಕ್ತ್ವಾಸಂಕ್ರುದ್ದೋ ಮಾಲಾಮುತ್ಥ್ಯ್ಮಿ ಪ್ಯಕಾಂಚನೀಮ್‌ |

ಪಿತ್ರಾ ದತ್ತಾಂ ಮಹೇಂದ್ರೇಣ ಯುದ್ಧಾಯ ವ್ಯವತಿಷ್ಠತ ೩೯ ವಿಷಾಣಯೋರ್ಗ್ಯಹೀತ್ವಾತಂ ದುಂದುಭಿಂ ಗಿರಿಸಂನಿಭಮ್‌

ಆವಿಧ್ಯತ ತದಾ ವಾಲೀ ವಿನದನ್‌ ಕಪಿಕುಂಜರಃ ೪೦ ವಾಲೀ ವ್ಯಾಪಾತಯಾಂಚಕ್ರೇ ನನರ್ದ ಮಹಾಸ್ಪನಮ್‌ ಶ್ರೋತ್ರಾಭ್ಯಾಮಥ ರಕ್ತಂ ತು ತಸ್ಯ ಸುಸ್ರಾವ ಪಾತ್ಯತಃ ೪೧ ತಯೋಸ್ತುಕ್ರೋಧಸಂರಂಭಾತ್‌ ಪರಸ್ಪರಜಯೈಷಿಣೋಃ।

ಯುದ್ಧಂ ಸಮಭವದ್ಭೋರಂ ದುಂದುಭೇರ್ವಾನರಸ್ಕ ೪೨ ಅಯುಧ್ಯತ ತದಾ ವಾಲೀ ಶಕ್ರತುಲ್ಕಪರಾಕ್ರಮಃ।

ಮುಷ್ಟಿಭಿರ್ಜಾನುಭಿಃ ಪದ್ದಿಃ ಶಿಲಾಭಿಃ ಪಾದಪೈಸಥಾ | ೪೩

ನಾನು ಮದಮೋಹಿತನೆಂದು ಎಂದಿಗೂ ತಿಳಿಯಬೇಡ. ಮದವು ಹೊಡೆ ದಾಟಕ್ಕೆ ವೀರಪಾಣ*ವಾಯಿತೆಂದು ಭಾವಿಸು !' ಎಂದ ಉತ್ತರಿಸಿದನು (೩೭-೩೮). ಹಾಗೆ ಉತ್ತರಿಸಿ ಸಂಕ್ರುದ್ದನಾದ ವಾಲಿಯು ತನ್ನ ತಂದೆಯಾದ ಮಹೇಂದ್ರನು ಕೊಟ್ಟಿದ್ದ ಸುವರ್ಣಮಾಲಿಕೆಯನ್ನು ಕೊರಳಲ್ಲಿ ಧರಿಸಿ ಯುದ್ದಕ್ಕೆ ಸಜ್ಜಾದನು. ಕಪಿಕುಂಜರನು ಪರ್ವತಾಕಾರನಾದ ದುಂದುಭಿಯ ಕೊಂಬು ಗಳೆರಡನ್ನೂ ಹಿಡಿದು ಹೋರಾಡಿದನು (೩೯-೪೦). ವಾಲಿಯು ಕೇಕೇಹಾಕುತ್ತ ದುಂದುಭಿಯನ್ನು ನೆಲದಮೇಲುರುಳಿಸಿ ಗಟ್ಟಿಯಾಗಿ ಗರ್ಜಿಸಿದನು. ಉರುಳಿ ಬಿದ್ದರಾಕ್ಷಸನ ಕಿವಿಗಳಿಂದ ನೆತ್ತರು ಸುರಿಯಿತು. ಪರಸ್ಪರ ಗೆಲ್ಲಬೇಕೆಂಬ ರೋಷಾ ವೇಶದಿಂದ ಹೋರಾಡುತ್ತಿದ್ದ ಕಪೀಂದ್ರನಿಗೂ ರಾಕ್ಷಸನಿಗೂ ಘೋರವಾದ ಸಂಗ್ರಾಮ ತೊಡಗಿತು (೪೧-೪೨). ದೇವೇಂದ್ರ ಸದೃಶಪರಾಕ್ರಮಿಯಾದ ವಾಲಿಯು ದುಂದುಭಿಯನ್ನು ಮುಷ್ಟಿಗಳಿಂದ ಗುದ್ದುತ್ತ ಮೊಳಕಾಲಿನಿಂದ

ವೀರಪಾಣ : ವೀರರು ರಣಭೂಮಿಗೆ ತೆರಳುವಾಗ ಯುದ್ಧಾವೇಶವಾಗಲೆಂದು ಮಾಡುವ ಮದ್ಯಪಾನ.

೮೮ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ಪರಸ್ಪರಂ ಫತೋಸತ್ರ ವಾನರಾಸುರಯೋಸದಾ। ಆಸೀದ್ದೀನೋತಸುರೋ ಯುದ್ಧೇ ಶಕ್ರಸೂನುರ್ವವರ್ಧತ॥ ೪೪

ತಂತು ದುಂದುಭಿಮುದ್ಯಮ್ಯ ಧರಣ್ಯಾಮಬ್ಯಪಾತಯತ್‌

ಯುದ್ದೇ ಪ್ರಾಣಹರೇ ತಸ್ಲಿನ್ನಿಷಿಷಸ್ಲೂ ದುಂದುಭಿಸದಾ ೪೫ ಪಪಾತ ಮಹಾಕಾಯಃ ಕ್ಷಿತೌ ಪಂಚತ್ಸಮಾಗತಃ

ತಂ ತೋಲಯುತ್ತಾ ಬಾಹುಭ್ಯಾಂ ಗತಸತ್ತಮಚೇತನಮ್‌ Il ೪೬ ಚಿಕ್ಷೇಪ ಬಲವಾನ್‌ ವಾಲೀ ವೇಗೇನೈಕೇನ ಯೋಜನಮ್‌

ತಸ್ಯ ವೇಗಪ್ರವಿದ್ಧಸ್ಯ ವಕ್ಚಾತ್‌ ಕ್ಷತಜಬಿಂದವಃ Il ೪೭ ಪ್ರಪೇತುರ್ಮಾರುತೋತ್ಮ್ಮಿಪ್ತಾಮತಂಗಸ್ಯಾಶ್ರಮಂ ಪ್ರತಿ।

ತಾನ್‌ ದೃಷ್ಟ್ವಾಪತಿತಾಂಸಸ್ಯ ಮುನಿಃ ಶೋಣಿತವಿಪುಷಃ ೪೮ ಕ್ರುದ್ಧಸಸ್ಯ ಮಹಾಭಾಗಶ್ಚಿಂತಯಾಮಾಸ ಕೋ ನ್ಹಯಮ್‌ ಯೀನಾಹಂ ಸಹಸಾ ಸಷ ಶೋಣಿತೇನ ದುರಾತ್ಮನಾ Il ೪೯

ತಿವಿಯುತ್ತ ಕಾಲಿನಿಂದ ಒದೆಯುತ್ತ ಬಂಡೆಗಳಿಂದ ಬಡಿಯುತ್ತ ಮರಗಳಿಂದ ಅಪಳಿಸುತ್ತ ಹೋರಾಡಿದನು (೪೩). ಹೀಗೆ ಒಬ್ಬರನ್ನೊಬ್ಬರು ತದುಕುತ್ತ ಹೋರಾಡುತ್ತಿರಲು ರಾಕ್ಷಸನ ಕೈ ಕುಗ್ಗಿತು; ವಾಲಿಯ ಕೈ ಮೇಲಾಯಿತು.

ಪ್ರಾಣಾಂತಿಕವಾದ ಯುದ್ಧದಲ್ಲಿ ವಾಲಿಯು ದುಂದುಭಿಯನ್ನು ಹಠಾತನೆ ಮೇಲೆತ್ತಿ ನೆಲದಮೇಲೆ ಕುಕ್ಕಿ ಬಿಟ್ಟನು. ದುಂದುಭಿಯ ದೇಹವು ನಜ್ಜುಗುಜ್ಜಾಯಿತು (೪೪- ೪೫). ಮಹಾಕಾಯನಾದ ರಾಕ್ಷಸನು ನೆಲದಲ್ಲಿ ಸುತರುಳಿದನು. ಗತ ಪ್ರಾಣನಾಗಿ ಅಲ್ಲಾಡದೆ ಬಿದ್ದಿದ್ದ ದುಂದುಭಿಯನ್ನು ಬಲಾಢ್ಯನಾದ ವಾಲಿಯು ಕೈಗಳಿಂದ ಎತ್ತಿತೂಗಿ ಒಂದೇ ಎಸೆತಕ್ಕೆ ಒಂದು ಯೋಜನದಷ್ಟು ದೂರ ಬಿಸಾಡಿದನು. ಬಿಸಾಡಿದ ವೇಗಕ್ಕೆ ರಾಕ್ಷಸನ ಬಾಯಿಂದ ರಕ್ತದ ಹನಿಗಳು ಉದುರಿದವು (೪೬-೪೭). ಅವು ಗಾಳಿಗೆ ತೂರಿಹೋಗಿ ಮತಂಗಮುನಿಗಳ ಆಶ್ರಮದಲ್ಲಿ ಬಿದ್ದವು. ಮಹಾತ್ಮರಾದ ಮತಂಗ ಮುನಿಗಳು ಅಲ್ಲಿ ಬಿದ್ದ ರಕ್ತದ ಹನಿಗಳನ್ನು ಕಂಡು ಕ್ರುದ್ಧರಾದರು. "ಆಹಾ! ಯಾರಿವನು? ಇದ್ದಕ್ಕಿದ್ದಂತೆ ನನ್ನಮೈಗೆ ರಕ] ಬಿಂದುಗಳನ್ನು ಸೋಕಿಸಿದ ದುರಾತ್ಮನು ಯಾವನು? (೪೮-೪೯).

ಸರ್ಗಃ ೧೧] ವಾಲಿಬಲಾವಿಷ್ಠರಣಮ್‌

ಕೋರಂಯಂ ದುರಾತ್ಮಾ ದುರ್ಬುದ್ದಿರಕ್ಳತಾತ್ಕಾ ಬಾಲಿಶಃ

ಇತ್ಯುಕ್ತ್ವಾಥ ಎನಿಷ್ಯಮ್ಮ ದದರ್ಶ ಮುನಿಪುಂಗವಃ ೫೦ ಮಹಿಷಂ ಪರ್ವತಾಕಾರಂ ಗತಾಸುಂ ಪತಿತಂ ಭುವಿ ತು ವಿಜ್ಞಾಯ ತಪಸಾ ವಾನರೇಣ ಕೃತಂ ಹಿ ತತ್‌ ೫೧ ಉತ್ಪಸರ್ಜ ಮಹಾಶಾಪಂ ಕ್ಷೇಪಾರಂ ವಾಲಿನಂ ಪ್ರತಿ। ಇಹ ತೇನಾಪ್ರವೇಷ್ಠವ್ಯಂ ಪ್ರವಿಷ್ಠಸ್ಯ ವಧೋ ಭವೇತ್‌ ೫೨ ವನಂ ಮತ್ತಂಶ್ರಯಂ ಯೇನ ದೂಷಿತಂ ರುಧಿರಸ್ರವೈಃ। ಸಂಭಗ್ನಾಃ ಪಾದಪಾಶ್ಲೇಮೇ ಕ್ಷಿಪತೇಹಾಸುರೀಂ ತನುಮ್‌ ೫೩ ಸಮಂತಾದ್ಯೋಜನಂ ಪೂರ್ಣಮಾಶ್ರಮಂ ಮಾಮಕಂ ಯದಿ। ಆಗಮಿಷೃತಿ ದುರ್ಬುದ್ಧಿ ರ್ವ್ಯಕ್ತಂಸ ಭವಿಷ್ಯತಿ ॥1 ೫೪ ಯೇ ಚಾಪಿ ಸಚಿವಾಸಸ್ಕ ಸಂಶ್ರಿತಾ ಮಾಮಕಂ ವನಮ್‌ ತೈರಿಹ ವಸವ್ಯಂ ಶ್ರುತ್ವಾಯಾಂತು ಯಥಾಸುಖಮ್‌ ೫೫

ದುರ್ಬುದ್ದಿಯೂ ಸಂಸ್ಕೃತಿಟೀನನೂ ಆದ ಯಾವ ಮೂರ್ಯನಿವನು ?' ಎಂದು ಹೇಳುತ್ತ ಮಹರ್ಷಿಗಳು ಹೊರಗೆ ಬಂದು, ಪರ್ವತಾಕಾರನಾಗಿ ನೆಲದ ಮೇಲೆ ಸತ್ತುಬಿದ್ದಿದ್ದಮಹಿಷರೂಪನಾದ ರಾಕ್ಷಸನನ್ನು ಕಂಡರು. ಅವರು ತಪೋಬಲದಿಂದ ಅದು ವಾಲಿಯ ಕೃತ್ಯವೆಂದು ತಿಳಿದುಕೊಂಡರು (೫೦-೫೧). ದುಂದುಭಿಯನ್ನು ಅಲ್ಲಿಗೆ ಎಸೆದ ವಾಲಿಗೆ ಒಂದು ಮಹಾಶಾಪವನ್ನಿತ್ತರು "ಈ ದುಷ್ಕಾರ್ಯವನ್ನೆಸಗಿದ ದುರಾತ್ಮನು ನನ್ನ ಆಶ್ರಮದ ಎಲ್ಲೆಯೊಳಗೆ ಕಾಲಿಡ ಕೂಡದು. ಕಾಲಿಟ್ಟರೆ ಕೂಡಲೆ ಅವನು ಸತುಹೋಗಲಿ! (೫೨). ರಕ್ತಕಣಗಳನ್ನು ಚೆಲ್ಲಿ ಅವನು ತಪೋವನವನ್ನು ಕೆಡಿಸಿದ್ದಾನೆ. ರಾಕ್ಷಸದೇಹವನ್ನೆಸೆದು ಮರಗಳನ್ನು ಮುರಿದು ಹಾಳುಮಾಡಿದ್ದಾನೆ. ನನ್ನ ಆಶ್ರಮದ ಸುತ್ತಲೂ ಒಂದು ಯೋಜನದವರೆಗೆ ದುಷ್ಠನು ಕಾಲಿಟ್ಟರೆ, ಅವನು ಜೀವಸಹಿತ ಉಳಿಯುವುದಿಲ್ಲ! (೫೩-೫೪). ನನ್ನ ತಪೋವನದಲ್ಲಿ ಅವನ ಕಡೆಯ ಕಪಿನಾಯಕರು ಯಾರು ವಾಸಿಸಕೂಡದು | ನನ್ನ ಆಜ್ಞೆಯನ್ನು ಕೇಳಿ ಅವರೆಲ್ಲರೂ ಸುಖದಿಂದ ಅತ್ತ ತೊಲಗಲಿ | ಹಾಗಿಲ್ಲದೆ ಅವರು ಇಲ್ಲಿಯೇ ಉಳಿದರೆ ಅವರನ್ನೂ ನಾನು

೯೦ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ಯದಿ ತೇ5ಪೀಹ ತಿಷ್ಠಂತಿ ಶಪಿಷ್ಕ್ಯೇ ತಾನಪಿ ಧ್ರುವಮ್‌ ವನೇಆಸ್ಮಿನ್‌ ಮಾಮಕೇsತ್ಯರ್ಥಂ ಪುತ್ರವತ್‌ ಫರಿಪಾಲಿತೇ॥ ೫೬

ಪತ್ರಾಂಕುರವಿನಾಶಾಯ ಫಲಮೂಲಾಭವಾಯ ಚ। ದಿವಸಶ್ಥಾಸ್ಥ ಮರ್ಯಾದಾ ಯಂ ದ್ರಷ್ಟಾ ಶ್ಲೋತಸ್ಥಿವಾನರಮ್‌ ೫೭

ಬಹುವರ್ಷಸಹಸ್ರಾಣಿ ವೈ ಶೈಲೋ ಭವಿಷ್ಯತಿ।

ತತಸ್ಪೇ ವಾನರಾಃ ಶ್ರುತ್ವಾಗಿರಂ ಮುನಿಸಮೀರಿತಾಮ್‌ ೫೮ ನಿಶ್ರಕ್ರಮುರ್ವನಾತಸ್ಥಾತಾನ್‌ ದೃಷ್ಟಾವಾಲಿರಬ್ರವೀತ್‌

ಕಿಂ ಭವಂತಃ ಸಮಸಾಶ್ತ ಮತಂಗವನವಾಸಿನಃ ರ೯ ಮತ್ತಮೀಪಮನುಪ್ರಾಪ್ಪ ಆಪಿ ಸಸ್ಲಿ ವನೌಕಸಾಮ್‌

ತತಸೇ ಕಾರಣಂ ಸರ್ವಂ ತದಾ ಶಾಪಂ ವಾಲಿನಃ ೬೦ ಶಶಂಸುರ್ವಾನಾರಃ ಸರ್ವೇ ವಾಲಿನೇ ಹೇಮಮಾಲಿನೇ

ಏತಚ್ಛು ತ್ವಾ ತದಾ ವಾಲೀ ವಚನಂ ವಾನರೇರಿತಮ್‌ ॥। ೬೧

ಶಹಿಸುವುದು ನಿಶ್ಚಯ. ನನ್ನ ತಪೋವನವನ್ನು ಮಗನಂತೆ ಪ್ರೀತಿಯಿಂದ ಸಾಕುತಿದ್ದೇನೆ (೫೫-೫೬). ಕಪಿಗಳು ಇಲ್ಲಿರುವುದು ಎಲೆಗಳನ್ನೂ ಚಿಗುರು ಗಿಡಗಳನ್ನೂ ಹಾಳುಮಾಡಿ ಫಲಮೂಲಗಳನ್ನು ಧ್ವಂಸಪಡಿಸುವುದಕ್ಕೋ ಅವರು ಹೊರಟುಹೋಗಲು ಒಂದೇ ದಿವಸ ಅವಧಿ ! ನಾಳೆ ಯಾವ ಕಪಿ ಯಾದರೂ ನನ್ನ ಕಣ್ಣಿಗೆ ಬಿದ್ದರೆ, ಸಾವಿರಾರು ವರ್ಷಗಳವರೆಗೆ ಅವನು ಕಲ್ಲಾಗಿ ಹೋಗುವನು !' ಎಂದು ಶಪಿಸಿದರು. ವಾಲಿ ಪಕ್ಷದ ವಾನರರು ಮತಂಗ ಮುನಿಗಳ ಶಾಪೋಕ್ತಿಯನ್ನು ಕೇಳಿಸಿಕೊಂಡರು (೫೭-೫೮). ಕೂಡಲೆ ಅವರೆಲ್ಲರೂ ತಪೋವನದಿಂದ ಹೊರಟುಹೋದರು. ವಾಲಿಯು ಅವರನ್ನು ಕಂಡು "ಎಲ್ಫೆ ವಾನರರೆ, ಮತಂಗವನದಲ್ಲಿದ್ದ ನೀವೆಲ್ಲರೂ ಒಟ್ಟುಗೂಡಿ ನನ್ನ ಸಮೀಪಕ್ಕೆ ಬಂದುದೇಕೆ 9 ನಿಮ್ಮೆಲ್ಲರಿಗೂ ಕುಶಲವಷ್ಟೆ?' ಎಂದು ಕೇಳಿದನು (೫೯-೬೦). ಆಗ ವಾನರರೆಲ್ಲರೂ ಸುವರ್ಣಮಾಲೆಯನ್ನು ಧರಿಸಿದ್ದ ವಾಲಿಗೆ ತಾವು ಬಂದ ಕಾರಣವನ್ನೂ ಅವನಿಗೆ ಬಂದ ಶಾಪವೃತ್ತಾಂತವನ್ನೂ ಅರಿಕೆ ಮಾಡಿದರು. ಆಗ ವಾಲಿಯು ಮತಂಗಮುನಿಗಳ ಸನ್ನಿಧಿಗೆ ಹೋಗಿ ಕೈಮುಗಿದು ಕೊಂಡು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. ಮತಂಗ ಮುನಿಗಳು ಅವನ

ಸರ್ಗಃ ೧೧] ವಾಲಿಬಲಾವಿಷ್ಕರಣಮ್‌ ೯೧

ಮಹರ್ಷಿಂ ತಮಾಸಾದ್ಯ ಯಾಚತೇ ಸ್ಫಕ್ಕತಾಂಜಲಿಃ [

ಮಹರ್ಷಿಸಮನಾದ್ಭತ್ಯ ಪ್ರವಿವೇಶಾಶ್ರಮಂ ತದಾ ೬೨

ಶಾಪಧಾರಣಭೀತಸ್ತುವಾಲೀ ವಿಹ್ನಲತಾಂ ಗತಃ

ತತಃ ಶಾಪಭಯಾದ್ರೀತ ಯಶ್ಯಮೂಕಂ ಮಹಾಗಿರಿಮ್‌ ೬೩ 2 |

ASN SG

ವಿಚರಾಮಿ ಸಹಾಮಾತ್ಯೋ ವಿಷಾದೇನ ವಿವರ್ಜಿತಃ

ಏಷೋಪಸ್ತಿನಿಚಯಸ್ಪಸ್ಯ ದುಂದುಭೇಃ ಸಂಪ್ರಕಾಶತೇ॥ ೬೫

ವೀರ್ಯೋತೇಕಾನ್ನಿರಸಸ್ಯ ಗಿರಿಕೂಟೋಪಮೋ ಮಹಾನ್‌

ಇಮೇ ವಿಪುಲಾಃ ಸಾಲಾಃ ಸಪ್ತಶಾಖಾವಲಂಬಿನಃ ೬೬

ಯತ್ಸೈಕಂ ಘಟತೇ ವಾಲೀ ನಿಷ್ತತ್ರಯಿತುಮೋಜಸಾ ಏತಸ್ಯಾಸಮಂ ವೀರ್ಯಂ ಮಯಾ ರಾಮ ಪ್ರಕೀರ್ತಿತಮ್‌ ೬೭

ಪ್ರಾರ್ಥನೆಗೆ ಕಿವಿಗೊಡದೆ ತಮ್ಮ ಆಶ್ರಮದೊಳಗೆ ಹೊರಟು ಹೋದರು (೬೧-೬೨). ಹೀಗೆ ಶಾಪಬಂದುದರಿಂದ ವಾಲಿಯು ಭೀತನಾಗಿ ಕಳವಳಕ್ಕೀಡಾದನು. ಶ್ರೀರಾಮ, ಅಲ್ಲಿಂದ ಮೊದಲುಗೊಂಡು ವಾಲಿಯು ಬುಷ್ಕಮೂಕ ಪರ್ವತದಲ್ಲಿ ಕಾಲಿಡುವುದಿಲ್ಲ; ದಿಕ್ಕಿಗೆ ಸಹ ನೋಡುವುದಿಲ್ಲ ವಾಲಿಯು ಇಲ್ಲಿಗೆ ಬರುವುದಿಲ್ಲವೆಂದರಿತು, ರಾಘವ, ನಾನು ಮಹಾರಣ್ಯವನ್ನು ಆಶ್ರಯಿಸಿದ್ದೇನೆ (೬೩-೬೪). ಇಲ್ಲಿನಿರಾಂತಕವಾಗಿ ಮಂತ್ರಿಗಳೊಡನೆ ಸಂಚರಿಸುತ್ತಿದ್ದೇನೆ. ಅಗೋ, ಅಲ್ಲಿ ದುಂದುಭಿಯ ಅಸ್ಥಿಪಂಜರವು ಕಾಣುತಿದೆ, ನೋಡು. ಅದನ್ನು ವಾಲಿಯು ತನ್ನ ಬಲದರ್ಪದಿಂದ ಎಸೆದಿದ್ದಾನೆ. ಅಸ್ಥಿ ಪಂಜರವು ದೊಡ್ಡದಾದ ಗಿರಿಶ್ಚಂಗದಂತೆ ಗೋಚರಿಸುತೆದೆ. ಅಲ್ಲದೆ, ಶ್ರೀರಾಮ, ಇತ್ತ ವಿಶಾಲವಾದ ಏಳು ಸಾಲವೃಕ್ಷಗಳಿವೆಯಷ್ಟೆ (೬೫-೬೬). ಶಾಖೋಪ ಶಾಖೆಗಳಿಂದ ಕೂಡಿದ ಮಹಾವೃಕ್ಷಗಳಲ್ಲಿ ಒಂದೊಂದನ್ನು ವಾಲಿಯು ಬಾಣದಿಂದ ಹೊಡೆದು, ಬಾಣವು ಆಚೆಗೆ ತೂರಿಹೋಗುವಂತೆ* ಮಾಡಲು

ತ್ಯೇ ಅನುಬಂಧವನ್ನು ನೋಡಿ.

೯೨ ಕಿಷ್ಕಿಂಧಾಕಾಂಡಃ [ಸರ್ಗಃ ೧೧

ಕಥಂ ತಂ ವಾಲಿನಂ ಹಂತುಂ ಸಮರೇ ಶಕ್ಷ್ಯ ಸೇ ನೃಪ।

ತಥಾ ಬ್ರುವಾಣಂ ಸುಗ್ರೀವಂ ಪ್ರಹಸನ್‌ ಲಕ್ಷ್ಮಣೋತಬ್ರವೀತ್‌ ೬೮ ಕಸ್ಮಿನ್‌ ಕರ್ಮಣಿ ನಿರ್ವೃತ್ರೇ ಶ್ರದ್ಧಧ್ಯಾ ವಾಲಿನೋ ವಧಮ್‌ ತಮುವಾಚಾಥ ಸುಗ್ರೀವಃ ಸಪೃಸಾಲಾನಿಮಾನ್‌ ಪುರಾ ೬೯ ಏವಮೇಕೈಕಶೋ ವಾಲೀ ವಿವ್ಯಾಧಾಥ ಚಾಸಕ್ಸತ್‌

ರಾಮೋ ವಿದಾರಯೇದೇಪಾಂ ಬಾಣೇನೈಕೇನ ಚೇದ್ದು. ಮಮ್‌ ೭೦

ವಾಲಿನಂ ನಿಹತಂ ಮನ್ಯೇ ದೃಷ್ಟ್ವಾ ರಾಮಸ್ಯ ವಿಕ್ರಮಮ್‌

ಹತಸ್ಯ ಮಹಿಷಸ್ಯಾಸ್ಟಿ ಪಾದೇನೈಕೇನ ಲಕ್ಷ್ಮಣ ೭೧ ಉದ್ಯಮ್ಯಾಥ ಪ್ರಕ್ಷಿಪೇಚ್ಛೇತರಸಾ ದ್ವೇ ಧನುಃಶತೇ।

ಏವಮುಕ್ಹ್ವಾತು ಸುಗ್ರೀವೋ ರಾಮಂ ರಕಾಂತಲೋಚನಮ್‌ ೭೨

ಸಮರ್ಥನು. ಈಗ ನಾನು ವಾಲಿಗಿರುವ ಅಸಾಧಾರಣವಾದ ಶೌರ್ಯವನ್ನು ನಿನಗೆ ಹೇಳಿದ್ದೇನೆ (೬೭). ಶ್ರೀರಾಮ, ವಾಲಿಯನ್ನು ನೀನು ಸಂಗ್ರಾಮದಲ್ಲಿ ಸಂಹರಿಸಬಲ್ಲೆಯಾ 9''ಎಂದು ಕೇಳಿದನು. ಅದನ್ನು ಕೇಳಿ ಲಕ್ಷ್ಮಣನು ನಗುತ್ತ “ಸುಗ್ರೀವ, ಯಾವ ಕಾರ್ಯವನ್ನು ಮಾಡಿ ತೋರಿಸಿದರೆ ಶ್ರೀರಾಮನು ವಾಲಿಯನ್ನು ವಧಿಸಬಲ್ಲನೆಂದು ನಿನಗೆ ನಂಬಿಕೆಯಾದೀತು?9'' ಎಂದು ಪ್ರಶ್ನಿಸಿದನು (೬೮). ಆಗ ಸುಗ್ರೀವನು ""ಹಿಂದೆ ವಾಲಿಯು ಸಪ್ತ ಸಾಲವೃಕ್ಷಗಳಲ್ಲಿ ಒಂದೊಂದನ್ನೂ ಬಾಣದಿಂದ ಭೇದಿಸಿದ್ದಾನೆ. ಹೀಗೆ ಅನೇಕಸಲ ಮಾಡಿದ್ದಾನೆ.

ಶ್ರೀರಾಮನು ಇವುಗಳಲ್ಲೊಂದನ್ನು ಒಂದೇ ಬಾಣದಿಂದ ಭೇದಿಸುವನಾದರೆ,

ಲಕ್ಷ್ಮಣ, ಆಗ ಶ್ರೀರಾಮನ ಪರಾಕ್ರಮವನ್ನು ಕಂಡು, ವಾಲಿಯು ಸತ್ತನೆಂದೇ

ತಿಳಿಯುವೆನು (೬೯-೭೦). ಸತುಬಿದ್ದಿರುವ ಮಹಿಷಾಸುರನ ಅಸ್ಥಿಪಂಜರವನ್ನು ಶ್ರೀರಾಮನು ತನ್ನ ಪಾದದಿಂದ ಹಾರಿಸಿ ಇನ್ನೂರು ಬಿಲ್ಲಿನ* ದೂರಕ್ಕೆ ಒಮ್ಮೆಗೇ

ಚಿಮ್ಮಲಿ !'' ಎಂದನು. ಸಮಯದಲ್ಲಿ ಶ್ರೀರಾಮನ ಕಣ್ಣು ಕೆಂಪಾಗಿತ್ತು!

(೭೧-೭೨).

ಒಂದು ಬಿಲ್ಲಿನ ದೂರ ನಾಲ್ಕು ಮೊಳ.

ಸರ್ಗಃ ೧೧] ವಾಲಿಬಲಾವಿಷ್ಕರಣಮ್‌ ೯೩

ಧ್ಯಾತ್ವಾಮುಹೂರ್ತಂ ಕಾಕುತ್ನಂ ಪುನರೇವ ವಚೋ ಬ್ರವೀತ್‌

ಶೂರಶ್ಚಶೂರಘಾತೀ ಪ್ರಖ್ಯಾತಬಲಪ್‌ೌರುಷಃ ೭೩ ಬಲವಾನ್‌ ವಾನರೋ ವಾಲೀ ಸಂಯುಗೇಷ್ಟಪರಾಜಿತಃ।

ದೃಶ್ಯಂತೇ ಚಾಸ್ಯ ಕರ್ಮಾಣಿ ದುಷ್ಕರಾಣಿ ಸುರೈರಪಿ॥ ೭೪ ಯಾನಿ ಸಂಚಿಂತ್ಯ ಭೀತೋ5 ಹಮೃಶ್ಯಮೂಕಂ ಸಮಾಶ್ರಿತಃ। ತಮಜಯ್ಯಮಧ್ಭಷ್ಕಂ ವಾನರೇಂದ್ರ ಮಮರ್ಷಣಮ್‌ ೭೫ ವಿಚಿಂತಯನ್ನ ಮುಂಚಾಮಿ ಯಷ್ಯಮೂಕಮಹಂ ತ್ಲಿಮಮ್‌

ಉದ್ದಿಗ್ನಃ ಶಂಕಿತಶ್ಚಾಪಿ ವಿಚರಾಮಿ ಮಹಾವನೇ ೭೬ ಅನುರಕ್ಕೆಃ ಸಹಾಮತ್ಯೈರ್ಹನುಮತ್ಸಮುಖ್ಯರ್ವರೈೆಃ।

ಉಪಲಬ್ಬಂ ಮೇ ಶ್ಲಾಫ್ಯಂ ಸನ್ನಿತ್ರಂ ಮಿತ್ರವತ್ತಲ ೭೭ ತ್ವಾಮಹಂ ಪುರುಷವ್ಯಾಫ್ರ ಹಿಮವಂತಮಿವಾಶ್ರಿತಃ |

ಕಿಂ ತು ತಸ್ಯ ಬಲಜ್ಜೋ5ಹಂ ದುರ್ಭಾತುರ್ಬಲಶಾಲಿನಃ ೭೮

ಅದನ್ನು ನೋಡಿ ಸುಗ್ರೀವನು ಸ್ವಲ್ಪಕಾಲ ಚಿಂತಿಸಿ, ಮತ್ತೆ ""ಶ್ರೀರಾಮ, ಶೂರನೂ ಶೂರಘಾತಿಯು ಎನಿಸಿದ ವಾಲಿಯ ಬಲಪರಾಕ್ರಮಗಳು ವಿಖ್ಯಾತ ವಾದವು. ರಣಭೂಮಿಯಲ್ಲಿ ವಾನರನು ಸೋತಸಂದರ್ಭವೇಇಲ್ಲ ಅವನ ಸಾಹಸಕೃತ್ಯಗಳು ದೇವತೆಗಳಿಗೂ ಶಕ್ಯವಲ್ಲವೆಂಬುದು ಕಣ್ಣಿಗೆ ಕಾಣಿಸುತ್ತಿದೆ (೭೩-೭೪). ಅವನ ಸಾಹಸಗಳನ್ನುಕಂಡು ಆಂಜಿ ನಾನು ಯಷ್ಯ ಮೂಕಗಿರಿಗೆ ಓಡಿಬಂದಿದ್ದೇನೆ. ವಾಲಿಯನ್ನು ಕೆಣಕುವುದು ಅಸಾಧ್ಯವೆಂದೂ ಗೆಲ್ಲುವುದು ಅಶಕ್ಯವೆಂದೂ ವಾನರೇಂದ್ರನು ಅತ್ಯಂತ ಕೋಪಿಷ್ಠನೆಂದೂ ಮನಗಂಡು, ನಾನು ಯಷ್ಯಮೂಕವನ್ನು ಬಿಟ್ಟುಕದಲುವುದೇ ಇಲ್ಲ! ಸದಾ ಗಾಬರಿಯಿಂದ ಹೆದಹೆದರುತ್ತಲೇ ಅರಣ್ಯದಲ್ಲಿಸಂಚರಿಸುತ್ತೇನೆ (೭೫-೭೬). ನನ್ನಲ್ಲಿ ಅನುರಕನಾದ ಹನುಮಂತನೇ ಮೊದಲಾದ ಉತ್ತಮ ನಾಯಕರು ನನ್ನ ಜೊತೆಗೆ ಇದ್ದೇ ಇರುತ್ತಾರೆ. ಮಿತ್ರವತ್ಸಲ, (ನನ್ನಭಾಗ್ಯದಿಂದ) ಶ್ರೇಷ್ಠನಾದ ನೀನು ನನಗೆ ಸನ್ನಿತ್ರನಾಗಿ ದೊರಕಿದೆ. ಪುರುಷೋತ್ತಮ, ಹಿಮವಂತನಂತೆ ಅಕಂಪ್ಯನಾದ ನಿನ್ನನ್ನು ನಾನು ಮರೆಹೊಕ್ಕಿದ್ದೇನೆ. ಆದರೆ ನನಗೆ ದುಷ್ಪಭ್ರಾತನಾದ ಬಲ ಶಾಲಿಯ ಬಲವನ್ನು ಬಲ್ಲೆನಾನು (೭೭-೭೮).

೯೪ ಕಿಪ್ಟಿಂಧಾಕಾಂಡಃ [ಸರ್ಗಃ ೧೧

ಅಪ್ರತ್ಯಕ್ಷಂ ತು ಮೇ ವೀರ್ಯಂ ಸಮರೇ ತವ ರಾಘವ |

ಖಲ್ಪಹಂ ತ್ಲಾಂ ತುಲಯೇ ನಾವಮನ್ಯೇ ಭೀಷಯೇ ೭೯ ಕರ್ಮಭಸಸ್ಸ ಭೀಮೈಸ್ತು ಕಾತರ್ಯಂ ಜನಿತಂ ಮಮ।

ಕಾಮಂ ರಾಘವ ತೇ ವಾಣೀ ಪ್ರಮಾಣಂ ಧೃೈರ್ಯಮಾಕೃತಿಃ॥ ೮೦ ಸೂಚಯಂತಿ ಪರಂ ತೇಜೋ ಭಸ್ಮಚ್ಛನ್ನಮಿವಾನಲಮ್‌ I

ತಸ್ಯ ತದ್ವಚನಂ ಶ್ರುತ್ವಾಸುಗ್ರೀವಸ್ಯ ಮಹಾತ್ಮನಃ ೮೧ ಸ್ಲಿತಿಪೂರ್ವಮಥೋ ರಾಮಃ ಪ್ರತ್ಯುವಾಚ ಹರಿಂ ಪ್ರಭುಃ

ಯದಿ ಪ್ರತ್ಯಯೋಜಸ್ಥಾಸು ವಿಕ್ರಮೇ ತವ ವಾನರ ೮೨ ಪ್ರತ್ಯಯಂ ಸಮರೇ ಶ್ಲಾಪ್ಯಮಹಮುತ್ಪಾದಯಾಮಿ ತೇ ಏವಮುಕ್ತ್ವಾತು ಸುಗ್ರೀವಂ ಸಾಂತ ಲಕ್ಷ್ಮಣಪೂರ್ವಜಃ॥ ೮೩ ರಾಘವೋ ದುಂದುಭೇಃ ಕಾಯಂ ಪಾದಾಂಗುಷ್ನೇನ ಲೀಲಯಾ ತೋಲಯಿತ್ವಾಮಹಾಬಾಹುಶ್ಚಿಕ್ಷೇಪ ದಶಯೋಜನಮ್‌ ೮೪

ಶ್ರೀರಾಮ, ಸಮರದಲ್ಲಿನಿನ್ನಪೌರುಷವೇನೆಂಬುದನ್ನು ನಾನು ಕಂಡವನಲ್ಲ ನಾನು ಹೇಳುವುದು ನಿನ್ನನ್ನು ಅಳೆಯುವುದಕ್ಕಲ್ಪ ಅವಮಾನ ಪಡಿಸುವುದಕ್ಕಲ್ಪ ಬೆದರಿಸುವುದಕ್ಕಂತೂ ಅಲ್ಲವೇ ಅಲ್ಲ(೭೯). ವಾಲಿಯ ಭೀಷಣ ಕೃತ್ಯಗಳನ್ನುಕಂಡು ನನಗೆ ಹೇಡಿತನ ಹುಟ್ಟಿದೆ. ರಘುಕುಲತಿಲಕ, ನಿನ್ನ ವಾಣಿಯೇ ನನಗೆ ಸಾಕಷ್ಟು ವಿಶ್ವಸನೀಯವಾಗಿದೆ. ನಿನ್ನದ್ಧೆರ್ಯ, ನಿನ್ನ ದಿವ್ಯಾಕೃತಿಗಳು ಬೂದಿಮುಚ್ಚಿದ ಕೆಂಡ ದಂತಿರುವ ಉಗ್ರತೇಜಸ್ಸನ್ನು ಸೂಚಿಸುತ್ತವೆ'' ಎಂದು ನುಡಿದನು (೮೦-೮೧). ಸುಗ್ರೀವನ ವಚನವನ್ನಾಲಿಸಿ ಸರ್ವಶಕನಾದ ಶ್ರೀರಾಮನು ಮುಗುಳ್ನಗೆಯಿಂದ ಸುಗ್ರೀವನಿಗೆ ""ವಾನರೇಂದ್ರ, ನಮ್ಮ ಪರಾಕ್ರಮದ ವಿಷಯದಲ್ಲಿ ನಿನಗೆ ವಿಶ್ವಾಸ ಎಲ್ಲವಾದರೆ, ನಮ್ಮ ಯುದ್ಧಸಾಮರ್ಥವೇನೆಂಬುದನ್ನು ನೀನು ಕೊಂಡಾಡುವಂತೆ ಎಶ್ವಾಸವನ್ನುಂಟುಮಾಡಿಕೊಡುತ್ತೇನೆ !'' ಎಂದು ಸಂತೈಸುತ್ತ ಹೇಳಿದನು (೮೨-೮೩). ಹೀಗೆ ಹೇಳಿ ಅಜಾನುಬಾಹುವಾದ ಲಕ್ಷ್ಮಣಾಗ್ರಜನು ಕಾಲಿನ ಹೆಬ್ಬೆರಳಿನಿಂದ ದುಂದುಭಿಯ ದೇಹವನ್ನು ಆಟವಾಡಿದಂತೆ ಚಿಮ್ಮಿ ಹಾರಿಸಿದನು. ದೇಹವು ಹತ್ತುಯೋಜನೆಗಳಷ್ಟುದೂರ ಹಾರಿಬಿದ್ದಿತು! (೮೪).

ಸರ್ಗಃ ೧೧] ವಾಲಿಬಲಾವಿಷ್ಕರಣಮ್‌ ೯೫

ಅಸುರಸ್ಯ ತನುಂ ಶುಷ್ಕಾಂ ಪಾದಾಂಗುಷ್ನೇನ ವೀರ್ಯವಾನ್‌

ಕ್ಷಿಪಂ ದೃಷ್ಟ್ವಾತತಃ ಕಾಯಂ ಸುಗ್ರೀವಃ ಪುನರಬ್ರವೀತ್‌ ೮೫ ಲಕ್ಷ್ಮಣಸ್ಯಾಗ್ರತೋ ರಾಮಂ ತಪಂತಮಿವ ಭಾಸ್ಕರಮ್‌ ಹರೀಣಾಮಗ್ರತೋ ವೀರಮಿದಂ ವಚನಮರ್ಥವತ್‌ ೮೬ ಆರ್ದ್ರಃ ಸಮಾಂಸಃ ಪ್ರತೃಗ್ರಃ ಕ್ಷಿಪಃ ಕಾಯಃ ಪುರಾ ಸಖೇ

ಲಘುಃ ಸಂಪ್ರತಿ ನಿರ್ಮಾಸಂಸ್ತ ಭೂತಶ್ಚ ರಾಘವ ೮೭ ಪರಿಶ್ರಾಂತೇನ ಮತೇನ ಭ್ರಾತ್ರಾ ಮೇ ವಾಲಿನಾ ತದಾ।

ಕ್ಷಿಪಮೇವಂ ಪ್ರಹರ್ಷೇಣ ಭವತಾ ರಘುನಂದನ ೮೮

ನಾತ್ರ ಶಕ್ಕಂ ಬಲಂ ಜ್ಞಾತುಂ ತವ ವಾ ತಸ್ಯ ವಾಧಿಕಮ್‌ | ಆರ್ದ್ರಂ ಶುಷ್ಕಮಿತಿ ಹ್ಯೇತತ್‌ ಸುಮಹದ್ರಾಘವಾಂತರಮ್‌ ೮೯

ಏವ ಸಂಶಯಸಾತ ತವ ತಸ್ಯ ಯದ್ದಲೇ ಸಾಲಮೇಕಂಶು ನಿರ್ಭಂದ್ಮಾ ಭವೇದ್ವ ಕೆರ್ಬಲಾಬಲೇ ೯೦

ದೈತ್ಯನು ಶುಷ್ಕದೇಹವನ್ನು ಕಾಲ್ಫೆರಳಿನಿಂದ ಚಿಮ್ಮಿದ್ದನ್ನು ವೀಕ್ಷಿಸಿ ಸುಗ್ರೀವನು ಪುನಃ ಮಾತಾಡಿದನು. ವೀರನಾದ ಶ್ರೀರಾಮನು ಭಾಸ್ಕರನಂತೆ ಬೆಳಗುತ್ತ ನಿಂತಿದ್ದನು. ಲಕ್ಷ್ಮಣ ಮತ್ತು ಹನುಮಂತನೇ ಮೊದಲಾದ ವಾನರರೆದುರಿಗೆ ಸುಗ್ರೀವನು ಶ್ರೀರಾಮನನ್ನು ನೋಡಿ ಹೀಗೆಂದನು (೮೫-೮೬) : ""ವಯಸ್ಕ, ಹಿಂದೆ ವಾಲಿಯು ದೇಹವನ್ನೆಸೆದಾಗ ಇದು ಹಸಿಯದಾಗಿತ್ತು; ಮಾಂಸ ತುಂಬಿತ್ತು ರುಕ್ಷಸನು ಮಡಿದ ಹೊಸದರಲ್ಲಿ ವಾಲಿಯು ಇದನ್ನು ಎಸೆದಿದ್ದಾನೆ. ಈಗ ಇದರಲ್ಲಿಮಾಂಸವಿಲ್ಲ ಹುಲ್ಲಿನಂತೆ ಹಗುರಾಗಿದೆ! (೮೭). ಅಲ್ಲದೆ ಯುದ್ಧ ಮಾಡಿ ಬಳಲಿ ಮಧ್ಯದ ಅಮಲಿನಲ್ಲಿದ್ದಾಗ ನನ್ನ ಅಣ್ಣನು ಇದನ್ನು ಬಿಸುಟಿದ್ದಾನೆ. ನೀನಾದರೋ ಹೊಸ ಹುರುಪಿನಿಂದ ಚಿಮ್ಮಿದ್ದೀಯೆ | ಆದ್ದರಿಂದ, ರಘುನಂದನ, ಇದರಲ್ಲಿ ನಿನ್ನ ಬಲ ಅಧಿಕವೋ ವಾಲಿಯದೋ ಎಂದು ನಿಶ್ಚಯಿಸಲಾಗದು. ಹಸಿದುದು - ಒಣಗಿದುದು ಎಂಬುದರಲ್ಲಿ ದೊಡ್ಡ ವ್ಯತ್ಯಾಸವಿದೆಯಲ್ಲವೆ, ರಾಘವ ? (೮೮-೮೯). ಮಿತ್ರ, ನಿಮ್ಮಿಬ್ಬರ ಬಲದಲ್ಲಿ ನನಗೆ ಮೊದಲಿದ್ದ ಸಂಶಯವೇ ಉಳಿಯಿತು | ಸಾಲವೃಕ್ಷವನ್ನು ನೀನು ಭೇದಿಸುವೆಯಾದರೆ,

೯೬ ಕಿಷ್ಟಿಂಧಾಕಾಂಡಃ [ಸರ್ಗಃ ೧೧

ಕ್ಷತ್ತೇದಂ ಕಾರ್ಮುಕಂ ಸಜ್ಯಂ ಹಸ್ತಿ ಹಸಮಿವಾತತಮ್‌ ಆಕರ್ಣಪೂರ್ಣಮಾಯಮೃ್ಯ ಎಸೃಜಸ್ವಮಹಾಶರಮ್‌ || ೯೧

ಇಮಂ ಹಿ ಸಾಲಂ ಪ್ರಹಿತಸ್ನ್ಯಯಾ ಶರೋ ಸಂಶಯೋತತ್ರಾಸ್ತಿವಿದಾರಯಿಷ್ಯತಿ | ಅಲಂ ವಿಮರ್ಶೇನ ಮಮ ಪ್ರಿಯಂ ಧ್ರುವಂ ಕುರುಷ್ವರಾಜಾತ್ಮಜ ಶಾಪಿತೋ ಮಯಾ ೯೨

ಯಥಾ ಹಿ ತೇಜಃಸು ವರಃ ಸದಾ ರವಿ- ರ್ಯಥಾ ಹಿ ಶೈಲೋ ಹಿಮವಾನ್‌ ಮಹಾದ್ರಿಷು ಯಥಾ ಚತುಷ್ಟಾತ್ತು ಕೇಸರೀ ವರ- ಸಥಾ ನರಾಣಾಮಸಿ ವಿಕ್ರಮೇ ವರಃ ೯೩ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಏಕಾದಶಃ ಸರ್ಗಃ

4 ತೆ 4 YR Ye YR KN

ಆಗ ಬಲಾಬಲಗಳು ಸ್ಫುಟವಾಗುತ್ತವೆ. ಆದ್ದರಿಂದ ಆನೆಯ ಸೊಂಡಿಲಿನಂತೆ ನೀಳವಾದ ಧನುಸಿಗೆ ಹೆದೆಯೇರಿಸಿ ನಿನ್ನ ಮಹಾಶರವನ್ನು ಹೂಡಿ, ಆಕರ್ಣ ಪರ್ಯಂತವಾಗಿ ಎಳೆದು ಬಿಡು (೯೦-೯೧). ನೀನು ಪ್ರಯೋಗಿಸಿದ ಬಾಣವು ಸಾಲವೃಕ್ಷವನ್ನು ಸೀಳಿ ನುಗ್ಗಿ ಹೋಗುವುದು ; ಸಂದೇಹವಿಲ್ಲ ರಾಜಪುತ್ರ, ಬೇರೊಂದೆಣಿಸದೆ ಕಾರ್ಯವನ್ನು ಮಾಡಿ ನನ್ನನ್ನು ಸಂಪೂರ್ಣವಾಗಿ ತೃಪ್ತಿ ಗೊಳಿಸು. ಆಣೆಯಿಟ್ಟುಹೇಳುತ್ತೇನೆ (ಅದರಿಂದ ನನಗೆ ಸಮಾಧಾನವಾಗುತ್ತದೆ) (೯೨). ತೇಜೋವಂತರಲ್ಲಿ ನೀನು ಸೂರ್ಯನಂತೆ ಶ್ರೇಷ್ಠನಾದವನು. ಮಹಾ ಪರ್ವತಗಳಲ್ಲಿಹಿಮವಂತನಿದ್ದಂತೆ, ಮೃಗಗಳಲ್ಲಿ ಕಂಠೀರವನಿದ್ದಂತೆ, ಪರಾಕ್ರಮಿ ಗಳಲ್ಲಿನೀನು ಸರ್ವಶ್ರೇಷ್ಠನಾಗಿದ್ದೀಯೆ'' ಎಂದನು (೯೩).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿ ಹನ್ನೊಂದನೆಯ ಸರ್ಗ

ದ್ಹಾದಶಃ ಸರ್ಗಃ ಸುಗ್ರೀವಪ್ರತ್ಯಯದಾನಮ್‌ ಏತಚ್ಚವಚನಂ ಶ್ರತ್ವಾಸುಗ್ರೀವೇಣ ಸುಭಾಷಿತಮ್‌ ಪ್ರತ್ಯಯಾರ್ಥಂ ಮಹಾತೇಜಾ ರಾಮೋ ಜಗ್ರಾಹ ಕಾರ್ಮುಕಮ್‌ | ಗೃಹೀತ್ವಾದನುರ್ಫೊೋರಂ ಶರಮೇಕಂ ಮಾನದಃ।

ಸಾಲಮುದ್ದಿಶೃ ಚಿಕ್ಷೇಪ ಜ್ಯಾಸ್ಟನ್ಸ ಪೂರಯನ್‌ ದಿಶಃ

ವಿಸೃಷ್ಟೋ ಬಲವತಾ ಬಾಣಃ ಸ್ಪರ್ಣಪರಿಷ್ಯತಃ |

ಭಿತ್ತ್ವಾಸಾಲಾನ್‌ ಗಿರಿಪ್ರಸ್ನೇ ಸಪ್ತ ಭೂಮಿಂ ವಿವೇಶ ಹ॥

ಪ್ರವಿಷ್ಠಶ$ ಮುಹೂರ್ತೇನ ಧರಾಂ ಭಿತ್ತ್ವಾಮಹಾಜವಃ |

ನಿಷ್ಠತ್ಯ ಪುನಸೂರ್ಣಂ ಸ್ಪಶತೂಣೀಂ ಪುನರಾವಿಶತ್‌

ತಾನ್‌ ದೃಸ್ಟ್ರ್ಯಾಸಪನಿರ್ಭಿನ್ನಾನ್‌ ಸಾಲಾನ್‌ ವಾನರಪುಂಗವಃ |

ರಾಮಸ್ಕ ಶರವೇಗೇನ ವಿಸ್ಮಯಂ ಪರಮಂ ಗತಃ॥ ಸರ್ಗ ೧೨

ಶ್ರೀರಾಮನು ಸಪಸಾಲಗಳನ್ನು ಭೇದಿಸಿ ಸುಗ್ರೀವನಿಗೆ ನಂಬಿಕೆಯನ್ನು ಉಂಟುಮಾಡುವುದು. ವಾಲಿಸುಗ್ರೀವರ ಯುದ್ಧ ಸುಗ್ರೀವನ ಪರಾಜಯ.

ಹೀಗೆ ಸುಗ್ರೀವನಾಡಿದ ಪ್ರಶಂಸಾವಚನವನ್ನು ಕೇಳಿ ಮಹಾತೇಜಸ್ವಿಯಾದ ಶ್ರೀರಾಮನು ಕೋದಂಡವನ್ನು ಎತ್ತಿಕೊಂಡನು. ಆಮೇಲೆ ಘೋರವಾದ ಶರವೊಂದನ್ನು ಹೂಡಿ, ದಶದಿಕ್ಕುಗಳಿಗೂ ರುಂಕಾರದಿಂದ ಮೊಳಗುವಂತೆ, ಒಂದು ಸಾಲವೃಕ್ಷಕ್ಕೆ ಗುರಿಯಿಟ್ಟು ಹೊಡೆದನು (೧-೨). ಬಲಶಾಲಿಯಾದ ಶ್ರೀರಾಮನು ಹೊಡೆದೊಡನೆ ಸ್ಪರ್ಣಾಲಂಕೃತವಾದ ಶರವು ಏಳು ಸಾಲ ವೃಕ್ಷಗಳನ್ನೂ ತೂರಿಕೊಂಡುಹೋಗಿ ಮುಂದೆ ಇದ್ದ ಪರ್ವತಪ್ರದೇಶದ ನೆಲ ದೊಳಗೆ ನುಗ್ಗಿತು ! ಅನಂತರ ಒಂದು ಕ್ಷಣದಲ್ಲಿ ಭೂಮಿಯನ್ನು ಸೀಳಿ ಮಹಾ ವೇಗದಿಂದ ಮೇಲೆ ಜಿಗಿದು ಪುನಃ ತನ್ನ ಬತ್ಪಳಿಕೆಯನ್ನು ಸೇರಿತು! (೩-೪). ಏಕ ಕಾಲದಲ್ಲಿ ಸಪಸಾಲವೃಕ್ಷಗಳು ಸೀಳಿಹೋದುದನ್ನೂ ಶ್ರೀರಾಮನ ಶರವೇಗವನ್ನೂ

5%

೯೮ ಕಿಷ್ಕಿಂಧಾಕಾಂಡಃ [ಸರ್ಗಃ ೧೨

ಮೂರ್ಧ್ನಾ ನೃಪತದ್ಬೂಮ್‌ಾ ಪ್ರಲಂಬೀಕೃತಭೂಷಣ

ಸುಗ್ರೀವಃ ಪರಮಪ್ರೀತೋ ರಾಘವಾಯ ಕೃತಾಂಜಲಿಃ ಇದಂ ಚೋವಾಚ ಧರ್ಮಜ್ಞಂ ಕರ್ಮಣಾ ತೇನ ಹರ್ಷಿತಃ।

ರಾಮಂ ಸರ್ವಾಸ್ರದಿದುಷಾಂ ಶ್ರೇಷ್ಠಂ ಶೂರಮವಸ್ಥಿತಮ್‌ ಸೇಂದ್ರಾನಪಿ ಸುರಾನ್‌ ಸರ್ವಾಂಸ್ಕೃಂ ಬಾಣ್ಣೆಃ ಪುರುಷರ್ಷಭ ಸಮರ್ಥಃ ಸಮರೇ ಹಂತುಂ ಕಿಂ ಪುನರ್ವಾಲಿನಂ ಪ್ರಭೋ ಯೇನ ಸಪ್ತಮಹಾಸಾಲಾ ಗಿರಿರ್ಭೂಮಿಶ್ಚ ದಾರಿತಾಃ

ಬಾಣೇನ್ಳೈ ಕೇನ ಕಾಕುತ್ತ್ಯಸ್ಥಾತಾತೇಕೋ ರಣಾಗ್ರತಃ ||

ಅದ್ಯ ಮೇ ವಿಗತಃ ಶೋಕ: ಪ್ರೀತಿರದ್ಯ ಪರಾ ಮಮ। ಸುಹೃದಂ ತ್ವಾಂ ಸಮಾಸಾದ್ಯ ಮಹೇಂದ್ರವರುಣೋಪಮಮ್‌ ೧೦

ತಮದ್ಯೈವ ಪ್ರಿಯಾರ್ಥಂ ಮೇ ವೈರಿಣಂ ಭ್ರಾತ್ಸರೂಪಿಣಮ್‌ ವಾಲಿನಂ ಜಹಿ ಕಾಕುತ್ನ ಮಯಾ ಬದ್ದೋ5ಯಮಂಜಲಿಃ ೧೧

ಕಂಡು ಸುಗ್ರೀವನು ಅಚ್ಚರಿಗೊಂಡನು. ಅವನು ಶ್ರೀರಾಮನಿಗೆ ತಲೆಬಾಗಿ ನೆಲದ ಮೇಲೆ ಅಡ್ಡಬಿದ್ದನು. ಕೊರಳಿನ ಹಾರಗಳು ತೂಗಾಡಿದವು. ಆನಂದದಿಂದ ಹಿಗ್ಗುತ್ತ ಸರ್ವಾಸ್ತವಿಶಾರದನೂ ಲೋಕೈಕ ವೀರನೂ ಆದ ರಾಘವನಿಗೆ ಕ್ಳ ಮುಗಿದನು (೫-೭). ಸುಗ್ರೀವನು ಕೈಜೋಡಿಸಿ ""ಪುರುಷೋತ್ತಮ - ನನ್ನ ಪ್ರಭುವೆ, ಸಂಗ್ರಾಮಕ್ಕೆ ಬಂದರೆ ಇಂದ್ರಾದಿದೇವತೆಗಳನ್ನೂಸಹ ಬಾಣಗಳಿಂದ ನೀನು ದಧ್ವಂಸಪಡಿಸಬಲ್ಲೆ ಇನ್ನುವಾಲಿಯ ಗತಿಯನ್ನೇನು ಹೇಳಲಿ! ಏಕಕಾಲದಲ್ಲಿ ಒಂದೇ ಬಾಣದಿಂದ ಏಳು ಮಹಾಸಾಲವೃಕ್ಷಗಳನ್ನು ಭೇದಿಸಿ ಬೆಟ್ಟವನ್ನು ಕೂರೆದು ಭೂಮಿಯನ್ನು ಸೀಳಿಬಿಟ್ಟೆಯಲ್ಲ! ನಿನ್ನೆದುರಿಗೆ ರಣಭೂಮಿಯಲ್ಲಿ ನಿಲ್ಲುವ ಗಂಡಸು ಯಾರು ? (೮-೯). ದೇವೇಂದ್ರನಿಗೂ ವರುಣನಿಗೂ ಎಣೆಯಾದ ನಿನ್ನಂಥ ಮಿತ್ರನು ದೊರಕಿದ ಮೇಲೆ, ಇಂದಿಗೆ ನನ್ನ ಶೋಕವು ಮುಗಿಯಿತು | ಸಂತೋಷ ಉಕ್ಕಿತು. ಕಾಕುತ್ವ ನನಗೆ ಅಣ್ಣನೆನಿಸಿಕೊಂಡ ವೈರಿಯನ್ನು ದಿನವೇ ಸಂಹರಿಸು. ಅದರಿಂದ ನನಗೆ ತೃಪಿಯಾಗುವುದು. ಇದೋ ನಿನಗೆ ಕೈಮುಗಿಯುತ್ತೇನೆ'' ಎಂದು ಹೇಳಿದನು (೧೦-೧೧).

ಸರ್ಗಃ ೧೨] ಸುಗ್ರೀವಪ್ರತ್ಯ ಯದಾನಮ್‌ ೯೯

ತತೋ ರಾಮಃ ಪರಿಷ್ಠಜ್ಯ ಸುಗ್ರೀವಂ ಪ್ರಿಯದರ್ಶನಮ್‌

ಪ್ರತ್ಯುವಾಚ ಮಹಾಪ್ರಾಜ್ಞೋ ಲಕ್ಷ್ಮಣಾನುಮಂತ ವಚಃ॥ ೧೨ ಅಸ್ಥಾದ್ರಚ್ಛೇಮ ಕಿಷ್ಕಿಂಧಾಂ ಕ್ಷಿಪ್ರಂ ಗಚ್ಛ ತ್ಹಮಗ್ರತಃ ಗತ್ವಾಚಾಹ್ವಯ ಸುಗ್ರೀವ ವಾಲಿನಂ ಭ್ರಾತೃಗಂಧಿನಮ್‌ ೧೩ ಸರ್ವೇ ತೇ ತ್ತಧಿತಂ ಗತ್ವಾಕಿಷ್ಠಿಂಧಾಂ ವಾಲಿನಃ ಪುರೀಮ್‌

. ವಕ್ಷೈರಾತ್ಮಾನಮಾವೃತ್ತ ವ್ಯತಿಷ್ಠನ್‌ ಗಹನೇ ವನೇ॥ ೧೪ ಸುಗ್ರೀವೋ ವ್ಯನದದ್ದೋರಂ ವಾಲಿನೋ ಹ್ಹಾನಕಾರಣಾತ್‌। ಗಾಢಂ ಪರಿಹಿತೋ ವೇಗಾನ್ನಾದೈರ್ಭಿಂದನ್ನಿವಾಂಬರಮ್‌ Il ೧೫ ತಂ ಶ್ರುತ್ವಾನಿನದಂ ಭ್ರಾತುಃ ಕ್ರುದ್ಧೋ ವಾಲೀ ಮಹಾಬಲಃ | ನಿಷಪಾತ ಸುಸಂರಬ್ಲೋ ಭಾಸ್ಕರೋತ ಸತಟಾದಿವ || ೧೬ ತತಃ ಸುತುಮುಲಂ ಯುದ್ಧಂ ವಾಲಿಸುಗ್ರೀವಯೋರಭೂತ್‌

ಗಗನೇ ಗ್ರಹಯೋರ್ಫೋರಂ ಬುಧಾಂಗಾರಕಯೋರಿವ॥ ೧೭

ಆಗ ಶ್ರೀರಾಮನು ಪ್ರಿಯನಾದ ಸುಗ್ರೀವನನ್ನಪ್ಪಿಕೊಂಡು, (ಲಕ್ಷ್ಮಣನ ಇಂಗಿತ ವನ್ನರಿತು) ಅವನಿಗೆ ಸಮೃತವಾಗುವಂತೆ "ಸುಗ್ರೀವ, ಹೀಗೆಯೇ ನೇರವಾಗಿ ಕಿಷ್ಟಿಂಧೆಗೆ ಹೋಗೋಣ. ನೀನು ಮುಂದೆ ಹೊರಡು. ಕಿಷ್ಠಿಂಧೆಗೆ ಹೋಗಿ ಸೋದರನೆನಿಸಿಕೊಂಡಿರುವ ವಾಲಿಯನ್ನು ಯುದ್ಧಕ್ಕೆ ಕರೆ'' ಎಂದನು (೧೨-೧೩). ಅನಂತರ ಅವರೆಲ್ಲರೂ ವಾಲಿಯ ರಾಜಧಾನಿಯಾದ ಕಿಷ್ಠಿಂಧೆಯ ಬಳಿಗೆ ಹೋಗಿ, ಸಮೀಪದಲ್ಲಿದ್ದ ದಟ್ಟವಾದ ಅರಣ್ಯದಲ್ಲಿಮರಗಳ ಮರೆಯಲ್ಲಿ ನಿಂತರು. ಸುಗ್ರೀವನು ನಡುವನ್ನು ವಸ್ತದಿಂದ ಕಟ್ಟಿ ವಾಲಿಯನ್ನು ಕರೆಯುವುದಕ್ಕಾಗಿ ಭೀಕರಸ್ವರದಿಂದ ಗರ್ಜಿಸಿದನು. ಗಗನವು ಸಿಡಿಯುವಂತೆ ಅಬ್ಬರಿಸಿದನು (೧೪-೧೫). ತಮ್ಮನ ಅಬ್ಬರವು ವಾಲಿಗೆ ಕೇಳಿಸಿತು. ಅವನು ಸಿಟ್ಟಿನಿಂದ ಸಿಡಿದೆದ್ದು, ಅಸ್ತಾಚಲವನ್ನು ತ್ಯಜಿಸಿ ಸೂರ್ಯನು ಪುನಃ ಉದಯಿಸಿ ಬರುವಂತೆ, ಕಿಷ್ಟಿಂಧೆಯಿಂದ ಹೊರಬಂದನು. ವಾಲಿ ಸುಗ್ರೀವರಿಗೆ ಹಣಾಹಣಿಯಾದ ಹೋರಾಟಾವಾರಂಭಿಸಿತು. ಗಗನತಳದಲ್ಲಿ ಬುಧ, ಅಂಗಾರಕ ಎಂಬ ಗ್ರಹಗಳ ನಡುವೆ ನಡೆವಂತೆ, ಹೊಡೆದಾಟವು ಕಡುಭಯಂಕರವಾಯಿತು (೧೬-೧೭).

೧೦೦ ಕಿಷ್ಕಿಂಧಾಕಾಂಡಃ [ಸರ್ಗಃ ೧೨

ತಲ್ಪಿರಶನಿಕಲ್ಲೆ ಶ್ವ ವಜ್ರಕಲೆ ೈಶ್ಲಮುಷಿಬಿಃ।

ಜಪುತುಃ ಸಮರೇsನ್ಕೋನ್ಯಂ ಭ್ರಾತರೌ ಕ್ರೋಧಮೂರ|್ಥಿತ್‌॥ ೧೮ ತತೋ ರಾಮೋ ಧನುಷ್ಟ್ಠಾಣಿಸಾವುಭ್‌ೌ ಸಮುದೀಕ್ಷ s ತು। ಅನ್ಯೋನ್ಯಸದ್ಭಶ್‌ೌ ವೀರಾವುಭ್‌ ದೇವಾವಿವಾಶ್ಚ್ಟಿನೌ || ೧೯

ಯನ್ನಾವಗಚ್ಛನ್‌ ಸುಗ್ರೀವಂ ವಾಲಿನಂ ವಾಪಿ ರಾಘವಃ।

ತತೋ ಕೃತವಾನ್‌ ಬುದ್ದಿಂ ಮೋಕುಮಂತಕರಂ ಶರಮ್‌ ೨೦ ಏತಸ್ಥಿನ್ನಂತರೇ ಭಗ್ಗಃ ಸುಗ್ರೀವಸೇನ ವಾಲಿನಾ।

ಅಪಶ್ಯನ್‌ ರಾಘವಂ ನಾಥಮೃಶ್ವ್ರಮೂಕಂ ಪ್ರದುದ್ರುವೇ॥ ೨೧ ಕ್ಲಾಂತೋ ರುಧಿಸಿಕಾಂಗಃ ಪ್ರಹಾರೈರ್ಜರ್ಜರೀಕ್ನತಃ।

ವಾಲಿನಾಭಿದ್ರುತಃ ಕ್ರೋಧಾತ್‌ ಪ್ರವಿವೇಶ ಮಹಾವನಮ್‌ ।॥1 ೨೨ ತಂ ಪ್ರವಿಷ್ಠಂ ವನಂ ದೃಷ್ಟ್ವಾವಾಲೀ ಶಾಪಭಯಾರ್ದಿತಃ।

ಮುಕ್ಟೋ ಹ್ಯಸಿ ತ್ವಮಿತ್ಯುಕ್ತ್ವಾಸಂನಿವೃತ್ತೋ ಮಹಾದ್ಯುತಿಃ ೨೩

ಕ್ರೋಧೋದ್ದೀಪಿತರಾದ ಸೋದರರು ಸಿಡಿಲೆರಗುವಂತೆ ಕರತಳಗಳಿಂದ ಅಪ್ಪಳಿಸುತ್ತ ವಜ್ರಮುಷ್ಟಿಗಳಿಂದ ಗುದ್ದುತ್ತ ಒಬ್ಬರನ್ನೊಬ್ಬರು ಜಡಿದರು (೧೮). ಸಮಯದಲ್ಲಿಕೋದಂಡಪಾಣಿಯಾದ ರಾಘವನು ಅವರಿಬ್ಬರನ್ನೂ ಗಮನಿಸಿ ನೋಡಿದನು. ಅಶ್ವಿನೀ ದೇವತೆಗಳಂತೆ ಅಚ್ಚಳಿಯದೆ ಒಬ್ಬರನ್ನೊಬ್ಬರು ಹೋಲುತ್ತಿದ್ದ ವೀರರಲ್ಲಿ 'ಸುಗ್ರೀವನಾರು ? ವಾಲಿಯಾರು ?' ಎಂದು ರಾಘವನು ಕಂಡುಹಿಡಿಯಲಾರದೆ ಹೋದನು. ಆದ್ದರಿಂದ ಪ್ರಾಣಾಂತಕವಾದ ಬಾಣವನ್ನು ಪ್ರಯೋಗಿಸಲು ಅವನು ಮನಸ್ಸುಮಾಡಲಿಲ್ಲ(೧೯-೨೦). ಅಷ್ಟರಲ್ಲಿ ಸುಗ್ರೀವನಿಗೆ ವಾಲಿಯಿಂದ ಪೆಟ್ಟುತಿಂದು ಸೋಲುಪ ಪರಿಸ್ಥಿತಿಯುಂಟಾಯಿತು. ಶ್ರೀರಾಮನು ನಾಥನಾಗಿ ತನ್ನ ರಕ್ಷಣೆಗೆ ಬರದಿರುವುದನ್ನು ಕಂಡು, ಸುಗ್ರೀವನು ಬಷ್ಯಮೂಕಗಿರಿಗೆ ಓಡಿಹೋದನು | (೨೧). ಅವನು ಬಳಲಿಹೋಗಿದ್ದನು. ಮೈಯೆಲ್ಲವೂ ರಕ್ತದಿಂದ ನೆನೆದಿತ್ತು ವಾಲಿಯ ಹೊಡೆತಗಳಿಂದ ಅಂಗಾಂಗಗಳು ಜರ್ಜರಿತವಾಗಿದ್ದವು. ವಾಲಿಯು ಸಿಟ್ಟಿನಿಂದ ಬೆನ್ನಟ್ಟಿಹೋದನು. ಸುಗ್ರೀವನು ಹೇಗೋ ಖಯಷ್ಯಮೂಕವನವನ್ನು ಸೇರಿಕೊಂಡನು (೨೨). ಅವನು

ಸರ್ಗಃ ೧೨] ಸುಗ್ರೀವಪ್ರತ್ಯಯದಾನಮ್‌ ೧೦೧

ರಾಘವೋತಪಿ ಸಹ ಭ್ರಾತ್ರಾ ಸಹ ಚೈವ ಹನೂಮತಾ | ತದೇವ ವನಮಾಗಚ್ಛತ್‌ ಸುಗ್ರೀವೋ ಯತ್ರ ವಾನರಃ॥ ೨೪

ತಂ ಸಮೀಕ್ಷಾ ಗತಂ ರಾಮಂ ಸುಗ್ರೀವಃ ಸಹಲಕ್ಷ್ಮಣಮ್‌ ಹ್ರೀಮಾನ್‌ ದೀನಮುವಾಚೇದಂ ವಸುಧಾಮವಲೋಕಯನ್‌ ೨೫

ಆಹ್ಹಯಸ್ವೇತಿ ಮಾಮುಕ್ತ್ವ್ವಾದರ್ಶಯಿತ್ವಾ ವಿಕ್ರಮಮ್‌

| ವೈರಿಣಾ ಘಾತಯಿತ್ವಾಚ ಕಿಮಿದಾನೀಂ ತಯಾ ಕೃತಮ್‌ || ೨೬ ತಾಮೇವ ವೇಲಾಂ ವಕವ್ಯಂ ತಯಾ ರಾಘವ ತತ್ತ್ವತಃ ವಾಲಿನಂ ನಿಹನ್ನೀತಿ ತತೋ ನಾಹಮಿತೋ ವ್ರಜೇ ೨೬ ತಸ್ಯ ಚೈವಂ ಬ್ರವಾಣಸ್ಯ ಸುಗ್ರೀವಸ್ಯ ಮಹಾತ್ಮನಃ ಕರುಣಂ ದೀನಯಾ ವಾಚಾ ರಾಘವಃ ಪುನರಬ್ರವೀತ್‌ ೨೮

ಸುಗ್ರೀವ ಶ್ರೂಯತಾಂ ತಾತ ಕ್ರೋಧಶ್ಚವ್ಯಪನೀಯತಾಮ್‌ ಕಾರಣಂ ಯೇನ ಬಾಣೋರ5 ಯಂ ಮಯಾ ವಿಸರ್ಜಿತಃ॥ ೨೯

ವನದೊಳಗೆ ಹೋದೊಡನೆ ವಾಲಿಯು ಮತಂಗಮುನಿಗಳ ಶಾಪಕ್ಕೆ ಅಳುಕಿ "“ಎಲ್ಫೆ ಸುಗ್ರೀವ, ತಪ್ಪಿಸಿಕೊಂಡು ಬದುಕಿದೆ, ಇರಲಿ!'' ಎಂದು ಕೂಗಿಹೇಳಿ ಕಿಷ್ಠಿಂಧೆಗೆ ಹಿಂದಿರುಗಿದನು. ಆಮೇಲೆ ಶ್ರೀರಾಮನು ಲಕ್ಷ್ಮಣ ಹನುಮಂತರೊಂದಿಗೆ ಸುಗ್ರೀವನಿದ್ದವನಕ್ಕೆ ಬಂದನು (೨೩-೨೪). ಲಕ್ಷ್ಮಣಸಮೇತನಾಗಿ ಶ್ರೀರಾಮನು ಬಂದುದನ್ನು ನೋಡಿ, ಸುಗ್ರೀವನು ಲಜ್ಜೆಯಿಂದ ನೆಲವನ್ನು ನೋಡುತ್ತ ದೈನ್ಯದಿಂದ ""ರಾಘವ, ನಿನ್ನಶೌರ್ಯವನ್ನು ತೋರಿಸಿ ವಾಲಿಯನ್ನುಕರೆಯೆಂದು ನನಗೆ ಹೇಳಿದೆ. ವೈರಿಯಿಂದ ನನ್ನನ್ನು ಹೊಡೆಸಿದೆ. ಈಗ ನೀನು ಮಾಡಿದುದೇನು?

(೨೫-೨೬). "ವಾಲಿಯನ್ನು ಕೊಲ್ಲುವುದಿಲ್ಲ ಎಂದು ಆಗಲೇ ನೀನು ಸತ್ಯವನ್ನು ನುಡಿಯಬಹುದಾಗಿತ್ತು ಸಂದರ್ಭದಲ್ಲಿ ನಾನು ಇಲ್ಲಿಂದ ಹೊರಡುತ್ತಲೇ ಇರಲಿಲ್ಲ' ಎಂದನು (೨೭). ಹಾಗೆ ಸುಗ್ರೀವನು ಮರುಕಹುಟ್ಟುವಂತೆ ದೀನ

ವಾಣಿಯಿಂದ ನುಡಿಯುತಿರಲು ಶ್ರೀರಾಮನು ಹೀಗೆಂದನು: ""ಅಪ್ಪಾ-ಸುಗ್ರೀವ,

ನಾನು ಹೇಳುವುದನ್ನು ಕೇಳು ; ಸಿಟ್ಟಾಗಬೇಡ. ಬಾಣವನ್ನು ನಾನು ಪ್ರಯೋಗಿಸದಿರುವುದಕ್ಕೆ ಕಾರಣವೇನೆಂಬುದನ್ನು ಕೇಳು (೨೮-೨೯) :

ವತ

೧೦೨ ಕಿಷ್ಕಿಂಧಾಕಾಂಡಃ [ಸರ್ಗಃ ೧೨

ಅಲಂಕಾರೇಣ ವೇಷೇಣ ಪ್ರಮಾಣೇನ ಗತೇನ ಚ।

ತ್ರಂ ಸುಗ್ರೀವ ವಾಲೀ ಸದ್ದಶ್‌ೌ ಸ್ವಃ ಪರಸ್ಪರಮ್‌ ೩೦ ಸಧೇಣ ವರ್ಚಸಾ ಚೈವ ಪ್ರೇಕ್ಷಿತೇನ ವಾನರ ವಿಕ್ರಮೇಣ ವಾಕ್ಕೆಶ್ಚವ್ಯಕ್ತಿಂ ವಾಂ ನೋಪಲಕ್ಷಯೇ॥ ೩೧

ತತೋಂಹಂ ರೂಪಸಾದ್ಧಶ್ಯಾನ್ನೋಹಿತೋ ವಾನರೋತಮ ನೋತ್ಸೃಜಾಮಿ ಮಹಾವೇಗಂ ಶರಂ ಶತ್ರುನಿಬರ್ಹಣಮ್‌ ೩೨

ಜೀವಿತಾಂತಕರಂ ಘೋರಂ ಸಾದೃಶ್ಯಾತ್ತು ವಿಶಂಕಿತಃ ಮೂಲಘಾತೋನನಾ ಸ್ಯಾದ್ದಿ ದ್ಹಯೋರಪಿ ಕೃತೋ ಮಯಾ ೩೩

ತ್ವಯಿ ವೀರೇ ಎಪನ್ನೇ ಹಿ ಅಜ್ಞಾನಾಲ್ಲಾಘವಾನ್ನಯಾ )

ಮೌಢ್ಯಂ ಮಮ ಬಾಲ್ಕಂ ಚಿ ಖ್ಯಾಪಿತಂ ಸ್ಯಾದ್ಧರೀಶ್ಚರ Il ೩೪ ದತಾಭಯವಥೋ ನಾಮ ಪಾತಕಂ ಮಹದುಚ್ಛತೇ। ಅಹಂಚ ಲಕ್ಷ ಶೈವ ಸೀತಾ ವರರ್ಣಿನೀ ೩೫

ನೀನೂ ವಾಲಿಯೂ ಒಂದೇ ರೀತಿ ಕಾಣುತ್ತೀರಿ. ಅಲಂಕಾರ, ಆಕೃತಿ, ನಿಲುವು, ನಡಿಗೆ-ಇವುಗಳಲ್ಲಿನೀವಿಬ್ಬರೂ ಒಂದೇ ಬಗೆಯಲ್ಲಿದ್ದೀರಿ. ಕಂಠದ್ವನಿ ಮೈಬಣ್ಣ ನೋಟ, ಹೆಜ್ಜೆಯಿಡುವ ಠೀವಿ - ಇವುಗಳೆಲ್ಲವೂ ಒಂದೇ ವಿಧ. ಸುಗ್ರೀವ, ನೀವಾಡುವ ಮಾತುಗಳಿಂದಲೂ ಸಹ ನಿಮ್ಮಿಬ್ಬರಲ್ಲಿ ವ್ಯತ್ಯಾಸವು ನನಗೆ ಕಾಣಲಿಲ್ಲ (೩೦-೩೧). ವಾನರೇಂದ್ರ, ನಿಮ್ಮೀರ್ವರ ರೂಪ ಸಾದೃಶ್ಯದಿಂದ ನನಗೆ ದಿಗ್‌ಭ್ರಮೆಯಾಯಿತು. ಆದ್ದರಿಂದ ಶತ್ರುಧ್ವಂಸಕರವಾದ ಘೋರಾಸ್ತ್ರವನ್ನು ನಾನು ಪ್ರಯೋಗಿಸಲಿಲ್ಲ ಪರಸ್ಪರವಾದ ನಿಮ್ಮ ಹೋಲಿಕೆಯಿಂದ ಏನಾದರೂ ವಿಪರೀತವಾದೀತೆಂದು ನನಗೆ ಶಂಕೆಯಾಯಿತು. ಆದುದರಿಂದ ಪ್ರಾಣಾಂತೆಕವಾದ ಬಾಣವನ್ನು ಬಿಡಲಿಲ್ಲ ನಮ್ಮೀರ್ವರ ಹಿತದ ಬುಡಕ್ಕೇ ನಾನು ಸಂಚಕಾರವನ್ನು ತರಬಾರದಲ್ಲವೆ ? (೩೨-೩೩). ವಾನರೇಶ್ವರ, ವೀರನಾದ ನೀನು ನನ್ನ ಅಜ್ಞಾನದಿಂದಲೋ ಬುದ್ಧಿಲಾಘವ ದಿಂದಲೋ ವಿಪತ್ತಿಗೀಡಾದರೆ, ನನ್ನ ದಡ್ಡತನವೂ ಅವಿವೇಕವೂ ಲೋಕ ವಿಖ್ಯಾತವಾದಾವು (೩೪). ಯಾರಿಗೆ ಅಭಯವನ್ನಿತ್ತಿರುವೆವೋ ಅವನನ್ನೇ

ಸರ್ಗಃ ೧೨] ಸುಗ್ರೀವಪ್ರತ್ಯ ಯದಾನಮ್‌ ೧೦೩

ತ್ವದಧೀನಾ ವಯಂ ಸರ್ವೇ ವನೇಪಸ್ಥಿನ್‌ ಶರಣಂ ಭವಾನ್‌

ತಸ್ಥಾದ್ಯುಧ್ಯಸ್ತಭೂಯಸ್ತಂ ಮಾ ಮಾ ಶಂಕೀಶ್ಚವಾನರ ೩೬ ಅಸ್ಥಿನ್‌ ಮುಹೂರ್ತೇ ಸುಗ್ರೀವ ಪಶ್ಯ ವಾಲಿನಮಾಹವೇ ನಿರಸ್ತಮಿಷುಣೈಕೇನ ವೇಷ್ಠಮಾನಂ ಮಹೀತಲೇ॥ ೩೭

ಅಭಿಜ್ಞಾನಂ ಕುರುಷ್ವತ್ತಮಾತ್ಸನೋವಾನರೇಶಥ | . ಯೇನ ತ್ವಾಮಭಿಜಾನೀಯಾಂ ದ್ವಂದ್ಹಯುದ್ಧಮುಪಾಗತಮ್‌ 1 ೩೮

ಗಜಪುಷ್ಟೀಮಾಮಾಂ ಪುಲ್ಲಾಮುತ್ನಾಟ್ಯ ಶುಭಲಕ್ಷಣಾಮ್‌

ಕುರು ಲಕ್ಷ್ಮಣ ಕಂಠೇ$ಸ್ಯ ಸುಗ್ರೀವಸ್ಯ ಮಹಾತ್ಮನಃ ೩೯ ತತೋ ಗಿರಿತಟೇ ಜಾತಾಮುತ್ತಾಟ್ಯ ಕುಸುಮಾಕುಲಾಮ್‌ |

ಲಕ್ಷ ಲೋ ಗಜಪುಷ್ಟೀಂ ತಾಂ ತಸ್ಯ ಕಂಠೇ ವ್ಯಸರ್ಜಯತ್‌ ೪೦ ತಯಾ ಶುಶುಭೇ ಶ್ರೀಮಾನ್‌ ಲತಯಾ ಕಂಠಸಕಯಾ | ಮಾಲಯೇವ ಬಲಾಕಾನಾಂ ಸಸಂಧ್ಯ ಇವ ತೋಯದಃ॥ ೪೧

ವಧಿಸುವುದು ಮಹಾಪಾಪಕಾರ್ಯ. ನಾನು, ಲಕ್ಷ್ಮಣ, ಸೀತೆ-ಈ ಮೂವರಿಗೂ ನೀನು ದಿಕ್ಕಾಗಿರುವೆ. ಅಡವಿಯಲ್ಲಿನೀನು ನಮಗೆ ಆಶ್ರಯದಾತನಾಗಿರುವೆ. ಆದ್ದರಿಂದ, ಇನ್ನೊಮ್ಮೆ ಯುದ್ಧಮಾಡು; ಸಂದೇಹವೆಂದಿಗೂ ಬೇಡ (೩೫-೩೬). ಮುಹೂರ್ತದಲ್ಲಿಯೇ ರಣಭೂಮಿಯಲ್ಲಿವಾಲಿಯು ನನ್ನ ಒಂದೇ ಬಾಣ ದಿಂದ ಸಂಭಿನ್ನಗಾತ್ರನಾಗಿ ನೆಲದಮೇಲೆ ಉರುಳಾಡುವುದನ್ನು ನೋಡು | ಆದರೆ ದ್ವಂದ್ವಯುದ್ಧದಲ್ಲಿರುವಾಗ' ನಿನ್ನನ್ನು ನಾನು ಗುರುತಿಸುವಂತೆ ಒಂದು

ಚಿಹ್ನೆಯನ್ನು ಮಾಡಿಕೊಳ್ಳಬೇಕು (೩೭-೩೮). ಲಕ್ಷ್ಮಣ, ಮಂಗಳಕರವಾದ ನಾಗಪುಷ್ಟೀಲತೆಯು ಚೆನ್ನಾಗಿ ಅರಳಿದೆ. ಮಹಾತ್ಮನಾದ ಸುಗ್ರೀವನ ಕೊರಳಿಗೆ ಇದನ್ನು ಹಾಕು'' ಎಂದು ಹೇಳಿದನು. ಆಗ ಲಕ್ಷ್ಮಣನು ಗಿರಿತಟದಲ್ಲಿ ಅರಳಿ ನಿಂತಿದ್ದ ನಾಗಪುಷ್ಟೀಲತೆಯನ್ನು ತಂದು ಸುಗ್ರೀವನ ಕೊರಳಿಗೆ ಹಾಕಿದನು (೩೯-೪೦). ತೇಜಸ್ವಿಯಾಗಿ (ಹೇಮ ಪಿಂಗಳವರ್ಣನಾಗಿದ್ದ) ಸುಗ್ರೀವನು ಕಂಠದಲ್ಲಿದ್ದ ನಾಗಪುಷ್ಟೀಮಾಲೆಯಿಂದ ವಿರಾಜಿಸಿದನು ; ಸಾಯಂಕಾಲದಲ್ಲಿ ಬಲಾಕೆಗಳೊಡಗೂಡಿದ ಹೊಂಬಣ್ಣದ ಮೇಘದಂತೆ ಕಾಣಿಸಿದನು (೪೧).

೧೦೪ ಕಿಷ್ಟಿಂಧಾಕಾಂಡಃ [ಸರ್ಗಃ ೧೩

ವಿಭ್ರಾಜಮಾನೋ ವಪುಷಾ ರಾಮವಾಕೃ್ಕಸಮಾಹಿತಃ ಜಗಾಮ ಸಹ ರಾಮೇಣ ಕಿಷ್ಠಿಂಧಾಂ ವಾಲಿಪಾಲಿತಾಮ್‌ ೪೨ ಇತಿ ಶ್ರೀಮದ್ರಾಮಾಯಣೇ ಕಿಷ್ಕಿಂಧಾಕಾಂಡೇ ದ್ವಾದಶಃಸರ್ಗಃ

ತ್ರಯೋದಶ ಸರ್ಗಃ

ಸಪ್ತಜನಾಶ್ರಮಪ್ರಣಾಮಃ ಖಯಷ್ಯಮೂಕಾತ್‌ ಧರ್ಮಾತ್ಮಾ ಕಿಷ್ಠಿಂಧಾಂ ಲಕ್ಷ್ಮಣಾಗ್ರಜಃ | ಜಗಾಮ ಸಹಸುಗ್ರೀವೋ ವಾಲಿವಿಕ್ರಮಪಾಲಿತಾಮ್‌ ಸಮುದ್ಯಮ್ಯ ಮಹಚ್ಚಾಪಂ ರಾಮಃ ಕಾಂಚನಭೂಷಿತಮ್‌ ಶರಾಂಶ್ಚಾದಿತ್ಯಸಂಕಾಶಾನ್‌ ಗಹೀತ್ವಾರಣಸಾಧಕಾನ್‌ ||

ಶ್ರೀರಾಮನ ಮಾತಿನಿಂದ ಸುಗ್ರೀವನಿಗೆ ಸಮಾಧಾನವಾಯಿತು. ದೇಹದಲ್ಲಿ ಉತ್ಸಾಹ ಹೊಮ್ಮಿತು. ಅವನು ಶ್ರೀರಾಮನೊಡನೆ ವಾಲಿಪಾಲಿತವಾದ ಕಿಷ್ಟಿಂಧೆಗೆ ಹೊರಟನು (೪೨).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಹನ್ನೆರಡೆಯ ಸರ್ಗ

ಸರ್ಗ ೧೩

ಶ್ರೀರಾಮನು ಲಕ್ಷ್ಮಣಸುಗ್ರೀವಾದಿಗಳೊಡನೆ ಪುನಃ ಕಿಷ್ಠಿಂಧೆಗೆ ಹೋಗುವುದು. ದಾರಿಯಲ್ಲಿಸಪ್ಪಜನರೆಂಬ ಯಷಿಗಳ ಆಶ್ರಮವನ್ನುಕಂಡು ವಂದಿಸುವುದು. ಹೀಗೆ ಧರ್ಮಾತ್ಮನಾದ ಶ್ರೀರಾಮನು ಯಷ್ಯಮೂಕದಿಂದ ಸುಗ್ರೀವನೊಡನೆ ಹೊರಟು, ವಾಲಿವಿಕ್ರಮದಿಂದ ರಕ್ಷಿತವಾದ ಕಿಷ್ಕಿಂಧೆಯ ಕಡೆಗೆ ಹೋಗುತ್ತಿದ್ದನು. ಅವನು ಸುವರ್ಣ ಭೂಷಿತವಾದ ತನ್ನ ಮಹಾಧನಸನ್ನು ಎತ್ತಿಹಿಡಿದು, ಸೂರ್ಯ ನಂತೆ ಮಿರುಗುತ್ತಿದ್ದ ಯುದ್ದ ಸಾಧನಗಳಾದ ಶರಗಳನ್ನು ಹಿಡಿದಿದ್ದನು (೧-೨).

ಸರ್ಗಃ ೧೩] ಸಪ್ತ ಜನಾಶ್ರಮಪ್ರಣಾಮಃ ೧೦೫

ಅಗ್ರತಸ್ತುಯಯ್‌ ತಸ್ಕ ರಾಘವಸ್ಥ ಮಹಾತ್ಮನಃ

ಸುಗ್ರೀವಃ ಸಂಹತಗ್ರೀವೋ ಲಕ್ಷ್ಮಣಶ್ವ ಮಹಾಬಲಃ ಪೃಷತೋ ಹನುಮಾನ್‌ ವೀರೋ ನಲೋ ನೀಲಶ್ಚವಾನರಃ।

ತಾ ಶೈವ ಮಹಾತೇಜಾ ಹರಿಯೂಥಪಯೂಥಪಃ ತೇ ವೀಕ್ಷಮಾಣಾ ಕ್ಷಾಂಶ್ಚಪುಷ್ಪಭಾರಾವಲಂಬಿನಃ। ಪ್ರಸನ್ನಾಂಬುವಹಾಶೆ' ಸರೆತಃ ಸಾಗರಂಗಮಾಃ ಕಂದರಾಣಿ ಶೈಲಾಂಶ್ಚ ನಿರ್ದರಾಣಿ ಗುಹಾಸಥಾ

ಶಿಖರಾಣಿ ಮುಹ್ಯಾನಿ ದರೀಶ್ಚಪ್ರಿಯದರ್ಶನಾಃ

ವೈದೂರ್ಯವಿಮಲೈಸೋ ಯೈಃ ಪದ್ಮೈಶ್ಚಾಕೋಶಕುಡ್ಕಲೈಃ ಶೋಭಿತಾನ್‌ ಸಜಲಾನ್‌ ಮಾರ್ಗೇ ತಟಾಕಾಂಶ್ಚ ವ್ಯಲೋಕಯನ್‌ || ಕಾರಂಡೆಃ ಸಾರಸೈರ್ಹಂಸೈರ್ವಂಜುಲೈರ್ಜಲಕುಕ್ಕುಟ್ಟೆಃ |

ಚಕ್ರವಾ ೈಸಥಾ ಚಾನೈೆ ಶಕುತನೈರುಪನಾದಿತಾನ್‌ | ಲೆ ಮೃದುಶಪ್ಟಾಂಕುರಾಹಾರಾನ್ಗಿರ್ಭಯಾನ್‌ ವನಗೋಚರಾನ್‌ |

ಚರತಃ ಸರ್ವತೋತಪಶ್ಸನ್‌ ಸ್ಪಲೀಷು ಹರಿಣಾನ್‌ ಸ್ಥಿತಾನ್‌ |

ಶ್ರೀರಾಮನೆದುರಿಗೆ ಸುಗ್ರೀವನು ನಾಗಪುಷ್ಟೀಲತೆಯನ್ನು ಕೊರಳಿಗೆ ಬಿಗಿದು ಕಟ್ಟುಕೊಂಡು ಹೋಗುತ್ತಿದ್ದನು. ಅವನ ಬಳಿ ಬಲಾಢ್ಯನಾದ ಲಕ್ಷ್ಮಣನಿದ್ದನು. ಶ್ರೀರಾಮನ ಹಿಂದುಗಡೆ ವೀರರಾದ ಹನುಮಂತ, ನಳ, ನೀಲರೆಂಬ ವಾನರರೂ ವಾನರಸೇನಾಪತಿಯಾದ ತಾರನೂ ಬರುತ್ತಿದ್ದರು (೩-೪). ಅವರೆಲ್ಲರೂ ಮಾರ್ಗದಲ್ಲಿ ಹೂಗಳ ಹೊರೆಯಿಂದ ಬಳಕುತ್ತಿದ್ದ ಮರಗಳನ್ನೂ , ಸಮುದ್ರ ಗಾಮಿಗಳಾದ ತಿಳಿನೀರಿನ ಹೊಳೆಗಳನ್ನೂ ಕೃತ್ರಿಮ ಗುಹೆ, ಬೆಟ್ಟ ಬಿರುಕುಲು, ಗವಿ, ಗಿರಿಶ್ಚಂಗ, ಆಳವಾದ ಗುಡ್ಡದ ಸಂದು ಮುಂತಾದವನ್ನೂ ನೋಡುತ್ತ ಸಾಗಿದರು (೫-೬). ವೈಢೂರ್ಯದಂತೆ ಸ್ವಚ್ಛವಾದ ನೀರಿನಿಂದಲೂ ಅರೆ ಬಿರಿದ ತಾವರೆಗಳಿಂದಲೂ ರಮ್ಯವಾದ ಕೆರೆಗಳನ್ನು ದಾರಿಯಲ್ಲಿ ವೀಕ್ಷಿಸಿದರು. ಅವು ಕಾರಂಡವ, ಸಾರಸ, ಹಂಸ, ವಂಜುಲ, ನೀರುಕೋಳಿ, ಚಕ್ರವಾಕ ಮೊದಲಾದ ಪಕ್ಷಿಗಳ ಕೂಗಾಟದಿಂದ ಮನೋಹರವಾಗಿದ್ದವು (೭-೮). ವನ ಮಧ್ಯದಲ್ಲಿದ್ದ ಹುಲ್ಲುಗಾವಲಿನಲ್ಲಿ ಎಳಗರಿಕೆಯನ್ನು ಮೇಯುತ್ತ ಅಂಜಿಕೆಯಿಲ್ಲದೆ

ಮುಟಟ

೧೦೬ ಕಿಷ್ಕಿಂಧಾಕಾಂಡಃ [ಸರ್ಗಃ ೧೩

ತಟಾಕವೈರಿಣಶ್ಚಾಪಿ ಶುಕ್ಷದಂತವಿಭೂಷಿತಾನ್‌ | ಘೋರಾನೇಕಚರಾನ್‌ ವನ್ಯಾನ್‌ ದ್ವಿರದಾನ್‌ ಕೂಲಪಾತಿನಃ॥ ೧೦

ಮತಾನ್‌ ಗಿರಿತಟೋತ ಹಾನ್‌ ಜಂಗಮಾನಿವ ಪರ್ವತಾನ್‌ ವಾರಣಾನ್‌ ವಾರಿದಪ್ರಖಾ, ನ್‌ ಮಹೀರೇಣುಸಮುಕ್ಷಿತಾನ್‌ | ೧೧

ವನೇ ವನಚರಾಂಶ್ಚಾನ್ಯಾನ್‌ ಖೇಚರಾಂಶ್ಚ ವಿಹಂಗಮಾನ್‌!। ಪಶ್ಯಂತಸ್ತಧಿತಾ ಜಗ್ಗು: ಸುಗ್ರೀವವಶವರ್ತಿನಃ॥ ೧೨

ತೇಷಾಂತು ಗಚ್ಛತಾಂ ತತ್ರ ತ್ರಧಿತಂ ರಘುನಂದನಃ। ದ್ರುಮಷಂಡಂ ವನಂ ದೃಷ್ಟಾ, ರಾಮಃ ಸುಗ್ರೀವಮಬ್ರವೀತ್‌ ೧೩

ಏಷ ಮೇಘ ಆರತ ವಕ್ಷಷಂಡಃ ಪ್ರಕಾಶತೇ।

ಮೇಘಸಂಘಾತವಿಪುಲಃ ಪರ್ಯಂತಕದಲೀವೃತಃ Il ೧೪ ಕಿಮೇತತ್‌ ಜ್ಞಾತುಮಿಚ್ಛಾಮಿ ಸಖೇ ಕೌತೂಹಲಂ ಹಿಮೇ। ಕೌತೂಹಲಾಪನಯನಂ ಕರ್ತುಮಿಚ್ಛಾಮ್ಯಹಂ ತ್ವಯಾ || ೧೫

ಅಲೆಯುತ್ತಿದ್ದ ಹುಲ್ಲೆಗಳನ್ನುಕಂಡರು (೯). ಅಲ್ಲದೆ ಕೊಳಗಳ ಕೂಲಗಳನ್ನುರುಳಿಸಿ ಕೊಳದ ವೈರಿಗಳೆನಿಸಿದ ಘೋರವಾದ ಕಾಡಾನೆಗಳನ್ನು ಶ್ರೀರಾಮಾದಿಗಳು ಅವಲೋಕಿಸಿದರು. ಹೊಳೆವ ಬಿಳಿದಂತಗಳಿಂದ ಭೂಷಿತವಾದ ದಂತಿಗಳು ಒಂಟಿಯಾಗಿ ಸಂಚರಿಸುತ್ತಿದ್ದವು (೧೦). ಕರಿಯ ಮೋಡಗಳಂತಿದ್ದ ಮದ್ದಾನೆಗಳು ಗಿರಿತಟಗಳನ್ನುತಿವಿಯುತ್ತಧೂಳನ್ನುಎರಚಿಕೊಳ್ಳುತ್ತ ಅಲೆದಾಡುವ ಬೆಟ್ಟಗಳಂತೆ ತೋರುತ್ತಿದ್ದವು. ಅವರೆಲ್ಲರೂ ವನದಲ್ಲಿ ಎವಿಧ ವನಚರಗಳನ್ನೂ ಗಗನದಲ್ಲಿ ಬಗೆಬಗೆಯ ಹಕ್ಕಿಗಳನ್ನೂ ನೋಡುತ್ತ ಸುಗ್ರೀವನನ್ನನುಸರಿಸಿ ಬೇಗ ಬೇಗನೆ ಹೋದರು (೧೧-೧೨). ಅವರು ಹೀಗೆ ಹೋಗುತ್ತಿರುವಾಗ ಮರಗಳಿಂದ ಕಿಕ್ಕಿರಿದ ವನವೊಂದು ಕಾಣಿಸಿತು. ಅದನ್ನು ನೋಡಿ ರಘುನಂದನನು "ಸುಗ್ರೀವ, ಆಕಾಶದಲ್ಲಿರಾಜಿಸುವ ಮೇಘರಾಶಿಯಂತೆ ಮರಗಳ ಗುಂಪೊಂದು ಗೋಚರಿಸುವುದಷ್ಟೆ ಮೇಘರಾಶಿಯಂತೆ ವಿಪುಲವಾದ ವನವು ಬಾಳೆಯ ಮರಗಳ ಹೊರವಲಯದಿಂದ ಎರಾಜಿಸುತ್ತಿದೆ (೧೩-೧೪). ಇದೇನೆಂದು ತಿಳಿಯಲು ನನ್ನ ಮನವೆಳಸುತ್ತಿದೆ. ಮಿತ್ರ, ನನಗೆ ಕುತೂಹಲವಾಗಿದೆ. ನನ್ನ ಕುತೂಹಲವನ್ನು ಕೆಳಯುವೆಯಾ ?'' ಎಂದು ಕೇಳಿದನು (೧೫). ಮಹಾತ್ಮನಾದ

ಸರ್ಗಃ ೧೩] ಸಪ್ತಜನಾಶ್ರಮಪ್ರಣಾಮಃ ೧೦೭

ತಸ್ಯ ತದ್ವನಂ ಶ್ರುತ್ವಾರಾಘವಸ್ಯ ಮಹಾತ್ಮನಃ

ಗಚ್ಛನ್ನೇವಾಚಚಕ್ಷೇ5 ಸುಗ್ರೀವಸನ್ನಹದ್ದನಮ್‌ ೧೬ ಏತದ್ರಾಘವ ವಿಸೀರ್ಣಮಾಶ್ರಮಂ ಶ್ರಮನಾಶನಮ್‌ ಉದ್ಯಾನವನಸಂಪನ್ನಂ ಸ್ವಾದುಮೂಲಫಲೋದಕಮ್‌ Il ೧೭ ಅತ್ರ ಸಪಜನಾ ನಾಮ ಮುನಯಃ ಸಂಶಿತವ್ರತಾಃ ಸಪ್ಪೈವಾಸನ್ನಧ:ಶೀರ್ಷಾ ನಿಯತಂ ಜಲಶಾಯಿನಃ ೧೮ ಸಪ್ತರಾತ್ರಕೃತಾಹಾರಾ ವಾಯುನಾ ವನವಾಸಿನಃ

ದಿವಂ ವರ್ಷಶತೈರ್ಯಾತಾಃ ಸಪಭಿಃ ಸಕಲೇವರಾಃ ೧೯ ತೇಷಾಮೇವಂ ಪ್ರಭಾವೇಣ ದ್ರುಮಪ್ರಾ ಕಾರಸಂವೃತಮ್‌

ಆಶ್ರಮಂ ಸುದುರಾಧರ್ಷಮಪಿ ಸೇಂದ್ಳೈಃ ಸುರಾಸುರೈಃ ೨೦ ಪಕ್ಷಿಣೋ ವರ್ಜಯಂತ್ಯೇತತಥಾನ್ಯೇ ವನಚಾರಿಣಃ।

ವಿಶಂತಿ ಮೋಹದ್ಯೇsಪೃತ್ರ ನಿವರ್ತಂತೇ ತೇ ಪುನಃ ೨೧

ರಾಘವನ ವಚನವನ್ನಾಲಿಸಿ ಸುಗ್ರೀವನು ಮುಂದೆ ನಡೆಯುತ್ತಲೇ ನುಡಿದನು : “ರಾಘವ, ಇದೊಂದು ವಿಶಾಲವಾದ ಬುಷ್ಯಾಶ್ರಮ. ಹೂದೋಟಗಳಿಂದಲೂ ಸಿಹಿಯಾದ ಫಲಮೂಲಜಲಗಳಿಂದಲೂ ಯುಕವಾಗಿ ಶ್ರಮವನ್ನುನೀಗಿಸುತ್ತಿದೆ. ಇಲ್ಲಿ ಸಪ್ತಜನರೆಂಬ ಮುನಿಗಳಿದ್ದರು. ಅವರ ಸಂಖ್ಯೆಯೇ ಸಪ್ಯ ಅವರು ತೀಕ್ಷ್ಣವಾದ ವ್ರತವನ್ನು ಹಿಡಿದು ಸರ್ವದಾ ನೀರಿನಲ್ಲಿತಲೆಕೆಳಗಾಗಿ ತಪಸ್ಸು ಮಾಡುತ್ತಿದ್ದರು (೧೬-೧೮). ಏಳು ರಾತ್ರಿಗಳಿಗೊಂದುಸಲ ವಾಯು ಸೇವನೆಯೇ ಅವರಿಗೆ ಆಹಾರವಾಗಿತ್ತು ಹೀಗೆ ನೂರು ವರ್ಷಗಳವರೆಗೆ ತಪಸ್ಸನ್ನಾಚರಿಸಿ ಅವರು ಸಶರೀರವಾಗಿ ಸ್ವರ್ಗವನ್ನು ಪಡೆದರು (೧೯). ಮರಗಳೇ ಪ್ರಾಕಾರವಾಗಿರುವ ಆಶ್ರಮವನ್ನು ದೇವಾಸುರರು ಇಂದ್ರನೊಡಗೂಡಿ ಬಂದರೂ ಪ್ರವೇಶಿಸಲಾರರು |! ಖಹಷಿಗಳ ಪ್ರಭಾವ ಅಂತಹುದು. ಪಕ್ಷಿಗಳೂ ವನಜಂತುಗಳೂ ಆಶ್ರಮದೊಳಗೆ ಕಾಲಿಡುವುದಿಲ್ಲ ತಿಳಿಯದೆ ಕಾಲಿಟ್ಟರೆ ಪುನಃ ಅವು ಹಿಂದಿರುಗಿ ಬರುವುದಿಲ್ಲ! (೨೦-೨೧).

೧೦೮ ಕಿಷ್ಟಿಂಧಾಕಾಂಡಃ [ಸರ್ಗಃ ೧೩

ವಿಭೂಷಣರವಾಶ್ಚಾತ್ರ ಶ್ರೂಯಂತೇ ಸಕಲಾಕ್ಷರಾಃ

ತೂರ್ಯಗೀತಸ್ಪನಾಶ್ಲಾತ್ರ ಗಂಧೋ ದಿವೃಶ್ಚ ರಾಘವ ೨೨ ತ್ರೇತಾಗ್ಗಯೋತಪಿ ದೀಪ್ಯಂತೇ ಧೂಮೋ ಹ್ಯೇಷ ಪ್ರದ್ಧಶ್ಯತೇ ವೇಷ್ಠಯನ್ನಿವ ವಕ್ಷಾಗ್ರಾನ್‌ ಕಪೋತಾಂಗಾರುಣೋ ಫನಃ॥ ವಿ೩ ಏತೇ ವಕ್ಷಾಃ ಪ್ರಕಾಶಂತೇ ಧೂಮಸಂಸಕಮಸಕಾಃ ಮೇಘಜಾಲಪ್ರತಿಚ್ಛನ್ನಾ ವೈದೂರ್ಯಗಿರಯೋ ಯಧಾ॥ ೨೪ ಕುರು ಪ್ರಣಾಮಂ ಧರ್ಮಾತ್ಮಂಸ್ಟಾನ್‌ ಸಮುದ್ದಿಶ್ಯ ರಾಘವ

ಲಕ್ಷ್ಮಣೇನ ಸಹ ಭ್ರಾತ್ರಾ ಪ್ರಯತಃ ಸಂಯತಾಂಜಲಿಃ ೨೫ ಪ್ರಣಮಂತಿ ಹಿ ಯೇ ತೇಷಾಂ ಮುನೀನಾಂ ಭಾವಿತಾತ್ಮನಾಮ್‌

ತೇಷಾಮಶುಭಂ ಕಿಂಚಿಚ್ಛರೀರೇ ರಾಮ ದೃಶ್ಯತೇ Il ೨೬ ತತೋ ರಾಮಃ ಸಹ ಭ್ರಾತ್ರಾ ಲಕ್ಷ್ಮಣೇನ ಕೃತಾಂಜಲಿಃ |

ಸಮುದ್ದಿಶ್ಯ ಮಹಾತ್ಕಾನಸ್ಪಾನೃಷೀನಭ್ಯವಾದಯತ್‌ ೨೭

ಶ್ರೀರಾಮ, ಇಲ್ಲಿ ( ಅಪ್ಪರಃಸ್ತೀಯರ) ಒಡವೆಗಳ ರುಣರುಣಶಬ್ದವೂ ಅವ್ಯಕ್ತ ಮಧುರವಾದ ವಾದ್ಯಗೀತಧ್ವನಿಯೂಕೇಳಿಸುತ್ತವೆ! ದಿವ್ಯಗಂಧವು ಹರಡಿರುತ್ತದೆ (೨೨). ತ್ರೇತಾಗ್ನಿಗಳು ಉರಿಯುತ್ತಲೇ ಇವೆ. ಅದೋ ಹೊಗೆ ಕಾಣುವುದು, ನೋಡು | ಪಾರಿವಾಳದಂತೆ ಕಂದುಬಣ್ಣದ ಹೊಗೆಯು ದಟ್ಟವಾಗಿ, ಮರದ ತುದಿಗಳನ್ನು ಬಳಸುತ್ತಐಳುತಿದೆ. ಹೊಗೆದುಂಬಿದ ತುದಿಯುಳ್ಳ ಮರಗಳು ಮೇಘ ಜಾಲದಿಂದ ಮುಚ್ಚಿದ ವೈಢೂರ್ಯನಗಿರಿಗಳಂತೆ ಕಾಣುತ್ತವೆ (೨೩-೨೪). ಧರ್ಮಾತ್ಮ-ರಾಘವ, ಸಪ್ತಜನಮುನಿಗಳನ್ನು ಉದ್ದೇಶಿಸಿ ಭಕ್ತಿಯಿಂದ ಕೈಮುಗಿದು ನಮಸ್ಕಾರಮಾಡು. ನಿನ್ನ ತಮ್ಮನಾದ ಲಕ್ಷ್ಮಣನೂ ನಮಸ್ಕರಿಸಲಿ. ಶುದ್ಧಾತ್ಮರಾದ ಯಷಿಗಳಿಗೆ ಯಾರು ಪ್ರಣಾಮಗಳನ್ನರ್ಪಿಸುವರೋ ಅವರ ದೇಹದಲ್ಲಿ ಶ್ರೀರಾಮ, ಯಾವ ಅಶುಭವೂ ಉಳಿಯದು'' ಎಂದು ಹೇಳಿದನು (೨೫-೨೬). ಆಗ ಶ್ರೀರಾಮನು ತಮ್ಮನಾದ ಲಕ್ಷ್ಮಣನೊಡನೆ ಮಹಾತ್ಮರಾದ ಯಷಿಗಳಿಗೆ ಕೈಮುಗಿದು ಪ್ರಣಾಮಗಳನ್ನರ್ಪಿಸಿದನು. ಧರ್ಮಾತ್ಮನಾದ

ಸರ್ಗಃ ೧೩] ಸಪ್ತ ಜನಾಶ್ರಮಪ್ರಣಾಮಃ ೧೦೯

ಅಭಿವಾದ್ಯ ತು ಧರ್ಮಾತ್ಮಾ ರಾಮೋ ಭ್ರಾತಾ ಲಕ್ಷ್ಮಣಃ

ಸುಗ್ರಿವೋ ವಾನರಾಶ್ಚೈವ ಜಗ್ಗುಃ ಸಂಹೃಷ್ಟಮಾನಸಾಃ ೨೮ ತೇ ಗತಾದೂರಮಧ್ದಾನಂ ತಸ್ಥಾತ್‌ ಸಪಜನಾಶ್ರಮಾತ್‌

ದದ್ದಶುಸಾಂ ದುರಾಧರ್ಷಾಂ ಕಿಷ್ಠಿಂಧಾಂ ವಾಲಿಪಾಲಿತಾಮ್‌ ೨೯

ತತಸು ರಾಮಾನುಜರಾಮವಾನರಾಃ ಪ್ರಗೃಹ್ಯ ಶಸ್ಟಾಣ್ಯುದಿತಾರ್ಕತೇಜಸಃ। ಪುರೀಂ ಸುರೇಶಾತ್ಮ ಜವೀರ್ಯಪಾಲಿತಾಂ ವಧಾಯ ಶತ್ರೋಃ ಪುನರಾಗತಾಃ ಸಹ ೩೦ ಇತಿ ಶ್ರೀಮದ್ರಾಮಾಯಣೇ ಕಿಪ್ಟಿಂಧಾಕಾಂಡೇ ತ್ರಯೋದಶಃಸರ್ಗ:ಃ

( 6) ಸು ದೂ

ಶ್ರೀರಾಮ ಲಕ್ಷ್ಮಣ, ಸುಗ್ರೀವರೂ ಹನುಮಂತನೇ ಮೊದಲಾದ ವಾನರರೂ ಮುನಿಗಳಿಗೆ ವಂದನೆಗಳನ್ನರ್ಷಿಸಿ ಸಂತುಷ್ಠಹೃದಯರಾದರು (೨೭-೨೮). ಅನಂತರ ಅವರೆಲ್ಲರೂ ಸಪಜನಾಶ್ರಮದಿಂದ ಬಹುದೂರ ನಡೆದುಹೋಗಿ, ವಾಲಿ ಪಾಲಿತವಾಗಿ ದುರ್ಗಮವಾದ ಕಿಷ್ಕಿಂಧೆಯನ್ನು ಕಂಡರು (೨೯). ಉದಯಿಸಿ ಬಂದ ಸೂರ್ಯನಂತೆ ಮಹಾತೇಜಸ್ವಿಗಳಾದ ಶ್ರೀರಾಮ ಲಕ್ಷ್ಮಣರೂ ಸುಗ್ರೀವನೇ ಮೊದಲಾದ ವಾನರರೂ ಆಯುಧಗಳನ್ನು ಹಿಡಿದಿದ್ದರು. ಅವರು ಇಂದ್ರಪುತ್ರನಾದ ವಾಲಿಯ ವೀರ್ಯದಿಂದ ಸುರಕ್ಷಿತವಾಗಿದ್ದ ಕಿಷ್ಠಿಂಧೆಗೆ ಶತ್ರುವನ್ನು ವಧಿಸುವುದಕ್ಕಾಗಿ ಪುನಃ ಬಂದು ಸೇರಿದರು (೩೦). ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಪಿಂಧಾಕಾಂಡದಲ್ಲಿ ಹದಿಮೂರನೆಯ ಸರ್ಗ

ಚತುರ್ದಶಃ ಸರ್ಗಃ ಸುಗೀವಗರ್ಜನಮ್‌

ಸರ್ವೇತೇ ತ್ರಧಿತಂ ಗತ್ವಾಕಿಷ್ಠಿಂಧಾಂ ವಾಲಿಪಾಲಿತಾಮ್‌ ವಕ್ಷ ರಾತ್ಗಾನಮಾವುತ್ವ ವ್ಯ ತಿಷ್ಠನ್‌ ಗಹನೇ ವನೇ॥

ವಿಸಾರ್ಯ ಸರ್ವತೋ ದಂ ಕಾನನೇ ಕಾನಪ್ರಿಯಃ। ಸುಗ್ರೀವೋ ವಿಪುಲಗ್ರೀವಃ ಕ್ರೋಧಮಾಹಾರಯದ್ಭ ಪ್ರಮ್‌ Il

ತತಃ ನಿನದಂ ಘೋರಂ ಕತ್ತಾಯುದ್ದಾಯ ಚಾಹ್ಹಯತ್‌ |

ಪರಿವಾರ್ಛೈಃ ಪರಿವೃತೋ ನಾದೈರ್ಭಿಂದನ್ನಿವಾಂಬರಮ್‌ ||

ಗರ್ಜನ್ನಿವ ಮಹಾಮೇಘೋ ವಾಯುವೇಗಪುರಃಸರಃ

ಅಥ ಬಾಲಾರ್ಕಸದ್ದಶೋ ದೃಪಸಿಂಹಗತಿಸದಾ ||

ದೃಷ್ಟಾ ರಾಮಂ ಕ್ರಿಯಾದಕ್ಷಂ ಸುಗ್ರೀವೋ ವಾಕ್ಯಮಬ್ರವೀತ್‌ 1

ಹರಿವಾಗುರಯಾ ವ್ಯಾಪಾಂ ತಪ್ತಕಾಂಚನತೋರಣಾಮ್‌ ಸರ್ಗ ೧೪

ವಾಲಿಯನ್ನುವಧಿಸಬೇಕೆಂದುಸುಗ್ರೀವನು ಶ್ರೀರಾಮನನ್ನುಪ್ರಾರ್ಥಿಸುವುದು. ಶ್ರೀರಾಮನಿಂದ ಅಭಯಪ್ರದಾನ. ವಾಲಿಯನ್ನು ಕರೆಯುವುದಕ್ಕಾಗಿ ಸುಗ್ರೀವನ ಗರ್ಜನೆ.

ಅವರೆಲ್ಲರೂ ಕಿಷ್ಕಿಂಧೆಗೆ ಹೋಗಿ ಸಮೀಪದಲ್ಲಿದ್ದನಿಬಿಡಾರಣ್ಯದಲ್ಲಿ ಮರಗಳಿಂದ ಮರೆಯಾಗಿ ನಿಂತರು. ವನಪ್ರಿಯನಾದ ಸುಗ್ರೀವನು ವನದ ಸುತ್ತಲೂ ಕಣ್ಣು ಹೊರಳಿಸಿ ನೋಡಿದನು. ಕೊಬ್ಬಿದ ಕೊರಳಿನ ಸುಗ್ರೀವನು ಕೋಪಾವಿಷ್ಟನಾದನು (೧-೨). ಅವನು ತನ್ನ ಪರಿವಾರದ ವಾನರರೊಂದಿಗೆ ಘೋರವಾಗಿ ಗರ್ಜಿಸಿ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದನು. ಬಿರುಗಾಳಿ ಯೊಡನೆ ಮೆರೆಯುತ್ತ ಬರುವ ಕಾರ್ಮೋಡದಂತೆ ಗುಡುಗಿದನು. ಮುಗಿಲು ಬಿರಿಯುವಂತೆ ಗರ್ಜನೆಯು ಮೊಳಗಿತು (೩-೪). ಬಾಲಸೂರ್ಯನಂತೆ ಬೆಳಗುತ್ತಿದ್ದಸುಗ್ರೀವನು ದರ್ಪೊೋದ್ಧತವಾದ ಸಿಂಹದಂತೆ ಹೆಜ್ಜಿಯಿಡುತ್ತಬಂದು

ಸರ್ಗಃ ೧೪] ಸುಗ್ರೀವಗರ್ಜನಮ್‌ ೧೧೧

ಪ್ರಾಪ್ತಾ ಸ್ಮ ಧ್ವಜಯಂತ್ರಾಢ್ಯಾಂ ಕಿಷ್ಠಿಂಧಾಂ ವಾಲಿನಃ ಪುರೀಮ್‌

ಪ್ರತಿಜ್ಞಾ ಯಾ ತ್ರಯಾ ವೀರ ಕೃತಾ ವಾಲಿವಧೇ ಪುರಾ॥ ಸಫಲಾಂ ತಾಂ ಕುರು ಕ್ಷಿಪ್ರಂ ಲತಾಂ ಕಾಲ ಅವಾಗತಃ। ಏವಮುಕಿಸ್ತುಧರ್ಮಾತ್ಸಾಸುಗ್ರಿವೇಣ ರಾಘವಃ ತಮಥೋವಾಚ ಸುಗ್ರೀವಂ ವಚನಂ ಶತ್ರುಸೂದನಃ। ಕ್ಷತಾಭಿಜ್ಞಾನಚಿಹ್ನಸ್ನಮನಯಾ ಗಜಸಾಹ್ನಯಾ [1 ಲಕ್ಷ್ಮಣೇನ ಸಮುತಾ ಷಾಕಂಠೇ ಕತಾತವ।

ಅಂಜ shy ೫೫ ಕಂಠೆಸಕ್ತಯಾ ವಿಪರೀತ ಇವಾಕಾಶೇ ಸೂರ್ಯೋ ನಕ್ಷತ್ರಮಾಲಯಾ |

ಅದ್ಯ ವಾಲಿಸಮುತ್ನಂ ತೇ ಭಯಂ ವೈರಂ ವಾನರ ೧೦ ಏಕೇನಾಹಂ ಪ್ರಮೋಕ್ಷ್ಯಾಮಿ ಬಾಣಮೋಕ್ಷೇಣ ಸಂಯುಗೇ।

ಮಮ ದರ್ಶಯ ಸುಗ್ರೀವ ವೈರಿಣಂ ಭ್ರಾತ್ಮರೂಪಿಣಮ್‌ ೧೧

ಶ್ರೀರಾಮನನ್ನುದ್ದೇಶಿಸಿ ""ಶ್ರೀರಾಮ, ವಾಲಿಯ ನಗರವಾದ ಕಿಷ್ಠಿಂಧೆಗೆ ನಾವು ಬಂದಿದ್ದೇವೆ. ಬೀಸಿದ ಬಲೆಯಂತೆ ವಾನರರು ವ್ಯಾಪಿಸಿ ಇದನ್ನು ಕಾಯುತಿದ್ದಾರೆ. ಪುರದ್ವಾರಗಳುಸುವರ್ಣಮಯವಾಗಿವೆ (೫). ಇದು ಧ್ವಜಗಳಿಂದ ವ್ಯಾಪವಾಗಿ ಯುದ್ಧಯಂತ್ರಗಳಿಂದ ಸುರಕ್ಷಿತವಾಗಿದೆ. ವೀರಾಗ್ರಣಿ, ವಾಲಿಯನ್ನು ವಧಿಸುವೆ ನೆಂದು ಪ್ರತಿಜ್ಞೆ ಮಾಡಿದ್ದೀಯೆ. ಫಲ ಕಾಲವು ಲತೆಯನ್ನು ಫಲಯುಕವಾಗಿ ಮಾಡಿಯೇ ತೀರುವಂತೆ, ನೀನು ನಿನ್ನ ಪ್ರತಿಜ್ಞೆಯನ್ನುಸಫಲವಾಗಿ ಮಾಡಬೇಕು'' ಎಂದು ನಿವೇದಿಸಿದನು (೬-೭). ಆಗ ಧರ್ಮಾತ್ಮನೂ ಶತ್ರುಸೂದನನೂ ಆದ ರಾಘವನು "ಸುಗ್ರೀವ, ನಿನ್ನನ್ನು ಗುರುತಿಸಲು ಅನುಕೂಲಿಸುವಂತೆ ಲಕ್ಷ್ಮಣನು ನಾಗಪುಷ್ಟೀಲತೆಯನ್ನು ಕಿತ್ತು ನಿನ್ನ ಕೊರಳಿಗೆ ಹಾಕಿದ್ದಾನೆ. ಸೂರ್ಯನು ನಕ್ಷತ್ರ ಮಾಲೆಯಿಂದ ಪರಿವೃತ್ತನಾದಂತೆ, * ನೀನು ಮಾಲೆಯಿಂದ ಅಧಿಕವಾಗಿ ಶೋಭಿಸುತ್ತಿದ್ದೀಯೆ (೮-೧೦). ವಾನರೇಂದ್ರ, ಒಂದೇ ಒಂದು ಬಾಣವನ್ನು ಪ್ರಯೋಗಿಸಿ, ವಾಲಿಯಿಂದ ನಿನಗೆ ಸಂಭವಿಸಿರುವ ಭಯ ವೈರಗಳೆರಡನ್ನೂ ಇಂದೇ ತೊಡೆಯುವೆನು | ಅಣ್ಣನೆಂದುಕೊಳ್ಳುವ ನಿನ್ನ ವೈರಿಯನ್ನು ನನಗೆ

ಅನುಬಂಧವನ್ನು ನೋಡಿ.

೧೧೨ ಕಿಪ್ಕಿಂಧಾಕಾಂಡಃ [ಸರ್ಗಃ ೧೪

ಅದ್ಯ ವಾಲೀ ವಿನಿಹತೋ ವನಪಾಂಸುಷು ವೇಷ್ಠತೇ

ಯದಿ ದೃಸಿಪಥಂ ಪ್ರಾಪ್ತೋ ಜೀವನ್‌ ವಿನಿವರ್ತತೇ॥ ೧೨ ತತೋ ದೋಷೇಣ ಮಾ ಗಚ್ಛೇತ್‌ ಸದ್ಯೋ ಗರ್ಹೇಚ್ಚೆ ಮಾಂಭರ್ವಾ ಪ್ರತ್ಯಕ್ಷಂ ಸತ್ತತೇ ಸಾಲಾ ಮಯಾ ಬಾಣೇನ ದಾರಿತಾಃ ೧೩ ತೇನಾವೇಹಿ ಬಲೇನಾದ್ಯ ವಾಲಿನಾಂ ನಿಹತಂ ಮಯಾ |

ಅನ್ಫತಂ ನೋಕಪೂರ್ವಂ ಮೇ ವೀರ ಕೃಚ್ಛ್ರೀಪಿ ತಿಷ್ಪತಾ ॥1 ೧೪ ಧರ್ಮಲೋಭಪರೀತೇನ ಚವಕ್ಷೆ 8 ಕಥಂಚನ।

ಸಫಲಾಂ ಕರಿಷ್ಯಾಮಿ ಪ್ರತಿಜ್ಞಾಂ ಜಹಿ ಸಂಭ್ರಮಮ್‌ ೧೫ ಪ್ರಸೂತಂ ಕಲಮಂ ಕ್ಷೇತ್ರೇ ವರ್ಷೇಣೇವ ಶತಕ್ರತುಃ। ತದಾಹ್ಹಾನನಿಮಿತಂ ತ್ರಂ ವಾಲಿನೋ ಹೇಮಮಾಲಿನಃ॥ ೧೬ ಸುಗ್ರೀವ ಕುರು ತಂ ಶಬ್ದಂ ನಿಷ್ಪತೇದ್ಯೇನ ವಾನರಃ।

ಚಿತಕಾಶೀ ಬಲಶ್ಸಾಘೀ ತ್ವಯಾ ಚಾಧರ್ಷಿತಃ ಪುರಾ ೧೬

ತೋರಿಸಿದರೆ ಸಾಕು (೧೧). ಈಗಲೇ ವಾಲಿಯು ಹತನಾಗಿ ಕಾಡಿನ ಧೂಳಿಯಲ್ಲಿ ಉರುಳಾಡುವನು | ನನ್ನ ಕಣ್ಣಿಗೆ ಬಿದ್ದಮೇಲೆ ಅವನು ಬದುಕಿ ಹಿಂದಿರುಗಿದರೆ, ಸುಗ್ರೀವ, ಆಗ ನನ್ನ ಮೇಲೆ ತಪ್ಪನ್ನು ಆರೋಪಿಸು ; ನನ್ನನ್ನು ನಿಂದಿಸು. ನಿನ್ನ ಕಣ್ಣೆದುರಿಗೆ ಏಳು ಸಾಲವೃಕ್ಷಗಳನ್ನು ಒಂದು ಬಾಣದಿಂದ ಭೇದಿಸಿದ್ದೇನೆ (೧೨-೧೩). ಬಲದಿಂದಲೇ ಈಗ ವಾಲಿಯು ಸತನೆಂದು ತಿಳಿ. ಎಲ್ಫೆ ವೀರನೆ, ಧರ್ಮವನ್ನೇ ರಕ್ಷಿಸಬೇಕೆಂಬ ದೃಢನಿಷ್ಠೆಯುಳ್ಳ ನಾನು, ಎಂತಹ ಸಂಕಟಕಾಲದಲ್ಲಿಯೂ ಸುಳ್ಳನ್ನು ಹಿಂದೆ ಹೇಳಲಿಲ್ಲ ಮುಂದೆ ಹೇಳಲಿಕ್ಕಿಲ್ಲ ನನ್ನ ಪ್ರತಿಜ್ಞೆಯು ಫಲಿಸುವಂತೆ ಮಾಡುವೆನು; ಹೆದರಬೇಡ (೧೪-೧೫). ಗದ್ದೆಯಲ್ಲಿ ಬೆಳೆದ ಬತ್ತದ ಸಸಿಗೆ ಇಂದ್ರನು ಮಳೆ ಸುರಿಸಿ ಫಲ ಬರಿಸುವಂತೆ, ನನ್ನ ಪ್ರತಿಜ್ಞೆಯು ಫಲಯುಕ್ತವಾಗುವಂತೆ ನೋಡಿ ಕೊಳ್ಳುವೆನು. ಹೇಮಮಾಲೆಯನ್ನು ಧರಿಸಿದ ವಾಲಿಯು ಹೊರಬರುವಂತೆ ಗರ್ಜಿಸು. ಜಯಶಾಲಿಯೂ ಆತ್ಮಬಲಶ್ಲಾಭಿಯೂ ಆದ ಆತನು ಮೊದಲು ನಿನ್ನಿಂದ ಹೊಡೆತಗಳನ್ನು ತಿಂದಿದ್ದಾನೆ (೧೬-೧೭).

ಸರ್ಗಃ ೧೪] ಸುಗ್ರೀವಗರ್ಜನಮ್‌ ೧೧೩

ನಿಷ್ಠತಿಷ್ಕತ್ಯ ಸಂಗೇನ ವಾಲೀ ಪ್ರಿಯಸಂಯುಗಃ। ರಿಪೂಣಾಂ ಧರ್ಷಣಂ ಶೂರಾ ಮರ್ಷಯಂತಿ ಸಂಯುಗೇ ೧೮

ಜಾನಂತಸ್ತುಸ್ತಕಂ ವೀರ್ಯಂ ಸ್ಪೀಸಮಕ್ಷಂ ವಿಶೇಷತಃ ಸತು ರಾಮವಚಃ ಶ್ರುತ್ವಾಸುಗ್ರೀವೋ ಹೇಮಪಿಂಗಲಃ ೧೯

ನನರ್ದ ಕ್ರೂರನಾದೇನ ವಿನಿರ್ಭಿಂದನ್ನಿವಾಂಬರಮ್‌ | ತಸ್ಯ ಶಬ್ದೇನ ವಿತ್ರಸ್ತಾಗಾವೋ ಯಾಂತಿ ಹತಪ್ರಭಾಃ॥ ೨೦ ರಾಜದೋಷಪರಾಮೃಷ್ಟಾ ಕುಲಸ್ತ್ರಿಯ ಇವಾಕುಲಾಃ! ದ್ರವಂತಿ ಮೃಗಾಃ ಶೀಘ್ರಂ ಭಗ್ನಾಇವ ರಣೇ ಹಯಾಃ॥ ೨೧

ಪತಂತಿ ಖಗಾ ಭೂಮ್‌ ಕ್ಷೀಣಪುಣ್ಯಾ ಇವ ಗ್ರಹಾಃ ತತಃ ಜೀಮೂತಗಣಪ್ರಣಾದೋ ನಾದಂ ಹೃಮುಂಚತ್ತ್ವರಯಾ ಪ್ರತೀತಃ।

ಆದ್ದರಿಂದ ಅವನು ಕೂಡಲೇ ಹೊರಗೆ ಬಂದೇ ಬರುತಾನೆ. ಅವನಿಗೆ ಹೋರಾಟವೆಂದರೆ ಸುಗ್ಗಿಯಲ್ಲವೆ 9 ತಮ್ಮಶೌರ್ಯದ ಮಟ್ಟವನ್ನರಿತ ಶೂರರು ಶತ್ರುಗಳ ಆಕ್ರಮಣವನ್ನು ಎಂದಿಗೂ ಸಹಿಸರು. ಅದರಲ್ಲಿಯೂ ಹೆಂಗಸರೆದುರಿಗೆ ಶತ್ರುವಿನಿಂದಾದ ಅವಮಾನವನ್ನು ಸಹಿಸಲೇ ಆರರು '' ಎಂದು ನುಡಿದನು (೧೮-೧೯). ಶ್ರೀರಾಮನ ನುಡಿಯನ್ನು ಕೇಳಿ ಹೊಂಬಣ್ಣದಿಂದ ರಂಜಿಸುತ್ತಿದ್ದ ಸುಗ್ರೀವನು, ಅಂಬರವು ಇಂಬುಗೆಡುವಂತೆ ಕ್ರೂರದ್ವನಿಯಿಂದ ಕೂಗಿದನು. ಕೂಗಿನಿಂದ ಕಂಗೆಟ್ಟು ಕಳೆಗುಂದಿದ ಹಸುಗಳು, ಅರಾಜಕರಾಜ್ಯದಲ್ಲಿ ಪರ ಪುರುಷರ ಪೀಡೆಗೊಳಗಾದ ಕುಲಸ್ತ್ರೀಯರಂತೆ ದಿಕ್ಕುದಿಕ್ಕಿಗೆ ಓಡಿದವು. ಕಾಡು ಮೃಗಗಳು, ರಣದಲ್ಲಿ ಗಾಯಗೊಂಡು ಮುರಿದೋಡುವ ಕುದುರೆಗಳಂತೆ ಪಲಾಯನಮಾಡಿದವು. ಮಾಡಿದ ಪುಣ್ಯವು ತೀರಿದಮೇಲೆ, ದೇವಪುರುಷರು ಧರೆಗುರುಳವಂತೆ ಹಕ್ಕಿಗಳು ನೆಲಕ್ಕೆ ಬಿದ್ದವು (೨೦-೨೧). ಶ್ರೀರಾಮನನ್ನು ನಂಬಿದ ಸೂರ್ಯಾತ್ಮಜನಾದ ಸುಗ್ರೀವನು ಮೇಘರಾಶಿಯಂತೆ ಮೊರೆಯುತ್ತಿದ್ದನು. ಶೌರ್ಯದಿಂದ ಉಬ್ಬಿದ ತೇಜೋನಿಧಿಯಾದ

೧೧೪ ಕಿಷಿಂಧಾಕಾಂಡಃ [ಸರ್ಗಃ ೧೫

ಸೂರ್ಯತ್ಮಜಃ ಶೌರ್ಯವಿವೃದ್ಧತೇಜಾಃ ಸರಿತ್ಫತಿರ್ವಾನಿಲಚಂಚಲೋರ್ಮಿಃ | ತ್ರೆ

ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಚತುದರ್ಶಃಸರ್ಗಃ

ಪಂಚದಶಃ ಸರ್ಗಃ ತಾರಾಹಿತೋಕಿ] ಅಥ ತಸ್ಯ ನಿನಾದಂ ತಂ ಸುಗ್ರೀವಸ್ಯ ಮಹಾತ್ಮನಃ | ಶುಶ್ರಾವಾಂತಃಪುರಗತೋ ವಾಲೀ ಭ್ರಾತುರಮರ್ಷಣಃ ಶ್ರುತ್ವಾತು ತಸ್ಯ ನಿನದಂ ಸರ್ವಭೂತಪ್ರಕಂಪನಮ್‌ ಮದಶ್ರೈಕಪದೇ ನಷ್ಠ; ಕ್ರೋಧಶ್ಚಪತಿತೋ ಮಹಾನ್‌

ಸತು ರೋಷಪರೀತಾಂಗೋ ವಾಲೀ ಸಂಧ್ಯಾ ತಪಪ್ರಭಃ। ಉಪರಕ್ತ ಇವಾದಿತ್ಯಃ ಸದ್ಯೋ ನಿಪ್ಪಭತಾಂ ಗತಃ ಕಿ

ಸುಗ್ರೀವನು ಬಿರುಗಾಳಿಯಿಂದುಬ್ಬಿದ ಅಲೆಗಳಿಂದ ಬೀಗುವ ಅಂಭೋ ನಿಧಿಯಂತೆ ಅಬ್ಬರಿಸುತ್ತಿದ್ದನು (೨೨). ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಹದಿನಾಲ್ಕನೆಯ ಸರ್ಗ

ಸರ್ಗ ೧೫

ಸುಗ್ರೀವನ ಗರ್ಜನೆಯನ್ನುಕೇಳಿ ವಾಲಿಯು ರೋಷದಿಂದ ಯುದ್ಧಕ್ಕೆ ಹೊರಡುವುದು. ತಾರೆಯ ಹಿತೋಪದೇಶ. ಅಂತಃಪುರದಲ್ಲಿದ್ದವಾಲಿಗೆ ತಮ್ಮನಾದ ಸುಗ್ರೀವನ ಗರ್ಜನೆಯು ಕೇಳಿಸಿತು. ಸಮಸ್ತ ಭೂತಗಳನ್ನು ನಡುಗಿಸುವ ಸಿಂಹನಾದವನ್ನು ಕೇಳಿ ವಾಲಿಗೆ ಸಹನೆದಪಿತು. (ವಿಲಾಸದ) ಹರ್ಷವಡಗಿತು. ರೋಷ ಉಕ್ಕಿತು (೧-೨). ಸುವರ್ಣ

ಸರ್ಗಃ ೧೫] ತಾರಾಹಿತೋಕಿಃ ೧೧೫

ವಾಲೀ ದಂಪ್ಭಾಕರಾಲಸ್ತುಕ್ರೋಧಾದ್ದೀಪ್ತಾಗ್ನಿಲೋಚನಃ॥

ಭಾತ್ಯುತ್ತತಿತಪದ್ಧಾಭಃ ಸಮೃ್ಮಣಾಲ ಇವ ಹ್ರದಃ ಶಬ್ದಂ ದುರ್ಮರ್ಷಣಂ ಶ್ರುತ್ವಾ ನಿಪ್ಪಪಾತ ತತೋ ಹರಿಃ |

ವೇಗೇನ ಚರಣನ್ಯಾಸ್ಫರ್ದಾರಯನ್ನಿವ ಮೇದಿನೀಮ್‌ ತಂ ತು ತಾರಾ ಪರಿಷ್ಟಜ್ಯ ಸ್ನೇಹಾದ್ದರ್ಶಿತಸ್‌ಹೃದಾ |

ತ್ರಸ್ತಾ ಪ್ರೋವಾಚ ಸಂಭ್ರಾಂತಾ ಹಿತೋದರ್ಕಮಿದಂ ವಚಃ ಸಾಧು ಕೋಧಮಿಮಂ ವೀರ ನದೀವೇಗಮಿವಾಗತಮ್‌ ಶಯನಾದುತ್ತಿತಃ ಕಲ್ಕಂ ತ್ಯಜ ಭುಕಾಮಿವ ಸ್ತುಜಮ್‌ ಕಲ್ಕಮೇತೇನ ಸಂಗ್ರಾಮಂ ಕರಿಷ್ಠ ಹರೀಶ್ಚರ

ವೀರ ತೇ ಶತ್ರುಬಾಹುಲ್ಕಂ ಫಲ್ಲುತಾ ವಾ ವಿದ್ಯತೇ

ವರ್ಣನಾದ ವಾಲಿಯು ರೋಷಾವಿಷ್ಟನಾದ್ದರಿಂದ (ಮುಖವು ವಿಕೃತವಾಗಲು) ಕಾಂತಿಗುಂದಿ, ಗ್ರಹಣ ಹಿಡಿದ ಸೂರ್ಯನಂತಾದನು. ದಂಷ್ಟಾಕರಾಲನಾದ ವಾಲಿಯ ಕಣ್ಣುಗಳು ಕೋಪದಿಂದ ಕೆಂಡವಾದವು. ತಾವರೆಯ ದಂಟು ಸಹಿತವಾಗಿ ಕೆಂದಾವರೆಗಳಿಂದೊಪ್ಪವ ಕೊಳದಂತೆ ವಾಲಿಯು ಹೊಳೆದನು * (೩-೪). ದುಸಹವಾದ ಗರ್ಜನೆಯನ್ನು ಕೇಳಿ ವಾನರೇಂದ್ರನು ಥಟ್ಟನೆ ಹೊರ ಹೊರಟನು. ಅವನು ಕಾಲಿಡುವ ರಭಸಕ್ಕೆ ಪೊಡವಿಯು ಒಡೆಯುವುದೋ ಎಂಬಂತೆ ತೋರಿತು. ಆಗ ವಾಲಿಯ ಭಾರ್ಯೆಯಾದ ತಾರೆಯು ಭಯಪಡುತ್ತ ಸರ್ರನೆ ಬಂದು, ಅವನನ್ನಪ್ಪಿಕೊಂಡು ಸೌಹಾರ್ದದಿಂದ ಹಿತವಚನವನ್ನಾಡಿದಳು (೫-೬) : "ವೀರಾಗ್ರಣಿ, ಇಷ್ಟು ಕೋಪ ಬೇಡ. ನದೀವೇಗದಂತೆ ಉಕ್ಕಿಬಂದ ಪ್ರ ಕೋಪವನ್ನು ಬಿಡುವುದು ಒಳ್ಳೆಯದು. ಹಾಕಿಕೊಂಡ ಹೂಮಾಲೆಯನ್ನು ಹಾಸಿಗೆಯಿಂದೆದ್ದಾಗ ಬೆಳಗಿನಲ್ಲಿ ಕಳೆಯುವಂತೆ ಸಿಟ್ಟನ್ನು ಬಿಟ್ಟುಬಿಡು (೭). ವಾನರೇಶ್ವರ, ಬೆಳಗಾದಮೇಲೆ ಅವನೊಡನೆ ಯುದ್ಧಮಾಡಬಹುದು.

ವಾಲಿಯ ಕೋರೆದಾಡೆಗಳು ತಾವರೆಯ ದಂಟಿನಂತೆಯೂ ಕಣ್ಣುಗಳು ಕೆಂದಾವರೆ ಯಂತೆಯೂ ಕಂಡವೆಂಬ ಅಭಿಪ್ರಾಯ.

೧೧೬ ಕಿಷ್ಟಿಂಧಾಕಾಂಡಃ [ಸರ್ಗಃ ೧೫

ಸಹಸಾ ತವ ನಿಷ್ಕ್ರಾಮೋ ಮಮ ತಾವನ್ನ ರೋಚತೇ।

ಶ್ರೂಯತಾಂ ಚಾಭಿಧಾಸ್ಯಾಮಿ ಯನ್ನಿಮಿತಂ ನಿವಾರ್ಯಸೇ

ಪೂರ್ವಮಾಪತಿತಃ ಕ್ರೋಧಾತ್‌ ತ್ಲಾಮಾಹ್ವಯತೇ ಯುಧಿ

ನಿಷ್ತತ್ಯ ನಿರಸಸೇ ಹನ್ಯಮಾನೋ ದಿಶೋ ಗತಃ॥ ೧೦

ತ್ವಯಾ ತಸ್ಯ ನಿರಸಸ್ಕ ಪೀಡಿತಸ್ಯ ವಿಶೇಷತಃ

ಇಹೈತ್ಯ ಪುನರಾಹ್ಹಾನಂ ಶಂಕಾಂ ಜನಯತೀವ ಮೇ॥! ೧೧

ದರ್ಪಶ್ಚವ್ಯವಸಾಯಶ್ಚಯಾದೃಶಸಸ್ಯ ನರ್ದತಃ।

ನಿನಾದಸ್ಯ ಸಂರಂಬೋ ನೈತದಲ್ಲಂ ಹಿ ಕಾರಣಮ್‌ ೧೨

ನಾಸಹಾಯಮಹಂ ಮನ್ಯೇ ಸುಗ್ರೀವಂ ತಮಿಹಾಗತಮ್‌

ಅವಷಬಸಹಾಯಶ್ಚಯಮವುಾಶ್ರಿತ್ತೆ,ಷ ಗರ್ಜತಿ॥ ೧೩ ಟಂ ರಲ

ಪ್ರಕೃತ್ಯಾ ನಿಪುಣಶೈವ ಬುದ್ದಿಮಾಂಶೈವ ವಾನರಃ

ಅಪರೀಕ್ಷಿತವೀರ್ಯೇಣ ಸುಗ್ರೀವಃ ಸಹ ನೈಷ್ಯತಿ॥ ೧೪

ಪರಾಕ್ರಮಿ, ನಿನ್ನ ಶತ್ರುಸಂಖ್ಯೆಯೂ ದೊಡ್ಡದಲ್ಲ ನಿನ್ನ ಪರಾಕ್ರಮವೂ ಕಡಿಮೆ ಯದಲ್ಲ ಹೀಗಿರುವಾಗ ಥಟ್ಟನೆ ಈಗಲೇ ಯುದ್ಧಕ್ಕೆ ಹೊರಡುವುದು ನನಗೆ ಸರಿಯೆನಿಸುವುದಿಲ್ಲ ಈಗ ಬೇಡವೆನ್ನುವುದಕ್ಕೆ ಕಾರಣವೇನೆಂದು ಹೇಳುತ್ತೇನೆ, ಕೇಳು (೮-೯): ಸುಗ್ರೀವನು ಮೊದಲು ಬಂದು ಕೋಪದಿಂದ ನಿನ್ನನ್ನುಯುದ್ಧಕ್ಕೆ ಕರೆದನಷ್ಟೆ ಆಗ ನೀನು ನುಗ್ಗಿ ಹೋಗಿ ಅವನನ್ನು ಬಡಿದಟ್ಟಲು, ಅವನು ದಿಕ್ಕು ಗೆಟ್ಟು ಓಡಿಹೋದನು. ನಿನ್ನಿಂದ ಹೊಡೆತಗಳನ್ನು ತಿಂದು ಬಹಳ ನೊಂದ ಆತನೇ ಪುನಃ ಬಂದು ಯುದ್ಧಕ್ಕೆ ಕರೆಯುತ್ತಾನೆಂದರೆ, ನನಗೇಕೋ ಸಂದೇಹ ವಾಗುತ್ತದೆ (೧೦-೧೧). ಅವನ ಗರ್ವ, ಅವನ ಯುದ್ಧೋದ್ಯಮ, ಅವನ ಸಿಂಹನಾದದ ವೈಖರಿ - ಇವುಗಳ ಕಾರಣ ಅಲ್ಲವಾಗಿರದು. ಸುಗ್ರೀವನು ಸಹಾಯಕನಿಲ್ಲದೆ ಒಂಟಿಯಾಗಿ ಬಂದಿದ್ದಾನೆಂದು ನನಗೆ ತೋರುವುದಿಲ್ಲ ಅವನಿಗೆ ಯಾರದೋ ದೊಡ್ಡಸಹಾಯವಿದೆ. ಅದನ್ನು ನಂಬಿಯೇ ಹೀಗೆ ಗರ್ಜಿ ಸುತ್ತಿದ್ದಾನೆ (೧೨-೧೩). ವಾನರನು ಸಹಜವಾಗಿಯೇ ಚತುರ; ಬುದ್ಧಿಶಾಲಿ.

ಸರ್ಗಃ ೧೫] ತಾರಾಹಿತೋಕ್ತಿ! ೧೧೭

ಪೂರ್ವಮೇವ ಮಯಾ ವೀರ ಶ್ರುತಂ ಕಥಯತೋ ವಚಃ।

ಅಂಗದಸ್ಯ ಕುಮಾರಸ್ಯ ವಕ್ಷಾ ಮದ್ಯ ಹಿತಂ ವಚಃ ೧೫ ಅಂಗದಸ್ತು ಕುಮಾರೋ5 ಯಂ ವನಾಂತಮುಪನಿರ್ಗತಃ। ಪ್ರವೃತಿಸೇನ ಕಥಿತಾ ಚಾರೈರಾಪ್ಟೈರ್ನಿವೇದಿತಾ ೧೬

ಅಯೋಧ್ಯಾಧಿಪತೇಃ ಪುತ್ರೌ ಶೂರ್‌ ಸಮರದುರ್ಜಯ್‌ ಆಕ್ಷ್ವಾಕೂಣಾಂ ಕುಲೇ ಜಾತ್‌ ಪ್ರಧಿತೌ ರಾಮಲಕ್ಷ್ಮಣ್‌ || ೧೭

ಸುಗ್ರೀವಪ್ರಿಯಕಾಮಾರ್ಥಂ ಪ್ರಾಪೌ ತತ್ರ ದುರಾಸದ್‌

ತವ ಭ್ರಾತುರ್ಹಿ ವಿಖ್ಯಾತಃ ಸಹಾಯೋ ರಣಕರ್ಕಶಃ ೧೮ ರಾಮಃ ಪರಬಲಾಮರ್ಧಿೀ ಯುಗಾಂತಾಗಿರಿವೋತ್ಲಿತಃ

ನಿವಾಸವ್ಗಕ್ಷಃ ಸಾಧೂನಾಮಾಪನ್ನಾನಾಂ ಪರಾ ಗತಿಃ ೧೯ ಆರ್ತಾನಾಂ ಸಂಶ್ರಯಶ್ಚೈವ ಯಶಸಶೈಕಭಾಜನಮ್‌ ಜ್ಞಾನವಿಜ್ಞಾನಸಂಪನ್ನೋ ನಿದೇಶೇ ನಿರತಃ ಪಿತುಃ॥ ಪಿಂ

ಇನ್ನೊಬ್ಬನ ಪರಾಕ್ರಮವನ್ನು ಚೆನ್ನಾಗಿ ಪರೀಕ್ಷಿಸದೆ, ಅವನನ್ನು ನಂಬಿ ಎಂದಿಗೂ ಸ್ನೇಹವನ್ನು ಬೆಳೆಸುವುದಿಲ್ಲ ನಮ್ಮ ಕುಮಾರನಾದ ಅಂಗದನು ಒಂದು ವಿಷಯ ವನ್ನು ಹೇಳಿದ್ದಾನೆ. ಹಿತಕರವಾದ ಮಾತನ್ನು ಕೇಳು (೧೪-೧೫) : ಅಂಗದ ಕುಮಾರನು ಕಾಡಿನಲ್ಲಿ ತಿರುಗಾಡುತಿದ್ದಾಗ ಆಪ್ತರಾದ ಗೂಢಚಾರರು ಅವನಿಗೆ ಒಂದು ಸುದ್ದಿಯನ್ನು ಮುಟ್ಟಿಸಿದರಂತೆ. ಅದನ್ನು ನನಗೆ ಹೇಳಿದ್ದಾನೆ. ಏನೆಂದರೆ, ಅಯೋಧ್ಯಾಪತಿಯಾದ ದಶರಥನ ಶೂರರಾದ ಇಬ್ಬರು ಮಕ್ಕಳು ಬಂದಿದ್ದಾರಂತೆ. ಯುದ್ಧದಲ್ಲಿ ಅಜೇಯರಂತೆ. ಇಕ್ಷ್ವಾಕು ವಂಶದಲ್ಲಿ ಜನಿಸಿ ವಿಖ್ಯಾತರಾದ ಅವರ ಹೆಸರು ರಾಮ ಮತ್ತು ಲಕ್ಷ್ಮಣ (೧೬-೧೭). ದುರ್ಧರ್ಷರಾದ ಅವರಿಬ್ಬರು ಸುಗ್ರೀವನಿಗೆ ಪ್ರಿಯವನ್ನೆಸಗಬೇಕೆಂದು ಬಂದಿದ್ದಾರೆ. ನಿನ್ನ ತಮ್ಮನಿಗೆ ಸಹಾಯಕ ನಾಗಿರುವ ರಾಮನು ರಣಪಂಡಿತನೆಂದು ಪ್ರಖ್ಯಾತನಾಗಿದ್ದಾನೆ. ಅವನು ಪ್ರಜ್ವಲಿಸುವ ಪ್ರಳಯಕಾಲಾಗ್ನಿಯಂತೆ ಶತ್ರುಸೈನ್ಯವನ್ನು ದ್ವಂಸಪಡಿಸುವನಂತೆ. ರಾಮನು ಸಜ್ಜನರಿಗೆ ಆಶ್ರಯವೃಕ್ಷದಂತಿದ್ದು ಆಪತಿನಲ್ಲಿರುವವರಿಗೆ ಪರಮ ಗತಿಯಾಗಿದ್ದಾನೆ (೧೮-೧೯). ದುಃಖಿತರಿಗೆ ಶರಣ್ಯನಾಗಿ ಸತ್ಕೀರ್ತಿಗೆ

೧೧೮ ಕಿಷ್ಕಿಂಧಾಕಾಂಡಃ [ಸರ್ಗಃ ೧೫

ಧಾತೂನಾಮಿವ ಶೈಲೇಂದ್ರೋ ಗುಣಾನಾಮಾಕರೋ ಮಹಾನ್‌ ತತ್‌ ಕ್ಷಮೋ ವಿರೋಧಸೇ ಸಹ ತೇನ ಮಹಾತ್ಸನಾ || ೨೧

ದುರ್ಜಯೇನಾಪ್ರಮೇಯೇಣ ರಾಮೇಣ ರಣಕರ್ಮಸು। ಶೂರ ವಕ್ಷಾ,ಮಿ ತೇ ಕಿಂಚಿನ ಚೇಚ್ಛಾಮ್ಯ ಭ್ಯಸೂಯಿತುಮ್‌ 1 ೨೨

ಶ್ರೂಯತಾಂ ಕ್ರಿಯತಾಂ ಚೈವ ತವ ವಕ್ಷಾ್ಯಮಿ ಯದ್ದಿತಮ್‌ ಯ್‌ವರಾಜ್ಯೆ ಸುಗ್ರೀವಂ ತೂರ್ಣಂ ಸೌಧ್ಯಭಿಷೇಜಯ |! ೨೩

ವಿಗ್ರಹಂ ಚೂ ಕಥಾ ವೀರ ಭ್ರಾತ್ರಾ ರಾಜನ್‌ ಯವೀಯಸಾ ಅಹಂಹಿತೇ ಕ್ಷಮಂ ಮನ್ನೆ ತೇನ ರಾಮೇಣ ಸೌಹೃದಮ್‌ || ೨೪

ಸುಗ್ರೀವೇಣ ಸೆಂಪ್ರೀತಿಂ ವೈರಮುತ್ತೃಜ್ಯ ದೂರತಃ॥

ಲಾಲನೀಯೋಹಿ ತೇ ಭ್ರಾತಾ ಯವೀಯಾನೇಷ ವಾನರಃ ೨೫ ತತ್ರ ವಾ ಸನ್ನಿಹಸ್ಲೋ ವಾ ಸರ್ವಥಾ ಬಂಧುರೇವ ತೇ। ಹಿ ತೇನ ಸಮಂ ಬಂಧುಂ ಭುವಿ ಪಶ್ಯಾಮಿ ಕಂಚನ ೨೬

ಆಕರನಾಗಿದ್ದಾನೆ. ಅವನು ತತ್ತ್ವಜ್ಞಾನಸಂಪನ್ನನೂ ಲೋಕ ಜ್ಞಾನನಿಪುಣನೂ ಆಗಿದ್ದಾನೆ. ತಂದೆಯ ಆಜ್ಞೆಯನ್ನು ಪಾಲಿಸುವುದರಲ್ಲಿನಿರತನಾದ ಸದಾಚಾರನಿಷ್ಠ (೨೦). ಗೈರಿಕಧಾತುಗಳಿಗೆ ಮಹಾಪರ್ವತವಿರುವಂತೆ ಸದ್ಗುಣಗಳಿಗೆ ರಾಮನು ದೊಡ್ಡ ಗಣಿಯಾಗಿರುವನಂತೆ. ಆದ್ದರಿಂದ ಮಹಾಪುರುಷನೊಡಫೆ ನೀನು ವಿರೋಧವನ್ನು ಕಟ್ಟಿಕೊಳ್ಳುವುದು ಯೋಗ್ಯವಲ್ಲ (೨೧). ರಣರಂಗದಲ್ಲಿ ಅಜೇಯನೂ ಅಮೇಯಮಹಿಮನೂ ಆದ ರಾಮನೊಡನೆ ವೈರವು ಸರಿಯಲ್ಲ ಶೂರಾಗ್ರೇಸರ, ನಿನಗೆ ಒಂದು ವಿಷಯವನ್ನು ಹೇಳುವೆನು. ತಪ್ಪನ್ನು ತೋರಿ ಸುವುದು ನನ್ನ ಉದ್ದೇಶವಲ್ಲ ನಿನಗೆ ಶ್ರೇಯಸ್ಕರವಾದ ನನ್ನ ಮಾತನ್ನು ಆಲಿಸು; ಅದನ್ನು ಪಾಲಿಸು. ಸುಗ್ರೀವನಿಗೆ ಯುವರಾಜಪದವಿಯನ್ನಿತ್ತು ತಡಮಾಡದೆ ಅಭಿಷೇಕಮಾಡುವುದೊಳ್ಳೆಯದು (೨೨-೨೩). ಮಹಾರಾಜ, ಶೂರಾಗ್ರೇಸರ, ತಮ್ಮನೊಡನೆ ಜಗಳವು ಬೇಡ. ನಿನಗೆ ರಾಮನೊಡನೆ ಸೌಹಾರ್ದವೇ ಯುಕ್ತವೆಂದು ನಾನು ಭಾವಿಸುತ್ತೇನೆ. ಸುಗ್ರೀವನೊಡನೆ ವೈರವನ್ನು ಪೂರ್ಣವಾಗಿ ತೊರೆದು ಪ್ರೀತಿಯಿಂದಿರು. ಅವನನ್ನು ಲಾಲಿಸು. ಸುಗ್ರೀವನು ನಿನಗೆ ಸೋದರನಲ್ಲವೆ ? ತಮ್ಮನಲ್ಲವೆ ? (೨೪-೨೫). ಅವನು ಅಲ್ಲಿರಲಿ-

ಸರ್ಗಃ ೧೫] ತಾರಾಹಿತೋಕಿ; ೧೧೯

ದಾನಮಾನಾದಿಸತ್ಕಾರೈಃ ಕುರುಷ್ಪಪ್ರತ್ಯನಂತರಮ್‌ | ವೈರಮೇತತ್‌ ಸಮುತ್ತ್ಯ! ಜ್ಯ ತವ ಪಾರ್ಶ್ವೇ ತಿಷ್ಠತು il ೨೬ ಸುಗ್ರೀವೋ ವಿಪುಲಗ್ರೀವಸವ ಬಂಧುಃ ಸದಾ ಮತಃ | ಭ್ರಾತುಃ ಸೌಹೃದಮಾಲಂಬ್ಯ ನಾನ್ಯಾ ಗತಿರಿಹಾಸ್ತಿತೇ ೨೮ ಯದಿತೇ ಮತ್ಚಿಯಂ ಕಾರ್ಯಂ ಯದಿ ಚಾವೈಷಿ ಮಾಂ ಹಿತಾಮ್‌ | ಯಾಚ್ಯಮಾನಃ ಪ್ರಯತ್ನೇನ ಸಾಧು ವಾಕ್ಯಂ ಕುರುಷ್ಟಮೇ ಪ್ರಸೀದ ಪಥ್ಯಂ ಶಣು ಜಲಿತಂ ಹಿಮೇ ರೋಷಮೇವಾನುವಿಧಾತುಮರ್ಹಸಿ ಕ್ಷಮೋ ಹಿ ತೇ ಕೋಸಲರಾಜಸೂನುನಾ ವಿಗ್ರಹಃ ಶಕ್ರಸಮಾನತೇಜಸಾ॥ ೩೦ ತದಾ ಹಿತಾರಾ ಹಿತಮೇವ ವಾಕ್ಯಂ ತಂ ವಾಲಿನಂ ಪಥ್ಯಮಿದಂ ಬಭಾಷೇ।

ಇಲ್ಲಿರಲಿ, ಎಲ್ಲಿದ್ದರೂ ನಿನಗೆ ಬಂಧುವೇ. ಒಡಹುಟ್ಟಿದ ಸುಗ್ರೀವನಿಗೆ ಸಮಾನೆನಾದ ಇನ್ನೊಬ್ಬ ಬಂಧುವು ಜಗತಿನೆಲ್ಲಿನಿನಗೆ ಯಾರಿದ್ದಾರೆ ? ನಾಥ, ಕೂಡಲೆ ಅವನನ್ನು ಕರೆಸಿ ದಾನಮಾನಾದಿಗಳಿಂದ ಸತ್ವರಿಸು. ವೈರ ಬುದ್ದಿಯನ್ನು ತೊರೆದುಬಿಡು. ಅವನು ನಿನ್ನ ಬಳಿಯಲ್ಲಿರಲಿ (೨೬-೨೭). ವಿಶಾಲಕಂಠನಾದ ಸುಗ್ರೀವನು ಸರ್ವದಾ ನಿನಗೆ ಬಂಧುವಾಗಿ ನಡೆದು ಕೊಳ್ಳುವನು. ಭ್ರಾತೃವಾತ್ಸಲ್ಯವನ್ನು ಸಂಪಾದಿಸಿಕೊಂಡಿರುವುದೇ ನಿನಗೆ ಯೋಗ್ಯವಲ್ಲದೆ ಬೇರೆ ದಾರಿಯಿಲ್ಲ (೨೮). ಪ್ರಿಯ, ನನಗೆ ಪ್ರಿಯವಾದುದನ್ನು ನಡೆಸಬೇಕೆಂದು ನಿನಗೆ ಮನಸ್ಸಿದ್ದರೆ - ನಾನು ನಿನ್ನ ಹಿತೈಷಿಣಿಯೆಂದು ನೀನು ತಿಳಿಯುವುದಾದರೆ, ನನ್ನ ಪ್ರಾರ್ಥನೆಯನ್ನು ನಡೆಸು. ಕೈಮುಗಿದು ಬೇಡಿ ಕೊಳ್ಳುತ್ತೇನೆ (೨೯). ಪ್ರಸನ್ನನಾಗು. ಪಥ್ಯವಾದ ನನ್ನ ಮಾತನ್ನು ಕೇಳು. ಕೋಪದ ಮಾರ್ಗವನ್ನೇ ಅನುಸರಿಸಬೇಡ. ಕೋಸಲ ರಾಜಪುತ್ರನೊಡನೆ ವಿರೋ ಧವು ನಿನಗೆ ಬೇಡ. ದೇವೇಂದ್ರ ಸಮಾನತೇಜನಾದ ರಾಮನೊಡನೆ ವೈರವು ನಿನಗೆ ತಕ್ಕುದಲ್ಲ' ಎಂದು ತಾರೆಯು ಬೇಡಿಕೊಂಡಳು (೩೦). ಹೀಗೆ ತಾರೆಯು ವಾಲಿಗೆ ಶ್ರೇಯಸ್ಕರವೂ ಪಥ್ಯವೂ ಆದ ವಚನವನ್ನೇ ಹೇಳಿದಳು.

೧೨೦ ಕಿಷ್ಕಿಂಧಾಕಾಂಡಃ [ಸರ್ಗಃ ೧೬

ರೋಚತೇ ತದ್ದಚನಂ ಹಿ ತಸ್ಕ ಕಾಲಾಭಪನ್ನಸ್ಯ ವಿನಾಶಕಾಲೇ॥ ೩೧ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಪಂಚದಶಃಸರ್ಗಃ

ಹೋಡಶಃ ಸರ್ಗಃ ವಲಿಸಂಹಾರಃ ತಾಮೇವಂ ಬ್ರುವತೀಂ ತಾರಾಂ ತಾರಾಧಿಪನಿಭಾನನಾಮ್‌ ವಾಲೀ ನಿರ್ಭರ್ತಯಾಮಾಸ ವಚನಂ ಚೇದಮಬ್ರವೀತ್‌

ಗರ್ಜತೋತಸ್ಯ ಸಸಂರಂಭಂ ಭ್ರಾತುಃ ಶತ್ರೋರ್ಮ್ವಿಶೇಷತಃ ಮರ್ಷಯಿಷ್ಯಾಮ್ಯಹಂ ಕೇನ ಕಾರಣೇನ ವರಾನನೇ

ವಾಲಿಗೆ ಅದು ಹಿಡಿಸಲಿಲ್ಲ. ಕಾಲವಶನಾದ ವಾಲಿಗೆ ವಿನಾಶಕಾಲವು ಒದಗಿ ಬಂದುದರಿಂದ ಹಿತವಚನವು ರುಚಿಸಲಿಲ್ಲ (೩೧).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿ ಹದಿನೈದನೆಯ ಸರ್ಗ

ಸರ್ಗ ೧೬

ವಾಲಿಯುತಾರೆಯನ್ನುಸಂತೈಸಿ ಅರಮನೆಗೆ ಕಳಿಸುವುದು. ವಾಲಿಸುಗ್ರೀವರ ಯುದ್ಧ ಶ್ರೀರಾಮನಿಂದ ಬಾಣಪ್ರಯೋಗ.

ರೀತಿಯಲ್ಲಿ ಚಂದ್ರಮುಖಿಯಾದ ತಾರೆಯು ಹಿತವಾದವನ್ನು ಹೇಳುತಿರಲು, ವಾಲಿಯು ಅವಳನ್ನುಗದರಿಸಿ ಹೀಗೆಂದನು: ""ಸುಂದರಿ, ನನಗೆ ಸೋದರನಾದ ಸುಗ್ರೀವನು ಇಷ್ಟು ಉದ್ರೇಕದಿಂದ ಹೀಗೆ ಗರ್ಜಿಸುತ್ತಿರುವನಲ್ಲ! ಅದರಲ್ಲಿಯೂ ನನಗೆ ಶತ್ರುವಾಗಿರುವ ಈತನು ಕಾಲು ಕೆರೆದು ಬಂದಾಗ ನಾನು ಏಕೆ ಸಹಿಸಿ ಕೊಂಡಿರಬೇಕು? (೧-೨).

ಸರ್ಗಃ ೧೬] ವಾಲಿ ಸಂಹಾರಃ ೧೨೧

ಅಧರ್ಷಿತಾನಾಂ ಶೂರಾಣಾಂ ಸಮರೇಷನಿವರ್ತಿನಾಮ್‌

ಧರ್ಷಣಾಮರ್ಷಣಂ ಭೀರು ಮರಣಾದತಿರಿಚ್ಛತೇ॥ ಸೋಢುಂನ ಸಮರ್ಥೋಂ ಹಂ ಯುದ | ಕಾಮಸ್ಯ ಸಂಯುಗೇ ಸುಗ್ರೀವಸ್ಯ ಸಂರಂಭಂ ಹೀನಗ್ರೀವಸ್ಥ ಗರ್ಜತಃ॥ ಕಾರ್ಯೋ ವಿಷಾದಸ್ಟೇ ರಾಘವಂ ಪ್ರತಿ ಮತೃತೇ

ಧರ್ಮಜ್ಞಶ್ಚ ಕೃತಜ್ಞಶ್ಶ ಕಥಂ ಪಾಪಂ ಕರಿಷ್ಕತಿ ನಿವರ್ತಸ್ವ ಸಹ ಸ್ರೀಭೀ ಕಥಂ ಭೂಯೋತನುಗಚಸಿ।

ಸೌಹೃದರೆ ದರ್ಶಿತಂ ತಾರೇ ಮಯಿ ಭಕಿಃ ಕೃತಾ ಶಿಯಾ ॥1 ಪ್ರತಿಯೋತ್ಸ್ಯಾ ಮ್ಯಹಂ ಗತ್ವಾಸುಗ್ರೀವಂ ಜಹಿ ಸಂಭ್ರಮಮ್‌ ದರ್ಪಮಸ್ಕ ನೆನೇಷ್ಠಾ ಮಿನ ಣ್‌ ಪಾ ್ರಾಣೈರ್ವಿಯೋಕ್ಷ್ಯ ತೇ॥ ಅಹಂ ಹ್ಯಾ ಜಸಿ ತಸ್ಮಾಸ್ಥ ಕರಿಷ್ಯಾಮಿ ಯಥೇಪಿತಮ್‌

ವಕ್ಷ ರ್ಮುಷಿಪ್ರಹಾರೈಶ ಪೀಡಿತ: ಪ್ರತಿಯಾಸತಿ॥

ಯುದ್ಧದಲ್ಲಿ ಹಿಮ್ಮೆಟ್ಟುವುದನ್ನೇ ಅರಿಯದ ಅಪರಾಜಿತರಾದ ಶೂರರಿಗೆ ಬಗೆಯ ಅವಮಾನವನ್ನು ಸಹಿಸಿಕೊಳ್ಳುವುದೆಂದರೆ, ಎಲೆ ಭೀರು, ಅದು ಸಾಯುವುದಕ್ಕಿಂತಲೂ ಕಡೆ. ಹೊಡೆದಾಟಕ್ಕಾಗಿ ಕಾಲು ಕರೆದು ಬಂದಿರುವ ಸುಗ್ರೀವನ ಅಬ್ಬರವನ್ನು ನಾನು ಸಹಿಸಲಾರೆ. ಕುತ್ತಿಗೆಯನ್ನು ಮುರಿಸಿ ಕೊಳ್ಳುವುದಕ್ಕಾಗಿ ಹೀಗೆ ಕಿರಿಚುತ್ತಿದ್ದಾನೆ! ಈತನ ಉದ್ರೇಕವನ್ನುತಡೆದುಕೊಳ್ಳಲಾರೆ (೩-೪). ರಾಘವನಿಂದ ನನಗೆ ಕೇಡಾದೀತೆಂದು ನೀನು ವಿಷಾದಿಸಬೇಡ. ಧರ್ಮಜ್ಞನೂ ಕೃತಜ್ಞನೂ ಆದ ರಾಘವನು ನನ್ನ ವಿಷಯದಲ್ಲಿ ಪಾಪ ಕಾರ್ಯವನ್ನು ಹೇಗೆ ಮಾಡಿಯಾನು? ಸ್ತ್ರೀಯರೊಂದಿಗೆ ನೀನು ಹಿಂದಿರುಗಿ ಹೋಗು. ಇದೇನು ಮತ್ತೆ ನನ್ನ ಹಿಂದೆಯೇ ಬರುತ್ತಿದ್ದೀಯೆ 9 ತಾರೆ, ನನ್ನಲ್ಲಿ ನಿನಗಿರುವ ಪ್ರೇಮವನ್ನು ತೋರಿಸಿದೆ. ನಿನ್ನ ಭಕ್ತಿಯು ವ್ಯಕ್ತವಾಯಿತು (೫-೬). ನಾನು ಹೋಗಿ ಸುಗ್ರೀವನೊಡನೆ ಯುದ್ಧಮಾಡುವೆನು. ಹೆದರಬೇಡ. ಅವನ ಸೊಕ್ಕನ್ನು ಅಡಗಿಸುವೆನೇ ಹೊರತು ಅವನನ್ನು ಕೊಲ್ಲುವುದಿಲ್ಲ ಯುದ್ಧಕ್ಕೆ ನಿಂತಿರುವ ಆತನಿಗೆ ಬೇಕಾದಷ್ಟು ಹೊಡೆತಗಳನ್ನು ಹಾಕುವನು. ಮರಗಳ ಬಡಿತವನ್ನೂಗುದ್ದುಗಳನ್ನೂತಿಂದು ಸಾಕಾಗಿ ಹಿಂದಿರುಗಿಹೋಗುವನು (೭-೮).

೧೨೨ ಕಿಷ್ಟಿಂಧಾಕಾಂಡಃ [ಸರ್ಗಃ ೧೬

ನಮೇ ಗರ್ವಿತಮಾಯಸಂ ಸಹಿಷೃತಿ ದುರಾತ್ಸವಾನ್‌ )

ಕೃತಂ ತಾರೇ ಸಹಾಯತ್ಪಂ ಸೌಹೃದಂ ದರ್ಶಿತಂ ಮಯಿ॥ ಶಾಪಿತಾಸಿ ಮಮ ಪ್ರಾಣೈರ್ನಿವರ್ತಸ್ವಜನೇನ ಚ।

ಅಲಂ ಜಿತ್ವಾನಿವರ್ತಿಷ್ಠೇ ತಮಹಂ ಭ್ರಾತರಂ ರಣೇ॥ ೧೦ ತಂ ತು ತಾರಾ ಪರಿಷ್ಠಜ್ಯ ವಾಲಿನಂ ಪ್ರಿಯವಾದಿನೀ

ಚಕಾರ ರುದತೀ ಮಂದಂ ದಕ್ಷಿಣಾ ಸಾ ಪ್ರದಕ್ಷಿಣಮ್‌ ೧೧ ತತಃ ಸ್ವಸ್ತ್ಯಯನಂ ಕೃತ್ವಾಮಂತ್ರವಿದ್ವಿಜಯೈಷಿಣೀ

ಅಂತಃಪುರಂ ಸಹ ಸ್ವೀಭಿಃ ಪ್ರವಿಷ್ಟಾಶೋಕಮೋಹಿತಾ॥ ೧೨ ಪ್ರವಿಷ್ಟಾಯಾಂ ತು ತಾರಾಯಾಂ ಸಹ ಸ್ತೀಭಿಃ ಸಮಾಲಯಮ್‌ ನಗರಾನ್ನಿರ್ಯಯಾೌ ಕ್ರುದ್ಧೋ ಮಹಾಸರ್ಪ ಇವ ಶ್ವಸನ್‌ ೧೩ ನಿಷತ್ತ ಮಹಾತೇಜಾ ವಾಲೀ ಪರಮರೋಷಣಃ। ಸರ್ವತಶ್ಚಾರಯನ್‌ ದೃಷ್ಟಿಂ ಶತ್ರುದರ್ಶನಕಾಂಕ್ಷಯಾ॥॥ ೧೪

ನನ್ನ ದರ್ಪೋದ್ಧತವಾದ ಪ್ರಹಾರವನ್ನು ದುರಾತ್ಮನು ಎಂದಿಗೂ ತಡೆದು ಕೊಳ್ಳಲಾರ. ತಾರೆ, (ಒಳ್ಳೆಯ ಮಾತನ್ನಾಡಿ) ಗೆಳತಿಯಾಗಿ ಸಹಾಯಮಾಡಿದೆ. ನನ್ನಲ್ಲಿ ಅನುರಾಗವನ್ನು ವ್ಯಕ್ತಪಡಿಸಿದೆ (೯). ಇನ್ನು ನೀನು ಹೊರಡು. ನನ್ನ ಪ್ರಾಣದಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಸ್ತ್ರೀಯರೊಂದಿಗೆ ನೀನು ಹಿಂದಿರುಗು. ತಮ್ಮನೆಂದುಕೊಳ್ಳುವ ಸುಗ್ರೀವನನ್ನು ಕಾಳಗದಲ್ಲಿ ಸೋಲಿಸಿ ಬರುತ್ತೇನೆ.'' ಎಂದು ಹೇಳಿದನು (೧೦). ಆಗ ದಾಕ್ಷಿಣ್ಯಸ್ವಭಾವದ ತಾರೆಯು ಒಳ್ಳೆಯದಾಗಲೆಂದು ನುಡಿಯುತ್ತ ವಾಲಿಯನ್ನು ಅಪ್ಪಿಕೊಂಡಳು. ಮೆಲ್ಲಗೆ ಅಳುತ್ತ ಅವನಿಗೆ ಪ್ರದಕ್ಷಿಣೆಮಾಡಿ ವಂದಿಸಿದಳು. ಗಂಡನಿಗೆ ವಿಜಯ ವಾಗಲೆಂದು ಹಾರೈಸಿ ಮಂತ್ರಜ್ಞಳಾದ ತಾರೆಯು ಮಂಗಳಾನುವಾಕವನ್ನು ಪಠಿಸಿದಳು. ಅನಂತರ ದುಃಖದಿಂದ ದಿಜ್ಬೂಢಳಾಗಿ ಇತರ ಸ್ತ್ರೀಯರೊಂದಿಗೆ ಅಂತಃಪುರಕ್ಕೆ ಹಿಂದಿರುಗಿದಳು (೧೧-೧೨). ಹೀಗೆ ತಾರೆಯು ಸ್ತ್ರೀಯರೊಂದಿಗೆ ತನ್ನ ಅರಮನೆಗೆ ಹೋಗಲು, ವಾಲಿಯು ಮಹಾಸರ್ಪದಂತೆ ಸಿಟ್ಟಿನಿಂದ ಭೋರ್ಗರೆಯುತ್ತ ನಗರದಿಂದ ಹೊರಬಂದನು. ಮಹಾ

ಸರ್ಗಃ ೧೬] ವಾಲಿ ಸಂಹಾರಃ ೧೨೩

ದದರ್ಶ ತತಃ ಶ್ರೀಮಾನ್‌ ಸುಗೀವಂ ಹೇಮಪಿಂಗಲಮ್‌ ।ಟ

ಸುಸಂವೀತಮವಷ್ಪಬ್ಬಂ ದೀಪ್ಯಮಾನಮಿವಾನಲಮ್‌ Il ೧೫ ತಂ ದೃಷ್ಟಾ ಮಹಾವೀರ್ಯಂ ಸುಗ್ರೀವಂ ಪರ್ಯವಸ್ಥಿತಮ್‌ ಗಾಢಂ ಪರಿದಧೇ ವಾಸೋ ವಾಲೀ ಪರಮರೋಷಣ: ೧೬

ಸವಾಲೀ ಗಾಢಸಂವೀತೋ ಮುಷ್ಠಿಮುದ್ಯಮ್ಯ ವೀರ್ಯವಾನ್‌ ಸುಗ್ರೀವಮೇವಾಭಿಮುಖೋ ಯಯೌ ಯೋದ್ಭುಂ ಕೃತಕ್ಷಣಃ॥ ೧೭ ಶ್ಲಿಷ್ಠಮುಪ್ಟಿಂ ಸಮುದ್ಯಮ್ಯ ಸಂರಬ್ಬತರಮಾಗತಃ।

ಸುಗ್ರೀವೋತಪಿ ತಮುದ್ದಿಶ್ಶ ವಾಲಿನಂ ಹೇಮಮಾಲಿನಮ್‌ ೧೮ ತಂ ವಾಲೀ ಕ್ರೋಧತಾಮ್ರಾಕ್ಷಃ ಸುಗ್ರೀವಂ ರಣಪಂಡಿತಮ್‌

ಆಪತರತಂ ಮಹಾವೇಗಮಿದಂ ವಚನಮಬ್ರವೀತ್‌ ೧೯ ಏಷ ಮುಪ್ಪಿರ್ಮಯಾ ಬದ್ದೋ ಗಾಢಃ ಸಂನಿಹಿತಾಂಗುಲಿಃ ಮಯಾ ವೇಗವಿಮುಕಸ್ಟೇ ಪ್ರಾಣಾನಾದಾಯ ಯಾಸ್ಯತಿ ॥॥ ೨೦

ತೇಜಸ್ವಿಯು ರೋಷದಿಂದ ಸಿಡಿದೆದ್ದು, ಶತ್ರುವಾದ ಸುಗ್ರೀವನು ಎಲ್ಲಿರುವನೆಂದು ಸುತ್ತಲೂ ಕಣ್ಣುಹೊರಳಿಸಿ ನೋಡಿದನು (೧೩-೧೪). ಬಂಗಾರದಂತೆ ಪಿಂಗಳ ವರ್ಣನಾದ ಸುಗ್ರೀವನು ದಟ್ಟಿಯನ್ನು ಬಿಗಿದು ಹೋರಾಡಲು ಸಜ್ಜಾಗಿ, ಬೆಂಕಿಯಂತೆ ಬೆಳಗುತ್ತನಿಂತಿರುವುದು ವಾಲಿಗೆ ಗೋಚರಿಸಿತು (೧೫). ವೀರನಾದ ಸುಗ್ರೀವನು ಯುದ್ಧ ಸನ್ನದ್ಧನಾಗಿರುವುದನ್ನು ಕಂಡು ವಾಲಿಯು ಕೋಪದಿಂದ ಉರಿದೆದ್ದೆನು. ವೀರನು ದಟ್ಟಿಯನ್ನು ಬಲವಾಗಿ ಬಿಗಿದುಕಟ್ಟಿ ಮುಷ್ಟಿಯನ್ನೆತ್ತಿ ಕೊಂಡು, ಸುಗ್ರೀವನಿಗೆ ಎದುರಾಗಿ ಉತ್ಸಾಹದಿಂದ ನುಗ್ಗಿಬಂದನು (೧೬-೧೭). ಆಗ ಸುಗ್ರೀವನೂ ಸಹ ಬಿಗಿಮುಷ್ಟಿಯನ್ನೆತ್ತಿ ಹಿಡಿದು, ಸುವರ್ಣಮಾಲಿಕೆಯನ್ನು ಧರಿಸಿದ್ದ ವಾಲಿಯ ಕಡೆಗೆ ರೋಷಾವೇಷದಿಂದ ಧಾವಿಸಿದನು. ಕೋಪದಿಂದ ಕೆಂಗಣ್ಣನಾದ ವಾಲಿಯು, ರಭಸದಿಂದ ಏರಿಬರುತ್ತಿದ್ದ ರಣಪಂಡಿತನಾದ ಸುಗ್ರೀವನನ್ನು ನೋಡಿ "“ಎಲೈ, ಇಲ್ಲಿ ನೋಡು | ಬೆರಳನ್ನು ಒತ್ತರಿಸಿ ಹಿಡಿದ ಬಿಗಿಮುಷ್ಟಿಯು ವೇಗದಿಂದ ಬಡಿದು ನಿನ್ನ ಪ್ರಾಣವನ್ನು ಸೆಳೆದೊಯ್ಯುವುದು'' ಎಂದನು (೧೮-೨೦).

೧೨೪ ಕಿಷ್ಕಿಂಧಾಕಾಂಡಃ [ಸರ್ಗಃ ೧೬

ಏವಮುಕಸ್ತುಸುಗ್ರೀವಃ ಕ್ರುದ್ಬೋ ವಾಲಿನಮಬ್ರವೀತ್‌ ತವ ಚೈವ. ಹರನ್‌ ಬಾಗಾನ್‌ ಮುಷಿ 1 ಪತತು "ಮೂರ್ಧನಿ || ೨೧

ತಾಡಿತಸೇನ ಸಂಕ್ರುದ್ಧಸಮಭಿಕ್ರಮ್ಯ ಸೇಗತ: |

ಅಭವಚ್ಛೋಣಿತೋದ್ಧಾರೀ ಸೋತ್ರೀಡ ಇವ ಪರ್ವತಃ॥ ಶಿ ಸುಗ್ರೀವೇಣ ತು ನಿಃಶಂಕಂ ಸಾಲಮುತಾಟಿ ತೇಜಸಾ। ಗಾತ್ರೇಷ್ಟಭಿಹತೋ ವಾಲೀ ವಜ್ರೆ ೇಣೇವ ಮಹಾಗಿರಿಃ ೨೩ ಸತುವಾಲೀ ಪ್ರಚಲಿತಃ ಸಾಲತಾಡನವಿಹ್ಪಲಃ | ಗುರುಭಾರಸಮಾಕ್ರಾಂತಾ ನೌ; ಸಸಾರ್ಥೇವ ಸಾಗರೇ ೨೪

ತೌ ಭೀಮಬಲವಿಕ್ರಾಂತೌ ಸುಪರ್ಣಸಮವೇಗಿನ್‌ ಪ್ರವದ್‌ೌ ಘೋರವಪುಷ್‌ ಚಂದ್ರಸೂರ್ಯಾವಿವಾಂಬರೇ॥ ೨೫

ಪ್ರ © ಪರಸರಮಮಿತ್ರಘ್ಗೌಾ ಛಿದ್ರಾನ್ನೇಷಣತತರ್‌ ತತೋವರ್ಧತ ವಾಲೀತು ಬಲವೀರ್ಯಸಮನಿತಃ | ೨೬

ಸಿಟ್ಟಿನಿಂದ ಸಿಡಿದೆದ್ದ ಸುಗ್ರೀವನು ""ಎಲೈ, ನಿನ್ನ ಪ್ರಾಣವನ್ನೇ ಸೆಳೆದೊಯ್ಯುವ ಮುಷ್ಟಿಯು ನಿನ್ನ ತಲೆಯಮೇಲೆರಗಲಿ!'' ಎನ್ನುವಷ್ಟರಲ್ಲಿ ವಾಲಿಯು ವೇಗ ದಿಂದ ಸುಗ್ರೀವನನ್ನು ಬಲವಾಗಿ ಅಪ್ಪಳಿಸಿದನು. (ಜರ್ರುರಿತವಾದ) ಸುಗ್ರೀವನ ಮೈಯಿಂದ ರುಲ್ಲೆಂದು ರಕ್ತವು ಚಿಮ್ಮಿತು. ಚಿಮ್ಮುವ ಚಿಲುಮೆಗಳಿಂದೊಪ್ಪುವ ಬೆಟ್ಟದಂತೆ ಸುಗ್ರೀವನು ಕಂಗೊಳಿಸಿದನು (೨೧-೨೨). ಅವನು ಹಿಂದುಮುಂದೆ ನೋಡದೆ ಸಾಲವೃಕ್ಷವೊಂದನ್ನು ಕಿತ್ತು ಸಿಡಿಲು ಮಹಾಪರ್ವತವನ್ನಪ್ಪಳಿಸುವಂತೆ, ವೃಕ್ಷದಿಂದ ವಾಲಿಯನ್ನು ಬಡಿದನು. ಹೊಡೆತಕ್ಕೆ ವಾಲಿಯು ತತ್ತರಿಸಿದನು; ಹೊರಲಾರದ ಹೊರೆಯನ್ನು ಹೊತ್ತ ಹಡಗು ಕಡಲಿನಲ್ಲಿ ಹೊಯ್ದಾಡುವಂತೆ ಅತ್ತಿತ್ತ ತೂಗಾಡಿದನು (೨೩-೨೪). ವಾಲಿಸುಗ್ರೀವರಿಬ್ಬರೂ ಭೀಮಬಲ ಸಂಪನ್ನರು. ಗರುಡನಿಗೆ ಸಮಾನವಾದ ವೇಗವುಳ್ಳ ಪರಾಕ್ರಮಿಗಳು. ಘೋರ ಶರೀರಧಾರಿಗಳಾಗಿ ಒಬ್ಬರಿಗೊಬ್ಬರು ಹೊಡೆಯುತ್ತ ವೀರಾವೇಶದಿಂದ ಉಬ್ಬತೊಡಗಿದರು. ಗಗನ ತಳದಲ್ಲಿ ಹೋರಾಡುವ ಸೂರ್ಯಚಂದ್ರರೋ ಎಂಬಂತೆ ಕಂಗೊಳಿಸಿದರು (೨೫). ತಮ್ಮಶತ್ರುವನ್ನು ಹೊಡೆದುರುಳಿಸಬೇಕೆಂದು ಹೊಂಚುಹಾಕುತ್ತ ಹೋರಾಡಿದರು. ದ್ವಂದ್ವಯುದ್ಧದಲ್ಲಿ ಮಹಾ

ಸರ್ಗಃ ೧೬] ವಾಲಿ ಸಂಹಾರಃ ೧೨೫

ಸೂರ್ಯಪುತ್ರೋ ಮಹಾವೀರ್ಯಃ ಸುಗ್ರೀವಃ ಪರಿಹೀಯತೇ

ವಾಲಿನಾ ಭಗ್ನದರ್ಪಸ್ತುಸುಗ್ರೀವೋ ಮಂದವಿಕ್ರಮಃ॥ ೨೭ ವಾಲಿನಂ ಪ್ರತಿ ಸಾಮರ್ಸೊೋ ದರ್ಶಯಾಮಾಸ ಲಾಘವಮ್‌ ವ್ಯಕ್ಷೈಃ ಸಶಾಖೈಃ ಸಶಿಖೈರ್ವಜ್ರಕೋಟಿನಿಭೈರ್ನಖೈಃ॥ ೨೮

ಮುಷ್ಟಿಭಿರ್ಜಾನುಭಿಃ ಪದ್ಬಿರ್ಬಾಹುಭಿಶ್ಚ ಪುನಃ ಪುನಃ ತಯೋರ್ಯುದ್ಧಮಭೂದ್ಭೋರಂ ವೃತ್ರವಾಸವಯೋರಿವ Ww ೨೯ ತೌ ಶೋಣಿತಾಕ್ಟೌ ಯುಧ್ಯೇತಾಂ ವಾನರ್‌ ವನಚಾರಿಣ್‌

ಮೇಘಾವಿವ ಮಹಾಶಟ್ಟೈಸ್ಪರ್ಜಯಾನ್‌ ಪರಸ್ಪರಮ್‌ ೩೦ ಹೀಯಮಾನಮಥಾಪಶ್ಯತ್‌ ಸುಗ್ರೀವಂ ವಾನರೇಶ್ವರಮ್‌ | ಪ್ರೇಕ್ಷಮಾಣಂ ದಿಶಶ್ಲೆವ ರಾಘವಂ ಮುಹುರ್ಮಹುಃ॥ ೩೧

ಪರಾಕ್ರಮಿಯಾದ ವಾಲಿಯ ಕೈ ಮೇಲಾಗತೊಡಗಿತು. ಸೂರ್ಯಪುತ್ರನಾದ ಸುಗ್ರೀವನು ಮಹಾವೀರನಾದರೂ ಅವನ ಬಲವು ಕುಗ್ಗತೊಡಗಿತು. ವಾಲಿಯಿಂದ ಅವನ ದರ್ಪವು ಭಗ್ಗವಾಯಿತು. ಪರಾಕ್ರಮವು ತಗ್ಗಿತು (೨೬-೨೭). ಆದರೂ ವಾಲಿಯ ಮೇಲಿದ್ದಕೋಪದಿಂದ ಅವನು ತನ್ನಕೈಚಳಕವನ್ನುತೋರಿಸುತ್ತಿದ್ದನು. ಅವರಿಬ್ಬರೂ ಮರಗಳಿಂದ ಒಬ್ಬರನ್ನೊಬ್ಬರು ಬಡಿಯುತ್ತ ಕೊಂಬೆಗಳಿಂದ ಹೊಡೆಯುತ್ತ ಅವುಗಳ ತುದಿಗಳಿಂದ ತಿವಿಯುತ್ತ ವಜ್ರಾಯುಧದ ಅಲಗಿನಂತಿದ್ದ ಉಗುರುಗಳಿಂದ ಪರಚುತ್ತ ಮುಷ್ಟಿಗಳಿಂದ ಗುದ್ದುತ್ತ ಮೊಳಕಾಲುಗಳಿಂದ ತೊಡರುಗಾಲಿಕ್ಕುತ್ತ ಕಾಲುಗಳಿಂದ ಒದೆಯುತ್ತ ಭುಜಗಳಿಂದ ಅಮುಕುತ್ತ ಹೋರಾಡಿದರು. ವೃತ್ರಾಸುರನಿಗೂ ದೇವೇಂದ್ರನಿಗೂ ನಡೆದ ಯುದ್ಧದಂತೆ ಅವರ ದ್ವಂದ್ವಯುದ್ಧವು ಘೋರವಾಗಿತ್ತು (೨೮-೨೯). ವನಚಾರಿಗಳಾದ ವಾನರೇಂದ್ರರ ಮೈಯಲ್ಲವೂ ರಕಸಿಕವಾಯಿತು. ಗುಡುಗುವ ಮಹಾ ಮೇಘಗಳಂತೆ ಅಬ್ಬರಿಸಿ ಹೆದೆರಿಸುತ್ತ ಒಬ್ಬರನ್ನೊಬ್ಬರು ಹೊಯ್ದಾಡಿದರು. ವಾನರೇಶ್ವರನಾದ ಸುಗ್ರೀವನು ಕ್ರಮವಾಗಿ ಶಕಿಗುಂದುತಿದ್ದನು. ಅವನು ಸುತ್ತಲೂ ದಿಕ್ಕುಗಳನ್ನುನೋಡುತ್ತ (ಮರೆಯಲ್ಲಿದ್ದ ರಾಘವನ ಕಡೆಗೆ ಮತ್ತೆ ಮತ್ತೆ ನೋಡಲಾರಂಭಿಸಿದನು. ಇದೆಲ್ಲವನ್ನೂ ಶ್ರೀರಾಮನು ಗಮನಿಸಿದನು (೩೦-೩೧).

6

೧೨೬ ಕಿಷ್ಕಿಂಧಾಕಾಂಡಃ [ಸರ್ಗಃ ೧೬

ತತೋ ರಾಮೋ ಮಹಾತೇಜಾ ಆರ್ತಂ ದೃಷ್ಟ್ವಾ ಹರೀಶ್ಚರಮ್‌ [

ಶರಂ ವೀಕ್ಷತೇ ವೀರೋ ವಾಲಿನೋ ವಧಕಾರಣಾತ್‌ ೩೨ ತತೋ ಧನುಷಿ ಸಂಧಾಯ ಶರಮಾಶೀವಿಷೋಪಮಮ್‌ ಪೂರಯಾಮಾಸ ತಚ್ಚಾಪಂ ಕಾಲಚಕ್ರಮಿವಾಂತಕಃ ೩೩ ತಸ್ಯ ಜ್ಯಾತಲಘೋಷೇಣ ತ್ರಸಾಃ ಪತ್ರರಥೇಶ್ರಧಾಃ | ಪ್ರದುದ್ರುವುರ್ಮಗಾಶ್ಸೈವ ಯುಗಾಂತ ಇವ ಮೋಹಿತಾಃ ೩೪ ಮುಕಸ್ತುವಜ್ರನಿರ್ಫೋಷಃ ಪ್ರದೀಪಾಶನಿಸಂನಿಭಃ।

ರಾಘವೇಣ ಮಹಾಬಾಣೋ ವಾಲಿವಕ್ಷಸಿ ಪಾತಿತಃ ೩೫ ತತಸೇನ ಮಹಾತೇಜಾ ವೀರ್ಯೋತ್ರಿಕ; ಕಪೀಶ್ರಧಃ।

ವೇಗೇನಾಭಿ ಹತೋ ವಾಲೀ ನಿಪಪಾತ ಮಹೀತಲೇ

ಸುಗ್ರೀವನು ಕಂಗೆಟ್ಟಿರುವುದನ್ನು ಶ್ರೀರಾಮನು ಕಂಡನು. ಇನ್ನು ವಾಲಿಯನ್ನು ವಧಿಸಬೇಕೆಂದು ನಿಶ್ಚಯಿಸಿ, ಮಹಾತೇಜಸ್ವಿಯಾದ ವೀರನು ತನ್ನ ದಿವ್ಯಾಸ್ತ್ರ ವನ್ನೊಮ್ಮೆ ವೀಕ್ಷಿಸಿದನು. ಸರ್ಪದಂತೆ ಘೋರವಾದ ಬಾಣವನ್ನು ಕೂಡಲೆ ಧನುಸಿಗೆ ಹೂಡಿ, ಯಮನು ಕಾಲಚಕ್ರವನ್ನೆಳೆಯುವಂತೆ, ಧನಸನ್ನು (ಆಕರ್ಣಾಂತವಾಗಿ) ಸೆಳೆದನು (೩೨-೩೩). ಮರುಕ್ಷಣದಲ್ಲಿ ಹೆದೆಯಿಂದ ರುಂಯ್‌ ಎಂದು ರುಂಕಾರವು ಮೊಳಗಿತು. ಅದನ್ನು ಕೇಳಿ ಪ್ರಳಯಕಾಲದಲ್ಲಿ ದಿಕ್ಕುಗೆಟ್ಟಂತೆ ಹಕ್ಕಿಗಳು ಹಾರಾಡಿದವು. ಕಾಡುಮೃಗಗಳು ಚಲ್ಲಾಪಿಲ್ಲಿಯಾಗಿ ಓಡಿದವು (೩೪). ಶ್ರೀರಾಮನು ಹೊಡೆದ ಮಹಾಶರವು ಸಿಡಿಲಿನಂತೆ ಮೊರೆಯುತ್ತ ಮಿಂಚಿನಂತೆ* ಮಿಂಚುತ್ತ, ವಾಲಿಯ ಎದೆಯಲ್ಲಿ ನುಗ್ಗಿತು. ಕಪೀಶ್ಚರನಾದ ವಾಲಿಯು ಮಹಾತೇಜಸ್ವಿಯೂ ವೀರ್ಯೋದ್ಧತನೂ ಆಗಿದ್ದರೂ ವೇಗದಿಂದ ನುಗ್ಗಿದ ಬಾಣದ ಆಘಾತಕ್ಕೆ ನೆಲದಮೇಲುರುಳಿದನು (೩೫-೩೬).

೫: ಅಶನಿ : ವಜ್ರಾಯುಧ ; ಮಿಂಚು. "ಆಶನಿಸ್ತು ದ್ವಯೋರ್ವಜ್ರೀ ಸೌದಾ-ಮಿನ್ಯಾಂ' ಇತಿ ದರ್ಪಣಃ

ಸರ್ಗಃ ೧೬] ವಾಲಿ ಸಂಹಾರಾಃ

ಅಂದ್ರಧ್ದಜ ಇವೋದ್ಧೂತಃ ಪೌರ್ಣಮಾಸ್ಕಾಂ ಮಹೀತಲೇ | ಆಶ್ರಯುಕಮಯೇ ಮಾಸಿ ಗತಶ್ರೀಕೋ ವಿಚೇತನಃ

ನರೋತಮಃ ಕಾಲಯುಗಾಂತಕೋಪಮಂ ಶರೋತಮಂ ಕಾಂಚನರೂಪ್ಯಭೂಷಿತಮ್‌ ಸಸರ್ಜ ದೀಪಂ ತಮಮಿತ್ರಮರ್ದನಂ ಸಧೂಮಮಗ್ಗಿಂ ಮುಖತೋ ಯಥಾ ಹರಃ ಅಥೋಕ್ಷಿತಃ ಶೋಣಿತತೋಯವಿಸ್ರವೈಃ ಸುಪುಷ್ಟಿತಾಶೋಕ ಅವಾನಿಲೋದ್ದತಃ ವಿಚೇತನೋ ವಾಸವಸೂನುರಾಹವೇ ಎಭ್ರಂಶಿತೇಂದ್ರಧ್ವಜವತ್‌ ಕ್ಷಿತಿಂ ಗತಃ॥

ಇತಿ ಶ್ರೀಮದ್ರಾಮಾಯಾಣೇ ಕಿಷ್ಠಿಂಧಾಕಾಂಡೇ ಷೋಡಶಃ ಸರ್ಗಃ

೩೭

೩೮

೩೯

ಅಶ್ವಯುಜಮಾಸದ ಹುಣ್ಣಿಮೆಯಲ್ಲಿ ಸ್ಮಾಪಿತವಾದ ಇಂದ್ರಧ್ವಜವು (ಉತ್ಸವಾಂತದಲ್ಲಿ) ಉರುಳಿಸಲ್ಪಡುವಂತೆ, ವಾಲಿಯು ತೇಜೋಹೀನನಾಗಿ ದೊಪ್ಪನೆ ಎಚ್ಚರದಪ್ಪಿ ಬಿದ್ದನು (೩೭). ಹೀಗೆ ಪುರುಷೋತ್ತಮನಾದ ಶ್ರೀರಾಮನು ಪ್ರಳಯಕಾಲದ ಮೃತ್ಯುವಿನಂತಿದ್ದ ಘೋರಾಸ್ತವನ್ನು ವಾಲಿಯ ಮೇಲೆ ಪ್ರಯೋಗಿಸಿದನು. ಸುವರ್ಣರಜತಭೂಷಿತವೂ ಶತ್ರುಘಾತಿಯೂ ಆದ ಮಹಾಸ್ಪವು ಪ್ರಜ್ವಲಿಸುತ್ತ ಸಿಡಿದಾಗ, ಪ್ರಳಯಕಾಲದ ರುದ್ರನ ಮುಖದಿಂದ ಹೊಗೆಯುಗುಳುತ್ತ ಹೊರಹೊಮ್ಮುವ ಕಾಲಾಗ್ನಿಯಂತೆ ಗೋಚರಿಸಿತು (೩೮). ಇಂದ್ರಪುತ್ರನಾದ ವಾಲಿಯು ನೆತ್ತರಿನ ಪ್ರವಾಹದಿಂದ ಒದ್ದೆಯಾಗಿ ನೆಲದಮೇಲೆ ಉರುಳಿದನು. ಅವನು ಬಿರುಗಾಳಿಯಿಂದ ಬಿದ್ದ ರಕಪುಷ್ಠಮಯವಾದ ಅಶೋಕವೃಕ್ಷದಂತೆಯೂ (ಉತ್ತವಾಂತದಲ್ಲಿ) ಬೀಳಿಸಿದ ಇಂದ್ರದ್ವಜದಂತೆಯೂ

ಕಂಗೊಳಿಸಿದನು (೩೯).

ಇಲ್ಲಿಗೆ ಶ್ರೀಮದ್ರಾಮಾಯಾಣದ ಕಿಷ್ಠಿಂಧಾಕಾಂಡದಲ್ಲಿಹದಿನಾರನೆಯಸರ್ಗ

೧೨೮

ಸಪದಶಃ ಸರ್ಗಃ ರಾಮಾಧಿಕ್ಷೇಪಃ ತತಃ ಶರೇಣಾಭಿಹತೋ ರಾಮೇಣ ರಣಕರ್ಕಶಃ। ಪಪಾತ ಸಹಸಾ ವಾಲೀ ನಿಕ್ಕತ್ತ ಅವ ಪಾದಪಃ॥

ಭೂಮ್‌ ನ್ಯಸ್ತಸರ್ವಾಂಗಸಪ್ತಕಾಂಚನಭೂಷಣಃ। ಅಪತದ್ದೇವರಾಜಸ್ಯ ಮುಕದಶ್ಮಿರಿವ ಧಜಃ Il ತಸ್ನಿನಿಪತಿತೇ ಭೂಮ್‌ ವಾನರಾಣಾಂ ಗಣೇಶ್ವರೇ।

ನಷ್ಟಚಂದ್ರಮಿವ ವ್ಯೋಮ ವ್ಯರಾಜತ ಮೇದಿನೀ॥

ಭೂಮ್‌ ನಿಪತಿತಸ್ಕಾಪಿ ತಸ್ಕ ದೇಹಂ ಮಹಾತ್ಮನಃ ಶ್ರೀರ್ಜಹಾತಿನ ಪ್ರಾಣಾ ನತೇಜೋ ಪರಾಕ್ರಮಃ॥

ಶಕ್ರದತ್ತಾವರಾ ಮಾಲಾ ಕಾಂಚನೀ ವಜ್ರಭೂಷಿತಾ ದಧಾರ ಹರಿಮುಖ್ಯಸ್ಯ ಪ್ರಾಣಾಂಸೇಜಃ ಶ್ರಿಯಂ ಸಾ॥

ಸರ್ಗ ೧೭

ವಾಲಿಯು ಶ್ರೀರಾಮನನ್ನುನಿಂದಿಸುವುದು.

ರಣಧೀರನಾದ ವಾಲಿಯು ಶ್ರೀರಾಮನ ಬಾಣದಿಂದ ಅಭಿಹತನಾಗಿ, ಬುಡ ಕಡಿದ ಮರದಂತೆ ದೊಪ್ಪನೆ ನೆಲದಮೇಲೆ ಬಿದ್ದನು. ಕನಕಾಭರಣ ಭೂಷಿತನಾದ ವಾಲಿಯು, ಹಗ್ಗವನ್ನು ಸಡಿಲಿಸಿದ ಇಂದ್ರಧ್ವಜದಂತೆ, ಭೂಮಿಯಲ್ಲಿ ಕೈಕಾಲು ಗಳನ್ನು ಚಾಚಿಕೊಂಡು ಬಿದ್ದನು (೧-೨). ವಾನರೇಂದ್ರನು ಭೂಮಿ ಯಲ್ಲುರುಳಲು, ಚಂದ್ರನಿಲ್ಲದ ಆಕಾಶದಂತೆ, ವನಪ್ರದೇಶವು ಕಾಂತಿಹೀನ ವಾಯಿತು. ಮಹಾತ್ಮನು ಭೂಮಿಯಲ್ಲಿಬಿದ್ದಿದ್ದರೂ ಅವನ ದೇಹದ ಕಾಂತಿಯು ಕಂದಲಿಲ್ಲ, ಪ್ರಾಣವು ಹೋಗಲಿಲ್ಲ, ತೇಜಸ್ಸುತಗ್ಗಲಿಲ್ಲ ಪರಾಕ್ರಮವು ಕುಂದಲಿಲ್ಲ (೩-೪). ಇಂದ್ರನು ಕೊಟ್ಟಿದ್ದ ವಜ್ರಾಲಂಕೃತವಾದ ಸುವರ್ಣಮಾಲೆಯು ಕಪೀಶ್ವರನ ಪ್ರಾಣವನ್ನೂ ತೇಜಸ್ಸನ್ನೂ ಕಾಂತಿಯನ್ನೂ ದೇಹದಲ್ಲಿ ಉಳಿಸಿತ್ತು

ಸರ್ಗಃ ೧೭] ರಾಮಾಧಿಕ್ಷೇಪಃ ೧೨೯

ಸತಯಾ ಮಾಲಯಾ ವೀರೋ ಹೈಮಯಾ ಹರಿಯೂಥಪಃ।

ಸಂಧ್ಯಾನುಗತಪರ್ಯಂತಃ ಪಯೋಧರ ಇವಾಭವತ್‌ ತಸ್ಯ ಮಾಲಾ ದೇಹಶ್ಚ ಮರ್ಮಘಾತೀ ಯಃ ಶರಃ। ತ್ರಿಧೇವ ರಚಿತಾ ಲಕ್ಷ್ಮೀಃ ಪತಿತಾಸ್ಯಾಪಿ ಶೋಭತೇ

ತದಸ್ಪೂ ತಸ್ಯ ವೀರಸ್ಕ ಸರ್ಗಮಾರ್ಗಪ್ರಭಾವನಮ್‌ ರಾಮಬಾಣಾಸನೋತ್ಸಿಪಮಾವಹತ್‌ ಪರಮಾಂ ಗತಿಮ್‌

ತಂ ತಥಾ ಪತಿತಂ ಸಂಖ್ಯೇ ಗತಾರ್ಚಿಷಮಿವಾನಲಮ್‌

ಬಹುಮಾನ್ಯ ತಂ ವೀರಂ ವೀಕ್ಷಮಾಣಂ ಶನೈರಿವ || ಯಯಾತಿಮಿವ ಪುಣ್ಯಾಂತೇ ದೇವಲೋಕಾತ್‌ ಪರಿಚ್ಛುತಮ್‌ ಆದಿತ್ಯಮಿವ ಕಾಲೇನ ಯುಗಾಂತೇ ಭುವಿ ಪಾತಿತಮ್‌ ೧೦ ಮಹೇಂದ್ರಮಿವ ದುರ್ಧರ್ಷಂ ಮಹೇಂದ್ರಮಿವ ದುಃಹಹಮ್‌ ಮಹೇಂದ್ರಪುತ್ರಂ ಪತಿತಂ ವಾಲಿನಂ ಹೇಮಮಾಲಿನಮ್‌ ೧೧

ಸುವರ್ಣಮಾಲೆಯಿಂದ ಭೂಷಿತನಾದ ವಾಲಿಯು, ಸಂಧ್ಯಾರಾಗದಿಂದ ಸುತ್ತಲೂ ಶೋಭಿತವಾದ ಮೇಘದಂತೆ ಕಂಗೊಳಿಸುತ್ತಿದ್ದನು (೫-೬).

ಅಭಿಹತನಾಗಿ ಬಿದ್ದಿದ್ದರೂ ವಾಲಿಯ ತೇಜಸ್ಸು- ಅವನ ದೇಹ, “ಸುವರ್ಣಮಾಲೆ,

ಮರ್ಮಘಾತಿಯಾದ ರಾಮಾಸ್ತ್ರ ಹೀಗೆ "ಮೂರು ಪ್ರಕಾರವಾಗಿ ಮುಪ್ಪರಿ ಗೊಂಡಂತೆ ಕಾಣಿಸುತ್ತಿತ್ತು(೭ )- 'ಶ್ರೀರಾಮನ ಭೋ ಊಬ್‌ ಚಿಮ್ಮಿಹೋದ ಅಸ್ಪವು ವೀರನಾದ ವಾಲಿಗೆ ಸ್ವರ್ಗಮಾರ್ಗವನ್ನು ತೋರಿಸಿ ಉತ್ಕೃಷ್ಟವಾದ ಸದ್ಗತಿಯನ್ನುಂಟುಮಾಡಿತು. ಜ್ವಾಲೆಯಡಗಿದ ಅಗ್ನಿಯಂತೆ ರಣರಂಗದಲ್ಲಿಬಿದ್ದ ವಾಲಿಯು ಮೆಲ್ಲಗೆ ಕಣ್ಣುಬಿಟ್ಟುಸುತ್ತಲೂ ನೋಡತೊಡಗಿದನು. ಶ್ರೀರಾಮನಿಗೆ ವೀರನ ವಿಷಯದಲ್ಲಿಆದರ ಉಂಟಾಯಿತು (೮-೯). ವಾಲಿಯಾದರೋ ಪುಣ್ಯಫಲವು ತೀರಿದಮೇಲೆ ದೇವಲೋಕದಿಂದ ಧರೆಗುರುಳಿದ ಯಯಾತಿ ಯಂತೆಯೂ ಪ್ರಳಯಕಾಲದಲ್ಲಿಕಾಲವಶದಿಂದ ನೆಲಕ್ಕೆ ಬಿದ್ದ ಸೂರ್ಯ ನಂತೆಯೂ ವಿರಾಜಿಸುತ್ತಿದ್ದನು (೧೦). ಹೇಮಮಾಲಿಯಾದ ವಾಲಿಯು

6*

೧೩೦ ಕಿಷ್ಕಿಂಧಾಕಾಂಡಃ [ಸರ್ಗಃ ೧೭

ವ್ಯೂಢೋರಸ್ವಂ ಮಹಾಬಾಹುಂ ದೀಪಾಸ್ಕಂ ಹರಿಲೋಚನಮ್‌ ಲಕ್ಷ್ಮಣಾನುಗತೋ ರಾಮೋ ದದರ್ಶೊೋಪಸಸರ್ಪ ೧೨

ತಂ ದೃಷ್ಟಾರಾಘವಂ ವಾಲೀ ಲಕ್ಷ್ಮಣಂ ಮಹಾಬಲಮ್‌ ಅಬ್ರವೀತ್‌ ಪ್ರಶ್ರಿತಂ ವಾಕ್ಕಂ ಪರುಷಂ ಧರ್ಮಸಂಹಿತಮ್‌ ೧೩

ತ್ವಂ ನರಾಧಿಪತೇಃ ಪುತ್ರಃ ಪ್ರಥಿತಃ ಪ್ರಿಯದರ್ಶನಃ

ಕುಲೀನಃ ಸತ್ತ್ವ್ಯಸಂಪನ್ನಸೇಜಸ್ಸೀ ಚರಿತವ್ರತಃ॥ ೧೪ ಪರಾಜ್ಠುಖವಧಂ ಕೃಶ್ವಾಕೋ ನು ಪ್ರಾಪಸ್ತ್ವಯಾ ಗುಣಃ ಯದಹಂ ಯುದ್ದಸಂರಬ್ದಃ ಶರೇಣೋರಸಿ ತಾಡಿತಃ॥ ೧೫

ರಾಮಃ ಕರುಣವೇದೀ ಪ್ರಜಾನಾಂ ಚೆ ಹಿತೇ ರತಃ। ಸಾನುಕ್ರೋಶೋ ಮಹೋತ್ಪಾಹಃ ಸಮಯಜ್ಞೋ ದೃಢವ್ರತಃ॥ ೧೬

ಮಹೇಂದ್ರನ ತನಯ. ಮಹೇಂದ್ರನಂತೆ ಪರಾಕ್ರಮಿ. ಮಹೇಂದ್ರಪವರ್ತತದಂತೆ ದುರ್ಧರ್ಷ. ವಿಸ್ತಾರವಾದ ಎದೆಕಟ್ಟುಳ್ಳವನು. ದೀರ್ಫಬಾಹು. ತೇಜಸ್ವಿಯಾದ ಮುಖವುಳ್ಳವನು. ಪಿಂಗಳಾಕ್ಷ ಶ್ರೀರಾಮನು ವಾಲಿಯನ್ನು ನೋಡಿ ಲಕ್ಷ್ಮಣನೊಡನೆ ಆದರಪೂರ್ವಕವಾಗಿ ಸಮೀಪಕ್ಕೆ ಬಂದನು (೧೧-೧೨). ವಾಲಿಗೆ ಬಲಾಢ್ಯರಾದ ಶ್ರೀರಾಮಲಕ್ಷ್ಮಣರು ಗೋಚರಿಸಿದರು. ಅವನು ವಿನಯದಿಂದಲೇ ಧರ್ಮವನ್ನುಮುಂದಿಟ್ಟುಚುಚ್ಚುಮಾತುಗಳನ್ನಾತೊಡಗಿದನು: ""ಎಲ್ಫೆ ರಾಮ, ನೀನು ರಾಜಕುಮಾರನಾಗಿ ಜನಿಸಿ ಕೀರ್ತಿಶಾಲಿಯಾಗಿದ್ದೀಯೆ. ರೂಪಸಂಪನ್ನ ನಾಗಿದ್ದೀಯೆ. ಉತ್ತಮ ಕುಲದಲ್ಲಿ ಹುಟ್ಟಿ ಸತ್ತ್ವಶಾಲಿಯೆನಿಸಿದ್ದೀಯೆ. ತೇಜಸ್ವಿ ಯಾಗಿದ್ದೀಯೆ. ನಾನಾವ್ರತಗಳನ್ನಾಚರಿಸಿದ್ದೀಯೆ (೧೩-೧೪). ಇಂಥ ನೀನು, ನಿನ್ನೊಡನೆ ಯುದ್ಧಕ್ಕೆ ಬಾರದವನನ್ನುವಧಿಸಿದೆಯಲ್ಲ, ನಿನಗೆ ಬಂದ ಭಾಗ್ಯವೇನು? ಬೇರೊಬ್ಬನೊಡನೆ ನಾನು ಯುದ್ಧದಲ್ಲಿ ತಲ್ಲೀನನಾಗಿರುವಾಗ ನನ್ನ ಎದೆಗೆ ಬಾಣವನ್ನು ಪ್ರಯೋಗಿಸಿದೆಯಲ್ಲವೆ | (೧೫). "ರಾಮನೆಂದರೆ ಕಾರುಣ್ಯ ಮೂರ್ತಿ, ಪ್ರಜಾಹಿತನಿರತ, ಕನಿಕರವುಳ್ಳವನು, ಉತ್ಸಾಹ ಶಾಲಿ, ಸದಾಚಾರವನ್ನು ಬಲ್ಲವನು, ವ್ರತನಿಷ್ಠ' - ಎಂದು ಸಕಲರೂ ಜಗತ್ತಿನಲ್ಲಿನಿನ್ನ ಕೀರ್ತಿಯನ್ನು ಹಾಡಿ ಹೊಗಳುತ್ತಿದ್ದಾರೆ! (೧೬).

ಸರ್ಗಃ ೧೭] ರುಮಾಧಿಕ್ಷೇಪಃ ೧೩೧

ಇತಿ ತೇ ಸರ್ವಭೂತಾನಿ ಕಥಯಂತಿ ಯಶೋ ಭುವಿ!

ದಮಃ ಶಮಃ ಕ್ಷಮಾ ಧರ್ಮೋ ಧೃತಿಃ ಸತ್ಯಂ ಪರಾಕ್ರಮಃ ೧೭ ಪಾರ್ಥಿವಾನಾಂ ಗುಣಾ ರಾಜನ್‌ ದಂಡಶ್ಚಾಪ್ಯಪರಾಧಿಷು

ತಾನ್‌ ಗುಣಾನ್‌ಸಂಪ್ರಧಾರ್ಯಾಹಮಗ್ಯಂ ಚಾಭಿಜನಂ ತವ॥ ೧೮

ತಾರಯಾ ಪ್ರತಿಷಿದ್ದೋತಪಿ ಸುಗ್ರೀವೇಣ ಸಮಾಗತಃ।

ಮಾಮನ್ಯೇನ ಸಂರಬ್ಬಂ ಪ್ರಮತ್ತಂ ಯೋದ್ಭುಮರ್ಹತಿ॥ ೧೯ ಆತಿ ಮೇ ಬುದ್ದಿರುತನ್ನಾ ಬಭೂವಾದರ್ಶನೇ ತವ।

ನತ್ವಾಂ ವಿನಿಹತಾತ್ಗಾನಂ ಧರ್ಮದಧ್ವಜಮಧಾರ್ಮಿಕಮ್‌ ೨೦ ಜಾನೇ ಪಾಪಸಮಾಚಾರಂ ತೃಣೈಃ ಕೂಪಮಿವಾವೃತಮ್‌ |

ಸತಾಂ ವೇಷಧರಂ ಪಾಪಂ ಪ್ರಚ್ಛನ್ನಮಿವ ಪಾವಕಮ್‌ ೨೧

ನಾಹಂ ತ್ವಾಮಭಿಜಾನಾಮಿ ಧರ್ಮಚ್ಚದ್ದಾಭಿಸಂವೃತಮ್‌ I ವಿಷಯೇ ವಾ ಪುರೇ ವಾ ತೇ ಯದಾ ನಾಪಕರೋಮ್ಯಹಮ್‌ ೨೨

ರಾಜಪುತ್ರ, ಪೃಥಿವಿಯನ್ನಾಳುವ ರಾಜರಲ್ಲಿಇರಬೇಕಾದ ಗುಣಗಳಿವು: ದಮೆ, ಶಮೆ, ಕ್ಷಮೆ, ಧರ್ಮ, ದೈರ್ಯ, ಪರಾಕ್ರಮ ಮತ್ತು ಅಪರಾಧಿಗಳಿಗೆ ತಕ್ಕ ದಂಡ ವಿಧಾನ. ಗುಣಗಳೆಲ್ಲವೂ ನಿನ್ನಲ್ಲಿವೆಯೆಂದು ನಾನು ನಂಬಿದ್ದೆ ನಿನ್ನ ವಂಶೋನ್ನತಿಯನ್ನು ಪರ್ಯಾಲೋಚಿಸಿದ್ದೆನು (೧೭-೧೮). ಆದ್ದರಿಂದಲೇ ತಾರೆಯು ಬೇಡಬೇಡವೆಂದರೂ ಸುಗ್ರೀವನೊಡನೆ ಯುದ್ದಕ್ಕೆ ಬಂದೆನು. ನಾನು ಇನ್ನೊಬ್ಬನೊಡನೆ ಯುದ್ಧದಲ್ಲಿ ಮುಳುಗಿ ಮೈಮರೆತಿರುವಾಗ, ಗುಣಶಾಲಿಯಾದ ರಾಮನು ನನ್ನ ಮೇಲೆ ಬಾಣಪ್ರಯೋಗವನ್ನು ಮಾಡುವುದಿಲ್ಲವೆಂದೇ ನನ್ನ ತಿಳಿವಳಿಕೆಯಾಗಿತ್ತು ಇದೆಲ್ಲವೂ ಪ್ರತ್ಯಕ್ಷವಾಗಿ ನಿನ್ನನ್ನು ನೋಡದೆ ಮಾಡಿಕೊಂಡಿದ್ದ ಕಲ್ಪನೆ. ನೀನು ಇಂಥ ಕೀಳುಮಟ್ಟದವನೆಂದೂ ಧರ್ಮದ ಹೆಸರಿನಲ್ಲಿ ಡೊಂಬರಾಟವಾಡುವಅಧಾರ್ಮಿಕನೆಂದೂ ನನಗೆ ಗೊತ್ತಿರಲಿಲ್ಲ! (೧೯-೨೦). ಹುಲ್ಲು ಹೊದಿಸಿದ ಹಾಳುಬಾವಿಯಂತಿರುವ ಪಾಪಿ ನೀನು! ಬೂದಿ ಮುಚ್ಚಿದ ಕೆಂಡದಂತೆ ಸಾಧುವೇಷವನ್ನು ಧರಿಸಿದ ದುಷ್ಟ ನೀನು | ಧರ್ಮದ ನೆವದಿಂದ ಕುಟಿಲಬುದ್ದಿಯನ್ನು ಮರೆಸಿ ಕೊಂಡಿರುವೆಯೆಂಬುದು ನನಗೆ ತಿಳಿಯದೆ ಹೋಯಿತು |

೧೩೨ ಕಿಷ್ಟಿಂಧಾಕಾಂಡಃ [ಸರ್ಗಃ ೧೭

ನಚ ತ್ಪಾಮವಜಾನೇ ಹಂ ಕಸ್ನಾನ್ಸಾಂ ಹಂಸ್ಕಕಿಲ್ಬಿಷಮ್‌

ಫಲಮೂಲಾಶನಂ ನಿತ್ಯಂ ವಾನರಂ ವನಗೋಚರಮ್‌ ೨೩ ಮಾಮಿಹಾಪ್ರತಿಯುಧ್ಯಂತಮನ್ಯೇನ ಸಮಾಗತಮ್‌ |

ತ್ರಂ ನರಾಧಿಪತೇಃ ಪುತ್ರಃ ಪ್ರತೀತಃ ಪ್ರಿಯದರ್ಶನಃ॥ ೨೪ ಲಿಂಗಮಪ್ಕಸ್ತಿತೇ ರಾಜನ್‌ ದೃಶ್ಯತೇ ಧರ್ಮಸಂಹಿತಮ್‌

ಕಃ ಕ್ಷತ್ರಿಯಕುಲೇ ಜಾತಃ ಶ್ರುತವಾನ್ನಷ್ಠಸಂಶಯಃ॥ ೨೫ ಧರ್ಮಲಿಂಗಪ್ರತಿಚ್ಛನ್ನಃ ಕ್ರೂರಂ ಕರ್ಮ ಸಮಾಚರೇತ್‌

ರಾಮ ರಾಜಕುಲೇ ಜಾತೋ ಧರ್ಮವಾನಿತಿ ವಿಶ್ರುತಃ ೨೬ ಅಭವ್ಯೋ ಭವ್ಯರೂಪೇಣ ಕಿಮರ್ಥಂ ಪರಿಧಾವಸಿ।

ಸಾಮ ದಾನಂ ಕ್ಷಮಾ ಧರ್ಮಃ ಸತ್ಯಂ ಧೃತಿಪರಾಕ್ರಮ್‌ ಟಿಪ

ಎಲೈ ರಾಮ, ನಿನ್ನಪಟ್ಟಣಕ್ಕೆ, ನಿನ್ನದೇಶಕ್ಕೆ ಬಂದು ನಾನು ಯಾವ ಅಪರಾಧವನ್ನೂ ಮಾಡಿಲ್ಲ(೨೧-೨೨). ನಿನ್ನನ್ನು ಅವಮಾನಪಡಿಸಿಲ್ಲ ಯಾವ ತಪ್ಪನ್ನೂ ಮಾಡದ ನನ್ನನ್ನುಕೊಲ್ಲಲು ನಿನಗೆ ಕಾರಣವಾದರೂ ಏನಿತ್ತು? ಫಲಮೂಲಗಳನ್ನುತಿಂದು ಕೊಂಡು ನನ್ನ ಪಾಡಿಗೆ ವನದಲ್ಲಿ ವಾಸಿಸುವ ಒಬ್ಬ ವಾನರ ನಾನು (೨೩). ನಿನ್ನೊಡನೆ ಯುದ್ಧಕ್ಕೆ ನಿಂತವನೂ ಅಲ್ಲ ಇನ್ನೊಬ್ಬನೊಡನೆ ಹೊಡೆದಾಡು ತ್ರಿರುವಾಗ (ಮರೆಯಲ್ಲಿ ನಿಂತು) ನನ್ನನ್ನು ಹೊಡೆಯಲು ನಿಮಿತವಾದರೂ ಏನು ? ನೀನಾದರೋ ಮನುಷ್ಯೇಶ್ವರನ ಪುತ್ರ ; ವಿಖ್ಯಾತನಾದವನು. ನಿನ್ನ ರೂಪವು ನೋಡಲು ಭವ್ಯವಾಗಿದೆ (೨೪). ಅಲ್ಲದೆ ನೀನು ಧರ್ಮನಿಷ್ಠನೆಂದು ಸಾರುವುದಕ್ಕೆ ಜಟಾವಲ್ಕಲಗಳ ವೇಷ ಬೇರೆ | ಕ್ಷತ್ತಿಯವಂಶದಲ್ಲಿ ಜನಿಸಿ ಎದ್ಯಾವಂತನಾಗಿ ಧರ್ಮಾಧರ್ಮಗಳಲ್ಲಿನಿಶ್ಚಯಜ್ಞಾನವಿರುವ ಯಾವನು ತಾನೇ ನಿನ್ನ ಹಾಗೆ ಧಾರ್ಮಿಕವೇಷವನ್ನು ಧರಿಸಿಕೊಂಡು ಇಂಥ ಕ್ರೂರಕರ್ಮವನ್ನು ಆಚರಿಸಿಯಾನು? ರಾಮ, ರಾಜಕುಲದಲ್ಲಿ ಜನಿಸಿದ್ದೀಯೆ. ಧರ್ಮರಕ್ಷಕಣೆಂದು ನಿನ್ನ ಪ್ರಖ್ಯಾತಿ ಹರಡಿದೆ (೨೫-೨೬). ಆದರೆ ನೀನು ಕ್ರೂರಾತ್ಮ! ಸೌಮ್ಯ

ವೇಷವನ್ನು ಧರಿಸಿ ಏತಕ್ಕಾಗಿ ಅಲೆಯುತ್ತಿದ್ದೀಯೆ ? ಎಲೈ ರಾಜನೆ | ಸಾಮ,

ದಾನ, ತಾಳ್ಮೆ ಧರ್ಮ, ಸತ್ಯ ದೈರ್ಯ, ಪರಾಕ್ರಮ - ಇವು ರಾಜಗುಣಗಳು.

ಸರ್ಗಃ ೧೭] ರಾಮಾಧಿಕ್ಷೇಪಃ ೧೩೩

ಪಾರ್ಥಿವಾನಾಂ ಗುಣಾ ರಾಜನ್‌ ದಂಡಶ್ಚಾಪ್ಯಪರಾಧಿಷು J

ವಯಂ ವನಚರಾ ರಾಮ ಮೃಗಾ ಮೂಲಫಲಾಶನಾಃ ೨೮ ಏಷಾ ಪ್ರಕೃತಿರಸ್ಥಾಕಂ ಪುರುಷಸ್ಥಂ ನರೇಶ್ಚರಃ

ಭೂಮಿರ್ಹಿರಣ್ಯಂ ರೂಪಂ ವಿಗ್ರಹೇ ಕಾರಣಾನಿ ೨೯ ಅತ್ರ ಕಸೇ ವನೇ ಲೋಭೋ ಮದೀಯೇಷು ಫಲೇಷು ವಾ। ನಯಶ್ಚವಿನಯಶ್ಹೋಭಾ ನಿಗ್ರಹಾನುಗ್ರಹಾವಪಿ॥ ೩೦ ರಾಜವೃತ್ತಿರಸಂಕೀರ್ಣಾ ನೃಪಾಃ ಕಾಮವೃತಯಃ

ತಂತು ಕಾಮಪ್ರಧಾನಶ್ಚ ಕೋಪನಶ್ಚಾನವಸ್ಥಿತಃ 1 ೩೧ ರಾಜವೃತ್ರೈಸ್ತು ಸಂಕೀರ್ಣಃ ಶರಾಸನಪರಾಯಣಃ।

ತೇರ ಸ್ಕ್ಯಪಚಿತಿರ್ಧರ್ಮೆ ನಾರ್ಥೆ ಬುದ್ದಿರವಸ್ಥಿತಾ ೩೨

ಅಪರಾಧಿಗಳನ್ನು ದಂಡಿಸುವುದೂ ರಾಜಧರ್ಮ. ಆದರೆ, ರಾಮ, ನಾವು ವನಚಾರಿಗಳು, ಮೃಗಜಾತಿಗೆ ಸೇರಿದವರು. ಫಲಮೂಲಗಳನ್ನು ತಿನ್ನತಕ್ಕವರು (೨೭-೨೮). ಇದು ನಮ್ಮ ಸ್ವಭಾವ. ನೀನಾದರೋ ಮನುಷ್ಯ; ಮನುಷ್ಯೇಶ್ವರ, ಕಲಹಕ್ಕೆ ಕಾರಣಗಳು ಮುಖ್ಯವಾಗಿ ಮೂರು: ಹೆಣ್ಣು, ಹೊನ್ನು ಮಣ್ಣು * ನನ್ನ ಗೊಂಡಾರಣ್ಯ ದಲ್ಲಿ ನಿನಗೆ ಆಸೆಯಾಯಿತೋ ಅಥವಾ ಹಣ್ಣು ಹಂಪಲು ಗಳಲ್ಲಿಯೋ? ಖೆ ನಯವಿನಯಗಳೂ ನಿಗ್ರಹಾನುಗ್ರಹಗಳೂ ರಾಜಧರ್ಮಗಳು (೨೯-೩೦). ಇವನ್ನು ಇಷ್ಟಬಂದಂತೆ ವಿಪರೀತವಾಗಿ ಪ್ರಯೋಗಿಸತಕ್ಕದ್ದಲ್ಲ ರಾಜರು ಮನಸ್ಸಿಗೆ ತೋರಿದಂತೆ ನಡೆಯಕೂಡದು. ನೀನಾದರೋ ಕಾಮ ಕ್ರೋಧಗಳಿಂದ ತುಂಬಿದವನು. ನಿನಗೆ ಚಿತಸ್ಮೈರ್ಯವಿಲ್ಲ(೩೧). ರಾಜ

ಮೂಲದಲ್ಲಿ" ಭೂಮಿರ್ಹಿರಣ್ಯಂ ರೂಪಂ ಚ' ಎಂದು ಪಾಠವಿದೆ. ರೂಪವೆಂದರೆ ಹೆಣ್ಣಿನ ಸೌಂದರ್ಯವೆಂದುಇಲ್ಲಿಅರ್ಥ ಮಾಡಿದೆ. ವ್ಯಾಖ್ಯಾನಕಾರರು ರೂಪ : ಬೆಳ್ಳಿ ಎಂದು ಅರ್ಥ ಹೇಳಿದ್ದಾರೆ. "ರೂಪ್ಯ' ಎಂದು ಪಾಠಾಂತರವನ್ನೂ ತೋರಿಸಿದ್ದಾರೆ.

ಕಪಿಸ್ತೀಯರನ್ನು ಶ್ರೀರಾಮನು ಬಯಸುವ ಸಂಭವವೇ ಇಲ್ಲವೆಂದು ವಾಲಿಯು ಅಂಶವನ್ನು ಎತ್ತಿ ಆಕ್ಷೇಪಿಸಲಿಲ್ಲ

6**

೧೩೪ ಕಿಷ್ಕಿಂಧಾಕಾಂಡಃ [ಸರ್ಗಃ ೧೭

ಇಂದ್ರಿಯೈ: ಕಾಮವೃತಃ ಸನ್‌ ಕೃಷಸೇ ಮನುಜೇಶಥ

ಹತ್ವಾಬಾಣೇನ ಕಾಕುತ್ಸೃ ಮಾಮಿಹಾನಪರಾಧಿನಮ್‌ ೩೩ ಕಿಂ ವಕ್ಷ್ಯಸಿ ಸತಾಂ ಮಧ್ಯೇ ಕೃಶ್ವಾಕರ್ಮ ಜುಗುಪ್ಪಿತಮ್‌ |

ರಾಜಹಾ ಬ್ರಹ್ಮಹಾ ಗೋಫುಶ್ಲೋರಃ ಪ್ರಾಣಿವಧೇ ರತಃ ೩೪ ನಾಸಿಕಃ ಪರಿವೇತ್ತಾಚ ಸರ್ವೇ ನಿರಯಗಾಮಿನಃ ಸೂಚಕಶ್ಚಕದರ್ಯಶ್ಚಮಿತ್ರಘ್ನೋ ಗುರುತಲ್ಪಗಃ ೩೫

ಲೋಕಂ ಪಾಪಾತ್ಮನಾಮೇತೇ ಗಚ್ಛಂತ್ಯತ್ರ ಸಂಶಯಃ। ಅಧಾರ್ಯಂ ಚರ್ಮ ಮೇ ಸದ್ದೀ ರೋಮಾಣ್ಯಸ್ತಿ ವರ್ಜಿತಮ್‌ ॥।

ಅಭಕ್ಷಾ ಣಿ ಮಾಂಸಾನಿ ತೃದಿದ್ಧರ್ಧರ್ಮಚಾರಿಭಿಃ ಪಂಚ ಪಂಚನಖಾ ಭಕ್ಷಾ, ಬ್ರಹ್ಮಕ್ಷತ್ಯೇಣ ರಾಘವ॥ ೩೭

ಧರ್ಮವು ನಿನ್ನಲ್ಲಿ ಹಿಂದುಮುಂದಾಗಿ ಸಂಕರವಾಗಿದೆ. ಬಿಲ್ಲೆಳೆದು ಬಾಣ ಹೊಡೆಯುವುದರಲ್ಲಿಯೇ ನಿನಗೆ ಆಸಕ್ತಿ ನಿನಗೆ ಧರ್ಮದಲ್ಲಿ ಶ್ರದ್ಧೆ ಇಲ್ಲ ಅರ್ಥದಲ್ಲಿ ಯುಕ್ತಾಯುಕವನ್ನು ವಿವೇಚಿಸುವ ಬುದ್ಧಿ ಇಲ್ಲ ಕಾಮತಂತ್ರ ಪರಾಯಣ ನೀನು! ಇಂದ್ರಿಯಗಳು ಎಳೆದತ್ತಸರಿಯುವೆ. ಎಲೈ ಮನುಜೇಶ್ವರ - ಕಾಕುತ್ಸ್ಯ ನಿರಪರಾಧಿಯಾದ ನನ್ನನ್ನು ಬಾಣದಿಂದ ಘಾತಿಸಿದೆಯಲ್ಲ (೩೨-೩೩). ತುಚ್ಛವಾದ ಕಾರ್ಯವನ್ನು ಮಾಡಿ (ನಾಳೆ) ಸಜ್ಜನರೆದುರಿಗೆ ಯಾವ ಸಮಾಧಾನವನ್ನುನುಡಿಯಬಲ್ಲಿ? ರಾಜಹತ್ಯೆ ಬ್ರಹ್ಮಹತ್ಯೆ ಗೋಹತ್ಯೆಗಳನ್ನು ಮಾಡಿದವರು, ಕಳ್ಳ, ಪ್ರಾಣಿಹಿಂಸಾನಿರತ, ನಾಸ್ತಿಕ ಮತ್ತು ಅಣ್ಣನಿಗಿಂತಲೂ ಮೊದಲು ಮದುವೆಮಾಡಿಕೊಳ್ಳುವವನು-ಇವರೆಲ್ಲರಿಗೂ ನರಕವೇ ಗತಿ (೩೪). ಚಾಡಿಖೋರ, ಜಿಪುಣ, ನಂಬಿದ ಮಿತ್ರನನ್ನು ಹಾಳುಮಾಡತಕ್ಕವನು, ಗುರುತಲ್ಪಗಾಮಿ - ಇವರೆಲ್ಲರೂ ಪಾಪಿಗಳು ಸೇರುವ ನರಕಲೋಕವನ್ನೇ ಸೇರುವರು, ಸಂದೇಹವಿಲ್ಲ ಎಲ್ಫೆ ರಾಮ, ನನ್ನ ಚರ್ಮವು ಸಜ್ಜನರಿಗೆ ಧಾರಣ ಯೋಗ್ಯವಲ್ಲ ರೋಮಗಳೂ ಅಸ್ಥಿಯೂ ನಿಷಿದ್ಧ (೩೫-೩೬). ನಿನ್ನಂಥ ಧರ್ಮಶೀಲರಿಗೆ ನನ್ನ ಮಾಂಸವೂ ತಿನ್ನಲು ಅರ್ಹವಲ್ಲ ಐದು ನಖಗಳುಳ್ಳ ಪ್ರಾಣಿಗಳಲ್ಲಿ ಬ್ರಾಹ್ಮಣ ಕ್ಷತ್ರಿಯರು ಭಕ್ಷಿಸಬಹುದಾದ ಪ್ರಾಣಿಗಳು ಐದು ಮಾತ್ರವೇ: ಮುಳ್ಳುಹಂದಿ, ಕಾಡುಹಂದಿ, ಉಡು, ಮೊಲ; ಐದನೆಯದು ಆಮೆ.

ಸರ್ಗಃ ೧೭] ರಾಮಾಧಿಕ್ಷೇಪಃ ೧೩೫

ಶಲ್ಕಕಃ ಶ್ಲಾವಿಧೋ ಗೋಧಾ ಶಶಃ ಕೂರ್ಮಶ್ಚ ಪಂಚಮಃ। ಚರ್ಮ ಚಾಸ್ಟಿಚ ಮೇ ರಾಜನ್ನ ೈಶಂತಿ ಮನೀಷಿಣಃ ೩೮

ಅಭಕ್ಷಾ ಣಿ ಮಾಂಸಾನಿ ಸೋನ ಹಂ ಪಂಚನಖೋ ಹತಃ। ತಾರಯಾ ವಾಕ್ಕಮುಕೋತ ಹಂ ಸತ್ಯಂ ಸರ್ವಜ್ಞಯಾ ಹಿತಮ್‌ ೩೯

ತದತಿಕ್ರಮ್ಮ ಮೋಹೇನ ಕಾಲಸ್ಕ ವಶಮಾಗತಃ।

ತ್ವಯಾ ನಾಥೇನ ಕಾಕುತ್ಸ ಸನಾಥಾ ವಸುಂಧರಾ ೪೦ ಪ್ರಮದಾ ಶೀಲಸಂಪನ್ನಾ ಧೂರ್ತೇನ ಪತಿನಾ ಯಥಾ।

ಶಠೋ ನೈಕ್ಸತಿಕಃ ಕ್ಷುದ್ರೋ ಮಿಥ್ಯಾಪ್ರಶ್ರಿತಮಾನಸಃ॥ ೪೧ ಕಥಂ ದಶರಥೇನ ತ್ವಂ ಜಾತಃ ಪಾಪೋ ಮಹಾತ್ಮನಾ ಛಿನ್ನಚಾರಿತ್ರಕಕ್ಷ್ಯೇಣ ಸತಾಂ ಧರ್ಮಾತಿವರ್ತಿನಾ॥ ೪೨ ತ್ಯಕಧರ್ಮಾಂಕುಶೇನಾಹಂ ನಿಹತೋ ರಾಮಹಸಿನಾ

ಅಶುಭಂ ಚಾಪ್ಯಯುಕಂ ಸಶಾಂ ಚೈವ ವಿಗರ್ಹಿತಮ್‌ ೪೩

ನನ್ನ ಚರ್ಮವನ್ನಾಗಲಿ ಮೂಳೆಯನ್ನಾಗಲಿ ವಿದ್ವಾಂಸರು ಕೈಯಿಂದಲೂ ಮುಟ್ಟುವುದಿಲ್ಲ (೩೭-೩೮). ನನ್ನ ಮಾಂಸವು ಭಕ್ಷಣಾರ್ಹವಲ್ಲ ಅಭಕ್ಷ್ಯ ವರ್ಗಕ್ಕೆ ಸೇರಿದ್ದ ಐದು ನಖಗಳಿರುವ ನನ್ನನ್ನು ಕೊಂದೆಯಲ್ಲ! ಸರ್ವವನ್ನೂ ತಿಳಿದಿದ್ದ ತಾರೆಯಾ ನನಗೆ ಹಿತೋಪದೇಶಮಾಡಿದಳು. ಅವಳ ನುಡಿ ಸತ್ಯವಾಯಿತು (೩೯). ಅವಳ ಮಾತನ್ನುನಾನು ಅವಿವೇಕದಿಂದ ಮೀರಿ ನಡೆದು ಹೀಗೆ ಕಾಲವಶನಾದೆನು. ಕಾಕುತ್ವ ಭೂದೇವಿಗೆ ನೀನು ನಾಥನೆನಿಸಿರುವುದು ಹೆಸರಿಗೆ ಮಾತ್ರ. ನಾಥನಾಗಲು ನೀನು ಯೋಗ್ಯನಲ್ಲ! ಭೂಮಿಯು ನಿನ್ನಿಂದ ಸನಾಥವಾಗಲಿಲ್ಲ(೪೦). ಶೀಲಸಂಪನ್ನೆಯಾದ ಸಾಧ್ವಿಗೆ ಧೂರ್ತನಾದ ಗಂಡನು ದೊರಕುವಂತೆ, ನೀನು ಭೂಮಿಗೆ ಪತಿಯಾಗಿ ದೊರಕಿದ್ದೀಯೆ! ನೀನು ಧೂರ್ತ, ಕಪಟಿ, ಅಲ್ಲಮನುಷ್ಯ. ನೀನು ಶಾಂತಚಿತನೆಂಬುದು ಸುಳ್ಳು (೪೧). ಎಲೈ ರಾಮ, ಪಾಪಿಯಾದ ನೀನು ಮಹಾತ್ಮನಾದ ದಶರಥನಿಗೆ ಹೇಗೆ ತಾನೇ ಮಗನಾಗಿ ಹುಟ್ಟಿದೆ ? ಅಯ್ಯೊ, ರಾಮನೆಂಬ ಮದ್ದಾನೆ ನನ್ನನ್ನು ಸಾಯಿಸಿತು! ಆನೆಯು ಸಚ್ಚಾರಿತ್ರವೆಂಬ ಸರಪಳಿಯನ್ನು ಹರಿದೊಗೆದು ಸನ್ನಾರ್ಗವನ್ನು ಉಲ್ಲಂಘಿಸಿ ಧರ್ಮವೆಂಬ ಅಂಕುಶಕ್ಕೆ ಬಗ್ಗದೆ ನುಗ್ಗಿಬಂದು ನನ್ನನ್ನು ತುಳಿಯಿತು! ಅಶುಭವೂ

೧೩೬ ಕಿಷ್ಕಿಂಧಾಕಾಂಡಃ [ಸರ್ಗಃ ೧೭

ವಕ್ಷಸ್ಕೇ ಚೇದ್ದಶಂ ಕೃತ್ವಾಸದ್ದಿಃ ಸಹ ಸಮಾಗತಃ।

ಉದಾಸೀನೇಷು ಯೋತಸ್ಥಾಸು ವಿಕ್ರಮಸ್ಟೇ ಪ್ರಕಾಶಿತಃ ೪೪ ಅಪಕಾರಿಷು ತಂ ರಾಜನ್ನ ಹಿ ಪಶ್ಯಾಮಿ ವಿಕ್ರಮಮ್‌

ದೃಶ್ಯಮಾನಸ್ತು ಯುಧ್ಯೇಥಾ ಮಯಾ ಯದಿ ನೃಪಾತ್ಮಜ || ೪೫ ಅದ್ಯ ವೈವಸ್ವತಂ ದೇವಂ ಪಶ್ಯೇಸ್ತಂ ನಿಹತೋ ಮಯಾ। ತ್ವಯಾದೃಶ್ಶೇನ ತುರಣೇ ನಿಹತೋ ಹಂ ದುರಾಸದಃ॥ ೪೬

ಪ್ರಸುಪಃ ಪನ್ನಗೇನೇವ ನರಃ ಪಾನವಶಂ ಗತಃ। ಮಾಮೇವ ಯದಿ ಪೂರ್ವಂ ತ್ವಮೇತದರ್ಥಮಚೋದಯಃ I ೪೭

ಮೈಥಿಲೀಮಹಮೇಕಾಹ್ನಾ ತವ ಚಾನೀತವಾನ್‌ ಭವೇಃ। ಸುಗ್ರೀವಪ್ರಿಯಕಾಮೇನ ಯತೃ್ಯತೇಶಸ್ಥಿ ಹತಸ್ತ್ವಯಾ ೪೮

ಅಯೋಗ್ಯವೂ ಸಜ್ಜನರಿಗೆ ನಿಂದ್ಯವೂ ಆದ ಕೆಲಸವನ್ನು ಮಾಡಿದ್ದೀಯೆ (೪೨-೪೩). ಇಂಥ ತುಚ್ಛಕಾರ್ಯವನ್ನು ಮಾಡಿ ಸತ್ತುರುಷರೆದುರಿಗೆ ಏನು ಹೇಳುವೆ ? ತಟ

ಪರಾಧಿಗಳಾದ ನಮ್ಮಲ್ಲಿ ಪರಾಕ್ರಮವನ್ನು ಮೆರೆಸಿದೆಯಲ್ಲ; ಅಪಕಾರಿಗಳಾದ ರಾವಣಾದಿಗಳಲ್ಲಿ ಎಲ್ಫೆ ರಾಜ, ಪರಾಕ್ರಮವನ್ನು ಏಕೆ ಮೆರೆಸಲಿಲ್ಲ? ನಿನ್ನಲ್ಲಿ ಅಂತಹ ಶೌರ್ಯವೇನೂ ನನಗೆ ಕಾಣಿಸಲಿಲ್ಲವಲ್ಲ! (೪೪-೪೫). ಎಲೈ ರಾಮ, ನನ್ನಕಣ್ಣೆದುರಿಗೆ ನೀನು ಯುದ್ಧಮಾಡಿದ್ದಪಕ್ಷದಲ್ಲಿ ಇಷ್ಟು ಹೊತ್ತಿಗೆ ನಿನಗೆ ಯಮದೇವನ ದರ್ಶನವನ್ನು ಮಾಡಿಸುತ್ತಿದ್ದೆ | ರಣರಂಗದಲ್ಲಿ ನಾನು ದುರ್ಧರ್ಷನಾದ್ದರಿಂದ ಮರೆಯಲ್ಲಿ ನಿಂತು ನನ್ನನ್ನು ಹೊಡೆದೆಯಲ್ಲವೆ ? (೪೬). ಮದ್ಯವನ್ನು ಕುಡಿದು ಮತ್ತೇರಿ ಮಲಗಿದವನನ್ನು ಹಾವು ಕಚ್ಚುವಂತೆ ನನ್ನನ್ನು ಕಡಿದೆಯಲ್ಲವೆ ? ವಿಷಯವೇನೆಂಬುದನ್ನು ಮೊದಲೇ ನನಗೆ ತಿಳಿಸಿದ್ದರೆ, ನಿನ್ನ ಮೈಥಿಲಿಯನ್ನು ಒಂದೇ ದಿನದಲ್ಲಿ ತಂದು ನಿನಗೆ ಒಪ್ಪಿಸಿಬಿಡುತ್ತಿದ್ದೆನಲ್ಲ! *

ಕ. ಮೂಲದಲ್ಲಿ "...ಅನೀತವಾನ್‌ ಭವೇಃ' ಎಂದು ಪಾಠವಿದೆ. ಉತ್ತಮ ಪುರುಷಕ್ಕೆ ಗಿ ವ್ಯತ್ಯ ಯದಿಂದ ಮಧ್ಯ ಮಪುರುಷ ಬಂದಿದೆ. "ಭವೇಯಮ್‌ ' ಎಂದು ಅರ್ಥ.

..ಅನೀತವನ್‌ ಭವೇತ್‌' ಪಾಠದಲ್ಲಿಯೂ ಪುರುಷವ್ಯತ್ಯಯವನ್ನು ಹೇಳಬೇಕಾಗುತದೆ.

ಆದರೆ ಪಾಠದಲ್ಲಿ 'ನಾನು ತರುತ್ತಿದ್ದೆನೆಂಬುದು ಭವೇತ್‌ - ಆಗುತಿತು' ಎಂದು ಅರ್ಥ ಹೇಳಲು ಸಾಧ್ಯ.

ಸರ್ಗಃ ೧೭] ರಾಮಾಧಿಕ್ಷೇಪಃ ೧೩೭

ಕಂಠೇ ಬದ್ದ್ವಾಪ್ರದದ್ಯಾಂತೇಆನಿಹತಂ ರಾವಣಂ ರಣೇ। ನ್ಯಸಾಂ ಸಾಗರತೋಯೇ ವಾ ಪಾತಾಲೇ ವಾಪಿ ಮೈಥಿಲೀಮ್‌ 1 ೪೯

ಆನಯೇಯಂ ತವಾದೇಶಾಚ್ಛ್ವೇತಾಮಶ್ಚತರೀಮಿವ | ಯುಕಂ ಯತ್‌ ಪ್ರಾಪ್ನಯಾದ್ರಾಜ್ಯಂ ಸುಗ್ರೀವಃ ಸರ್ಗತೇ ಮಯಿ ೫೦

ಅಯುಕಂ ಯದಧರ್ಮೇಣ ತ್ವಯಾಹಂ ನಿಹತೋ ರಣೇ। ಕಾಮಮೇವಂವಿಧೋ ಲೋಕಃ ಕಾಲೇನ ವಿನಿಯುಜೃತೇ || ೫೧

ಕ್ಷಮಂ ಚೇದ್ದವತಾ ಪ್ರಾಪಮುತರಂ ಸಾಧು ಚಿಂತ್ಯತಾಮ್‌ ಆತ್ಯೇವಮುಕಾ ಶ್ವ ಪರಿಶುಷ್ಪವಕ್ತ ಶರಾಭಿಘಾತಾದ್ವ ಥಿತೋ ಮಹಾತ್ಮಾ

ಸುಗ್ರೀವನಿಗೆ ಸಂತೋಷವಾಗಲೆಂದು ರಾವಣನ ಉದ್ದೇಶವನ್ನಿಟ್ಟುಕೊಂಡು ನನ್ನನ್ನು ಘಾತಿಸಿದೆಯಲ್ಲವೆ ? (೪೭-೪೮). ರಾವಣನ ಕತ್ತಿಗೆ ಹಗ್ಗವನ್ನು ಬಿಗಿದು, ಅವನು ಬದುಕಿರುವಂತೆಯೇ ದರದರನೆ ಎಳೆತಂದು ನಿನಗೆ ಒಪ್ಪಿಸುತಿದ್ದೆನಲ್ಲ! ಆತನು ಜಾನಕಿಯನ್ನು ಸಮುದ್ರತಳದಲ್ಲಿಟ್ಟಿರಲಿ, ಪಾತಾಳದಲ್ಲಿಯೇ ಅಡಗಿಸಿರಲಿ, ನಿನ್ನ ಆದೇಶದಂತೆ ಅವಳನ್ನು ಅನ್ವೇಷಿಸಿ ತರುತ್ತಿದ್ದೆ (ಮಧುಕೈಟಭರು ಅಡಗಿಸಿಟ್ಟ ಶ್ವೇತಾಶ್ವತರಿಯೆಂಬ ಶ್ರುತಿಯನ್ನು ಹಯಗ್ರೀವನು ತಂದಂತೆ ತರುತ್ತಿದ್ದೆ ನಾನು, ಸ್ವರ್ಗಸ್ಥನಾದಮೇಲೆ ಸುಗ್ರೀವನಿಗೆ ಕಿಷ್ಠಿಂಧಾರಾಜ್ಯವು ದೊರೆಯಬೇಕೆಂಬುದು ಯುಕವೇ ಸರಿ. (ರಾಜ್ಯಕ್ಕಾಗಿ ಅವನು ನನ್ನನ್ನುಸಂಹರಿಸುವುದು ಯುಕವಾದೀತು) (೪೯-೫೦). ಆದರೆ ನೀನು ಅಧರ್ಮದಿಂದ ನನ್ನನ್ನುಸಂಹರಿಸಿದ್ದು ಮಾತ್ರ ಅಯುಕ್ತ ಕಾಲವಶರಾಗಿ ಜನರು ಸಾಯುವುದು ಸಹಜವೇ. "ಜಾತಸ್ಯ ಮರಣಂ ಧ್ರುವಮ್‌.' ನಿನಗೆ ಬಂದಿರುವ ಸವಾಲಿಗೆ ನಿನ್ನ ಉತ್ತರವೇನು ? ಸರಿಯಾಗಿ ಆಲೋಚಿಸಿ ನೋಡು '' ಎಂದನು (೫೧). ಇಷ್ಟು ಹೇಳುವುದರಲ್ಲಿ ಶರಘಾತದಿಂದ ತತ್ತರಿಸುತ್ತಿದ್ದ ವಾಲಿಯ ಬಾಯಿ ಒಣಗಿತು. ದೇವೇಂದ್ರ ತನಯನಾದ ಮಹಾತ್ಮನು,

6***

೧೩೮ ಕಿಷ್ಕಿಂಧಾಕಾಂಡಃ [ಸರ್ಗಃ ೧೮

ಸಮೀಕ್ಷ P ರಾಮಂ ರವಿಸಂನಿಕಾಶಂ ತೂಪ್ಲೀಂ ಬಭೂವಾಮರರಾಜಸೂನುಃ ೫೨ ಇತಿ ಶ್ರೀಮದ್ರಾಮಾಯಣೇ ಕಿಪ್ಠಿಂಧಾಕಾಂಡೇ ಸಪದಶಃ ಸರ್ಗಃ

ಅಷ್ಟಾದಶಃ ಸರ್ಗಃ ವಾಲಿವಧಸಮರ್ಥನಮ್‌ ಇತ್ಯುಕ] ಪ್ರಶ್ರಿತಂ ವಾಕ್ಕಂ ಧರ್ಮಾರ್ಥಸಹಿತಂ ಹಿತಮ್‌ ಪರುಷಂ ವಾಲಿನಾ ರಾಮೋ ನಿಹತೇನ ವಿಚೇತಸಾ

ತಂ ನಿಪ್ಪಭಮಿವಾದಿತ್ಯಂ ಮುಕತೋಯಮಿವಾಂಬುದಮ್‌ ಉಕವಾಕ್ಯಂ ಹರಿಶ್ರೇಷ್ಠ ಮುಪಶಾಂತಮಿವಾನಲಮ್‌ ವಿ

ಸಮೀಪದಲ್ಲಿ ಸೂರ್ಯನಂತೆ ಬೆಳಗುತ್ತ ನಿಂತಿದ್ದ ಶ್ರೀರಾಮನನ್ನು ದಿಟ್ಟಿಸಿನೋಡಿ ಸುಮ್ಮನಾದನು (೫೨). ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿ ಹದಿನೇಳನೆಯ ಸರ್ಗ

ಸರ್ಗ ೧೮

ಶ್ರೀರಾಮನು ವಾಲಿವಧೆಯನ್ನು ಸಮರ್ಥಿಸುವುದು. ವಾಲಿಯ ಕ್ಷಮಾಯಾಚನೆ. ಶ್ರೀರಾಮನಿಂದ ಅಭಯಪ್ರದಾನ.

ಶರಘಾತದಿಂದ ವ್ಯಾಕುಲಚಿತನಾದ ವಾಲಿಯು ರೀತಿಯಲ್ಲಿ ಚುಚ್ಚು ಮಾತುಗಳನ್ನಾಡಿ ಶ್ರೀರಾಮನನ್ನು ಆಕ್ಷೇಪಿಸಿದನು. ವಾಲಿಯ ವಾಕ್ಯದಲ್ಲಿನಮ್ರತೆ ಇತ್ತು ಧರ್ಮಾರ್ಥಗಳ ಪ್ರಸಾವವಿತು, ಉಭಯರ ಹಿತಚಿಂತನೆ ಇತ್ತು. ಹಾಗೆಯೇ ಮಾತು ಮರ್ಮಭೇದಕವಾಗಿಯೂಇತ್ತು(೧). ವಾಲಿಯ ವರ್ಚಸ್ಸು ಕುಗ್ಗುತ್ತ ಹೋಗಿ, ಅವನು ಪ್ರಭಾಹೀನನಾದ ರವಿಯಂತಾದನು. ಮಾತನ್ನಾಡಿ ಮುಗಿಸಿ, ಮಳೆಸುರಿದು ಶಾಂತವಾದ ಮೋಡದಂತಾದನು. ಜ್ವಾಲೆಯಡಗಿದ

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೩೯

ಧರ್ಮಾರ್ಥಗುಣಸಂಪನ್ನಂ ಹರೀಶ್ಚರಮನುತ್ತಮಮ್‌

ಅಧಿಕ್ಷಿಪಸದಾ ರಾಮಃ ಪಶ್ಚಾದ್ವಾಲಿನಮಬ್ರವೀತ್‌ ಧರ್ಮಮರ್ಥಂ ಕಾಮಂ ಸಮಯಂ ಚಾಪಿ ಲ್‌ಕಿಕಮ್‌ ಅವಿಜ್ಞಾಯ ಕಥಂ ಬಾಲ್ಯಾನ್ನಾಮಿಹಾದ್ಧ್ಯ ವಿಗರ್ಹಸೇ ಅಪ್ಪಸ್ಟ್ಯಾಬುದ್ಧಿ ಸಂಪನ್ನಾನ್‌ ವೃದ್ಧಾನಾಚಾರ್ಯಸಂಮತಾನ್‌

ಸೌಮ್ಯ ವಾನರಚಾಪಲ್ಯಾತ್ರ್ವಂ ಮಾಂ ವಕುಮಿಹೇಚ್ಛಸಿ 'ಅಕ್ಷಾಶೂಣಾಮಿಯಂ ಭೂಮಿಃ ಸಶೈಲವನಕಾನನಾ। ಮೃಗಪಕ್ಷಿಮನುಷ್ಯಾಣಾಂ ನಿಗ್ರಹಪ್ರಗ್ರಹಾವಪಿ॥ ತಾಂ ಪಾಲಯತಿ ಧರ್ಮಾತ್ಥಾ ಭರತಃ ಸತ್ಯವಾನೃಜುಃ |

ಧರ್ಮಕಾಮಾರ್ಥತತ್ತ್ವಜ್ಞೋ ನಿಗ್ರಹಾನುಗ್ರಹೇ ರತಃ॥ ಶಿ

ಬೆಂಕಿಯಂತಾದನು. ವಾಲಿಯನಿಂದೆಗೆ ಗುರಿಯಾದ ಶ್ರೀರಾಮನು (ಅವನ ನುಡಿ ನಿಲ್ಲುವವರೆಗೆ ಸುಮ್ಮನಿದ್ದು) ಅನಂತರ ಉತ್ತರ ಕೊಡಲಾರಂಭಿಸಿದನು. ಧರ್ಮಾರ್ಥಗುಣಸಂಪನ್ನವಾದ ಮಾತಿನಿಂದ ಕಪಿಶ್ರೇಷ್ಠನಾದ ವಾಲಿಯನ್ನು ದ್ದೇಶಿಸಿ ಹೀಗೆಂದನು (೨-೩) : ""ಸೌಮ್ಯ-ಕಪೀಶ್ವರ, ನೀನು ಧರ್ಮಾರ್ಥ ಕಾಮಗಳ ಸ್ವರೂಪವನ್ನೂ ಶಿಷ್ಟುಚಾರವನ್ನೂ ಅರಿಯದೆ ಅಜ್ಞಾನದಿಂದ ನನ್ನನ್ನು ನಿಂದಿಸಬಹುದೆ ? ಜ್ಞಾನಿಗಳೂ ಆಚಾರ್ಯರೆಂದು ಗೌರವಾನ್ವಿತರೂ ಆದ ಹಿರಿಯರನ್ನು ಕೇಳಿ ಧರ್ಮಾದಿಗಳ ತತ್ವವನ್ನು ನೀನು ತಿಳಿದಿಲ್ಲ ತಿಳಿಯದೆ ಕೇವಲ ಕಪಿ ಚಾಪಲ್ಯದಿಂದ ನನಗೆ ಇಂಥ ಮಾತನ್ನಾಡಲು ಉದ್ದೇಶಿಸಿದೆ (೪-೫). ದೇಶವೆಲ್ಲವೂ ಇಕ್ಷಾಕುವಂಶದ ರಾಜರಿಗೆ ಸೇರಿದ್ದು. ಪರ್ವತ ಮಹಾರಣ್ಯ ವನಗಳೆಲ್ಲವೂ ಅವರಿಗೆ ಅಧೀನವಾದದ್ದು ಮೃಗ ಪಕ್ಷಿ ಮನುಷ್ಯರ ನಿಗ್ರಹಾನು ಗ್ರಹಗಳು ಅವರ ಅಧಿಕಾರಕ್ಕೆ ಒಳಪಟ್ಟದ್ದು (೬). ಭೂಪ್ರದೇಶವನ್ನು ಧರ್ಮಾತ್ಮನೂ ಸತ್ಯಸಂಧನೂ ಯಜುಬುದ್ದಿಯೂ ಆದ ಭರತನು ಪಾಲಿಸುತಿದ್ದಾನೆ. ಅವನು ಧರ್ಮಾರ್ಥಕಾಮಗಳ ತತ್ತ್ವವಸನ್ನರಿತವನಾಗಿ ದುಷ್ಟರನ್ನು ನಿಗ್ರಹಿಸಿ ಶಿಷ್ಟರನ್ನು ಅನುಗ್ರಹಿಸುವುದರಲ್ಲಿತತ್ಪರನಾಗಿದ್ದಾನೆ (೭).

೧೪೦ ಕಿಷ್ಟಿಂಧಾಕಾಂಡಃ [ಸರ್ಗಃ ೧೮

ನಯಶ್ನ ವಿನಯಶ್ಲೋಭೌ ಯಸ್ಸಿನ್‌ ಸತ್ಯಂ ಸುಸ್ಥಿತಮ್‌ |

ವಿಕ್ರಮಶ್ಚ ಯಥಾದೃಷ್ಠ] ರಾಜಾ ದೇಶಕಾಲವಿತ್‌ ತಸ್ಯ ಧರ್ಮಕೃತಾದೇಶಾ ವಯಮನ್ಯೇ ಪಾರ್ಥಿವಾಃ

ಚರಾಮೋ ವಸುಧಾಂ ಕತ್ಸ್ನಾಂ ಧರ್ಮಸಂತಾನಮಿಚ್ಛವಃ | ತಸ್ನಿನ್ನ ಸತಿಶಾರ್ದೂಲೇ ಭರತೇ ಧರ್ಮವತಲೇ

ಪಾಲಯತ್ಯಖಿಲಾಂ ಭೂಮಿಂ ಕಶ್ಚರೇದ್ದರ್ಮನಿಗ್ರಹಮ್‌ ೧೦ ತೇ ವಯಂ ಧರ್ಮವಿಭ್ರಷ್ಟಂ ಸ್ವಧರ್ಮೇ ಪರಮೇ ಸ್ಥಿತಾಃ

ಭರತಾಜ್ಞಾಂ ಪುರಸ್ಕೃತ್ಯ ನಿಗಸ್ಛೀಮೋ ಯಥಾವಿಧಿ ೧೧ ತಂ ತು ಸಂಕ್ಷಿಷ್ಠಧರ್ಮಾ ಕರ್ಮಣಾ ವಿಗರ್ಹಿತಃ। ಕಾಮತಂತ್ರಪ್ರಧಾನಶ್ಚನ ಸ್ಥಿತೋ ರಾಜವರ್ತನಿ॥ ೧೨

ನಯವಿನಯಗಳೂ ಸತ್ಯವೂ ಯಾರಲ್ಲಿಸ್ಟಿರವಾಗಿ ನೆಲೆಸಿವೆಯೋ, ಯಾರಲ್ಲಿ ಶೌರ್ಯವು ಪ್ರತ್ಯಕ್ಷವೋ, ಯಾರು ದೇಶಕಾಲಗಳ ಪರಿಸ್ಥಿತಿಯನ್ನು ಬಲ್ಲನೋ ಅವನೇ ಭೂಮಂಡಲಕ್ಕೆ ಅಧಿಪತಿಯೆನಿಸಿಕೊಳ್ಳುತಾನೆ. ಅಂತಹ ರಾಜನೇ ಭರತ (೮). ಅವನ ಧರ್ಮಪುರಸ್ಪರವಾದ ಆಜ್ಞೆಯನ್ನು ಮನ್ನಿಸಿ ಧರ್ಮರಕ್ಷಣೆಗಾಗಿ ನಾವು ಭೂಮಂಡಲವನ್ನುಸುತುತ್ತಿದ್ದೇವೆ. ಧರ್ಮಾಭಿವೃದ್ಧಿಯಾಗಲೆಂದು ನಾವು ನಮ್ಮಂತೆಯೇ ಅನೇಕ ಭೂಪಾಲರು ಸಂಚರಿಸುತ್ತಿದ್ದೇವೆ. ರಾಜಸಿಂಹನೆನಿಸಿದ ಧರ್ಮವತ್ಸಲನಾದ ಭರತನು ಸಕಲ ಪೃಥ್ವಿಯನ್ನೂ ಪಾಲಿಸುತ್ತಿರುವಾಗ ಯಾವನು ಧರ್ಮವನ್ನತಿಕ್ರಮಿಸಿ ನಡೆದಾನು ? (೯-೧೦). ಸ್ವಧರ್ಮದಲ್ಲಿ ನಿರತರಾದ ನಾವು ಭರತಾಜ್ಞೆಯನ್ನು* ಮನ್ನಿಸಿ, ಧರ್ಮಭ್ರಷ್ಟನನ್ನು ನಿಯಮಾನು ಸಾರವಾಗಿ ದಂಡಿಸುತ್ತಿದ್ದೇವೆ. ನೀನು ಧರ್ಮಕ್ಕೆ ಹಾನಿಯನ್ನುಂಟುಮಾಡಿದ್ದೀಯೆ.

ಶೇ ಭರತನು ತಾನಾಗಿ ಆಜ್ಜೆಮಾಡದಿದ್ದರೂ ಮೂಲಭೂತವಾದ ರಾಜಧರ್ಮದ ನಿರ್ವಹಣೆಯ ಹೊಣೆ ಶ್ರೀರಾಮನ ಮೇಲೂ ಇದೆ. ಭರತನು ಶ್ರೀರಾಮನ ಪ್ರತಿನಿಧಿಯಾಗಿ ಸಮಯದಲ್ಲಿ ರಾಜನೇ ಆಗಿದ್ದಾನೆ. ಭರತನು ರಾಜನೆಂದೂ ಅವನ ಅಜ್ಞೆಯನ್ನೂ ಪಾಲಿಸುತ್ತಿದ್ದೇನೆಂದೂ ಹೇಳುವುದು ಶ್ರೀರಾಮನ ವಿನಯಸಂಪತ್ತನ್ನು ಸೂಚಿಸುತ್ತದೆ.

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೪೧

ಜ್ಯೇಷ್ಠೋ ಭ್ರಾತಾ ಪಿತಾ ಚೈವ ಯಶ್ಚವಿದ್ಯಾಂ ಪ್ರಯಚ್ಛತಿ

ತ್ರಯಸ್ತೇ ಪಿತರೋ ಜ್ಞೇಯಾ ಧರ್ಮೇ ವತಣ್ಯ್ಣನಿ ವರ್ತಿನಃ ೧೩ ಯವೀಯಾನಾತ್ಮನಃ ಪುತ್ರಃ ಶಿಷ್ಕಶ್ನಾಪಿ ಗುಣೋದಿತಃ

ಪುತ್ರವತ್ತೇ ತ್ರಯಶ್ಲಿಂತ್ಯಾ ಧರ್ಮಶ್ನೇದತ್ರ ಕಾರಣಮ್‌ ೧೪ ಸೂಕ್ಷ ಟಿ ಪರಮದುರ್ಜ್ಗೇಯಃ ಸತಾಂ ಧರ್ಮಃ ಪವಂಗಮ॥

ಹೃದಿಸ; ಸರ್ವಭೂತಾನಾಮಾತ್ಥಾ ವೇದ ಶುಭಾಶುಚೇ ೧೫

ಚಪಲಶ್ಚಪಲೈಃ ಸಾರ್ಧಂ ವಾನರೈರಕ್ಕತಾತ್ಮಭಿಃ ಜಾತ್ಯಂಧ ಇವ ಜಾತ್ಯಂಧೈರ್ಮಂತ್ರಯನ್‌ ದ್ರಕ್ಷ್ಯಸೇ ನುಕಿಮ್‌॥ ೧೬

ಅಹಂ ತು ವ್ಯಕ್ತತಾಮಸ್ವ ವಚನಸ್ಕ ಬ್ರವೀಮಿ ತೇ! ನಹಿಮಾಂಕೇವಲಂ ರೋಷತ್ತಂ ವಿಗರ್ಜಿತುಮರ್ಹಸಿ ೧೭

ನಿನ್ನ ಕೃತಿಯಿಂದ ಲೋಕ ನಿಂದಿತನಾಗಿದ್ದೀಯೆ. ಕಾಮಲೋಲುಪನಾಗಿ ರಾಜಮಾರ್ಗದಿಂದ ಜಾರಿದ್ದೀಯೆ (೧೧-೧೨). ಎಲ್ಫೆ ವಾಲಿ, ಧರ್ಮಮಾರ್ಗದಲ್ಲಿರ ತಕ್ಕವನು ತನ್ನತಂದೆ, ಅಣ್ಣ ವಿದ್ಯೆಯನ್ನುಕಲಿಸಿದ ಗುರು- ಮೂವರನ್ನು ತಂದೆ ಯೆಂದು ಭಕ್ತಿಯಿಂದ ಗೌರವಿಸಬೇಕು. ಹಾಗೆಯೇ ತನ್ನ ಮಗ, ತಮ್ಮ ಗುಣಶಾಲಿಯಾದ ಶಿಷ್ಯ - ಮೂವರನ್ನು ಮಕ್ಕಳೆಂದು ತಿಳಿದು ವಾತ್ಸಲ್ಯದಿಂದ ನೋಡಿಕೊಳ್ಳಬೇಕು (೧೩-೧೪). ಎಲ್ಫೆ ವಾನರ, ಸಜ್ಜನರ ಧರ್ಮಮಾರ್ಗವು ಅತಿಸೂಕ್ಷ್ಮವಾದುದು. ಅದರ ತತ್ತ್ವವನ್ನುತಿಳಿಯುವುದು ಬಹು ಕಷ್ಟ ಸಕಲ ಜಂ ತುಗಳ ಹೃದಯದಲ್ಲಿ ನೆಲೆಸಿದ ಅಂತರ್ಯಾಮಿಯಾದ ಆತ್ಮನೊಬ್ಬನಿಗೆ ಇದು ಸರಿ-ಇದು ತಪ್ಪು ಎಂದು ಧರ್ಮಾಧರ್ಮಗಳ ವಿವೇಕಜ್ಞಾನವಿರುತ್ತದೆ (೧೫). ನೀನು ಮೊದಲೇ ಚಪಲ ಸ್ವಭಾವದ ವಾನರ. ಅವಿವೇಕಿಗಳೂ ಚಪಲಚಿತ್ತರೂ ಆದ ಕಪಿಗಳೊಡನೆ ಸಮಾಲೋಚಿಸುವ ನಿನಗೆ ಏನು ಗೊತ್ತಿದೆ 9 ಕುರುಡನನ್ನು ಹುಟ್ಟುಕುರುಡರು ಕರೆದೊಯ್ಯುವಂತೆ ನಿನ್ನ ಪರಿಸ್ಥಿತಿಯಾಗಿದೆ (೧೬). ನನ್ನ ಮಾತಿನ ಅಭಿಪ್ರಾಯವನ್ನು ವಿವರಿಸಿ ಹೇಳುವೆನು, ಕೇಳು. ಬರಿಯ ರೋಷಾವೇಶದಿಂದ ನನ್ನನ್ನು ನಿಂದಿಸಬೇಡ. ನಿನ್ನನ್ನುನಾನು ಸಂಹರಿಸಲು ಇದು ಕಾರಣವೆಂದು ತಿಳಿ.

೧೪೨ ಕಿಷ್ಕಿಂಧಾಕಾಂಡಃ [ಸರ್ಗಃ ೧೮

ತದೇತತ್‌ ಕಾರಣಂ ಪಶ್ಯ ಯದರ್ಥಂ ತ್ರಂ ಮಯಾ ಹತಃ। ಭ್ರಾತುರ್ವರ್ತಸಿ ಭಾರ್ಯಾಯಾಂ ತ್ಯಕಾ ಧರ್ಮಂ ಸನಾತನಮ್‌ ಅಸ್ಕ ತ್ವಂ ಧರಮಾಣಸ್ಕ ಸುಗ್ರೀವಸ್ಯ ಮಹಾತ್ಮನಃ

ರುಮಾಯಾಂ ವರ್ತಸೇ ಕಾಮಾತ್‌ ಸ್ನುಷಾಯಾಂ ಪಾಪಕರ್ಮಕ್ಸತ್‌

ತದ್ವ ಒತೀತಸ್ಯ ತೇ ಧರ್ಮಾತ್‌ ಕಾಮವೃತಸ್ಯ ವಾನರ। ಭ್ರಾತೆಭಾರ್ಯಾವಮರ್ಶೇಪಸ್ಮನ್‌ ದಂಡೋ ಯಂ ಪ್ರತಿಪಾದಿತಃ॥ ೨೦

ಹಿ ಧರ್ಮವಿರುದ್ದಸ್ವ ಲೋಕವೃತ್ತಾದಪೇಯುಷಃ |

ದಂಡಾದನ್ಯತ್ರ ಪಶ್ಯಾ ಮಿ ನಿಗ್ರಹಂ. ಹರಿಯೂಥಪ I ೨೧ ನಹಿತೇ eal ಪಾಪಂ ಕ್ಷತ್ರಿಯೋತಹಂ ಕುಲೋದ್ಬವಃ ಔರಸೀಂ ಭಗಿನೀಂ ವಾಪಿ ಭಾರ್ಯಾಂ ವಾಪ್ಯನುಜಸ್ಯ ಯಃ ೨೨ ಪ್ರಚರೇತ ನರಃ ಕಾಮಾತಸ್ಕ ದಂಡೋ ವಧಃ ಸ್ಮೃತಃ ಭರತಸುಮಹೀಪಾಲೋ ವಯಂ ಚಾದೇಶವರ್ತಿನಃ॥ ೨೩

ಏನೆಂದರೆ, ನೀನು ಸನಾತನ ಧರ್ಮವನ್ನುಲ್ಲಂಫಿಸಿ ನಿನ್ನ ತಮ್ಮನ ಭಾರ್ಯೆ ಯೊಡನೆ ರಮಿಸುತ್ತಿದ್ದೀಯೆ (೧೭-೧೮). ಮಹಾತ್ಮನಾದ ಸುಗ್ರೀವನು ಜೀವಿಸಿರು ವಾಗಲೇ ಅವನ ಭಾರ್ಯೆಯಾದ ರುಮೆಯೊಡನೆ ನೀನು ಕಾಮಲೋಲುಪನಾಗಿ ವರ್ತಿಸುತ್ತಿದ್ದೀಯೆ. ಅವಳು ನಿನಗೆ ಸೊಸೆಯಾಗಲಿಲ್ಲವೆ? ಪಾಪಕರ್ಮವನ್ನು ಎಸಗಿದ್ದೀಯೆ. ಧರ್ಮವನ್ನುಲ್ಲಂಘಸಿ ಕಾಮಪರಾಯಣನಾಗಿ ತಮ್ಮನ ಹೆಂಡತಿಯನ್ನು ಮುಟ್ಟಿದುದಕ್ಕೋಸ್ಕರ ನಿನಗೆ ಶಿಕ್ಷೆಯನ್ನು ವಿಧಿಸಿದ್ದೇನೆ (೧೯-೨೦). ವಾನರೇಶ್ವರ, ಧರ್ಮವಿರುದ್ದವಾಗಿ ವರ್ತಿಸುತ್ತ ಶಿಷ್ಟಾಚಾರವನ್ನು ಅತಿಕ್ರಿಮಿಸುವವನಿಗೆ ಮರಣದಂಡನೆಯಲ್ಲದೆ ಅವನನ್ನುನಿಗ್ರಹಿಸುವ ಇನ್ನೊಂದು ಮಾರ್ಗವು ನನಗೆ ತೋರದು (೨೧). ನಾನು ಸತ್ತುಲಪ್ರಸೂತನಾದ ಕ್ಷತ್ತಿಯನಾಗಿ ನಿನ್ನ ಪಾಪಕರ್ಮವನ್ನು ಸಹಿಸಲಾರೆ. ಮಗಳು, ಒಡಹುಟ್ಟಿದವಳು, ತಮ್ಮನ ಮಡದಿ- ಇವರಲ್ಲಿಯಾವನು ಕಾಮಾತಿರೇಕದಿಂದ ಪ್ರವರ್ತಿಸುವನೋ ಅವನಿಗೆ ವಧೆಯೇ ಶಿಕ್ಷೆಯೆಂದು ಶಾಸ್ತ್ರವಿಹಿತವಾಗಿದೆ. ಭರತನು ಭೂಮಿಗೆ ಅಧಿಪತಿ

ನಾವು ಅವನ ಆದೇಶದಂತೆ ನಡೆಯತಕ್ಕವರು (೨೨-೨೩). ನೀನು ಧರ್ಮವನ್ನು

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೪೩

ತ್ರಂ ತು ಧರ್ಮಾದತಿಕ್ರಾಂತಃ ಕಥಂ ಶಕ್ಕಮುಪೇಕ್ಷಿತುಮ್‌ | ಗುರುಧರ್ಮವೃತಿಕ್ರಾಂತಂ ಪ್ರಾಜ್ಞೋ ಧರ್ಮೇಣ ಪಾಲಯನ್‌ ೨೪ ಭರತಃ ಕಾಮವೃತ್ತಾನಾಂ ನಿಗ್ರಹೇ ಪರ್ಯವಸ್ಥಿತಃ |

ವಯಂತುಭರತಾದೇಶಂವಿಧಿಂ ಕೃತ್ವಾ ಹರೀಶ್ಚರ Il ೨೫ ತದ್ದಿಧಾನ್‌ ಭಿನ್ನಮರ್ಯಾದಾನ್ನಿಯಂತುಂ ಪರ್ಯವಸ್ಥಿತಾಃ ಸುಗ್ರೀವೇಣ ಮೇ ಸಖ್ಯಂ ಲಕ್ಷ್ಮಣೇನ ಯಥಾ ತಥಾ ೨೬ ದಾರರಾಜ್ಯನಿಮಿತಂ ನಿಪ್ರೇಯಸಿ ರತಃ ಸಮೇ |

ಪ್ರತಿಜ್ಞಾ ಮಯಾ ದತ್ತಾತದಾ ಪಾವಕಸಂನಿಧ್‌ೌ ೨೭ ಪ್ರತಿಜ್ಞಾಯ ಕಥಂ ಶಕ್ಯಂ ಮದ್ದಿಧೇನಾನವೇಕ್ಷಿತುಮ್‌

ತದೇಭಿಃ ಕಾರಣ್ಳ: ಸರ್ವೈೈರ್ಮಹದ್ಬಿರ್ಧರ್ಮಸಂಹಿತೈಃ [[ ೨೮ ಶಾಸನಂ ತವ ಯದ್ಯುಕಂ ತದ್ಭವಾನನುಮನ್ಯತಾಮ್‌ |

ಸರ್ವಥಾ ಧರ್ಮ ಇತ್ಯೇವ ದ್ರಷವ್ಯಸವ ನಿಗ್ರಹಃ ರಿ

ಉಲ್ಲಂಘಿಸಿದ್ದೀಯೆ. ನಿನ್ನನ್ನು ನೋಡುತ್ತ ಉಪೇಕ್ಷೆಯಿಂದಿರಲು ಹೇಗೆ ಸಾಧ್ಯ? ಸಾಮ್ಮಾನ್ಯನೂ ಪ್ರಾಜ್ಞನೂ ಆದ ಭರತನು ಧರ್ಮಾತಿಕ್ರಮಣವಾಗದಂತೆ ಧರ್ಮದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದಾನೆ. ಸ್ವೇಚ್ಛೆಯಾಗಿ ನಡೆಯತಕ್ಕ ವರನ್ನು ದಂಡಿಸುವುದರಲ್ಲಿ ಉದ್ಯುಕನಾಗಿದ್ದಾನೆ. ನಾವು ಭರತನ ಆಜ್ಞೆಯೇ ಪ್ರಮಾಣವೆಂದು ಮನ್ನಿಸುತ್ತೇವೆ (೨೪-೨೫). ಆದ್ದರಿಂದ, ಎಲೈ ಕಪೀಶ್ವರ, ಮರ್ಯಾದೆಯನ್ನ ತಿಕ್ರಮಿಸುವ ನಿನ್ನಂಥವರನ್ನು ಶಿಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ನಮಗೆ ಸುಗ್ರೀವನೊಡನಾದ ಮೈತ್ರಿಯು ಲಕ್ಷ್ಮಣನ ಸ್ನೇಹದಂತೆ ಅತಿದೃಢವಾದುದು. ಅವನ ಮಡದಿಯನ್ನೂ ರಾಜ್ಯವನ್ನೂ ಕೊಡಿಸುವುದಕ್ಕಾಗಿ ಮೈತ್ರಿ ಏರ್ಪಟ್ಟಿತು. ಆತನೂ ನನ್ನ ಹಿತಸಾಧನೆಯಲ್ಲಿ ನಿರತನಾಗಿದ್ದಾನೆ. ನಿನ್ನನ್ನು ಕೊಲ್ಲುವುದಾಗಿ ಅಗ್ನಿಸನ್ನಿಧಾನದಲ್ಲಿ ಪ್ರತಿಜ್ಞೆಮಾಡಿ ಅವನಿಗೆ ಮಾತು ಕೊಟ್ಟಿದ್ದೇನೆ (೨೬-೨೭). ನನ್ನಂಥವನು ಪ್ರತಿಜ್ಞೆಮಾಡಿ ಅದನ್ನು ಉಪೇಕ್ಷಿಸಲು ಹೇಗೆ ಶಕ್ಕವಾದೀತು ? ಧರ್ಮಸಮೃತವಾದ ಮಹತರ ಕಾರಣಗಳೆಲ್ಲವೂ ಸೇರಿದುದರಿಂದ ನಿನ್ನನ್ನು ದಂಡಿಸುವುದು ಅವಶ್ಯಕವಾಯಿತು. ದಂಡನ್ಮೆಯು

೧೪೪ ಕಿಷ್ಕಿಂಧಾಕಾಂಡಃ [ಸರ್ಗಃ ೧೮

ವಯಸ್ಕಸ್ಯೋಪಕರ್ತವ್ಯಂ ಧರ್ಮಮೇವಾನುಪಶ್ಯತಃ। ಶಕ್ಯಂ ತ್ರಯಾಪಿ ತತ್‌ ಕಾರ್ಯಂ ಧರ್ಮಮೇವಾನುವರ್ತತಾ॥ ೩೦

ಶ್ರೂಯತೇ ಮನುನಾ ಗೀತ್‌ ಶ್ಲೋಕ್‌ ಚಾರಿತ್ರವತಲ್‌ ಗೃಹೀತೌ ಧರ್ಮಕುಶಲೈಸತಥಾ ಚರಿತಂ ಮಾಯಾ ೩೧

* ರಾಜಭಿರ್ಧೃತದಂಡಾಸ್ತು ಕೃತ್ವಾಪಾಪಾನಿ ಮಾನವಾಃ ನಿರ್ಮಲಾಃ "ಸರ್ಗಮಾಯಾಂತಿ ಸಂತಃ ಸುಕೃತಿನೋ ಯಥಾ ೩೨

*ಶಾಸನಾದ್ವಾವಿಮೋಕ್ಷಾದ್ವಾಸೇನಃ ಸ್ನೇಯಾದ್ವಿಮುಚ್ಛತೇ

ರಾಜಾ ತ್ವಶಾಸನ್‌ ಪಾಪಸ್ಯ ತದವಾಪ್ನೋತಿ ಕಿಲ್ಲಷಮ್‌ ೩೩ ಆರ್ಯೇಣ ಮಮ ಮಾಂಧಾತ್ರಾ ವ್ಯಸನಂ ಘೋರಮೀಪಿತಮ್‌ ಶ್ರಮಣೇನ ಕೃತೇ ಪಾಪೇ ಯಥಾ ಪಾಪಂ ತ್ಹಯಾ ಕೃತಮ್‌ ೩೪

ನಿನಗೆ ಯುಕ್ತವಾದುದೆಂದು ನೀನು ಒಪ್ಪಿಕೊಳ್ಳಬೇಕು. ನಿನ್ನನ್ನು ಶಿಕ್ಷಿಸಿರುವುದು ಸರ್ವವಿಧದಲ್ಲಿಯೂ ಧರ್ಮವೆಂದೇ ತಿಳಿಯಬೇಕು (೨೮-೨೯). ಧರ್ಮದಲ್ಲಿಯೇ ದೃಷ್ಟಿಯುಳ್ಳವನು ಮಿತ್ರನಿಗೆ ಉಪಕಾರ ಮಾಡಲೇಬೇಕು. ಎಲೈ ವಾಲಿ, ಧರ್ಮವನ್ನೇ ಅನುಸರಿಸತಕ್ಕವನಾಗಿದ್ದರೆ ನೀನೂ ಕೂಡ ಇಂತಹ ಕಾರ್ಯವನ್ನು ಮಾಡುತ್ತಿದ್ದೆ. ಸದಾಚಾರವನ್ನು ಕುರಿತು ಮನುವು ಎರಡು ಶ್ಲೋಕಗಳನ್ನು ಹೇಳಿದ್ದಾನೆ. ಧರ್ಮನಿಷ್ಠರೆಲ್ಲರೂ ಅವನನ್ನುಪರಿಗ್ರಹಿಸಿದ್ದಾರೆ. ಅದರಂತೆ ನಾನು ನಡೆದುಕೊಂಡಿದ್ದೇನೆ (೩೦-೩೧). ಶ್ಲೋಕಗಳ ಅರ್ಥವೇನೆಂದರೆ, "ಜನರು ಪಾಪಾಕರ್ಮಗಳನ್ನಾಚರಿಸಿದರೂ ರಾಜರಿಂದ ತಕ್ಕ ಶಿಕ್ಷೆಯನ್ನುಪಡೆದಲ್ಲಿ ಅವರ ಪಾಪಗಳೆಲ್ಲವೂ ನೀಗುತವೆ. ಪುಣ್ಯವಂತರಾದ ಸಜ್ಜನರಂತೆ ಅವರು ಸದ್ಧತಿಯನ್ನು ಪಡೆಯುತ್ತಾರೆ (೩೨).ಕಳ್ಳನನ್ನು ರಾಜನು ದಂಡಿಸಲಿ ಅಥವಾ ದಂಡಿಸದೆ ಬಿಡುಗಡೆಮಾಡಲಿ, ಕಳ್ಳತನದ ಪಾಪವು ಅವನಿಗೆ ನೀಗುವುದು. ಆದರೆ ಪಾಪಿಯನ್ನುದಂಡಿಸದ ರಾಜನು ಅವನ ಪಾಪಕ್ಕೆ ಭಾಗಿಯಾಗುತಾನೆ (೩೩). ವಾಲಿ, ನಿನ್ನಂತೆಯೇ ಒಬ್ಬ ಶ್ರವಣನು ಹಿಂದೆ ಒಂದು ಪಾಪಕೃತ್ಯವನ್ನು ಮಾಡಿದ್ದನು. ಆಗ ನನ್ನ ವಂಶದಲ್ಲಿ ಪೂಜ್ಯನಾದ ಮಾಂಧಾತನು ಶ್ರವಣನಿಗೆ

ಮನುಸ್ಟೃತಿ - ೮.೩೧೮, (ಪಾಠಭೇದ ಉಂಟು).

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೪೫

ಅನ್ಯೈರಪಿ ಕೃತಂ ಪಾಪಂ ಪ್ರಮತ್ತೈರ್ವಸುಧಾಧಿಷೈಃ।

ಪ್ರಾಯಶ್ಚಿತಂ ಕುರ್ವಂತಿ ತೇನ ತಚ್ಛಾಮೃತೇ ರಜಃ॥ ೩೫ ತದಲಂ ಪರಿತಾಪೇನ ಧರ್ಮತಃ ಪರಿಕಲಿತಃ

ವಧೋ ವಾನರಶಾರ್ದೂಲ ವಯಂ ಸವಶೇ ಸ್ಥಿತಾಃ ೩೬ ಶೃಣು ಚಾಪ್ಯಪರಂ ಭೂಯಃ ಕಾರಣಂ ಹರಿಪುಂಗವ |

ಯಚ್ಛು ತ್ವಾ ಹೇತುಮದ್ದೀರ ಮನ್ಯುಂ ಕರ್ತುಮರ್ಹಸಿ॥ ೩೭ ಮೇ ತತ್ರ ಮನಸಾಪೋ ಮನ್ಯುರ್ಹರಿಯೂಥಪ।

ವಾಗುರಾಭಿಶ್ಚ ಪಾಶೈಶ್ಚ ಕೂಟೈಶ್ಚ ಎಎವಿದ್ಫೆರ್ನರಾಃ | ೩೮ ಪ್ರತಿಚ್ಛನ್ನಾಶ್ಚದೃಶ್ಯಾಶ್ಚಗೃಹ್ಗಂತಿ ಸುಬಹೂನ್‌ ಮೃಗಾನ್‌ |

ಪ್ರಧಾವಿತಾನ್‌ ವಾ ವಿತ್ರಸ್ತಾನ್‌ ವಿಸ್ರಬ್ಬಾಂಶ್ಚಾಪಿ ನಿಷ್ಠಿತಾನ್‌ ೩೯

ಪ್ರಮತಾನಪ್ರಮತಾನ್‌ ವಾ ನರಾ ಮಾಂಸಾರ್ಥಿನೋ ಭೃಶಮ್‌ | ಎಧ್ಯಂತಿ ವಿಮುಖಾಂಶ್ಲಾಪಿ ದೋಷೋಶತತ್ರ ವಿದೃತೇ॥ ೪೦

ಘೋರವಾದ ತಕ್ಕ ಶಿಕ್ಷೆಯನ್ನು ವಿಧಿಸಿದನು. ನಿನ್ನಂತೆಯೇ ಅನೇಕ ಭೂಪಾಲರು ಪ್ರಮಾದದಿಂದ ದುಷ್ಕೃತ್ಯಗಳನ್ನು ನಡೆಸಿ, ಅನಂತರ ಪ್ರಾಯಶ್ಚಿತ್ರವನ್ನು ಮಾಡಿ ಕೊಂಡಿದ್ದಾರೆ. ಪ್ರಾಯಶ್ಚಿತ್ರದಿಂದ ಪಾಪವು ಪರಿಹೃತವಾಗುತ್ತದೆ (೩೪-೩೫). ಆದ್ದರಿಂದ ವ್ಯಥೆಪಡಬೇಡ. ನಿನ್ನ ವಧೆಯು ಧರ್ಮವಿಹಿತವಾಗಿ ನಡೆದಿದೆ. ವಾನರೇಶ್ವರ, ನಾವು ವಿಷಯದಲ್ಲಿ ಸ್ವತಂತ್ರರಲ್ಲ ಅಲ್ಲದೆ ಮತ್ತೊಂದು ಕಾರಣವನ್ನುಕೇಳು. ಮುಖ್ಯವಾದ ಕಾರಣವನ್ನುಕೇಳಿದರೆ, ನನ್ನವಿಷಯದಲ್ಲಿ ನೀನು ಕೋಪಿಸಲಾರೆ (೩೬-೩೭). ವಾನರೇಶ್ವರ, ನೀನು ನಿಂದಿಸಿದ್ದರಿಂದ ನನಗೆ ವ್ಯಥೆಯೂ ಇಲ್ಲ ಕೋಪವೂ ಇಲ್ಲ ಮನುಷ್ಯರು ಕಾಡುಮೃಗಗಳನ್ನು ಬಲೆಗಳಿಂದಲೂ ಹಗ್ಗಗಳಿಂದಲೂ ಇತರ ಕಪಟೋಪಾಯಗಳಿಂದಲೂ ಹಿಡಿಯುತ್ತಾರೆ. ಎದುರಿಗೆ ನಿಂತಾಗಲಿ, ಮರೆಯಲ್ಲಿ ನಿಂತಾಗಲಿ-ಸೆರೆ ಹಿಡಿಯುತಾರೆ. ಮೃಗಗಳು ಹೆದರಿ ಓಡುತಿರಲಿ, ನಂಬಿಕೆಯಿಂದ ನಿಂತಿರಲಿ- ಅವನ್ನು ಕೊಲ್ಲುತ್ತಾರೆ (೩೮-೩೯). ಅವು ಪ್ರಮಾದವಶದಿಂದ ಸಿಕ್ಕಲ್ಲಿ ಎಚ್ಚರಿಕೆಯಿಂದಿರಲಿ ಅನ್ಯಾಭಿಮುಖವಾಗಿಯೇ ಇರಲಿ - ಮೃಗಗಳನ್ನು

೧೪೬ ಕಿಷ್ಟಿಂಧಾಕಾಂಡಃ [ಸರ್ಗಃ ೧೮

ಯಾಂತಿ ರಾಜರ್ಷಯಶ್ಚಾತ್ರ ಮೃಗಯಾಂ ಧರ್ಮಕೋವಿದಾಃ

ತಸ್ಮಾತ್ಮಂ ನಿಹತೋ ಯುದ್ಧೇ ಮಯಾ ಬಾಣೇನ ವಾನರ ೪೧ ಅಯುಧ್ಯನ್‌ ಪ್ರತಿಯುಧ ನ್‌ ವಾ ಯಸ್ಮಾಚ್ಛಾಖಾಮೃಗೋಹ್ಕಸಿ| ದುರ್ಲಭಸ್ಕ ಧರ್ಮಸ್ಯ ಜೀವಿತಸ್ಯ ಶುಭಸ್ಕೆ ೪೨ ರಾಜಾನೋ ವಾನರಶ್ರೇಷ್ಠ ಪ್ರದಾತಾರೋ ಸಂಶಯಃ।

ತಾನ್ನ ಹಿಂಸ್ಕಾನ್ನ ಚಾಕ್ರೋಶೇನ್ನಾಕ್ಷಿಪೇನ್ನಾಪ್ರಿಯಂ ವದೇತ್‌ ೪೩ ದೇವಾ ಮನುಷ್ಠರೂಪೇಣ ಚರಂತ್ಯೇತೇ ಮಹೀತಲೇ!

ತ್ರಂ ತು ಧರ್ಮಮವಿಜ್ಞಾಯ ಕೇವಲಿಂ ರೋಷಮಾಸ್ತಿತಃ || ೪೪ ಪ್ರದೂಷಯಸಿ ಮಾಂ ಧರ್ಮೇ ಪಿತ್ಪಪೈತಾಮಹೇ ಸ್ಥಿತಮ್‌ | ಏವಮುಕಸ್ತುರಾಮೇಣ ವಾಲೀ ಪ್ರವ ತೋ ಭೃತಮ್‌ ll ೪೫ ದೋಷಂ `ರಾಘವೇ ದಧ್ಯೌ ಧರ್ಮೇ ಧಿಗತನಿಶ್ಚಯಃ |

ಪ್ರತ್ಯುವಾಚ ತತೋ ರಾಮಂ ಪ್ರಾಂಜಲಿರ್ವಾನರೇಶ್ದರಃ ೪೬

ಮಾಂಸಾರ್ಥಿಗಳಾದ ಜನರು ಕೊಲ್ಲುತಾರೆ. ಇದರಲ್ಲಿ ದೋಷವಿಲ್ಲ ಧರ್ಮ ಕೋವಿದರಾದ ರಾಜರ್ಷಿಗಳೂ ಮಾರ್ಗವನ್ನನುಸರಿಸಿ ಬೇಟೆಯಾಡುತಾರೆ. ಆದ್ದರಿಂದ, ವಾನರ, ನಿನ್ನನ್ನುಬಾಣದಿಂದ ಘಾತಿಸಿದ್ದೇನೆ (೪೦-೪೧). ನನ್ನೊಡನೆ ಯುದ್ಧಸನ್ನದ್ದನಾಗಿ ಬಂದಿರು- ಬಾರದಿರು, ನಿನ್ನನ್ನು ವಧಿಸಿದ್ದೇನೆ. ನೀನೊಂದು ಶಾಖಾಮೃಗ. ದುರ್ಲಭವಾದ ಧರ್ಮ, ಜೀವನ, ಅಭ್ಯುದಯಗಳನ್ನು ರಾಜರೇ ಪ್ರಜೆಗಳಿಗೆ ಸಂಪಾದಿಸಿಕೊಡುತ್ತಾರೆ. ಇದರಲ್ಲಿ ಸಂದೇಹವಿಲ್ಲ ಆದ್ದರಿಂದ ರಾಜರನ್ನು ಹಿಂಸಿಸುವುದಾಗಲಿ ನಿಂದಿಸುವುದಾಗಲಿ ಆಕ್ಷೇಪಿಸುವುದಾಗಲಿ ಕೂಡದು. ಅವರಿಗೆ ಅಪ್ರಿಯವಾದ ಮಾತನ್ನಾಡಬಾರದು (೪೨-೪೩). ರಾಜರೆಂದರೆ ಮಹೀತಳದಲ್ಲಿಮನುಷ್ಯರೂಪದಿಂದ ಸಂಚರಿಸುವ ದೇವತೆಗಳು. ನೀನು ಧರ್ಮಸೂಕ್ಷ್ಮವನ್ನರಿಯದೆ ಬರಿಯ ರೋಷಾವೇಶದಿಂದ ನನ್ನನ್ನು ದೂಷಿಸಿದ್ದೇಯೆ. ಪಿತೃವಿತಾಮಹಪರಂಪರೆಯಿಂದ ಬಂದ ಧರ್ಮಮಾರ್ಗದಲ್ಲಿ ನಾನು ಸ್ಥಿರವಾಗಿ ನಿಂತಿದ್ದೇನೆ” ಎಂದು ಹೇಳಿದನು. ಶ್ರೀರಾಮನ ನುಡಿಯನ್ನಾ ಲಿಸಿ ವಾಲಿಗೆ ಬಹಳ ಪಶ್ಚಾತ್ರಾಪವಾಯಿತು (೪೪-೪೫). ಧರ್ಮದ ವಿಷಯದಲ್ಲಿ ಸರಿಯಾದ ಅರಿವಾಯಿತು. ರಾಘವನಲ್ಲಿ ದೋಷವಿಲ್ಲವೆಂದು ಮನಸಿಗೆ

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೪೭

ಯತ್ತ್ವಮಾತ್ಮನರಶ್ರೇಷ್ಠತದೇವಂ ನಾತ್ರ ಸಂಶಯಃ

ಪ್ರತಿವಕುಂ ಪ್ರಕೃಷ್ಠೇ ಹಿ ನಾಪಕೃಷ್ಟಸ್ತುಶಕ್ನುಯಾಮ್‌ ೪೭ ಯದಯುಕಂ ಮಯಾ ಪೂರ್ವಂ ಪ್ರಮಾದಾದುಕಮಪ್ರಿಯಮ್‌ ತತ್ರಾಪಿ ಖಲು ಮೇ ದೋಷಂ ಕರ್ತುಂ ನಾರ್ಹಸಿ ರಾಘವ॥ ೪೮

ತ್ರಂ ಹಿ ದೃಷ್ಟಾರ್ಥತತ್ವ್ವಜ್ಞಃ ಪ್ರಜಾನಾಂ ಹಿತೇ ರತಃ।

ಕಾರ್ಯಕಾರಣಸಿದ್ದ್‌ೌತೇ ಪ್ರಸನ್ನಾ ಬುದ್ಧಿರವ್ಯಯಾ ೪೯ ಮಾಮಪ್ಯಗತಧರ್ಮಾಣಂ ವ್ಯತಿಕ್ರಾಂತಪುರಸ್ಕೃತಮ್‌ | ಧರ್ಮಸಂಹಿತಯಾ ವಾಚಾ ಧರ್ಮಜ್ಞ ಪರಿಪಾಲಯ ॥। ೫೦ ತ್ವಾತ್ಮಾನಮಹಂ ಶೋಚೇ ನತಾರಾಂನಚ ಬಾಂಧವಾನ್‌ |

ಯಥಾ ಪುತ್ರಂ ಗುಣಶ್ರೇಷ್ಠಮಂಗದಂ ಕನಕಾಂಗದಮ್‌ ೫೧ ಮಮಾದರ್ಶನಾದ್ದೀನೋ ಬಾಲ್ಕಾತ್‌ ಪ್ರಭೃತಿ ಲಾಲಿತಃ

ತಟಾಕ ಇವ ಪೀತಾಂಬುರುಪಶೋಷಂ ಗಮಿಷ್ಯತಿ ೫೨

ಅನ್ನಿಸಿತು. ವಾನರೇಂದ್ರನು ಕೈಮುಗಿದುಕೊಂಡು ವಿಜ್ಞಾಪಿಸಿದನು : ""ಪುರುಷೋತ್ತಮ, ನೀನು ಹೇಳುವುದು ವಾಸವ. ಸಂಶಯವಿಲ್ಲ ಅಲ್ಪನಾದವನು ಮಹಾಪುರುಷನಿಗೆ ಪ್ರತಿಯಾಗಿ ಹೇಳುವುದು ಶಕ್ಕವಲ್ಲ ಮೊದಲು ನಿನಗೆ ಅಯುಕ್ರವೂ ಅಪ್ರಿಯವೂ ಆದ ಮಾತನ್ನಾಡಿಬಿಟ್ಟೆನು. ರಾಘವ, ನನ್ನ ತಪ್ಪನ್ನು ಮನಸಿಗೆ ತಂದುಕೊಳ್ಳಬೇಡ (೪೬-೪೮). ನೀನು ಸಕಲವಸುಗಳ ತತ್ತ್ವವನ್ನು ಬಲ್ಲವನು. ಪ್ರಜೆಗಳ ಹಿತದಲ್ಲಿ ನಿರತನಾದವನು. ಕಾರ್ಯಕಾರಣವನ್ನು ನಿರ್ಣಯಿಸುವುದರಲ್ಲಿನಿನ್ನ ಬುದ್ಧಿಯು ಪಕ್ಷಪಾತರಹಿತವಾಗಿ ನಿರ್ಮಲವಾಗಿದೆ; ಸ್ನಿರವಾಗಿದೆ (೪೯). ನಾನು ಧರ್ಮಜ್ಞಾನವಿಲ್ಲದವನು, ಧರ್ಮಬಾಹಿರರಲ್ಲಿ ಅಗ್ರಗಣ್ಯ. ಹೇ ಧರ್ಮಜ್ಞ ಧರ್ಮಸಂಹಿತವಾದ ಮಾತಿನಿಂದ ಅಭಯವನ್ನು ನೀಡಿ ನನ್ನನ್ನು ಪರಿಪಾಲಿಸು. ಈಗ ನಾನು ನನಗಾಗಲಿ, ತಾರೆಗಾಗಲಿ, ನನ್ನ ಬಂಧುಗಳಿಗಾಗಲಿ - ಅಷ್ಟಾಗಿ ಶೋಕಿಸುವುದಿಲ್ಲ ಆದರೆ ಗುಣಶ್ರೇಷ್ಠನೂ ಕನಕಾಂಗದ ಭೂಷಿತನೂ ಆದ ನನ್ನಮಗ ಅಂಗದನನ್ನುನೆನೆಸಿಕೂಂಡರೆ ದುಃಖ ಉಮ್ಮಳಿಸುವುದು (೫೦-೫೧). ಬಾಲ್ಯದಿಂದಲೂ ಅವನನ್ನು ಪ್ರೀತಿಯಿಂದ

೧೪೮ ಕಿಷ್ಕಿಂಧಾಕಾಂಡಃ [ಸರ್ಗಃ ೧೮ ಬಾಲಶ್ಚಾಕ್ಕತಬುದ್ದಿಶ್ಸ ಏಕಪುತ್ರಶ್ಚಮೇ ಪ್ರಿಯಃ ತಾರೇಯೋ ರಾಮ ಭವತಾ ರಕ್ಷಣೀಯೋ ಮಹಾಬಲಃ ೫೩

ಸುಗ್ರೀವೇ ಚಾಂಗದೇ ಚೈವ ವಿಧತ್ವ್ವಮತಿಮುತ್ತಮಾಮ್‌ | ತ್ರಂ ಹಿ ಶಾಸ್ತಾಚ ಗೋಪ್ತಾಚ ಕಾರ್ಯಕಾರ್ಯ ವಿಧ್‌ ಸ್ಥಿತಃ 1 ೫೪

ಯಾತೇ ನರಪತೇ ವೃತಿರ್ಭರತೇ ಲಕ್ಷ ಕೇ ಚಿ ಯಾ।

ಸುಗ್ರೀವೇ ಚಾಂಗದೇ ರಾಜಂಸಾಂ ತ್ಹಮಾಧಾತುಮರ್ಹಸಿ॥ ೫೫ ಮದ್ದೋಪಷಕ್ಕ ತದೋಷಾಂ ತಾಂಯಥಾ ತಾರಾಂ ತಪಸ್ವಿನೀಮ್‌ | ಸುಗ್ರೀವೋ ನಾವಮನ್ಯೇತ ತಥಾವಸ್ಥಾತುಮರ್ಹಸಿ ೫೬ ತ್ವಯಾ ಹ್ಯನುಗ್ಗಹೀತೇನ ರಾಜ್ಯಂ ಶಕ್ಕಮುಪಾಸಿತುಮ್‌ |

ತ್ವದಹೇ ವರ್ತಮಾನೇನ ತವ ಚಿತಾನುವರ್ತಿನಾ ೫೭

ಲಾಲಿಸುತ್ತಿದ್ದೇನೆ. ಇನ್ನು ಮೇಲೆ ನನ್ನನ್ನು ಕಾಣದೆ ಅವನು ದೀನನಾಗುವನು. ನೀರನ್ನು ಬಳಸಿ ಬತ್ತಿಹೋಗುವ ಕೊಳದಂತೆ, ನನ್ನ ಮಗನು ದಿನದಿನವೂ ಕೃಶವಾಗುತ್ತಹೋಗುವನು (೫೨). ಅವನು ಇನ್ನೂ ಹುಡುಗ. ಬುದ್ಧಿ ಬೆಳೆದಿಲ್ಲ ನನ್ನ ಒಬ್ಬನೇ ಮುದ್ದುಮಗ ತಾರೆಯ ಗರ್ಭದಲ್ಲಿಜನಿಸಿದ್ದಾನೆ. ಶ್ರೀರಾಮ, ನೀನು ಅಂಗದನನ್ನು ಕಾಪಾಡಿಕೊಂಡು ಬರಬೇಕು. ಅವನು ಬಾಲಕನಾದರೂ ಮಹಾ ಶೂರ (೫೩). ಸುಗ್ರೀವನಲ್ಲಿಯೂ ಅಂಗದನಲ್ಲಿಯೂ ಒಂದೇ ವಿಧವಾಗಿ ವಾತ್ತಲ್ಯಬುದ್ದಿಯನ್ನಿಡು. ಸರಿಯಾಗಿ ನಡೆದರೆ ಪಾಲಿಸತಕ್ಕವನೂ ತಪ್ಪಿದರೆ ದಂಡಿಸತಕ್ಕವನೂ ನೀನೇ. ಹೇ ನರೇಶ್ವರ, ನಿನ್ನ ತಮ್ಮಂದಿರಾದ ಭರತನನ್ನೂ ಲಕ್ಷ್ಮಣನನ್ನೂ ಹೇಗೆ ಪ್ರೀತಿಯಿಂದ ನೋಡಿಕೊಳ್ಳುವೆಯೋ ಹಾಗೆಯೇ ಸುಗ್ರೀವನನ್ನೂ ಅಂಗದನನ್ನೂ ನೋಡಿಕೊ (೫೪-೫೫). ತಾರೆ ಏನನ್ನೂ ಅರಿಯಳು. ಅವಳಲ್ಲಿಅಪರಾಧವಿಲ್ಲ ನನ್ನತಪ್ಪಿಗಾಗಿ ಅವಳನ್ನು ಅಪರಾನಿಯೆಂದು ಸುಗ್ರೀವನು ಎಣಿಸಿಯಾನು. ಸುಗ್ರೀವನು ಅವಳನ್ನು ಅವಮಾನಪಡಿಸದಂತೆ ನೀನು ಎಚ್ಚರಿಕೆ ವಹಿಸಬೇಕು (೫೬). ಶ್ರೀರಾಮ, ನಿನ್ನ ಅನುಗ್ರಹಕ್ಕೆ ಪಾತ್ರನಾಗಿ ನಿನ್ನ ಅಧೀನದಲ್ಲಿದ್ದು ನಿನ್ನ ಇಷ್ಟದಂತೆ ನಡೆದಲ್ಲಿ ಮಾತ್ರ ಸುಗ್ರೀವನು ರಾಜ್ಯವನ್ನಾಳಲು ಸಾಧ್ಯ. ಹಾಗಿದ್ದರೆ ಸ್ವರ್ಗವನ್ನೂ ಪಡೆಯಬಹುದು ;

ಸರ್ಗಃ ೧೮] ವಾಲಿವಧಸಮರ್ಥನಮ್‌ ೧೪೯

ಶಕ್ಕಂ ದಿವಂ ಚಾರ್ಜಯಿತುಂ ವಸುಧಾಂ ಚಾಪಿ ಶಾಸಿತುಮ್‌ ತತೋತಹಂ ವಧಮಾಕಾಂಕ್ಷನ್‌ ವಾರ್ಯಮಾಣೋತಪಿ ತಾರಯಾ ಸುಗ್ರೀವೇಣ ಸಹಬ್ರಾತ್ರಾ ದ್ರಂದ್ಧಯುದ್ದಮುಪಾಗತಃ ಆತ್ಯುಕ್ತ್ವಾಸಂನತೋ ರಾಮಂ ವಿರರಾಮ ಹರೀಶ್ಚರಃ ರ್ಜ ತಮಾಶ್ನಾಸಯದ್ರಾಮೋ ವಾಲಿನಂ ವೃಕದರ್ಶನಮ್‌ | ಸಾಮಸಂಪನ್ನಯಾ ವಾಚಾ ಧರ್ಮತತ್ತಾರ್ಥಯುಕಯಾ | ೬೦ ಸಂತಾಪಸ್ತ್ವಯಾ ಕಾರ್ಯ ಏತದರ್ಥಂ ಪುವಂಗಮ।

ವಯಂ ಭವತಾ ಚಿಂತ್ಯಾ ನಾಪ್ಯಾತ್ಕಾ ಹರಿಸತಮ ೬೧ ವಯಂ ಭವದ್ದಿಶೇಷೇಣ ಧರ್ಮತಃ ಕೃತನಿಶ್ಚಯಾಃ

ದಂಡ್ಯೇ ಯಃ ಪಾತಯೇದ್ದಂಡಂ ದಂಡ್ಕೋ ಯಶ್ಚಾಪಿ ದಂಡ್ಕತೇ ll ೬೨ ಕಾರ್ಯಕಾರಣಸಿದ್ಧಾರ್ಥಾವುಭೌ ತೌ ನಾವಸೀದತಃ।

ತದ್ಬವಾನ್‌ ದಂಡಸಂಯೋಗಾದಸ್ಥಾದ್ವಿಗತಕಿಲ್ಪಿಷಃ || ೬೩

ಭೂಮಿಯನ್ನೂ ಆಳಬಹುದು. ತಾರೆಯು ಬೇಡಬೇಡವೆಂದರೂ ಕೇಳದೆ ನಾನು ನಿನ್ನಿಂದ ವಧೆಯನ್ನು ಬಯಸಿದೆನೋ ಎಂಬಂತೆ ಬಂದೆನು (೫೭-೫೮). ಸೋದರನಾದ ಸುಗ್ರೀವನೊಡನೆ ದ್ವಂದ್ವಯುದ್ಧಕ್ಕೆ ನಿಂತೆನು''. ಹೀಗೆ ಹೇಳಿ ಕಪೀಶ್ವರನು ಶ್ರೀರಾಮನಿಗೆ ಕೈಮುಗಿದು ಸುಮ್ಮನಾದನು. ಆಗ ಅವನಿಗೆ ವಿವೇಕೋದಯವಾಗಿತ್ತು ಶ್ರೀರಾಮನು ಧರ್ಮತತ್ತ್ವವನ್ನೊಳಗೊಂಡ ವಾಕ್ಕದಿಂದ ವಾಲಿಯನ್ನುಸಂತೈಸುತ್ತಹೇಳಿದನು (೫೯-೬೦). ""ವಾನರೋತ್ತಮ, ಇದಕ್ಕಾಗಿ ನೀನು ಚಿಂತಿಸಬೇಡ. ( ನಿನ್ನನ್ನು ಕೊಂದುದಕ್ಕಾಗಿ) ನಮ್ಮ ವಿಷಯ ದಲ್ಲಾಗಲಿ ನಿನ್ನವಿಷಯದಲ್ಲಾಗಲಿ ಚಿಂತಿಸಬೇಕಾದ್ದಿಲ್ಲ. ನಿನಗಿಂತಲೂ ಅಧಿಕವಾಗಿ ನಮಗೆ ಧರ್ಮದಲ್ಲಿ ನಿಶ್ಚಯ ಜ್ಞಾನವುಂಟು. ಶಿಕ್ಷಾರ್ಹನಿಗೆ ಶಿಕ್ಷೆಯನ್ನು ವಿಧಿಸುವವನು, ಶಿಕ್ಷಿಗೆ ಒಳಗಾಗತಕ್ಕವನು - ಇವರಿಬ್ಬರಿಗೆ ಯಾವ ಹಾನಿಯೂ ಒದಗುವುದಿಲ್ಲ ಕಾರಣವಾದ ದಂಡವಿಧಾನ, ಕಾರ್ಯವಾದ ದಂಡಾನುಭವ- ಇವುಗಳಿಂದ ಉದ್ದೇಶವು ಫಲಿಸಿ ಅವರು ಕೃತಕೃತ್ಯರಾಗುತ್ತಾರೆ. ನೀನು ಶಿಕ್ಷೆಯನ್ನು ಪಡೆದದ್ದರಿಂದ ನಿನ್ನ ಪಾಪವು ನೀಗಿತು (೬೧-೬೩).

೧೫೦ ಕಿಷ್ಕಿಂಧಾಕಾಂಡಃ [ಸರ್ಗಃ ೧೮

ಗತಃ ಸ್ಟಾಂ ಪ್ರಕೃತಿಂ ಧರ್ಮಾಂ ಧರ್ಮದೃಷ್ಟೇನ ವರ್ತೃನಾ। ತ್ಯಜ ಶೋಕಂ ಮೋಹಂ ಭಯಂ ಹೃದಯೇ ಸ್ಥಿತಮ್‌ Il ೬೪

ತ್ಯಯಾ ವಿಧಾನಂ ಹರ್ಯಗ್ರ, ಶಕ್ಕಮತಿವರ್ತಿತುಮ್‌ ಯಥಾ ತ್ರಯ್ಯಂಗದೋ ನಿತ್ಯಂ ವರ್ತತೇ ವಾನರೇಶ್ವರ || ೬೫

ತಥಾ ವರ್ತೇತ ಸುಗೀವೇ ಮಯಿ ಚಾಪಿ ಸಂಶಯಃ ಸತಸ್ಯ ವಾಕ್ಕಂ ಮಧುರಂ ಮಹಾತ್ಮನಃ ಸಮಾಹಿತಂ ಧರ್ಮಪಥಾನುವರ್ತಿನಃ। ನಿಶಮ್ಯ ರಾಮಸ್ಯ ರಣಾವಮರ್ದಿನೋ ವಚಃ ಸುಯುಕಂ ನಿಜಗಾದ ವಾನರಃ॥ ೬೬ ಶರಾಭುತಪೇನ ವಿಚೇತಸಾ ಮಯಾ ಪ್ರದೂಷಿತಸ್ತಂ ಯದಜಾನತಾ ಪ್ರಭೋ ಇದಂ ಮಹೇಂದ್ರೋಪಮ ಭೀಮವಿಕ್ರಮ ಪ್ರಸಾದಿತಸ್ತ್ವಂ ಕ್ಷಮ ಮೇ ನರೇಶ್ದರ ಓ೭ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಅಷ್ಟುದಶಃ ಸರ್ಗಃ ಧರ್ಮಶಾಸ್ತ್ರೋಕವಾದ ಮಾರ್ಗದಿಂದಲೇ ನೀನು ಧರ್ಮಯುಕವೂ ಸಹಜವೂ ಆದ ಶುದ್ಧಸ್ವಭಾವವನ್ನು ಪಡೆದಿದ್ದೀಯೆ. ನಿನ್ನ ಅಂತರಂಗದಲ್ಲಿರುವ ಶೋಕಮೋಹಗಳನ್ನೂ ಭಯವನ್ನೂ ಪರಿತ್ಯಜಿಸು (೬೪). ವಾನರೇಶ್ವರ, ನಿನ್ನ ಕರ್ಮಫಲವನ್ನು ಮೀರಲು ನಿನ್ನಿಂದಾಗದು. ಅಂಗದನು ನಿನ್ನಲ್ಲಿ ಹೇಗಿದ್ದನೋ ಹಾಗೆಯೇ ಸುಗ್ರೀವನಲ್ಲಿಯೂ ನನ್ನಲ್ಲಿಯೂ ವರ್ತಿಸುವನು. (ಅವನನ್ನು ಪುತ್ರ ವಾತ್ಸಲ್ಯದಿಂದ ನೋಡಿಕೊಳ್ಳುವೆವು)'' ಎಂದು ಹೇಳಿದನು (೬೫). ಮಹಾತ್ಮನೂ ಧರ್ಮನಿಷ್ಠನೂ ರಣಶೂರನೂ ಆದ ಶ್ರೀರಾಮನ ಮಧುರವಾಕ್ಯವನ್ನು ಕೇಳಿ ವಾಲಿಯು "'ಪ್ರಭು, ನೀನು ದೇವೇಂದ್ರನಿಗೆ ಸಮಾನನು. ನಿನ್ನ ಪರಾಕ್ರಮ ಅದ್ಭುತವಾದುದು. ಶರಾಘಾತದಿಂದ ನಾನು ಬುದ್ದಿಗೆಟ್ಟು ನಿನ್ನ ಮಹಿಮೆ ಯನ್ನರಿಯದೆ ನಿನ್ನನ್ನು ನಿಂದಿಸಿದೆನು. ಸ್ವಾಮಿ, ಪ್ರಸನ್ನನಾಗು. ನನ್ನನ್ನು ಕ್ಷಮಿಸು'' ಎಂದು ನುಡಿದನು (೬೬-೬೭).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಹದಿನೆಂಟನೆಯಸರ್ಗ

೧೫೧

ಏಕೋನವಿಂಶಃ ಸರ್ಗಃ

ತಾರಾಗಮನಮ್‌ ವಾನರಮಹಾರಾಜಃ ಶಯಾನಃ ಶರವಿಕ್ಷತಃ ಪ್ರತ್ಯುಕೋ ಹೇತುಮದ್ದಾಕ್ಮೈರ್ನೊೋತರಂ ಪ್ರತ್ಯಪದ್ಯತ॥ ಅಶ್ನಭಿಃ ಪರಿಭಿನ್ನಾಂಗಃ ಪಾದಪೈರಾಹತೋ ಭ್ಲಶಮ್‌ ರಾಮಬಾಣೇನ ಕ್ಲಾಂತೋ ಜೀವಿತಾಂತೇ ಮುಮೋಹ ಸಃ॥ ತಂ ಭಾರ್ಯಾ ಬಾಣಮೋಕ್ಷೇಣ ರಾಮದತ್ರೇನ ಸಂಯುಗೇ॥

ಹತಂ ಪ್ಲವಗಶಾರ್ದೂಲಂ ತಾರಾ ಶುಶ್ರಾವ ವಾಲಿನಮ್‌ ॥॥

ಸಾ ಸಪುತ್ರಾಪ್ರಿಯಂ ಶ್ರುತ್ವಾವಧಂ ಭರ್ತುಃ ಸುದಾರುಣಮ್‌ |

ನಿಷ್ಠಪಾತ ಭೃಶಂ ತ್ರಸ್ತಾಮೃಗೀವ ಗಿರಿಗಹ್ಹದಾತ್‌ ಸರ್ಗ೧೯

ತಾರೆಯು ಬಂದು ರಣಶಯ್ಯೆಯಲ್ಲಿಮಲಗಿದ್ದವಾಲಿಯನ್ನುನೋಡುವುದು

ಶ್ರೀರಾಮನು ಯುಕಿಯುಕವಾಗಿ ಪ್ರತ್ಯುತರವನ್ನು ಹೇಳಲು, ಶರಾಘಾತದಿಂದ ವಿಕ್ಷತನಾದ ವಾನರೇಶ್ವರನು ಪುನಃ ಉತ್ತರವನ್ನು ಹೇಳಲಾರದೆ ಸುಮ್ಮನಾದನು. ಸುಗ್ರೀವನು ಬೀಸಿದ ಬಂಡೆಗಳಿಂದಲೂ ಮರಗಳ ಹೊಡೆತಗಳಿಂದಲೂ ಅವನ ದೇಹವು ಜರ್ರುರಿತವಾಗಿತ್ತು ಅದರ ಮೇಲೆ ರಾಮಬಾಣವು ಎದೆಗೆ ಹೊಕ್ಕು ದರಿಂದ ವಾಲಿಯು ಬಸವಳಿದನು. ಮರಣ ಕಾಲವು ಸನ್ನಿಹಿತವಾಗಲು ಅವನಿಗೆ ಎಚ್ಚೆರದಪ್ಪಿತು (೧-೨). ಶ್ರೀರಾಮನ ಬಾಣದಿಂದ ವಾಲಿಯು ಹತನಾಗಿ ಬಿದ್ದನೆಂದು ಅವನ ಭಾರ್ಯೆಯಾದ ತಾರೆಗೆ ಸುದ್ದಿ ಮುಟ್ಟಿತು. ಪತಿಯು ಹತನಾದನೆಂಬ ಭೀಕರವಾದ ವಾರ್ತೆಯನ್ನು ಕೇಳಿ ತಾರೆಯು ಹೆಣ್ಣುಜಿಂಕೆಯಂತೆ ಹೆದರಿ ಕಂಗಾಲಾದಳು. ಅವಳು ಪುತ್ರನಾದ ಅಂಗದನೊಡನೆ ಕಿಷ್ಟಿಂಧಾ ಗುಹೆಯಿಂದ ಹೊರಬಂದಳು (೩-೪).

೧೫೨ ಕಿಪ್ಕಿಂಧಾಕಾಂಡಃ [ಸರ್ಗಃ ೧೯

ಯೇ ತ್ವಂಗದಪರೀವಾರಾ ವಾನರಾ ಭೀಮವಿಕ್ರಮಾಃ।

ತೇ ಸಕಾರ್ಮುಕಮಾಲೋಕ್ಕ ರಾಮಂ ತ್ರಸಾಃ ಪ್ರದುದ್ರುವುಃ ಸಾ ದದರ್ಶ ತತಸ್ಪನಾನ್‌ ಹರೀನಾಪತತೋ ದ್ರುತಮ್‌ ಯೂಥಾದಿವ ಪರಿಭಷ್ಟಾನ್‌ ಮೃಗಾನ್ನಿಹತಯೂಥಪಾನ್‌ Il ತಾನುವಾಚ ಸಮಾಸಾದ್ಯ ದುಃಖತಾನ್‌ ದುಃಖತಾ ಸತೀ | ರಾಮವಿತ್ರಾಸಿತಾನ್‌ ಸರ್ವಾನನುಬದ್ಧಾನಿವೇಷುಭಿಃ ಶಿ ವಾನರಾ ರಾಜಸಿಂಹಸ್ಯ ಯಸ್ಯ ಯೂಯಂ ಪುರಃಸರಾಃ

ತಂ ವಿಹಾಯ ಸುಸಂತ್ರಸಾಃ ಕಸ್ಥದ್ಧ: ವಥ ದುರ್ಗತಾಃ॥ ರಾಜ್ಯಹೇತೋಃ ಚೇದ್ಬಾ: ತಾ ಭ್ರಾತ್ರಾ ರೌದ್ರೇಣ ಪಾತಿತಃ।

ರಾಮೇಣ ಪ್ರಹಿತೈ ರೌದ್ಧೈ ರ್ಪಾರ್ಗಣ ರ್ದೂರಪಾತಿಭಿಃ || ಕಪಿಪತ್ನ್ಯಾ ವಚಃ ತುತ್ತಾ ಪಯಃ ಹಾ ಪ್ರಾಪಕಾಲಮವಿಕ್ಬಿಷ್ಟಮೂಚುರ್ವಚನಮಂಗನಾಮ್‌॥ ೧೦

ಅಷ್ಟರಲ್ಲಿ ಅಂಗದನ ಮೈಗಾವಲಿನವರೂ ಭೀಮವಿಕ್ರಮರೂ ಆದ ಕೆಲವು ವಾನರರು ಮುಂದೆ ಹೋಗಿ, ಧನುರ್ಧಾರಿಯಾದ ಶ್ರೀರಾಮನನ್ನುನೋಡಿದರು. ನೋಡಿದೊಡನೆ ಹೆದರಿ ತತ್ತರಿಸಿ ಹಿಂದಿರುಗಿ ಓಡಿಬರುತ್ತಿದ್ದರು (೫). ಸಲಗವು ಘಾತಿಸಲ್ಪಟ್ಟಾಗ ಇತರ ಮೃಗಗಳು ಚೆದರಿ ಓಡುವಂತೆ, ಹೆದರಿ ಓಡಿಬರುತ್ತಿದ್ದ ಕಪಿಗಳನ್ನು ತಾರೆಯು ನೋಡಿದಳು. ಅವರೆಲ್ಲರೂ ದುಃಖಿತರಾಗಿದ್ದರು. ಶ್ರೀರಾಮನನ್ನುಕಂಡು ಭೀತರಾಗಿದ್ದರು. ಬಾಣಗಳನ್ನು ಹೊಡೆಯುತ್ತಹಿಂದುಗಡೆಯಿಂದ ಯಾರೋ ಅಟ್ಟಿಸಿಕೊಂಡು ಬರುತ್ತಿದ್ದಾರೋ ಎಂಬಂತೆ ಕಾಣುತ್ತಿದ್ದರು (೬-೭). ತಾರೆಯು ಅವರನ್ನು ಕುರಿತು ""ಎಲೈ ವಾನರರೆ, ರಾಜಕಂಠೀರವನಾದ ವಾಲಿಯ ಪಕ್ಷದಲ್ಲಿಅಗ್ರಗಣ್ಯರಾದ ವೀರರು ನೀವು. ಅವನೊಬ್ಬನನ್ನೇ ಬಿಟ್ಟು ಇಷ್ಟುಭಯ ಪಡುತ್ತ ದುರವಸ್ಥೆಗೊಳಗಾಗಿ ಓಡಿಹೋಗುವುದಾದರೂ ಏಕೆ? (೮). ರಾಜ್ಯ ಲೋಭದಿಂದ ತಮ್ಮನು ತನ್ನ ಅಣ್ಣನನ್ನೇ ಕೊಲ್ಲಿಸಿರಬಹುದು. ಡೂರಗಾಮಿ ಗಳಾದ ರೌದ್ರಾಸ್ತಗಳನ್ನು ಪ್ರಯೋಗಿಸಿ ರಾಮನು ಕೊಂದಿರಬಹುಜು, (ಆದರೆ ನೀವು ಓಡುವುದಾದರೂ ಏಕೆ 9)'' ಎಂದು ಕೇಳಿದಳು (೯). ಶಾರೆಯ

ಸರ್ಗಃ ೧೯] ತಾರಾಗಮನಮ್‌ ೧೫೩

ಜೀವಪುತ್ರೇ ನಿವರ್ತಸ್ನ ಪುತ್ರಂ ರಕ್ಷಸ್ನ ಚಾಂಗದಮ್‌

ಅಂತಕೋ ರಾಮರೂಪೇಣ ಹತ್ವಾನಯತಿ ವಾಲಿನಮ್‌ ೧೧ ಕ್ಷಿಪಾನ್‌ ವೃಕ್ಷಾನ್‌ ಸಮಾವಿಧ್ಯ ಎಪುಲಾಶ್ಚ ಶಿಲಾಸಥಾ

ವಾಲೀ ವಜ್ರಸಮೈರ್ಬಾಣೈ ರಾಮೇಣ ವಿನಿಪಾತಿತಃ ೧೨ ಅಭಿದ್ರುತಮಿದಂ ಸರ್ವಂ ವಿದ್ರುತಂ ಪ್ರಸ್ಪತಂ ಬಲಮ್‌

ತಸ್ಮಿನ್‌ ಪುವಗಶಾರ್ದೂಲೇ ಹತೇ ಶಕ್ರಸಮಪ್ರಭೇ॥ ೧೩ ರಕ್ಷ್ಯತಾಂನಗರದ್ದಾರಮಂಗದಶ್ಥಾಭಿಷಿಚ್ಛತಾಮ್‌

ಪದಸ್ನಂ ವಾಲಿನಃ ಪುತ್ರಂ ಭಜಿಷ್ಯಂತಿ ಪ್ಲವಂಗಮಾಃ॥ ೧೪ ಅಥವಾರುಚಿತಂ ಸ್ಥಾನಮಿಹ ತೇ ರುಚಿರಾನನೇ |

ಆವಿಶಂತಿ ಹಿ ದುರ್ಗಾಣಿ ಕ್ಷಿಪ್ರಮದ್ಯೈವ ವಾನರಾಃ॥ ೧೫

ಮಾತನ್ನು ಕೇಳಿ ಕಾಮರೂಪಿಗಳಾದ ವಾನರರು ಸಾಲೋಚಿತವಾಗಿ ಸ್ಪಷ್ಟ ವಾಕ್ಯಗಳಿಂದ ಹೀಗೆಂದರು : ""ದೇವಿ, ನಿನ್ನ ಪುತ್ರನು ಬದುಕಿರುವನಾದ್ದರಿಂದ ಕೂಡಲಿ ಹಿಂದಿರುಗು. ಪುತ್ರನಾದ ಅಂಗದನನ್ನು ಉಳಿಸಿಕೊ. ಯಮನೇ ರಾಮ ರೂಪದಿಂದ ಬಂದು ವಾಲಿಯನ್ನು ಯಮಲೋಕಕ್ಕೆ ಸಾಗಿಸುತ್ತಿದ್ದಾನೆ (೧೦-೧೧). ಎಸೆದ ವೃಕ್ಷಗಳನ್ನೂ ವಿಪುಲಶಿಲೆಗಳನ್ನೂ ಧ್ವಂಸಮಾಡಿ, ರಾಮನು ವಜ್ರಸಮಾನ ಬಾಣಗಳಿಂದ * ವಾಲಿಯನ್ನು ಹೊಡೆದು ಉರುಳಿಸಿದ್ದಾನೆ. ಕಿಷ್ಕಿಂಧೆಯಿಂದ ಹೊರಟುಬಂದ ಕಪಿಬಲವೆಲ್ಲವೂ, ಇಂದ್ರಸಮಾನನಾದ ಕಪಿರಾಜನು ಹತನಾದೊಡನೆ, ಚಲ್ಲಾಪಿಲ್ಲಿಯಾಗಿ ಹಿಂದಕ್ಕೆ ಓಡಿಬರುತ್ತಿದೆ (೧೨-೧೩). ನೀನು ನಗರದ್ವಾರವನ್ನು ಮುಚ್ಚಿಸು! ಅಂಗದನಿಗೆ ಪಟ್ಟಾಭಿಷೇಕ ಮಾಡಿಸು. ವಾಲಿ ಪುತ್ರನು ಅಧಿಕಾರವನ್ನುವಹಿಸಿಕೊಂಡರೆ, ಕಪಿಗಳೆಲ್ಲರೂ ಅವನಿಗೆ ವಿಧೇಯರಾಗಿ ವರ್ತಿಸುವರು. ಅಥವಾ ಸುಂದರಿಯಾದ ನೀನು ಕಿಷ್ಠಿಂಧೆಯಲ್ಲಿರುವುದು ನಮಗೆ ಸರಿದೋರದು. ಈಗಲೇ ಶತ್ರುಪಕ್ಷದ ವಾನರರು ಬಂದು ದುರ್ಗ ಗಳೆಲ್ಲವನ್ನೂ ಆಕ್ರಮಿಸಿಬಿಡುವರು (೧೪-೧೫).

* ಇದೆಲ್ಲವನ್ನೂ ಕಪಿಗಳು ಬರಿಯೆ ಊಹೆಯಿಂದ ಹೇಳಿದ್ದಾರೆ. ಇದು ಸಂಭಾವ್ಯವಾದ.

೧೫೪ ಕಿಷ್ಟಿಂಧಾಕಾಂಡಃ [ಸರ್ಗಃ ೧೯ ಅಭಾರ್ಯಾಶ್ಚಸಭಾರ್ಯಾಶ್ಚಸಂತ್ಯತ್ರ ವನಚಾರಿಣಃ |

ಲುಬ್ಬೇಭ್ಯೋ ವಿಪ್ರಯುಕೇಭ್ಯಃ ಸ್ವೇಭ್ಯೋ ನಸ್ತುಮುಲಂ ಭಯಂ॥ ೧೬ ಅಲಾಂತರಗತಾನಾಂ ತು ಶ್ರುತ್ಸಾವಚನಮಂಗನಾ |

ಆತ್ಮನಃ ಪ್ರತಿರೂಪಂ ಸಾ ಬಭಾಷೇ ಚಾರುಹಾಸಿನೀ ೧೭ ಪುತ್ರೇಣ ಮಮ ಕಿಂ ಕಾರ್ಯಂ ಕಿಂ ರಾಜ್ಯೇನ ಕಿಮಾತ್ಮನಾ

ಕಪಿಸಿಂಹೇ ಮಹಾಭಾಗೇ ತಸ್ಮಿನ್‌ ಭರ್ತರಿ ನಶ್ಯತಿ ॥1 ೧೮ ಪಾದಮೂಲಂ ಗಮಿಷ್ಯಾಮಿ ತಸ್ಕೈವಾಹಂ ಮಹಾತ್ಮನಃ

ಯೋಜಇಸ್‌ೌ ರಾಮಪ್ರಯುಕೇನ ಶರೇಣ ವಿನಿಪಾತಿತಃ ೧೯ ಏವಮುಕ್ಹ್ವ್ವಾಪ್ರದುದ್ರಾವ ರುದತೀ ಶೋಕಕರ್ಶಿತಾ।

ಶಿರಶ್ಟೋರಶ್ಚ ಬಾಹುಭ್ಯಾಂ ದುಃಖೇನ ಸಮಭಿಫ್ಲತೀ || ೨೧

ಆವ್ರಜಂತೀ ದದರ್ಶಾಥ ಪತಿಂ ನಿಪತಿತಂ ಭುವಿ। ಹಂತಾರಂ ದಾನವೇಂದ್ರಾಣಾಂ ಸಮರೇಷ್ನನಿವರ್ತಿನಾಮ್‌॥ ೨೧

ಆವರಲ್ಲಿಕೆಲವರಿಗೆ ಮಡದಿಯರಿದ್ದಾರೆ. ಕೆಲವರಿಗೆ ಇಲ್ಲ ಲುಬ್ಬರೂ ಹಿಂದೆ ನಮ್ಮಿಂದ ವಂಚಿತರೂ ಆದ ನಮ್ಮ ಜನರಿಂದಲೇ ಘೋರವಾದ ಭಯವು ಉಪಸ್ಥಿತವಾಗಿದೆ '' ಎಂದು ಹೇಳಿದರು (೧೬). ಕಪಿಗಳು ಹತ್ತಿರಕ್ಕೆ ಬಂದು ಹೀಗೆ ಪಿಸುಗುಟ್ಟಲು, ಅವರ ಅಂಜಿಕೆಯನ್ನು ಕಂಡು ಸಮಯದಲ್ಲಿಯೂ ತುರೆಗೆ ನಗು ಬಂದಿತು. ಅವಳು ತನಗೆ ಅನುರೂಪವಾದ ಧೈರ್ಯವನ್ನುತಳೆದು ""ಎಲೈ ಕಪಿಗಳೆ, ಮಹಾತ್ಮನೂ ಕಪಿಸಿಂಹನೂ ಆದ ನನ್ನ ಪತಿಯು ಹತನಾದ ಮೇಲೆ ನನಗೆ ಮಗನಿಂದ ಆಗಬೇಕಾದ್ದೇನು ? ರಾಜ್ಯದಿಂದೇನು ? ನಾನು ಬದುಕಿದರು ಫಲವೇನು? (೧೭-೧೮). ನನ್ನಪತಿಯ ಪಾದಮೂಲವನ್ನುಸೇರಿ ಕೊಳ್ಳುವೆನು. ಮಹಾತ್ಮನು ರಾಮನ ಬಾಣದಿಂದ ಹತನಾದನಲ್ಲವೆ ?'' ಎಂದಳು. ಎನ್ನುತ್ತಲೆ ಶೋಕಪೀಡಿತಳಾಗಿ ಅಳುತ್ತ ಮುಂದಕ್ಕೆ ಧಾವಿಸಿದಳು. ಎರಡು ಕೈಗಳಿಂದಲೂ ತಲೆಯನ್ನು ಚಚ್ಚಿಕೊಳ್ಳುತ್ತ ಎದೆಯನ್ನು ಬಡಿದುಕೊಳ್ಳುತ್ತ ಓಡಿದಳು (೧೯-೨೦). ಓಡುತ್ತ ಹೋಗಿ, ರಣರಂಗದಲ್ಲಿ ಹತನಾಗಿ ಬಿದ್ದಿದ್ದ ಪತಿಯನ್ನು ಕಂಡಳು. ವಾಲಿಯು ಎಂಥವನು ? ರಣಧೀರರಾದ ಎಷ್ಟೋ

ಸರ್ಗಃ ೧೯] ತಾರಾಗಮನಮ್‌ ೧೫೫

ಕ್ಷೇಪಾರಂ ಪರ್ವತೇಂದ್ರಾಣಾಂ ವಜ್ರಾಣಾಮಿವ ವಾಸವಮ್‌ ಮಹಾವಾತಸಮಾವಿಷ್ಟಂ ಮಹಾಮೇಘಾಫನಿಃಸ್ಟನಮ್‌ ೨೨

ಶಕ್ರತುಲ್ಕಪರಾಕ್ರಾಂತಂ ವೃಷ್ಟೇವೋಪರತಂ ಫನಮ್‌। ನರ್ದಂತಂ ನರ್ದತಾಂ ಭೀಮಂ ಶೂರಂ ಶೂರೇಣ ಪಾತಿತಮ್‌ ೨೩

ಶಾರ್ದೂಲೇನಾಮಿಷಸ್ಕಾರ್ಥೇ ಮೃಗರಾಜಂ ಯಥಾ ಹತಮ್‌

ಅರ್ಚಿತಂ ಸರ್ವಲೋಕಸ್ಯ ಸಪತಾಕಂ ಸವೇದಿಕಮ್‌ ೨೪ ನಾಗಹೇತೋಃ ಸುಹರ್ಣೇನ ಚೈತ್ಯಮುನ್ನಥಿತಂ ಯಥಾ।

ಅವಷ್ನಭ್ಯ ತಿಷ್ಮಂತಂ ದದರ್ಶ ಧನುರುತಮಮ್‌ ೨೫ ರಾಮಂ ರಾಮಾನುಜಂ ಚೈವ ಭರ್ತುಶೈವಾನುಜಂ ಶುಭಮ್‌ ತಾನತೀತೃ ಸಮಾಸಾದ್ಯ ಭರ್ತಾರಂ ನಿಹತಂ ರಣೇ॥ ೨೬

ಮಂದಿ ದಾನವೇಂದ್ರರನ್ನು ಸದೆಬಡಿದನು. ಇಂದ್ರನು ವಜ್ರಾಯುಧವನ್ನು ಬೀಸುವಂತೆ, ಲೀಲಾಮಾತ್ರದಿಂದ ಮಹಾಪರ್ವತವನ್ನು ಈಡಾಡಿದವನು. ರುಂರುವಾತದಂತೆ ವೇಗೋದ್ದತನು. ಮಹಾಮೇಘಗಳಂತೆ ಗುಡುಗಿದವನು (೨೧-೨೨). ಅಮರೇಂದ್ರನಂತೆ ಶತ್ರುಗಳನ್ನು ಮೆಟ್ಟಿದವನು. ಈಗ ಮಳೆಸುರಿಸಿದ ಕಾರ್ಮೋಡದಂತೆ ಶಾಂತನಾಗಿರುವನು। ಗರ್ಜಿಸುವ ವೀರರು ಹೆದರಿ ತತ್ತರಿಸು ವಂತೆ ಗರ್ಜಿಸಿದ ವೀರನವನು. ಈಗ ಇನ್ನೊಬ್ಬ ವೀರನಿಂದ ಹತನಾಗಿ ಬಿದ್ದಿರುವನು | (೨೩). ಮಾಂಸಾರ್ಥಿಯಾದ ಸಿಂಹದಿಂದ * ಘಾತಿಸಲ್ಪಟ್ಟ ಇನ್ನೊಂದು ಸಿಂಹದಂತೆ ವಾಲಿಯು ಕಾಣುತ್ತಿದ್ದವು. ಸರ್ವಲೋಕ ಸಮ್ಮಾನ್ಯವಾಗಿ ಪತಾಕೆಗಳಿಂದಲೂ ವೇದಿಕೆಗಳಿಂದಲೂ ಅಲಂಕೃತವಾದ ಚೈತ್ಯವೃಕ್ಷವು, ಅದರಲ್ಲಡಗಿದ ಸರ್ಪಗಳಿಗೋಸ್ಕರ ಗರುಡನಿಂದ ಉರುಳಿಸಲ್ಪಟ್ಟಂತೆ ತೋರುತಿದ್ದನು (೨೪-೨೫). ಸಮೀಪದಲ್ಲಿ ಕೋದಂಡವನ್ನೂರಿ ನಿಂತಿದ್ದ ಶ್ರೀರಾಮನನ್ನೂ ಲಕ್ಷ್ಮಣನನ್ನೂ ರೋಷವಿಲ್ಲದೆ ಶಾಂತನಾಗಿ ನಿಂತಿದ್ದ ಮೈದುನನನ್ನೂ ತಾರೆಯು ಕಂಡಳು. ಅವರನ್ನು ಲಕ್ಷಿಸದೆ ತಾರೆಯು ಗಂಡನ ಬಳಿಗೆ ಹೋಗಿ ಅವನು

*: ಶಾರ್ದೂಲ: ಸಿಂಹ (ವೈಜಯಂತೀಕೋಶವು ಸಿಂಹ ಪರ್ಯಾಯದಲ್ಲಿಶಾರ್ದೂಲ ಶಬ್ದವನ್ನು ಹೇಳಿದೆ.)

೧೫೬ ಕಿಷ್ಠಿಂಧಾಕಾಂಡಃ [ಸರ್ಗ ೧೯

ಸಮೀಕ್ಷ್ಯ ವ್ಯಥಿತಾ ಭೂಮ್‌ ಸಂಭ್ರಾಂತಾ ನಿಪಪಾತ |

ಸುಪ್ಲೇವ ಪುನರುತ್ಮಾಯ ಆರ್ಯಪುತ್ರೇತಿ ಶೋಚತೀ ೨೭ ರುರೋದ ಸಾ ಪತಿಂ ದೃಷ್ಟ್ವಾ ಸಂದಿತಂ ಮೃತ್ಯುದಾಮಭಿಃ ತಾಮವೇಕ್ಷ್ಯ ತು ಸುಗ್ರೀವಃ ಕ್ರೋಶಂತೀಂ ಕುರರೀಮಿವ॥ ೨೮

ವಿಷಾದಮಗಮತ್‌ ಕಷ್ಟಂ ದೃಷ್ಟ್ವಾ ಚಾಂಗದಮಾಗತಮ್‌ |

ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಏಕೋನವಿಂಶಃ ಸರ್ಗಃ

ಲಾ

ಇದ್‌

ಹತನಾಗಿ ಬಿದ್ದುದನ್ನು ನೋಡಿ, ದುಃಖದಿಂದ ದಿಕ್ಕುಗಾಣದೆ ನೆಲದ ಮೇಲು ರುಳಿದಳು. ಅನಂತರ ನಿದ್ದೆಯಿಂದೆದ್ದಂತೆ ತಾನಾಗಿಯೇ ಚೇತರಿಸಿಕೊಂಡೆದ್ದು "ಆರ್ಯಪುತ್ರ |' ಎಂದು ಕೂಗುತ್ತ ಅಳತೊಡಗಿದಳು (೨೬-೨೭). ಮೃತ್ಯು ಪಾಶದಿಂದ ಬಿಗಿಯಲ್ಪಟ್ಟ ಗಂಡನನ್ನು ವೀಕ್ಷಿಸಿ ಕುರರಪಕ್ಷಿಯಂತೆ ಗೋಳಾಡ ತೊಡಗಿದಳು. ಅಷ್ಟರಲ್ಲಿ ಅಂಗದನೂ ಬಂದಿದ್ದನು. ಅವರಿಬ್ಬರನ್ನೂ ನೋಡಿ ಸುಗ್ರೀವನಿಗೆ ತಡೆಯಲಾರದಷ್ಟು ದುಃಖ ಉಂಟಾಯಿತು (೨೮).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಪ್ಪಿಂಧಾಕಾಂಡದಲ್ಲಿಹತೊಂಬತ್ತನೆಯಸರ್ಗ

ಲಿಲಾ

ವಿಂಶಃ ಸರ್ಗಃ ತಾರಾವಿಲಾಪಃ

ರಾಮಚಾಪವಿಸೃಷ್ಟೇನ ಶರೇಣಾಂತಕರೇಣ ತಮ್‌ ದೃಷ್ಟ್ಯಾ ವಿನಿಹತಂ ಭೂಮ್‌ ತಾರಾ ತಾರಾಧಿಪಾನನಾ

ಸಾ ಸಮಾಸಾದ್ಯ ಭರ್ತಾರಂ ಪರ್ಯಷ್ವಜತ ಭಾಮಿನೀ | ಇಷುಣಾಭಿಹತಂ ದಹ್ಟ್ವಾವಾಲಿನಂ ಕುಂಜರೋಪಮಮ್‌ ಟ್ರ,

ವಾನರೇಂದ್ರಂ ಮಹೇಂದ್ರಾಭಂ ಶೋಕಸಂತಪಮಾನಸಾ। ತಾರಾ ತರುಮಿವೋನ್ನೂಲಂ ಪರ್ಯದೇವಯದಾತುರಾ

ರಣೇ ದಾರುಣ ವಿಕ್ರಾಂತ ಪ್ರವೀರ ಪ್ಲವತಾಂ ವರ। ಕಿಂದೀನಾಂಮಾಂ ಪುರೋಭಾಗಾಮದ್ಯಾ ತ್ವಂ ನಾಭಿಭಾಷಸೇ

ಉತ್ರಿಷ್ಠ ಹರಿಶಾರ್ದೂಲ ಭಜಸ್ವಶಯನೋತ್ತಮಮ್‌ ನೈವಂವಿಧಾಃ ಶೇರತೇಹಿ ಭೂಮಾ ನೃಪತಿಸತ್ತಮಾಃ ಬಿ

ಸರ್ಗ ೨೦

ತಾರೆಯ ವಿಲಾಪ.

ಶ್ರೀರಾಮನ ಧನುಸಿನಿಂದ ಚಿಮ್ಮಿದ ಪ್ರಾಣಾಂತಕವಾದ ಬಾಣದಿಂದ ಹತನಾಗಿ ಭೂಮಿಯಲ್ಲಿಬಿದ್ದಿದ್ದ ವಾಲಿಯನ್ನು ತಾರೆಯು ಕಂಡಳು. ಚಂದ್ರಮುಖಿಯು ಹತ್ತಿರ ಹೋಗಿ ಗಂಡನನ್ನಪ್ಪಿಕೊಂಡಳು. ಶರಾಭಿಹತನಾದ ಗಜೇಂದ್ರನಂತಿದ್ದ ದೇವೇಂದ್ರಸದೃಶನಾದ ವಾನರೇಂದ್ರನನ್ನು ನೋಡಿ ನೋಡಿ, ತಾರೆಯ ಹೃದಯವು ದುಃಖದಿಂದ ಕುದಿಯಿತು (೧-೨). ಬುಡಸಹಿತವಾಗಿ ಉರುಳಿ ಬಿದ್ದ ಮರದಂತಿರುವ ವಾಲಿಯನ್ನು ನೋಡಿ ಅವಳು ವಿಷಣ್ಣಳಾಗಿ ಗೋಳಾಡ ತೊಡಗಿದಳು : ""ಹಾ ವಾನರೇಂದ್ರ, ರಣಧೀರ, ವೀರಾಧಿವೀರ | ದೀನಳಾದ ನನ್ನೊಡನೆ ಏಕೆ ಮಾತನಾಡೆ? ನಾನೇನಾದರೂ ಅಪರಾಧ ಮಾಡಿರುವೆನೆಂದೆ? (೩-೪). ವಾನರೋತಮ, ಮೇಲೇಳು. ಉತ್ತಮವಾದ ಹಾಸಿಗೆಯಲ್ಲಿ ಮಲಗಿಕೋ. ನಿನ್ನಂತಹ ರುಜಶ್ರೇಷ್ಠರು ಹೀಗೆ ನೆಲದಮೇಲೆ ಮಲಗುವುದುಂಟಿ?

7

೧೫೮ ಕಿಷ್ಠಿಂಧಾಕಾಂಡಃ [ಸರ್ಗಃ ೨೦

ಅತೀವ ಖಲು ತೇ ಕಾಂತಾ ವಸುಧಾ ವಸುಧಾಧಿಪ

ಗತಾಸುರಪಿ ಯಾಂ ಗಾತ್ರೈರ್ಮಾಂ ವಿಹಾಯ ನಿಷೇವಸೇ ವ್ಯಕಮನ್ಯಾ ತ್ವಯಾ ವೀರ ಧರ್ಮತಃ ಸಂಪ್ರವರ್ತತಾ

ಕಿಷ್ಠಿಂಧೇವ ಪುರೀ ರಮ್ಯಾ ಸರ್ಗಮಾರ್ಗೇ ವಿನಿರ್ಮಿತಾ ಯಾನ್ಯ ಸ್ಥಾಭಿಸ್ತ್ಯಯಾ ಸಾರ್ಧಂ ವನೇಷು ಮಧುಗಂಧಿಷು।

ಎಹೃತಾನಿ ತ್ವಯಾ ಕಾಲೇ ತೇಷಾಮುಪರಮಃ ಕೃತಃ || ಲೆ ನಿರಾನಂದಾ ನಿರಾಶಾಹಂ ನಿಮಗ್ನಾ ಶೋಕಸಾಗರೇ।

ತ್ವಯಿ ಪಂಚತ್ತಮಾಪನ್ನೇ ಮಹಾಯೂಥಪಯೂಥಪೇ॥ ಹೃದಯಂ ಸುಸ್ಥಿರಂ ಮನ್ಯೇ ದಸ್ಟ್ಯಾ ವಿನಿಹತಂ ಪತಿಮ್‌

ಯನ್ನ ಶೋಕಾಭಿಸಂತಪಂ ಸ್ಫುಟತೇತದ್ಯ ಸಹಸ್ರಧಾ॥ ೧೦ ಸುಗ್ರೀವಸ್ಯ ತ್ವಯಾ ಭಾರ್ಯ ಹೃತಾ ವಿವಾಸಿತಃ |

ಯತ್ತು ತಸ್ಯ ತ್ವಯಾ ವೃಷ್ಠಿಃ ಪ್ರಾಪ್ಯೇಯಂ ಪ್ಲವಗಾಧಿಪ ೧೧

ಹಾ ಭೂಪತಿ, ನಿನಗೆ ಭೂಮಿಯು ಅತ್ಯಂತ ಪ್ರೀತಿಪಾತ್ರಳಾಗಿರಬೇಕು. ನನ್ನನ್ನು ಪರಿತ್ಯಜಿಸಿ, ಪ್ರಾಣಹೋದರೂ ಇವಳನ್ನು ಆಲಿಂಗಿಸಿಕೊಂಡಿರುವೆಯಲ್ಲವೆ | (೫-೬). ಹಾವೀರಾಗ್ರಣಿ, ಧರ್ಮಮಾರ್ಗದಲ್ಲಿ ನಡೆಯುತಿದ್ದ ನೀನು ಕಿಷ್ಠಿಂಧೆ ಯಂತೆ ರಮ್ಯವಾದ ಇನ್ನೊಂದು ನಗರವನ್ನು ಸ್ವರ್ಗಮಾರ್ಗದಲ್ಲಿ ನಿರ್ಮಿಸಿ ಕೊಂಡಿರಬೇಕು. ನಾವು ನಿನ್ನೊಡನೆ ಮಕರಂದಗಂಧವುಳ್ಳ ಉದ್ಯಾನವನಗಳಲ್ಲಿ ವಿಹರಿಸುತಿದ್ದೆವಲ್ಪ ಅದೆಲ್ಲವೂ ಇಂದಿಗೆ ತೀರಿತೆ ? (೭-೮). ಕಪಿನಾಯಕರಿಗೆ ನಾಯಕನಾಗಿದ್ದ ನೀನು ದಿವಂಗತನಾದಮೇಲೆ ನನ್ನ ಆನಂದವೆಲ್ಲವೂ ಅಳಿಸಿ ಹೋಯಿತು. ನಿರಾಶಳಾದ ನಾನು ಶೋಕಸಾಗರದಲ್ಲಿಮುಳುಗಿಹೋದೆ. ಅಯ್ಯೊ! ನನ್ನ ಎದೆ ಬಹಳ ಗಟ್ಟಿಯಾಗಿರಬೇಕು. ಪತಿಯು ಹತನಾಗಿ ಬಿದ್ದಿರುವುದನ್ನು ಕಂಡರೂ ಇದು ಸ್ಥಿರವಾಗಿ ಉಳಿದಿದೆಯಲ್ಲ! ಶೋಕದಿಂದ ಬೆಂದು ಸಾವಿರ ಚೂರಾಗಿ ಒಡೆದುಹೋಗಲಿಲ್ಲ! (೯-೧೦). ನೀನು ಸುಗ್ರೀವನ ಮಡದಿಯನ್ನ ಪಹರಿಸಿ ಅವನನ್ನು ಹೊರಗಟ್ಟಿದೆ. ಕರ್ಮದ ಪರಿಪಾಕವು ರೀತಿಯಲ್ಲಿ

ಸರ್ಗಃ ೨೦] ತಾರಾವಿಲಾಪಃ ೧೫೯

ನಿಃಶ್ರೇಯಸಪರಾ ಮೋಹಾತ್ತ್ವಯಾ ಚಾಹಂ ವಿಗರ್ಜಿತಾ

ಯೈಷಾಬ್ರುವಂ ಹಿತಂ ವಾಕ್ಯಂ ವಾನರೇಂದ್ರ ಹಿತೈಷಿಣೀ ೧೨ ರೂಪಯೌೌವನದ್ದಪಾನಾಂ ದಕ್ಷಿಣಾಂ ಮಾನದ ನೂನಮಪರಸಾಮಾರ್ಯ ಚಿತಾನಿ ಪ್ರಮಥಿಷ್ಯಸಿ ೧೩ ಕಾಲೋ ನಿಃಸಂಶಯೋ ನೂನಂ ಜೀವಿತಾಂತಕರಸವ। ಜವಾದ್ಯೇನಾವಪನ್ನೋಪಸಿ ಸುಗ್ರೀವಸ್ಯಾವಶೋ ವಶಮ್‌ ೧೪ ಅಸ್ಥಾನೇ ವಾಲಿನಂ ಹತ್ವಾಯುದ್ದ ಸಮಾನಂ ಪರೇಣ ಚ।

ಸಂತಪೃತಿ ಕಾಕುತ್ತ್ಯ ಕೃತ್ವಾಕರ್ಮ ಸುಗರ್ಹಿತಮ್‌ ೧೫

ವೈಧವ್ಯಂ ಶೋಕಸಂತಾಪಂ ಕೃಪಣಂ ಕೃಪಣಾ ಸತೀ। ಅದುಃಖೋಪಚಿತಾ ಪೂರ್ವಂ ವರ್ತಯಿಷ್ಯಾಮ್ಯನಾಥವತ್‌ ೧೬ ಲಾಲಿತಶ್ಹಾಂಗದೋ ವೀರಃ ಸುಕುಮಾರಃ ಸುಖೋಚಿತಃ।

ವತ್ಸ್ಯತೇ ಕಾಮವಸ್ಥಾಂ ಮೇ ಪಿತ್ಫವ್ಯೇ ಕ್ರೋಧಮೂರ್ಛಿತೇ॥ ೧೭

ನಿನಗೆ ತಟ್ಟಿತು. ನಿನ್ನ ಶ್ರೇಯಸ್ಸನ್ನು ಬಯಸಿ ನಾನು ಎಷ್ಟೋ ಹಿತ ವಾಕ್ಯಗಳನ್ನು ಹೇಳಿದೆನು. ನೀನು ತಿಳಿಯದೆ ನನ್ನನ್ನೇ ಬಯ್ದುಕಳಿಸಿದೆ (೧೧-೧೨). ಆರ್ಯಪುತ್ರ, ಅಪ್ಪರೆಯರು ರೂಪಯೌವನ ಗರ್ವಿತರು; ಕಲಾನಿಪುಣರು. ನಿನ್ನ ಸೌಂದರ್ಯವನ್ನು ಕಂಡು ಅವರ ಮನಸ್ಸು ಕದಡಿ ಹೋಗುವುದು. ಮುಖ್ಯ ವಾಗಿ ನಿನಗೆ ಮೃತ್ಯುಕಾಲವು ಒದಗಿಬಂದಿತ್ತು ಆದ್ದರಿಂದಲೇ ನನ್ನ ಮಾತನ್ನು ಉಲ್ಲಂಘಿಸಿ ನೆಟ್ಟನೆ ಬಂದು ಸುಗ್ರೀವನಿಗೆ ವಶನಾದೆ (೧೩-೧೪). ರಾಮನು ನಿಂದ್ಯವಾದ ಕರ್ಮವನ್ನು ಮಾಡಿ ನಿಶ್ಚಿಂತೆಯಿಂದ ನಿಂತಿರುವನಲ್ಲ! ಇನ್ನೊಬ್ಬ ನೊಡನೆ ಯುದ್ಧದಲ್ಲಿತೊಡಗಿದ ವಾಲಿಯನ್ನು ಅಯೋಗ್ಯರೀತಿಯಲ್ಲಿವಧಿಸಿನಲ್ಲ! ದುಃಖವನ್ನೇ ಕಂಡರಿಯದ ನಾನು ಈಗ ದಿಕ್ಕಿಲ್ಲದವಳಾಗಿ ವೈಧವ್ಯವನ್ನುಹೇಗೆ ಸಹಿಸಲಿ? ಕಠೋರ ಶೋಕವನ್ನು ದೀನಳಾಗಿ ಹೇಗೆ ಭರಿಸಲಿ? (೧೫-೧೬). ವೀರನಾದ ಅಂಗದನನ್ನುಎಷ್ಟುಪ್ರೇಮದಿಂದ ಲಾಲಿಸಿದೆವು! ಸುಕುಮಾರನನ್ನು ಎಷ್ಟುಸುಖದಲ್ಲಿ ಬೆಳೆಸಿದೆವು! ಇವನ ಚಿಕ್ಕಪ್ಪನು ಕ್ರೋಧೋದ್ದೀಪಿತನಾಗಿರಲು, ನನ್ನ ಮಗನು ಯಾವ ಅವಸ್ಥೆಯನ್ನು ಪಡೆಯುವನೋ! (೧೭).

೧೬೦ ಕಿಷ್ಟಿಂಧಾಕಾಂಡಃ [ಸರ್ಗಃ ೨೦

ಕುರುಷ್ವಪಿತರಂ ಪುತ್ರ ಸುದ್ಧಷ್ಣಂ ಧರ್ಮವತ್ತಲಮ್‌

ದುರ್ಲಭಂ ದರ್ಶನಂ ವತ್ತ ತವ ತಸ್ಕ ಭವಿಷ್ಯತಿ || ೧೮ ಸಮಾಶ್ವಾಸಯ ಪುತ್ರಂ ತ್ವಂ ಸಂದೇಶಂ ಸಂದಿಶಸ್ವಚ।

ಮೂರ್ಧ್ನಿ ಚೈನಂ ಸಮಾಘ್ರಾಯ ಪ್ರವಾಸಂಪ್ರಸ್ಲಿತೋಹ್ಯಸಿ॥ ೧೯ ರಾಮೇಣ ಹಿ ಮಹತ್‌ ಕರ್ಮ ಕೃತಂ ತ್ವಾಮಭನಿಫತಾ

ಆನ್ಫಣ್ಯಂ ಗತಂ ತಸ್ಯ ಸುಗ್ರೀವಸ್ಯ ಪ್ರತಿಶ್ರವೇ॥ ೨೦ ಸಕಾಮೋ ಭವ ಸುಗ್ರೀವ ರುಮಾಂತ್ರಂ ಪ್ರತಿಪತ್ಸ್ಯಸೇ। ಭುಂಕ್ಷ್ಯರಾಜ್ಯಮನದ್ದಿಗ್ಗಃ ಶಸೋ ಭ್ರಾತಾ ರಿಪುಸವ॥ ೨೧ ಕಿಂ ಮಾಮೇವಂ ವಿಲಪತೀಂ ಪ್ರೇಮ್ಲಾ ತಂ ನಾಭಿಭಾಷಸೇ।

ಇಮಾಃ ಪಶ್ಯ ವರಾ ಬಹ್ಲೀರ್ಭಾರ್ಯಾಸೇ ವಾನರೇಶಥ | ೨೨ ತಸ್ಯಾ ವಿಲಪಿತಂ ಶ್ರುತ್ವಾವಾನರ್ಯಃ ಸರ್ವತಶ್ಚತಾಃ | ಪರಿಗೃಹ್ಯಾಂಗದಂ ದೀನಂ ದುಃಖಾರ್ತಾಃ ಪರಿಚುಕ್ರುಶುಃ ೨೩

ಮಗನೆ, ಇಲ್ಲಿಬಾ. ಧರ್ಮವತಲನಾದ ನಿನ್ನ ತಂದೆಯನ್ನು ಚೆನ್ನಾಗಿ ನೋಡು! ಮಗು, ಇನ್ನು ಮೇಲೆ ಇವನ ದರ್ಶನವು ನಿನಗೆ ದುರ್ಲಭವಾಗುವುದು. ಆರ್ಯವಪುತ್ರ, ನಿನ್ನಮಗನು ಬಂದಿದ್ದಾನೆ. ಅವನನ್ನು ಸಂತೈಸು. ಅವನಿಗೆ ಹೇಳ ಬೇಕಾದ ಬುದ್ಧಿವಾದವನ್ನು ಹೇಳು. ಅಂಗದನ ಶಿರಸನ್ನು ಆಫ್ರಾಣಿಸು. ದೀರ್ಫ್ಛ ಪ್ರಯಾಣಕ್ಕೆ ಹೊರಟ್ಟಿದ್ದೀಯಲ್ಲವೆ ? (೧೮-೧೯). ರಾಮನು ನಿನ್ನನ್ನು ಕೊಂದು ಮಹಾಕಾರ್ಯವನ್ನೆಸಗಿದನು | ಸುಗ್ರೀವನಿಗೆ ಕೊಟ್ಟ ಮಾತನ್ನು ನಡೆಸಿ ಬುಣ ಮುಕ್ತನಾದನು | ಸುಗ್ರೀವ, ನಿನ್ನ ಇಷ್ಟ ಕೈಗೂಡಿತು | ರಮೆಯು ನಿನಗೆ ದೊರೆಯುವಳು | ನಿಶ್ಚಿಂತೆಯಿಂದ ರಾಜ್ಯವನ್ನು ಭೋಗಿಸು. ನಿನ್ನ ಶತ್ರುವಾದ ಅಣ್ಣನನ್ನು ಸಂಹರಿಸಿದ್ದಾಯಿತಲ್ಲವೆ | (೨೦-೨೧). ಹೇ ಪ್ರಿಯತಮ - ವಾಲಿ, ನಾನು ಇಷ್ಟು ಗೋಳಾಡುತ್ತಿದ್ದರೂ ಪ್ರೇಮದಿಂದ ನನ್ನನ್ನು ಏಕೆ ಮಾತನಾಡಿಸದಿದ್ದೀಯೆ ? ಇದೋ, ಇತ್ತ ನೋಡು. ವಾನರೇಶ್ವರ, ಸುಂದರಿ ಯಾದ ನಿನ್ನ ಬಹುಮಂದಿ ಮಡದಿಯರು ಬಂದು ನಿಂತಿದ್ದಾರೆ '' ಎಂದು ಎಲಪಿಸಿದಳು (೨೨). ಆಗ ಸುತ್ತಲೂ ನೆರೆದಿದ್ದ ವಾನರಸ್ತೀಯರು ದೈನ್ಯದಿಂದ ನಿಂತಿದ್ದ ಅಂಗದನನ್ನು ಹಿಡಿದುಕೊಂಡು ಸಂತೈಸುತ್ತಿದ್ದರು. ತಾರೆಯ

ಸರ್ಗಃ ೨೦] ತಾರಾವಿಲಾಪಃ ೧೬೧

ಕಿಮಂಗದಂ ಸಾಂಗದವೀರಬಾಹೋ ವಿಹಾಯ ಯಾಸ್ಕದ್ಯ ಚಿರಪ್ರವಾಸಮ್‌ ಯುಕಮೇವಂ ಗುಣಸಂನಿಕೃಪ್ಪಂ ವಿಹಾಯ ಪುತ್ರಂ ಪ್ರಿಯಪುತ್ರ ಗಂತುಮ್‌ ೨೪ ಕಮಪ್ರಿಯಂ ತೇ ಪ್ರಿಯಚಾರುವೇಷ ಮಯಾ ಕೃತಂ ನಾಥ ಸುತೇನವಾ ತೇ। ಸಹಾಂಗದಾಂ ಮಾಮಪಹಾಯ ವೀರ ಯತ್‌ ಪ್ರಸ್ನಿತೋ ದೀರ್ಥಮಿತಃ ಪ್ರವಾಸಮ್‌ ೨೫

ಯದ್ಯಪ್ರಿಯಂ ಕಿಂಚಿದಸಂಪ್ರಧಾರ್ಯ ಕೃತಂ ಮಯಾ ಸ್ಯಾತವ ದೀರ್ಥಬಾಹೋ। ಕ್ಷಮಸ್ವಮೇ ತದ್ದರಿವಂಶನಾಥ ವ್ರಜಾಮಿ ಮೂರ್ಧ್ನಾ ತವ ವೀರ ಪಾದೌ ವಿ೬

ವಿಲಾಪವನ್ನು ಕೇಳಿ ಅವರೆಲ್ಲರೂ ಶೋಕಾರ್ತರಾಗಿ ಅಳತೊಡಗಿದರು (೨೩). ತಾರೆಯು ತನ್ನಪತಿಯನ್ನುನೋಡುತ್ತ""ಹಾ ಪ್ರಾಣನಾಥ, ವೀರ್ಯಶಾಲಿಗಳಾದ ನಿನ್ನ ಭುಜಗಳು ಅಂಗದಗಳಿಂದ ಸದಾ ಭೂಶಿತವಾಗಿರುತ್ತಿದ್ದವು. ಈಗ ಅಂಗದನನ್ನೂ ತ್ಯಜಿಸಿ ದೀರ್ಫಪ್ರವಾಸಕ್ಕೆ ಹೊರಟೆಯಾ 9 ನಿನ್ನ ಸದ್ಗುಣಗಳೇ ಇವನಲ್ಲಿನೆಲೆಸಿವೆಯಲ್ಲವೆ 9 ಪುತ್ರನಲ್ಲಿ ಅಷ್ಟುವಾತ್ತಲ್ಯವನ್ನಿಟ್ಟುಕೊಂಡಿದ್ದ ನೀನು ಪುತ್ರನನ್ನು ಬಿಟ್ಟುಹೋಗುವುದು ಯುಕವೆ ? (೨೪). ಹಾ ನಾಥ, ನಿನಗೆ ಯಾವುದಾದರೂ ಅಪ್ರಿಯವನ್ನುನಾನು ಮಾಡಿದೆನೆ ? ನಿನ್ನಮಗನು ಮಾಡಿದನೆ 9 ಹಾ ಸುಂದರಾಂಗ-ವೀರಾಗ್ರಣಿ, ನನ್ನನ್ನೂ ಅಂಗದನನ್ನೂ ಪರಿತ್ಯಜಿಸಿ ದೀರ್ಫ್ಥಪ್ರವಾಸಕ್ಕೆ ಹೊರಡಬಹುದೆ ? (೨೫). ಹೇ ಆಜಾನುಬಾಹು, ಅಜ್ಞಾನ ದಿಂದ ಯಾವುದಾದರೂ ಅಪ್ರಿಯವಾದುದನ್ನು ನಾನು ಎಸಗಿದ್ದರೆ, ಅದನ್ನು ಕ್ಷಮಿಸು. ಕಪೀಶ್ವರ ನಿನ್ನಪಾದಗಳಿಗೆ ತಲೆ ಸೋಕಿಸಿ ನಮಸ್ಕರಿಸುತ್ತಿದ್ದೇನೆ'' ಎಂದು ಎಲಪಿಸಿದಳು (೨೬).

7%

೧೬೨ ಕಿಷ್ಕಿಂಧಾಕಾಂಡಃ [ಸರ್ಗಃ ೨೧

ತಥಾ ತು ತಾರಾ ಕರುಣಂ ರುದಂತೀ ಭರ್ತುಃ ಸಮೀಪೇ ಸಹ ವಾನರೀಭಿಃ।

ವ್ಯವಸ್ಯತ ಪ್ರಾಯಮುಪೋಪವೇಷ್ಟು- ಮನಿಂದ್ಯವರ್ಣಾ ಭುವಿ ಯತ್ರ ವಾಲೀ॥ ೨೭ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ವಿಂಶಃಸರ್ಗಃ

ಏಕವಿಂಶಃ ಸರ್ಗಃ ಹನುಮದಾಶ್ವಾಸನಮ್‌

ತತೋ ನಿಪತಿತಾಂ ತಾರಾಂ ಚ್ಯುತಾಂ ತಾರಾಮಿವಾಂಬರಾತ್‌ | ಶನೈರಾಶ್ಚಾಸಯಾಮಾಸ ಹನುಮಾನ್‌ ಹರಿಯೂಥಪಃ

ಹೀಗೆ ತಾರೆಯು ತನ್ನ ಗಂಡನ ಸಮೀಪದಲ್ಲಿ ಇತರ ವಾನರಸ್ತ್ರೀಯರೊಡನೆ ಬಿಕ್ಕಿ ಬಿಕ್ಕಿ ಅತ್ರಳು. ರೂಪವತಿಯಾದ ಆತಾರೆಯು ಕಡೆಯಲ್ಲಿ, ವಾಲಿಯು ಬಿದ್ದ ಸ್ಥಳದಲ್ಲಿಪ್ರಾಯೋಪವೇಶಮಾಡಿ ಸಾಯಬೇಕೆಂದು ನಿಶ್ಚಯಿಸಿದಳು (೨೭).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಇಪ್ಪತನೆಯ ಸರ್ಗ

ಸರ್ಗ ೨೧

ಹನುಮಂತನುತಾರೆಗೆ ಸಮಾಧಾನ ಹೇಳುವುದು. ತಾರೆಯು ತನ್ನಪತಿಯ ಪಾದವನ್ನುಸೇರಿಕೊಳುವುದೇ ತನಗೆ ಶ್ರೇಯಸ್ಕರವೆಂದು ತಿಳಿಸುವುದು. ಅಂಬರದಿಂದ ಉದುರಿದ ತಾರಕೆಯಂತೆ, ತಾರೆಯು ನೆಲದಲ್ಲಿ ಬಿದ್ದು ಅಳುತ್ತಿದ್ದಳು. ಆಗ ವಾನರೋತಮನಾದ ಹನುಮಂತನು ಮುಂದೆ ಬಂದು, ಮೆಲ್ಲಗೆ ತಾರೆಯನ್ನು ಸಮಾಧಾನಪಡಿಸಲು ಯತ್ನಿಸಿದನು (೧) :

ಸರ್ಗಃ ೨೧] ಹನುಮದಾಶ್ವಾಸನಮ್‌ ೧೬೩

ಗುಣದೋಷಕ್ಕತಂ ಜಂತುಃ ಸ್ವಕರ್ಮ ಫಲಹೇತುಕಮ್‌ ಅವ್ಯಗ್ರಸ್ತದವಾಪ್ನೋತಿ ಸರ್ವಂ ಪ್ರೇತ್ಯ ಶುಭಾಶುಭಮ್‌ | ಶೋಚ್ಯಾ ಶೋಚಸಿಕಂ ಶೋಚ್ಯಂ ದೀನಂ ದೀನಾನುಕಂಪಸೇ।

ಕಸ್ಫ ಕೋವಾನು ಶೋಚ್ಯೋಪಸ್ತಿ ದೇಹೇಶಸ್ಥಿನ್ನುದ್ದುದೋಪಮೇ Il ಅಂಗದಸ್ತುಕುಮಾರೋಆ ಯಂ ದ್ರಷವ್ಕೋ ಜೀವಪುತ್ರಯಾ।

ಟಿ

ಆಯತ್ಯಾಂ ವಿಧೇಯಾನಿ ಸಮರ್ಥಾ ಸ್ಯ ಚಿಂತಯ॥ ಜಾನಾಸ್ಕನಿಯತಾಮೇವಂ ಭೂತಾನಾಮಾಗತಿಂ ಗತಿಮ್‌ ತಸ್ಮಾಚ್ಛುಭಂ ಹಿಂ ಕರ್ತವ್ಯಂ ಪಂಡಿತೇನೈಹಲ್‌ೌಕಿಕಮ್‌ ll ಯಸ್ಸಿನ್‌ಹರಿಸಹಸ್ರಾಣಿ ಪ್ರಯುತಾನ್ಯರ್ಬುದಾನಿ

ವರ್ತಯಂತಿ ಕೃತಾಶಾನಿ ಸೋಂಯಂ ದಿಷ್ಟಾಂತಮಾಗತಃ |

ಯದಯಂ ನ್ಯಾಯದೃಷ್ಟಾರ್ಥಃ ಸಾಮದಾನಕ್ಷಮಾಪರಃ। ಗತೋ ಧರ್ಮಜಿತಾಂ ಭೂಮಿಂ ನೈನಂ ಶೋಚಿತುಮರ್ಹಸಿ

""ಆರ್ಯೆ, ಪ್ರತಿಯೊಬ್ಬನೂ ತನ್ನ ಕರ್ಮಕ್ಕೆ ತಕ್ಕಂತೆ ಶುಭಾಶುಭಗಳನ್ನು ಪಡೆಯುತ್ತಾನೆ. ಸದ್ಭುದ್ದಿಯಿಂದ ಮಾಡಲಿ - ದುರ್ಬುದ್ದಿಯಿಂದ ಮಾಡಲಿ, ಫಲಾಪೇಕ್ಷೆಯಿಂದ ಆಚರಿಸಿದ ಕರ್ಮದ ಫಲವನ್ನುಸತಮೇಲೆ ಗತ್ಯಂತರವಿಲ್ಲದೆ ಅನುಭವಿಸಲೇಬೇಕು (೨). ನಿನ್ನಸ್ಥಿತಿಯೇ ಶೋಚನೀಯವಾಗಿರುವಾಗ, ಇನ್ನು ಯಾರನ್ನು ಶೋಚನೀಯರೆಂದು ತಿಳಿದು ಶೋಕಿಸುತ್ತಿರುವೆ ? ದೀನಳಾಗಿರುವ ನೀನು ಯಾರ ದೈನ್ಯವನ್ನು ಕಂಡು ಕನಿಕರಪಡುವೆ 9 ಎಲ್ಲರ ದೇಹವೂ ನೀರಿನ ಗುಳ್ಳೆಯಂತೆ ಕ್ಷಣಭಂಗುರವಾಗಿರುವಾಗ, ಯಾರಿಗಾಗಿ ಯಾರು ಅಳಬೇಕು 9 (೩). ನಿನಗೆ ಪುತ್ರನಿದ್ದಾನೆ. ಅಂಗದಕುಮಾರನ ಯೋಗಕ್ಷೇಮವನ್ನು ನೋಡಿಕೊಂಡಿರು. ಅವನ ಪುರೋಭಿವೃದ್ಧಿಗೆ ಏನು ಮಾಡಬೇಕೆಂಬುದನ್ನು ಚಿಂತಿಸು. ಪ್ರಾಣಿಗಳ ಹುಟ್ಟುಸಾವುಗಳು ನಮ್ಮಹೇಳಿಕೆಗೆ ಒಳಪಟ್ಟಿಲ್ಲವೆಂಬುದು ನಿನಗೆ ಗೊತ್ತಿದೆ. ಆದ್ದರಿಂದ ವಿವೇಕಿಯು ಇಹಲೋಕದಲ್ಲಿಪುಣ್ಯಕರ್ಮವನ್ನು ಆಚರಿಸುತ್ತಿರಬೇಕು (೪-೫). ನೋಡು, ವಾನರೇಂದ್ರನನ್ನಾಶ್ರಯಿಸಿ ಕೊಂಡು ಲಕ್ಷಗಟ್ಟಲೆ ವಾನರರು ಆಸೆಯಿಂದ ಬದುಕುತ್ತಿದ್ದರು. ಅಂಥ ವಾನರೇಶ್ವರನು ಸ್ಪರ್ಗಸ್ನನಾದನು. ನಿನ್ನ ಪತಿಯು ರಾಜನೀತಿಯಿಂದ ರಾಜ್ಯ

೧೬೪ ಕಿಷ್ಟಿಂಧಾಕಾಂಡಃ [ಸರ್ಗಃ ೨೧

ಸರ್ವೇ ಹಿ ಹರಿಶಾರ್ದೂಲಾಃ ಪುತ್ರಶ್ಲಾಯಂ ತವಾಂಗದಃ ಇದಂ ಹರ್ಯಕ್ಷರಾಜ್ಯಂ ತ್ವತನಾಥಮನಿಂದಿತೇ ||

ತಾವಿಮ್‌ೌ ಶೋಕಸಂತಾಪ್‌ೌ ಶನೈಃ ಪ್ರೇರಯ ಭಾಮಿನಿ ತ್ವಯಾ ಪರಿಗ್ರಹೀತೋsಯಮಂಗದಃ ಶಾಸ್ತು ಮೇದಿನೀಮ್‌

ಸಂತತಿಶ್ಚಯಥಾ ದೃಷ್ಟಾಕೃತ್ಯಂ ಯಚ್ಚಾಪಿ ಸಾಂಪ್ರತಮ್‌

ರಾಜ್ಞಸತ್‌ ಕ್ರಿಯತಾಂ ತಾವದೇಷ ಕಾಲಸ್ಯ ನಿಶ್ಚಯಃ ೧೦ ಸಂಸ್ಕಾರ್ಯೋ ಹರಿರಾಜಶ್ಚ ಅಂಗದಶ್ಚಾಭಿಷಿಚ್ಯತಾಮ್‌ ಸಿಂಹಾಸನಗತಂ ಪುತ್ರಂ ಪಶ್ಯಂತೀ ಶಾಂತಿಮೇಷ್ಠಸಿ ೧೧ ಸಾ ತಸ್ಯ ವಚನಂ ಶ್ರುತ್ವಾಭರ್ತ ವ್ಯಸನಪೀಡಿತಾ।

ಅಬ್ರವೀದುತರಂ ತಾರಾ ಹನುಮಂತಮವಸ್ಥಿತಮ್‌ ೧೨

ಕಾರ್ಯವನ್ನು ಪರಿಶೀಲಿಸುತ್ತ ಸಾಮದಾನ ಕ್ಷಮಾ ನಿರತನಾಗಿದ್ದನು. ಇವನು ಧರ್ಮಶೀಲರಿಗೆ ದೊರೆಯುವ ಸದ್ಧತಿಯನ್ನು ಪಡೆದಿದ್ದಾನೆ. ಈತನಿಗಾಗಿ ನೀ ನು ಶೋಕಿಸುವುದು ತರವಲ್ಲ (೬-೭) ಆರ್ಯೆ, ಸಮಸ್ತ ಕಪಿನಾಯಕರು - ಪುತ್ರನಾದ ಅಂಗದ - ಕಪಿಭಲ್ಲೂಕಗಳ ರಾಜ್ಯ - ಎಲ್ಲವೂ ಈಗ ನಿನ್ನಿಂದ ಪೋಷಿಸ್ಟಡ ಬೇಕಾಗಿದೆ. ಆದ್ದರಿಂದ, ದೇವಿ, ಶೋಕಸಂತಾಪಗಳು ಮೆಲ್ಲಮೆಲ್ಲಗೆ ತಗ್ಗುವಂತೆ ಮಾಡಿಕೊ. ಅಂಗದನು ನಿನ್ನ ವಶದಲ್ಲಿದ್ದು ರಾಜ್ಯವನ್ನಾಳಲಿ (೮-೯). ಪುತ್ರ ಸಂತಾನದ ಪ್ರಯೋಜನವೇನೆಂಬುದನ್ನು ಪರಿಶೀಲಿಸು. ಈಗ ರಾಜನಿಗಾಗಿ ನಡೆಸಬೇಕಾದ ಕೃತ್ಯವೇನೆಂಬುದನ್ನು ಆಲೋಚಿಸಿ ಅದರಲ್ಲಿ ಉದ್ಯುಕಳಾಗು. ಕಾಲವು ಕೊಟ್ಟಿರುವ ತೀರ್ಪು ಇದು (೧೦). ಕಪಿರಾಜನಾದ ವಾಲಿಗೆ ಉತ್ತರಕ್ರಿಯೆಯನ್ನು ನಡೆಸಬೇಕು. ಅಂಗದನಿಗೆ ಪಟ್ಟಾಭಿಷೇಕಮಾಡ ಬೇಕು | ಮಗನು ಸಿಂಹಾಸನರೂಢನಾಗಿರುವುದನ್ನು ನೋಡುವಾಗ ನಿನ್ನ ಮನಸಿಗೆ ಶಾಂತಿ ದೊರಕುವುದು | '' ಎಂದು ಸಂತೈಸಿದನು (೧೧). ಪತಿ ಶೋಕದಿಂದ ಕಂಗೆಟ್ಟತಾರೆಯು ಹನುಮಂತನಿಗೆ ""ಅಂಗದನಂಥವರು ನೂರುಮಂದಿ ಮಕ್ಕಳಿರಲಿ, ಹನುಮಂತ, ಅದಕ್ಕಿಂತಲೂ ಹತನಾದರೂ ವೀರಾಗ್ರೇಸರನಾದ ವಾಲಿಯನ್ನು ಆಲಿಂಗಿಸಿಕೊಂಡು ಸಾಯುವುದೇ ನನಗೆ

ಸರ್ಗಃ ೨೧] ಹನುಮದಾಶ್ವಾಸನಮ್‌ ೧೬೫

ಅಂಗದಪ್ರತಿರೂಪಾಣಾಂ ಪುತ್ರಾಣಾಮೇಕತಃ ಶತಮ್‌ | ಹತಸ್ಯಾಪ್ಯಸ್ಯ ವೀರಸ್ಕ ಗಾತ್ರಸಂಶ್ಲೇಷಣಂ ವರಮ್‌ ೧೩ ಚಾಹಂ ಹರಿರಾಜ್ಯಸ್ಯ ಪ್ರಭವಾಮ್ಯಂಗದಸ್ಯ ವಾ। ಪಿತ್ಫವ್ಯಸಸ್ಯ ಸುಗ್ರೀವಃ ಸರ್ವಕಾರ್ಯೆೇಷ್ಟನಂತರಃ॥ ೧೪ ಹ್ಯೇಷಾ ಬುದ್ಧಿರಾಸ್ತೇಯಾ ಹನುಮನ್ನಂಗದಂ ಪ್ರತಿ। ಪಿತಾ ಹಿ ಬಂಧುಃ ಪುತ್ರಸ್ಯ ಮಾತಾ ಹರಿಸತ್ತಮ ೧೫ ಹಿ ಮಮ ಹರಿರಾಜಸಂಶ್ರಯಾತ್‌ ಕ್ಷಮತರಮಸ್ಸಿ ಪರತ್ರ ಚೇಹ ವಾ।ಟ ಅಭಿಮುಖಹತವೀರಸೇವಿತಂ ಶಯನಮಿದಂ ಮಮ ಸೇವಿತುಂ ಕ್ಷಮಮ್‌ ೧೬ ಇತಿ ಶ್ರೀಮದ್ರಾಮಾಯಣೇ ಕಿಷ್ಠಿಂಧಾಕಾಂಡೇ ಏಕವಿಂಶಃ ಸರ್ಗಃ

ಹೆಚ್ಚು ಹಿತಕರ (೧೨-೧೩). ಕಪಿರಾಜ್ಯದ ವಿಷಯದಲ್ಲಾಗಲಿ - ಅಂಗದನ ವಿಷಯದಲ್ಲಾಗಲಿ, ನಾನೇನು ಮಾಡಬಲ್ಲೆ? ಅವನ ಚಿಕ್ಕಪ್ಪನಾದ ಸುಗ್ರೀವನುಂಟು. ಮುಂದಿನ ಸರ್ವ ಕಾರ್ಯಗಳೂ ಅವನಿಗೆ ಸೇರಿದ್ದು ಅಂಗದನ ಯೋಗ ಕ್ಷೇಮಗಳು ನನಗೆ ಸೇರಿದವೆಂದು ತಿಳಿಯಬೇಡ. ವಾನರೋತಮ, ಪುತ್ರನ ಹಿತವನ್ನು ನೋಡಿಕೊಳ್ಳುವ ಬಂಧುವು ತಂದೆ, ತಂದೆಯ ಸೋದರ-ಇವರ ಹೊರತು ತಾಯಿಯಲ್ಲ(೧೪-೧೫). ನನಗೆ ಕಪಿರಾಜನಾದ ವಾಲಿಯ ಪಾದವನ್ನು ಸೇರಿಕೊಳ್ಳುವುದಕ್ಕಿಂತಲೂ ಶ್ರೇಯಸ್ಕರವಾದುದು ಇನ್ನೊಂದಿಲ್ಲ ಇಹಲೋಕ ದಲ್ಲಾಗಲಿ ಪರಲೋಕದಲ್ಲಾಗಲಿ ಪತಿಯೊಡನೆ ಇರುವುದೇ ನನಗೆ ಹಿತಕರ. ಯುದ್ಧಾಭಿಮುಖನಾಗಿ ರಣರಂಗದಲ್ಲಿ ಹತನಾದ ವೀರನು ಮಲಗಿದ ಸ್ಥಳವೇ ನನಗೆ ಯೋಗ್ಯವಾದ ಸ್ಥಾನ'' ಎಂದು ಹೇಳಿದಳು (೧೬).

ಇಲ್ಲಿಗೆ ಶ್ರೀಮದ್ರಾಮಾಯಣದ ಕಿಷ್ಠಿಂಧಾಕಾಂಡದಲ್ಲಿಇಪ್ಪತ್ತೊಂದನೆಯ ಸರ್ಗ

77

ದ್ವಾವಿಂಶಃ ಸರ್ಗಃ

ವಾಲ್ಯನುಶಾಸನಮ್‌ ವೀಕ್ಷಮಾಣಸ್ತು ಮಂದಾಸುಃ ಸರ್ವತೋ ಮಂದಮುಚ್ಛ ಎಸನ್‌ ಆದಾವೇವ ತು ಸುಗ್ರೀವಂ ದದರ್ಶ ತ್ಹಾತ್ಮಜಾಗ್ರತಃ

ತಂ ಪ್ರಾಪವಿಜಯಂ ವಾಲೀ ಸುಗ್ರೀವಂ ಪ್ಲವಗೇಶ್ವರಃ। ಆಭಾಷ್ಯ ವ್ಯಕಯಾ ವಾಚಾ ಸಸ್ನೇಹಮಿದಮಬ್ರವೀತ್‌